ವರದಕ್ಷಿಣೆ
ಕಿರುಕುಳ ಪ್ರಕರಣ:
ನಿಂಬರ್ಗಾ
ಪೊಲೀಸ ಠಾಣೆ : ದಿನಾಂಕ 12/03/2015
ರಂದು
ಶ್ರೀಮತಿ ರೇಣುಕಾ ಗಂಡ ಮಲ್ಲಿಕಾರ್ಜುನ ಕಾಂಬಳೆ ಸಾ|| ಸಂಗೋಳಗಿ (ಬಿ) ಹಾ.ವ:| ಭೂಸನೂರ ಇವರಿಗೆ 2014
ನೇ
ಸಾಲಿನ ಮೇ ತಿಂಗಳಲ್ಲಿ ಮಲ್ಲಿಕಾರ್ಜುನ ತಂದೆ ಬಾಬುರಾವ ಕಾಂಬಳೆ ಸಾ|| ಸಂಗೋಳಗಿ (ಬಿ) ಇತನೊಂದಿಗೆ
ಮದುವೆಯಾಗಿದ್ದು ಅವಳ ಗಂಡ ಆತನ ಅಕ್ಕಳಾದ ರೇಖಾ ಇಬ್ಬರೂ ಸೇರಿ ಮದುವೆಯಾದ 3 ತಿಂಗಳ ನಂತರ ದೈಹಿಕ ಮತ್ತು
ಮಾನಸಿಕ ಕಿರುಕುಳ ನೀಡಿದ್ದರಿಂದ ಬೇಸತ್ತು ರೇಣುಕಾ ಇವಳು ಡಿಸೆಂಬರ್ –
2014 ನೇ ಸಾಲಿನಲ್ಲಿ ತನ್ನ ತವರು ಮನೆ ಭೂಸನೂರ ಗ್ರಾಮಕ್ಕೆ ಬಂದು ತನ್ನ ಅಣ್ಣನೊಂದಿಗೆ
ವಾಸುತ್ತಿದ್ದಾಗ ದಿನಾಲು ಮಲ್ಲಿಕಾರ್ಜುನನು ಫೋನ ಮುಖಾಂತರ ಸದರಿಯವಳಿಗೆ ಅವಾಚ್ಯ ಬೈದು ಮನ
ನೋಯಿಸಿದ್ದರಿಂದ ದಿನಾಂಕ 12/03/2015 ರಂದು ತ್ರಾಸ ತಾಳಲಾರದೆ ಮೈ
ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರ್ಪಡೆ
ಮಾಡಿದ್ದು ಆಸ್ಪತ್ರೆಯಲ್ಲಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟವರ ಮೇಲೆ ಕಾನೂನು ಕ್ರಮ
ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ನಿಂರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಳ್ಳಲಾಗಿದೆ.
ಅಪಘಾತ
ಪ್ರಕರಣ:
ಜೇವರ್ಗಿ
ಪೊಲೀಸ ಠಾಣೆ : ದಿನಾಂಕ 12.03.2015
ರಂದು ಮಲ್ಲಪ್ಪ ತಂದೆ ಯಮನಪ್ಪ ಬಿರಾದಾರ ಸಾ|| ಮಾರಡಗಿ ಎಸ್. ಎ ಠಾಣೆಗೆ ಹಾಜರಾಗಿ ದಿನಾಂಕ:
11.03.2015 ರಂದು ಮಧ್ಯಾಹ್ನ ತಾನು ಮತ್ತು ಭೀಮ್‌ಬಾಯಿ
ಗಂಡ ಗಂಡ ಮರೆಪ್ಪ ಬಿರಾಳ ಮತ್ತು ಈಸಪ್ಪ ತಂದೆ ಶಿವಯೋಗಿ ನಾಯಕೋಡಿ ಕುಡಿಕೊಂಡು ಕ್ರೂಜರ್ ಜೀಪ್ ನಂ ಕೆ.ಎ33ಪಿ9909 ನೇದ್ದರಲ್ಲಿ ಕುಳಿತುಕೊಂಡು ಗಂವ್ಹಾರ್ ಗ್ರಾಮಕ್ಕೆ ಹೋಗುತ್ತಿದ್ದಾದ ಗಂವ್ಹಾರ್ ಸಮೀಪ ರೋಡಿನಲ್ಲಿ ಜೀಪ್ ಚಾಲಕನು ತನ್ನ ಜೀಪ್ ಅನ್ನು ಅತಿ ವೇಗ
ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮೇಲೆ ಕಟ್ ಹೋಡೆದು ರೋಡಿನ ಬಲ ಮಗ್ಗಲಿಗೆ ಪಲ್ಟಿ ಮಾಡಿ ನಮಗೆ
ಭಾರಿ ಮತ್ತು ಸಣ್ಣ-ಪುಟ್ಟ ಗಾಯಪಡಿಸಿ ತನ್ನ ಜೀಪ್ ನ್ನು ಬಿಟ್ಟು ಓಡಿ ಹೋಗಿದ್ದು ಕಾರಣ ಜೀಪ್
ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment