POLICE BHAVAN KALABURAGI

POLICE BHAVAN KALABURAGI

20 January 2015

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕತ್ಇಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 19/01/2015 ರಂದು ಮಾಡಿಯಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮದ ಬಸ್ ನಿಲ್ದಾಣದ ಹತ್ತರ ಹೋಗಿ ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಕಲ್ಯಾಣಿ ತಂದೆ ಸಿದ್ದಪ್ಪ ಆಳಂದ ಉ|| ಕೂಲಿಕೆಲಸ, ಸಾ|| ಮಾಡಿಯಾಳ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 2660/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 19/01/2015 ರಂದು ವೈಜಾಪೂರ ಗ್ರಾಮದ ಅಪ್ಪಾರಾಯಗೌಡ ಪೊಲೀಸ್ ಪಾಟೀಲ ಇವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟವಾಡುತ್ತಿದ್ದ  ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ವೈಜಾಪೂರ ಗ್ರಾಮದ ಅಪ್ಪಾರಾಯಗೌಡ ಪೊಲೀಸ್ ಪಾಟೀಲ ಇವರ ಮನೆಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಊರ ಭಾವಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಐದು ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 05 ಜನರನ್ನು ಹಿಡಿದು ವಿಚಾರಿಸಲಾಗಿ 1) ಮಲ್ಲಿಕಾರ್ಜುನ ತಂದೆ ಮಾಹಾದೇವಪ್ಪ ಸಾಗರ 2) ಮಲ್ಲಿನಾಥ ತಂದೆ ಚಂದ್ರಶಾ ಕಲವಗಿ, 3) ಸಿದ್ದಪ್ಪ ತಂದೆ ಪರಶುರಾಮ ಹಾದಿಮನಿ 4) ಸಿದ್ರಾಮ ತಂದೆ ಬಾಬು ಹಾದಿಮನಿ 5) ನಭೀಸಾಬ ತಂದೆ ಸೈಯದಸಾಬ ನಧಾಫ್ ಸಾ: ಎಲ್ಲರು ವೈಜಾಪೂರ  ಇವರಿಂದ ನಗದು ಹಣ 4060/- ರೂಪಾಯಿ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 19/01/2015 ರಂದು ದೇವಂತಗಿ ಗ್ರಾಮದ  ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನ ವ್ಯಕ್ತಿಗಳು ದುಂಡಾಗಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 04 ಜನರನ್ನು ಹಿಡಿದು ವಿಚಾರಿಸಲಾಗಿ  1) ಶರಣಬಸಪ್ಪ ತಂದೆ ಸೋಮಶಂಕರ ಮುಲಗೇ 2) ನಾಗೇಂದ್ರಪ್ಪ ತಂದೆ ಚಂದ್ರಶಾ ನಿಂಬಿತೋಟ 3) ಶ್ರೀಮಂತ ತಂದೆ ದೇವಪ್ಪ ಘರ 4) ಬಸಣ್ಣ ತಂದೆ ಲಗಶೇಪ್ಪ ದೋಡಮನಿ ಸಾ : ಎಲ್ಲರು ದೇವಂತಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 1730/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ :  ದಿನಾಂಕ:18/01/2015 ರಂದು 04-00 ಪಿ.ಎಮ್.ದಿಂದ 06-00 ಪಿ.ಎಮ್. ಅವಧಿಯಲ್ಲಿ ಯಾರೋ ಕಳ್ಳರು ಐ.ಟಿ.ಐ ಕಾಲೇಜಿನ ಎಲೆಕ್ಟ್ರಾನಿಕ್ ಕೋಣೆಯ ಬಾಗಿಲ ತೆಗೆದು ಒಳಗಡೆ ಇದ್ದ ACER MONITOR-17" MODEL NO.1706 AS 2) SONY LCD T.V-32" MODEL NO.KLV 3253 10A ಹಾಗು ದಿನಾಂಕ:28/12/2014 ರಂದು ವರ್ಕಶಾಪ ರೂಮಿನಲ್ಲಿದ್ದ ಕಾರನ ಬ್ಯಾಟರಿ ಸಹ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಎಸ್.ಎನ್ ಪಂಚಾಳ ಪ್ರಚಾರ್ಯರು ITI ಕಾಲೇಜ್ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2.5 ಲಕ್ಷ ರೂ ಬೆಲೆಬಾಳುವ ಟಾಟಾ ಎಸಿ ವಾಹನದೊಂದಿಗೆ ಇಬ್ಬರ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ 12/01/2015 ರಂದು ಮದ್ಯಾಹ್ಬ 1 -30 ಗಂಟೆಗೆ ಶ್ರೀ. ಬಸಲಿಂಗಪ್ಪಾ ತಂದೆ ಶಿವಬಸಪ್ಪಾ ನಿರಡಿ  ಸಾ: ಮನೆ ನಂ. 85 ಶಾಂತಿ ನಗರ ಗಾರ್ಡನ ಹತ್ತಿರ ಗುಲಬರ್ಗಾ  ಇವರ ಟಾಟಾ ಎಸ್ ವಾಹನ ನಂ. ಕೆಎ 32-ಎ-9256 ಚಸ್ಸಿ ನಂ.445051ಜಿಆರಝೆಡವಿ40943 ಇಂಜಿನ ನಂ. 275ಐಡಿಐ05ಜಿಆರ್‌ಜೆಡ್‌ಎಸ್‌39993 ನೇದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು  ಫಿರ್ಯಾದಿದಾರರು ಸಂಶಯ ಪಡ್ಡುತ್ತಿದ್ದ ಸಾಜೀದ ತಂದೆ ಮಹ್ಮದ ಅಲಿ ನಾಗೂರ ಇತನ ಪತ್ತೆ ಮಾಡಿ ದಿನಾಂಕ 13-01-2014 ರಂದು  ಸಂಜೆ 4 ಗಂಟೆಗೆ ಆಳಂದ ಚೆಕ್ ಪೋಸ್ಟ  ಹತ್ತಿರ ಮತ್ತು 5 ಪಿ ಎಂ ಕ್ಕೆ  ಪಿಡಬ್ಲ್ಯೂಡಿ ಕ್ವಾಟರ್ಸ ಹಳೆ ಜೇವರ್ಗಿ ರೋಡ ಹತ್ತಿರ ಪರಶುರಾಮ ತಂದೆ ಶರಣಪ್ಪಾ ಭಜಂತ್ರಿ ರವರಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ ತಂದು ವಿಚಾರಣೆ ಮಾಡಲಾಗಿ 11/12-01-2015 ರ ರಾತ್ರಿ ವೇಳೆಯಲ್ಲಿ ತಾವು ಇಬ್ಬರು ಕೂಡಿ ಬಸಲಿಂಗಪ್ಪಾ ನಿರಡಿ ಮಾಲೀಕರ ಟಾಟಾ ಎಸಿಇ ವಾಹನವನ್ನು ಕಳ್ಳತನ ಮಾಡಿಕೊಂಡು ಚೋರ ಗುಮ್ಮಜ ಹತ್ತಿರ ಒಯ್ದು ಯಾರಿಗಾದರೂ ಮಾರುವ ಸಲುವಾಗಿ  ನಿಲ್ಲಿಸಿರುತ್ತೇವೆ ಅಂತಾ ಒಪ್ಪಿಕೊಂಡಿರುತ್ತಾರೆ.

19 January 2015

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ  ರವರೊಂದಿಗೆ 1) ಜಗದೇವಪ್ಪ ತಂದೆ ಹುಚ್ಚಪ್ಪ ನಾಟಿಕಾರ 2) ಶಿವಪ್ಪ ತಂದೆ ಹುಚ್ಚಪ್ಪ ನಾಟಿಕಾರ 3) ಶಾಂತಾಬಾಯಿ ಗಂಡ ಹುಚ್ಚಪ್ಪ ನಾಟಿಕಾರ 4) ಚಂದಮ್ಮ ತಂದೆ ಹುಚ್ಚಪ್ಪ ನಾಟಿಕಾರ 5) ಯಲ್ಲಮ್ಮ ತಂದೆ ಹುಚ್ಚಪ್ಪ ನಾಟಿಕಾರ 6) ಹುಚ್ಚಪ್ಪ ತಂದೆ ಶಿವಪ್ಪ ನಾಟಿಕಾರ ಸಾ|| ಎಲ್ಲರೂ ಹಳ್ಯಾಳ ಇವರುಗಳು ಮನೆಯ ಜಾಗದ ವಿಚಾರವಾಗಿ ನನ್ನ ಮೇಲೆ ಮತ್ತು ನಮ್ಮ ಸಮಜಾದ ನೀಲಮ್ಮ ಗಂಡ ಜಗದೇವಪ್ಪ ನಾಟಿಕಾರ ವ|| 50 ವರ್ಷ, ಖಾಜಮ್ಮ ಗಂಡ ಮಲ್ಲಿಕಾರ್ಜುನ ನಾಟಿಕಾರ ವ|| 28 ವರ್ಷ ಮೂರು ಜನರು ಮೇಲೆ ದ್ವೇಷ ಮಾಡಿಕೊಂಡು, ಅದೆ ದ್ವೇಷದಿಂದ ನಮ್ಮನ್ನು ಕೊಲೆ ಮಾಡಬೆಕೆಂದು ಎಲ್ಲರು ಅಕ್ರಮವಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಬಂದು ಎಲ್ಲರು ಏಕೊದ್ದೇಶದಿಂದ ನಮ್ಮನ್ನು ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಗಳಿಂದ ಹಾಗೂ ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದು, ಮತ್ತು ಖಾಜಮ್ಮ ಇವಳ ಹೊಟ್ಟೆಗೆ ಆಪ್ರೇಷನ್ ಆದ ಜಾಗಕ್ಕೆ ಕಾಲಿನಿಂದ ಒದ್ದು ಬಾರಿ ಗುಪ್ತಗಾಯವನ್ನು  ಪಡಿಸಿ ಹಾಗೂ ಸೀರೆ ಹಿಡಿದು ಏಳೆದಾಡಿ ಮಾನಹಾನಿ ಮಾಡಿದ ಮತ್ತು ಟಾಟಾ ಎಸಿ ವಾಹನವನ್ನು ನನ್ನ ಮೇಲೆ ಹಾಯಿಸಲು ಬಂದು ಕೊಲೆ ಮಾಡಲು ಪ್ರಯತ್ನಸಿರುತ್ತಾರೆ ಅಂತಾ ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ ಸಾ|| ಹಳ್ಯಾಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 17/01/2015 ರಂದು ಮದ್ಯಾಹ್ನ ಶ್ರೀ ಮಂಜುನಾಥ ಕಾಶರಣವರ ಮತ್ತು ಮೃತ ದತ್ತು ತಂದೆ ಮಾರುತಿ ಮಾನೆ ಇಬ್ಬರು ಕೂಡಿಕೊಂಡು ತಮ್ಮ ಮೊ.ಸೈ ನಂ ಕೆಎ 32 ಇಜಿ 9975 ನೇದ್ದರ ಮೇಲೆ ಸೈಟ್ ನೋಡಿಕೊಂಡು ಕೆರಿಭೋಸಗಾ ಗ್ರಾಮದಿಂದ ಗುಲಬರ್ಗಾ ಕ್ಕೆ ಬರುತ್ತಿರುವಾಗ ಮೋ.ಸೈ ಅನ್ನು ದತ್ತು ತಂದೆ ಮಾರುತಿ ನಡೆಸುತ್ತಿದ್ದು ಅವನ ಹಿಂದೆ ಫಿರ್ಯಾದಿ ಕುಳಿತಿದ್ದು ಆಳಂದ ರೋಡಿನ ವಿಶ್ವರಾಧ್ಯ ಗುಡಿಯ ಎದರುಗಡೆ ಮೋ.ಸೈ ಮೇಲೆ ಬರುತ್ತಿರುವಾಗ ವಿಶ್ವರಾಧ್ಯ ಗುಡಿ ಪೆಟ್ರೋಲ್ ಪಂಪ್ ನಿಂದ ಒಂದು ಕ್ರೋಜರ್ ಜೀಪ್ ನಂಬರ್ ಕೆಎ 37 ಎಂ 1275 ನೇದ್ದರ ಚಾಲಕ ತನ್ನ ಕ್ರೋಜರ್ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಸದರ ಮೋ.ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ದತ್ತು ತಂದೆ ಮಾರುತಿ ಮಾನೆ ಈತನಿಗೆ ತಲೆಗೆ ಎದೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಫಿರ್ಯಾದಿ ಮಂಜುನಾಥ ಕಾಶಣ್ಣವರ ಇತನಿಗೆ ಬಲಗಾಲು ಮುಖಕ್ಕೆ ಭಾರಿ ಪೆಟ್ಟಾಗಿದ್ದು ಅಲ್ಲದೇ ಕ್ರೋಜರ್ ದಲ್ಲಿದ್ದ ಶ್ರೀಮಂತ ತಂದೆ ನಿಂಗಪ್ಪ ಉದನೂರಕರ್ ಈತನಿಗೆ ತಲೆಯ ಹಿಂದುಗಡೆ ಬಲಗಾಲಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀಮತಿ ಶಾರದಾಬಾಯಿ ಗಂಡ ಶರಣಪ್ಪ ಮಡಿವಾಳ ಇವರು  ಮನೆಯಿಂದ ಸಂಡಾಸಕ್ಕೆ ಕಲಬುರಗಿ ಹುಮ್ನಾಬಾದ ರೋಡಿನ ಅವರಾದ (ಬಿ) ಗ್ರಾಮದ ಹತ್ತೀರ ಇರುವ ಮಲ್ಲಣ್ಣಗೌಡ ಇವರ ಹೊಲದ ಹತ್ತೀರ ಹೋಗುವಾಗ ಹಿಂದಿನಿಂದ ಕೆ,ಎಸ್,ಆರ್,ಟಿ ಸಿ ಬಸ್ ನಂ: ಕೆಎ-32-ಎಫ್-1689 ನೇದ್ದರ ಚಾಲಕನು ಹಿಂದಿನಿಂದ ತನ್ನ ಬಸ್ ಅನ್ನು ಅತಿ ವೇಗ & ನಿಸ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಎಡ & ಬಲ ಪಕ್ಕೆಗೆ ಹಾಗೂ ಎಡಭುಜಕ್ಕೆ , ಎರಡು ಮೊಳಕಾಲಿಗೆ  ಭಾರಿ ಒಳಪೇಟ್ಟು ಮತ್ತು ರಕ್ತಗಾಯವಾಗಿ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಆರಾಮವಾಗದ ಕಾರಣ ದಿನಾಂಕ: 15/12/2014 ರಂದು ಮನೆಗೆ ಕರೆದುಕೊಂಡು ಒಯ್ದಿದ್ದು ಅಪಘಾತದಲ್ಲಿ ಆದ ಗಾಯದ ಬಾಧೆಯಿಂದ ಇಂದು ದಿನಾಂಕ: 17/01/2015 ರಂದು ಬೆಳಿಗ್ಗೆ ಮೃತ ಪಟ್ಟಿರುತ್ತಾಳೆ ಅಂತಾ  ಶ್ರೀಮತಿ ಗುಂಡಮ್ಮ ಗಂಡ ಚಂದ್ರಶ್ಯಾ ಮಡಿವಾಳ ಸಾ|| ಅವರಾದ (ಬಿ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

18 January 2015

Kalaburagi District Reported Crimes

ಕೊಲೆ ಪ್ರಕರಣ :
ಮಳಖೇಡ ಠಾಣೆ : ದಿನಾಂಕ  17.01.2015 ರಂದು ರಾತ್ರಿ 10-00 ಪಿ.ಎಂ ಸಮಯಕ್ಕೆ ಆದಿತ್ಯ ನಗರ ಮಳಖೇಡ ಕಾಲೋನಿಯ ಸೆಕುರಿಟಿ ಸುಪರವೈಸರ್ ಆದ ಗಜಾನಂದ ಇವರು ಶ್ರೀ ಎಮ್.ವಿ. ರಮಣಮೂರ್ತಿ ರವರಿಗೆ  ಪೋನ ಮಾಡಿ ತಿಳಿಸಿದೆನೆಂದರೆ, ನಮ್ಮ ಕಾಲೋನಿಯ “ಸಿ” ಬ್ಲಾಕನಲ್ಲಿ ಶೆಡ್ ಬಾಗಿಲು ಮುಂದೆ ಯಾರೋ ಒಬ್ಬನು ಸತ್ತು ಬಿದಿದ್ದಾನೆ. ಅವನ ಮುಖಕ್ಕೆ ತಲೆಗೆ ಭಾರಿ ಗಾಯಗಳಾಗಿದ್ದು  ಮುಖದ ತುಂಬಾರಕ್ತ ಆಗಿದೆ ಅವನ ಪಕ್ಕದಲ್ಲಿ ಒಂದು ಕಬ್ಬಿಣದ ಪೈಪ್ ಬಿದಿದ್ದೆ ಅಂತಾ ಹೇಳಿದನು. ಆಗ ನಾನು ನಮ್ಮ ಕಾಲೋನಿಗೆ ಹೋಗಿ ಅಲ್ಲಿ ಇದ್ದ ಸೆಕುರಿಟಿ ಸುಪರವೈಸರ ಗಜಾನಂದ ಈತನ ಸಂಗಡ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಶಡ್ ನಂ C-4/12 ನೇದ್ದರ ಬಾಗಿಲು ಮುಂದೆ ನೋಡಲಾಗಿ ಒಬ್ಬನು ಗಂಡು ಮನುಷ್ಯನು ಸತ್ತು ಬಿದಿದ್ದನು. ಅವನ ಮುಖಕ್ಕೆ ತಲೆಗೆ ಭಾರಿ ರಕ್ತಗಾಯಗಳಾಗಿದ್ದವು. ಅವನ ಪಕ್ಕದಲ್ಲಿ ಒಂದು ಕಬ್ಬಿಣದ ಪೈಪ ಬಿದಿದ್ದು ಸದರಿಯವನು ಅಪರಿಚಿತನಾಗಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ಅವನು ಸುಮಾರು 35-40 ವರ್ಷದವನಾಗಿರುತ್ತಾನೆ. ಸದರಿಯವನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಕಬ್ಬಿಣದ ಪೈಪನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ಕಂಡು ಬರುತ್ತದೆ. ಸದರಿಯವನಿಗೆ ದಿ: 17-01-2015 ರಂದು ರಾತ್ರಿ 08:00 ಪಿ.ಎಂ ದಿಂದ ರಾತ್ರಿ 09-30 ಪಿ.ಎಂ ಗಂಟೆಯ ಮಧ್ಯದ ಅವಧಿಯಲ್ಲಿ ಕೊಲೆ ಮಾಡಿರಬಹುದು. ಅಂತಾ  ಶ್ರೀ ಎಮ್.ವಿ. ರಮಣಮೂರ್ತಿ ತಂದೆ  ಭರತರಾವ ಸಾ: ವಕ್ಕಾಲಂಕಾವಾರಿ ಸ್ಟ್ರೀಟ ವಿಕಾಸ ರೆಸಿಡೆನ್ಸಿ ಬಿಸಯಡ್ ಕಸಪಾ ಹೈಸ್ಕೂಲ ವಿಜಯನಗರಂ (ಎಪಿ) ಹಾವ: HR 2/4 ಆದಿತ್ಯಾನಗರ ಮಳಖೇಡ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 12, 13-01-15 ರಂದು ರಾತ್ರಿ  12-30 ಗಂಟೆ ಸುಮಾರಿಗೆ ನನ್ನ ಕೊನೆಯ ಮಗಳಾದ ನಂದಿನಿ ಏಕೇ ಮಾಡುತ್ತೇನೆ ಎಂದು ಹೇಳಿ ಮನೆಯಿಂದ ಹೊರೆಗೆ ಇರುವ ಬಾತರೂಮಿಗೆ ಹೋಗಿದ್ದು ,  ಸ್ವಲ್ಪ ಸಮಯದಲ್ಲಿ ನನ್ನ ಹೆಂಡತಿ ಮಗಳು ಬರದ ಕಾರಣ ಹೊರೆಗೆ ಬಂದು ನೋಡಲು ಮಗಳು ಕಾಣಿಸಿದ ಕಾರಣ ನನ್ನ ಹೆಂಡತಿ ರಾತ್ರಿ 1-30 ಗಂಟೆ ಸುಮಾರಿಗೆ ಪೋನ ಮಾಡಿ ವಿಷಯ ತಿಳಿಸಿದಳು. ಮುಂಬೈಗೆ ಹೋಗಿ ಕೆಲಸ ಮುಗಿಸಿಕೊಂಡು ದಿನಾಂಕ 14-01-15 ರಂದು ಬೆಳಿಗ್ಗೆ 11-30 ಗಂಟೆಗೆ ಬಂದು ಕಲಬುರಗಿಗೆ  ಬಂದು ನನ್ನ ಮಗಳಾದ ನಂದಿನಿ ಇವಳನ್ನು  ರೇಲ್ವೆ ಸ್ಟೇಷನ,  ಬಸಸ್ಟ್ಯಾಂಡ ಕಲಬುರಗಿ ನಗರದಲ್ಲಿ ಹುಡುಕಾಡಲೂ ಸಿಕ್ಕಿರುವುದಿಲ್ಲಾ. ದಿನಾಂಕ 17-01-15 ರಂದು ಬೆಳಿಗ್ಗೆ  ನಮ್ಮ ಓಣಿಯಲ್ಲಿ ಓಣಿಯ ಜನರು ನನ್ನ ಮಗಳಾದ ನಂದಿನಿ ಇವಳಿಗೆ ಓಣಿಯ ಶೇಖರ ತಂದೆ ಹಣಮಂತ ಕ್ಷತ್ರಿ ಇತನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ  ಅಂತಾ ಶ್ರೀ ಶರಣಬಸಪ್ಪ ತಂದೆ ನಂದಕುಮಾರ ಸಾತಖೇಡ ಸಾ:ಆಳಂದ ಚೆಕ್ಕ ಪೋಸ್ಟ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ: 17-01-2015 ರಂದು ಬೆಳಿಗ್ಗೆ 6-00 ಗಂಟೆಯಿಂದ 7-00 ಗಂಟೆ ಮಧ್ಯದ ಅವಧಿಯಲ್ಲಿ ಕಲಬುರಗಿ ಹುಮನಾಬಾದ ಮಾರ್ಗ ಮಧ್ಯದಲ್ಲಿರುವ ಕುರಿಕೋಟಾ ಸೇತುವೆ ಹತ್ತಿರ ಯಾವುದೋ ಒಬ್ಬ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಗಂಡನಾದ ರಾಮಲು ತಂದೆ ಸಾಬಣ್ಣಾ ಪೆಂಡಗೊಂಡ ಸಾ: ರುದ್ರಸಮುದ್ರಂ ತಾ:ಮಕ್ತಲ್ ಜಿ: ಮಹಿಬೂಬ ನಗರ ತೆಲಂಗಾಣ ರಾಜ್ಯ ಈತನಿಗೆ ಡಿಕ್ಕಿ ಹೊಡೆದ ಸದರಿ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾರೆ. ಫಿರ್ಯಾದಿಯ ಗಂಡ ರಾಮಲು ಈತನಿಗೆ ಭಾರಿ ರಕ್ತಗಾಯ ವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ಶ್ರೀಮತಿ ರೇಣಮ್ಮಾ ಗಂಡ ರಾಮಲು ಪೆಡಗೊಂಡ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂಔ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.