POLICE BHAVAN KALABURAGI

POLICE BHAVAN KALABURAGI

13 March 2015

KALABURAGI DIST REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 12/03/2015 ರಂದು ಶ್ರೀಮತಿ ರೇಣುಕಾ ಗಂಡ ಮಲ್ಲಿಕಾರ್ಜುನ ಕಾಂಬಳೆ ಸಾ|| ಸಂಗೋಳಗಿ (ಬಿ) ಹಾ.ವ:| ಭೂಸನೂರ ಇವರಿಗೆ 2014 ನೇ ಸಾಲಿನ ಮೇ ತಿಂಗಳಲ್ಲಿ ಮಲ್ಲಿಕಾರ್ಜುನ ತಂದೆ ಬಾಬುರಾವ ಕಾಂಬಳೆ ಸಾ|| ಸಂಗೋಳಗಿ (ಬಿ) ಇತನೊಂದಿಗೆ ಮದುವೆಯಾಗಿದ್ದು ಅವಳ ಗಂಡ ಆತನ ಅಕ್ಕಳಾದ ರೇಖಾ ಇಬ್ಬರೂ ಸೇರಿ ಮದುವೆಯಾದ  3 ತಿಂಗಳ ನಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರಿಂದ ಬೇಸತ್ತು ರೇಣುಕಾ ಇವಳು ಡಿಸೆಂಬರ್ – 2014 ನೇ ಸಾಲಿನಲ್ಲಿ ತನ್ನ ತವರು ಮನೆ ಭೂಸನೂರ ಗ್ರಾಮಕ್ಕೆ ಬಂದು ತನ್ನ ಅಣ್ಣನೊಂದಿಗೆ ವಾಸುತ್ತಿದ್ದಾಗ ದಿನಾಲು ಮಲ್ಲಿಕಾರ್ಜುನನು ಫೋನ ಮುಖಾಂತರ ಸದರಿಯವಳಿಗೆ ಅವಾಚ್ಯ ಬೈದು ಮನ ನೋಯಿಸಿದ್ದರಿಂದ ದಿನಾಂಕ 12/03/2015 ರಂದು ತ್ರಾಸ ತಾಳಲಾರದೆ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದು ಆಸ್ಪತ್ರೆಯಲ್ಲಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ನಿಂರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಜೇವರ್ಗಿ ಪೊಲೀಸ ಠಾಣೆ : ದಿನಾಂಕ 12.03.2015 ರಂದು ಮಲ್ಲಪ್ಪ ತಂದೆ ಯಮನಪ್ಪ ಬಿರಾದಾರ ಸಾ|| ಮಾರಡಗಿ ಎಸ್. ಎ ಠಾಣೆಗೆ ಹಾಜರಾಗಿ ದಿನಾಂಕ: 11.03.2015 ರಂದು ಮಧ್ಯಾಹ್ನ ತಾನು ಮತ್ತು ಭೀಮ್‌ಬಾಯಿ ಗಂಡ ಗಂಡ ಮರೆಪ್ಪ ಬಿರಾಳ ಮತ್ತು ಈಸಪ್ಪ ತಂದೆ ಶಿವಯೋಗಿ ನಾಯಕೋಡಿ ಕುಡಿಕೊಂಡು ಕ್ರೂಜರ್ ಜೀಪ್‌ ನಂ ಕೆ.33ಪಿ9909 ನೇದ್ದರಲ್ಲಿ ಕುಳಿತುಕೊಂಡು ಗಂವ್ಹಾರ್ ಗ್ರಾಮಕ್ಕೆ ಹೋಗುತ್ತಿದ್ದಾದ ಗಂವ್ಹಾರ್ ಸಮೀಪ ರೋಡಿನಲ್ಲಿ ಜೀಪ್ ಚಾಲಕನು ತನ್ನ ಜೀಪ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮೇಲೆ ಕಟ್‌ ಹೋಡೆದು ರೋಡಿನ ಬಲ ಮಗ್ಗಲಿಗೆ ಪಲ್ಟಿ ಮಾಡಿ ನಮಗೆ ಭಾರಿ ಮತ್ತು ಸಣ್ಣ-ಪುಟ್ಟ ಗಾಯಪಡಿಸಿ ತನ್ನ ಜೀಪ್‌ ನ್ನು ಬಿಟ್ಟು ಓಡಿ ಹೋಗಿದ್ದು ಕಾರಣ ಜೀಪ್‌ ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

12 March 2015

KALABURAGI DIST REPORTRED CRIMES

ಪತ್ರಿಕಾ ಪ್ರಕಟಣೆ

ಅಶೋಕ ನಗರ ಪೊಲೀಸ ಠಾಣೆಯ ಅಧಿಕಾರಿ ಸಿಬ್ಬಂದಿ ಜನರ ಕಾರ್ಯಾಚರಣೆ  ಮೂರು ಜನ ಸರಗಳ್ಳರ ಬಂಧನ 2, ಲಕ್ಷ ರೂ ಮೌಲ್ಯದ ಆಭರಣ ಮತ್ತು ವಾಹನಗಳು ಜಪ್ತಿ
       ಅಶೋಕ ನಗರ ಪೊಲೀಸ ಠಾಣೆಯ ವ್ಯಾಫ್ತಿಯ ಎನ್.ಜಿ.ಓ ಕಾಲೋನಿ ಬಂಜಾರ ರೋಡಿನಲ್ಲಿ ಶ್ರೀಮತಿ ಮಂದಾಕಿನಿ ಗಂಡ ದಿ:ವೆಂಕಟೇಶ್ವರ ದೇಸಾಯಿ ಸಾ: ಎನ್.ಜಿ.ಓ ಕಾಲೋನಿ ಕಲಬುರಗಿ ರವರು ದಿನಾಂಕ 20-01-2015 ರಂದು ಬೆಳ್ಳಿಗೆ ಅಂಗಡಿಗೆ ಹೋಗಿ ಮನೆಗೆ ಬರುತ್ತಿರುವಾಗ ಪಲ್ಸರ ಬೈಕ ಮೇಲೆ ಇಬ್ಬರು ಸವಾರರು, ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರಿನ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 07/2015 ಕಲಂ 392 ಐಪಿಸಿ ರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಈ ಪ್ರಕರಣದಲ್ಲಿ ಸರಗಳ್ಳತನ ಮಾಡುವ ಆರೋಪಿತರ ಪತ್ತೆಗಾಗಿ ಶ್ರೀ ಅಮಿತ ಸಿಂಗ್ ಐಪಿಎಸ ಎಸ.ಪಿ ಕಲಬುರಗಿ ಶ್ರೀ ಮಹಾಂತೇಶ ಅಪರ ಎಸ.ಪಿ ಕಲಬುರಗಿ  ಮತ್ತು ಶ್ರೀ ಎಂ.ಬಿ ನಂದಗಾಂವಿ ಡಿ.ಎಸ.ಪಿ (ಎ) ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಸುಧಾ ಆದಿ ಪೊಲೀಸ ಇನ್ಸಪೇಕ್ಟರ ಅಶೋಕ ನಗರ ಪೊಲೀಸ ಠಾಣೆ ಮತ್ತು ಸಿಬ್ಬಂದಿ ಜನರಾದ ಸುರೇಶಕುಮಾರ ಸಿಪಿಸಿ 534, ಶಿವಗೊಂಡ ಪಿಸಿ 1162 , ನಿಂಗಣ್ಣಗೌಡ ಪಿಸಿ 1148, ಶಿವಪ್ರಕಾಶ ಪಿಸಿ 615, ರಪಿಯೋದ್ದಿನ ಪಿಸಿ 370, ಚಂದ್ರಕಾಂತ ಪಿಸಿ 176, ಬಸವರಾಜ ಪಿಸಿ 765, ಗೀತಾ ಮಪಿಸಿ 586 ರವರನ್ನು ಒಳಗೊಂಡ ತಂಡವು ದಿನಾಂಕ 10-03-2015 ರಂದು ಮದ್ಯಾಹ್ನ ವೇಳೆಗೆ ಗೋದುತಾಯಿ ನಗರ ಮದರ ತೇರಿಸಾ ಶಾಲೆಯ ಹತ್ತಿರ ಸರಗಳ್ಳರಾದ 1) ಸಿದ್ದು @ ಸಿದ್ರಾಮ ತಂದೆ ಬಲಭೀಮ ದಾವಣಿ ವ-19 ವರ್ಷ ಜಾ: ಗೊಲ್ಲರ ಸಾ: ವಡ್ಡರಗಲ್ಲಿ ಬ್ರಹ್ಮಪೂರ ಕಲಬುರಗಿ 2) ರೇವಣಸಿದ್ದ ತಂದೆ ಸಾಯಬಣ್ಣ ಮಾಂಗ ವ-22 ವರ್ಷ ಜಾ:ಎಸ.ಸಿ ಸಾ: ಹುಣಸಿಹಡಗಿಲ್ 3) ವರುಣಕುಮಾರ ತಂದೆ ಮಲ್ಲಿಕಾರ್ಜುನ  ವ-22 ವರ್ಷ ಜಾ;ಎಸ.ಸಿ ಸಾ: ಹುಣಸಿಹಡಗಿಲ್ ಹಾ:ವ: ಇಂದಿರಾ ನಗರ ಕಲಬುರಗಿ ರವರಿಗೆ ದಸ್ತಗಿರಿ ಮಾಡಿ ಅಶೋಕ ನಗರ ಪೊಲೀಸ ಠಾಣೆಯ ಗುನ್ನೆ ನಂ 7/2015 ಕಲಂ 392 ಐಪಿಸಿ ಮತ್ತು ಸ್ಪೇಶನ ಬಜಾರ ಪೊಲೀಸ ಠಾಣೆಯ ಗುನ್ನೆ ನಂ 42/2015 ಕಲಂ 392 ಐಪಿಸಿ ಎರಡು ಪ್ರಕರಣದಲ್ಲಿ ಆರೋಪಿತರಿಂದ ಎರಡು ಬಜಾಜ ಪಲ್ಸರ ಬೈಕಗಳು , 20 ಗ್ರಾಂ ಬಂಗಾರದ ಎರಡು ಲಾಕೇಟಗಳು ಮತ್ತು ವಿವಿಧ ಕಂಪನಿಯ 6 ಮೊಬಾಯಲ್ ಪೋನಗಳು ಸೇರಿ ಒಟ್ಟು 2,00,000/_ ರೂ ಮೌಲ್ಯದ ವಾಹನ ಮತ್ತು ಬಂಗಾರದ ಲಾಕೇಟಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳವು ಪ್ರಕರಣ:
ಅಶೋಕನಗರ ಪೊಲೀಸ್ ಠಾಣೆ : ದಿನಾಂಕ 11/03/2015 ರಂದು ಶ್ರೀ ಶ್ರೀಪಾದ ತಂದೆ ಹಣಮಂತರಾವ ಕುಲಕರ್ಣಿ ಸಾ:ವಿದ್ಯಾನಗರ ಕಲಬುರಗಿ ರವರು ಠಾಣೇಗೆ ಹಾಜರಾಗಿ ದಿನಾಂಕ 23-02-2015 ರಂದು ವಿದ್ಯಾನಗರದ ನನ್ನ ಮನೆಯ ಮುಂದೆ ರಾತ್ರಿ 11 ಪಿಎಮ್ ಕ್ಕೆ ನಿಲ್ಲಿಸಿದ್ದ ಮೋಟರ ಸೈಕಲ್ ಕೆಎ- 32 ಕೆ- 7456 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:11/03/2015 ರಂದು ಶ್ರೀಮತಿ ಸುಮಂಗಲಾ ಗಂಡ ಮಲ್ಲಿಕಾರ್ಜುನ ನಾಗಶಟ್ಟಿ ಸಾ:ವಿದ್ಯಾನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ:10/03/2015 ರಂದು ಸಾಯಂಕಾಲ 6.30 ಗಂಟೆಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ರಥೋತ್ಸವ ಇದ್ದ ಪ್ರಯುಕ್ತ ದೇವರ ದರ್ಶನ ಕುರಿತು ಬಂದಿದ್ದು ಸಾಯಂಕಾಲ 6.45 ಗಂಟೆ ಸುಮಾರಿಗೆ ರಥದ ಹತ್ತಿರ ದರ್ಶನ ಮಾಡುವಾಗ ಜನ ದಟ್ಟಣೆಯಲ್ಲಿ ನನ್ನ ಕೊರಳಲಿದ್ದ 50 ಗ್ರಾಂ ಬಂಗಾರದ ಮಂಗಳಸೂತ್ರ ಅ.ಕಿ.1,30,000/-ರೂ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:  ದಿನಾಂಕ 11-03-2015 ರಂದು ರಾತ್ರಿ 8-30 ಗಂಟೆಗೆ ಶಿವಶಂಕರ ತಂದೆ ಬಾಬುರಾವರವರು  ರಾಮ ಮಂದಿರ ಹತ್ತಿರ ಮೋ/ಸೈಕಲ ನಂಬರ ಕೆಎ-32 ಇಡಿ-9381 ನೇದ್ದನ್ನು ರಾಮ ಮಂದಿರ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಕರುಣೇಶ್ವರ ನಗರ ಕ್ರಾಸ ಹತ್ತಿರ ಓಮಿನಿ ವ್ಯಾನ ನಂಬರ ಕೆಎ-22 ಎಮ್-5282 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ಮೋ/ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಪಡಿಸಿದ್ದು  ನನಗೆ ತಲೆಯ ಮೇಲೆ ರಕ್ತಗಾಯ, ಬಲ ಮೆಲಕಿಗೆ ರಕ್ತಗಾಯ, ಹಾಗು ಬಲಗಾಲಿನ ಕಿರುಬೆರಳಿಗೆ ರಕ್ತಗಾಯಗಳಾಗಿದ್ದು. ಓಮಿನಿ ವ್ಯಾನ ಚಾಲಕ ವ್ಯಾನನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ: ದಿನಾಂಕ:-12/03/2015 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಶ್ರೀ ಸೈಯ್ಯದ ಆರೀಫ್ ಪಾಶಾ ತಂದೆ ಸೈಯ್ಯದ  ಅಮಿನೋದ್ದಿನ್ ಸಾ|| ಯದುಲ್ಲಾ ಕಾಲೋನಿ ಕಲಬುರಗಿ ತನ್ನ ಮೋಟಾರ್ ಸೈಕಲ್ ಹಿರೋಹೊಂಡಾ ಫ್ಯಾಶನ್ ನಂ- ಕೆಎ-32-ಯು-758 ನೇದ್ದರ ಮೇಲೆ ತನ್ನ ಮಗನಾದ ಸೈಯ್ಯದ ಕಮ್ರಾನ್ ಪಾಶಾ ಈತನಿಗೆ  ಹಿಂದೆ ಕೂಡಿಸಿಕೊಂಡು ತಮ್ಮೂರಾದ ನಾಗೂರಕ್ಕೆ ಹೋಗುವಾಗ ಕಲಬುರಗಿ ಹುಮ್ನಾಬಾದ ರೋಡಿನ ಉಪಳಾಂವ ಕ್ರಾಸ್ ಹತ್ತಿರ ಎದರುಗಡೆಯಿಂದ ಬರುತ್ತಿದ್ದ ಟೀಪ್ಪರ ನಂ: ಕೆಎ-32-ಬಿ-2807 ನೇದ್ದರ ಚಾಲಕನು ಅತಿ ವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಅಪಘಾತಪಡಿಸಿದ್ದರಿಂದ ತನಗೆ ಗಾಯಗಳಾಗಿದ್ದು ತನ್ನ ಮಗನಾದ ಕಮ್ರಾನ್ ಪಾಶಾ ಈತನಿಗೆ ತಲೆಯ ಹಿಂದೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಎಡ ಕಿವಿಯಿಂದ ರಕ್ತ ಬಂದು ಬಲ ತೊಡೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

11 March 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ದಿನಾಂಕ  20.02.2015 ರಂದು ರಾತ್ರಿ ಮಮ್ಮ ತಮ್ಮನಾದ ಮಹಿಬೂಬ ಶೇಖ ಇತನು ಲಾರಿ ಡ್ರೈವರ ಕೆಲಸದಿಂದ ಕಲಬುರಗಿಯಲ್ಲಿ ಇಳಿದು ನಮ್ಮ  ಮೊ.ಸೈ  ನಂ ಕೆಎ-32 ಯು-7960 ಮೇಲೆ ಕಲಬುರಗಿದಿಂದ ನಂದೂರ ಮಾರ್ಗವಾಗಿ  ಶಹಾಬಾದ ಕ್ಕೆ ಬರುವಾಗ ಮರತೂರ ಕ್ರಾಸ  ದಾಟಿ  ಸೀಮೆ  ಮರಗಮ್ಮಾ  ಗುಡಿಯ ಹತ್ತಿರ ರೋಡಿನ ತಗ್ಗಿನಲ್ಲಿ ನಮ್ಮ  ಮೊ.ಸೈ ನ್ನು ಅತಿವೇಗ ಮತ್ತು ನಿಷ್ಕಳಜಿತನದಿಂದ ಚಲಾಯಿಸಿಕೊಂಡು ರೋಡಿನ ತಗ್ಗಿನಲ್ಲಿ  ಸ್ಕಿಡಾಗಿ ರೋಡಿನ ಬಲಗಡೆ  ಬಿದ್ದಿರುತ್ತಾನೆ ಅಂತಾ ಗೊತ್ತಾಗಿ ನಾನು ಮತ್ತು  ನನ್ನ ದೊಡ್ಡಪ್ಪನ ಮಗನಾದ ಅಬ್ದುಲ ರೌಫ ಹಾಗೂ ಮೊಹಮ್ಮದ ಸಾಬ ಪಟೇಲ ರವರು ಕೂಡಿಕೊಂಡು ದೇವನ ತೆಗನೂರ ದಾಟಿ ಸಿಮೆ ಮರಗಮ್ಮಾ ಗುಡಿಯ ಹತ್ತಿರ  8 ಪಿ.ಎಮ್. ಕ್ಕೆ ಹೋಗಿ  ನೋಡಲಾಗಿ  ರೋಡಿನ ಎಡಗಡೆ  ರಕ್ತದ ಕಲೆ ಬಿದ್ದಿದ್ದು ನೋಡಲಾಗಿ  ತಲೆಯ  ಹಿಂಭಾಗಕ್ಕೆ ಭಾರಿ  ರಕ್ತಗಾಯವಾಗಿ ತಲೆಯ ಮೇಲೆ ಬಾವು  ಬಂದು  ಒಳಪೆಟ್ಟಾಗಿದ್ದು  ಮತ್ತು ಎಡ ಕಿವಿಯಿಂದ ರಕ್ತ ಸೋರುತ್ತಿದ್ದು ಪ್ರಜ್ಞೆ ತಪ್ಪಿದನು ಗಾಯ ಪೆಟ್ಟು  ಹೊಂದಿದ್ದು ನನ್ನ ತಮ್ಮನಿಗೆ 108 ಅಂಬುಲೆನ್ಸದಲ್ಲಿ ಕಲಬುರಗಿ ವಾತ್ಸಲ್ಯ ಆಸ್ಪತ್ರೆಗೆ ಸೇರಿಕೆಮಾಡಿ ಅಂದೆ ರಾತ್ರಿ ಹೆಚ್ಚಿನ ಉಪಚಾರ ಕುರಿತು  ಸೊಲ್ಲಪೂರದ ಗಂಗಾಮಾಯಿ ಆಸ್ಪತ್ರೆಗೆ ನಾವೆಲ್ಲರು ಕೂಡಿ ಸೇರಿಕೆ ಮಾಡಿರುತ್ತೇವೆ. ಸದರಿ ಆಸ್ಪತ್ರೆಯಲ್ಲಿ  ಉಪಚಾರ ಹೊಂದುತ್ತಾ ದಿನಾಂಕ: 24.02.2015  ರಂದು ಬೆಳಿಗ್ಗೆ ಉಪಚಾರ ಫಲಕಾರಿ ಆಗದೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಅಬ್ದುಲ ರಹೀಮ ತಂದೆ ಭಾಷುಮಿಯ್ಯಾ  ಶೇಖ ಸಾ|| ಶರಣ ನಗರ ಶಹಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ವೆಂಕಟರಾವ ಕುಲಕರ್ಣಿ ಸಾ: ವಿಧ್ಯಾನಗರ ಕಲಬುರಗಿ ರವರು ದಿನಾಂಕ: 10/03/2015 ರಂದು ತನ್ನ ಮೋ/ಸೈಕಲ್ ನಂ; ಕೆಎ 32 ಕ್ಯೂ 8530 ನೆದ್ದರ ಮೇಲೆ ಮಹಾನಗರ ಪಾಲಿಕೆ ಕಾರ್ಯಾಲಯದಿಂದ ಎಸ್.ವಿ.ಪಿ.ಸರ್ಕಲ್ ರೋಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಶಾಹಾ ಆಸ್ಪತ್ರೆಯ ಎದುರಿನ ರೋಡ ಮೇಲೆ ಜಗತ ಸರ್ಕಲ್ ಕಡೆಯಿಂದ ಮೊ/ಸೈಕಲ್ ನಂ: ಟಿ.ಎಸ್. 06 ಇಸಿ 5430 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಗಾಯಗೊಳಿಸಿ ಮೋ/ಸೈಕಲ ಸ್ಥಳದಲ್ಲೇ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಆಳಂದ ಠಾಣೆ : ಶ್ರೀ.ಮನೋಹರ ತಂದೆ ನಾರಾಯಣರಾವ ದಳವಿ ಸಾ|| ಶೇರಿಕಾರ ಕಾಲೋನಿ ಉಮರ್ಗಾ ರೋಡ ಆಳಂದ  ಇವರು ದಿನಾಂಕ:10/03/2015 ರಂದು ಎಂದಿನಂತೆ ಮನೆಯಲ್ಲಿ ಯಾರು ಇಲ್ಲದಿರುವುದರಿಂದ ವರ್ಕಶಾಪ್ ಕ್ಕೆ  ಹೋಗುವಾಗ ಮನೆಯ ಬಾಗಿಲು ಮುಚ್ಚಿ ವರ್ಕಶಾಪ್ ದಲ್ಲಿ ಮದ್ಯಾಹ್ನ 12 ಗಂಟೆಯವರೆಗೆ ಕೆಲಸ ಮಾಡಿ ನಂತರ ಮನೆಗೆ ನೀರು ಕುಡಿಯಲು ಹೋದಾಗ ಮನೆಯ ಕೀಲಿ ಮುರಿದು ಕೆಳಗಡೆ ಬಿದ್ದಿದನ್ನು ನೋಡಿ ಗಾಬರಿಯಾಗಿ ಮನೆಯೊಳಗೆ ಹೋಗಿ ಮನೆಯಲ್ಲಿನ ಅಲಮಾರಿಯಲ್ಲಿನ ಎಲ್ಲಾ ಸಾಮಾನುಗಳು ಚೆಲ್ಲಾಪಿಲಿಯಾಗಿ ಬಿದ್ದಿರುವದನ್ನು ನೋಡಿ ಅಲಮಾರಿಯಲ್ಲಿ ನಗದು ಹಣ ಬಂಗಾರದ ಆಭರಣಗಳು ಒಟ್ಟು 2,50,000/- ರೂ ಕಿಮ್ಮತ್ತಿನವುಗಳನ್ನು ದಿನಾಂಕ:10/03/2015 ರಂದು ಬೇಳಗ್ಗೆ 10:00 ಗಂಟೆಯಿಂದ ಮದ್ಯಾಹ್ನ 12:00 ಗಂಟೆಯ ಮಧ್ಯದಲ್ಲಿ ಮನೆಯಲ್ಲಿ ಯಾರೋ ಇಲ್ಲದನ್ನು ನೋಡಿ ಮನೆಯ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪುಲ್ಲಾರಾಮ ತಂದೆ ಜೇತರಾಮ ಪಟೇಲ ರವರು ದಿನಾಂಕ 08-03-2015 ರಂದು ದಿನಂಪ್ರತಿಯಂತೆ ಬೆಳಿಗ್ಗೆ 8:00 ಗಂಟೆಗೆ ನನ್ನ ಕಿರಾಣಿ ಅಂಗಡಿಗೆ ಬಂದು ಅಂಗಡಿಯ ಬಾಗಿಲು ತಗೆದು ನಂತರ ನಾನು ಮತ್ತು ರಮೇಶ ಇಬ್ಬರು ನಮ್ಮ ಅಂಗಡಿಯ ಮೇಲೆ ಇರುವ ನಮ್ಮ ಕಿರಾಣಿ ಮಾಲು ಇಟ್ಟಿದ ರೂಮಿನಲ್ಲಿ ಹೋಗಿ ನೋಡಲು, ಸದರಿ ರೂಮಿನ ಬಾಗಿಲಿನ ಕೊಂಡಿ ಮುರಿದಿತ್ತು, ನಾನು ಒಳಗೆ ಹೋಗಿ ನೋಡಲು ಸದರಿ ರೂಮಿನಲ್ಲಿ ಇಟ್ಟಿದ 75 ಬಂಡಲ ಮುನ್ಸಿ ಬೀಡಿ ಅಂದಾಜು 13,950/- ರೂ ಕಿಮ್ಮತ್ತಿನದು. 2) ಅಗ್ನಿ ಕಂಪನಿಯ ಚಾಪಡಿ ಪಾಕೇಟಗಳಿರುವಂತಹ ಒಂದು ಬಾಕ್ಸ ಅಂದಾಜು 5100/- ರೂ ಕಿಮ್ಮತ್ತಿನ ಸಾಮಾನುಗಳನ್ನು ದಿನಾಂಕ 07-03-2015 ರಂದು ರಾತ್ರಿ 11:30 ಪಿ ಎಮ್ ಗಂಟೆಯಿಂದ ದಿನಾಂಕ 08-03-2015 ರಂದು ಬೆಳಿಗ್ಗೆ 6:00 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಅಂಗಡಿಯ ಮೇಲೆ ಇದ್ದ ನಮ್ಮ ಕಿರಾಣಿ ಸಾಮಾನುಗಳನ್ನು ಇಟ್ಟಿದ್ದ ರೂಮಿನ ಬಾಗಿಲು ಕೀಲಿ ಮುರಿದು ರೂಮಿನಲ್ಲಿಟ್ಟಿದ್ದ 75 ಬಂಡಲ ಮುನ್ಸಿ ಬೀಡಿಗಳನ್ನು ಹಾಗೂ ಒಂದು ಬಾಕ್ಸ ಅಗ್ನಿ ಚಾಪಡಿಯನ್ನು ಒಟ್ಟು 19,050/- ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.