POLICE BHAVAN KALABURAGI

POLICE BHAVAN KALABURAGI

12 September 2015

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಾಹಾದೇವಪ್ಪ ತಂದೆ ಲಗಮಣ್ಣ ಬಳಗಾರ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ ರವರ  ಹೊಲ ಸರ್ವೆ ನಂಬರ 234 ನೇದ್ದಕ್ಕೆ ಹೊಂದಿ ನಮ್ಮೂರ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಇವರ ಹೊಲ ಇರುತ್ತದೆ. ಸದರಿ ಅಮೋಗಿ ಈತನು ಗಳೆ ಹೊಡೆದಾಗೊಮ್ಮೆ ನನ್ನ ಹೊಲ ಹೊಡೆಯುತ್ತಾ ಬರುತ್ತಿರುತ್ತಾನೆ. ನಾನು ಅಮೋಗಿ ಈತನಿಗೆ ನನ್ನ ಹೊಲದಲ್ಲಿ ಹೆಚ್ಚಿಗೆ ಹೊಡೆಯಬೇಡ ನಿನ್ನ ಹೊಲ ಎಷ್ಟು ಇರುತ್ತೊ ಅಷ್ಟು ಹೊಡೆ ಅಂತಾ ಹೇಳಿದಕ್ಕೆ ಅವನಿಗೂ ನನಗು ಜಗಳ ಆಗುತ್ತಾ ಬಂದಿರುತ್ತದೆ. ದಿನಾಂಕ 11-09-2015 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ಹೊಲದಲ್ಲಿದ್ದಾಗ ಸದರಿ ಅಮೊಗಿ ಈತನಿಗೂ ನನಗು ಬಾಯಿ ಬಾಂದಾರಿ ಸಂಭಂದ ಜಗಳ ಆಗಿರುತ್ತದೆ. ಸಂಜೆ 7:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಿಂದ ಹೊರಗೆ ಹೊಗುತ್ತಿದ್ದಾಗ ನಮ್ಮೂರ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಹೊಗುತ್ತಿದ್ದಾಗ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ಅಣ್ಣ ತುಕಾರಾಮ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ತಂಗಿಯ ಗಂಡ ಭೀಮಶಾ ತಂದೆ ಬಸಣ್ಣ ಹಾದಿಮನಿ ಮೂರು ಜನರು ನನ್ನ ಎದುರಿಗೆ ಬಂದು, ಅವರಲ್ಲಿ ಅಮೋಗಿ ಈತನು ಏನೊ ಭೋಸಡಿ ಮಗನೆ ಹೊಲದಲ್ಲಿ ನನ್ನ ಜೋತೆನೆ ಜಗಳ ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಏಳೆದಾಡಿ ಕೈಯಿಂದ ಹೊಡೆದನು ತುಕಾರಮ ಈತನು ಕಾಲಿನಿಂದ ಒದ್ದನು. ಆಗ ನನಗು ಅವರಿಗೂ ತೆಕ್ಕ ಮುಸ್ತಿ ಆಗುತ್ತಿದ್ದಾಗ ಭೀಮಶಾ ಈತನು ನನ್ನನ್ನು ಹಿಡಿದುಕೊಂಡಾಗ ಅಮೋಗಿ ಈತನು ಅಲ್ಲೆ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಕಟ್ಟಿಗೆ ಒಡೆಯಲು ಇಟ್ಟಿದ ಕೊಡಲಿಯನ್ನು ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದನು. ಆಗ ನಾನು ಕೆಳಗೆ ಬಿದ್ದಾಗ ಮೂರು ಜನರು ಕೂಡಿಕೊಂಡು ನನಗೆ ಕಾಲಿನಿಂದ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 08-09-2015 ರಂದು  ಸೊನ್ನ ಗ್ರಾಮದ ಹತ್ತಿರ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತಿದ್ದಾನೆ. ಅಂತಾ ಬಾತ್ಮಿ ಬಂದಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮತ್ತು ಮಾನ್ಯ ತಹಸಿಲ್ದಾರ ಅಫಜಲಪೂರ ಸಾಹೇಬರೊಂದಿಗೆ ಸೊನ್ನ ಗ್ರಾಮದ ಹೊಸ ಊರ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರ ಬರುತ್ತಿದ್ದು ನೋಡಿ ನಾವು ಸದರಿ ಟಿಪ್ಪರಗಳನ್ನು ನಿಲ್ಲಿಸಿ  ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಮಲ್ಲಿಕಾರ್ಜುನ ಹೂಗಾರ ವ||27 ವರ್ಷ ಜಾ|| ಹೂಗಾರ ಉ|| ಟಿಪ್ಪರ ಚಾಲಕ ಸಾ|| ಅರಳಗುಂಡಗಿ ತಾ||ಜೇವರ್ಗಿ  ಅಂತಾ ತಿಳಿಸಿದ್ದು  ಪಂಚರ ಸಮಕ್ಷಮ ನಾನು ಹಾಗೂ ಮಾನ್ಯ ತಹಸಿಲ್ದಾರ ಸಾಹೇಬರು ಟಿಪ್ಪರನ್ನು  ಚಕ್ಕ ಮಾಡಲು, ಅಶೋಕ ಲ್ಯಾಲೆಂಡ್‌ ಕಂಪನಿಯ  ಟಿಪ್ಪರ ಇದ್ದು ಅದರ ನಂ ಕೆಎ-32 ಸಿ-0238 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು, ಸದರಿಯವನು ನಾನು ಈಗಾಗಲೆ ಒಂದು ಟ್ರಿಪ್ ಮರಳನ್ನು ಸಾಗಾಣಿಕೆ ಮಾಡಿರುತ್ತೆನೆ, ಈಗ ಎರಡನೆ ಟ್ರಿಪ್ಪ ತುಂಬಿಕೊಂಡು ಹೋಗುತ್ತಿದ್ದೆನೆ ಅಂತಾ ಹೇಳಿ ತನ್ನ ಹತ್ತಿರ ಇದ್ದ ರಾಯಲ್ಟಿಯನ್ನು ತೋರಿಸಿದನು, ಸದರಿ ರಾಯಲ್ಟಿಯನ್ನು  ತಹಸಿಲ್ದಾರ ಸಾಹೇಬರು ಹಾಗೂ ನಾನು ಪಂಚರ ಸಮಕ್ಷಮದಲ್ಲಿ  ಪರಿಶಿಲಿಸಿ ನೋಡಲು ರಾಯಲ್ಟಿ ಮೇಲೆ ಟಿಪ್ಪರ ನಂ ಕೆಎ-32 ಸಿ-0238 ನೇದ್ದರಲ್ಲಿ ದಿನಾಂಕ 08-09-2015 ರಂದು ಬೆಳಿಗ್ಗೆ 06.00 ಗಂಟೆಯಿಂದ ದಿನಾಂಕ 08-09-2015 ರಂದು ಸಾಯಂಕಾಲ 6:00 ಗಂಟೆಯ ಒಳಗೆ ಅಫಜಲಪೂರ  ಸ್ಟಾಕ ನಿಂದ ಚವಡಾಪೂರ ಮಾರ್ಗವಾಗಿ ಕಲಬುರಗಿ ಸಾಗಾಟ ಮಾಡಬೇಕು ಅಂತಾ ನಮೂದಿಸಿದ್ದು ಇತ್ತು, ಸದರಿ ಟಿಪ್ಪರ ಚಾಲಕನು ರಾಯಲ್ಟಿಯ ಪ್ರಕಾರ  ಮರಳು ಸಾಗಣಿಕೆ ಮಾಡದೇ  ಅನದಿಕೃತವಾಗಿ ಕಳ್ಳತನದಿಂದ ಸೋನ್ನ ಭಿಮಾನದಿಯಿಂದ ಟಿಪ್ಪರದಲ್ಲಿ  ಮರಳು ಸಾಗಾಣಿಕೆ ಮಾಡುತ್ತಿದ್ದರಿಂದ, ಸದರಿ ಟಿಪ್ಪರಿನ ರಾಯಲ್ಟಿಯನ್ನು ಹಾಗೂ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಣಿಕೆ ಮಾಡುತ್ತಿದ್ದ ಮರಳು ತುಂಬಿದ ಟಿಪ್ಪರನ್ನು   ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ನಂದು ಪ್ರಕರಣ ದಾಖಲಿಸಲಾಗಿದೆ.
ಅಫಜಪೂರ ಠಾಣೆ : ದಿನಾಂಕ 07-09-2015 ರಂದು ಅಫಜಲಪೂರದ ಕಲಬುರಗಿ ರೋಡಿನ ಲಕ್ಷ್ಮಿ ಗುಡಿ ಹತ್ತಿರ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ ಒಂದು ಟಿಪ್ಪರ ಕಲಬುರಗಿ ಕಡೆ ಹೊರಟಿರುತ್ತದೆ  ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ನೀರಾವರಿ ಆಫಿಸ್  ಹತ್ತಿರ ಹೊಗುತಿದ್ದಾಗ ಒಂದು ಟಿಪ್ಪರ ಕಲಬುರಗಿ ಕಡೆ ಹೊರಟಿದ್ದು ನಾವು ಅದರ ಹತ್ತಿರ ಹೋಗಿ ಕೈ ಸೊನ್ನೆ ಮಾಡಿ ಚಾಲಕನಿಗೆ ನಿಲ್ಲಿಸುವಂತೆ ಸೂಚನೆ ಕೊಟ್ಟಾಗ ಸದರಿ ಟಿಪ್ಪರ ಚಾಲಕನು ನಮಗೆ ಮತ್ತು ನಮ್ಮ ಪೊಲೀಸ್ ಜೀಪ ನೋಡಿದ ತಕ್ಷಣ ತನ್ನ ಟಿಪ್ಪರನ್ನು ನಿಲ್ಲಿಸಿ ಕತ್ತಲಲ್ಲಿ  ಓಡಿ ಹೋದನು. ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು  ಚಕ್ಕ ಮಾಡಲು, ASHOK LEYLAND  ಕಂಪನಿಯ ಟಿಪ್ಪರ ನಂ ಕೆಎ-32 ಬಿ-8050 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟಿಪ್ಪರನಲಿದ್ದ ಮರಳಿನ ಅಂದಾಜು ಕಿಮ್ಮತ್ತು 5000/- ರೂ ಇರಬಹುದು. .ನಂತರ ಸದರಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

11 September 2015

Kalaburagi District Reported Crimes.

ಜೇವರ್ಗಿ  ಠಾಣೆ : ದಿನಾಂಕ: 10.09.2015 ರಂದು 17:00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ “ ದಿ: 30-08-2015 ರಂದು ಮುಂಜಾನೆ ನಾನು ಕಿರಕುಳ ರಜೆ ಮೇಲೆ ಮನೆಯಲ್ಲಿ ಇದ್ದಾಗ ನಮ್ಮ ಆಸ್ಪತ್ರೆಯ ಸ್ಟಾಪ್ ನರ್ಸ ಸಾಜೀಯಾ ಫರವೀನ್ ಇವರು ಪೊನ ಮಾಡಿ ದಿ: 29-08-15 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ಆಸ್ಪತ್ರೆಯ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಹೇಳಿ ನನಗೆ ಬರಲು ತಿಳಿಸಿದರು. ವಿಷಯ ಗೊತ್ತಾದ ಕೂಡಲೇ ನಾನು ಮತ್ತು ನಮ್ಮ ಆಸ್ಪತ್ರೆಯ ಮಹ್ಮ,ದ್ ಅಬ್ದುಲ್ ಖದೀರ ಕೂಡಿಕೊಂಡು ಬಿರಾಳ [ಬಿ] ಆಸ್ಪತ್ರೆಗೆ ಹೋಗಿ ನೋಡಲಾಗಿ ಆಸ್ಪತ್ರೆ ಬಾಗಿಲ ಕೊಂಡಿ ಮುರಿದ್ದಿತ್ತು, ಓಳಗೆ ಹೋಗಿ ನೋಡಲಾಗಿ ಆಸ್ಪತ್ರೆಯಲ್ಲಿನ 1. ಒಂದು ವಾಷೀಂಗ್ ಮಸ್ಸಿನ ಅ.ಕಿ. 8000=00 ರೂ. 2. ಒಂದು ಪ್ರೀಜ್ ಅ.ಕಿ. 6000=00 ರೂ  3. ಒಂದು ಏರಕೂಲರ್ ಅ.ಕಿ. 2500=00 ರೂ, 4. ಸೊಲಾರ್ ಬ್ಯಾಟರಿ ಅ.ಕಿ. 5000=00 ರೂ. 5. ಬಿ.ಪಿ. ಆಫರೇಟರ್ ಅ.ಕಿ. 2000=00 ಹಿಗೆ ಒಟ್ಟು 23.500/- ರೂ ಕೀಮ್ಮತಿನ ವಸ್ತುಗಳು ಕಳುವಾಗಿದ್ದವು. ಅಲ್ಲಿಯೇ ಇದ್ದ ನಮ್ಮ ಆಸ್ಪತ್ರೆಯ ಸ್ಟಾಪ್ ನರ್ಸ ಸಾಜೀಯಾ ಫರವೀನ್ ಇವರು ಹೇಳಿದ್ದೆನೆಂದರೆ ನೀನ್ನೆ ಅಂದರೆ ದಿನಾಂಕ 29-08-2015 ರಂದು ಮುಂಜಾನೆ ನಮ್ಮ ಆಸ್ಪತ್ರೆಯ ಸಿಬ್ಬಂದಿಯವರು ಆಸ್ಪತ್ರೆಗೆ ಬಂದು ಕೆಲಸ ಮುಗಿಸಿಕೊಂಡು ಸಾಯಂಕಾಲ 7.00 ಗಂಟೆಯ ಸುಮಾರಿಗೆ  ಆಸ್ಪತ್ರೆಯ ಬಾಗಿಲ ಮುಚ್ಚಿ ಕೀಲಿ ಮತ್ತು ಸರಪಳಿ ಹಾಕಿ ಮನೆಗೆ ಬಂದಿರುತ್ತೆವೆ. ಇಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ಆಸ್ಪತ್ರೆಯ ಪಕ್ಕದ ಹೊಲದವರಾದ ಶಂಕರೇಪ್ಪ ಹೊಸಮನಿ ಇವರು  ನಮ್ಮ ಆಸ್ಪತ್ರೆಯ ನೀಲಮ್ಮ ಇವರಿಗೆ ಆಸ್ಪತ್ರೆ ಕಳುವಾದ ಬಗ್ಗೆ ಹೇಳಿದ ಕೂಡಲೆ ನಾವು ಆಸ್ಪತ್ರೆಗೆ ಬಂದು ನೋಡಲಾಗಿ ಆಸ್ಪತ್ರೆ ಕಳುವಾಗಿದ್ದು ನಿಜವಿತ್ತು. ಅಂತಾ ನನಗೆ ತಿಳಿಸಿದರು. ನಾನು ಮತ್ತು ನಮ್ಮ ಆಸ್ಪತ್ರೆಯ ಸಿಬ್ಬಂದಿಯವರು ಕೂಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಮತ್ತು ಈ ವಿಷಯ ನಾನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸುತ್ತಿದ್ದು ಮುಂದಿನ ಕ್ರಮ ಕೈಕೊಳ್ಳಬೇಕು” ಅಂತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 242/15 ಕಲಂ 457.380 ಐ.ಪಿ.ಸಿ. ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.

ಆಳಂದ  ಠಾಣೆ  : ದಿನಾಂಕ:10/09/2015 ರಂದು 07:00 ಪಿ.ಎಮ್.ಕ್ಕೆ ಗಂಟೆಗೆ ಫಿರ್ಯಾದಿ  ಮಹ್ಮದ ಯೂನುಸ ತಂದೆ ಮಹ್ಮದ ಮುಸಾ ವಯಾ: 45 ವರ್ಷ ಜಾ: ಮುಸ್ಲಿಂ ಉ: ಲಾರಿ ಚಾಲಕ & ಮಾಲೀಕ ಸಾ: ಮುಸ್ಲಿಂ ಚೌಕ್ ದರ್ಗಾ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ ನನ್ನದೊಂದು ಲಾರಿ ನಂ:ಕೆ.ಎ:32 ಎ:6724 ನೇದ್ದರಲ್ಲಿ ಮಾಲು ಬಾಡಿಗೆಯಿಂದ ತರುವದು ಹಾಗೂ ತಗೆದುಕೊಂಡು ಹೋಗುವದು ಮಾಡುತ್ತಾ ಬಂದಿರುತ್ತೆನೆ. ನಮ್ಮ ಲಾರಿಯ ಮೇಲೆ ದಸ್ತಗಿರ ತಂದೆ ಬಡೇಸಾಬ ಸಾ:ಮಿಲತ್ ನಗರ ರಿಂಗ್ ರೋಡ ಕಲಬುರಗಿ ಇತನು ಸುಮಾರು 2 ವರ್ಷದಿಂದ ಕ್ಲೀನರ್ ಕೆಲಸ ಮಾಡುತ್ತಾ ಬಂದಿರುತ್ತಾನೆ. ದಿನಾಂಕ:04/09/2015 ರಂದು ನಮ್ಮ ಲಾರಿಯಲ್ಲಿ ಮಾಲು ತುಂಬಿಕೊಂಡು ಲಾತೂರಕ್ಕೆ ತಗೆದುಕೊಂಡು ಹೋಗಿ ಅಲ್ಲಿ ಖಾಲಿ ಮಾಡಿ ಮರಳಿ ಕಲಬುರಗಿಗೆ ಬರುವ ಕುರಿತು ದಿನಾಂಕ:05/09/2015 ರಂದು ನಮ್ಮ ಲಾರಿ ನಂ:ಕೆ.ಎ:32 ಎ:6724 ನೇದ್ದರಲ್ಲಿ 50 ಕೆ.ಜಿ.ಯ 60 ಪಾಕೀಟ್ ಜಿಂದಲ್ ಕಂಪನಿಯ ಶೇಂಗಾ ಬೀಜದ ಚೀಲಗಳು ಹಾಗೂ ಮನೆಯ ಬಾಗಿಲದ ಕಟ್ಟಿಗೆ ಸಾಮಾನುಗಳು ತುಂಬಿಕೊಂಡು ಮೇಲೆ ತಾಡಪತ್ರಿ ಮುಚ್ಚಿಕೊಂಡು ಉಮರ್ಗಾ ಮಾರ್ಗವಾಗಿ ಆಳಂದಕ್ಕೆ ಬರುವಾಗ ದಿನಾಂಕ:06/09/2015 ರಂದು ಬೆಳಗಿನ ಜಾವ 04:15 ಗಂಟೆ ಸುಮಾರಿಗೆ ಚಿತಲಿ ಕ್ರಾಸ ಹತ್ತಿರ ಚಡೌನದಲ್ಲಿ ಲಾರಿ ಸಾವಕಾಶವಾಗಿ ಹೋಗುವಾಗ ಲಾರಿಯ ಹಿಂದುಗಡೆ ಸಪ್ಪಳವಾಗಿದ್ದು  ನಂತರ ಆಳಂದ ಚಕ್ಕಪೋಸ್ಟ್ ಹತ್ತಿರ ಲಾರಿ ನಿಲ್ಲಿಸಿ ನೋಡಲಾಗಿ ಸದರಿ ಲಾರಿಯ ಮೇಲೆ ಮುಚ್ಚಿದ ತಾಡ ಪತ್ರಿ ಹರಿದಿದ್ದು ಅದರಲ್ಲಿದ 50 ಕೆ.ಜಿ.ಯ 05 ಪಾಕೀಟ್ ಜಿಂದಲ್ ಕಂಪನಿಯ ಶೇಂಗಾ ಬೀಜದ ಪಾಕೀಟ್ ಅ,ಕೀ.18,500/-ರೂ ಕಿಮ್ಮತಿನ ಮಾಲನ್ನು ಚಿತಲಿ ಚಡೌನ ಹತ್ತಿರ ಲಾರಿ ನಿಧಾನವಾಗಿ ಹೋಗುವಾಗ ಲಾರಿ ಹಿಂಭಾಗದಿಂದ ಯಾರೋ ಕಳ್ಳರು ಲಾರಿಯ ಮೇಲೆ ಹತ್ತಿ ತಾಡಪತ್ರಿ ಹರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ನಾನು ಸದರಿ ವಿಷಯವನ್ನು ಮಾಲಿನ ಮಾಲೀಕರಿಗೆ ತಿಳಿಸಿ ವಿಚಾರಿಸಿಕೊಂಡು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.ಕಾರಣ ಸದರಿ ನಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ:32 ಎ:6724 ನೇದ್ದರಲ್ಲಿದ 50 ಕೆ.ಜಿಯ   05 ಪಾಕೀಟ್ ಜಿಂದಾಲ್ ಕಂಪನಿಯ ಶೇಂಗಾ ಬೀಜ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:145/2015 ಕಲಂ:379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದ. 

10 September 2015

Kalaburagi District Reported Crimes.

ನರೋಣಾ  ಠಾಣೆ : ದಿನಾಂಕ 09/09/2015 ರಂದು 1430 ಗಂಟೆಗೆ ಫಿರ್ಯಾದಿದಾರರಾದ ಇಮಾಮಸಾಬ ತಂದೆ ಲಾಲಮಹ್ಮದ ಶೇಖ ವಯ; 37 ವರ್ಷ ಉ: ಟಂ ಟಂ ಚಾಲಕ ಜಾ: ಮುಸ್ಲಿಂ ಸಾ: ನೇಲ್ಲೂರ ತಾ:ಆಳಂದ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರು ಪಡಿಸಿದ್ದು ಈ ದೂರಿನ ಸಾರಂಶವೇನಂದರೆ  ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಟಂ ಟಂ ನಡೆಯಿಸಿಕೊಂಡು ಉಪ ಜೀವನ ಮಾಡುತ್ತಿದ್ದೇನೆ. ನಾನು ದಿನಾಲೂ ನನ್ನ ಟಂ ಟಂ ನಂ ಕೆ ಎ 32 ಬಿ 7182 ನೇದ್ದರಲ್ಲಿ ನಮ್ಮೂರಿನ ರೈತರ ತರಕಾರಿಯನ್ನು ಬಾಡಿಗೆ ರೂಪದಲ್ಲಿ ಗುಲಬರ್ಗಾದ ಕಣ್ಣಿ ಮಾರ್ಕಟಗೆ ತೆಗೆದುಕೊಂಡು ಹೋಗುತ್ತೇನೆ.ನನ್ನ ಹೆಂಡತಿ ಮೂರು ದಿವಸಗಳ ಹಿಂದೆ ಅವರ ತವರೂರಾದ ಕಲಬುರಗಿಗೆ ಹೋಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 08/09/2015 ರಂದು ರಾತ್ರಿ 8-00 ಗಂಟೆಗೆ ನನ್ನ ಮನೆಗೆ ಬೀಗ ಹಾಕಿಕೊಂಡು ನಮ್ಮ ಗ್ರಾಮದ ಮಲ್ಲಿನಾಥ ತಂದೆ ಬಸವಣಪ್ಪ ಧನಶ್ರೀ. ಇವರ ತರಕಾರಿಯನ್ನು ನನ್ನ ಟಂ ಟಂ ನಲ್ಲಿ ಹಾಕಿಕೊಂಡು  ನಮ್ಮೂರಿನಿಂದ ಹೊರಟು ಕಲಬುರಗಿ ಕಣ್ಣಿ ಮಾರ್ಕೆಟಕ್ಕೆ 9-00 ಗಂಟೆಗೆ  ಹೋಗಿ ತರಕಾರಿಯನ್ನು ಇಳಿಸಿ ಅಲ್ಲಿಯೇ ಮಲಗಿಕೊಂಡೇನು ಬೆಳಿಗ್ಗಿನ ಜಾವ 5-00 ಗಂಟೆಗೆ ನನ್ನ ತಮ್ಮನಾದ ಲಾಯಕ ಅಲಿ ಇತನು ನನ್ನ ಮೋಬೈಲಗೆ ಪೋನ ಮಾಡಿ ತಿಳಿಸಿದ್ದೆನಂದರೆ ನಿನ್ನ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಯಾರೋ ಕಳ್ಳರು ಮುರಿದು ಒಳಗೆ ಹೋಗಿ ಮನೆಯ ಬೆಡರೂಮಿನಲ್ಲಿದ್ದ ಕಬ್ಬಿಣದ ಅಲ್ಮಾರಿಯಲ್ಲಿಯ ಬಟ್ಟೆ, ಸಾಮಾನುಗಳನ್ನು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತೇವೆ   ಅಂತಾ ತಿಳಿಸಿದನು. ನಾನು ಗಾಬರಿಯಿಂದ ನಮ್ಮೂರಿಗೆ ಬಂದು ನನ್ನ ಮನೆಗೆ ಬಂದು ನೋಡಲಾಗಿ ನಾನು ರಾತ್ರಿ ಮನೆಯ ಮುಖ್ಯೆ ಬಾಗಿಲಿಗೆ  ಹಾಕಿ ಹೋಗಿದ  ಕೀಲಿಯನ್ನು ಮುರಿದ್ದು ಬಾಗಿಲು ತೆರೆದಿದ್ದು ನಾನು ಒಳಗೆ ಹೋಗಿ ನೋಡಲಾಗಿ ಬೆಡರೂಮ್ ಕೋಣೆಯ ಬಾಗಿಲು ಕೀಲಿ ಮುರಿದಿದ್ದು ಒಳಗಡೆ ಇದ್ದ ಕಬ್ಬೀಣದ ಅಲ್ಮಾರಿ ಸಹ ತೆರೆದಿದ್ದು ಅದರಲ್ಲಿ ಇಟ್ಟಿದ್ದ ಬಟ್ಟೆ ಹಾಗೂ ಇತರ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದು ನಾನು ಚಕ್ಕ್ ಮಾಡಿ ನೋಡಲಾಗಿ ನಮ್ಮ ತಾಯಿಯ ಒಂದು ತೊಲಿಯ ಬಂಗಾರದ ಬೋರಮಳ ಸರ  ಅದರ ಅ:ಕಿ 15,000 ರುಪಾಯಿ ಹಾಗೂ ನನ್ನ ಮನೆಯ ಖರ್ಚಿಗಾಗಿ ಇಟ್ಟಿದ್ದ ನಗದು ಹಣ  14,000 ರೂಪಾಯಿಗಳು ಕಳುವಾಗಿದ್ದವು . ನಂತರ ಮುಂಜಾನೆ 8-00 ಗಂಟೆಯ ಸುಮಾರಿಗೆ ನನಗೆ ಗೊತ್ತಾಗಿದ್ದೆನಂದರೆ ನಮ್ಮ ಮನೆಯಂತೆ ನಮ್ಮೂರಿನ ಈ ಕೆಳಗೆ ನಮೂದಿಸಿರುವ ಜನರ ಮನೆಗಳು ಸಹ ಅದೆ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಕಳ್ಳವು ಮಾಡಿರುತ್ತಾರೆ.1] ಇಸ್ಮಾಯಿಲ್ ತಂದೆ ಮಕ್ತುಮ ಸಾಬ ಶೇಖ ಸಾ: ನೇಲ್ಲೂರ ಇವರು ತಮ್ಮ ಮನೆಯ ಅಲ್ಮಾರಿಯಲ್ಲಿ ಇಟ್ಟಿರುವ ಒಂದು ತೊಲೆಯ ಬಂಗಾರದ ಬೋರಮಳ ಸರ ಅ:ಕಿ;15,000 , ಒಂದು ತೋಲೆ ಬಂಗಾರದ ಜೀರಾಮಣಿ ಸರ ಅ:ಕಿ;15000 ಒಂದು ತೋಲೆಯ ಬಂಗಾರದ ನೆಕ್ಲೇಸ್ ಮತ್ತು  ನಗದು ಹಣ 35000 ರೂಪಾಯಿ 2] ಮಾಳಪ್ಪ ತಂದೆ ಮಲ್ಕಪ್ಪ ಸಿಂಗೆ  ಸಾ: ನೇಲ್ಲೂರ  ಇವರು ತಮ್ಮ ಮನೆಯಲ್ಲಿದ್ದ ಒಂದು ಬಂಗಾರದ ಅರ್ಧ ತೊಲಿ ಜಿರಾಮಣಿ ಸರ ಅ:ಕಿ;7,500 ರೂಪಾಯಿ ನಗದು ಹಣ 10,000 ರೂಪಾಯಿ 3] ಶ್ರೀಶೈಲ್ ತಂದೆ ಗುಂಡೆರಾವ ಖೇಮದಿ ಸಾ: ನೇಲ್ಲೂರ  ಇವರು ತಮ್ಮ ಮನೆಯಲ್ಲಿಟ್ಟಿದ ನಗದು ಹಣ 10,000 ರೂಪಾಯಿ 4] ಲಕ್ಷ್ಮಿಪುತ್ರ ತಂದೆ ಬಸವರಾಜ ಬಿರೆದಾರ ಸಾ: ನೇಲ್ಲೂರ ಇವರು ತಮ್ಮ ಮನೆಯ ಅಲ್ಮಾರಿಯಲ್ಲಿಟ್ಟಿದ್ದ ಒಂದು ತೊಲೆಯ ಬಂಗಾರ ಬೋರಮಳ ಸರ ಅ;ಕಿ;15,000 ರೂ , ಮೂರು ತೊಲೆಯ ಬೆಳ್ಳಿಯ ಸಣ್ಣು ಮಕ್ಕಳ  ಉಡದಾರ, ಹಾಲುಗಡಗಾ ಅದರ ಅ;ಕಿ ; 1000 ರೂ ಮತ್ತು ನಗದು ಹಣ 25,000 ಈ ರೀತಿಯಾಗಿ ಯಾರೋ ಕಳ್ಳರು ದಿನಾಂಕ 08/09/2015 ರ ರಾತ್ರಿ 11-00 ಗಂಟೆಯಿಂದ ದಿನಾಂಕ 09/09/2015 ರ ನಸುಕಿನ ಜಾವ 4-00 ಗಂಟೆಯ ಮಧ್ಯಾವದಿಯಲ್ಲಿ ನಮ್ಮ ಮನೆಗಳ ಬಾಗಿಲಿನ  ಬೀಗಗಳು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ  ಈ ಮೇಲೆ ನಮೂದಿಸಿದಂತೆ ಒಟ್ಟು ಐದುವರೆ ತೊಲೆಯ ಬಂಗಾರದ ಆಭರಣಗಳು ಮತ್ತು ಮೂರು ತೊಲೆಯ ಬೆಳ್ಳಿಯ ಆಭರಣಗಳು  ಇವುಗಳ ಒಟ್ಟು ಅ;ಕಿ;83,500 ರೂಪಾಯಿಗಳು ಹಾಗೂ ಒಟ್ಟು ನಗದು ಹಣ  94,000 ರೂಪಾಯಿಗಳು ನೇದ್ದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿದವರ ಮೇಲೆ ಕ್ರಮ ಜರುಗಿಸಿ ನಮ್ಮ ನಮ್ಮ ಆಭರಣಗಳನ್ನು ಪತ್ತೆ ಮಾಡಿಕೊಡಲು ವಿನಂತಿ .ಅಂತಾ ನೀಡಿರುವ ದೂರಿನ ಸಾರಂಶ ಮೇಲಿಂದ ನಾನು ಶಿವಶಂಕರ ಸಾಹು ಪಿ ಎಸ್ ಐ ನರೋಣಾ ಪೊಲೀಸ ಠಾಣೆ ಅಪರಾಧ ಸಂ 110/2015 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.