POLICE BHAVAN KALABURAGI

POLICE BHAVAN KALABURAGI

28 April 2016

KALABURAGI DISTRICT REPORTED CRIMES

ಮಟಕಾ ಜೂಜುಕೋರರ ಬಂಧನ:
ನಿಂಬರ್ಗಾ ಪೊಲೀಸ ಠಾಣೆ:- ದಿನಾಂಕ 27/04/2016 ರಂದು ಶ್ರೀ ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ ರವರು ಡಿ.ಸಿ.ಬಿ ಘಟಕದ ಸಿಬ್ಬಂಧಿಯವರಾದ ಶ್ರೀ ಮುಜುಬುದ್ದೀನ ಹೆಚ್.ಸಿ 410, ಶ್ರೀ ನಾಗರಾಜ ಸಿಪಿಸಿ 386, ಶ್ರೀ ಸಂತೋಷ ಸಿಪಿಸಿ 900 ರವರೊಂದಿಗೆ ಕಲಬುರಗಿಯಿಂದ ಆಳಂದ ಕಡೆಗೆ ಹೋಗುವ ರಸ್ತೆಯ ಮೇಲೆ  ಟೋಲ ನಾಕಾ ಹತ್ತಿರ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಸುಂಟನೂರ ಗ್ರಾಮದ ಯಲ್ಲಾಲಿಂಗ ಗುಂಪಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಅಂತ ಮಾಹಿತಿ ತಿಳಿದು ಪಂಚರಾದ 01] ಶ್ರೀ ಅರ್ಜುನ ತಂದೆ ಅಪ್ಪಣ್ಣ ನ್ಯಾಮನ 02] ಶ್ರೀ ಶ್ರೀಮಂತ ತಂದೆ ಶಿವಲಿಂಗಪ್ಪ ನೈಕೋಡಿ ಸಾ|| ಇಬ್ಬರೂ ಸುಂಟನೂರ ಗ್ರಾಮ ಇವರೊಂದಿಗೆ ಸುಂಟನೂರ ಗ್ರಾಮದ ಯಲ್ಲಾಲಿಂಗ ಗುಂಪಾದ ಹತ್ತಿರ ಹೋಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಮೋಟಾರ ಸೈಕಲ ಮೇಲೆ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಕಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಿಚಾರಿಸಲು ತನ್ನ ಹೆಸರು ಅಪ್ಪಾರಾವ  ತಂದೆ ಶಾಂತಪ್ಪ ಮೇಲಿನಕೇರಿ ಸಾ|| ಸುಂಟನೂರ  ಅಂತ ತಿಳಿಸಿದ್ದು ಆತನಿಗೆ ಚಕ್ ಮಾಡಲಾಗಿ ಆತನ ಹತ್ತಿರ ನಗದು ಹಣ 7010/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ, ಒಂದು ಮೋಬೈಲ, ಆಪಾದಿತನು ಕುಳಿತುಕೊಂಡ ಮೋಟಾರ ಸೈಕಲ ನಂ.ಕೆ.ಎ 32, ಇಜೆ 2075 ಇದ್ದು ಇವುಗಳನ್ನು ಜಪ್ತಿಪಡಿಸಿಕೊಂಡು ಆರೋಪಿತರ ಮೇಲೆ ನಿಂಬಗಾ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 26/04/2016 ರಂದು ಶ್ರೀ ಶ್ರೀಕಾಂತ ತಂದೆ ಪ್ರಭು ಹೊಸಳಿ, ಸಾ|| ವಿಧ್ಯಾನಗರ ಕಲಬುರಗಿ ರವರು ಮತ್ತು ಸುನೀಲ ತಂದೆ ಸಿದ್ರಾಮಪ್ಪ ಸಿರಗಾನೂರ ಸಾ|| ಬಸವ ನಗರ ಕಲಬುರಗಿ ಇಬ್ಬರೊ ಕಲಬುರಗಿಯಿಂದ ಜವಳಿ (ಡಿ) ಗ್ರಾಮಕ್ಕೆ ಮೋಟರ ಸೈಕಲ ನಂ. ಕೆ.ಎ 32, ಇಡಿ 9212 ನೇದ್ದರ ಮೇಲೆ ಹೋಗುವಾಗ ಸುನೀಲ ತಂದೆ ಸಿದ್ರಾಮಪ್ಪ ಸಿರಗಾನೂರ ಈತನು ತಾನು ಚಲಾಯಿಸುತ್ತಿರುವ ಮೋಟರ ಸೈಕಲ ನಂ. ಕೆ.ಎ 32, ಇಡಿ 9212 ನ್ನು ಬಾಬಾ ಫಕ್ರೂದ್ದೀನ ದರ್ಗಾ ದಾಟಿ 1 ಕೀಮಿಟರ ದಾಟಿ ಸ್ಟೇಶನ ಗಾಣಗಾಪೂರ ಕಡೆಗೆಬರುವ ರೋಡಿನ ಮೇಲೆ ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿದ್ದರಿಂದ ಮೋಟರ ಸೈಕಲ ಸ್ಕೀಡ ಆಗಿ ಶ್ರೀಕಾಂತ ಮತ್ತು ಸುನೀಲ ಮೈ ಕೈಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಜೇವರ್ಗಿ ಠಾಣೆ : ದಿನಾಂಕ: 27/04/2016 ರಂದು ಶ್ರೀಮತಿ, ಲಕ್ಷ್ಮಿ ಗಂಡ ಚನನ್ಬಸವ ಬುದಿಹಾಳ ಹಾ:ವ: ಡಿ.ಎ.ಆರ್.ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ 13/04/16 ರಂದು ಮದ್ಯಾನ್ಹ 1-00 ಗಂಟೆಯಿಂದ 1-15 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಜೇವರ್ಗಿ ಪಟ್ಟದ ಬಸ್ ನಿಲ್ದಾಣದ ಬಸ್ಸಿನಲ್ಲಿದ್ದ ತನ್ನ ವ್ವ್ಯಾನಿಟಿ ಬ್ಯಾಗಿನಲ್ಲಿದ್ದ 1) ಬಂಗಾರದ ತಾಳಿ ಅರ್ದ ತೊಲಿ ಅ.ಕಿ. 14.000/- ರೂ 2) ಬಂಗಾರದ ಚಪ್ಲಾರ 3 ತೊಲಿ ಅ.ಕಿ.75.000/- 3) ಬಂಗಾರದ ನೆಕ್ಲೆಸ್ 1 ತೋಲಿ 25.000/- 4) ಬಂಗಾರದ ಲಾಕೇಟ 1 ತೋಲಿ ಅ.ಕಿ. 25.000/- 5) ಬಂಗಾರದ2 ಉಂಗುರಗಳು 4 ಗ್ರಾಮ.ಅ.ಕಿ. 10.000/-ರೂ.ಹಾಗೂ ನಗದು ಹಣ 3000/- ರೂ. ಹಿಗೆ ಒಟ್ಟು 1.52.000/- ರೂ ಕಿಮ್ಮತ್ತಿನದು ವ್ಯಾನೇಟಿ ಬ್ಯಾಗ ಸಮೇತ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

27 April 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ದಿನಾಂಕ: 25-04-2016 ರಂದು ಶ್ರೀ ರಾಜು ತಂದೆ ಜಗದೇವಪ್ಪ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ ತಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ತಾನು ಊರಲ್ಲಿ ಮಾತೋಳಿ ರಸ್ತಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿಯಿಂದ ಚಲಾಯಿಸುತ್ತಾ ತನಗೆ ಅಪಘಾತ ಪಡಿಸಿದ್ದು . ನನಗೆ ಅಪಘಾತ ಪಡಿಸಿದ ಮೋಟರ ಸೈಕಲ ನಂಬರ ನೋಡಲು ಅದರ ನಂ ಕೆಎ-28 ಜೆಡ್-9279 ಇದ್ದು, ಮೋಟರ ಸೈಕಲ ಚಾಲಕ ನಮ್ಮ ಬಾಜು ಗ್ರಾಮದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಇದ್ದು. ಮೋಟರ ಸೈಕಲ ಚಾಲಕ ಹಣಮಂತನು ಮೋಟರ ಸೈಕಲ ತಗೆದುಕೊಂಡು ಓಡಿ ಹೋಗಿರುತ್ತಾನೆ. ಕಾರಣ ನನಗೆ ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-28 ಜೆಡ್-9279 ನೇದ್ದರ ಚಾಲಕನಾದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಈತನ ಮೇಲೆ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ :
ಗ್ರಾಮೀಣ ಪೊಲೀಸ್ ಠಾಣೆ
ಪೊಲೀಸ್ ಪ್ರಕಟಣೆ
ಇಂದು ದಿನಾಂಕ. 23-4-2016 ರಂದು 10-30 ಎ.ಎಂ.ಕ್ಕೆ. ಶ್ರೀ  ಸಂಜೀವಕುಮಾರ ತಂದೆ ನಾಗಪ್ಪಾ ಕಮ್ಮನ ಸಾ; ಪಟ್ಟಣ್ಣ ಇವರು ಠಾಣೆಗೆ ಹಾಜರಾಗಿ ಅಂದಾಜು 30-35 ವರ್ಷದ ಒಬ್ಬ ಅಪರಿಚಿತ ವ್ಯಕ್ತಿ ಎತ್ತರ 5 ಫೀಟ , 6 ಇಂಚು ಇದ್ದು , ಸಾಧಗಪ್ಪು ಮೈಬಣ್ಣ ಹೊಂದಿದ್ದು  ಒಂದು ಬೂದು ಬಣ್ಣದ ಶರ್ಟ , ಮತ್ತು ಮೆಂದಿಕಲರ ಪ್ಯಾಂಟಧರಿಸಿರುತ್ತಾನೆ. ಸದರಿ ವ್ಯಕ್ತಿಯ ಮೈ ಮೇಲೆ ಯಾವುದೇ ಗಾಯವಗೈರೆ ಕಂಡು ಬಂದಿರುವದಿಲ್ಲಾ.  ಈ ವ್ಯಕ್ತಿಯು ಅನಾರೋಗ್ಯದಿಂದ ಬಳಲುತಿದ್ದು, ನಡೆದುಕೊಂಡು ಹೋಗುವುದಕ್ಕೆ ಆಗದ ನಿಶಕ್ತನಾಗಿದ್ದು , ಅಲ್ಲದೆ ಬಿಸಲು ತಾಪ ತಾಳಲಾರೆದೆ ದಿ.22-4-2016 ರಂದು ಸಾಯಂಕಲ 6 ಗಂಟೆಯಿಂದ ಇಂದು ದಿ. 23-4-2016 ರಂದು ಮುಂಜಾನೆ 9-30 ಎ.ಎಂ.ದ ಮಧ್ಯದ ಅವಧಿಯಲ್ಲಿ ಮೃತ ಪಟ್ಟಂತೆ ಕಂಡು ಬಂದಿದ್ದು.. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ,ಮತ್ತು ಕಾರಣ ಸದರಿ ವ್ಯಕ್ತಿಯ ಅಪರಿಚಿತನಾಗಿದ್ದು , ಈ ಬಗ್ಗೆ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

26 April 2016

KALABURAGI DISTRICT REPORTED CRIMES.

ರಾಘವೇಂದ್ರ ನಗರ  ಠಾಣೆ : ದಿ|| 25/04/16 ರಂದು ರಾತ್ರಿ 9.30 ಗಂಟೆಗೆ ನೀಲಮ್ಮ ಪಿ,ಎಸ್,ಐ ಜಿಲ್ಲಾ ವಿಶೇಷ ಅಪರಾಧ ವಿಭಾಗ ಕಲಬುರಗಿ ರವರು ಠಾಣೆಗೆ ಬಂದು ಒಬ್ಬ ಯುವಕನನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲು ಜಪ್ತಿಪಂಚನಾಮೆ ಹಾಜರಪಡಿಸಿ ಸರ್ಕಾರಿ ತರ್ಪೆಯಾಗಿ ಒಂದು ವರದಿ ಸಲ್ಲಿಸಿದ್ದು ಅದರ ಸಾರಂಶವೇನಂದರೆ ಇಂದು ದಿ|| 25/04/16 ರಂದು ಸಾಯಂಕಾಲ 7.00  ಗಂಟೆಯ  ಕಲಬುರಗಿ ನಗರದ ರಾಘವೇಂದ್ರ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿಯ ಗ್ರೀನ ಸರ್ಕಲ ಹತ್ತಿರ ಒಬ್ಬ ಯುವಕನು ಮಟಕಾ ಜೂಜಾಟ ನಡೆಸುತ್ತಿರುವ ಮಾಹೀತಿ ಮೇರೆಗೆ ದಾಳಿ ಮಾಡುವಗೋಸ್ಕರ ನನ್ನ ಜೋತೆಯಲ್ಲಿ ಸಿಬ್ಬಂದಿ ಜನರಾದ ಅಂಬದಾಸ ಹೆಚ್,ಸಿ, 222 ನಾಗೇಂದ್ರ ಪಿ,ಸಿ, 777 ಸಂತೋಶ ಪಿ,ಸಿ, 900 ನಾಗೇಂದ್ರ ಪಿ,ಸಿ, 386 ಮತ್ತು ಜೀಪ ಚಾಲಕ ಮಂಜುನಾಥ ಎ,ಪಿ,ಸಿ,151 ರವರನ್ನು ಮತ್ತು ಇಬ್ಬರೂ ಪಂಚರನ್ನು ಬರಮಾಡಿಕೊಂಡು ಮಾನ್ಯ ಡಿ,ಎಸ್,ಪಿ, ಡಿಸಿಅರ್,ಬಿ ಮತ್ತು ಪಿ,ಐ ಸಾಹೇಬರು ಡಿಸಿಬಿ ರವರ ಮಾರ್ಗದರ್ಶನದಲ್ಲಿ ಘಟನಾ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಖಾಜಾ ತಂದೆ ರಸೂಲಸಾಬ ವ|| 27 ಉ||ಗೌಂಡಿಕೆಲಸ ಸಾ|| ಮದೀನಾ ಕಾಲೋನಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 11120=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೋರೆತಿದ್ದು ಮತ್ತು ಮಟಕಾ ಜೂಜಾಟ ಕೃತ್ಯ ಕ್ಕೆ ಉಪಯೋಗಿಸಲು ತಂದಿದ ಒಂದು ಹೀರೊ ಹೊಂಡಾ ಮೋಟಾರ ಸೈಕಲ ನಂ ಕೆ,,32 ವಾಯ 3988 ಅದರ ಅ||ಕಿ|| 15000/-ರೂ ಬೆಲೆಬಾಳುವುದನ್ನು ದೊರೆತ್ತಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಂಚನಾಮೆ ಮುಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಸದರಿ ಅರೋಪಿ ಹಾಗೂ ಮುದ್ದೆಮಾಲು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಒಪ್ಪಿಸಿದ್ದು ಸದರಿ ಆರೋಪಿತರ ಮೇಲೆ ಕಲಂ: 78(3) ಕೆ.ಪಿ ಆಕ್ಟ್‌‌ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳತಕ್ಕದ್ದು ಅಂತಾ ವರದಿಯಾಗಿರುತ್ತದೆ.
ರಾಘವೇಂದ್ರ ನಗರ ಠಾಣೆ : ದಿ|| 25/04/16 ರಂದು ಮದ್ಯಾನ 1.00 ಗಂಟೆಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಸಿದ್ದಣ್ಣ ಪೂಜಾರ ವ|| 40 ಉ|| ಸರಕಾರಿ ಶಾಲೆ ಶಿಕ್ಷಕ ಸಾ|| ವಿವೇಕಾನಂದ ಕಲಬುರಗಿರವರು ಠಾಣೆಗೆ ಹಾಜರಾಗಿ ಒಂದು ಲೀಖಿತ ದೂರು ಸಲ್ಲಿಸಿದ್ದು ಅದರಲ್ಲಿ ದಿನಾಂಕ 13/03/16 ರಂದು ಬೆಳಗ್ಗೆ 8.00 ಗಂಟೆಗೆ ಮನೆಗ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ಸುನೀತಾ ಇಬ್ಬರೂ  ಕಲಬುರಗಿ ನಗರದ ಬನ್ನಾಳೆ ದವಾಖಾನೆಗೆ ಹೋಗಿದ್ದು ದಿ|| 14/03/16 ರಂದು ಬೆಳಗ್ಗೆ 9.00 ಗಂಟೆಗೆ ಮನೆಗೆ ಬಂದಿದ್ದು ಮುಂದಿನಾ ಬಾಗೀಲು ಕೀಲಿ ತೆಗೆದು ನೋಡಲು ಬಾಗೀಲು ತೆರೆಯಲಿಲ್ಲಾ ಹಿಂದಿನ ಬಾಗೀಲು ಕಡೆ ಹೋಗಿ ನೋಡಿದ್ದಾಗ ಬಾಗೀಲ ಕೊಂಡಿ ಮುರದಿದ್ದು ಬಾಗೀಲು ತೆರೆದಿದ್ದು ಇದ್ದು ಮನೆಯ ಒಳಗೆ ಹೋಗಿ ನೋಡಲು ಅಲಮಾರ ತೆರೆದಿದ್ದು ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ ಅಲಮಾರದಲ್ಲಿದ್ದ ತಲಾ 5 ಗ್ರಾಂ ಬಂಗಾರದ 2 ಉಂಗೂರುಗಳು 6 ಗ್ರಾಂ ಬಂಗಾರದ ಕೀವಿಯ ಒಲೆಗಳು 10 ಗ್ರಾಂ ಬಂಗಾರದ 2 ಜೋತೆ ಕೀವಿ ಓಲೆ ಹೀಗೆ ಒಟ್ಟು 65000/- ರೂ ಬಂಗಾರದ ಆಭರಣಗಳು ಹಾಗೂ ನಗದು ಹಣ 10000=00 ರೂ ಇರಲಿಲ್ಲಾ ಯಾರೋ ಕ ಳ್ಳರು ಕಳವು  ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಬಗ್ಗೆ ನಾನು ಪೊಲೀಸ ಠಾಣೆಯಲ್ಲಿ ದೂರುಕೊಟ್ಟು ಕೋರ್ಟ ಕಛೇರಿ ಎಲ್ಲಿ ಓಡಾಡಬೇಕು ಅಂತಾ ಪ್ರಕರಣ ದಾಖಲಿಸಿರಲಿಲ್ಲಾ ನಿನ್ನೆ ದಿನಾಂಕ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಕಳ್ಳರೂ ಸಿಕ್ಕಿಬಿದ್ದು ಕಳವು ಮಾಡಿರುವ ಮನೆಗಳು ತೋರಿಸುತ್ತಿದ್ದಾರೆ ನಾನು ಮನೆಯಲ್ಲಿ ಇಲ್ಲದ್ದಾಗ ನಮ್ಮ ಮನೆ ಕೂಡಾ ಅರೋಪಿತರು ಪೊಲೀಸರಿಗೆ ತೋರಿಸಿದ್ದಾರೆ ಎಂದು ಮಾಹಿತಿ ಗೊತ್ತಾಗಿರುತ್ತದೆ ಕಾರಣ ನನ್ನ ಮನೆ ಕೀಲಿ ಮುರಿದು ಓಳಗೆ ಪ್ರವೇಶ ಮಾಡಿ ಬಂಗಾರದ ಆಭರಣ ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಪಿರ್ಯಾದಿಯ ದೂರಿನ ಸಾರಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ ನಂ 63/16 ಕಲಂ 454,457,380 ಐ,ಪಿ,ಸಿ, ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನೀಖೆ ಕೈಕೊಳ್ಳಲಾಗಿದೆ
ನಿಂಬರ್ಗಾ  ಠಾಣೆ : ದಿನಾಂಕ 23/04/2016 ರಂದು  ಮನೆಯ ಜಾಗೆಯ ಸಂಭಂಧ ದ್ವೇಶ ಕಟ್ಟಿಕೊಂಡು ಆಪಾದಿತರೆಲ್ಲರೂ ಭೂತಾಳಿ ತಂದೆ ಶಂಕ್ರೇಪ್ಪ ನಡಗೇರಿ ವ|| 64 ವರ್ಷ, ಜಾ|| ಹೊಲೆಯ, || ಒಕ್ಕಲುತನ, ಸಂಗಡ 3 ಜನರು ಸಾ|| ಮಾಡಿಯಾಳ ಸೇರಿ ಫಿರ್ಯಾದಿಗೆ ಶ್ರೀ ಜೈಕುಮಾರ ತಂದೆ ಪ್ರಭು ನಡಗೇರಿ ವ|| 40 ವರ್ಷ, ಜಾ|| ಹೊಲೆಯ, || ಸಮಾಜ ಸೇವೆ, ಸಾ|| ಮಾಡಿಯಾಳ ಮತ್ತು ಆತನ ಕಡೆಯವರಿಗೆ ಅವಾಚ್ಯವಾಗಿ  ಬೈದು ಕೈಯಿಂದ ಹೊಡೆ ಬಡೆ ಮಾಡಿ ಹಲ್ಲೆ ಮಾಡಿ ಜೀವ ಭಯಪಡಿಸಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಲಿಖೀತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.  
ಎಂ.ಬಿ.ನಗರ ಠಾಣೆ :     ದಿನಾಂಕ 25/04/2016 ರಂದು 5.00 ಎ.ಎಮಕ್ಕೆ ಬಸವೇಶ್ವರ ಆಸ್ಪತ್ರೆ ಕಲಬುರಗಿಯಯಿಂದ ನಿಸ್ತಂತು ಮೂಲಕ ಠಾಣೆ ಗುನ್ನೆ ಗುನ್ನೆ ನಂ 45/2016 ನೇದ್ದರಲ್ಲಿನ ಗಾಯಾಳು ಮಹೇಂದ್ರ ತಂದೆ ನೀಲಕಂಠರಾವ ಕುಲಕರ್ಣಿ ಈತನು ಮೃತ ಪಟ್ಗ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು, ಆಸ್ಪತ್ರೆಗೆ ಬೇಟ್ಟಿ ನೀಡಿ, ಪ್ರಕರಣದಲ್ಲಿ ಮೃತ ಮಹೇಂದ್ರ ಈತನ ತಾಯಿಯಾದ ಶ್ರೀ ಸುಧಾಬಾಯಿ ಗಂಡ ನೀಲಕಂಠ ಕುಲಕರ್ಣಿ ಇವರಿಗೆವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೇ, ದಿನಾಂಕ 24/04/2016 ರಂದು 11.00 ಪಿ.ಎಮ ದಿಂದ ದಿನಾಂಕ 25/04/2016 ರಂದು 00.05 ಎ.ಎಮ್ ಅವಧಿಯಲ್ಲಿ ವಿರೇಂದ್ರ ಪಾಟೀಲ ಬಡಾವಣೆಯ ಕಮಾನ ಎದುರುಗಡೆ ರೋಡಿನ ಮೇಲೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಕತನದಿಂದ ಚಲಾಯಿಸಿಕೊಂಡು ಬಂದು ರಾತ್ರಿ ಡ್ಯೂಟಿಗೆ ಎಂ.ಬಿ ನಗರ ಪೊಲೀಸ ಠಾಣೆಗೆ ಸೈಕಲ ಮೇಲೆ ಹೋಗುತ್ತಿದ್ದ ನನ್ನ ಮಗ ಮಹೇಂದ್ರ ಈತನಿಗೆ ಡಿಕ್ಕಿಪಡಿಸಿದ ಪರಿಣಾಮ ನನ್ನ ಮಗ ಮಹೇಂದ್ರ ಈತನ ತಲೆಗೆ ತಲೆಗೆ ಭಾರಿ ರಕ್ತಗಾಯಗಳಾಗಿದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25/04/2016 ರಂದು 4.30 ಎ.ಎಮಕ್ಕೆ ಮೃತಪಟ್ಟಿರುತ್ತಾನೆ ಕಾರಣ ಮುಂದಿನ ಕ್ರಮ ಜರೂಗಿಸಬೆಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.ದಿನಾಂಕಃ  25/04/2016 ರೆಂದು 1.00 ಎ.ಎಮಕ್ಕೆ ಶ್ರೀ ಮಂಜುನಾಥ ಸಿಪಿಸಿ-1072 ಎಂ.ಬಿ ನಗರ ಪೊಲೀಸ ಠಾಣೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಸಲ್ಲಿಸಿದ್ದು, ಅದರ ಸಂಕ್ಷಿಪ್ತ ಸಾರಾಂಶವೆನಂದರೆ, ದಿನಾಂಕ 24/04/2016 ರಂದು 11.00  ಪಿ.ಎಮ್ ದಿಂದ ದಿನಾಂಕ 25/04/2016 ರಂದು 00.05 ಎ.ಎಮ್ ಅವಧಿಯಲ್ಲಿ ವಿರೆಂದ್ರ ಪಾಟೀಲ ಬಡಾವಣೆಯ ಕಮಾನ ಎದುರುಗಡೆ ಸೇಡಂ ಕಡೆಗೆ ಹೋಗುವ ರಸ್ತೆಯ ಮೇಲೆ ರಾತ್ರಿ ಗಸ್ತು ಕರ್ತವ್ಯಕ್ಕೆ ಎಂ.ಬಿ ನಗರ ಪೊಲೀಸ ಠಾಣೆಗೆ ಸೈಕಲ್ ಮೇಲೆ ಹೋಗುತ್ತಿದ್ದ ಮಹೇಂದ್ರ ಹೋಮಗಾರ್ಡ ನಂ.119 ಈತನಿಗೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಹೇಂದ್ರ ಈತನಿಗೆ ಡಿಕ್ಕಿಪಡಿಸಿ ಹಾಗೆಯೇ ತನ್ನ ವಾಹನವನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಮಹೇಂದ್ರ ಈತನಿಗೆ ಡಿಕ್ಕಿಪಡಿಸಿದ ಪರಿಣಾಮ ಆತನ ತಲೆಗೆ ಭಾರಿ ರಕ್ತಗಾಯ, ಮೂಗಿನಿಂದ & ಕಿವಿಯಿಂದ ರಕ್ತ ಸೋರುತ್ತಿತ್ತು ಮತ್ತು ಎಡಗೈ ಮುಂಗೈ ಹತ್ತಿರ ತರಚಿದ ರಕ್ತಗಾಯಗವಾಗಿತ್ತು. ಸದರಿಯವನು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ಬೇಹೂಷ ಆಗಿದನು. ಕಾರಣ ಸದರ ಅಪರಿಚಿತ ವಾಹನದ ಚಾಲಕನು ವಿರುದ್ದ ಸೂಕ್ರ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ವಗೈರೆಯಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2016 ಕಲಂ 279,338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.