POLICE BHAVAN KALABURAGI

POLICE BHAVAN KALABURAGI

02 July 2015

KAlburagi District Reported Crimes

ಸಾಲದ ಭಾದೆ ತಾಳಲಾರದೆ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಕುರಕುಂಟಾ ಠಾಣೆ : ಶ್ರೀಮತಿ ಎಂಕಟಮ್ಮ  ಗಂಡ ನಾಗೇಂದ್ರಪ್ಪಾ ತಳವಾರ ಸಾ|| ಯಡ್ಡಳ್ಳಿ ಗ್ರಾಮ ಇವರ ಗಂಡ ಹಾಗೂ ನನ್ನ ಗಂಡನ ಮೊದಲನೆ ಹೆಂಡತಿ ಮಗನಾದ ನರಸಪ್ಪ ಇಬ್ಬರೂ ಕೂಡಿ ಒಕ್ಕಲುತನ ಕೆಲಸ ಮಾಡುತ್ತಾರೆ ನಮಗೆ ಎಂಟು ಎಕರೆ ಜಮೀನು ಇದ್ದು ಬೆರೆಯವರ ಹೊಲವನ್ನು ಪಾಲಿನಿಂದ ಮಾಡಿಕೊಂಡು ಉಪ-ಜೀವನ ಸಾಗಿಸುತ್ತಿದ್ದೆವು. ಈಗ ಮೂರು ವರ್ಷಗಳಿಂದ ಮೂರುನಾಲ್ಕು ಲಕ್ಷ  ರೂಪಾಯಿ ಸಾಲ ಆಗಿದ್ದು ಅದನ್ನು ತೀರಿಸುವ ಸಲುವಾಗಿ ಬೆಂಗಳೂರಿಗೆ ಹೋದರೂ ಕೂಡಾ ಸಾಲ ತಿರಿಸಲು ಆಗದೇ ಸಾಲ ಬೇಳೆಯುತ್ತಾ ಹೋಗಿದ್ದು ನನ್ನ ಗಂಡನಿಗೆ ಸಾಲ ಮುಟ್ಟಿಸಲು ಆಗದ ಕಾರಣ ನಿನ್ನೆ ಊಟ ಮಾಡಿ ಮಲಗುವ ಮುನ್ನಾ ವಿಷ ಸೇವನೆ ಮಾಡಿ ಮಲಕೊಂಡಾಗ ರಾತ್ರಿ 12 ಗಂಟೆಗೆ ವಾಂತಿ ಮಾಡುಕೊಳ್ಳುವಾಗ  ನಾನು ಎನಾಯಿತ್ತು ಅಂತಾ ಕೇಳಲು ತಾನು ವಿಷ ಸೇವನೆ ಮಾಡಿದ್ದೆನೆ ಅಂತಾ ಹೇಳಿದಾಗ ನಾಗಪ್ಪ, ನರಸಪ್ಪ, ಜಗಪ್ಪ,ಬಸಪ್ಪ ಎಲ್ಲರೂ ಕೂಡಿಕೊಂಡು ಒಂದು ಜೀಪನಲ್ಲಿ ಸರಕಾರಿ ಅಸ್ಪತ್ರೆ ಸೇಡಂ ಕ್ಕೆ ತಂದು ಸೇರಿಕೆ ಮಾಡಿದ್ದು ದಿನಾಂಕ:- 01-07-2015 ರಂದು ಮುಂಜಾನೆ ಉಪಚಾರ ಫಲಕಾರಿಯಾಗದೇ ನನ್ನ ಗಂಡ ಮೃತಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ  23.06.2015  23:00 ಗಂಟೆಯಿಂದ 24-06-2015 ರ  6 ಗಂಟೆಯ ಮಧ್ಯದ ಅವಧಿಯಲ್ಲಿ   ಗೂಡೂರ (ಎಸ್.ಎ) ರಕಾರಿ ಪ್ರೌಡ ಶಾಲೆಯ ಕೊಣೆಯ ಬಾಗಿಲ ಕೀಲಿ ಮುರಿದು ಬಿಸಿಯೂಟ ಕೊಣೆಯಲ್ಲಿನ 13 ಕ್ವಿಂಟಾಲ್ 25 ಕೆ.ಜಿ ಅಕ್ಕಿ ಅಂ.ಕಿ 3900/-,2) 1 ಕ್ವಿಂಟಾಲ್ 65 ಕೆ.ಜಿ ಗೋಧಿ ಅಂ.ಕಿ 1980/- 3) 70 ಕೆ.ಜಿ ಬೇಳೆ ಅಂ.ಕಿ 7500/- 4) 30 ಎಣ್ಣೇ ಪಾಕೇಟುಗಳು ಅಂ.ಕಿ 1950/- 5) 50 ಕೆ.ಜಿ ಗೋಧಿ ರವ ಅಂ.ಕಿ 1500/- 6) 1 ಸ್ಟೀಲ್ ನಳದ ಪಾತ್ರೆ ಅಂ.ಕಿ 1೦೦೦/- 7) 1 ಸ್ಟೀಲ್ ಬುಟ್ಟಿ ಅಂ.ಕಿ 280/- 8) 1 ಬೋಗಣಿ ಅಂ.ಕಿ 1290/- 9) 30 ಊಟದ ಪ್ಲೇಟ್ ಅಂ.ಕಿ 3400/- 10) 12 ಸ್ಟೀಲ್ ಗ್ಲಾಸ್ ಅಂ.ಕಿ 480/- 11) 1 ಚಹಾದ ಕಿಟ್ಲಿ ಅಂ.ಕಿ 300/- 12) 1 ಗೋಡೆಯ ಗಡಿಯಾರ್ ಅಂ.ಕಿ 320/- 13) 3 ಕೆ.ಜಿ ಹಾಲಿನ ಪುಡಿ ಅಂ.ಕಿ 600/- ಹೀಗೆ ಒಟ್ಟು 24.500/- ರೂ ಕಿಮ್ಮತ್ತಿನ ಸಾಮಗ್ರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ ಸುಮೀತ್ರಾ. ಬಿ ಪಾಟೀಲ, ಮುಖ್ಯ ಗುರುಗಳು  ಸರಕಾರಿ ಪ್ರೌಡ ಶಾಲೆ ಗೂಡೂರ (ಎಸ್.ಎ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸೇಖರಿಸುತ್ತಿದ್ದ ಹಿಟ್ಯಾಚ ಜಪ್ತಿ :
ಜೇವರ್ಗಿ ಠಾಣೆ : ದಿನಾಂಕ: 1.07.2015 ರಂದು 09:00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ  01-07-2015 ರಂದು ಬೆಳಗ್ಗೆ 06-30 ಗಂಟೆಗೆ ಕೋನ ಹಿಪ್ಪರಗಾ ಸಿಮಾಂತರದ ಭಿಮಾ ನದಿಯ ದಂಡೆಯಲ್ಲಿ Hitachi EX 110 Hydralyc Excavator Sr. No 1101 6459 ನೇದ್ದರ ಚಾಲಕನು ಯಾವುದೆ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಭಿಮಾ ನದಿಯಿಂದ ಕಳ್ಳತನದಿಂದ ಮರಳು ಒಂದು ಕಡೆಗೆ ಶೇಖರಿಸುತ್ತಿರುವಾಗ ದಾಳಿ ಮಾಡಿ ಹಿಡಿಯುವಸ್ಟರಲ್ಲಿ ಅವನು ಅಲ್ಲಿಂದ ಓಡಿ ಹೋಗಿದ್ದು ಕಾರಣ ಯಾವುದೆ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಮರಳನ್ನು ಅಕ್ರಮವಾಗಿ ಶೇಖರಣೆ ಮಾಡಿ ಸಂಭಂದ ಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ಮೋಸ ಮಾಡುತ್ತದಿದ್ದ ಹಿಟಾಚಿ ಮತ್ತು ಅದರ ಚಾಲಕನ ವಿರುದ್ಧ ಕಾನೂನು ಕ್ರಮಕೈಕೊಳ್ಳಬೇಕು ಅಂತಾ ಶ್ರೀ ಮಹಾಂತಪ್ಪ ಹುಗಾರ ಗ್ರಾಮ ಲೇಖಪಾಲಕರು ಕೂಡಿ ಸಾ : ಹರವಾಳ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

01 July 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 28-06-2015 ರಂದು ಮುಂಜಾನೆ ಈರಫಾನ್ ಈತನು ತನ್ನ ಮೋಟಾರು ಸೈಕಲ್ ನಂ ಕೆ.53ವ್ಹಿ6331 ನೇದ್ದರ ಮೇಲೆ ತನ್ನ ತಾಯಿಗೆ ಕೂಡಿಸಿಕೊಂಡು ಜೇವರಗಿ ಶಹಾಪುರ ರೋಡ ಮಾರಡಗಿ ಕ್ರಾಸ್ ಹತ್ತಿರ  ತಿರುವಿನ ರೋಡಿನಲ್ಲಿ ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರು ಸೈಕಲ್ ಸ್ಕೀಡಾಗಿ ಬಿದ್ದು ಅಪಘಾತ ಪಡಿಸಿ ಗಾಯಗೊಳಿಸಿರುತ್ತಾರೆ ಅಂತಾ ಶ್ರೀ ಬಂದಗಿ ಪಟೇಲ ತಂದೆ ಉಸ್ಮಾನ ಪಟೇಲ ಸಾಃ ಮೂದಬಾಳ  ( )  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ ರಶೀದ ತಂದೆ ಬಾಸುಮಿಯಾ ಮದ್ರಾಸವಾಲೆ ಸಾ|| ಚಾಣುಕ್ಯಬಾರ ಹಿಂದುಗಡೆ ಕಲಬುರಗಿ ರವರು ದಿನಾಂಕ 29-06-2015 ರಂದು ರಾತ್ರಿ ಮನೆಗೆ ಬಂದಾಗ ನನ್ನ ಹೆಂಡತಿ ಮಕ್ಕಳಿಗೆ ಬೈಯುತ್ತಿದ್ದಳು ಆಗ ನನ್ನ ತಂಗಿಯ ಮಗಳಾದ ಫರ್ಜಾನ ಇವಳು ಬಂದಿದ್ದು ಏಕೆ ನಮ್ಮ ತಾಯಿ ತಂದೆಗೆ ಬೈಯುತ್ತಿದ್ದಿರಿ ಅಂತಾ ಬಾಡಕಾವ ಅಂತಾ  ವಗೈರೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು ಅಗ ನಮ್ಮ ತಂಗಿ ಸಾಬೇರಾ ಇವಳು ಏ ಬಾಡಕಾವ ಕಾ ಜಾದ ಹೋಗಯಾ ಅಂತಾ ಕಲ್ಲು ತೆಗೆದುಕೊಂಡು ಬಲಟೊಂಕಕ್ಕೆ ಹೊಡೆದಳು ನನ್ನ ತಂಗಿ ಗಂಡ ಸಲೀಮ ಇತನು ಬೋಸಡಿ ಮಗನದು ಸಾಕಾಗಿದೆ ಅಂತಾ ಒಂದು ಕಲ್ಲಿನಿಂದ ಎಡಟೊಂಕದ ಮೇಲೆ ಹೊಡೆದು ಪರ್ಜಾನ ಮತ್ತು ರೂಬೀನಾ ಇವರು ಕೈಯಿಂದ ಎದೆಯ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾಋಆಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಫರ್ಜನಾ ಗಂಡ ಫಾರೂಖ ಸೈಯದ ಸಾ|| ಚಾಣುಕ್ಯಬಾರ ಹಿಂದುಗಡೆ ಕಲಬುರಗಿ ರವರು ದಿನಾಂಖ 29-06-2015 ರಂದು ರಾತ್ರಿ ನನ್ನ ತಂದೆ ತಾಯಿಯೊಂದಿಗೆ ಮಾತಾಡಲು ಮನೆಗೆ ಹೋದಾಗ ಅಲ್ಲಿ ನನ್ನ ಸೋದರ ಮಾವನಾದ ರಶೀದ ಇತನು ನಮ್ಮ ತಂದೆ ತಾಯಿಯವರಿಗೆ ತೇರಿ ಭಹನಬೋಸಡಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು ಆಗ ನಾನು ಯಾಕೆ ನಮ್ಮ ತಂದೆ ತಾಯಿಯವರಿಗೆ ಬೈಯುತ್ತಿದ್ದಿರಿ ಅಂತಾ ಕೆಳಲು ಅವನು ಆಯೇ ರಾಂಡಕಿ ಬೇಟಿ ಚುದಾನೆಕೋ ಅಂತಾ ಅಲ್ಲಿಯೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ಹೊಡೆಯಲು ಆ ಕಲ್ಲು ನನ್ನ ಎಡಗಡೆ ತಲೆಗೆ ಹತ್ತಿ ರಕ್ತಗಾಯ ಆಗಿದ್ದು ತಾಹೇರಾ ಇವಳು ಕೈಯಿಂದ ಹೊಟ್ಟೆಯಲ್ಲಿ ಬೆನ್ನಿನ ಮೇಲೆ ಹೊಡೆದಳು ಗುಲಾಬ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದಿರುತ್ತಾನೆ ಜಿಲಾನ ಇತನು ಏ ರಾಂಡಕೆ ಬೇಟಿಕಾ ಬಹುತ ಹೋಗಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ರೇವೂರ ಠಾಣೆ : ದಿನಾಂಕಃ29/06/2015 ರಂದು ಶ್ರೀ ಶರಣಬಸಪ್ಪಾ ತಂದೆ ರಾಜಕುಮಾರ ದಂಡೋತಿ ಸಾ : ಅಂಕಲಗಾ ರವರ ತಮ್ಮನಾದ ಶ್ರೀಮಂತ ಹಾಗೂ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ಇಬ್ಬರ ಮದ್ಯ ಸುಮಾರು 2-3 ತಿಂಗಳ ಹಿಂದೆ ಜಗಳ ವಾಗಿದ್ದು ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ  ಈತನು ನನ್ನ ತಮ್ಮನ ಮೇಲೆ ಹಗೆತನ ಸಾಗಿಸಿಕೊಂಡು ಬಂದಿರುತ್ತಾನೆ. ದಿನಾಂಕಃ 28/06/2015 ರಾತ್ರಿ 2 ಗಂಟೆ ಸುಮಾರಿಗೆ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ರವರ ಟ್ರಾಕ್ಟರ ಇಂಜನ ಭಾಗಕ್ಕೆ ಬೆಂಕಿ ಹತ್ತಿ ಸುಟ್ಟಿದ್ದು ದಿನಾಂಕ 29-06-2015 ರಂದು ನಾನು ಹಾಗೂ ನನ್ನ ತಂದೆ ಹಾಗೂ ನನ್ನ ತಮ್ಮಂದಿರಾದ ಶ್ರೀಮಂತ ಹಾಗೂ ಬಸವರಾಜ ಎಲ್ಲರೂ ಬಸ್ಸ್ ನಿಲ್ದಾಣದ ಹತ್ತಿರ ನಿಂತಾಗ ಅಲ್ಲೆ ಬಸ್ಸ ನಿಲ್ದಾಣ ಹತ್ತಿರ ನಿಂತಿದ್ದ  ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ  ಹಾಗೂ ಆತನ ತಮ್ಮ ಶಂಕರ ಇಬ್ಬರೂ ತಮ್ಮ ಟ್ರಾಕ್ಟರ ಸುಟ್ಟ ಬಗ್ಗೆ ನಮ್ಮ ತಮ್ಮ ಶ್ರೀಮಂತ ಮೇಲೆ ಯಾಸಿದಿಗಡಿಯಾಗಿ ಮಾತನಾಡುತ್ತಿದ್ದರು ಆಗ ಶ್ರೀಮಂತನು  ನನ್ನ ಮೇಲೆ ವಿನಾ ಕಾರಣ ಸುಳ್ಳು ಅಪವಾದ ಮಾಡತ್ತಿರಾ  ಅಂತಾ ಕೇಳಿದಾಗ ಹಳೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶರಣಪ್ಪನು ಏ ರಂಡಿ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ  ನಿನ್ನ ಜೀವ ಹೊಡೆದು ಬಿಡುತ್ತೇವೆ ಅಂತಾ ಅಂದು ಎದೆಯ ಮೇಲಿನ ಅಂಗಿ ಹಿಡಿದು ಏಳೆದಾಡುತ್ತಿರುವಾಗ ಶಂಕರ ಈತನು ಅಲ್ಲೆ ಬಿದ್ದಿದ ಬಡಿಗೆಯನ್ನು ತೆಗೆದುಕೊಂಡು ಶ್ರೀಮಂತನ ತಲೆಯ ಹಿಂಭಾಗಕ್ಕೆ ಹೋಡೆದು ಭಾರಿ ರಕ್ತಗಾಯ ಮಾಡಿದನು. ಆಗ ನಾನು ನನ್ನ ತಂದೆ, ತಮ್ಮ ಬಸವರಾಜ ಎಲ್ಲರೂ ಏಕೆ ಹೊಡೆಯುತ್ತಿದ್ದರಿ ಅಂತಾ ಕೇಳಲು ಹೋದಾಗ ಶರಣು ಪಡಶಟ್ಟಿರವರ ತಮ್ಮನಾದ ಸಿದ್ರಾಮಪ್ಪಾ. ಹಾಗೂ ಅವರ ಅಣ್ಣತಮ್ಮಕಿಯವರಾದ, ರುದ್ರಪ್ಪ ತಂದೆ ಗಣಪತಿ ಪಡಶೇಟ್ಟಿ, ಶಿವಲಿಂಗಪ್ಪಾ ತಂದೆ ದತ್ತು ಪಡಶೇಟ್ಟಿ, ಹಾಗೂ ಅಶೋಕ ತಂದೆ ರುದ್ರಪ್ಪಾ ಗಿಲಕಿ, ಮಲ್ಲು ತಂದೆ ಸಿದ್ರಾಮಪ್ಪಾ ಗಿಲಕಿ ಎಲ್ಲರೂ  ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಈ ರಂಡಿ ಮಕ್ಕಳ ಸೋಕ್ಕು ಬಹಳ ಆಗ್ಯಾದ ಇವರಿಗೆ  ಇವತ್ತು  ಕೋಲೆ ಮಾಡಿಬಿಡೋಣ ಅಂತಾ ಅನ್ನುತಾ ಬಂದು ಅವರಲ್ಲಿ ಸಿದ್ರಾಮಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಶ್ರೀಮಂತನ ತಲೆಯ ಮಧ್ಯ ಭಾಗದಲ್ಲಿ ಹೋಡೆದು ಭಾರಿ ರಕ್ತಗಾಯ ಮಾಡಿ ಈ ಸೂಳೆ ಮಕ್ಕಳಿಗೆ ಬಿಡಬ್ಯಾಡರಿ  ಖಲಾಸ ಮಾಡ್ರಿ ಅಂತಾ  ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 27.06.2015 ರಂದು ರಾತ್ರಿ ಶ್ರೀಮತಿ ನಾಗಮ್ಮ ಗಂದೆ ರಾಯಪ್ಪ ನಾಯ್ಕೊಡಿ ಸಾಃ ರಾಂಪೂರ  ರವರು ನನ್ನ ಗಂಡ ಮತ್ತು ಮಕ್ಕಳು ನಮ್ಮ ಮನೆಯ ಎದುರು ಸ್ಥಳದಲ್ಲಿ ಇದ್ದಾಗ ನಮ್ಮ ಎರಡನೆ ಅಣ್ಣತಮ್ಮಕಿಯವರಾದ ಶಂಕ್ರೇಪ್ಪ ತಂದೆ ಸುಬಾಷ ಬೆಂಗಳೂರ [ನಾಯ್ಕೊಡಿ] ಸಂಗಡ 4 ಜನರು  ಕೂಡಿಕೊಂಡು ಹಿಂದಿನ ಹಳೇ ದ್ವೇಷದಿಂದ ನಮ್ಮೊಂದಿಗೆ ಜಗಳ ಮಾಡಿ ಅವಾಚ್ಯವಾಗಿ ಬೈಯ್ದು, ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ತಡೆದು ನಿಲ್ಲಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ತಳ್ಳೋಳಿ ಸಾ: ಪ್ಲಾಟ ನಂ. 41 ಮಿಸ್ಬಾನಗರ ಎಮ್.ಎಸ್.ಕೆ. ಮಿಲ್ ರಿಂಗ ರಸ್ತೆ ಕಲಬುರಗಿ ಇವರು ತನ್ನ ತಂದೆಯವರಾದ ಶಿವಶರಣಪ್ಪ ತಳ್ಳೋಳಿ ಇವರು ನನಗೆ ಬಜಾಜ ಪ್ಲಾಟಿನಾ ದ್ಚಿಚಕ್ರ ವಾಹನ ನಂ. KA-32 V-6827 ಕಪ್ಪು ಬಣ್ಣದು ಮಾಡಲ್ 2009, Engine No. DUMBSAA2203 CHESSI NO: MD2DDDZZZSWB17209 ನೇದ್ದನ್ನು ಖರೀಧಿಸಿ ಕೊಟ್ಟಿದ್ದು ಅದನ್ನು ನಾನು ಉಪಯೊಗಿಸುತ್ತಾ ಬಂದಿದ್ದು ದಿನಾಂಕ 28.06.2015 ರಂದು ಸಾಯಂಕಾಲ 4 ಗಂಟೆಗೆ ಸೂಪರ ಮಾರ್ಕೇಟ ಎಸಿಯನ್ ಕಾಂಪ್ಲೇಸ್ಸಿನ ಪಿಲಿಪ್ಸಎಜೆನಸಿಜ ಸರ್ವಿಸದಲ್ಲಿ ಕೆಲಸ ವಿದ್ದ ಪ್ರಯುಕ್ತ ನಾನು ನನ್ನ ವಾಹನವನ್ನು ಎಸಿಯನ್ ಕಾಂಪ್ಲೇಕ್ಸ ಎದುರುಗಡೆ ನಿಲ್ಲಿಸಿ ಆಫೀಸದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಮರಳಿ 5 ಗಂಟೆಗೆ ಬಂದು ನೋಡುವಷ್ಠರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿಚಕ್ರ ವಾಹನ ಇರಲಿಲ್ಲಾ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.ಅದರ ಅಂದಾಜು ಕಿಮ್ಮತ್ತು 31,000/- ರೂ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 6.00 ಗಂಟೆಗೆ ಗ್ರಾಮ ಲೆಕ್ಕಿಗರ ಭವನ ಹತ್ತಿರ ಕಂದಾಯ ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು ಅಫಜಲಪೂರ ಇವರು ಟಿಪ್ಪರ ನಂ ಕೆಎ-32 ಸಿ-0413 ಟಿಪ್ಪರನ್ನು ತಡೆದು ವಿಚಾರಣೆ  ಮಾಡಲಾಗಿ ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿ ಅಧಿಕೃತ ದಾಖಲಾತಿಗಳು ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ ಎಂದು ಕಂಡು ಬಂದ ಕಾರಣ ಕಂದಾಯ ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿ ಪಂಚನಾಮೆಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಜಲಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 7.30 ಗಂಟೆಗೆ ಅಮೋಘಿಸಿದ್ದ ಹತ್ತಿರ ಕಂದಾಯ ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು ಅಫಜಲಪೂರ ಇವರು ಟಿಪ್ಪರ ನಂ ಕೆಎ-32 ಸಿ-3429  ಟಿಪ್ಪರನ್ನು ತಡೆದು ವಿಚಾರಣೆ  ಮಾಡಲಾಗಿ ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿ ಅಧಿಕೃತ ದಾಖಲಾತಿಗಳು ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ ಎಂದು ಕಂಡು ಬಂದ ಕಾರಣ ಕಂದಾಯ ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿಕೊಂಡು ಪಂಚನಾಮೆಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.