POLICE BHAVAN KALABURAGI

POLICE BHAVAN KALABURAGI

04 December 2015

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ
ಕಮಲಾಪೂರ ಠಾಣೆ : ದಿನಾಂಕ 23.11.2015 ರಂದು ರಾತ್ರಿ 8 ಗಂಟೆಯವರೆಗೆ ನಾನು ವ್ಯಾಪಾರ ಮಾಡಿ ಅಂಗಡಿ ಬಂದ ಮಾಡಿಕೊಂಡು ರಾತ್ರಿ 8:30 ಗಂಟೆಯ ಸುಮಾರಿಗೆ ಮನಗೆ ಹೋಗಿ ನನ್ನ ಮೋಟಾರ ಸೈಕಲನ್ನು ಮನೆಯ ಹತ್ತಿರ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 24.11.2015 ರಂದು ಬೆಳ್ಳಿಗ್ಗೆ 7 ಗಂಟೆಗೆ ನಾನು ಮನೆಯಿಂದ ಹೊರಗೆ ಬಂದು ನೋಡಲು ನಾನು ನಿಲ್ಲಿಸಿದ ನನ್ನ ಮೋಟಾರ ಸೈಕಲ ಇರಲಿಲ್ಲ. ನಂತರ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಯಾವುದೆ ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ದಿನಾಂಕ 24.11.2015 ರಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆ ತಿರುಗಾಡಿ ನನಗೆ ಪರಿಚಯಸ್ಥರಲ್ಲ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ಸದರಿ ನನ್ನ ಮೊಟಾರ ಸೈಕಲ ನಂ ಕೆಎ 56 6436 ಅ:ಕಿ 49,000/- ರೂಪಾಯಿ ನೇದ್ದು ಇದ್ದು  ಚೆಸ್ಸಿ ನಂಬರ  MD2A11C21DWC00015  ಇಂಜನ ನಂಬರ  DHZWDC 00431  56 E 6436 ಕಲರ ಕಪ್ಪು ಬಣ್ಣ. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಶಹನಾಜ್ ಗಂಡ ಸಾಹೇಬ ಪಟೇಲ್ ಇವರತನ್ನು ಈಗ ಸುಮಾರು 1 ವರೆ ವರ್ಷದ ಹಿಂದೆ ಜಾಕೀರ ಅಲಿ ಇವರ ಮಗನಾದ ಸಾಹೇಬ ಪಟೇಲ್ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಕೆಲವು ದಿವಸಗಳವರೆಗೆ ನನ್ನ ಗಂಡ ,ಅತ್ತೆ , ಮಾವ ನನ್ನೊಂದಿಗೆ ಚೆನ್ನಾಗಿದ್ದು, ನಂತರ ಒಂದು ತಿಂಗಳ ನಂತರ ನನ್ನ ಗಂಡ ದುಡಿಯಲು ಮೆಕ್ಕಾ ಮದೀನಾ ಕ್ಕೆ ಹೋಗಿದ್ದು, ಇರುತ್ತದೆ. ನನ್ನ ಮಾವ ನೀನು ನೋಡಲು ಚೆನ್ನಾಗಿಲ್ಲ ನನ್ನ ಮಗನಿಗೆ ತಕ್ಕ ಹೆಂಡತಿಯಲ್ಲ ನಿನಗೆ ತಲಾಖ ಕೊಟ್ಟು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇನೆ. ಅಂತಾ ಅತ್ತೆ, ಮಾವ ಇಬ್ಬರೂ ಸೇರಿ ಮಾನಸಿಕ , ದೈಹಿಕ ಕಿರುಕುಳ ಕೊಡುತ್ತಿದ್ದರು. ನನ್ನ ಅತ್ತೆ ಮಾವ ನನಗೆ ತವರು ಮನೆಗೆ ಕಳುಹಿಸುತ್ತಿರಲಿಲ್ಲ. ನಾನು ದೊಡ್ಡವಳಾದಾಗಿನಿಂದ ನನಗೆ ಮುಟ್ಟು ಸರಿಯಾಗಿ ಬರುತ್ತಿಲ್ಲ. 2 ತಿಂಗಳಿಗೊಮ್ಮೆ , 3 ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದು, ಈಗ 15 ದಿವಸಗಳಿಂದ ನನ್ನ ಅತ್ತೆ ಮಾವ 2 ತಿಂಗಳಿಂದ ನಿನಗೆ ಮುಟ್ಟು ಬಂದಿರುವುದಿಲ್ಲ ನೀನು ಯಾರ ಜೋತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀ ಅದಕ್ಕೆ ನಿನಗೆ ಮುಟ್ಟು ಬಂದಿರುವುದಿಲ್ಲ. ಅಂತಾ ಬೈಯುತ್ತಿದ್ದರು ದಿನಾಂಕ 29-11-2015 ರಂದು ಮತ್ತೇ ಶೀಲದ ವಿಷಯದಲ್ಲಿಯೇ ನನ್ನ ಅತ್ತೆ ಮಾವ ಸಂಶಯ ಪಟ್ಟು ರಂಡಿ ನೀನು ಯಾರ ಜೋತೆ ಇದ್ದೀ ನೀನು ಗರ್ಭಿಣಿ ಇರುತ್ತೀ ಅದಕ್ಕೆ ನಿನಗೆ ಮುಟ್ಟು ಬರುತ್ತಿಲ್ಲ. ಅಂತಾ ಬೈದು ಮಧ್ಯಾಹ್ನ ನನ್ನ ಅತ್ತೆ ಮಾವ ನೀವು ಈ ರೀತಿ ಹಿಂಸೆ ಕೊಡುವುದು ಸಾಕಾಗಿದೆ ಅಂತಾ ಹೇಳಿದ್ದಕ್ಕೆ ನನ್ನ ಮಾವ ಜಾಕೀರ ಇತನು ರಂಡಿ ನೀನು ಏಕೆ ಸಾಯುತ್ತೀ ನಾವೇ ನಿನ್ನನ್ನು ಸಾಯಿಸುತ್ತೇವೆ ಅಂತಾ ಮನೆಯಲ್ಲಿರುವ ಸೀಮೆ ಎಣ್ಣೆಯನ್ನು ನನ್ನ ಮೈಮೇಲೆ ಹಾಕಿ ಬೆಂಕಿ ಹಚ್ಚಿದನು. ನನ್ನ ಅತ್ತೆ ಅಲ್ಲಿಯೇ ಇದ್ದರು ಬೆಂಕಿ ಆರಿಸದೇ ನನ್ನ ಮಾವನಿಗೆ ಕುಮ್ಮಕ್ಕು ನೀಡುತ್ತಿದ್ದಳು. ನಾನು ಚಿರಾಡಿದಾಗ ಅಕ್ಕ ಪಕ್ಕದವರು ಬಂದು ಬೆಂಕಿ ಆರಿಸಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಮದುವೆಯಾದಾಗಿನಿಂದ ವಿನಾಃ ಕಾರಣ ನನಗೆ ಮಾನಸಿಕ, ದೈಹಿಕ ಹಿಂಸೆ ಕೊಟ್ಟು ನನ್ನ ಶೀಲದ ಮೇಲೆ ಸಂಶಯ ಪಟ್ಟು ನನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಮಾವ , ಅತ್ತೆ  ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 02.12.2015 ಸಾಯಂಕಾಲದ ವೇಳೆಯ ಸುಮಾರಿಗೆ ನಮ್ಮೂರ ಹಕೀಮಸಾಬ್‌ ದರ್ಗಾದ ಕಟ್ಟೆಯ ಮೇಲೆ ಅಂದಾಜು ವಯಾ 45 ರಿಂದ 50 ವಯಸ್ಸಿನ ಅಪರಿಚಿತ ಗಂಡು ಮನುಷ್ಯನು ಯಾವುದೋ ಒಂದು ರೋಗದಿಂದ ಬಳಲಿ ಅಸ್ವಸ್ಥನಾಗಿದ್ದರಿಂದ ಅವನಿಗೆ ಉಪಚಾರ ಸಲುವಾಗಿ 108 ಅಂಬ್ಯೂಲೇನ್ಸನಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಫರತಾಹಾಬದ್ ಹತ್ತಿರ ನಿನ್ನೆ ದಿನಾಂಕ 02.12.2015 ರಂದು ಸಾಯಂಕಾಲ 19:15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶಾಂತಯ್ಯ ತಂದೆ ಶರಣಯ್ಯ ಸ್ಥಾವರ ಮಠ ಸಾ|| ಗಂವ್ಹಾರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 December 2015

Kalaburagi District Reported Crimes

ಆತ್ಮ ಹತ್ಯೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಸಾತಮ್ಮ ಗಂ ಮಹಾಂತಯ್ಯ ಸ್ವಾಮಿ ಇವರು ದಿನಾಂಕ: 01-12-2015 ರಂದು ಮದ್ಯಾಹ್ನ 3 ಗಂಟೆಗೆ ಅತಿ ಸಾಲದಿಂದ ಬೆಸತ್ತು ಮತ್ತು ಮನೆಯಲ್ಲಿ ಅತಿ ಬಡತನದಿಂದ ಬೆಸತ್ತು ವಿಷ ಕುಡಿದಿದ್ದಾಳೆ ವಿಷ ಕುಡಿದಿದ್ದನ್ನು ನಾನು ನೋಡಿ ತಕ್ಷಣವೆ ನಮ್ಮ ಸಂಬಂದಿಕರನ್ನು ಕರೆದುಕೊಂಡು ಆಕೆಯನ್ನು ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋದೇವು. ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ: 02-12-2015 ರಂದು ಬೆಳಗ್ಗೆ 7:30 ಕ್ಕೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀಮತಿ ಸಾಂಬಾಯಿ ಗಂಡ ನಾಡಗೌಡ ವಡೆಯರ ಸಾ: ಮುರುಗಾನೂರ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ಟಳು ಶವ ಪಂಚನಾಮೆ ಮತ್ತು ಪೊಸ್ಟ ಮಾರ್ಟಮ ಸಲುವಾಗಿ ಮುಂಜಾನೆ 10 ಗಂಟೆಗೆ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ಒಪ್ಪಿಸಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಿವಾನಂದ ಮಾಳಗಿ ಸಾ:ಬೋರಾಬಾಯಿ ನಗರ ಕಲಬುರಗಿ ಇವರ ಮಗಳಾದ ಸಪ್ನಾ ಇವಳು ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಬಡಿಸುವ ಕೆಲಸಕ್ಕೆ ಹೋಗುತ್ತಿದ್ದಳು ನಮ್ಮ ಓಣಿಯ ಪುಟ್ಟು ತಂದೆ ಬಾಬುರಾವ ಎಂಬುವನು ಆಗಾಗ ನಮ್ಮ ಮನೆಯ ಮುಂದೆ ಬಂದು ಚಿರಾಡುವದು , ಸಾರಾಯಿ ಕುಡಿಯುವದು ಮಾಡುತ್ತಿದ್ದನು ಅವನ ಜೊತೆಗೆ ಅವನ ಸ್ನೇಹಿತನಾದ  ಶಿವಾ ಎಂಬುವನು ಕೂಡ ಬಂದು ನಮ್ಮ ಮನೆಯ ಬಾಗಿಲು ಬಾರಿಸಿ ಕುಡಿಯಲು ನೀರು ಕೊಡಿ ಅಂತಾ ಗಲಾಟೆ ಮಾಡುತ್ತಿದ್ದರು. ನೀರು ಕೊಡದೇ ಇದ್ದರೆ ರಂಡಿ ಮಕ್ಕಳೆ ಭೋಸಡಿ ಮಕ್ಕಳೇ ನೀವು ನಮ್ಮ ವಿರುದ್ದ ಕೇಸು ಮಾಡಿದರೆ ನಿಮಗೆ ಕೊಲೆ ಮಾಡುತ್ತೇವೆ ಅಂತಾ ಧಮಕಿ ಹಾಕುತ್ತಿದ್ದರು. ದಿನಾಂಕ  01-12-2015 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಬಯಲು ಸೀಮೆ ಬಾತರೂಮಿಗೆ ಹೋದಾಗ ಪುಟ್ಟು ಮತ್ತು ಶಿವಾ ಕೂಡಿಕೊಂಡು  ಸಪ್ನಾ ಇವಳಿಗೆ ಬಲವಂತವಾಗಿ ಅಪಹರಿಸಿಕೊಂಡು ಹೋಗಿರುತ್ತಾರೆ. ಪುಟ್ಟು ಇತನಿಗೆ ಈಗಾಗಲೇ ಒಂದು ತಿಂಗಳ ಹಿಂದೆ ಮದುವೆಯಾಗಿರುತ್ತದೆ. ಇಂದು ಬೆಳಿಗ್ಗೆ ಪುಟ್ಟು ಇತನ ತಮ್ಮನಾದ ದಾವೀದ ಇತನು ನಮ್ಮ ಮನೆಗೆ ಬಂದು ನಿಮ್ಮ ಮಗಳು ಸೇಡಂನಲ್ಲಿರುತ್ತಾಳೆ ಅವಳಿಗೆ ಕರೆದುಕೊಂಡು ಬರಲು ಪ್ರಯತ್ನ ಮಾಡಿದ್ದರೆ ನಮ್ಮ ಅಣ್ಣ ಪುಟ್ಟು ಇತನು ನಿಮಗೆ ಕೊಲೆ ಮಾಡುತ್ತಾನೆ ಅಂತಾ ಬೆದರಿಕೆ ಹಾಕಿರುತ್ತಾನೆ. ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸಪ್ನಾ ಇವಳಿಗೆ ಅಪಹರಿಸಿಕೊಂಡು ಹೋದ ಪುಟ್ಟು ಮತ್ತು ಅವನಿಗೆ ಸಹಾಯ ಮಾಡಿದ ದಾವೀದ ಹಾಗೂ ಶಿವಾ ಇವರ ಮೇಲೆ ಕಾನೂನು ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 December 2015

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ: 01/12/2015 ರಂದು ಬೆಳಿಗ್ಗೆ 10:30 ಗಂಟೆ ನಾನು ಶ್ರೀ ಮಹೇಶ ತಂದೆ ಶರಣಬಸಪ್ಪಾ ಹಡಪದ ಸಾ; ಕವಲಗಾ ತಾ: ಆಳಂದ ಮತ್ತು ಅವರ ಕಾಕನಾದ ಮಲ್ಲಿನಾಥ ಹಡಪದ ಇಬ್ಬರೂ ಮೋಟರ್ ಸೈಕಲ ನಂಬರ್  KA-34 S-684  ನೇದ್ದರ ಮೇಲೆ ಮದುವೆ ಲಗ್ನ ಪತ್ರ ಕೊಡಲು ಕೊಡಲ ಹಂಗರಗಾ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ನಾನು ಮೋಟರ್ ಸೈಕಲ ಚಲಾಯಿಸುತ್ತಿದ್ದು ಕೊಡಲ ಹಂಗರಗಾದಿಂದ ಆಳಂದ ಮುಖ್ಯ ರಸ್ತೆಯ ಮೂಲಕ ಬರುವಾಗ ರಾತ್ರಿ 08:30 ಗಂಟೆ ಸುಮಾರಿಗೆ ಸಂಗೋಳಗಿ ಹನುಮಾನ ಮಂದಿರ ಸಮೀಪ ಒಬ್ಬ ಟಾಟಾ ಸುಮೋ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಂದು ಓವರಟೇಕ್ ಮಾಡುವಾಗ ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನಾವು ಕೆಳಗಡೆ ಬಿದ್ದು ನನಗೆ ತಲೆಗೆ ರಕ್ತಗಾಯ, ಎಡಗೈ ರಟ್ಟೆಗೆ ತರಚಿದ ಗಾಯವಾಗಿದ್ದು ನನ್ನ ಕಾಕನಾದ ಮಲ್ಲಿನಾಥನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು. ನಮಗೆ ಡಿಕ್ಕಿಪಡಿಸಿದ ಟಾಟಾ ಸುಮೋ ನಂಬರ್ ನೋಡಲಾಗಿ MH-43 A-4952 ಇದ್ದು ಸದರಿ ಟಾಟಾ ಸುಮೋ ಚಾಲಕನು ಸ್ಥಳದಲ್ಲಿ ಜನ ಸೇರುವುದನ್ನು ನೋಡಿ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು. ಸದರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ:
ರೇವೂರ ಪೊಲಿಸ್ ಠಾಣೆ: ದಿನಾಂಕ:01-12-2015 ರಂದು ಶ್ರೀಮತಿ ಸುಮೀತ್ರಾ ಗಂಡ ಶರಣಬಸು ಕೋಳಕೂರ ಸಾ:ಕೋಗನೂರ ಈವರು ಠಾಣೆಗೆ ಹಾಜರಾಗಿ ತಾನು ತನ್ನ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ನನ್ನ ಗಂಡನಿಗೆ 4 ಎಕರೆ  ಜಮೀನು ಇದ್ದು.  ವ್ಯವಸಾಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದು ಕಳೆದ ವರ್ಷ ಬ್ಯಾಂಕಿನ ಸಾಲ ಮುಟ್ಟಿಸುವ ಸಲುವಾಗಿ ನನ್ನ ಗಂಡ  ಕಳೆದ  ವರ್ಷ  ತನ್ನ4 ಎಕರೆ ಜಮೀನನ್ನು   ಮಾರಿ   ಸಾಲ  ತಿರಿಸಿದ್ದು. ಸಂಬಂದಿಕರಲ್ಲಿ  ಇನ್ನು 1  ಲಕ್ಷ್ಯ ಬಡ್ಡಿ ರಹಿತ ಸಾಲ ತೆಗೆದುಕೊಂಡಿದ್ದು ಮರಳಿ ಹಣ  ಕೋಡುವುದು ಬಾಕಿ ಇತ್ತು .ಅಲ್ಲದೆ  ಗ್ರಾಮದರವರಲ್ಲಿ 1 ಲಕ್ಷ್ಯ ರೂಪಾಯಿ ಹಣ ಕೈಗಡ ಮಾಡಿಕೊಂಡು ನಮ್ಮ ಗ್ರಾಮದ  ಮಹಾಂತೇಶ ಹೀರೇಮಠ  ರವರವ 5 ಎಕರೆ ಜಮೀನನ್ನು  ಮೂರು ವರ್ಷಕ್ಕಾಗಿ 1 ಲಕ್ಷ್ಯ ಕೊಟ್ಟು ಪಾಲಿಗೆ ಹಾಕಿಕೊಂಡಿರುತ್ತಾರೆ. ಅಲ್ಲದೆ ಈ ವರ್ಷ  ಕೃಪಿಗಾಗಿ  ಬೀಜ  ಗೋಬ್ಬರಕ್ಕಾಗಿ  ಮನೆಯಲ್ಲಿದ್ದ  ಬಂಗಾರ ಮಾರಿ 25  ಸಾವಿರ  ಖರ್ಚು ಮಾಡಿರುತ್ತಾನೆ. ಈ ವರ್ಷ ಸರಿಯಾಗಿ ಮಳೆ ಆಗದ ಕಾರಣ ಹೋಲದಲ್ಲಿ ಹಾಕಿದ ಕಬ್ಬು, ತೋಗರಿ ಸರಿಯಾಗಿ ಬೆಳೆಯದೆ ಒಣಗಿ  ಹೋಗಿದ್ದರಿಂದ ನನ್ನ ಗಂಡನು ತಾನು ಮಾಡಿದ ಕೈಗಡ ಸಾಲ ಮರುಪಾವತಿಸುವುದು ಹೇಗೆ ಎಂದು ಚಿಂತೆಗಿಡಾಗಿದ್ದು. ಅದಕ್ಕೆ ನಾನು ನನ್ನ ಗಂಡನಿಗೆ ಚಿಂತೆಮಾಡಬೇಡ ಮುಂದಿನ ವರ್ಷ ಮಳೆ ಚನ್ನಾಗಿ ಆಗಬಹುದು ಆಗ ಸಾಲ ತಿರಿಸಿದರೆ ಆಯಿತು ಅಂತಾ ದೈರ್ಯ ತುಂಬುತ್ತಾ  ಬಂದಿದ್ದು. ದಿನಾಂಕ:01/12/2015 ರಂದು ಮದ್ಯಾನ್ಹ 1 ಗಂಟೆ ಸುಮಾರಿಗೆ ಅಣ್ಣನ ಹೋಲಕ್ಕೆ ಹೋಗಿಬರುತ್ತೇನೆ ಅಂತಾ  ಹೇಳಿ  ಹೋಗಿ ಹೋಲದಲ್ಲಿ ಗುಡಿಸಲ ಪಕ್ಕದಲ್ಲಿರುವ   ಬೇವಿನ ಮರಕ್ಕೆ  ಹಗ್ಗದಿಂದ  ನೇಣು  ಹಾಕಿಕೊಂಡು  ಮೃತಪಟ್ಟಿದ್ದು. ನನ್ನ ಗಂಡನು ತಾನು ಮಾಡಿದ  ಕೈಗಡ ಸಾಲ ಮರು ಪಾವತಿಸುವುದು ಹೇಗೆ ಎಂದು ಚಿಂತೆ ಮಾಡಿ ಆತಂಕಕ್ಕೊಳಗಾಗಿ ಮನನೊಂದು  ಕೋಗನೂರ  ಸಿಮಾಂತರದಲ್ಲಿರುವ ಹೋಲದಲ್ಲಿ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದು. ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೆವೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ