POLICE BHAVAN KALABURAGI

POLICE BHAVAN KALABURAGI

20 August 2015

Kalaburagi District Reported Crimes.

ಬ್ರಹ್ಮಪೂರ  ಠಾಣೆ : ದಿನಾಂಕ: 20/08/2015 ರಂದು 11-30 ಗಂಟೆಗೆ ಫಿಯರ್ಾದಿ ವಿಕಾಸ ಕುಮಾರ ತಂದೆ ಮಡಿವಾಳಯ್ಯಸ್ವಾಮಿ ಅಟ್ಟೂರ ವಯ|| 45 ವರ್ಷ ಉ|| ಸರಕಾರಿ ನೌಕರ ಸಾ|| ಶರಣ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ನೀಡಿದ ಸಾರಾಂಶವೆನೆಂದರೆ ನಮ್ಮ ತಮ್ಮನಾದ ಕೈಲಾಸಕುಮಾರ ಇವರ ಹೆಸರಿನಲ್ಲಿ ಮಹಿಂದ್ರಾ ಬುಲೆರೋ ವಾಹನ ಸಂಖ್ಯೆ ನಂ ಕೆಎ 39 ಎಮ್ 5559 ಖರೀದಿ ಮಾಡಿದ್ದು ಅದರ ಅ||ಕಿ|| ರೂ 500,000/- ಬೆಲೆ ಬಾಳುತ್ತದೆ. ಸದರಿ ವಾಹನ ನಮ್ಮ ಮನೆಗಾಗಿ ಉಪಯೋಗಿಸುತ್ತೇವೆ. ನಿನ್ನೆ ದಿನಾಂಕ 19/08/2015 ರಂದು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ರಾತ್ರಿ 10 ಗಂಟೆಯ ಸುಮಾರಿಗೆ  ನೋಡಿದಾಗ  ಮನೆಯ ಮುಂದೆ ಇತ್ತು. ನಂತರ ನಾವು ಮಲಗಿ ಕೋಡಿದ್ದು ಇಂದು ದಿನಾಂಕ 20/08/2015 ರಂದು ಬೆಳಿಗ್ಗೆ  6-30 ಗಂಟೆಯ ಸುಮಾರಿಗೆ  ಎದ್ದು ನೋಡಲು ವಾಹನ ಮನೆಯ ಮುಂದೆ ಇರಲಿಲ್ಲ. ನಂತರ ನಾನು ಮತ್ತು ನಮ್ಮ ತಮ್ಮನಾದ ಪ್ರಕಾಶ ಕುಮಾರ ಇಬ್ಬರು ಕೂಡಿ  ಗಾಬರಿಗೊಂಡು ಎಲ್ಲಾ ಕಡೆ ಹುಡುಕಾಡಿದರು ಮಾಹಿತಿ ಸಿಗಲಿಲ್ಲ. ಸದರಿ ನಮ್ಮ ವಾಹನ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವು ಮಾಡಿದವರ ಮೇಲೆ ಕಾನೂನ ಕ್ರಮ ಜರುಗಿಸಿ  ನಮ್ಮ ವಾಹನ ಪತ್ತೆ ಮಾಡಿಕೊಡಬೇಕು ಅರ್ಜಿಯ ಪ್ರಕಾರ ಪ್ರಕರಣ ದಾಖಲಾಗಿರುತ್ತದ.
ಅಫಜಲಪೂರ್ ಠಾಣೆ : ಫಿರ್ಯಾದುದಾರರು 2 ವರ್ಷದ ಹಿಂದೆ  ಫಿರ್ಯಾದುದಾರರಿಗೆ ಒಕ್ಕಲುತನ ಕೆಲಸದ ಅಡಚಣೆಗಾಗಿ ಹಣದ ಅವಶ್ಯಕತೆ ಇದ್ದರಿಂದ  ನಾನು ದಿನಾಂಕ 01-05-2013 ರಂದು  ನಮ್ಮ ಗ್ರಾಮದ ಭೀಮಶ್ಯಾ ಲಾಳಸಂಗಿ ರವರ ಮಕ್ಕಳಾದ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ  ಇವರ ಹತ್ತಿರ ಹೋಗಿ ನನಗೆ ಒಕ್ಕಲುನತ ಕೆಲಸದ ಸಲುವಾಗಿ  80,000/-ರೂ ಬೇಕಾಗಿದೆ ಬಡ್ಡಿಯಂತೆ ಹಣ ಕೊಡು ಅಂತ ಕೇಳಿದೆನು ಅದಕ್ಕೆ ಸಿದ್ದಪ್ಪ ಇತನು  ನಾನು 3 ರ ಬಡ್ಡಿಯಂತೆ ಹಣಕೊಡುವದಿಲ್ಲ ಹೆಚ್ಚಿಗೆ ಇರುತ್ತದೆ ಅಂತ ಹೇಳಿದನು ನನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಈಗ ನನಗೆ ಮೊದಲು ಹಣಕೊಡು ಅಂತ ಸಿದ್ದನಿಗೆ ಹೇಳಿದ್ದು ಸಿದ್ದಪ್ಪನು ನನಗೆ 78,000/- ರೂಪಾಯಿ ಕೊಟ್ಟು ನನಗೆ ಹೇಳಿದ್ದೇನೆಂದರೆ ನನ್ನ ಹತ್ತಿರದ 8000/-ರೂ ನನ್ನ ತಮ್ಮನಾದ ಶರಣಪ್ಪ ಇತನ ಹತ್ತಿರ 50,000/-ರೂ ಹಾಗೂ ಪುಂಡಪ್ಪನ ಹತ್ತಿರದ 20,000/- ರೂ ಸೇರಿಸಿ ನಿನಗೆ ಒಟ್ಟು 78,000/-ರೂ ಕೊಟ್ಟಿರುತ್ತೆನೆ ಅಂತ ಹೇಳಿ ನನಗೆ ಕೊಟ್ಟನು ನಂತರ ಸಿದ್ದಪ್ಪ ಹಾಗೂ ಅವರ ತಮ್ಮಂದಿರಾದ ಶರಣಪ್ಪ, ಪುಂಡಪ್ಪ ಮತ್ತು ಕೃಷ್ಣಪ್ಪ ಇವರು  ಒಂದು  ತಿಂಗಳ  ನಂತರ ನಮ್ಮ ಹಣ ಮರಳಿಕೊಡು ಇಲ್ಲವಾದರೆ ತಿಂಗಳಿಗೆ ಶೇಕಡಾ 10 ರ ಬಡ್ಡಿದರದಲ್ಲಿ ಪ್ರತಿ ತಿಂಗಳು ಬಡ್ಡಿಯನ್ನು ಕೊಡು ಅಂತ  ಹೇಳಿದ್ದರಿಂದ ಸಿದ್ದಪ್ಪ  ಇವರಿಗೆ ಮೀಟರ ಬಡ್ಡಿ ರೂಪದಲ್ಲಿ ನಾನು ಸಾಲವಾಗಿ ತಗೆದುಕೊಂಡ 78,000/-ರೂಪಾಯಿ ಹಣಕ್ಕೆ ಪ್ರತಿ ತಿಂಗಳ ಶೇಕಡಾ 10 ರಂತೆ ಮೀಟರ ಬಡ್ಡಿ ಕೊಡುತ್ತಾ ಬಂದಿರುತ್ತೇನೆ.ದಿನಾಂಕ 30-05-2015 ರಂದು ನಾನು ಸಿದ್ದಪ್ಪ ಇವರ ಹತ್ತಿರ ಸಾಲ ಪಡೆದುಕೊಂಡಂತಹ 78,000/-ರೂ ಹಣವನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು ಸಿದ್ದಪ್ಪ  ಇತನಿಗೆ ನಮ್ಮ ಗ್ರಾಮದ ಖಾದರಬಾಷಾ ತಂದೆ ಗಪೂರ ಚಂದನ ಹಾಗೂ ನಮ್ಮ ತಾಯಿ ಮಾಹದೇವಿ ಇವರ ಸಮಕ್ಷಮ ನಮ್ಮ ಮನೆಗೆ ಕರೆಯಿಸಿ ನಾನು ಸಾಲವಾಗಿ ಪಡೆದುಕೊಂಡ ಹಣಕ್ಕೆ ಬಡ್ಡಿ ಸೇರಿಸಿ ಒಟ್ಟು 2,00,000/- ರೂ ಹಣವನ್ನು ಕೊಟ್ಟು ನಿಮ್ಮ ಬಾಕಿ ಏನು ಇರುವುದಿಲ್ಲಾ ಅಂತ ಹೇಳಿರುತ್ತೇನೆ. ಆದರೆ ಸದರಿ ಸಿದ್ದಪ್ಪ ಲಾಳಸಂಗಿ ಇತನು ಈಗ ಒಂದು ವಾರದಿಂದ ನಾನು ನಿನಗೆ ಕೊಟ್ಟಂತಹ 78,,000/-ರೂಪಾಯಿ ಹಣಕ್ಕೆ ಇನ್ನೂ ಬಡ್ಡಿಕೊಡಬೇಕು ನಿನು ಪೂರ್ತಿ ಬಡ್ಡಿಕೊಟ್ಟಿಲ್ಲಾ ಅಂತ ನನಗೆ ಪೀಡಿಸುತ್ತಿರುತ್ತಾನೆ. ದಿನಾಂಕ 08-08-2015 ರಂದು ಬೆಳಿಗ್ಗೆ 10.00 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಲಿದ್ದಾಗ ಸಿದ್ದಪ್ಪ ಲಾಳಸಂಗಿ ಹಾಗೂ ಅವರ ತಮ್ಮಂದಿರಾದ ಶರಣಪ್ಪ ಲಾಳಸಂಗಿ, ಪುಂಡಪ್ಪ ಲಾಳಸಂಗಿ ಮತ್ತು ಕೃಷ್ಣಪ್ಪ ಲಾಳಸಂಗಿ  ಇವರು ನಮ್ಮ ಮನೆಗೆ ಬಂದು ನಿನಗೆ  ನಾವು ಕೊಟ್ಟ 78,000/- ರೂಪಾಯಿಗೆ  ಬಡ್ಡಿಕೊಡು ಎಂದು ಕೊಡುತ್ತಿ ಅಂತ ಹೇಳಿ ಹೋಗಿರುತ್ತಾರೆ.ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಸದರಿ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ ಹಾಗೂ ಅವರ ತಮ್ಮಂದಿರಾದ ಶರಣಪ್ಪ ಲಾಳಸಂಗಿ, ಪುಂಡಪ್ಪ ಲಾಳಸಂಗಿ ಮತ್ತು ಕೃಷ್ಣಪ್ಪಾ ಲಾಳಸಂಗಿ  ಸಾ|| ಕರಜಗಿ ಇವರು  ಕರಜಗಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಪಡೆಯದೆ   ಅನಧಿಕೃತವಾಗಿ ಮೀಟರ ಬಡ್ಡಿಯಂತೆ ಕರಜಗಿ ಗ್ರಾಮದ ರೈತರಿಗೂ ಹಾಗೂ ಇನ್ನೂಳಿದ ಜನರಿಗೂ ಹಣ ಕೊಟ್ಟು ಮೀಟರ ಬಡ್ಡಿ ರೂಪದಲ್ಲಿ ಹಣ ಪಡೆದು ಜನರಿಗೆ ಮೋಸ ಮಾಡಿ ಬಡ್ಡಿ ವ್ಯವಹಾರ ಮಾಡುತ್ತಿರುತ್ತಾರೆ. ಅದರಂತೆ ನಾನು ಸಹ ಸದರಿಯವರ ಹತ್ತಿರ  ಹಣದ ಅಡಚಣೆಯಿಂದ ಹಣವನ್ನು ಪಡೆದುಕೊಂಡು  ಪಡೆದುಕೊಂಡ ಹಣ ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು  ಮರಳಿಕೊಟ್ಟರು ಸಹ ಇನ್ನೂ ಬಡ್ಡಿ ಹಣ ಬರಬೇಕು ಅಂತ ನನಗೆ ಪಿಡಿಸುತ್ತಿರುತ್ತಾರೆ ಆದ್ದರಿಂದ ಸದರಿ ಸಿದ್ದಪ್ಪ ಲಾಳಸಂಗಿ ಹಾಗೂ ಅವರ ತಮ್ಮಂದಿರಾದ ಶರಣಪ್ಪ, ಪುಂಡಪ್ಪ ಕೃಷ್ಣಪ್ಪ  ಇವರ ಮೇಲೆ ಕಾನುನು ಕ್ರಮ ಜರೂಗಿಸಬೇಕೆಂದು ಹೇಳಿ ಟೈಪ ಮಾಡಿಸಿದ ಹೇಳಿಕೆಪ್ರಕಾರ ಪ್ರಕರಣ ದಾಖಲಾಗಿರುತ್ತದೆ .
ಅಫಜಲಪೊರ ಠಾಣೆ : ದಿನಾಂಕ 19-08-2015 ರಂದು 06:40 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಸೊನ್ನ ಗ್ರಾಮದ ಬೀಮಾನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣಾ ಸಿಬ್ಬಂದಿ ಜನರಾದ ಸುರೇಶ ಪಿಸಿ-801,ಆನಂದ ಪಿಸಿ-1258, ಜಗನ್ನಾಥಪಿಸಿ-530,ವಿಠ್ಠಲ ಸಿಪಿಸಿ-820 ರವರನ್ನು ತಿಳಿಸಿ ಪಂಚರಾದ 1) ಚಂದಪ್ಪ ತಂದೆ ರಮೇಶ ಕೊಳಗೇರಿ 2) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ನಾನು ಹಾಗೂ ನಮ್ಮ ಸಿಬ್ಬಂದಿಯವರು ಕೂಡಿಕೊಂಡು ಠಾಣೆಯ  ಜಿಪಿನಲ್ಲಿ 06:50 ಪಿ.ಎಮ್ ಕ್ಕೆ ಹೊರಟು 07:15 ಪಿ ಎಮ್ ಕ್ಕೆ ಸೊನ್ನ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಎರಡು ಟಿಪ್ಪರಗಳು ಬರುತ್ತಿದ್ದವು. ಸದರಿ ಟಿಪ್ಪರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟಿಪ್ಪರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟಿಪ್ಪರಗಳಿದ್ದು, ಅವುಗಳನ್ನು ಚೆಕ್ ಮಾಡಿ ನೋಡಲು ಸದರಿ ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1)ಟಾಟಾ ಕಂಪನಿಯ ಟಿಪ್ಪರ ಇದ್ದು ನಂ ಕೆಎ-28 ಸಿ-0088 2) ಅಶೋಕ ಲ್ಯಾಲಾಂಡ ಕಪಂನಿಯ ಟಿಪ್ಪರ ಇದ್ದು  ನಂ ಕೆಎ-32 ಸಿ-2341 ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ 07:20 ಪಿ ಎಮ್ ದಿಂದ 08:20 ಪಿ ಎಮ್ ವರೆಗೆ ನಮ್ಮ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟಿಪ್ಪರಗಳನ್ನು  ನಮ್ಮ ಸಿಬ್ಬಂದಿಯವರ ಸಹಾಯದಿಂದ ಮರಳಿ ಠಾಣೆಗೆ ಬಂದು ಸದರಿ ಮರಳು ತುಂಬಿದ ಎರಡು ಟಿಪ್ಪರ ಹಾಗೂ ಟಿಪ್ಪರ ಚಾಲಕರ ಮೇಲೆ ಕಾನೂನು ಕ್ರಮ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ . 

No comments: