POLICE BHAVAN KALABURAGI

POLICE BHAVAN KALABURAGI

05 October 2015

Kalaburagi District Reported Crimes.

ಅಫಜಲಪೋರ ಠಾಣೆ : ದಿನಾಂಕ 04-10-2015 ರಂದು ಬೆಳಿಗ್ಗೆ 09:00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಕಾಶಿಬಾಯಿ ಹಾಗೂ ಇಬ್ಬರು ಬಳುರ್ಗಿ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂಬರ 74 ನೇದ್ದಕ್ಕೆ ಹತ್ತಿ ಬೇಳೆಯಲ್ಲಿ ಕಸ ತಗೆಯಲು ಹೋಗಿರುತ್ತೇವೆ. ಅಂದಾಜು 10:00 ಗಂಟೆ ಸುಮಾರಿಗೆ ನನ್ನ ಮಗಳು ರಾಗಿಣಿ, ಮಗ ಶಿವರಾಜಕುಮಾರ ಹಾಗೂ ನನ್ನ ಹೆಂಡತಿಯ ತಮ್ಮ ಸೋಮಶೇಖರ ಮೂರು ಜನರು ಕೂಡಿ ಇಂದು ಶಾಲೆ ರಜೆ ಇದ್ದ ಕಾರಣ ಹೊಲ ನೋಡುವ ಸಂಭಂದ ಹೊಲಕ್ಕೆ ಬಂದಿರುತ್ತಾರೆ, ಮದ್ಯಾಹ್ನ ಅಂದಾಜು 3:00 ಗಂಟೆ ಸುಮಾರಿಗೆ ನಾವೆಲ್ಲರು ಹೊಲದಲ್ಲಿದ್ದಾಗ ಮಳೆ ಬರತೊಡಗಿತು ಆಗ ನಾವು ಮತ್ತು ಎತ್ತು ಮೇಯಿಸಲು ಬಂದ ನಮ್ಮ ಅಣ್ಣ ತಮ್ಮಕಿಯ ಬಸವರಾಜ ತಂದೆ ಶಿವುಕುಮಾರ ಅತನೂರ ಈತನು ಬಂದಿದ್ದು ಎಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿರುವ ಪತ್ರಾಸ ಸೆಡ್ಡಿನಲ್ಲಿ ಹೋಗಿ ಕುಳಿತಿರುತ್ತೇವೆ, ಅಂದಾಜು ಮದ್ಯಾಹ್ನ 3:30 ಗಂಟೆ ಸುಮಾರಿಗೆ ಮಳೆ ಬರುತ್ತಿದ್ದಾಗ ಏಕಾ ಏಕಿ ಗುಡುಗಿ (ಗದ್ದರಿಸಿ) ನಾವು ಕುಳಿತಲ್ಲಿಗೆ ಸಿಡಿಲು ಬಡೆದು ಕಣ್ಣಿಗೆ ಕತ್ತಲಾಗಿತು. ತದನಂತರ ನಮ್ಮ ಪಕ್ಕದಲ್ಲಿಯೆ ಕುಳಿತಿದ್ದ ನನ್ನ ಮಗಳು ರಾಗಿಣಿ ಹಾಗೂ ಬಸವರಾಜ ಇಬ್ಬರು ಮೃತಪಟ್ಟಿದ್ದರು, ಸೋಮಶೇಖರ ಈತನು ಸಿಡಿಲಿನಿಂದ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದನು, ಉಳಿದಂತೆ ನನಗೆ ಮತ್ತು ನನ್ನ ಹೆಂಡತಿ ಕಾಶಿಬಾಯಿ ಹಾಗೂ ಮಗ ಶಿವುರಾಜಕುಮಾರ ಮೂರು ಜನರಿಗೆ ಏನು ಆಗಿರುವುದಿಲ್ಲ, ಆಗ ನಾವು ಚೀರಾಡಿ ಅಳುತ್ತಿದ್ದ ಸಪ್ಪಳ ಕೇಳಿ ಸೋಮಶೇಖರ ಅತನೂರ, ಕಲ್ಯಾಣಪ್ಪ ಪಾಟೀಲ, ಶಿವಲಿಂಗಯ್ಯ ಹಿರೇಮಠ, ಬಸವರಾಜ ಪಾಟೀಲ ಹಾಗೂ ಇತರರು ಬಂದು ನನ್ನ ಮಗಳ ಮತ್ತು ಬಸವರಾಜನ ಮೃತ ದೇಹವನ್ನು ಯಾವುದೋ ಒಂದು ಟಂ ಟಂ ದಲ್ಲಿ ಹಾಕಿದರು, ಹಾಗೂ ಗಾಯಗೊಂಡ ನನ್ನ ಅಳಿಯ ಸೋಮಶೇಖರ ಈತನನ್ನು ಇನ್ನೊಂದು ವಾಹನದಲ್ಲಿ ಹಾಕಿಕೊಂಡು ಎಲ್ಲರೂ ಕೂಡಿ ಅಫಜಲಪೂರಕ್ಕೆ ಬಂದಿರುತ್ತೇವೆ. ಗಾಯಗೊಂಡ ನನ್ನ ಅಳಿಯ ಸೋಮಶೇಖರನನ್ನು ಅಫಜಲಪೂರದಿಂದ ನಮ್ಮೂರಿನ ರಾವುತಪ್ಪ ಭಜಂತ್ರಿ, ವಿಶ್ವನಾಥ ಪಾಟೀಲ ಇಬ್ಬರು 108 ಅಂಬ್ಯಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ, ಈಗ ನನ್ನ ಮಗಳು ರಾಗಿಣಿಯ ಹಾಗೂ ನಮ್ಮ ಅಣ್ಣ ತಮ್ಮಕಿಯ ಬಸವರಾಜನ ಶವಗಳು ಅಫಜಲಪೂರ ಸರ್ಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿ ಬಂದಿರುತ್ತೇವೆ. ಇಂದು ದಿನಾಂಕ 04-10-2015 ರಂದು ಮದ್ಯಾಹ್ನ 3:30 ಗಂಟೆ ಸುಮಾರಿಗೆ ನಾವೆಲ್ಲರು ಬಳುರ್ಗಿ ಸಿಮಾಂತರದ ನಮ್ಮ ಹೊಲ ಸ ನಂ 74 ನೇದ್ದರ ಪತ್ರಸಾ ಸೇಡ್ಡಿನಲ್ಲಿದ್ದಾಗ ಏಕಾ ಏಕಿ ಮಳೆ ಬರುತ್ತಿದ್ದಾಗ ಸಿಡಲು ಬಡೆದು ನನ್ನ ಮಗಳಾದ 1) ರಾಗಿಣಿ ತಂದೆ ಅರ್ಜುನ ಅತನೂರ ವಯಾ|| 15 ವರ್ಷ ಮತ್ತು ನಮ್ಮ ಅಣ್ಣ ತಮ್ಮಕಿಯ  2) ಬಸವರಾಜ ತಂದೆ ಶಿವುಕುಮಾರ ಅತನೂರ ವಯಾ|| 25 ವರ್ಷ ಇವರಿಬ್ಬರು ಆಕಸ್ಮಿಕವಾಗಿ ಮೃತಪಟ್ಟಿರುತ್ತಾರೆ, ಹಾಗೂ ನನ್ನ ಅಳಿಯ ಸೋಮಶೇಖರ ತಂದೆ ಶರಣಪ್ಪ ಸಾಲುಟಗಿ ವ|| 18 ವರ್ಷ ಸಾ|| ಹರನಾಳ ತಾ|| ಜೇವರ್ಗಿ ಹಾ|| || ಹಳ್ಯಾಳ ಈತನು ಗಂಬಿರವಾಗಿ ಗಾಯಗೊಂಡಿರುತ್ತಾನೆ. ಸದರಿ ಘಟನಯು ಆಕಸ್ಮಿಕವಾಗಿ ಜರುಗಿರುತ್ತದೆ ಮೇಲಿಂದ ಗುನ್ನೆ ದಾಖಲಾಗಿರುತ್ತದೆ..

ಗ್ರಾಮೀಣ ಠಾಣೆ : ದಿನಾಂಕ 04-10-15 ರಂದು ಸಂಜೆ 6-00 ಗಂಟೆ ಸುಮಾರಿಗೆ ಫಿರ್ಯಾದಿದಾರಳ ಪಕ್ಕದಲ್ಲಿ ಗಾಯಾಳು ಕು:ಸಾನಿಕಾ ಇವಳು ಕಪನೂರ ಸರಕಾರಿ ಶಾಲೆ ಎದುರುಗಡೆ  ಸೈಡಿಗೆ ರೋಡ ದಾಟಲು ನಿಂತಿರುವಾಗ, ಅದೇ ವೇಳೆಗೆ ಹುಮನಾಬಾದ ರಿಂಗ ರೋಡ ಕಡೆಯಿಂದ  ಚನ್ನವೀರ ಇತನು ಬಜಾಜ ಡಿಸ್ಕವರಿ ಕೆಎ 32 ವಾಯ 9265 ನಡೆಯಿಸಿಕೊಂಡು ಬಂದಾಗ ಸಾನಿಕಾ ಇವಳು ಹೋಗಲು ಪ್ರಯತ್ನಿಸಿದಾಗ ಚನ್ನವೀರ ಇತನು ತನ್ನ ಮೋಟಾರ ಸೈಕಲ ಬ್ರೇಕ ಮಾಡಿದಾಗ ಅತನು ಕೆಳೆಗೆ ಬಿದ್ದಾಗ ಅಷ್ಟರಲ್ಲಿ ಹುಮನಾಬಾದ ಕಡೆಯಿಂದ  ಮೋಟಾರ ಸೈಕಲ ಕೆಎ 25 ಇಸಿ 7556 ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಮೊದಲು ಸಾನಿಕಾ ಇವಳಿಗೆ ಅಪಘಾತಪಡಿಸಿ  ಚನ್ನವೀರ ಇತನ ಎದೆಯ ಮೇಲಿಂದ  ಮೋಟಾರ ಸೈಕಲ ಹಾಯಿಸಿಕೊಂಡು ಹೋಗಿ ಸ್ವಲ್ಪ ಅಂತರದಲ್ಲಿ ನಿಲ್ಲಿಸಿ, ನಂತರ ಹಾಗೇ ಓಡಿಸಿಕೊಂಡು ಹೋಗಿದ್ದು, ಅಷ್ಟರಲ್ಲಿ ರೋಡಿಗೆ ಹೋಗುತ್ತಿದ್ದ ಮಂಜುನಾಥ ಮೊಳೆ, ಬಸವರಾಜ ಖಜಂದಾರ, ಗೌತಮ ಖಜಂದಾರ ಇವರುಗಳು ನೋಡಿ ಸಾನಿಕಾ ಮತ್ತು ಚನ್ನವೀರ ಇವರಿಬ್ಬರಿಗೆ  108 ಅಂಬುಲೈನ್ಸ ಗಾಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿ ತಂದಾಗ, ಚನ್ನವೀರ ಇತನು ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಸಾನಿಕಾ ಇವಳಿಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು,  ಕಾರಣ ಮೋಟಾರ ಸೈಕಲ ಕೆಎ 25 ಇಸಿ 7556 ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ  ಇತ್ಯಾದಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ. 

03 October 2015

Kalaburagi District Reported Crimes.

ಚೌಕ ಪೊಲೀಸ್ ಠಾಣೆ : ದಿನಾಂಕ 02.10.2015 ರಂದು 8-10 ಪಿ.ಎಂ.ಕ್ಕೆ  ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ಇವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ ಸಾರಾಂಶ ಏನೆಂದರೆ,  ದಿನಾಂಕ: 02.10.2015 ರಂದು ಸಾಯಂಕಾಲ 1730 ಗಂಟೆಗೆ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಫಿಲ್ಟರ ಬೆಡ್ ಸುಭಾಷ ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ನಾನು ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿ ಮತ್ತು ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಸಿಬ್ಬಂದಿಯವರಾದ ಮೋಶಿನ ಪಿಸಿ 811, ಸಿದ್ರಾಮಯ್ಯಾ ಪಿಸಿ 1210  ಹಾಗೂ ಇಬ್ಬರೂ ಪಂಚರಾದ 1] ಶ್ರೀ ಜೈಭೀಮ ತಂದೆ ಬಾಬುರಾವ ಶ್ರೀಚಂದ ವ: 20 ಉ: ವೇಟರ ಕೆಲಸ ಜಾತಿ: ಪ.ಜಾತಿ ಸಾ: ಔರಾದ(ಬಿ) ಹಾ.ವ: ದ್ವಾರ ಹೊಟೇಲ ಹತ್ತಿರ ಕಲಬುರಗಿ 2) ಶ್ರೀ  ವಿರೇಶ ತಂದೆ ಶಿವಲಿಂಗಪ್ಪ ಹೊಸಮನಿ ವ: 20 ಉ: ವೇಟರ ಕೆಲಸ ಜಾತಿ: ಪ.ಜಾತಿ ಸಾ: ಕಗ್ಗನಮಡಿ ಹಾ.ವ: ಪ್ರಕಾಶ ಟಾಕೀಜ ಹತ್ತಿರ  ಕಲಬುರಗಿ ಇವರಿಗೆ ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 1745 ಗಂಟೆಗೆ ಬರವಾಡಿಕೊಂಡು ಈ ಮೇಲಿನ ವಿಷಯದ ಬಗ್ಗೆ ಅವರಿಗೆ ಮಾಹಿತಿ ತಿಳಿಸಿ ನಾವು ಮಾಡುವ ದಾಳಿಗೆ ಸಹಕರಿಸಿ ಪಂಚನಾಮೆ ಬರೆಯಿಸಿಕೊಡಲು ವಿನಂತಿಸಿಕೊಂಡು ಅವರು ಒಪ್ಪಿಕೊಂಡ ನಂತರ ನಾವು ಠಾಣೆಯಿಂದ 1800 ಗಂಟೆಗೆ ದ್ವಿಚಕ್ರವಾಹನದ  ಮೇಲೆ ಹೊರಟು 1815 ಗಂಟೆಗೆ ಫಿಲ್ಟರ ಬೆಡ್ ಸುಭಾಷ ಹೊಟೇಲ ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಲಕ್ಷ್ಮಣ ಗದವಾಲ ವ: 32 ಉ: ಮಟಕಾ ಬರೆದುಕೊಳ್ಳುವುದು ಜಾತಿ: ವಡ್ಡರ ಸಾ: ಆಶ್ರಯ ಕಾಲೋನಿ ಫಿಲ್ಟರ ಬೆಡ್  ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 4070/-ರೂಪಾಯಿ, ನಾಲ್ಕು ಮಟಕಾ ಚೀಟಿ , ಒಂದು ಬಾಲಪೆನ್ , ಒಂದು ಮೋಬಾಯಿಲ್ ಅ.ಕಿ. 500/- ರೂ ಮಟಕಾ, ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ 18:30 ರಿಂದ 19:30 ಪಿ.ಎಂ.ದ ವರೆಗೆ ಗುನ್ನೆ ಸ್ಥಳದ ರಸ್ತೆಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಬರೆದುಕೊಂಡು ಸದರಿ ಆರೋಪಿತನಿಗೆ ವಿಚಾರಣೆಗೆ ಒಳಪಡಿಸಿ ಈ ಮಟಕಾ ಚೀಟಿಯನ್ನು ಯಾರಿಗೆ ಕೂಡುವುದಾಗಿ ಕೇಳಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೆಳಗೇರಿ ವ: 36 ಉ: ಮಟಕಾ ಬುಕ್ಕಿ & ವ್ಯಾಪಾರ ಸಾ: ಮಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತನಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಅವನೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ವಿಜಯಕುಮಾರ ಇತನು ಅಲ್ಲಿಂದ ಓಡಿ ಹೋಗಿರುವ ಬಗ್ಗೆ ಬಾತ್ಮಿದಾರರಿಂದ ತಿಳಿದು ಬಂದಿದ್ದು ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಆರೋಪಿ ರಮೇಶ ಇತನೊಂದಿಗೆ ಮರಳಿ ಠಾಣೆಗೆ 2000 ಗಂಟೆಗೆ ಠಾಣೆಗೆ ಬಂದು ಸದರಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ವರದಿ ಸಲ್ಲಿಸಿದ್ದು ಸದರಿ ಇಬ್ಬರೂ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.
ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕಃ 02/10/2015 ರಂದು 05:00 ಪಿ.ಎಂ ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೇ, ಇಂದು ದಿನಾಂಕ 02/10/2015 ರಂದು 04:30 ಪಿ.ಎಂ. ಸುಮಾರಿಗೆ ಫಿರ್ಯಾದಿದಾರರು ವಿರೇಂದ್ರ ಪಾಟೀಲ ಬಡಾವಣೆಯಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವ ಕುರಿತು ಜಿ.ಡಿ.ಎ ಕಾಲೋನಿಯಲ್ಲಿರುವ ಹನುಮಾನ ಮಂದಿರ ಎದುರುಗಡೆ ರಸ್ತೆಯ ಮೇಲೆ ಹೋಗುತ್ತಿರುವಾಗ ಎದರುನಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರೂ ಬಂದವರೇ ಒಬ್ಬನು ಮೋಟಾರ ಸೈಕಲ ಚಲಾಯಿಸುತ್ತಿದ್ದ ಹಿಂದೆ ಕುಳಿತವನು ಒಮ್ಮೇಲೆ ಫಿರ್ಯಾದಿದಾರಳ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 55 ಗ್ರಾಂ ಬಂಗಾರದ ಮಂಗಳ ಸೂತ್ರ ಅಃಕಿಃ 1,37,500/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ. ಗಾಬರಿಗೊಂಡು ಸದರಿ ಮೊಟಾರ ಸೈಕಲ ನಂಬರ ನೋಡಿರುವುದಿಲ್ಲಾ. ಸದರಿಯವರು ಅಂದಾಜು 20-25 ವರ್ಷದವರಿದ್ದು ತಳ್ಳನೆಯ ಮೈಕಟ್ಟು ಹೊಂದಿದ್ದು, ಸದರಿ ಮೋಟಾರ ಸೈಕಲ ಕಪ್ಪು ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಇರಬಹುದು, ಕಾರಣ ಜಭರದಸ್ತಿಯಿಂದ ಕಿತ್ತುಕೊಂಡು ಹೋದ ಬಂಗಾರದ ಮಂಗಳಸೂತ್ರವನ್ನು ಪತ್ತೆ ಮಾಡಿಕೊಡಬೇಕು ಮತ್ತು ಸದರಿ ಅಪರಿಚಿತ ಮೋಟಾರ ಸೈಕಲ ಸವಾರರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. 

02 October 2015

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಅಣ್ಣಪ್ಪ ತಂದೆ ಹಣಮಂತ ಬಡಿಗೇರ ಇವರ ಮಗಳಾದ ಪ್ರಿಯದರ್ಶೀನಿ ಇವಳಿಗೆ ಇಳಕಲ್ ಗ್ರಾಮದಲ್ಲಿಯ ಈಶ್ವರ ತಂದೆ ಶ್ರೀಮಂತ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ನಾನು ಎಂದಿನಂತೆ ದಿನಾಂಕ 20-09-2015 ರಂದು ನಾನು ರಾತ್ರಿ ಡ್ಯೂಟಿಗೆ ಹೋಗಿದ್ದು ನನ್ನ ಅಳಿಯನಾದ ಈಶ್ವರ ಇತನು ಮನೆಗೆ ಬಂದಿದ್ದು ದಿನಾಂಕ 21-09-2015 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನನ್ನ ಅಳಿಯನಾದ ಈಶ್ವರ ಇತನು ನನ್ನ ಮಗಳಾದ ಯಶೋದಾ ವಯಸ್ಸು 15 ವರ್ಷ  ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಾವು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ.ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ಅಪಹರಣ ಮಾಡಿಕೊಂಡು ಹೋದ ಈಶ್ವರ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ಕಿರುಕಳ ನೀಡಿದ ಪ್ರಕರಣ :
ಜೇವರಗಿ ಠಾಣೆ : ಕುಮಾರಿ ಇವಳು ದಿನಾಂಕ 28.09.2015 ರಂದು ಮುಂಜಾನೆ ಜೇವರಗಿ ಪಟ್ಟಣದ ವಿಜಯಪುರ ಕ್ರಾಸ್ ಹತ್ತಿರ ರಸ್ತೆಯ ಮೇಲೆ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾಗ ಆ ವೇಳೆಗೆ ನಮ್ಮೂರ ಖಯೂಮ್‌ ಪಟೇಲ್ ತಂದೆ ಮಹೇಬೂಬ ಪಟೇಲ್ ಮಾಲಿ ಬಿರಾದಾರ್ ಸಂಗಡ 4 ಜನರು ಕೂಡಿಕೊಂಡು ಒಂದು ಬಿಳಿ ಬಣ್ಣದ ಕಾರಿನಲ್ಲಿ ಬಂದು ನನಗೆ ಜಬರದಸ್ತಿಯಿಂದ ಕಾರಿನಲ್ಲಿ ಕೂಡಿಕೊಂಡು ಖಯೂಮ್ ಈತನು ನನಗೆ ಪ್ಯಾರ್ ಕೈಕು ನಹಿ ಕರತಿ? ಪ್ಯಾರ್‌ ನಹಿ ಕರೆ ತೋ ಜಾನ್‌ ಸೇ ಮಾರತು, ತುಮ್ ಗಾಂವ್‌ ಮೇ ಕಿಸಿಕೋ ಔರ್ ಪೊಲೀಸ್‌ ಕೋ ಬೋಲನಾ ನಹಿ, ಬೋಲೆತೊ ತುಮಾರಾ ಅಬ್ಬಾಕು ತೇರೆಕು ಜಾನ್ ಸೆ ಮಾರತುಅಂತ ಬೈಯುತ್ತ ಜೈನಾಪುರದ ಸಿಮಾಂತರದ ಕೇನಾಲ್ ಹತ್ತಿರ ಕರೆದುಕೊಂಡು ಹೋಗಿ ನನಗೆ ಎದೆಗೆ ಮತ್ತು ಹೊಟ್ಟೆಗೆ ಹಿಚುಕಿ ಲೈಂಗಿಕ ಕಿರುಕುಳ ಕೊಟ್ಟು ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಹಿಡಿದು ಕೇನಾಲ್ ನೀರಿನಲ್ಲಿ ನೂಕಿಸಿಕೊಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಹಾದೇವಿ ಗಂಡ ಗುಂಡಪ್ಪ ತಳವಾರ ಸಾ|| ಬೊಮ್ಮನಹಳ್ಳಿ ಇವರಿಗೆ ಹಳೆಯ ವೈಷಮ್ಯ ಕಟ್ಟಿಕೊಂಡು 01] ಹಿರೇಣಪ್ಪ ತಂದೆ ರೇವಣಸಿದ್ದಪ್ಪ ಪೂಜಾರಿ, 02] ಭೀಮಪ್ಪ ತಂದೆ ನಿಂಗಪ್ಪ ಮಳ್ಳಿ, 03] ನಿಂಗಪ್ಪ ತಂದೆ ಮಾಳಪ್ಪ ಹಿರೇಪೂಜಾರಿ, 04] ಅಂಬಣ್ಣ ತಂದೆ ನಿಂಗಪ್ಪ ಮಳ್ಳಿ, 05] ಅಣ್ಣಪ್ಪ ತಂದೆ ನಿಂಗಪ್ಪ ಮಳ್ಳಿ, 06] ಬಸಪ್ಪ ತಂದೆ ತುಕ್ಕಪ್ಪ ನಿಂಬರ್ಗಿ, 07] ಗುಂಡಪ್ಪ ತಂದೆ ಶರಣಪ್ಪ ನಿಂಬರ್ಗಿ, 08] ಶರಣಪ್ಪ ತಂದೆ ತುಕ್ಕಪ್ಪ ನಿಂಬರ್ಗಿ ಸಾ|| ಎಲ್ಲರೂ ಬೊಮ್ಮನಹಳ್ಳಿ ಇವರೆಲ್ಲರೂ ದಿನಾಂಕ 30/09/2015 ರಂದು ಸಾಯಂಕಾಲ 0500 ಪಿ.ಎಮ ಕ್ಕೆ ಬೊಮ್ಮನಳ್ಳಿ ಗ್ರಾಮ ಸೀಮಾಂತರದ ಚುಚಕೋಟಿ ಇವರ ಹೊಲದ ಹತ್ತಿರ ಫಿರ್ಯಾದಿಯ ಮಗನಾದ ಅಶೋಕನಿಗೆ ಕೈ ಕಾಲು ಹಿಡಿದು ಎತ್ತಿಕೊಂಡು ಚುಚಕೋಟಿ ಇವರ ಹೊಲದಲ್ಲಿ ಒಯ್ದು ಸೂರ್ಯಪಾನ ಬೆಳೆಯಲ್ಲಿ ಮನಸ್ಸಿಗೆ ಬಂದಂತೆ ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಬಾಯಿಯಲ್ಲಿ ವಿಷ ಹಾಕಿ ನಂತರ ಆತನ ಕೈಕಾಲು ಬಡೆದಾಡುವದು ನಿಂತ ಕಾರಣ ಮೃತಪಟ್ಟಿರುತ್ತಾನೆ ಅಂತ ತಿಳಿದು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 30-09-2015 ರಂದು ಸಾಯಂಕಾಲ 7-30 ಪಿ ಎಮ್ ಕ್ಕೆ ನನ್ನ ಗಂಡನ ಮೊಬೈಲದಿಂದ ಯಾರೊ ಅಪರೀಚಿತ ವ್ಯಕ್ತಿ ಫೋನ ಮುಖಾಂತರ ತಿಳಿಸಿದ್ದೇನೇಂದರೆ ಯಡ್ರಾಮಿ-ಸುಂಬಡ ರೋಡಿನ ಕಡಕೋಳ ಮಡಿವಾಳೇಶ್ವರ ಆಶ್ರಮದ ಹತ್ತಿರ ಯಡ್ರಾಮಿ ಯಿಂದ ಕುಳಗೇರಾಕ್ಕೆ ಬರುವಾಗ ನನ್ನ ಗಂಡನು ತನ್ನ ಮೋಟಾರ ಸೈಕಲ ನಂ. ಕೆ ಎ 32-ಇ.ಸಿ.- 6722 ನೆದ್ದರ ಮೇಲೆ ಕುಳಿತುಕೊಂಡು ಇನ್ನೋಬ್ಬನ ಜೊತೆ ಬರುತ್ತಿದ್ದಾಗ ರೋಡ ಕೆಟ್ಟಿದ್ದು ಆಯ  ತಪ್ಪಿ ಒಮ್ಮೆಲೆ ರೋಡಿನ ಮದ್ಯ ಇರುವ ತಗ್ಗು ತಪ್ಪಿಸಲು ಹೊಗಿ ಸ್ಕಿಡ್ ಆಗಿ ಕೇಳಗಡೆ ಬಿದ್ದಿದ್ದು ತೆಲೆಯ ಹಣೆಗೆ ಮತ್ತು ತೆಲೆಯ ಹಿಂದೆ ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಮೋಟರ್ ಸೈಕಲ್ ಹಿಂದುಗಡೆ ಕುಳೀತ ವ್ಯಕ್ತಿಯಾದ ನೂರ ಪಾಶಾ ಇವನಿಗೂ ಸಹ ತೆಲೆಗೆ ಪೆಟ್ಟಾಗಿರುತ್ತದೆ. ಯಡ್ರಾಮಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಯಿಸಿಕೊಡುತ್ತಿದ್ದೆವೆ ಅಂತಾ ತಿಳಿಸಿದರು. ನಾನು ನನ್ನ ಸಂಬದಿಕರಾದ ನಬಿಸಾಬ ತಂದೆ ಮಕ್ತುಂ ಸಾಬ ಸಾ|| ಕುಳಗೇರಾ ಮತ್ತು ಪತ್ರು ಪಟೇಲ್ ತಿಳಗೂಳ ಇವರುಗಳಿಗೆ ಅಪಘಾತದ ವಿಷಯ ತಿಳಿಸಿದ್ದು ಇವರು ಕೂಡಲೆ ಯಡ್ರಾಮಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಬಿಜಾಪುರ ಸಂಜೀವಿನಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ನಂತರ  ದಿನಾಂಕ 01-10-2015 ರಂದು ಬೇಳಿಗ್ಗೆ ಸುಮಾರು 9 ಗಂಟೆಗೆ ನನ್ನ ಗಂಡನ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. ಅಂತಾ ಶ್ರೀಮತಿ ರೆಷ್ಮಾ ಗಂಡ ಶಾ ಹುಸೇನಿ ಹಡಗಿನಾಳ ಸಾ|| ಕುಳಗೇರಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಪ್ರೇಮಸಿಂಗ್ ತಂದೆ ಲಕ್ಷ್ಮಣ ಚವ್ಹಾಣ ಇವರ ಮಗಳಾದ ಕು. ಆಶಾ ವಯಃ 19 ವರ್ಷ ಇವಳು ದಿನಾಂಕಃ 30/09/2015 ರಂದು ಸಾಯಂಕಾಲ 04:30 ಪಿ.ಎಂ. ಕ್ಕೆ ಮನೆಯಿಂದ ಓಂ ನಗರ ಗೇಟಿಗೆ ಹೋಗಿ ತರಕಾರಿ ತರುತ್ತೇನೆ ಅಂತಾ ಹೇಳಿ ಹೋದವಳು ಪುನಃ ಮರಳಿ ಮನೆಗೆ ಬಂದಿರುವುದಿಲ್ಲಾ ನಾವು ಎಲ್ಲಾ ಕಡೆ ಹುಡುಕಾಡಿದರೂ ಹಾಗು ನಮ್ಮ ಸಂಬಂಧಿಕರಲ್ಲಿ ವಿಚಾರಿಸಲೂ ಮಾಹಿತಿ ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳಾದ ಕು. ಆಶಾ ವಯಃ 19 ವರ್ಷ ಇವಳನ್ನು ಪತ್ತೆ ಹಚ್ಚಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.