ಹಲ್ಲೆ ಪ್ರಕರಣಗಳು :
ರೇವೂರ ಠಾಣೆ : ದಿನಾಂಕಃ29/06/2015 ರಂದು ಶ್ರೀ ಶರಣಬಸಪ್ಪಾ ತಂದೆ ರಾಜಕುಮಾರ ದಂಡೋತಿ ಸಾ :
ಅಂಕಲಗಾ ರವರ ತಮ್ಮನಾದ ಶ್ರೀಮಂತ ಹಾಗೂ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ಇಬ್ಬರ ಮದ್ಯ
ಸುಮಾರು 2-3 ತಿಂಗಳ ಹಿಂದೆ ಜಗಳ ವಾಗಿದ್ದು ಶರಣಪ್ಪಾ
ತಂದೆ ಚನ್ನಪ್ಪಾ ಪಡಶೇಟ್ಟಿ ಈತನು ನನ್ನ ತಮ್ಮನ
ಮೇಲೆ ಹಗೆತನ ಸಾಗಿಸಿಕೊಂಡು ಬಂದಿರುತ್ತಾನೆ. ದಿನಾಂಕಃ 28/06/2015 ರಾತ್ರಿ 2 ಗಂಟೆ ಸುಮಾರಿಗೆ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ರವರ
ಟ್ರಾಕ್ಟರ ಇಂಜನ ಭಾಗಕ್ಕೆ ಬೆಂಕಿ ಹತ್ತಿ ಸುಟ್ಟಿದ್ದು ದಿನಾಂಕ 29-06-2015 ರಂದು ನಾನು ಹಾಗೂ
ನನ್ನ ತಂದೆ ಹಾಗೂ ನನ್ನ ತಮ್ಮಂದಿರಾದ ಶ್ರೀಮಂತ ಹಾಗೂ ಬಸವರಾಜ ಎಲ್ಲರೂ ಬಸ್ಸ್ ನಿಲ್ದಾಣದ ಹತ್ತಿರ
ನಿಂತಾಗ ಅಲ್ಲೆ ಬಸ್ಸ ನಿಲ್ದಾಣ ಹತ್ತಿರ ನಿಂತಿದ್ದ
ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ
ಹಾಗೂ ಆತನ ತಮ್ಮ ಶಂಕರ ಇಬ್ಬರೂ ತಮ್ಮ ಟ್ರಾಕ್ಟರ ಸುಟ್ಟ ಬಗ್ಗೆ ನಮ್ಮ ತಮ್ಮ ಶ್ರೀಮಂತ
ಮೇಲೆ ಯಾಸಿದಿಗಡಿಯಾಗಿ ಮಾತನಾಡುತ್ತಿದ್ದರು ಆಗ ಶ್ರೀಮಂತನು ನನ್ನ ಮೇಲೆ ವಿನಾ ಕಾರಣ ಸುಳ್ಳು ಅಪವಾದ
ಮಾಡತ್ತಿರಾ ಅಂತಾ ಕೇಳಿದಾಗ ಹಳೆ ದ್ವೇಷವನ್ನು
ಮನಸ್ಸಿನಲ್ಲಿ ಇಟ್ಟುಕೊಂಡು ಶರಣಪ್ಪನು ಏ ರಂಡಿ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ ನಿನ್ನ ಜೀವ ಹೊಡೆದು ಬಿಡುತ್ತೇವೆ ಅಂತಾ ಅಂದು ಎದೆಯ
ಮೇಲಿನ ಅಂಗಿ ಹಿಡಿದು ಏಳೆದಾಡುತ್ತಿರುವಾಗ ಶಂಕರ ಈತನು ಅಲ್ಲೆ ಬಿದ್ದಿದ ಬಡಿಗೆಯನ್ನು
ತೆಗೆದುಕೊಂಡು ಶ್ರೀಮಂತನ ತಲೆಯ ಹಿಂಭಾಗಕ್ಕೆ ಹೋಡೆದು ಭಾರಿ ರಕ್ತಗಾಯ ಮಾಡಿದನು. ಆಗ ನಾನು ನನ್ನ
ತಂದೆ, ತಮ್ಮ ಬಸವರಾಜ ಎಲ್ಲರೂ ಏಕೆ
ಹೊಡೆಯುತ್ತಿದ್ದರಿ ಅಂತಾ ಕೇಳಲು ಹೋದಾಗ ಶರಣು ಪಡಶಟ್ಟಿರವರ ತಮ್ಮನಾದ ಸಿದ್ರಾಮಪ್ಪಾ. ಹಾಗೂ ಅವರ
ಅಣ್ಣತಮ್ಮಕಿಯವರಾದ, ರುದ್ರಪ್ಪ ತಂದೆ ಗಣಪತಿ
ಪಡಶೇಟ್ಟಿ, ಶಿವಲಿಂಗಪ್ಪಾ ತಂದೆ ದತ್ತು ಪಡಶೇಟ್ಟಿ, ಹಾಗೂ ಅಶೋಕ ತಂದೆ ರುದ್ರಪ್ಪಾ ಗಿಲಕಿ, ಮಲ್ಲು ತಂದೆ ಸಿದ್ರಾಮಪ್ಪಾ ಗಿಲಕಿ ಎಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಈ
ರಂಡಿ ಮಕ್ಕಳ ಸೋಕ್ಕು ಬಹಳ ಆಗ್ಯಾದ ಇವರಿಗೆ
ಇವತ್ತು ಕೋಲೆ ಮಾಡಿಬಿಡೋಣ ಅಂತಾ
ಅನ್ನುತಾ ಬಂದು ಅವರಲ್ಲಿ ಸಿದ್ರಾಮಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಶ್ರೀಮಂತನ ತಲೆಯ
ಮಧ್ಯ ಭಾಗದಲ್ಲಿ ಹೋಡೆದು ಭಾರಿ ರಕ್ತಗಾಯ ಮಾಡಿ ಈ ಸೂಳೆ ಮಕ್ಕಳಿಗೆ ಬಿಡಬ್ಯಾಡರಿ ಖಲಾಸ ಮಾಡ್ರಿ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 27.06.2015 ರಂದು ರಾತ್ರಿ ಶ್ರೀಮತಿ ನಾಗಮ್ಮ ಗಂದೆ ರಾಯಪ್ಪ ನಾಯ್ಕೊಡಿ ಸಾಃ
ರಾಂಪೂರ ರವರು ನನ್ನ ಗಂಡ ಮತ್ತು ಮಕ್ಕಳು ನಮ್ಮ
ಮನೆಯ ಎದುರು ಸ್ಥಳದಲ್ಲಿ ಇದ್ದಾಗ ನಮ್ಮ ಎರಡನೆ ಅಣ್ಣತಮ್ಮಕಿಯವರಾದ ಶಂಕ್ರೇಪ್ಪ ತಂದೆ ಸುಬಾಷ ಬೆಂಗಳೂರ [ನಾಯ್ಕೊಡಿ]
ಸಂಗಡ 4 ಜನರು ಕೂಡಿಕೊಂಡು ಹಿಂದಿನ ಹಳೇ ದ್ವೇಷದಿಂದ ನಮ್ಮೊಂದಿಗೆ ಜಗಳ ಮಾಡಿ ಅವಾಚ್ಯವಾಗಿ
ಬೈಯ್ದು, ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ತಡೆದು ನಿಲ್ಲಿಸಿ
ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ತಳ್ಳೋಳಿ ಸಾ: ಪ್ಲಾಟ ನಂ. 41 ಮಿಸ್ಬಾನಗರ ಎಮ್.ಎಸ್.ಕೆ. ಮಿಲ್ ರಿಂಗ ರಸ್ತೆ ಕಲಬುರಗಿ
ಇವರು ತನ್ನ ತಂದೆಯವರಾದ ಶಿವಶರಣಪ್ಪ ತಳ್ಳೋಳಿ ಇವರು ನನಗೆ ಬಜಾಜ ಪ್ಲಾಟಿನಾ ದ್ಚಿಚಕ್ರ ವಾಹನ ನಂ.
KA-32 V-6827 ಕಪ್ಪು ಬಣ್ಣದು ಮಾಡಲ್ 2009, Engine No. DUMBSAA2203 CHESSI NO:
MD2DDDZZZSWB17209 ನೇದ್ದನ್ನು ಖರೀಧಿಸಿ
ಕೊಟ್ಟಿದ್ದು ಅದನ್ನು ನಾನು ಉಪಯೊಗಿಸುತ್ತಾ ಬಂದಿದ್ದು ದಿನಾಂಕ 28.06.2015 ರಂದು ಸಾಯಂಕಾಲ 4 ಗಂಟೆಗೆ ಸೂಪರ ಮಾರ್ಕೇಟ ಎಸಿಯನ್ ಕಾಂಪ್ಲೇಸ್ಸಿನ
ಪಿಲಿಪ್ಸಎಜೆನಸಿಜ ಸರ್ವಿಸದಲ್ಲಿ ಕೆಲಸ ವಿದ್ದ ಪ್ರಯುಕ್ತ ನಾನು ನನ್ನ ವಾಹನವನ್ನು ಎಸಿಯನ್
ಕಾಂಪ್ಲೇಕ್ಸ ಎದುರುಗಡೆ ನಿಲ್ಲಿಸಿ ಆಫೀಸದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಮರಳಿ 5 ಗಂಟೆಗೆ ಬಂದು ನೋಡುವಷ್ಠರಲ್ಲಿ ನಾನು ನಿಲ್ಲಿಸಿದ
ಸ್ಥಳದಲ್ಲಿ ನನ್ನ ದ್ವಿಚಕ್ರ ವಾಹನ ಇರಲಿಲ್ಲಾ. ಯಾರೋ ಕಳ್ಳರು ಕಳವು ಮಾಡಿಕೊಂಡು
ಹೋಗಿರುತ್ತಾರೆ.ಅದರ ಅಂದಾಜು ಕಿಮ್ಮತ್ತು 31,000/- ರೂ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 6.00 ಗಂಟೆಗೆ ಗ್ರಾಮ ಲೆಕ್ಕಿಗರ ಭವನ ಹತ್ತಿರ ಕಂದಾಯ ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು
ಅಫಜಲಪೂರ ಇವರು ಟಿಪ್ಪರ ನಂ ಕೆಎ-32 ಸಿ-0413 ಟಿಪ್ಪರನ್ನು ತಡೆದು ವಿಚಾರಣೆ ಮಾಡಲಾಗಿ
ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು
ತಿಳಿಸಲಾಗಿ ಅಧಿಕೃತ ದಾಖಲಾತಿಗಳು ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ
ಎಂದು ಕಂಡು ಬಂದ ಕಾರಣ ಕಂದಾಯ ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿ ಪಂಚನಾಮೆಯನ್ನು
ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಜಲಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 7.30 ಗಂಟೆಗೆ ಅಮೋಘಿಸಿದ್ದ ಹತ್ತಿರ ಕಂದಾಯ
ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು ಅಫಜಲಪೂರ ಇವರು ಟಿಪ್ಪರ ನಂ ಕೆಎ-32
ಸಿ-3429 ಟಿಪ್ಪರನ್ನು ತಡೆದು ವಿಚಾರಣೆ ಮಾಡಲಾಗಿ ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು
ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿ ಅಧಿಕೃತ ದಾಖಲಾತಿಗಳು
ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ ಎಂದು ಕಂಡು ಬಂದ ಕಾರಣ ಕಂದಾಯ
ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿಕೊಂಡು ಪಂಚನಾಮೆಯನ್ನು ತಂದು ಹಾಜರ
ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment