POLICE BHAVAN KALABURAGI

POLICE BHAVAN KALABURAGI

29 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ಅಫಜಪೂರ ಠಾಣೆ : ಶ್ರೀ ಶರಣಪ್ಪ ತಂದೆ ಭಿಮಶಾ ಲಾಳಸಂಗಿ ಸಾ ಕರಜಗಿ ರವರ ತಮ್ಮನಿಗು ಮತ್ತು ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರಿಗೆ ಬಸ್ಸ ನಿಲ್ದಾಣದಲ್ಲಿ ಕ್ರೋಜರಗಳು ಪಾಳಿ ನಿಲ್ಲಿಸುವ ವಿಚಾರದಲ್ಲಿ ತಕರಾರು ಆಗಿದ್ದು ಈರಪ್ಪ ಇವನು ನಮ್ಮ ತಮ್ಮನ ಮೇಲೆ ಹಗೆ ಸಾದಿಸುತ್ತಾ ಬಂದಿದ್ದು ದಿನಾಂಕ 28-06-2015 ರಂದು ಸಾಯಂಕಾಲ ನಾನು ಮತ್ತು ನಮ್ಮ ತಮ್ಮ ಸಿದ್ದಪ್ಪ ರವರು  ಕೂಡಿ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಅಲ್ಲಿ ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರು ಸಹ ಇದ್ದರು, ಆಗ ನಾನು ಅವನ ಹತ್ತಿರ ಹೋಗಿ ಯಾಕ ನಮ್ಮ ತಮ್ಮನ ಜೋತೆ ಜಗಳ ತೆಗೆದಿದಿ, ಅಂತಾ ಕೇಳಿದಾಗ, ಈರಪ್ಪ ಇವನು ನನಗೆ ಏನೋ ಸುಳಿಮಗನಾ  ನನಗೇನ ಕೇಳತಿ ನಿಮ್ಮ ತಮ್ಮನಿಗೆ ಹೇಳು ಅಂತಾ ಅಂದನು ಆಗ ನಾನು ಸರಿಯಾಗಿ ಮಾತಾಡು ಯಾಕ ಬೈತಿ ಅಂತಾ ಅಂದಾಗ, ನನಗೆ ಎದುರು ಮಾತಾಡತಿಯಾ ಮಗನಾ ಅಂತಾ ಅಂದು ನನ್ನ ಎದೆ ಮೇಲಿನ ಅಂಗಿ ಹಿಡಿದು ನನಗೆ ಕಪಾಳ ಮೇಲೆ ಹೊಡೆದನು ಆಗ ಅಲ್ಲೆ ಇದ್ದ 1] ಸೋಮಶೇಖರ ತಂದೆ ಗಂಗಾಧರ ನಾಯ್ಕೋಡಿ, 2] ಲಕ್ಷ್ಮಣ ತಂದೆ ಗಂಗಾಧರ ನಾಯ್ಕೋಡಿ, 3] ಸಿದ್ದಾರ್ಥ ತಂದೆ ಚಂದ್ರಕಾಂತ ನಾವಿ, 4] ಚಂದ್ರಕಾಂತ ನಾವಿ ರವರು ಓಡುತ್ತಾ ನಮ್ಮ ಹತ್ತಿರ ಬಂದು, ನಮಗೆ ಯಾಕೋ ಸೂಳಿ ಮಕ್ಕಳ್ಯಾ ನಮ್ಮ ತಮ್ಮನ ಜೋತೆ ಜಗಳಾ ಮಾಡತಿರಾ ಅಂತಾ ಅಂದು ನಮಗೆ ಹೊಡೆಯಲು ಬಂದರು, ಆಗ ಈರಪ್ಪ ಇವನು ಅಲ್ಲೆ ಬಿದ್ದಿದ ಒಂದು ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ನಂತರ ನನಗೆ ಕೆಳಗೆ ಕೆಡವಿ ಎಲ್ಲರು ಸೇರಿ ಕಾಲಿಲೆ ಒದ್ದಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಫಜಲಪೂರ ಠಾಣೆ : ಶ್ರೀ ಈರಪ್ಪಾ ತಂದೆ ಗಂಗಾಧರ ನಾಯ್ಕೊಡಿ ಸಾ : ಕರಜಗಿ ರವರು ನಮ್ಮೂರ ಬಸ್ ನಿಲ್ದಾಣದಲ್ಲಿ ನಮ್ಮೂರಿನ ಕ್ರೂಜರಗಳು ಪಾಳಿ ಪ್ರಕಾರ ಕರಜಗಿ ಅಫಜಲಪೂರ ಹಾಗೂ ಇನ್ನಿತರ ಊರುಗಳಿಗೆ ಜನರನ್ನು ಕೂಡಿಸಿಕೊಂಡು ಹೋಗುವುದು ಬರುವುದು ಮಾಡುತ್ತಿರುತ್ತೆವೆ. ಈಗ ಒಂದು ವಾರದ ಹಿಂದೆ ನಾನು ಮತ್ತು ನಮ್ಮೂರ ಸಿದ್ದು ತಂದೆ ಭಿಮಶಾ ಲಾಳಸಂಗಿ ಈತನು ಹಾಗೂ ಇನ್ನು ಕೆಲವು ಕ್ರೂಜರ ಚಾಲಕರು ಹಾಗೂ ಜೀಪ ಚಾಲಕರು ತಮ್ಮ ತಮ್ಮ ವಾಹನಗಳನ್ನು ಪಾಳಿ ಪ್ರಕಾರ ಪ್ಯಾಶೆಂಜರ ಬಾಡಿಗೆ ಹೊಡೆಯಲು ನಿಲ್ಲಿಸಿರುತ್ತೆವೆ. ನನ್ನ ಕ್ರೂಜರ ಪಾಳಿ ಬಂದಾಗ ಸಿದ್ದು ಲಾಳಸಂಗಿ ಈತನು ಮಗನೆ ನನ್ನ ಗಾಡಿಯ ಪಾಳಿ ಇರುತ್ತದೆ ನಿನ್ಯಾಕ ತಂದ ಹಚ್ಚಿದಿ ಮಗನಾ ಅಂತಾ ಅಂದು ನನ್ನ ಏದೆಯ ಮೇಲಿನ ಅಂಗಿ ಹಿಡಿದು ಹೋಡೆದನು, ಆಗ ನನಗೂ ಅವನಿಗೂ ಜಗಳ ಆಗುತ್ತಿದ್ದಾಗ ಅಲ್ಲೆ ಇದ್ದ ಕ್ರೂಜರ ಚಾಲಕರು ಮತ್ತು ಇನ್ನು ಕೆಲವು ಜನರು ಜಗಳ ಬಿಡಿಸಿದರು. ಆಗ ಸದರಿ ಸಿದ್ದು ಲಾಳಸಂಗಿ ಈತನು ಮಗನೆ ನಾವು 6 ಜನ ಅಣ್ಣ ತಮ್ಮರಿದ್ದಿವಿ, ನಿನ್ನ ಜೀವ ನಮ್ಮ ಕೈಯಲ್ಲೆ ಹೋಗೊದು, ನೋಡು ನಿನಗೆ ಒಂದು ವಾರದಲ್ಲಿ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳಿ ನನ್ನ ಮೇಲೆ ಬಾರಿ ದ್ವೇಷ ಮಾಡಿಕೊಂಡು ಅಲ್ಲಿಂದ ಹೊದನು. ಅಂದಿನಿಂದ ಸಿದ್ದು ಲಾಳಸಂಗಿ ಮತ್ತು ಅವನ ಅಣ್ಣ ತಮ್ಮರಾದ ಶರಣಪ್ಪ, ಕೃಷ್ಣಪ್ಪ, ಪರಶುರಾಮ, ಪುಂಡಲಿಕ, ಶ್ರೀಶೈಲ ಇವರುಗಳು ಏನೊ ಮಗನೆ ನಮ್ಮ ಜೋತೆಗೆನೆ ಜಗಳ ತಗಿತಿಯಾ, ನಿನಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳುತ್ತಾ ನನ್ನನ್ನು ಕೊಲೆ ಮಾಡಬೆಕಂದು ನನ್ನ ಮೇಲೆ ಹಗೆ ಸಾದಿಸುತ್ತಿದ್ದರು. ಇಂದು ದಿನಾಂಕ 28-06-2015 ರಂದು ಸಾಯಂಕಾಲ 5:30 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಿಂದ, ನಮ್ಮೂರಿನ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ನನ್ನ ಹಿಂದೆ ಹಿಂದೆಯೆ ನನ್ನ ಜೊತೆಗೆ ಜಗಳ ಮಾಡಿದ ಸಿದ್ದು ಲಾಳಸಂಗಿ ಈತನು ಪೋನಿನಲ್ಲಿ ಆ ಸೂಳಿ ಮಗಾ ಇಲ್ಲೆ ಹೊಂಟಾನ ಮನ್ಯಾಗ ಇರೊ ಮಚ್ಚು ತಗೆದುಕೊಂಡು ಎಲ್ಲರೂ ಬರ್ರಿ, ಈ ಸೂಳೆ ಮಗನಿಗೆ ಇವತ್ತು ಹೊಡೆದು ಕಲಾಸ ಮಾಡೋಣ ಅಂತಾ ಹೇಳಿದನು, ಅದನ್ನು ಕೇಳಿ ಅಲ್ಲಿಂದ ಓಡಿ ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಬಂದು ಸದರಿ ವಿಷಯವನ್ನು ನನ್ನ ಗೆಳೆಯ ಶಿವಾನಂದ ನಾವಿ ಇವನಿಗೆ ಹೇಳುತ್ತಿದ್ದೆನು, ಅಷ್ಟರಲ್ಲಿ 1) ಸಿದ್ದು ತಂದೆ ಬೀಮಶಾ ಲಾಳಸಂಗಿ 2) ಶರಣಪ್ಪ ತಂದೆ ಬೀಮಶಾ ಲಾಳಸಂಗಿ 3) ಕೃಷ್ಣಪ್ಪ ತಂದೆ ಬೀಮಶಾ ಲಾಳಸಂಗಿ 4) ಪರಶುರಾಮ ತಂದೆ ಬೀಮಶಾ ಲಾಳಸಂಗಿ 5) ಪುಂಡಲಿಕ ತಂದೆ ಬೀಮಶಾ ಲಾಳಸಂಗಿ 6) ಶ್ರೀಶೈಲ ತಂದೆ ಬೀಮಶಾ ಲಾಳಸಂಗಿ ಇವರೆಲ್ಲರೂ ಸಿದ್ದು ಈತನು ತನ್ನ ಕೈಯಲ್ಲಿ ಮಚ್ಚನ್ನು ಹಾಗೂ ಶರಣಪ್ಪ ಈತನು ಒಂದು ಬಡಿಗೆಯನ್ನು ಮತ್ತು ಕೃಷ್ಣಪ್ಪಾ ಈತನು ಒಂದು ರಾಡನ್ನು ಹಿಡಿದುಕೊಂಡು ಓಡುತ್ತಾ  ನನ್ನ ಹತ್ತಿರ ಬರುತ್ತಿದ್ದರು, ಆಗ ನಾನು ಸದರಿಯವರನ್ನು ನೋಡಿ ಓಡುತ್ತಿದ್ದಾಗ ಎಲ್ಲರೂ ನನ್ನ ಬೆನ್ನಟ್ಟಿ ಬಂದು, ಬಸ್ ನಿಲ್ದಾಣದಲ್ಲಿರುವ ಪಾನಶಾಪ್ ಹತ್ತಿರ ಸುತ್ತುವರೆದು ಸಿದ್ದು ಲಾಳಸಂಗಿ ಈತನು ಮಗನೆ ನೀನು ಇವತ್ತು ಕಲಾಸ ಅಂತಾ ಹೇಳುತ್ತಾ ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಲೆಯ ಮೇಲೆ ಹೊಡೆದನು, ಕೃಷ್ಣಪ್ಪಾ ಈತನು ರಾಡಿನಿಂದ ನನ್ನ ಬೆನ್ನಿನ ಮೇಲೆ ಹೊಡೆದನು. ಹಾಗೂ ಶರಣಪ್ಪ ಇವನು ಬಡಿಗೆಯಿಂದ ನನ್ನ ಕಾಲಿನ ಮೇಲೆ ಎಲ್ಲರೂ ಮನಸ್ಸೊ ಇಚ್ಚೆ ಹೊಡೆಯುತ್ತಿದ್ದಾಗ ನಾನು ಕೇಳಗೆ ಬಿದ್ದೆನು ಆಗ ಉಳಿದ ಪರಶುರಾಮ, ಪುಂಡಲಿಕ ಮತ್ತು ಶ್ರೀಶೈಲ ಇವರುಗಳು ಈ ಸೂಳಿ ಮಗನಿಗೆ ಕಲಾಸ ಮಾಡೋಣ ಅಂತಾ ಹೇಳುತ್ತಾ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 June 2015

Kalaburagi District Reported Crimes

ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಬಸಲಿಂಗಮ್ಮ ತಂದೆ ಶಿವಲಿಂಗಪ್ಪಾ ಸಾ; ಪ್ಲಾಟ ನಂ 5 ವಿರೇಶ ನಗರ ಮೆಡಿಕಲ್ ಕಾಲೇಜ ಹತ್ತಿರ ಕಲಬುರಗಿ ರವರು ದಿನಾಂಕ 31-05-2015 ರಂದು 7-00 ಎ.ಎಮ್ ಕ್ಕೆ ಚಿರಾಯು ಆಸ್ಪತ್ರೆಗೆ ಅವರ ಸಂಬಂಧಿಕರಿಗೆ ಭೇಟಿಯಾಗಲು ಹೋದಾಗ 1)ಅನಂತ ರಾಜ ತಂದೆ ಗುರಣ್ಣಾ 2) ಭಾಗೀರಥಿ ಗಂಡ  ಅನಂತ ರಾಜ ಸಾ:ಗುಂದೇಗುಡಿ ಲೇಔಟ ಶಹಾಬಜಾರ ಕಲಬುರಗಿ ನೀನು ಈ ಮೊದಲು ನನ್ನ ಮೇಲೆ ಅನೈತಿಕ ಸಂಬಂಧದ ವಿಷಯದಲ್ಲಿ ಕೇಸು ಕೊಟ್ಟು ನನಗೆ ತ್ರಾಸ ಕೊಟ್ಟಿದ್ದೀ ಈಗ ನಾನು ನಿನ್ನ ಜೋತೆ ಮತ್ತೆ ಸಂಪರ್ಕ ಮಾಡುತ್ತೇನೆ ನಡೆ ಅಂತಾ ಕೈ ಹಿಡಿದು ಕೈಯಲ್ಲಿದ್ದ ಬಳೆಗಳನ್ನು ಒಡೆದು ಹಾಕಿದನು. ಆರೋಪಿ ನಂ;2ನೇದ್ದವಳು ವಿನಾಃ ಕಾರಣ ನನ್ನ ಹೆಸರು ಕೇಸಿನಲ್ಲಿ ಸೇರಿಸಿದ್ದೀ ಮಾದಿಗ ರಂಡಿ ಕಮ್ಮಜಾತಿ ಎಂದು ತನ್ನ ಗಂಡನಿಗೆ ಈ ರಂಡಿಗೆ ಬಿಡಬೇಡ ಇವಳಿಗೆ ಬಹಳ ಸೊಕ್ಕು ಇದೆ. ಬಿಡು ಇನ್ನೊಮ್ಮೆ ನಮ್ಮ ಗೂಡವಿಗೆ ಬರದಂತೆ ಸೇಡು ತಿರಿಸಿಕೊ ಅಂತಾ ನನ್ನ ಕೂದಲು ಹಿಡಿದು ಎಳೆದಾಡಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ತುಳಿಸಿರಾಮ  ತಂದೆ ನಾರಾಯಣ ಪವಾರ ಸಾ|| ವೆಂಕಟೇಶ ನಗರ ಕುರಕುಂಟಾ ತಾ|| ಸೇಡಂ ಇವರ ತಂದೆಯವರಾದ ನಾರಾಯಣ ತಂದೆ ಅಂಬ್ರು ಪವಾರ ಇವರು 3 ವರ್ಷದ ಹಿಂದೆ ರೆಬ್ಬನಪಲ್ಲಿ ಗ್ರಾಮದಲ್ಲಿ ನಮ್ಮ ಪರಿಚಯದವರಾದ  ಶ್ರೀನಿವಾಸ ತಂದೆ ಲಕ್ಷ್ಮಾರೆಡ್ಡಿ ಇವರ ಹತ್ತಿರ ಟ್ಯಾಕ್ಟರ ನಂ ಎ.ಪಿ-07/ಟಿ.ಬಿ 8346 ಮತ್ತು 8347 ನೇದ್ದನ್ನು ಖರೀದಿಸಿದ್ದು ಟ್ಯಾಕ್ಟರ ನನ್ನ ತಂದೆಯವರ ಹೆಸರಿನ ಮೇಲೆ ಇರುತ್ತದೆ. ನಮ್ಮ ತಂದೆಯವರು ಖರೀದಿ ಮಾಡಿದ ಟ್ಯಾಕ್ಟರ ಉಸ್ತುವಾರಿಯನ್ನು ನಾನು ನೋಡಿಕೊಂಡು ಬಂದಿರುತ್ತದೆ. ನಾನು ಒಂದು ಸ್ವಂತ ಟೆಂಟ್ ಹೌಸ ಹೊಂದಿದ್ದು ಟೆಂಟ್ ಹೌಸ ಸಾಮಾನುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ನಮ್ಮ ತಂದೆಯವರು ಖರೀದಿ ಮಾಡಿದ  ಟ್ಯಾಕ್ಟರ ಅನ್ನು ಉಪಯೋಗಿಸುತ್ತಾ ಬಂದಿರುತ್ತನೆ . ಸದರಿ ಟ್ಯಾಕ್ಟರನ ಚಾಲಕನಾಗಿ ರಾಜು ತಂದೆ ರಾಮಸ್ವಾಮಿ ಸಾ|| ಕುರಕುಂಟಾ ಇವನನ್ನು ನೇಮಕ ಮಾಡಿಕೊಂಡಿದ್ದು ಒಂದು ತಿಂಗಳಲ್ಲಿಯೇ ಅವನು ಕೆಲಸ ಬಿಟ್ಟು ಹೋದ ನಂತರ ಸಂತೋಷ ತಂದೆ ಗುಂಡಪ್ಪ ಸಾ|| ಉದನೂರು ಇವನನ್ನು ನೇಮಕ ಮಾಡಿಕೊಂಡಿದ್ದು ಇವನು ದಿನಾಲು ನನ್ನ ಟೆಂಟ್ ಹೌಸಿನ ಸಾಮಾನುಗಳನ್ನು ಮನೆಯ ಮುಂದೆ ಇಳಿಸಿ ನಮ್ಮ ಮನೆಯ ಮುಂದೆ  ಟ್ಯಾಕ್ಟರ ನಿಲ್ಲಿಸಲು ಸ್ಥಳದ ಕೊರತೆ ಇದ್ದ ಕಾರಣ ನಮ್ಮ ಮನೆಯ ಹಿಂದೆ ಇರುವ ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ನಿಲ್ಲಿಸಿ ಕೀಲಿ ಹಾಕಿ ಕೊಂಡು ಮನೆಗೆ ಬರುತ್ತಿದ್ದನು. ಹೀಗಿರುವಾಗ ದಿನಾಂಕ:- 14-04-2015 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನನ್ನ ಟ್ಯಾಕ್ಟರನ ಚಾಲಕನಾದ ಸಂತೋಷ ತಂದೆ ಗುಂಡಪ್ಪ ಸಾ|| ಉದನೂರು ಇವರು ಟೆಂಟ್ ಹೌಸಿನ ಸಾಮಾನುಗಳನ್ನು ಮನೆಯ ಮುಂದೆ ಇಳಿಸಿ ನಮ್ಮ ಟ್ಯಾಕ್ಟರ ಅನ್ನು ಎಂದಿನಂತೆ ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ನಿಲ್ಲಿಸಿ ಕೀಲಿ ಹಾಕಿ ಕೊಂಡು ಮನೆಗೆ ಬಂದಿದ್ದು ಮುಂಜಾನೆ 6.00 ಗಂಟೆಗೆ ಹೋಗಿ ನೋಡಲಾಗಿ ಸ್ಥಳದಲ್ಲಿ ಟ್ಯಾಕ್ಟರ ಇರಲ್ಲಿಲ್ಲ. ಆಗ ನನ್ನ ಡ್ರೈವರ ಗಾಬರಿಯಾಗಿ ನನಗೆ ಪೋನ ಮಾಡಿ ತಿಳಿಸಿದ್ದು ಆಗ ನಾನು ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ಹೋಗಿ ನೋಡಲಾಗಿ ಸದರಿ ಸ್ಥಳದಲ್ಲಿ ನನ್ನ ಟ್ಯಾಕ್ಟರ ಇರಲ್ಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ತಾಂಡೂರು, ಮಲ್ಕಾಪೂರ , ಕರನಕೋಟ, ಕೊಂಚಾವರಂ, ಹೈದ್ರಾಬಾದ ,ಮಹಬೂಬನಗರ, ಬೀದರ, ಚಿಂಚೋಳಿ ,ಮುಧೋಳ, ರೆಬ್ಬನಪಲ್ಲಿ , ಸೇಡಂ ,ಕಲಬುರಗಿ ,ಇತ್ಯಾದಿ ಪಟ್ಟಣಗಳನ್ನು ತಿರುಗಾಡಿ ಹುಡುಕಲಾಗಿ ನನ್ನ ಟ್ಯಾಕ್ಟರ ಸಿಕ್ಕಿರುವುದಿಲ್ಲಾ ನನ್ನ ಟ್ಯಾಕ್ಟರಿನ ಕಂಪನಿಯ ಹೆಸರು ಮಹೇಂದ್ರ 575 ಡಿ.ಐ ಇದ್ದು ಟ್ಯಾಕ್ಟರ ಇಂಜಿನಿನ ಬಣ್ಣ ಕೆಂಪು ಕಲರ ಇದ್ದು ಅದರ ಟ್ರಾಲಿ ನೀಲಿ ಮತ್ತು ಅರಿಸಿಣ  ಬಣ್ಣದ್ದು ಇದ್ದು ಅದರ ಕಿಮತ್ತು 5,00,000=00 ರೂಪಾಯಿ ಆಗುತ್ತಿದ್ದು ದ ನನ್ನ ಟ್ಯಾಕ್ಟರ ನಂ ಎ.ಪಿ-07/ಟಿ.ಬಿ 8346 ಮತ್ತು 8347 ನೇದ್ದನ್ನು ಪತ್ತೆ ಹಚ್ಚಿಕೊಡಲು ಸಾಹೇಬರಲ್ಲಿ ವಿನಂತಿ ಅದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 June 2015

Kalaburagi District Reported Crimes

ಅಶೋಕ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿ ಜನರ ಕಾರ್ಯಾಚರಣೆ ನಗರದಲ್ಲಿ 9 ಮನೆ ಕಳ್ಳತನ ಮಾಡಿದ್ದ ಇಬ್ಬರು ಮನೆ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲೀಸ ಠಾಣೆ ವ್ಯಾಪ್ತಿಯ ಸಾಯಿ ಮಂದಿರ ಹಿಂದುಗಡೆ ಸಂಗಮೇಶ್ವರ ನಗರ ಲೇಔಟದಲ್ಲಿ  ದಿನಾಂಕ 28/02/2015 ರಂದು ಶ್ರೀ. ಶರಣಪ್ಪಾ ಭೋಗಶೇಟ್ಟಿ  ನಿವೃತ್ತ ಸೇನಾಧಿಕಾರಿ ರವರ ಮನೆ ಮತ್ತು ದಿನಾಂಕ 09/01/2015 ರಂದು ಶ್ರೀಮತಿ.ಜಯಶ್ರೀ ಗಂಡ ಮೊಹನ ಗಚ್ಚಿನಮನಿ ರವರ ಮ ರೆಡ್ಡಿ ರವರು ಮನೆ ಕಳ್ಳತನ ವಾಗಿದ್ದು, ಬೇಸಿಗೆಯಲ್ಲಿ ನಗರದಲ್ಲಿ ಮೇಲಿಂದ ಮೇಲೆ  ಮನೆ ಕಳ್ಳತನ ಆಗುತ್ತಿದ್ದರಿಂದ  ಶ್ರೀ. ಅಮೀತ ಸಿಂಗ ಐಪಿಎಸ್  ಎಸ್.ಪಿ ಕಲಬುರಗಿಶ್ರೀ. ಜಯಪ್ರಕಾಶ  ಅಪರ ಎಸ್.ಪಿ ಕಲಬುರಗಿಶ್ರೀ. ಎಂ.ಬಿ ನಂದಗಾವಿ ಡಿ.ಎಸ್.ಪಿ (ಎ) ಉಪ ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ಅಶೋಕ ನಗರ ಪೊಲೀಸ ಠಾಣೆಯ ಶ್ರೀಮತಿ. ಸುಧಾ ಆದಿ ಪಿ.ಐಸೇವುನಾಯ್ಕ ಹೆಚ್ಸಿ 250, ಗುಂಡೇರಾಯ ಹೆಚ್ಸಿ 297, ಸುರೇಶ ಪಿಸಿ 534, ಗುರುಮೂತರ್ಿ ಪಿಸಿ 269, ನಿತ್ಯಾನಂದ ಪಿಸಿ 1028, ಶಿವಪ್ಪಾ ಎಪಿಸಿ 52  ರವರನ್ನೊಳಗೊಂಡ  ತಂಡವು, ಕಲಬುರಗಿ ನಗರದಲ್ಲಿ ಮನೆ ಕಳ್ಳತನ ಮಾಡುವ  ಆರೋಪಿತರಾದ 1) ರವಿ ತಂದೆ ಶಂಕರ ಕಾಂಬ್ಳೆ  ಸಾ: ಭಾಂಡೆ ಮಾರ್ಕೆಟ ಔರಾದ(ಬಿ) ಜಿ: ಬೀದರ,  2) ಗೊಪಿ @ ಗೊಪಿಕಿಶನ ತಂದೆ ನಾಮದೇವ ಸಕಟ್ ಸಾ: ಅಲ್ಲಾ ಗಲ್ಲಿ ಬಸವಕಲ್ಯಾಣ ಜಿ: ಬೀದರ ರವರಿಗೆ ದಸ್ತಗಿರಿ ಮಾಡಿ  1)ಅಶೋಕ ನಗರ ಪೊಲೀಸ ಠಾಣೆಯ 1) ಗುನ್ನೆ ನಂ. 28/2015,  2) ಗುನ್ನೆ ನಂ. 03/2015,  3) ಗುನ್ನೆ  ನಂ.164/2014 ಕಲಂ. 457, 380 ಐಪಿಸಿ 2)ರಾಘವೆಂದ್ರ ನಗರ ಪೊಲಿಸ ಠಾಣೆಯ 1) ಗುನ್ನೆ ನಂ. 42/2015,  2) ಗುನ್ನೆ ನಂ. 61/2015  3) ಗುನ್ನೆ   ನಂ. 72/2015 ಕಲಂ. 457, 380 ಐಪಿಸಿ 3)ಸ್ಟೇಷನ ಬಜಾರ ಪೊಲೀಸ ಠಾಣೆ ಗುನ್ನೆ ನಂ. 96/2015 ಕಲಂ. 457, 380 ಐಪಿಸಿ 4)ಗ್ರಾಮೀಣ ಪೊಲೀಸ ಠಾಣೆ 1) ಗುನ್ನೆ ನಂ. 38/2015, 39/2015 ಕಲಂ. 457, 380 ಐಪಿಸಿ  ಹೀಗೆ ಒಟ್ಟು 9 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿ ಆರೋಪಿತರು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆ, ಉದಗೀರ ಕಡೆಗಳಲ್ಲಿ ವಿಲೆವಾರಿ ಮಾಡಿದ್ದನ್ನು  ಒಟ್ಟು 6,62,000/- ರೂಪಾಯಿ ಮೌಲ್ಯದ ಒಟ್ಟು 245 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ  ಕಲಬುರಗಿ ಹೈಕೊರ್ಟ ಆವರಣದಲ್ಲಿ ಆದ ಎರಡು ಮನೆಕಳ್ಳತನ ಪ್ರಕರಣವನ್ನು ಭೇದಿಸಲಾಗಿದೆ.
ಹಣದ ಬ್ಯಾಗ ಕಿತ್ತುಕೊಂಡು ಕೊಲೆ ಮಾಡಿ ಪರಾರಿಯಾದ ಆರೋಪಿತರ ಬಂಧನ :
ಜೇವರ್ಗಿ ಠಾಣೆ : ಶ್ರೀ ನಾಗನಗೌಡ ತಂದೆ ಶಿವಶರಣಪ್ಪಗೌಡ ಹೊಸಮನಿ ಸಾ : ಗೌಂವಾರ ರವರು ದಿನಾಂಕ 09-10-2015 ರಂದು ರಾತ್ರಿ ಸಿದ್ದಾರ್ಥ ಲಾಡ್ಜ ಹಿಂಭಾಗ ಯಾರೋ ದುಷ್ಕರ್ಮಿಗಳು ನನ್ನ ತಮ್ಮ ಸಂಗನಗೌಡ ಹೊಸಮನಿ ಇತನಿಗೆ ಗುಂಡು ಹಾರಿಸಿ ಕೊಲೆ ಮಾಡಿ ಅವನ ಹತ್ತಿರ ಇದ್ದ ಹಣದ ಬ್ಯಾಗ ಕಸಿದುಕೊಂಡು ಹೋದ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದ ತನಿಖೆ ಕುರಿತು ಶ್ರೀ ಅಮಿತ್ ಸಿಂಗ ಐಪಿಎಸ್ ಪೊಲೀಸ ಅಧೀಕ್ಷಕರು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಲಬುರಗಿ ಇವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ವಿಜಯ. ಪಿ. ಅಂಚಿ ಪೊಲೀಸ ಉಪಾಧೀಕ್ಷಕರು ಗ್ರಾಮಾಂತರ ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಸಿ.ಪಿ.ಐ. ಜೇವರಗಿ ಶ್ರೀ ಪಂಡಿತ ಸಗರ ಪಿ.ಎಸ್.ಐ. ಜೇವರಗಿ, ಆನಂದರಾವ ಪಿಎಸ್ಐ ಯಡ್ರಾಮಿ, ಕಪೀಲದೇವ ಪಿ.ಎಸ್.ಐ.ನೆಲೋಗಿ ಹಾಗೂ ಸಿಬ್ಬಂದಿ ಜನರಾದ 1] ಶಶಿಕಾಂತ ಪಿ.ಸಿ. 2] ಪರಮೇಶ್ವರ ಪಿ.ಸಿ 3] ಶಿವರಾಯ ಪಿ.ಸಿ 4] ಮಲ್ಲಿಕಾರ್ಜುನ  ಪಿ.ಸಿ ಎಸ್.ಬಿ. 5] ಶ್ರೀನಾಥ ಪಿ.ಸಿ. 6] ರಘುವೀರಲಾಲ ಪಿ.ಸಿ. 7] ರವಿ ಎಪಿಸಿ ರವರು ಇವರುಗಳು ಮತ್ತು ಹುಣಸಗಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಸ್ತಗಿರಿ ಮಾಡಿದಂತ ಆರೋಪಿತರಾದ 1] ಮುನೀರಪಾಶಾ ಉರ್ಪ ಮುನ್ನಾ ತಂದೆ ಮಹೆಬೂಬಸಾಬ ಕಳ್ಳಿ ಸಾ: ಜೇವರಗಿ.  2) ಮಹಿಬೂಬ ತಂದೆ ಮಹಮೂದಸಾಬ್ ಖುರೇಷಿ ಸಾ: ಜೇವರಗಿ. 3) ಸದಾಶಿವ ತಂದೆ ಸಾಯಿಬಣ್ಣ  ಬಡಿಗೇರ್ ಸಾ: ಶಖಾಪೂರ ಹಾ:ವ: ಮೂಡಬೂಳ      4) ಸಿದ್ದು ತಂದೆ ಮರೆಪ್ಪ ಕಾಂಬಳೆ ಸಾ: ಮಂಗಳೂರ ತಾ: ಸಿಂದಗಿ.5) ಅಜಯಕುಮಾರ ಉರ್ಪ ಭೀಮು ಫೈಲವಾನ್ ಉರ್ಪ ಮುನ್ನಾ ಸುರೇಶ ತಂದೆ ಅಪ್ಪಾರಾವ  ತಾ: ಹುಮನಾಬಾದ  6) ವಾಚು ತಂದೆ ರಾವಜೀ ಚಿನ್ನಾ ರಾಠೋಡ ಸಾ: ಚಾಮನಾಳ ತಾಂಡಾ  ತಾ: ಸುರಪೂರ 7) ಖಾಸಿಂ ತಂದೆ ಶಹಾಬುದ್ದಿನ ಪಟೇಲ ಸಾಃ ಮಳ್ಳಿ, ಇವರಗಳನ್ನು ದಿನಾಂಕ 25-06-15 ರಂದು ಮಧ್ಯಹ್ನ ಪುನಃ ಪೊಲೀಸ ವಶಕ್ಕೆ ಪಡೆದುಕೊಂಡು ಆರೋಪಿತರನ್ನು ಕುಲಕೂಂಷವಾಗಿ ತನಿಖೆ ಮಾಡಲಾಗಿ ತನಿಖೆಯಲ್ಲಿ ಕಂಡು ಬಂದಿದ್ದೇನೆಂದರೆ ಆರೋಪಿತರೆಲ್ಲರೂ ಸೇರಿಕೊಂಡು ಆರೋಪಿತರಲ್ಲಿ ಕೆಲವರು ಮುಂಚಿತವಾಗಿನೇ ಜೇವರಗಿ ಪಟ್ಟಣದಲ್ಲಿ ಯಾವ ಯಾವ ವರ್ತಕರು ಎಷ್ಟು ಹಣ ಸಂಗ್ರಹಿಸಿ ಯಾವ ಮಾರ್ಗದ ಮುಖಾಂತರ ಹೋಗುತ್ತಾರೆ ಎಂಬುದನ್ನು ಮುಂಚಿತವಾಗಿನೇ ತಿಳಿದುಕೊಂಡು ಉಪಾಯ ಮಾಡಿ ದಿ: 9-10-14 ರಂದು ಜೇವರಗಿ ಪಟ್ಟಣದ ಸೀರಿ ಕಾಂಪ್ಲೇಕ್ಸ ಹತ್ತಿರ ಮೃತ ಸಂಗಣ್ಣಗೌಡ ಇತನು ತನ್ನ ಹಣವನ್ನು ತೆಗೆದುಕೊಂಡು ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೋಗುವದನ್ನು ಆರೋಪಿತರಲ್ಲಿ ಕೆಲವು ಆರೋಪಿತರು ಮೋದಲೆ ಹೊಂಚುಹಾಕಿ ಕುಳಿತಂತ ಆರೋಫಿತರಿಗೆ ಮೋಬೈಲ್ ಮುಖಾಂತರ ತಿಳಿಸಿ ಮೃತ ಸಂಗಣ್ಣಗೌಡ ತನ್ನ ಅಂಗಡಿಯನ್ನು ಮುಚ್ಚಿ ಹಣ ಬ್ಯಾಗ ಸಮೇತ ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೊಂಚು ಹಾಕಿ ಕುಳಿತಂತ ಆರೋಪಿತರು ಹಣ ಬ್ಯಾಗನ್ನು ಕಸಿದುಕೊಳ್ಳುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮೋಟರಸೈಕಲಿಗೆ ತಮ್ಮ ಮೋಟರಸೈಕಲನ್ನು ಅಡ್ಡವಾಗಿ  ನಿಲ್ಲಿಸಿ ಪೂರ್ವ ನಿಯೋಜನೆಯಂತೆ ಮೃತ ಸಂಗಣ್ಣಗೌಡ ಇತನ ಸಂಗಡ ಜಗಳ ತೆಗೆದು ಮೋಟರಸೈಕಲ ಮೇಲಿಂದ ಕೆಳಗೆ ಇಳಿದು ಹಣ ಸಮೇತ ಇದ್ದ ಬ್ಯಾಗ ಕಿತ್ತಿಕೊಳ್ಳುತ್ತಿದ್ದಾಗ ಅವನು ಹಣದ ಬ್ಯಾಗ ಕೊಡದೆ ಇರುವದರಿಂದ ಇಬ್ಬರಿಗೂ ತೆಕ್ಕಿಕುಸ್ತಿಯಾಗಿ ಮೃತ ಸಂಗಣ್ಣಗೌಡ ಇತನು ಕಿತ್ತಿಕೊಂಡಂತ ಬ್ಯಾಗನ್ನು ಪುನಃ ಅವರ ಮೇಲೆ ಎರಗಿ ಮರಳಿ ಕಿತ್ತಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಗ ಮೃತ ಸಂಗಣ್ಣಗೌಡನಿಗೆ ಕಂಟ್ರಿ ರಿವಲ್ವಾರನಿಂದ ಫೈಯರ ಮಾಡಿದಾಗ ಮೃತ ಸಂಗಣ್ಣಗೌಡ ಇತನು 4-5 ಹೆಜ್ಜೆ ಹೋಗಿ ಮೃತ ಪಟ್ಟಿರುತ್ತಾನೆ  ಹಣದ ಬ್ಯಾಗಿನೊಂದಿಗೆ ಮೋಟರಸೈಕಲ ಮೇಲೆ ಪರಾರಿಯಾಗಿರುತ್ತಾರೆ. ಅಂತಾ ಹೇಳಿದ್ದು ಸದರಿಯವರಿಂದ ನಗದು ಹಣ 11,850/- ರೂ   ಅಟೋ ನಂ ಕೆ.ಎ-32-8806 ಮೃತ ಸಂಗಣ್ಣಗೌಡನ ಚಲವಲನದ ಮೇಲೆ ನಿಗಾ ವಹಿಸಲು ಬಳಸಿದ ವಾಹನ ಮತ್ತು   ಮೋಟರಸೈಕಲ ನಂ ಕೆ.ಎ-28 ಎಸ್-1842 ಕೃತ್ಯವನ್ನು ಎಸಗಲು ಉಪಯೋಗಿಸಿದ  ಮೋಟರಸೈಕಲನ್ನು ವಶಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನ ಕುರಿತು ಕಳುಹಿಸಿ ಕೊಡಲಾಗಿದೆ.  
ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ:26/06/2015 ರಂದು ದೂರವಾಣಿ ಮೂಲಕ ಜಿರೋಳ್ಳಿ ಆಳಂದ ರೋಡಿನ ಅಜಮತ್ತುಲ್ಲಾ ಖಾದ್ರಿ ದೆವರ ಹೊಲದ ಪಕ್ಕದಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಒಬ್ಬ ಹೆಣ್ಣು ಮಗಳು ಸ್ಥಳದಲ್ಲೆ ಮೃತ ಪಟ್ಟಿದ್ದು ಇತರೆ ಗಾಯಾಳುದಾರರಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ಕಳುಹಿಸಿದ್ದು ಇದೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಮೃತಳಾದ ಸುರೇಖಾ ಗಂಡ ಸಂತೋಷ ರಾಠೋಡ ಸಾ: ಜಿರೋಳ್ಳಿ ತಾಂಡಾ ಇವಳ ಶವವು ಸಂಚಾರದ ಸುರಕ್ಷಾ ದೃಷ್ಟಿಯಿಂದ ಜಿಜಿಎಚ್‌ ಅಳಂದಕ್ಕೆ ಸಾಗಿಸಿ ಆಸ್ಪತ್ರೆಯಲ್ಲಿ  ಉಪಚಾರ ಪಡೆಯುತ್ತಿದ್ದ ಮೃತಳ ಗಂಡನಾದ ಸಂತೋಷ ತಂದೆ ರತನು ರಾಠೋಡ ಇವರು ನನ್ನ ಹೆಂಡತಿಯ ಬಾಣಂತನ 3 ದಿವಸಗಳ ಹಿಂದೆ ಆಗಿದ್ದು ಆಕೆಗೆ ತನ್ನ ತವರು ಮನೆಗೆ ಕರೆದುಕೊಂಡು ಹೋಗಲು ನಮ್ಮ ಅತ್ತೆ ಶಾಹುಬಾಯಿ ಗಂಡ ಸತೀಶ ಚವ್ಹಾಣ ಸಾ:ಬಲಸೂರ ತಾಂಡ ಇವಳು ನಿನ್ನೆ ನಮ್ಮ ತಾಂಡಕ್ಕೆ ಬಂದಿದ್ದು ದಿನಾಂಕ:26/06/2015 ರಂದು ಮದ್ಯಾಹ್ನ ನಮ್ಮೂರಲ್ಲಿದ ಆಟೋಚಾಲಕ ಸುರೇಶ ತಂದೆ ಸೋಮಲು ರಾಠೋಡ ಈತನ ಆಟೋ ನಂ: ಕೆ.ಎ:32 / 4963 ನೇದ್ದರಲ್ಲಿ ನಾನು ನನ್ನ ಹೆಂಡತಿ ಸುರೇಖಾ ಹಾಗೂ 3 ದಿನದ ಕೂಸು ಹೆಣ್ಣು ಮಗು ಹಾಗೂ ನಮ್ಮ ಅತ್ತೆ ಶಾಹುಬಾಯಿ ರಾಠೋಡ ಈತನು ಸದರಿ ವಾಹನ ಅತೀವೇಗದಿಂದ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುವಾಗ ನಾವು ಸಾವಕಾಶವಾಗಿ ಚಲಾಯಿಸಿ ಕೊಂಡು ಹೋಗಲು ತಿಳಿಸಿದರು ಕೂಡಾ ಅತೀವೇಗದಲ್ಲಿ ಹೋಗುವಾಗ ಆಟೋರಿಕ್ಷಾದ ಮುಂದಿನ ಗಾಲಿ ಎಕ್ಸಲ್ ಸಮೇತ ಕಟ್ ಆಗಿ ಅಜಮತ್ ತುಲ್ಲಾ ಖಾದ್ರಿ ದೇವರ ಹೊಲದಲ್ಲಿ ಪಲ್ಟಿಯಾದ ಪರಿಣಾಮ ನನ್ನ ಹೆಂಡತಿಗೆ ಆಟೋ ರಿಕ್ಷಾವು ಆಕೆಯ ತಲೆಯ ಮೇಲೆ ಬಿದ್ದು ಕೆಳಗೆ ಸಿಕ್ಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ತುಕಾರಾಮರಾವ್ ಸರಾಫ್ ಸಾ:ಭಗವತಿನಗರ ಕಲಬುರಗಿ ದಿನಾಂಕ: 08/06/2015 ರಂದು ತಮ್ಮ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಕಪ್ಪು ಬಣ್ಣ ಕೆಎ-32 ಎಕ್ಸ- 4499 ಇಂಜನ ನಂ- MBLHA 10EYAHJ 37997 ಇದ್ದು ಇದನ್ನು ನಾನು 5 ವರ್ಷಗಳ ಹಿಂದೆ ಖರಿಧಿ ಮಾಡಿದ್ದು ನಾನು ಮಾರ್ಕೇಟಗೆ ಹೋಗಿ ಸಾಮಾನು ತೆಗೆದುಕೊಂಡು ಬಂದು ಮೋಟಾರ ಸೈಕಲ್ ನಮ್ಮ ಮನೆಯ ಮುಂದೆ ನಿಲ್ಲಿಸಿ ಸಾಮಾನುಗಳನ್ನು ಮನೆಯಲ್ಲಿ ಇಟ್ಟು ಪುನ: ಹೊರಗೆ ಬಂದಾಗ ನನ್ನ ಮೋಟಾರ ಸೈಕಲ್ ಕಾಣಲಿಲ್ಲ. ನಾನು ಗಾಬರಿಯಾಗಿ ಮುಂದೆ ಯಾರಾದರೂ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆಂದು ನೋಡಿದೇನು ಅಲ್ಲಿ ಕಾಣಲಿಲ್ಲ. ಆದರೂ ಕೂಡಾ ಜೇವರ್ಗಿ ಕ್ರಾಸ, ಎಮ್.ಎಸ.ಕೆ.ಮೀಲ್, ರಾಮಮಂದಿರರವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಕೂಡಾ ಕಳವುವಾದ ನನ್ನ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲ ಕಾರಣ ಮಾನ್ಯರಾದ ತಾವು ನನ್ನ ಕಳೆದ ಹೋದ ಮೋಟಾರ ಸೈಕಲ್ ಕೆಎ-32 ಎಕ್ಸ- 4499 ಹುಡುಕಿಕೊಡಬೇಕಾಗಿ ತಮ್ಮಲ್ಲಿ ವಿನಂತಿ.ಅಂದಾಜು ಕಿಮ್ಮತು ಅಕಿ- 25,000/- ಕಳೆದು ಹೋಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.