ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಅಣ್ಣಪ್ಪ ತಂದೆ
ಹಣಮಂತ ಬಡಿಗೇರ ಇವರ ಮಗಳಾದ ಪ್ರಿಯದರ್ಶೀನಿ ಇವಳಿಗೆ ಇಳಕಲ್ ಗ್ರಾಮದಲ್ಲಿಯ ಈಶ್ವರ ತಂದೆ ಶ್ರೀಮಂತ
ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ನಾನು ಎಂದಿನಂತೆ ದಿನಾಂಕ 20-09-2015 ರಂದು ನಾನು ರಾತ್ರಿ ಡ್ಯೂಟಿಗೆ
ಹೋಗಿದ್ದು ನನ್ನ ಅಳಿಯನಾದ ಈಶ್ವರ ಇತನು ಮನೆಗೆ ಬಂದಿದ್ದು ದಿನಾಂಕ 21-09-2015 ರಂದು ಮುಂಜಾನೆ
7 ಗಂಟೆ ಸುಮಾರಿಗೆ ನನ್ನ ಅಳಿಯನಾದ ಈಶ್ವರ ಇತನು ನನ್ನ ಮಗಳಾದ ಯಶೋದಾ ವಯಸ್ಸು 15 ವರ್ಷ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಾವು
ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ.ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ಅಪಹರಣ
ಮಾಡಿಕೊಂಡು ಹೋದ ಈಶ್ವರ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ಕಿರುಕಳ ನೀಡಿದ
ಪ್ರಕರಣ :
ಜೇವರಗಿ ಠಾಣೆ : ಕುಮಾರಿ
ಇವಳು ದಿನಾಂಕ 28.09.2015 ರಂದು ಮುಂಜಾನೆ ಜೇವರಗಿ ಪಟ್ಟಣದ ವಿಜಯಪುರ
ಕ್ರಾಸ್ ಹತ್ತಿರ ರಸ್ತೆಯ ಮೇಲೆ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾಗ ಆ ವೇಳೆಗೆ ನಮ್ಮೂರ ಖಯೂಮ್
ಪಟೇಲ್ ತಂದೆ ಮಹೇಬೂಬ ಪಟೇಲ್ ಮಾಲಿ ಬಿರಾದಾರ್ ಸಂಗಡ 4 ಜನರು ಕೂಡಿಕೊಂಡು ಒಂದು ಬಿಳಿ ಬಣ್ಣದ
ಕಾರಿನಲ್ಲಿ ಬಂದು ನನಗೆ ಜಬರದಸ್ತಿಯಿಂದ ಕಾರಿನಲ್ಲಿ ಕೂಡಿಕೊಂಡು ಖಯೂಮ್ ಈತನು ನನಗೆ “ಪ್ಯಾರ್ ಕೈಕು ನಹಿ ಕರತಿ? ಪ್ಯಾರ್ ನಹಿ ಕರೆ ತೋ ಜಾನ್ ಸೇ
ಮಾರತು, ತುಮ್ ಗಾಂವ್ ಮೇ
ಕಿಸಿಕೋ ಔರ್ ಪೊಲೀಸ್ ಕೋ ಬೋಲನಾ ನಹಿ, ಬೋಲೆತೊ ತುಮಾರಾ ಅಬ್ಬಾಕು ತೇರೆಕು ಜಾನ್ ಸೆ ಮಾರತು” ಅಂತ ಬೈಯುತ್ತ ಜೈನಾಪುರದ ಸಿಮಾಂತರದ
ಕೇನಾಲ್ ಹತ್ತಿರ ಕರೆದುಕೊಂಡು ಹೋಗಿ ನನಗೆ ಎದೆಗೆ ಮತ್ತು ಹೊಟ್ಟೆಗೆ ಹಿಚುಕಿ ಲೈಂಗಿಕ ಕಿರುಕುಳ
ಕೊಟ್ಟು ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಹಿಡಿದು ಕೇನಾಲ್ ನೀರಿನಲ್ಲಿ ನೂಕಿಸಿಕೊಟ್ಟು
ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಹಾದೇವಿ ಗಂಡ
ಗುಂಡಪ್ಪ ತಳವಾರ ಸಾ|| ಬೊಮ್ಮನಹಳ್ಳಿ ಇವರಿಗೆ ಹಳೆಯ ವೈಷಮ್ಯ ಕಟ್ಟಿಕೊಂಡು 01] ಹಿರೇಣಪ್ಪ ತಂದೆ ರೇವಣಸಿದ್ದಪ್ಪ ಪೂಜಾರಿ, 02] ಭೀಮಪ್ಪ ತಂದೆ ನಿಂಗಪ್ಪ ಮಳ್ಳಿ, 03] ನಿಂಗಪ್ಪ ತಂದೆ ಮಾಳಪ್ಪ ಹಿರೇಪೂಜಾರಿ, 04] ಅಂಬಣ್ಣ ತಂದೆ ನಿಂಗಪ್ಪ ಮಳ್ಳಿ, 05] ಅಣ್ಣಪ್ಪ ತಂದೆ ನಿಂಗಪ್ಪ ಮಳ್ಳಿ, 06] ಬಸಪ್ಪ ತಂದೆ ತುಕ್ಕಪ್ಪ ನಿಂಬರ್ಗಿ, 07] ಗುಂಡಪ್ಪ ತಂದೆ ಶರಣಪ್ಪ ನಿಂಬರ್ಗಿ, 08] ಶರಣಪ್ಪ ತಂದೆ ತುಕ್ಕಪ್ಪ ನಿಂಬರ್ಗಿ ಸಾ|| ಎಲ್ಲರೂ ಬೊಮ್ಮನಹಳ್ಳಿ ಇವರೆಲ್ಲರೂ ದಿನಾಂಕ 30/09/2015 ರಂದು ಸಾಯಂಕಾಲ 0500 ಪಿ.ಎಮ ಕ್ಕೆ ಬೊಮ್ಮನಳ್ಳಿ ಗ್ರಾಮ ಸೀಮಾಂತರದ ಚುಚಕೋಟಿ
ಇವರ ಹೊಲದ ಹತ್ತಿರ ಫಿರ್ಯಾದಿಯ ಮಗನಾದ ಅಶೋಕನಿಗೆ ಕೈ ಕಾಲು ಹಿಡಿದು ಎತ್ತಿಕೊಂಡು ಚುಚಕೋಟಿ ಇವರ
ಹೊಲದಲ್ಲಿ ಒಯ್ದು ಸೂರ್ಯಪಾನ ಬೆಳೆಯಲ್ಲಿ ಮನಸ್ಸಿಗೆ ಬಂದಂತೆ ಕೈಯಿಂದ ಮತ್ತು ಕಾಲಿನಿಂದ ಹೊಡೆ
ಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಬಾಯಿಯಲ್ಲಿ ವಿಷ ಹಾಕಿ ನಂತರ ಆತನ ಕೈಕಾಲು ಬಡೆದಾಡುವದು
ನಿಂತ ಕಾರಣ ಮೃತಪಟ್ಟಿರುತ್ತಾನೆ ಅಂತ ತಿಳಿದು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ
30-09-2015 ರಂದು ಸಾಯಂಕಾಲ 7-30 ಪಿ ಎಮ್ ಕ್ಕೆ ನನ್ನ
ಗಂಡನ ಮೊಬೈಲದಿಂದ ಯಾರೊ ಅಪರೀಚಿತ ವ್ಯಕ್ತಿ ಫೋನ ಮುಖಾಂತರ ತಿಳಿಸಿದ್ದೇನೇಂದರೆ ಯಡ್ರಾಮಿ-ಸುಂಬಡ
ರೋಡಿನ ಕಡಕೋಳ ಮಡಿವಾಳೇಶ್ವರ ಆಶ್ರಮದ ಹತ್ತಿರ ಯಡ್ರಾಮಿ ಯಿಂದ ಕುಳಗೇರಾಕ್ಕೆ ಬರುವಾಗ ನನ್ನ
ಗಂಡನು ತನ್ನ ಮೋಟಾರ ಸೈಕಲ ನಂ. ಕೆ ಎ 32-ಇ.ಸಿ.- 6722 ನೆದ್ದರ ಮೇಲೆ ಕುಳಿತುಕೊಂಡು ಇನ್ನೋಬ್ಬನ ಜೊತೆ ಬರುತ್ತಿದ್ದಾಗ
ರೋಡ ಕೆಟ್ಟಿದ್ದು ಆಯ ತಪ್ಪಿ
ಒಮ್ಮೆಲೆ ರೋಡಿನ ಮದ್ಯ ಇರುವ ತಗ್ಗು ತಪ್ಪಿಸಲು ಹೊಗಿ ಸ್ಕಿಡ್ ಆಗಿ ಕೇಳಗಡೆ ಬಿದ್ದಿದ್ದು ತೆಲೆಯ
ಹಣೆಗೆ ಮತ್ತು ತೆಲೆಯ ಹಿಂದೆ ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಮೋಟರ್ ಸೈಕಲ್ ಹಿಂದುಗಡೆ
ಕುಳೀತ ವ್ಯಕ್ತಿಯಾದ ನೂರ ಪಾಶಾ ಇವನಿಗೂ ಸಹ ತೆಲೆಗೆ ಪೆಟ್ಟಾಗಿರುತ್ತದೆ. ಯಡ್ರಾಮಿ ಆಸ್ಪತ್ರೆಗೆ
ಚಿಕಿತ್ಸೆಗಾಗಿ ಕಳುಯಿಸಿಕೊಡುತ್ತಿದ್ದೆವೆ ಅಂತಾ ತಿಳಿಸಿದರು. ನಾನು ನನ್ನ ಸಂಬದಿಕರಾದ ನಬಿಸಾಬ
ತಂದೆ ಮಕ್ತುಂ ಸಾಬ ಸಾ|| ಕುಳಗೇರಾ ಮತ್ತು ಪತ್ರು ಪಟೇಲ್ ತಿಳಗೂಳ ಇವರುಗಳಿಗೆ
ಅಪಘಾತದ ವಿಷಯ ತಿಳಿಸಿದ್ದು ಇವರು ಕೂಡಲೆ ಯಡ್ರಾಮಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ
ಬಿಜಾಪುರ ಸಂಜೀವಿನಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ನಂತರ ದಿನಾಂಕ 01-10-2015
ರಂದು ಬೇಳಿಗ್ಗೆ ಸುಮಾರು 9 ಗಂಟೆಗೆ
ನನ್ನ ಗಂಡನ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. ಅಂತಾ ಶ್ರೀಮತಿ ರೆಷ್ಮಾ ಗಂಡ ಶಾ ಹುಸೇನಿ ಹಡಗಿನಾಳ ಸಾ|| ಕುಳಗೇರಾ
ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಪ್ರೇಮಸಿಂಗ್ ತಂದೆ ಲಕ್ಷ್ಮಣ ಚವ್ಹಾಣ ಇವರ ಮಗಳಾದ
ಕು. ಆಶಾ ವಯಃ 19 ವರ್ಷ ಇವಳು ದಿನಾಂಕಃ 30/09/2015 ರಂದು ಸಾಯಂಕಾಲ 04:30 ಪಿ.ಎಂ. ಕ್ಕೆ
ಮನೆಯಿಂದ ಓಂ ನಗರ ಗೇಟಿಗೆ ಹೋಗಿ ತರಕಾರಿ ತರುತ್ತೇನೆ ಅಂತಾ ಹೇಳಿ ಹೋದವಳು ಪುನಃ ಮರಳಿ ಮನೆಗೆ
ಬಂದಿರುವುದಿಲ್ಲಾ ನಾವು ಎಲ್ಲಾ ಕಡೆ ಹುಡುಕಾಡಿದರೂ ಹಾಗು ನಮ್ಮ ಸಂಬಂಧಿಕರಲ್ಲಿ ವಿಚಾರಿಸಲೂ
ಮಾಹಿತಿ ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳಾದ ಕು. ಆಶಾ ವಯಃ 19 ವರ್ಷ ಇವಳನ್ನು ಪತ್ತೆ
ಹಚ್ಚಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment