ಆತ್ಮ ಹತ್ಯೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಸಾತಮ್ಮ ಗಂ ಮಹಾಂತಯ್ಯ ಸ್ವಾಮಿ ಇವರು ದಿನಾಂಕ:
01-12-2015 ರಂದು ಮದ್ಯಾಹ್ನ 3 ಗಂಟೆಗೆ ಅತಿ ಸಾಲದಿಂದ ಬೆಸತ್ತು ಮತ್ತು ಮನೆಯಲ್ಲಿ ಅತಿ ಬಡತನದಿಂದ
ಬೆಸತ್ತು ವಿಷ ಕುಡಿದಿದ್ದಾಳೆ ವಿಷ ಕುಡಿದಿದ್ದನ್ನು ನಾನು ನೋಡಿ ತಕ್ಷಣವೆ ನಮ್ಮ ಸಂಬಂದಿಕರನ್ನು
ಕರೆದುಕೊಂಡು ಆಕೆಯನ್ನು ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋದೇವು. ಗಂಗಾ ಆಸ್ಪತ್ರೆ
ಕಲಬುರಗಿಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ: 02-12-2015 ರಂದು ಬೆಳಗ್ಗೆ 7:30 ಕ್ಕೆ
ಮೃತಪಟ್ಟಿರುತ್ತಾಳೆ ಅಂತಾ ಶ್ರೀಮತಿ ಸಾಂಬಾಯಿ ಗಂಡ ನಾಡಗೌಡ ವಡೆಯರ ಸಾ: ಮುರುಗಾನೂರ ತಾ: ಜೇವರಗಿ
ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ಟಳು ಶವ
ಪಂಚನಾಮೆ ಮತ್ತು ಪೊಸ್ಟ ಮಾರ್ಟಮ ಸಲುವಾಗಿ ಮುಂಜಾನೆ 10 ಗಂಟೆಗೆ ಜೇವರಗಿ ಸರಕಾರಿ
ಆಸ್ಪತ್ರೆಯಲ್ಲಿ ಒಪ್ಪಿಸಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಿವಾನಂದ ಮಾಳಗಿ ಸಾ:ಬೋರಾಬಾಯಿ ನಗರ ಕಲಬುರಗಿ ಇವರ ಮಗಳಾದ ಸಪ್ನಾ
ಇವಳು ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಬಡಿಸುವ ಕೆಲಸಕ್ಕೆ ಹೋಗುತ್ತಿದ್ದಳು ನಮ್ಮ ಓಣಿಯ ಪುಟ್ಟು
ತಂದೆ ಬಾಬುರಾವ ಎಂಬುವನು ಆಗಾಗ ನಮ್ಮ ಮನೆಯ ಮುಂದೆ ಬಂದು ಚಿರಾಡುವದು , ಸಾರಾಯಿ ಕುಡಿಯುವದು ಮಾಡುತ್ತಿದ್ದನು ಅವನ ಜೊತೆಗೆ ಅವನ
ಸ್ನೇಹಿತನಾದ ಶಿವಾ ಎಂಬುವನು ಕೂಡ ಬಂದು ನಮ್ಮ
ಮನೆಯ ಬಾಗಿಲು ಬಾರಿಸಿ ಕುಡಿಯಲು ನೀರು ಕೊಡಿ ಅಂತಾ ಗಲಾಟೆ ಮಾಡುತ್ತಿದ್ದರು. ನೀರು ಕೊಡದೇ
ಇದ್ದರೆ ರಂಡಿ ಮಕ್ಕಳೆ ಭೋಸಡಿ ಮಕ್ಕಳೇ ನೀವು ನಮ್ಮ ವಿರುದ್ದ ಕೇಸು ಮಾಡಿದರೆ ನಿಮಗೆ ಕೊಲೆ ಮಾಡುತ್ತೇವೆ
ಅಂತಾ ಧಮಕಿ ಹಾಕುತ್ತಿದ್ದರು. ದಿನಾಂಕ 01-12-2015 ರಂದು ಮಧ್ಯಾಹ್ನ 1-00
ಗಂಟೆ ಸುಮಾರಿಗೆ ಬಯಲು ಸೀಮೆ ಬಾತರೂಮಿಗೆ ಹೋದಾಗ ಪುಟ್ಟು ಮತ್ತು ಶಿವಾ ಕೂಡಿಕೊಂಡು ಸಪ್ನಾ ಇವಳಿಗೆ ಬಲವಂತವಾಗಿ ಅಪಹರಿಸಿಕೊಂಡು
ಹೋಗಿರುತ್ತಾರೆ. ಪುಟ್ಟು ಇತನಿಗೆ ಈಗಾಗಲೇ ಒಂದು ತಿಂಗಳ ಹಿಂದೆ ಮದುವೆಯಾಗಿರುತ್ತದೆ. ಇಂದು
ಬೆಳಿಗ್ಗೆ ಪುಟ್ಟು ಇತನ ತಮ್ಮನಾದ ದಾವೀದ ಇತನು ನಮ್ಮ ಮನೆಗೆ ಬಂದು ನಿಮ್ಮ ಮಗಳು ಸೇಡಂನಲ್ಲಿರುತ್ತಾಳೆ
ಅವಳಿಗೆ ಕರೆದುಕೊಂಡು ಬರಲು ಪ್ರಯತ್ನ ಮಾಡಿದ್ದರೆ ನಮ್ಮ ಅಣ್ಣ ಪುಟ್ಟು ಇತನು ನಿಮಗೆ ಕೊಲೆ
ಮಾಡುತ್ತಾನೆ ಅಂತಾ ಬೆದರಿಕೆ ಹಾಕಿರುತ್ತಾನೆ. ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸಪ್ನಾ
ಇವಳಿಗೆ ಅಪಹರಿಸಿಕೊಂಡು ಹೋದ ಪುಟ್ಟು ಮತ್ತು ಅವನಿಗೆ ಸಹಾಯ ಮಾಡಿದ ದಾವೀದ ಹಾಗೂ ಶಿವಾ ಇವರ ಮೇಲೆ
ಕಾನೂನು ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment