ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ದಿನಾಂಕ: 25-04-2016 ರಂದು
ಶ್ರೀ ರಾಜು ತಂದೆ ಜಗದೇವಪ್ಪ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ ತಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ತಾನು ಊರಲ್ಲಿ ಮಾತೋಳಿ ರಸ್ತಯಲ್ಲಿ ನಡೆದುಕೊಂಡು
ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಒಬ್ಬ ಮೋಟರ
ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿಯಿಂದ ಚಲಾಯಿಸುತ್ತಾ ತನಗೆ
ಅಪಘಾತ ಪಡಿಸಿದ್ದು . ನನಗೆ ಅಪಘಾತ ಪಡಿಸಿದ ಮೋಟರ ಸೈಕಲ ನಂಬರ ನೋಡಲು ಅದರ ನಂ ಕೆಎ-28
ಜೆಡ್-9279 ಇದ್ದು, ಮೋಟರ ಸೈಕಲ ಚಾಲಕ ನಮ್ಮ ಬಾಜು
ಗ್ರಾಮದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಇದ್ದು. ಮೋಟರ ಸೈಕಲ ಚಾಲಕ ಹಣಮಂತನು ಮೋಟರ ಸೈಕಲ ತಗೆದುಕೊಂಡು
ಓಡಿ ಹೋಗಿರುತ್ತಾನೆ. ಕಾರಣ ನನಗೆ ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-28 ಜೆಡ್-9279 ನೇದ್ದರ
ಚಾಲಕನಾದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಈತನ ಮೇಲೆ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ :
ಗ್ರಾಮೀಣ ಪೊಲೀಸ್ ಠಾಣೆ
ಪೊಲೀಸ್ ಪ್ರಕಟಣೆ
ಇಂದು
ದಿನಾಂಕ. 23-4-2016 ರಂದು 10-30 ಎ.ಎಂ.ಕ್ಕೆ. ಶ್ರೀ ಸಂಜೀವಕುಮಾರ
ತಂದೆ ನಾಗಪ್ಪಾ ಕಮ್ಮನ ಸಾ; ಪಟ್ಟಣ್ಣ ಇವರು ಠಾಣೆಗೆ ಹಾಜರಾಗಿ ಅಂದಾಜು 30-35 ವರ್ಷದ ಒಬ್ಬ ಅಪರಿಚಿತ ವ್ಯಕ್ತಿ ಎತ್ತರ 5 ಫೀಟ , 6 ಇಂಚು ಇದ್ದು , ಸಾಧಗಪ್ಪು ಮೈಬಣ್ಣ
ಹೊಂದಿದ್ದು ಒಂದು ಬೂದು ಬಣ್ಣದ ಶರ್ಟ , ಮತ್ತು
ಮೆಂದಿಕಲರ ಪ್ಯಾಂಟಧರಿಸಿರುತ್ತಾನೆ. ಸದರಿ
ವ್ಯಕ್ತಿಯ ಮೈ ಮೇಲೆ ಯಾವುದೇ ಗಾಯವಗೈರೆ ಕಂಡು ಬಂದಿರುವದಿಲ್ಲಾ. ಈ ವ್ಯಕ್ತಿಯು ಅನಾರೋಗ್ಯದಿಂದ ಬಳಲುತಿದ್ದು,
ನಡೆದುಕೊಂಡು ಹೋಗುವುದಕ್ಕೆ ಆಗದ ನಿಶಕ್ತನಾಗಿದ್ದು , ಅಲ್ಲದೆ ಬಿಸಲು ತಾಪ ತಾಳಲಾರೆದೆ
ದಿ.22-4-2016 ರಂದು ಸಾಯಂಕಲ 6 ಗಂಟೆಯಿಂದ ಇಂದು ದಿ. 23-4-2016 ರಂದು ಮುಂಜಾನೆ 9-30
ಎ.ಎಂ.ದ ಮಧ್ಯದ ಅವಧಿಯಲ್ಲಿ ಮೃತ
ಪಟ್ಟಂತೆ ಕಂಡು ಬಂದಿದ್ದು.. ಸದರಿ ವ್ಯಕ್ತಿಯ
ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ,ಮತ್ತು ಕಾರಣ ಸದರಿ ವ್ಯಕ್ತಿಯ ಅಪರಿಚಿತನಾಗಿದ್ದು , ಈ ಬಗ್ಗೆ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ.
No comments:
Post a Comment