POLICE BHAVAN KALABURAGI

POLICE BHAVAN KALABURAGI

22 August 2015

Kalaburagi District Reported Crimes.

ಗ್ರಾಮೀಣ ಠಾಣೆ  : ದಿನಾಂಕ: 20/08/2015 ರಂದು  4-00 ಎ.ಎಂ.ಕ್ಕೆ. ಶ್ರೀ.ರೇವಣಸಿದ್ದ ತಂದೆ ಜಗನಾಥ  ಬೆಡಸೂರ ವಯ;35 ವರ್ಷ ಜ್ಯಾತಿ;ಲಿಂಗಾಯತ ಉ;ನ್ಯೂಸುಪರ ಡ್ರೈಕ್ಲೀನರನಲ್ಲಿ ಕೆಲಸ ಸಾ;ಮರಗಮ್ಮ ಗುಡಿಯ ಹತ್ತಿರ ಶಹಾಬಜಾರ ಕಲಬುರಗಿ ಇವರು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಶ ಏನೆಂದರೆ ದಿನಾಂಕ. 19-8-2015 ರಂದು 5-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಡ್ರೈಕ್ಲೀನರ ಮಾಲಿಕರಾದ  ಸದಾಶಿವ  ರೇವಯ್ಯಾ ಮಠಪತಿ ಸಾ;ಗೋದು ತಾಯಿನಗರ ಕಲಬುರಗಿ ಇಬ್ಬರು ಕೂಡಿಕೊಂಡು ವಗ್ದರಿಯ ರಾಚೋಟೆಶ್ವರ ದೇವಸ್ಥಾನಕ್ಕೆ ಹೋಗಿ ಬರುವ ಕುರಿತು ಸದಾಶಿವಯ್ಯಾ ಮಠಪತಿ ಇವರ ಮೋಟಾರ ಸೈಕಲ್ ಬಜಾಜ ಪಲ್ಸರ ನಂ.ಕೆ.ಎ.32. ಇಇ.1726  ನೆದ್ದರ ಮೇಲೆ ಕಲಬುರಗಿಯಿಂದ ವಗ್ದರಿಗೆ ಹೋಗಿದ್ದು ದೇವರ ದರ್ಶನ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುತ್ತಿರುವಾಗ ಪಟ್ಟಣ್ಣ ಟೂಲ್ ನಾಕಾ ದಾಟಿದ ನಂತರ ಪಟ್ಟಣ ಕ್ರಾಸ ಕ್ಕಿಂತ ಮುಂಚಿತ ಮೋಟಾರ ಸೈಕಲನ್ನು ನಿಲ್ಲಿಸಿ  ಎಕೀ ಗೆ ( ಮೂತ್ರ ವಿಸರ್ಜನೆ ) ಗೆ ಹೋಗಿ ಮರಳಿ ಬಂದು ಮೋಟಾರ ಸೈಕಲ್ ಮೇಲೆ ಕುಳಿತು ಸದಾಶಿವನು ಮೋಟಾರ ಸೈಕಲನ್ನು ಚಾಲು ಮಾಡಿದನು ನಾನು ಅವನ ಹಿಂದು ಕೂಡುವಷ್ಟರಲ್ಲಿ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಂದು ವಾಹನವು ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಮಗೆ ಡಿಕ್ಕಿ ಹೋಡೆನು ಆಗ ನಾನೂ ರೋಡ ಕೆಳಗೆ ಬಿದ್ದೇನು ಮತ್ತು ಸದಾಶಿವನು ಕೂಡಾ ಕೆಳಗೆ ಬಿದ್ದನು   ಆಗ ರೋಡಿಗೆ ಹೋಗಿಬರುವ ವಾಹನಗಳ ಬೆಳಕಿನಲ್ಲಿ  ಡಿಕ್ಕಿ ಹೊಡೆದ ವಾಹನ ನೋಡಲಾಗಿ ಒಂದು ಬಿಳಿ ನಮೂನೆಯ ಜೀಪ /ಕಾರಿನಂತೆ ಇರುವ ವಾಹನವಿದ್ದು ಅದರ ಚಾಲಕನು  ಹಾಗೆ ಓಡಿಸಿಕೊಂಡು ಕಲಬುರಗಿಕಡೆಗೆ ಬಂದನು ,ಇದರಿಂದ ನನಗೆ ತಲೆಯ ಹಿಂದುಗಡೆ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿರುತ್ತದೆ.ಎಡಕಿನ ಕಿವಿಯ ಮೇಲೆ ತರಚಿದಗಾಯ , ಎಡಗಡೆ ಗಲ್ಲದ ಮೇಲೆ ತರಚಿದಗಾಯ, ಎಡ ಮುಂಡಿಯ ಮೇಲೆ ತರಚಿದಗಾಯ,ಬಲಕಿನ ತೋಡೆಯ ಮೇಲೆ ಗುಪ್ತ ಪೆಟ್ಟಾಗಿರುತ್ತದೆ. ಎಡಗಾಲಿನ ಹಿಂಬಡಿಗೆ ತರಚಿದಗಾಯ ವಾಗಿರುತ್ತವೆ. ಹಾಗೂ ಸದಾಶಿವ ಮಠಪತಿ ಇತನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತ ಪಟ್ಟಾಗಿದ್ದು,ಬಲಗೈ ಭುಜಕ್ಕೆಮೋಳಕೈಗೆ ರಕ್ತಗಾಯ ತರಚಿದ ಗಾಯಗಳಾಗಿದ್ದು ,ಸದರಿ ಘಟನೆ ಸಂಭವಿಸಿದ್ದಾಗ ರಾತ್ರಿ ಅಂದಾಜು 10-55 ಗಂಟೆಯಾಗಿತ್ತು, ಅಂತಾ ವಗೈರೆ ಕೊಟ್ಟ ಫಿರ್ಯಾದಿ ಸಾರಂಶಧ ಮೇಲಿಂದ ನಮ್ಮ ಠಾಣೆ ಗುನ್ನೆ ನಂ. 328/2015 ಕಲಂ. 279,337,338 ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ದಿನಾಂಕ.21-8-2015 ರಂದು 10-00 ಎ.ಎಂ.ಕ್ಕೆ. ಶ್ರೀ ಬಾಬು ತಂದೆ ರೇವಯ್ಯಾ ಮಠಪತಿ ವಯ;35 ವರ್ಷ ಜ್ಯಾತಿ;ಜಂಗಮ್ಮಾ ಉ;ಲೆಕ್ಚರ ಸಾ; ಮನೆ ನಂ.1-14-95-202 ಗೋದುತಾಯಿ ನಗರ  ಕಲಬುರ ಇವರು ಕೊಟ್ಟ ಪುರವಣೆ ಹೇಳಿಕೆ ಏನೆಂದರೆ ಸದರಿ ಪ್ರಕರಣದಲ್ಲಿ ಭಾರಿಗಾಯಗೊಂಡ ತನ್ನತಮ್ಮ ಸದಾಶಿವ ತಂದೆ ರೇವಯ್ಯಾ ಮಠಪತಿ ವಯ;28ವರ್ಷ ಇತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಿಗಿಂದ ಹೈದ್ರಾಬಾದ ಗ್ಲೋಬಲ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿದ್ದ ಮರಳಿ ಕಲಬುರಗಿಗೆ ಬರುವಾಗ ದಿನಾಂಕ. 21-8-2015 ರಂದು 1-00 ಎ.ಎಂ.ಕ್ಕೆ. ಮದ್ಯದ ಮಾರ್ಗದಲ್ಲಿ  ಮೃತ ಪಟ್ಟಿರುತ್ತಾನೆ ಅಂತಾ ವಗೈರೆ ಕೊಟ್ಟ ಪುರವಣೆ ಹೇಳಿಕೆ ಸಾರಂಶಧ ಮೇಲಿಂದ ಸದರಿ ಗುನ್ನೆ ನಂ.328/2015 ಕಲಂ. 279,337,338, ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕರಣದಲ್ಲಿ ಕಲಂ.304 (ಎ) ಐಪಿಸಿ ನೆದ್ದನ್ನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ  ಠಾಣೆ  :      ದಿನಾಂಕ: 21.08.2015 ರಂದು 13:00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 21.08.2015 ರಂದು 11:15 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಕೋಳಕೂರ ಗ್ರಾಮದ ಈಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 4025/- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 226/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ  ಠಾಣೆ    :    ದಿನಾಂಕ: 21.08.2015 ರಂದು 17:15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 21.08.2015 ರಂದು 16-00 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಕಟ್ಟಿಸಂಗಾವಿ ಬ್ರೀಡ್ಜ ಯಲ್ಲಾಲಿಂಗ ಗುಡಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 600/- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 227/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ  :     ಮೃತ ಆಶಮಾ ಬೇಗಂ ವಯಾ:20 ವರ್ಷ ಇವಳ ಮದುವೆಯು ದಿನಾಂಕ:-19/05/2015 ರಂದು ಆರೋಪಿ ನಸೀರ ಇತನೊಂದಿಗೆ ಆಗಿದ್ದು ಮದುವೆ ಕಾಲಕ್ಕೆ ಒಂದು ಲಕ್ಷ ರೂಪಾಯಿ ವರದಕ್ಷಣೆ ಮಾತಾಡಿದ್ದು ಅದೇ ಹಣವನ್ನು ಮದುವೆ ಮತ್ತು ಒಲಿಮಾಕ್ಕೆ ಖರ್ಚ ಮಾಡಬೇಕು ಅಂತಾ ಮಾತುಕತೆ ಆಗಿ ನಂತರ ಸದರಿ ಆರೋಪಿತರಾದ ನಸೀರ ಹಾಗು ಸೈಯದಮಾ ಇವರು ಇನ್ನು 20000/-ರೂ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಅವರ ತಾಪ ತಾಳಲಾರದೇ ಇಂದು ದಿನಾಂಕ:-21/08/2015 ರಂದು ಮದ್ಯಾಹ್ನ 03:30 ಗಂಟೆ ಸುಮಾರಿಗೆ ತನ್ನ ಗಂಡನ ಮನೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಆಗಿದಾಗ ಉಪಚಾರ ಫಲಕಾರಿಯಾಗದೇ ರಾತ್ರಿ 08:00 ಗಂಟೆಗೆ ಮೃತಪಟ್ಟಿದ್ದು ಈ ಮೇಲಿನಂತೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.                                                  

21 August 2015

Kalaburagi District Reported Crimes.

ಗ್ರಾಮೀಣ ಠಾಣೆ : ದಿನಾಂಕ: 20/08/2015ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿ ತನಗೆ  ಬರಬೇಕಾದ ಪೇಮೆಂಟ ಹಣ 5000 ರೂ. ಮತ್ತು ನನ್ನ ಹತ್ತಿರ ಇದ್ದ 3200 ರೂ. ಹಣ ತನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡು ಕಂಪನಿಯಿಂದ ಊಟ ಮಾಡಲು ಹುಮನಾಬಾದ ರಿಂಗರೋಡ ಹತ್ತಿರ ಬಂದು ಊಟ ಮಾಡಿಕೊಂಡಿದ್ದರಿಂದ ಮತ್ತು ಸಣ್ಣ ಪುಟ್ಟ ಸಾಮಾನುಗಳು ಖರೀದಿಸಿದ್ದರಿಂದ ಆ ಹಣದಲ್ಲಿ 200 ರೂ. ಖರ್ಚಾಗಿದ್ದು,  ನಿನ್ನೆ  ರಾತ್ರಿ 8-00 ಗಂಟೆ  ಸುಮಾರಿಗೆ ಕಂಪನಿಗೆ ಕಡೆಗೆ ನಡೆದುಕೊಂಡು ಹುಮನಾಬಾದ ರಿಂಗ ರೋಡಿನ  ಹೊಸ ಬಸ್ ಸ್ಟಾಪ ಹತ್ತಿರದಿಂದ ಫೋನನಲ್ಲಿ ಮಾತನಾಡುತ್ತಾ  ಹೋಗುತ್ತಿದ್ದಾಗ ಫಿರ್ಯಾದಿ ಹಿಂದಿನಿಂದ 3 ಜನರು ಒಂದು ಬಿಳಿ ಬಣ್ಣದ ಮೆಸ್ಟ್ರೋ ಮೋಟಾರ ಸೈಕಲ ಮೇಲೆ ಕುಳಿತುಕೊಂಡು  ಬಂದವರೇ ಫಿರ್ಯಾದಿ  ಎದುರು ಮೋಟಾರ ಸೈಕಲ ಅಡ್ಡಗಟ್ಟಿ ನಿಲ್ಲಿಸಿ ಮೂರು ಜನರೂ ಮೋಟಾರ ಸೈಕಲನಿಂದ ಕೆಳಗೆ ಇಳಿದು ಫಿರ್ಯಾದಿಗೆ ತಡೆದು ನಿಲ್ಲಿಸಿ  ಅವರಲ್ಲಿ ಒಬ್ಬನು ಫಿರ್ಯಾದಿಯ ನೋಕಿಯಾ ಮೋಬೈಲ್ ಜಬರದಸ್ತಿಯಿಂದ ಕಸಿದುಕೊಂಡನು. ಮತ್ತೊಬ್ಬನು ಫಿರ್ಯಾದಿ  ಕುತ್ತಿಗೆಗೆ ಚಾಕು ಹಚ್ಚಿ ತೇರೆ ಪಾಸ ಕಿತನಾ ಪೈಸಾ ಹೈ ನಿಕಾಲೋ ಅಂತ ಅಂದನು. ಅದಕ್ಕೆ ಅವರಿಗೆ ತನ್ನ ಹತ್ತಿರ ಹಣ  ಇಲ್ಲಾ  ಅಂತಾ ಅಂದಿದ್ದಕ್ಕೆ ಇಬ್ಬರು ಫಿರ್ಯಾದಿ ಕೀಸೆ ಚೆಕ್ ಮಾಡಿ ಎಡಗಡೆ ಪ್ಯಾಂಟನ ಕೀಸೆಯಲ್ಲಿದ್ದ 8000/-ರೂ ಜಬರದಸ್ತಿಯಿಂದ ಕಸಿದುಕೊಂಡರು. ನಂತರ   ನೂಕಿಸಿಕೊಟ್ಟು ತಾವು ತಂದಿದ್ದ ಮೋಟರ ಸೈಕಲ ಮೇಲೆ ಮೂರು ಜನರು ಕುಳಿತುಕೊಂಡು ಸಿಟಿ ಕಡೆ ಓಡಿ ಹೋದರು. ಗಾಬರಿಯಲ್ಲಿ ಗಾಡಿ ನಂಬರ ನೋಡಲು ಆಗಿರುವುದಿಲ್ಲಾ. ಸದರಿ ಮೂವರು ಅಂದಾಜು 20 ರಿಂದ 25 ವರ್ಷ ವಯಸ್ಸಿನವರಿದ್ದು ಮೂವರು ಪ್ಯಾಂಟ ಶರ್ಟ ಧರಿಸಿದ್ದು, ಹಿಂದಿ ಭಾಷೆ ಮಾತಾಡುತ್ತಿದ್ದು ಮೂವರು ಎದುರು ಬಂದಲ್ಲಿ ಮತ್ತು ಮೆಸ್ಟ್ರೋ ಮೋಟರ ಸೈಕಲ ನೋಡಿದಲ್ಲಿ ಗುರುತಿಸುತ್ತೇನೆ. ಜಬರದಸ್ತಿಯಿಂದ ಹಣ ಮತ್ತು ಮೋಬಾಯಿಲ್ ಕಸಿದುಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ನನ್ನ ಹಣ ಮತ್ತು ಮೋಬೈಲ್ ವಾಪಸ್ಸು ಕೊಡಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು  ಎಂದು ಕೊಟ್ಟ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 330/15 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಲಾಗಿರುತ್ತದೆ.
ಅಫಜಲಪೂರ ಠಾಣೆ:  ದಿನಾಂಕ 20-08-2015 ರಂದು 06:40 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಶಿವಪೂರ ಬನ್ನಟ್ಟಿ ಗ್ರಾಮದ ಕಡೆಯಿಂದ  ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣಾ ಸಿಬ್ಬಂದಿ ಜನರಾದ ಸುರೇಶ ಪಿಸಿ-801,ಆನಂದ ಪಿಸಿ-1258, ರವರಿಗೆ ವಿಷಯ ತಿಳಿಸಿ ಪಂಚರಾದ 1) ಚಂದಪ್ಪ ತಂದೆ ರಮೇಶ ಕೊಳಗೇರಿ 2) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ನಾನು ಹಾಗೂ ನಮ್ಮ ಸಿಬ್ಬಂದಿಯವರು ಕೂಡಿಕೊಂಡು ಠಾಣೆಯ  ಜಿಪಿನಲ್ಲಿ 06:50 ಪಿ.ಎಮ್ ಕ್ಕೆ ಹೊರಟು 06:55 ಪಿ ಎಮ್ ಕ್ಕೆ ಅಫಜಲಪೂರದ ಘತ್ತರಗಾ ರೋಡ ಲಕ್ಷ್ಮಿ ಗುಡಿ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಎರಡು ಟ್ಯಾಕ್ಟರಗಳು ಬರುತ್ತಿದ್ದವು. ಸದರಿ ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟ್ಯಾಕ್ಟರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟ್ಯಾಕ್ಟರಗಳಿದ್ದು, ಅವುಗಳನ್ನು ಚೆಕ್ ಮಾಡಿ ನೋಡಲು ಸದರಿ ಟ್ಯಾಕ್ಟರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1)JOHN DEERE ಕಂಪನಿಯ ಟ್ಯಾಕ್ಟರ ಇದ್ದು Chassis No- 1PY5050ECFA013268 Engine No-PY3029T230704 2) JOHN DEERE ಕಪಂನಿಯ ಟ್ಯಾಕ್ಟರ ಇದ್ದು  ನಂ KA-28 TB-8371 ರೀತಿ ಇರುತ್ತವೆ. ಸದರಿ ಟ್ಯಾಕ್ಟರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 6,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟ್ಯಾಕ್ಟರರಗಳನ್ನು ಪಂಚರ ಸಮಕ್ಷಮ 07:00 ಪಿ ಎಮ್ ದಿಂದ 07:40 ಪಿ ಎಮ್ ವರೆಗೆ ನಮ್ಮ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು  ನಮ್ಮ ಸಿಬ್ಬಂದಿಯವರ ಸಹಾಯದಿಂದ ಮರಳಿ ಠಾಣೆಗೆ 07:50 ಪಿ ಎಮ್ ಕ್ಕೆ ಬಂದು ಸದರಿ ಮರಳು ತುಂಬಿದ ಎರಡು ಟ್ಯಾಕ್ಟರ ಹಾಗೂ ಟ್ಯಾಕ್ಟರ ಚಾಲಕರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

20 August 2015

Kalaburagi District Reported Crimes.

ಬ್ರಹ್ಮಪೂರ  ಠಾಣೆ : ದಿನಾಂಕ: 20/08/2015 ರಂದು 11-30 ಗಂಟೆಗೆ ಫಿಯರ್ಾದಿ ವಿಕಾಸ ಕುಮಾರ ತಂದೆ ಮಡಿವಾಳಯ್ಯಸ್ವಾಮಿ ಅಟ್ಟೂರ ವಯ|| 45 ವರ್ಷ ಉ|| ಸರಕಾರಿ ನೌಕರ ಸಾ|| ಶರಣ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ನೀಡಿದ ಸಾರಾಂಶವೆನೆಂದರೆ ನಮ್ಮ ತಮ್ಮನಾದ ಕೈಲಾಸಕುಮಾರ ಇವರ ಹೆಸರಿನಲ್ಲಿ ಮಹಿಂದ್ರಾ ಬುಲೆರೋ ವಾಹನ ಸಂಖ್ಯೆ ನಂ ಕೆಎ 39 ಎಮ್ 5559 ಖರೀದಿ ಮಾಡಿದ್ದು ಅದರ ಅ||ಕಿ|| ರೂ 500,000/- ಬೆಲೆ ಬಾಳುತ್ತದೆ. ಸದರಿ ವಾಹನ ನಮ್ಮ ಮನೆಗಾಗಿ ಉಪಯೋಗಿಸುತ್ತೇವೆ. ನಿನ್ನೆ ದಿನಾಂಕ 19/08/2015 ರಂದು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ರಾತ್ರಿ 10 ಗಂಟೆಯ ಸುಮಾರಿಗೆ  ನೋಡಿದಾಗ  ಮನೆಯ ಮುಂದೆ ಇತ್ತು. ನಂತರ ನಾವು ಮಲಗಿ ಕೋಡಿದ್ದು ಇಂದು ದಿನಾಂಕ 20/08/2015 ರಂದು ಬೆಳಿಗ್ಗೆ  6-30 ಗಂಟೆಯ ಸುಮಾರಿಗೆ  ಎದ್ದು ನೋಡಲು ವಾಹನ ಮನೆಯ ಮುಂದೆ ಇರಲಿಲ್ಲ. ನಂತರ ನಾನು ಮತ್ತು ನಮ್ಮ ತಮ್ಮನಾದ ಪ್ರಕಾಶ ಕುಮಾರ ಇಬ್ಬರು ಕೂಡಿ  ಗಾಬರಿಗೊಂಡು ಎಲ್ಲಾ ಕಡೆ ಹುಡುಕಾಡಿದರು ಮಾಹಿತಿ ಸಿಗಲಿಲ್ಲ. ಸದರಿ ನಮ್ಮ ವಾಹನ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವು ಮಾಡಿದವರ ಮೇಲೆ ಕಾನೂನ ಕ್ರಮ ಜರುಗಿಸಿ  ನಮ್ಮ ವಾಹನ ಪತ್ತೆ ಮಾಡಿಕೊಡಬೇಕು ಅರ್ಜಿಯ ಪ್ರಕಾರ ಪ್ರಕರಣ ದಾಖಲಾಗಿರುತ್ತದ.
ಅಫಜಲಪೂರ್ ಠಾಣೆ : ಫಿರ್ಯಾದುದಾರರು 2 ವರ್ಷದ ಹಿಂದೆ  ಫಿರ್ಯಾದುದಾರರಿಗೆ ಒಕ್ಕಲುತನ ಕೆಲಸದ ಅಡಚಣೆಗಾಗಿ ಹಣದ ಅವಶ್ಯಕತೆ ಇದ್ದರಿಂದ  ನಾನು ದಿನಾಂಕ 01-05-2013 ರಂದು  ನಮ್ಮ ಗ್ರಾಮದ ಭೀಮಶ್ಯಾ ಲಾಳಸಂಗಿ ರವರ ಮಕ್ಕಳಾದ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ  ಇವರ ಹತ್ತಿರ ಹೋಗಿ ನನಗೆ ಒಕ್ಕಲುನತ ಕೆಲಸದ ಸಲುವಾಗಿ  80,000/-ರೂ ಬೇಕಾಗಿದೆ ಬಡ್ಡಿಯಂತೆ ಹಣ ಕೊಡು ಅಂತ ಕೇಳಿದೆನು ಅದಕ್ಕೆ ಸಿದ್ದಪ್ಪ ಇತನು  ನಾನು 3 ರ ಬಡ್ಡಿಯಂತೆ ಹಣಕೊಡುವದಿಲ್ಲ ಹೆಚ್ಚಿಗೆ ಇರುತ್ತದೆ ಅಂತ ಹೇಳಿದನು ನನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಈಗ ನನಗೆ ಮೊದಲು ಹಣಕೊಡು ಅಂತ ಸಿದ್ದನಿಗೆ ಹೇಳಿದ್ದು ಸಿದ್ದಪ್ಪನು ನನಗೆ 78,000/- ರೂಪಾಯಿ ಕೊಟ್ಟು ನನಗೆ ಹೇಳಿದ್ದೇನೆಂದರೆ ನನ್ನ ಹತ್ತಿರದ 8000/-ರೂ ನನ್ನ ತಮ್ಮನಾದ ಶರಣಪ್ಪ ಇತನ ಹತ್ತಿರ 50,000/-ರೂ ಹಾಗೂ ಪುಂಡಪ್ಪನ ಹತ್ತಿರದ 20,000/- ರೂ ಸೇರಿಸಿ ನಿನಗೆ ಒಟ್ಟು 78,000/-ರೂ ಕೊಟ್ಟಿರುತ್ತೆನೆ ಅಂತ ಹೇಳಿ ನನಗೆ ಕೊಟ್ಟನು ನಂತರ ಸಿದ್ದಪ್ಪ ಹಾಗೂ ಅವರ ತಮ್ಮಂದಿರಾದ ಶರಣಪ್ಪ, ಪುಂಡಪ್ಪ ಮತ್ತು ಕೃಷ್ಣಪ್ಪ ಇವರು  ಒಂದು  ತಿಂಗಳ  ನಂತರ ನಮ್ಮ ಹಣ ಮರಳಿಕೊಡು ಇಲ್ಲವಾದರೆ ತಿಂಗಳಿಗೆ ಶೇಕಡಾ 10 ರ ಬಡ್ಡಿದರದಲ್ಲಿ ಪ್ರತಿ ತಿಂಗಳು ಬಡ್ಡಿಯನ್ನು ಕೊಡು ಅಂತ  ಹೇಳಿದ್ದರಿಂದ ಸಿದ್ದಪ್ಪ  ಇವರಿಗೆ ಮೀಟರ ಬಡ್ಡಿ ರೂಪದಲ್ಲಿ ನಾನು ಸಾಲವಾಗಿ ತಗೆದುಕೊಂಡ 78,000/-ರೂಪಾಯಿ ಹಣಕ್ಕೆ ಪ್ರತಿ ತಿಂಗಳ ಶೇಕಡಾ 10 ರಂತೆ ಮೀಟರ ಬಡ್ಡಿ ಕೊಡುತ್ತಾ ಬಂದಿರುತ್ತೇನೆ.ದಿನಾಂಕ 30-05-2015 ರಂದು ನಾನು ಸಿದ್ದಪ್ಪ ಇವರ ಹತ್ತಿರ ಸಾಲ ಪಡೆದುಕೊಂಡಂತಹ 78,000/-ರೂ ಹಣವನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು ಸಿದ್ದಪ್ಪ  ಇತನಿಗೆ ನಮ್ಮ ಗ್ರಾಮದ ಖಾದರಬಾಷಾ ತಂದೆ ಗಪೂರ ಚಂದನ ಹಾಗೂ ನಮ್ಮ ತಾಯಿ ಮಾಹದೇವಿ ಇವರ ಸಮಕ್ಷಮ ನಮ್ಮ ಮನೆಗೆ ಕರೆಯಿಸಿ ನಾನು ಸಾಲವಾಗಿ ಪಡೆದುಕೊಂಡ ಹಣಕ್ಕೆ ಬಡ್ಡಿ ಸೇರಿಸಿ ಒಟ್ಟು 2,00,000/- ರೂ ಹಣವನ್ನು ಕೊಟ್ಟು ನಿಮ್ಮ ಬಾಕಿ ಏನು ಇರುವುದಿಲ್ಲಾ ಅಂತ ಹೇಳಿರುತ್ತೇನೆ. ಆದರೆ ಸದರಿ ಸಿದ್ದಪ್ಪ ಲಾಳಸಂಗಿ ಇತನು ಈಗ ಒಂದು ವಾರದಿಂದ ನಾನು ನಿನಗೆ ಕೊಟ್ಟಂತಹ 78,,000/-ರೂಪಾಯಿ ಹಣಕ್ಕೆ ಇನ್ನೂ ಬಡ್ಡಿಕೊಡಬೇಕು ನಿನು ಪೂರ್ತಿ ಬಡ್ಡಿಕೊಟ್ಟಿಲ್ಲಾ ಅಂತ ನನಗೆ ಪೀಡಿಸುತ್ತಿರುತ್ತಾನೆ. ದಿನಾಂಕ 08-08-2015 ರಂದು ಬೆಳಿಗ್ಗೆ 10.00 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಲಿದ್ದಾಗ ಸಿದ್ದಪ್ಪ ಲಾಳಸಂಗಿ ಹಾಗೂ ಅವರ ತಮ್ಮಂದಿರಾದ ಶರಣಪ್ಪ ಲಾಳಸಂಗಿ, ಪುಂಡಪ್ಪ ಲಾಳಸಂಗಿ ಮತ್ತು ಕೃಷ್ಣಪ್ಪ ಲಾಳಸಂಗಿ  ಇವರು ನಮ್ಮ ಮನೆಗೆ ಬಂದು ನಿನಗೆ  ನಾವು ಕೊಟ್ಟ 78,000/- ರೂಪಾಯಿಗೆ  ಬಡ್ಡಿಕೊಡು ಎಂದು ಕೊಡುತ್ತಿ ಅಂತ ಹೇಳಿ ಹೋಗಿರುತ್ತಾರೆ.ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಸದರಿ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ ಹಾಗೂ ಅವರ ತಮ್ಮಂದಿರಾದ ಶರಣಪ್ಪ ಲಾಳಸಂಗಿ, ಪುಂಡಪ್ಪ ಲಾಳಸಂಗಿ ಮತ್ತು ಕೃಷ್ಣಪ್ಪಾ ಲಾಳಸಂಗಿ  ಸಾ|| ಕರಜಗಿ ಇವರು  ಕರಜಗಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಪಡೆಯದೆ   ಅನಧಿಕೃತವಾಗಿ ಮೀಟರ ಬಡ್ಡಿಯಂತೆ ಕರಜಗಿ ಗ್ರಾಮದ ರೈತರಿಗೂ ಹಾಗೂ ಇನ್ನೂಳಿದ ಜನರಿಗೂ ಹಣ ಕೊಟ್ಟು ಮೀಟರ ಬಡ್ಡಿ ರೂಪದಲ್ಲಿ ಹಣ ಪಡೆದು ಜನರಿಗೆ ಮೋಸ ಮಾಡಿ ಬಡ್ಡಿ ವ್ಯವಹಾರ ಮಾಡುತ್ತಿರುತ್ತಾರೆ. ಅದರಂತೆ ನಾನು ಸಹ ಸದರಿಯವರ ಹತ್ತಿರ  ಹಣದ ಅಡಚಣೆಯಿಂದ ಹಣವನ್ನು ಪಡೆದುಕೊಂಡು  ಪಡೆದುಕೊಂಡ ಹಣ ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು  ಮರಳಿಕೊಟ್ಟರು ಸಹ ಇನ್ನೂ ಬಡ್ಡಿ ಹಣ ಬರಬೇಕು ಅಂತ ನನಗೆ ಪಿಡಿಸುತ್ತಿರುತ್ತಾರೆ ಆದ್ದರಿಂದ ಸದರಿ ಸಿದ್ದಪ್ಪ ಲಾಳಸಂಗಿ ಹಾಗೂ ಅವರ ತಮ್ಮಂದಿರಾದ ಶರಣಪ್ಪ, ಪುಂಡಪ್ಪ ಕೃಷ್ಣಪ್ಪ  ಇವರ ಮೇಲೆ ಕಾನುನು ಕ್ರಮ ಜರೂಗಿಸಬೇಕೆಂದು ಹೇಳಿ ಟೈಪ ಮಾಡಿಸಿದ ಹೇಳಿಕೆಪ್ರಕಾರ ಪ್ರಕರಣ ದಾಖಲಾಗಿರುತ್ತದೆ .
ಅಫಜಲಪೊರ ಠಾಣೆ : ದಿನಾಂಕ 19-08-2015 ರಂದು 06:40 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಸೊನ್ನ ಗ್ರಾಮದ ಬೀಮಾನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣಾ ಸಿಬ್ಬಂದಿ ಜನರಾದ ಸುರೇಶ ಪಿಸಿ-801,ಆನಂದ ಪಿಸಿ-1258, ಜಗನ್ನಾಥಪಿಸಿ-530,ವಿಠ್ಠಲ ಸಿಪಿಸಿ-820 ರವರನ್ನು ತಿಳಿಸಿ ಪಂಚರಾದ 1) ಚಂದಪ್ಪ ತಂದೆ ರಮೇಶ ಕೊಳಗೇರಿ 2) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ನಾನು ಹಾಗೂ ನಮ್ಮ ಸಿಬ್ಬಂದಿಯವರು ಕೂಡಿಕೊಂಡು ಠಾಣೆಯ  ಜಿಪಿನಲ್ಲಿ 06:50 ಪಿ.ಎಮ್ ಕ್ಕೆ ಹೊರಟು 07:15 ಪಿ ಎಮ್ ಕ್ಕೆ ಸೊನ್ನ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಎರಡು ಟಿಪ್ಪರಗಳು ಬರುತ್ತಿದ್ದವು. ಸದರಿ ಟಿಪ್ಪರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟಿಪ್ಪರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟಿಪ್ಪರಗಳಿದ್ದು, ಅವುಗಳನ್ನು ಚೆಕ್ ಮಾಡಿ ನೋಡಲು ಸದರಿ ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1)ಟಾಟಾ ಕಂಪನಿಯ ಟಿಪ್ಪರ ಇದ್ದು ನಂ ಕೆಎ-28 ಸಿ-0088 2) ಅಶೋಕ ಲ್ಯಾಲಾಂಡ ಕಪಂನಿಯ ಟಿಪ್ಪರ ಇದ್ದು  ನಂ ಕೆಎ-32 ಸಿ-2341 ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ 07:20 ಪಿ ಎಮ್ ದಿಂದ 08:20 ಪಿ ಎಮ್ ವರೆಗೆ ನಮ್ಮ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟಿಪ್ಪರಗಳನ್ನು  ನಮ್ಮ ಸಿಬ್ಬಂದಿಯವರ ಸಹಾಯದಿಂದ ಮರಳಿ ಠಾಣೆಗೆ ಬಂದು ಸದರಿ ಮರಳು ತುಂಬಿದ ಎರಡು ಟಿಪ್ಪರ ಹಾಗೂ ಟಿಪ್ಪರ ಚಾಲಕರ ಮೇಲೆ ಕಾನೂನು ಕ್ರಮ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ .