POLICE BHAVAN KALABURAGI

POLICE BHAVAN KALABURAGI

02 May 2015

Kalaburagi Disrtict Reported Crimes

ಪತ್ರಿಕಾ ಪ್ರಕಟಣೆ

 ಮನೆಗಳ್ಳತನ ಮಾಡುವ ಅಂಬರೀಶ @ ಅಂಬ್ರಾ ತಂದೆ ನಾಗಪ್ಪ ಬೋವಿ ಆರೋಪಿಗೆ 3 ವರ್ಷ ಶಿಕ್ಷೆ
      ದಿನಾಂಕ 03-08-12 ರಂದು ಕಲಬುರಗಿ  ನಗರದ ವಡ್ಡರಗಲ್ಲಿಯಲ್ಲಿರುವ ಶಿವುಕುಮಾರ ಲಸ್ಕರ ಎನ್ನುವವರ ಮನೆಯಲ್ಲಿದ್ದ ಒಟ್ಟು 60,000/- ರೂ ಮೌಲ್ಯದ ಚಿನ್ನಾಭರಣ ಮೊಬಾಯಲ್ ಕಳ್ಳತನ ಆಗಿರುವ  ಬಗ್ಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 64/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ತನಿಖೆ ಕೈಕೊಂಡ ಅಂದಿನ ಎ.ಎಸ್.ಪಿ  ಭೂಷಣ ಬೋರ್ಸೆ, ಪಿಐ ಟಿ.ಹೆಚ್. ಕರಿಕಲ್ ರವರ ನೇತ್ರತ್ವದಲ್ಲಿ ಸಿಬ್ಬಂದಿ ಸುರೇಶ, ಶಿವಪ್ರಕಾಶ, ರಪೀಕ ರವರು ಮನೆ ಕಳ್ಳತನ ಪ್ರಕರಣವನ್ನು ಬೇದಿಸಿ ಆರೋಪಿ ಅಂಬರೀಶ @ ಅಂಬ್ರಾ ತಂದೆ ನಾಗಪ್ಪಾ ಭೋವಿ ಸಾ: ಭೋವಿಗಲ್ಲಿ ಸರಾಫ ಬಜಾರ ಕಲಬುರಗಿ  ಇತನಿಗೆ ದಸ್ತಗಿರಿ ಮಾಡಿ ಕಳುವಾದ ಮಾಲನ್ನು ವಶಪಡಿಸಿಕೊಂಡು ಎಲ್ಲಾ ಹಂತದ ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ದ ದಿ: 20-01-13 ರಂದು ದೊಷಾರೊಪಣೆ ಪತ್ರ ಸಲ್ಲಿಸಿದ್ದು.  ಮಾನ್ಯ 5 ನೇ ಅಪರ ಜೆ.ಎಂ.ಎಪ್.ಸಿ ನ್ಯಾಯಾಲಯ ಕಲಬುರಗಿ ದಲ್ಲಿ ನ್ಯಾಯಾಲಯದ ವಿಚಾರಣೆ ನಡೆದಿದ್ದು.  ಸರಕಾರದ ಪರವಾಗಿ ಸರಕಾರಿ ಅಬಿಯೋಜಕರಾದ ಶರಣೇಗೌಡರವರು ವಾದಮಂಡಿಸಿದ್ದು.  ದಿನಾಂಕ 27-04-15 ರಂದು 5 ನೇ ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧಿಶರಾದ ಕು|| ಸೌಭಾಗ್ಯ ರವರು ಆರೋಪಿ ಅಂಬರೀಶ @ ಅಂಬ್ರಾ ಇತನಿಗೆ 3 ವರ್ಷ ಕಠೀಣ ಶಿಕ್ಷೆ ಮತ್ತು 2000/- ರೂ ದಂಡವನ್ನು ವಿಧಿಸಿರುತ್ತಾರೆ. 
                                                         
    ಕಲಬುರಗಿ  ಬಸ್ಸ ಸ್ಟಾಂಡದಲ್ಲಿ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಬರೆದ ಆರೋಪಿಗೆ ಶಿಕ್ಷೆ
    ದಿನಾಂಕ 6-05-2012 ರಂದು ಕಲಬುರಗಿ  ಕೇಂದ್ರ ಬಸ್ಸ ನಿಲ್ದಾಣದಲ್ಲಿ ಅನಾಮದೇಯ ಬಾಂಬ್ ಸ್ಪೋಟದ ಬೆದರಿಕೆ ಪತ್ರ ಸಿಕ್ಕಿದ್ದು ಅದರಲ್ಲಿ ಕಲಬುರಗಿ  ಹೈದ್ರಾಬಾದ ಬೆಂಗಳೂರು ನಗರದ ಬಸ್ಸ ಸ್ಟಾಂಡ ರೇಲ್ವೆ ನಿಲ್ದಾಣಗಳಲ್ಲಿ ಬಾಂಬ್ ಸ್ಪೋಟಗೊಳ್ಳಿಲಿದೆ ಎಂದು ಅನಾಮದೇಯ ಬೆದರಿಕೆ ಪತ್ರ ಸಿಕ್ಕಿದ್ದು.  ಈ ಬಗ್ಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 39/2012 ಕಲಂ 507 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು.   ಈ ಬಗ್ಗೆ ಅಂದಿನ ಎ.ಎಸ್.ಪಿ  ಭೂಷಣ ಬೋರ್ಸೆ, ಪಿಐ ಟಿ.ಹೆಚ್. ಕರಿಕಲ್ ರವರ ನೇತ್ರತ್ವದಲ್ಲಿ ಸಿಬ್ಬಂದಿ ಸುರೇಶ ರವರು ಪ್ರಕರಣದ ಗಂಬೀರತೆಯಿಂದ ಪರಿಗಣಿಸಿ ಪೊಲೀಸ ತಂತ್ರಂಶಾದ ಮುಖಾಂತರ ಬಾಂಬ್ ಸ್ಪೋಟ ಬೆದರಿಕೆ ಪತ್ರ ಇಟ್ಟಿದ್ದ ಆರೋಪಿ ಶ್ರವಣಕುಮಾರ ತಂದೆ ಪಂಡಿತ ಸಾ: ಗೌಸ ನಗರ ತಾರಪೈಲ ಇತನಿಗೆ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ. ಆರೋಪಿತನ ವಿರುದ್ದ 12-03-2013 ರಂದು ಮಾನ್ಯ ನ್ಯಾಯಾಲಯಕ್ಕೆ ದೋಷಾರೊಪಣೆ ಪತ್ರ ಸಲ್ಲಿಸಿದ್ದು.  ಈ ಪ್ರಕರಣವು ಮಾನ್ಯ 5 ನೇ ಅಪರ ಜೆ.ಎಂ.ಎಪ.ಸಿ ನ್ಯಾಯಾಲಯ ಕಲಬುರಗಿದಲ್ಲಿ ವಿಚಾರಣೆ ನಡೆದು ಸರಕಾರಿ ವಕೀಲರಾದ ಶರಣೇಗೌಡರು ಸರಕಾರದ ಪರವಾಗಿ ವಾದಮಂಡಿಸಿದ್ದು, ದಿನಾಂಕ 28-04-2015 ರಂದು  5 ನೇ ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕು|| ಸೌಭಾಗ್ಯ ರವರು ಆರೋಪಿ ಶ್ರವಣಕುಮಾರ ತಂದೆ ಪಂಡಿತ ಇತನಿಗೆ 2 ವರ್ಷ ಕಠಿಣ ಶಿಕ್ಷೆ ವಿದಿಸಿರುತ್ತಾರೆ
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ 01-05-2015 ರಂದು ಕುಮಾರಿ. ನಾಗೇಶ್ವರಿ ತಂದೆ ರತ್ನಾಕರ್ ಕದಮ ಸಾ: ಆನಂದ ನಗರ ಕಲಬುರಗಿ ರವರು ತಮ್ಮ ನೂವಾ ಮೋಟಾರ ಸೈಕಲ ನಂಬರ ಕೆಎ-32 ಎಲ್-9478 ನೇದ್ದರ ಮೇಲೆ ಲಾಹೋಟಿ ಕ್ರಾಸ ಮುಖಾಂತರ ಹೋಗುವಾಗ ಐವಾನ ಈ ಷಾಯಿ ಹತ್ತಿರ ಮೋ/ಸೈಕಲ ನಂಬರ ಕೆಎ-32 ಇಇ-2765 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದರಿಂದ ನನ್ನ  ಬಲಗಾಲು ಪಾದಕ್ಕೆ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಚಿದ ಗಾಯ ಹಾಗು ಗುಪ್ತಪೆಟ್ಟುಗೊಳಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ :ದಿನಾಂಕ 01-05-2015 ರಂದು ಶ್ರೀ ಗುರುನಾಥರಾವ ತಂದೆ ಭಿಮಸೇನರಾವ ಪಟವಾರಿ ಇವರು ಠಾಣೆಗೆ ಹಾಜರಾಗಿ ದಿನಾಂಕ ತಾನು ಜಿಲ್ಲಾ ನ್ಯಾಯಾಲಯದಿಂದ ಎಸ್.ವಿ.ಪಿ. ಸರ್ಕಲ ಹತ್ತಿರವಿರುವ ಕೋಮಲ ಹೋಟಲದಲ್ಲಿ ಚಹಾ ಕುಡಿಯುವ ಸಂಬಂದ ನಡೆದುಕೊಂಡು ಹೋಗುತ್ತಿರುವಾಗ ಎಸ್.ವಿ.ಪಿ. ಸರ್ಕಲ ಹತ್ತಿರ ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 7348 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಅಪಘಾತ ಮಾಡಿ ತನ್ನ ಅಟೋರಿಕ್ಷಾ ವಾಹನವನ್ನು ನಿಲ್ಲಿಸಿದೆ ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಳ್ಳಲಾಗಿದೆ.

01 May 2015

KALABURAGI DISTRICT REPORTED CRIMES

ಹಲ್ಲೆ ಪ್ರಕರಣ;
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 30/04/2015 ರಂದು ಶ್ರೀ ಸುಮೇಧ ಕುಲಕರ್ಣಿ ಡೇಪ್ಯೂಟಿ ಮ್ಯಾನೇಜರ ಎನ್.ಎಸ್.ಎಲ್ ಸುಗರ ಪ್ಯಾಕ್ಟರಿ ಭುಸನೂರ ಇವರು ಠಾಣೆಗೆ ಹಾಜರಾಗಿ ದಿನಾಂಕ 20-04-2015  ಕ್ಕೆ ಪ್ಯಾಕ್ಟರಿ ಆವರದಲ್ಲಿ ಜನರ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಿರುವಾಗ ಜಗದೀಶ ಕೆ ಸಾ: ಭೂಸನೂರ ಹಾಗೂ ಆತನ ಸಂಗಡ ಇತರರು ಬಂದವರೆ ವಿನಾಕಾರಣ ಅವಾಚ್ಯವಾಗಿ ಬೈದು ತನಗೆ ಹೊಡೆ ಬಡೆ ಮಾಡಿರುತ್ತಾರೆ ಸದರಿಯವರ ಮೇಲೆ ಸೂಕ್ತಕಾನೂನು ಕ್ರಮ ಕೈಕೊಳ್ಳುವ ಕುರಿತು ಸಲ್ಲಿಸಿದ ದೂರು ಸಾಋಆಂಶದ ಮೇಲಿಂಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಪೊಲೀಸ್ ಠಾಣೆ:ದಿನಾಂಕ 28-04-2015 ರಂದು ಅಣ್ಣರಾವ ತಂದೆ ಹಣಮಂತರಾವ ಪಾಟೀಲ, ಸಾಃ ಸಾಯಿ ನಗರ ಕಲಬುರಗಿ  ತನ್ನ ಮೋಟಾರ ಸೈಕಲ ಕೆ.ಎ 32 ಡಬ್ಲು 7013 ನೇದ್ದನ್ನು ಸೇಡಂ ರಿಂಗ ರಿಂಗ ರೋಡ ಕಡೆಯಿಂದ ಆರ್.ಟಿ.ಓ ಆಫೀಸ್ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುವಾಗ ಬಡೆಪೂರ ಕ್ರಾಸ್ ಹತ್ತಿರ ಒಮ್ಮೆಲೆ ಕಟ್ ಹೊಡೆದು ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ತಲೆಗೆ ಮತ್ತು ಎಡಬುಜಕ್ಕೆ ಗಾಯಮಾಡಿಕೊಂಡ ಬಗ್ಗೆ ಶ್ರೀ ಅಮರೇಶ ತಂದೆ ಶಿವರಾಯ ಕಲ್ಲೂರ, ಸಾಃ ಅಂದೊಲಾ, ತಾಃ ಜೇವಗಿ  ರವರು ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 30-04-2015 ರಂದು ಬಂದೇನವಾಜ ತಂದೆ ಸೈಪನಸಾಬ ಮುಜಾವರ ಸಾ|| ನಾಗಠಾಣ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 30-04-2015 ರಂದು ನನ್ನ ಮಗನ ಜವಳದ ಕಾರ್ಯಕ್ರಮ ಕುರಿತು ಹೈದ್ರಾ ಗ್ರಾಮದ ಸೈಪನಮುಲುಕ ದರ್ಗಾಕ್ಕೆ ಮಾಂತು @ ಮಾಂತಪ್ಪ ತಂದೆ ಬಸಪ್ಪ ಹಡಲಗಿ ಸಾ: ಗುಣಕಿ ಈತನ 407 ಟೆಂಪೊ ನಂ ಕೆಎ-23 5087 ನೇದ್ದರಲ್ಲಿ ಹೈದ್ರಾ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಕರಜಗಿ - ಮಣೂರ ಮುಖ್ಯ ರಸ್ತೆಯಲ್ಲಿ ಟೆಂಪು ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಟೆಂಪುವನ್ನು ಚಲಾಯಿಸಿ ಒಮ್ಮೇಲೆ ಕಟ್ಟ ಮಾಡಲು ಹೋಗಿ ಬಲಗಡೆ  ತಗ್ಗಿನಲ್ಲಿ ಪಲ್ಟಿ ಮಾಡಿದನು. ನಂತರ ನೋಡಲಾಗಿ ನಮ್ಮ  ತಮ್ಮ ಮಹಿಬೂಬಸಾಬ ಮತ್ತು ಅಳಿಯ ಇಲಾಯಿ ಇವರು ಇಬ್ಬರು ಟೆಂಪೊದ ಕೆಳಗೆ ಸಿಕ್ಕಿಬಿದ್ದು ಮಹಿಬುಬಸಾಬನಿಗೆ ಬಲಗಾಲ ತೊಡೆಯಲ್ಲಿ ಭಾರಿ ಒಳಪೆಟ್ಟಾಗಿರುತ್ತದೆ, ತಲೆಯ ಹಿಂದೆ ರಕ್ತಗಾಯವಾಗಿರುತ್ತದೆ. ಇಲಾಯಿ ತಂದೆ ಮಹಿಬೂಬ ಗೋಳಸಗಾಂವ ಇವನ ಬಲಕಿವಿ ಇಂದ ರಕ್ತ ಸೋರುತ್ತಿದ್ದು, ಬಲಗಡೆ ಎದೆಯ ಮೇಲೆ ಭಾರಿ ಒಳಪೆಟ್ಟಾಗಿರುತ್ತದೆ, ನಮ್ಮ ತಾಯಿ ಜೈಬುನಬಿ ಇವಳಿಗೆ ತಲೆಯ ಮೇಲೆ ಮತ್ತು ಎಡಗಾಲ ಮೊಳಕಾಲ ಕೆಳಗೆ ಒಳಪೆಟ್ಟಾಗಿರುತ್ತದೆ, ದಾವಲಬಿ ಮುಜಾವರ ಇವರಿಗೆ ಬಲಗಡೆ ಹಣೆಯ ಮೇಲೆ ರಕ್ತಗಾಯವಾಗಿ ಮೈ ಕೈಗೆ ಒಳಪೆಟ್ಟಾಗಿರುತ್ತದೆ, ಅಬ್ದುಲರಜಾಕ ಗೋಳಸಗಾಂವ ರವರಿಗೆ ಎಡಗಡೆ ಭುಜದ ಮೇಲೆ ಭಾರಿ ಒಳಪೆಟ್ಟಾಗಿದ್ದು, ಎಡಗಣ್ಣಿನ ಮೇಲೆ ರಕ್ತಗಾಯ ವಾಗಿರುತ್ತದೆ. ರಮಜಾನ ನಿಂಬಾಳ ರವರಿಗೆ ಬಲಗಾಲ ಪಾದದ ಮೇಲೆ ಒಳಪೆಟ್ಟಾಗಿರುತ್ತದೆ.  ಇನ್ನು ಕೆಲವು ಜನರಿಗೆ ಸಣ್ಣ ಪುಟ್ಟ ಒಳ ಪೆಟ್ಟುಗಳು ಮತ್ತು ರಕ್ತಗಾಯಗಳು ಆಗಿದ್ದು. ಎಲ್ಲರನ್ನು 108 ಅಂಬ್ಯೂಲೆನ್ಸದಲ್ಲಿ ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಗಂಬಿರವಾಗಿ ಗಾಯಗೊಂಡಿದ್ದ ಮಹಿಬೂಬಸಾಬ ಮತ್ತು ಇಲಾಯಿ ಇವರು ಮಾರ್ಗ ಮದ್ಯ ಮೃತ ಪಟ್ಟಿರುತ್ತಾರೆ, ಸದರಿ 407 ಟೆಂಪೊ ಚಾಲಕನಾದ ಮಾಂತು @ ಮಾಂತಪ್ಪ ತಂದೆ ಬಸಪ್ಪ ಹಡಲಗಿ ಸಾ: ಗುಣಕಿ ಈತನು ತನ್ನ ಟೆಂಪೊವನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಟೆಂಪುವನ್ನು ಚಲಾಯಿಸಿ ಒಮ್ಮೇಲೆ ಕಟ್ಟ ಮಾಡಲು ಹೋಗಿ ಬಲಗಡೆ  ತಗ್ಗಿನಲ್ಲಿ ಪಲ್ಟಿ ಮಾಡಿ, ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

30 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 25/04/2015 ರಂದು ಶ್ರೀ ಉಮೇಶ ತಂದೆ ನರಸಪ್ಪಾ ಕುಂಬಾರ ಸಾ;  ಕೂಲಕುಂದಾ ತಾ:ಸೇಡಂ ಜಿ:ಕಲಬುರಗಿ ಮತ್ತು ನನ್ನ ಅಣ್ಣಾ ಶ್ರೀಧರ ಇನ್ನೊಬ್ಬ ಅಣ್ಣ ರವಿಕುಮಾರ ನಮ್ಮ ತಾಯಿ ಮಲ್ಲಮ್ಮಾ ಹಾಗೂ ನಮ್ಮ ಸಂಬಂಧಿ ಶಂಕರ ಕೂಡಿಕೊಂಡು ಪುನಾಕ್ಕೆ ಹೋಗಿ ಹುಡಗಿ ನೋಡಿಕೊಂಡು ಮರಳಿ ಬರುವಾಗ ನಮ್ಮ ಅಣ್ಣಾ ಶ್ರೀಧರನು ವಾಹನ ಚಲಾಯಿಸುತ್ತಿದ್ದು ಆಳಂದ-ಉಮರ್ಗಾ ರೋಡಿನ ಮುಖಾಂತರ ಖಜೂರಿ ದಾಟಿ ಬಂಗರಗಾ ಪಾಟಿ ½ ಕಿ.ಮೀ ಅಂತರದಲ್ಲಿ ಇರುವಾಗ ದಿನಾಂಕ 27/04/2015 ರಂದು ಬೇಳಗ್ಗಿನ 04:00 ಗಂಟೆಗೆ ನಮ್ಮ ಕಾರಿನ ಎದುರಿನಿಂದ ಯಾವುದೋ ಒಂದು ದೊಡ್ಡ ವಾಹನದ ಲೈಟಿನ ಬೆಳಕು ನಮ್ಮ ಕಾರಿನ ಮೇಲೆ ಬಿದ್ದಾಗ ಶ್ರೀಧರನು ಆಗ ಕಾರನು ಅತೀವೇಗದಿಂದ ಚಲಾಯಿಸುತ್ತಿದ್ದರಿಂದ ತನ್ನ ನಿಯಂತ್ರಣ ತಪ್ಪಿ ಒಮ್ಮಲೆ ರೋಡಿನ ಎಡಕ್ಕೆ ಇರುವ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ  ನನಗೆ ಮೂಗಿನ ಮೇಲೆ ಬಲಗೈ ಮೇಲೆ ಗುಪ್ತಗಾಯವಾಗಿದ್ದು. ರವಿಕುಮಾರನಿಗೆ ತಲೆಗೆ ಭಾರಿ ರಕ್ತಗಾಯ &  ಬಾಯಿ, ಮೂಗಿನ ಮೇಲೆ ಗುಪ್ತಗಾಯ, ನನ್ನ ತಾಯಿಯ ಎರಡು ಕೈ ಮತ್ತು  ಕಾಲುಗಳು ಮುರಿದಂತೆ ಆಗಿದ್ದು ಮೈತುಂಬ ಅಲಲ್ಲಿ ತರಚಿದ ಗಾಯವಾಗಿ ಬೇಹೊಷ ಆಗಿರುತ್ತಾಳೆ. ನಮ್ಮ ಸಂಬಂಧಿ ಶಂಕರನಿಗೆ ಮುಖದ ಮೇಲೆ ಬಲಗೈ ಹತ್ತಿರ ಭಾರಿ ಗುಪ್ತಗಾಯ ಎರಡು ಕಾಲುಗಳಿಗೆ ಒಳಪೆಟ್ಟಾಗಿ ಕಾಲು ಮುರಿದಂತೆಯಾಗಿದ್ದು ಮತ್ತು ವಾಹನ ಚಲಾಯಿಸುತ್ತಿದ್ದ ನಮ್ಮ ಅಣ್ಣ ಶ್ರೀಧರನ ಎಡಗಾಲಿಗೆ ಗುಪ್ತಗಾಯ ಎದೆಗೆ ಬೆನ್ನಿಗೆ ಅಲಲ್ಲಿ ತರಚಿದ ಗಾಯಗಳಾಗಿರುತ್ತವೆ. ದಿನಾಂಕ 29/04/2015 ರಂದು ಬೆಳಿಗ್ಗೆ 5:15 ಗಂಟೆಗೆ ವಾತ್ಲಲ್ಯ  ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಫಲಕಾರಿಯಾಗದೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯದಿಂದ ಗಾಯಾಳು ಮಲ್ಲಮ್ಮಾ ಗಂಡ ನರಸಪ್ಪಾ ಕುಂಬಾರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಬಸಯ್ಯಾ ತಂದೆ ಶರಣಯ್ಯಾ ಸ್ವಾಮಿ ಸಾಃ ಗಂಜ ಕಾಲೂನಿ, ಗಾಂಧಿ ನಗರ ಕಲಬುರಗಿ, ರವರು ಕೆಲಸ ಮುಗಿಸಿಕೊಂಡು ಗಾಂಧಿನಗರದಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಗರೇಶ್ವರ ಸ್ಕೂಲ ಎದರುಗಡೆ ರೋಡಿ ಮೇಲೆ ಮೋಟಾರ ಸೈಕಲ ನಂ. ಕೆ.ಎ 32 ಇ.ಸಿ 0605 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಗಂಜ ಬಸ್ತ ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಸತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರೋಡ ದಾಟುತ್ತಿದ್ದ ಫಿರ್ಯಾಧಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮೋಟಾರ ಸೈಕಲ ಸವರಾನು ಸಹ ಕೆಳಗೆ ಬಿದ್ದಿದ್ದು. ಸದರ ಅಪಘಾತದಿಂದ ಫಿರ್ಯಾದಿಗೆ ತಲೆಗೆ ಗುಪ್ತಪೆಟ್ಟು ಮತ್ತು ಬಲಕಿವಿಗೆ ರಕ್ತಗಾಯವಾಗಿ ರಕ್ತ ಸ್ರಾವವಾಗಿದ್ದು ಅಪಘಾತ ಪಡಿಸಿದ ಚಾಲಕನು ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.