ಜೇವರ್ಗಿ ಪೊಲೀಸ ಠಾಣೆ : ದಿನಾಂಕ 08.10.2015 ರಂದು ಮುಂಜಾನೆ 06:30
ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರ ಅರ್ಜಿ ಹಾಜರುಪಡಿಸಿದ್ದು
ಸಾರಾಂಶವೇನೆಂದರೆ “ದಿನಾಂಕ 07.10.2015 ರಂದು ರಾತ್ರಿ 08:00
ಗಂಟೆಗೆ ಚಿಗರಳ್ಳಿ ಕ್ರಾಸ್ ಸಮೀಪ ದರ್ಗಾ ಹತ್ತಿರ ಜೇವರಗಿ
ಶಹಾಪುರ ಮುಖ್ಯ ರಸ್ತೆಯ ಮೇಲೆ ನಾನು ಮತ್ತು ನಮ್ಮ ದೊಡ್ಡಮ್ಮನ ಮಗನಾದ ಲೋಕೇಶ ತಂದೆ ವಸಂತ
ಲೋಕೆಕರ್ ವಯಾ||
23 ವರ್ಷ ಈತನೊಂದಿಗೆ ನಡೆದುಕೊಂಡು ಚಿಗರಳ್ಳಿ ಕ್ರಾಸ್ ದಿಂದ ದರ್ಗಾ ಕಡೆಗೆ ಬರುತ್ತಿದ್ದಾಗ ಅದೇ
ವೇಳೆಗೆ ಜೇವರಗಿ ಕಡೆಯಿಂದ ಕಾರ್ ನಂ ಕೆ.ಎ32ಎಮ್4506 ನೇದ್ದರ ಚಾಲಕ ತನ್ನ ಕಾರ್ ಅನ್ನು ಅತಿ
ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ
ಲೋಕೆಶನಿಗೆ ಡಿಕ್ಕಿ ಪಡಿಸಿದ್ದರಿಂದ ಲೋಕೇಶನಿಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೆ
ಮೃತಪಟ್ಟಿದ್ದು ಅಪಘಾತನದ ನಂತರ ಕಾರ್ ಚಾಲಕನು ತನ್ನ ಕಾರ್ ನೊಂದಿಗೆ ಓಡಿ ಹೋಗಿದ್ದು ಕಾರಣ
ಸದರಿ ಕಾರ್‌ಮತ್ತು ಚಾಲಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿ” ಅಂತ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ
ದಾಖಲಾಗಿರುತ್ತೆದೆ.
POLICE BHAVAN KALABURAGI
09 October 2015
08 October 2015
KALABURAGI DISTRICT REPORTED CRIMES
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ:
07/10/2015 ರಂದು ಶ್ರೀ.ಬಂಡಯ್ಯ ತಂದೆ ಬಾಬಯ್ಯ ಮು:ಎಲೆನಾವದಗಿ ತಾ: ಆಳಂದ ಜಿ:ಕಲಬುರಗಿ ಇವರು
ಠಾಣೆಗೆ ಹಾಜರಾಗಿ ದಿನಾಂಕ: 07/10/2015 ರಂದು ಸಾಯಂಕಾಲ 07:30 ಗಂಟೆಗೆ ತಮ್ಮ ಅಕ್ಕ ನಾಗಮ್ಮಳ
ಗಂಡ ಶಿವಯ್ಯ ಸ್ವಾಮಿ ಮು:ಶಕಾಪೂರ ಇವರು ಪೋನ ಮುಖಾಂತರ ತಿಳಿಸಿದೆನೆಂದರೆ ನಮ್ಮ ತಾಯಿ ರಾಚಮ್ಮ
ಗಂಡ ಬಾಬಯ್ಯ ಇವಳು ಎಲೆನಾವದಗಿಯಿಂದ ಆಳಂದಕ್ಕೆ ಬಂದು ಆಳಂದದಿಂದ ನಮ್ಮೂರಾದ ಶಕಾಪೂರಕ್ಕೆ ಬರುವ
ಸಲುವಾಗಿ ಬಸ್ಸಿನಲ್ಲಿ ಕುಳಿತು ನಮ್ಮೂರ ಕ್ರಾಸಿಗೆ ಬಂದು ಇಳಿದು ರೋಡ ದಾಟುವಾಗ ವಾಗ್ದರಗಿ
ಕಡೆಯಿಂದ ಆಳಂದ ಕಡೆಗೆ ಬರುತ್ತಿದ್ದ ಸಿಮೆಂಟ್ ಟ್ಯಾಂಕರ ಲಾರಿ ನಂ: MH:12 LT:0271ರ
ಚಾಲಕ ತನ್ನ ವಾಹನ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸುತ ಬಂದು ರೋಡ ದಾಟುತ್ತಿದ್ದ ನಮ್ಮ
ತಾಯಿ ರಾಚಮ್ಮಳಿಗೆ ಅಪಘಾತ ಮಾಡಿದ ಪರಿಣಾಮ ಆಕೆಯ
ತಲೆಗೆ ಎಡಭಾಗಕ್ಕೆ ಭಾರಿ ಪೆಟ್ಟಾಗಿದ್ದು ಅಲ್ಲದೆ ರಕ್ತಗಾಯವಾಗಿದ್ದು , ಎಡಗೈ ರಟ್ಟೆ ಮೂರಿದಂತೆ
ಆಗಿರುತ್ತದೆ, ಈ ಘಟನೆ ಸಾಯಂಕಾಲ ಸುಮಾರು 06:40 ಪಿ.ಎಮ್.ಕ್ಕೆ
ಆಗಿರುತ್ತದೆ. ಆಕೆಯನ್ನು ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಆಳಂದಕ್ಕೆ ಒಂದು ವಾಹನದಲ್ಲಿ ನಾನು
ನಿಮ್ಮ ಅಕ್ಕ ನಾಗಮ್ಮ ಹಾಗೂ ಇತರರೂ ಕೂಡಿ ತರುವಾಗ ಅತ್ತೆಯವರಿಗೆ ಆದ ಭಾರಿ ಗಾಯದಿಂದ ಮಾರ್ಗ
ಮಧ್ಯೆ ಮೃತಪಟ್ಟಿರುತ್ತಾಳೆ ಕೊಡಲೇ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾನು ಹಾಗೂ ಊರಿನ ಇತರರು
ಕೂಡಿ ಆಳಂದದ ಸರಕಾರಿ ದವಾಖಾನೆಗೆ ಬಂದು ನಮ್ಮ ತಾಯಿಗೆ ನೋಡಲಾಗಿ ಆಕೆಯ ಮೇಲಕಿಗೆ ಗಾಯಗಳಾಗಿದ್ದು
ಇರುತ್ತದೆ. ಅಪಘಾತ ಮಾಡಿದ ಲಾರಿ ಚಾಲಕ ವಾಹನ ಸಮೇತ ಓಡಿಸಿಕೊಂಡು ಹೋದ ಬಗ್ಗೆ ತಿಳಿಸಿದ್ದು ನನ್ನ
ತಾಯಿ ರೋಡ ದಾಟುವಾಗ ಸಿಮೆಂಟ ಟ್ಯಾಂಕರ ಲಾರಿ ನಂಬರ್ MH:12 LT:0271ರ ಚಾಲಕ ಹಾಯಿಸಿ ಅಪಘಾತ ಮಾಡಿ ವಾಹನ ಸಮೇತ
ಓಡಿಸಿಕೊಂಡು ಹೋಗಿದ್ದು ಅಪಘಾತದಿಂದ ನನ್ನ ತಾಯಿ ಮೃತಪಟ್ಟಿದ್ದು ಚಾಲಕನ ಮೇಲೆ ಕಾನೂನು ಕ್ರಮ
ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕ
07-10-2015 ಶ್ರೀ ಶಿವಯೋಗಿ ತಂದೆ ಫಿರಪ್ಪಾ ತೊಟನಳ್ಳಿ ಇವರು ಠಾಣೆಗೆ ಹಾಜರಾಗಿ ದಿನಾಂಕ05-10-2015 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ನನ್ನ ಮಗ ರಾಜಕುಮಾರನಿಗೆ ನಾಗನಹಳ್ಳಿಯಲ್ಲಿರುವ ಖರ್ಗೆ
ಸಾಹೇಬರ ತೋಟದಲ್ಲಿ ಕೆಲಸ ಮಾಡುವ ಮಹ್ಮದ
ಅಲೀಮ್ ಪಟೇಲ್ ತಂದೆ ಮಹ್ಮದ ಹಕೀಮ್
ಪಟೇಲ್ ಈತನು ಸೇಡಂ ರಿಂಗ ರೋಡದಿಂದ
ಮೋಟಾರ ಸೈಕಲ ಮೇಲೆ ನಾಗನಹಳ್ಳಿ ತೋಟಕ್ಕೆ ಕರೆದುಕೊಂಡು ಹೋಗಿ
ತೋಟವೆಲ್ಲಾ ಸುತ್ತಾಡಿದ ನಂತರ ಅದೇ ಮೋಟಾರ
ಸೈಕಲ ಮೇಲೆ ಸೇಡಂ ರಿಂಗ ಹತ್ತಿರ
ತಂದು ಬಿಟ್ಟಿರುತ್ತಾನೆ ಅಂತಾ ತಿಳಿಸಿದ್ದು ಅಲ್ಲಿಂದ ನನ್ನ
ಮಗ ಎಲ್ಲಿಗೆ ಹೋಗಿರುತ್ತಾನೆ ಗೊತ್ತಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಕಾಣೆಯಾಗಿರುತ್ತಾನೆ ಅಂತಾ ವಗೈರೆಯಾಗಿ ಹೇಳಿಕೆ
ಫಿರ್ಯಾದಿ ನೀಡಿ ತಮ್ಮ ಠಾಣೆ ಗುನ್ನೆ
ನಂ. 128/2015 ಕಲಂ ಮನುಷ್ಯ ಕಾಣೆ ಪ್ರಕರಣ
ದಾಖಲಿಸಿದ್ದು ಇರುತ್ತದೆ ಇಂದು ತಾವು ಮಹ್ಮದ
ಅಲೀಮ್ ಪಟೇಲ್ ತಂದೆ ಮಹ್ಮದ ಹಕೀಮ್
ಪಟೇಲ್ ಈತನನ್ನು ವಿಚಾರಣೆ ಮಾಡುತ್ತಿರುವಾಗ ನಾನು ಕೂಡ
ಠಾಣೆಯಲ್ಲಿ ಹಾಜರಿದ್ದು ನನ್ನ ಮಗ ರಾಜಕುಮಾರ ಈತನಿಗೆ
ಸುಮಾರು ವರ್ಷಗಳಿಂದ ಪರಿಚಯ ಇರುವ ಮಹ್ಮದ
ಅಲೀಮ್ ಈತನು ವಿಚಾರಣೆಯಲ್ಲಿ ಹೇಳಿದ್ದೇನೆಂದರೇ, ತಾನು ಈ ಮೋದಲು ನಾಗನಹಳ್ಳಿ ಸಿಮಾಂತರದಲ್ಲಿರುವ ಖರ್ಗೆಸಾಹೇಬರ ಜಮೀನಿನ
ಎಲ್ಲಾ ಕೆಲಸ ಕಾರ್ಯಗಳನ್ನು ತಾನೇ ನೋಡಿಕೊಳ್ಳುತ್ತಿದ್ದು, ತದನಂತರ ನನ್ನ ಮಗ ರಾಜಕುಮಾರ ಈತನು
ಜಮೀನಿನ ಎಲ್ಲಾ ಕೆಲಸ ಕಾರ್ಯಗಳನ್ನು ಅವನಿಂದ ಬಿಡಿಸಿ
ತಾನೇ ನೋಡಿಕೊಳ್ಳಲಾರಂಬಿದ್ದು ಇದ್ದರಿಂದ ಅವನ ವ್ಯವಹಾರಗಳಲ್ಲಿ ಬಹಳ ಲುಕ್ಸಾನ್ ಆಗಿದ್ದರಿಂದ ಹೇಗಾದರೂ
ಮಾಡಿ ರಾಜಕುಮಾರ ಈತನಿಗೆ ಮುಗಿಸಿದರೆ ಮತ್ತೆ ಮೊದಲಿನಂತೆ ತಾನೇ
ಕೆಲಸ ಕಾರ್ಯಗಳನ್ನು ಮುಂದುವರೆಸಬಹುದು ಅಂತಾ ತಿಳಿದು ತಾನು
ಮತ್ತು ತನ್ನ ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾರ್ಜು ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ
ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ನಾಲ್ಕು ಜನರು ಸೇರಿ ದಿನಾಂಕ: 05-10-2015 ರಂದು ಬೆಳಗ್ಗೆ08:30 ಸುಮಾರಿಗೆ ರಾಜಕುಮಾರನು ಮಹ್ಮದ ಅಲೀಮ್ ಪಟೇಲನಿಗೆ ತಾನು ನಾಗನಹಳ್ಳಿ ತೋಟಕ್ಕೆ ಬರುವುದಾಗಿ ತಿಳಿಸಿದ್ದರಿಂದ ಮಹ್ಮದ ಅಲೀಮ್
ಪಟೇಲನು ನನ್ನ ಮಗ ರಾಜಕುಮಾರನಿಗೆ ದಿನಾಂಕ: 05-10-2015 ರಂದು 10.30 ಎ.ಎಮ ಕ್ಕೆ
ಸೇಡಂ ರಿಂಗ ರೋಡದಿಂದ ಮೋಟಾರ ಸೈಕಲ
ಮೇಲೆ ನಾಗನಳ್ಳಿ ತೋಟಕ್ಕೆ ಕರೆದುಕೊಂಡು ಹೋಗಿ,
ನಾಗನಳ್ಳಿ ತೋಟದಲ್ಲಿ ಈ ಮೊದಲೆ
ಪ್ಲಾನ ಮಾಡಿ ಕುಳಿತಿದ್ದ ಮಹ್ಮದ ಅಲೀಮ್ ಪಟೇಲ್
ಮತ್ತು ಆತನ ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾಜರ್ುನ ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ
ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ಈ ನಾಲ್ಕು ಜನರು
ಸೇರಿ ನನ್ನ ಮಗ ರಾಜಕುಮಾರ ಈತನಿಗೆ ನಾಗನಳ್ಳಿ ತೋಟದ
ತೋಗರಿ ಹೊಲದಲ್ಲಿ ಕಣ್ಣಿಗೆ ಖಾರದ ಪುಡಿ
ಎರಚಿ, ಕುತ್ತಿಗೆ ಒತ್ತಿ
ಕೊಲೆ ಮಾಡಿ, ಶವವನ್ನು ಸಾಯಂಕಾಲದವರೆಗೆ ಹೊಲದಲ್ಲಿಯೇ ಇಟ್ಟು ನಂತರ ಸಾಯಂಕಾಲ
ನನ್ನ ಮಗ ರಾಜಕುಮಾರನ ಶವವನ್ನು ಮಂಜು ಈತನ
ಬೋಲೆರೋ ಜೀಪಿನಲ್ಲಿ ಹಾಕಿಕೊಂಡು ನಾಗನಹಳ್ಳಿ ತೋಟದಿಂದ ಚಿಂಚೋಳ್ಳಿ ತಾಲೂಕಿನ ಚೆನ್ನೂರ
ಗ್ರಾಮದ ಡ್ಯಾಮಿನ ಹತ್ತಿರ ಹೋಗಿ ಟೊಂಕಕ್ಕೆ ದೊಡ್ಡ
ಕಲ್ಲು ಕಟ್ಟಿ ಬ್ರಿಡ್ಜ ಮೇಲಿಂದ ಡ್ಯಾಮಿನಲ್ಲಿ ಬಿಸಾಕಿ
ನಂತರ ಅದೇ ಬೋಲೆರೋ ಜೀಪಿನಲ್ಲಿ ಮರಳಿ ಕಲಬುರಗಿಗೆ ಬಂದಿರುತ್ತಾರೆ ಅಂತಾ
ವಿ ತಿಳಿದು ಬಂದಿರುತ್ತದೆ. ನನ್ನ ಮಗ ರಾಜಕುಮಾರ ಈತನಿಗೆ
ಮಹ್ಮದ ಅಲೀಮ್ ಪಟೇಲ್ ಮತ್ತು ಆತನ
ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾರ್ಜುನ ಯರಗಲ್, ಅಮರ ತಂದೆ ನಾಗಣ್ಣ
ಬಡಿಗೇರ ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ಎಲ್ಲರೂ ಕೂಡಿ ಹಳೇ
ವೈಷ್ಯಮದಿಂದ ಕಣ್ಣಿಗೆ ಖಾರದ ಪುಡಿ ಹಾಕಿ
ಕುತ್ತಿಗೆ ಒತ್ತಿ ಕೊಲೆ ಮಾಡಿ ನಂತರ
ಚೆನ್ನೂರ ಗ್ರಾಮದ ಡ್ಯಾಮಿನಲ್ಲಿ ಟೊಂಕಕ್ಕೆ ದೊಡ್ಡ ಕಲ್ಲು ಕಟ್ಟಿ
ಬಿಸಾಕಿರುತ್ತಾರೆ ಕಾರಣ ಮಹ್ಮದ ಅಲೀಮ್ ಪಟೇಲ್
ಮತ್ತು ಆತನ ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾರ್ಜುನ ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ
ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ಇವರುಗಳು ವಿರುದ್ದ ಸೂಕ್ತ
ಕಾನೂನು ಕ್ರಮ ಜರೂಗಿಸಬೇಕು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾತ್ಮಾ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.07 October 2015
Kalaburagi District Reported Crimes.
ಅಫಜಲಪೂರ ಠಾಣೆ : ಫಿರ್ಯಾದುದಾರರು ಏಳು ತಿಂಗಳ ಹಿಂದೆ ತಮ್ಮ ಮಗನಾದ ಇಶಾಕ ಇತನ ಮದುವೆಗೆ ಹಣದ ಅವಶ್ಯಕತೆ
ಇದ್ದರಿಂದ ತಮ್ಮ ಗ್ರಾಮದ ಭೀಮಶ್ಯಾ ಲಾಳಸಂಗಿ ರವರ
ಮಕ್ಕಳಾದ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ
ಇವರ ಹತ್ತಿರ ಹೋಗಿ ನನ್ನ ಮಗನ ಮದುವೆಯ ಸಲುವಾಗಿ
60,000/-ರೂ ಬೇಕಾಗಿದೆ ಬಡ್ಡಿಯಂತೆ ಹಣ ಕೊಡು ಅಂತ ಕೇಳಿದೆನು ಅದಕ್ಕೆ ಸಿದ್ದಪ್ಪ ಇತನು ನಾನು 3% ರ ಬಡ್ಡಿಯಂತೆ ಹಣಕೊಡುವದಿಲ್ಲ ನನ್ನ ಹತ್ತಿರ ಬಡ್ಡಿ ಹೆಚ್ಚಿಗೆ ಇರುತ್ತದೆ ಅಂತ ಹೇಳಿದನು
ನನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಈಗ ನನಗೆ ಮೊದಲು ಹಣಕೊಡು ಅಂತ ಸಿದ್ದಪ್ಪನಿಗೆ ಹೇಳಿದ್ದು
ಸಿದ್ದಪ್ಪನು ನನಗೆ 30,000/- ರೂಪಾಯಿ ಕೊಟ್ಟು ನನಗೆ ಹೇಳಿದ್ದೇನೆಂದರೆ ನನ್ನ ಹತ್ತಿರದ 30,000/-ರೂಪಾಯಿ ಹಾಗೂ ನನ್ನ
ತಮ್ಮನಾದ ಪುಂಡಪ್ಪನ ಹತ್ತಿರದ 30,000/- ರೂ ಸೇರಿಸಿ ನಿನಗೆ ಒಟ್ಟು 60,000/-ರೂ ಕೊಟ್ಟಿರುತ್ತೆನೆ ಅಂತ ಹೇಳಿ ನನಗೆ ಕೊಟ್ಟನು. ನಂತರ
ಸಿದ್ದಪ್ಪ ಹಾಗೂ ಅವರ ತಮ್ಮನಾದ ಪುಂಡಪ್ಪ ಇವರು
ಒಂದು ತಿಂಗಳ ನಂತರ ನಮ್ಮ ಹಣ ಮರಳಿಕೊಡು ಇಲ್ಲವಾದರೆ ತಿಂಗಳಿಗೆ 10% ರ ಬಡ್ಡಿದರದಲ್ಲಿ ಪ್ರತಿ
ತಿಂಗಳು ಬಡ್ಡಿಯನ್ನು ಕೊಡು ಅಂತ ಹೇಳಿದ್ದರಿಂದ
ಸಿದ್ದಪ್ಪ ಮತ್ತು ಪುಂಡಪ್ಪ ಇವರಿಗೆ ಮೀಟರ ಬಡ್ಡಿ ರೂಪದಲ್ಲಿ ನಾನು ಸಾಲವಾಗಿ ತಗೆದುಕೊಂಡ 60,000/-ರೂಪಾಯಿ ಹಣಕ್ಕೆ ಪ್ರತಿ
ತಿಂಗಳ 10% ರಂತೆ ಮೀಟರ ಬಡ್ಡಿ
ಕೊಡುತ್ತಾ ಬಂದಿರುತ್ತೇನೆ.ದಿನಾಂಕ 21-09-2015 ರಂದು ನಾನು
ಸಿದ್ದಪ್ಪ ಇವರ ಹತ್ತಿರ ಸಾಲ ಪಡೆದುಕೊಂಡಂತಹ 60,000/-ರೂ ಹಣವನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು ಸಿದ್ದಪ್ಪ ಹಾಗೂ ಪುಂಡಪ್ಪ ಇವರಿಗೆ ನಮ್ಮ ಗ್ರಾಮದ ಹಜರತ ತಂದೆ ಇಸ್ಮಾಯಿಲ್ ಅತ್ತರ, ಮೋತಿರಾಮ ನಾಯ್ಕ ಕರಜಗಿ
ತಾಂಡಾ ಹಾಗೂ ನನ್ನ ಹೆಂಡತಿಯಾದ ಅಮೀನಾ ಇವರ ಸಮಕ್ಷಮ ನಮ್ಮ ಮನೆಗೆ ಕರೆಯಿಸಿ ನಾನು ಸಾಲವಾಗಿ
ಪಡೆದುಕೊಂಡ ಹಣಕ್ಕೆ ಬಡ್ಡಿ ಸೇರಿಸಿ ಒಟ್ಟು 1,00,000/- ರೂ ಹಣವನ್ನು ಕೊಟ್ಟು ನಿಮ್ಮ ಬಾಕಿ ಏನು ಇರುವುದಿಲ್ಲಾ ಅಂತ
ಹೇಳಿರುತ್ತೇನೆ. ಆದರೆ ಸದರಿ ಸಿದ್ದಪ್ಪ
ಲಾಳಸಂಗಿ ಹಾಗೂ ಪುಂಡಪ್ಪ ಲಾಳಸಂಗಿ ಇವರು ಈಗ ಒಂದು ವಾರದಿಂದ ನಾವು ನಿನಗೆ ಕೊಟ್ಟಂತಹ 60,000/-ರೂಪಾಯಿ ಹಣಕ್ಕೆ ಇನ್ನೂ ಬಡ್ಡಿಕೊಡಬೇಕು ನಿನು ಪೂರ್ತಿ ಬಡ್ಡಿಕೊಟ್ಟಿಲ್ಲಾ ಅಂತ ನನಗೆ
ಪೀಡಿಸುತ್ತಿರುತ್ತಾನೆ. ನಿನ್ನೆ ದಿನಾಂಕ 05-10-2015 ರಂದು ರಾತ್ರಿ
10.00 ಗಂಟೆ
ಸಮಯಕ್ಕೆ ನಾನು ನಮ್ಮ ಮನೆಯಲಿದ್ದಾಗ ಸಿದ್ದಪ್ಪ ಲಾಳಸಂಗಿ ಹಾಗೂ ಪುಂಡಪ್ಪ ಲಾಳಸಂಗಿ ಇವರು ನಮ್ಮ
ಮನೆಗೆ ಬಂದು ನಿನಗೆ ನಾವು ಕೊಟ್ಟ 60,000/- ರೂಪಾಯಿಗೆ ಬಡ್ಡಿಕೊಡು
ಎಂದು ಕೊಡುತ್ತಿ ಅಂತ ಹೇಳಿ ಹೋಗಿರುತ್ತಾರೆ.ನಾನು ನಮ್ಮ
ಮನೆಯಲ್ಲಿ ನನ್ನ ಹೆಂಡತಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಸದರಿ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ ಹಾಗೂ ಪುಂಡಪ್ಪ ತಂದೆ
ಭಿಮಶ್ಯಾ ಲಾಳಸಂಗಿ ಸಾ|| ಕರಜಗಿ ಇವರು ಕರಜಗಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಪಡೆಯದೆ
ಅನಧಿಕೃತವಾಗಿ ಮೀಟರ ಬಡ್ಡಿಯಂತೆ ಕರಜಗಿ ಗ್ರಾಮದ ರೈತರಿಗೂ ಹಾಗೂ ಇನ್ನೂಳಿದ ಜನರಿಗೂ ಹಣ ಕೊಟ್ಟು
ಮೀಟರ ಬಡ್ಡಿ ರೂಪದಲ್ಲಿ ಹಣ ಪಡೆದು ಜನರಿಗೆ ಮೋಸ ಮಾಡಿ ಬಡ್ಡಿ ವ್ಯವಹಾರ ಮಾಡುತ್ತಿರುತ್ತಾರೆ. ಅದರಂತೆ ನಾನು ಸಹ ಸದರಿಯವರ ಹತ್ತಿರ ಹಣದ ಅಡಚಣೆಯಿಂದ ಹಣವನ್ನು ಪಡೆದುಕೊಂಡು ಪಡೆದುಕೊಂಡ ಹಣ ಹಾಗೂ ಅದಕ್ಕೆ ಸಂಬಂಧಪಟ್ಟ
ಬಡ್ಡಿಯನ್ನು ಮರಳಿಕೊಟ್ಟರು ಸಹ ಇನ್ನೂ ಬಡ್ಡಿ ಹಣ
ಬರಬೇಕು ಅಂತ ನನಗೆ ಪಿಡಿಸುತ್ತಿರುತ್ತಾರೆ ಆದ್ದರಿಂದ ಸದರಿ ಸಿದ್ದಪ್ಪ ಲಾಳಸಂಗಿ ಹಾಗೂ ಅವನ ತಮ್ಮನಾದ
ಪುಂಡಪ್ಪ ಇವರ ಮೇಲೆ ಕಾನುನು ಕ್ರಮ
ಜರೂಗಿಸಬೇಕೆಂದು ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ : ದಿನಾಂಕ: 06/10/2015 ರಂದು 09-30 ಪಿಎಮ್ ಕ್ಕೆ ಫಿರ್ಯಾದಿದಾರರಾದ
ಶ್ರೀ ಸೈಯದ್ ಇರ್ಫಾನ ತಂದೆ ಸೈಯದ್ ಚಾಂದಪಟೇಲ್ ವಯ:
32 ವರ್ಷ
ಜಾತಿ: ಮುಸ್ಲಿಂ
ಉ: ಮೆಕ್ಯಾನಿಕ ಕೆಲಸ ಸಾ:
ಸಿಟಿ ಸ್ಕೂಲ ಅಕಾಡೆಮಿ ಹತ್ತಿರ ಜಂ ಜಂ ಕಾಲನಿ ಕಲಬುರಗಿ ಇವರು
ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ ತಾನು ದಿನಾಂಕ: 24/09/2015 ರಂದು ಬಕ್ರೀದ ಹಬ್ಬದ ಆಚರಣೆಗಾಗಿ ನಮ್ಮ
ಸ್ವಂತ ಊರಾದ ತಡಗೋಳ ಗ್ರಾಮಕ್ಕೆ ಸಂಜೆ ಸಮಯ 6-00
ಗಂಟೆಗೆ ಜಂ ಜಂ ಕಾಲನಿಯ ನನ್ನ ಮನೆ ಕೀಲಿ
ಹಾಕಿಕೊಂಡು ಹೆಂಡತಿ ಮಕ್ಕಳೊಂದಿಗೆ ಹೋಗಿರುತ್ತೇನೆ.
ದಿನಾಂಕ: 25/09/2015 ರಂದು
07-00 ಎಎಮ್ ಕ್ಕೆ ನನ್ನ ಮನೆಯ ಪಕ್ಕದಲ್ಲಿಯೇ ಇರುವ ನಮ್ಮ ಮಾವ ಮಹಮ್ಮದ ಅಯ್ಯೂಬ್ ಇವರು ನನಗೆ ಪೋನ
ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮನೆ ಬಾಗಿಲ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ
ತೆರೆದಿರುತ್ತದೆ ಮನೆ ಕಳ್ಳತನವಾಗಿರಬಹುದು ಬೇಗ ಬಾ ಅಂತ ತಿಳಿಸಿದ್ದು ನಾನು
ನಮ್ಮೂರಿನಿಂದ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ನಾನು ಗಾಬರಿಯಿಂದ
ಮನೆಯೋಳಗೆ ಹೋಗಿ ನೋಡಲು ಬೆಡ್ ರೂಮನ ಬಾಗಿಲು ತೆರೆದಿದ್ದು ಬೆಡರೂಮನಲ್ಲಿದ್ದ ಅಲಮಾರಾದ ಲಾಕ
ಮುರಿದಿದ್ದು ಬಾಗಿಲು ತೆರೆದಿರುತ್ತದೆ ಮತ್ತು ಅಲಮಾರಾದಲ್ಲಿದ್ದ ಬಟ್ಟೆ ಬರೆ ಸಾಮಾನುಗಳೆಲ್ಲ
ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಆಗ ನಾನು
ಗಾಬರಿಯಿಂದ ಅಲಮಾರಾದಲ್ಲಿ ನೋಡಲು 15-20
ವರ್ಷಗಳ ಹಿಂದೆ ನಮ್ಮ ತಂದೆಯವರು ಖರೀದಿಸಿದ್ದ
1) 20 ಗ್ರಾಂ
ಬಂಗಾರದ ನಕ್ಲೇಸ್ ಅ.ಕಿ= 10000/-ರೂ 2) 15 ಗ್ರಾಂ
ಬಂಗಾರದ ಗಲಸರಿ (ತಾಳಿ) ಅ.ಕಿ= 7500/-ರೂ
3) ಪ್ರತಿ
5ಗ್ರಾಂ
ಬಂಗಾರದ ( ಒಟ್ಟು 10 ಗ್ರಾಂ) 2 ಸುತ್ತುಂಗುರ
ಅ.ಕಿ= 10000/-ರೂ 4) 5
ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ= 2500/-ರೂ ಹೀಗೆ ಒಟ್ಟು 50 ಗ್ರಾಂ ಬಂಗಾರದ 25000/-ರೂ
ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ:
24/09/2015 ರಂದು 6-00 ಪಿಎಮ್ ಗಂಟೆಯಿಂದ ದಿನಾಂಕ: 25/09/2015 ರಂದು 07-00ಎಎಮ್ ಮಧ್ಯದ ಅವಧಿಯಲ್ಲಿ ನಮ್ಮ ಮನೆ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಸದರಿ ವಿಚಾರವನ್ನು ನಮ್ಮ ಸ್ವಂತ ಊರಾದ
ತಡಗೋಳಕ್ಕೆ ಹೋಗಿ ಅಲ್ಲಿ ಬಕ್ರೀದ ಹಬ್ಬದ
ಆಚರಣೆಯಲ್ಲಿದ್ದ ನನ್ನ ಹೆಂಡತಿಗೆ ತಿಳಿಸಿದ್ದು
ಅವಳು ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಅಲ್ಲೇ ಉಪಚಾರ ಪಡೆದುಕೊಂಡು ಇಂದು ಜಂಜಂ
ಕಾಲನಿ ಕಲಬುರಗಿಯ ನನ್ನ ಮನೆಗೆ ಹೆಂಡತಿಯೊಂದಿಗೆ ವಾಪಸ್ ಬಂದಿರುವುದರಿಂದ
ಮನೆಯಲ್ಲಿ ನೋಡಿ ವಿಚಾರಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ. ಕಾರಣ ಕಳ್ಳತನವಾದ ನನ್ನ ಬಂಗಾರದ
ಆಭರಣಗಳನ್ನು ಪತ್ತೆ ಹಚ್ಚಿ ನಮಗೆ ವಾಪಸ್ಸ್ ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ
ವಗೈರೆ ನೀಡಿದ ಫಿರ್ಯಾದಿ ಹೇಳಿಕೆ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
Subscribe to:
Posts (Atom)