POLICE BHAVAN KALABURAGI

POLICE BHAVAN KALABURAGI

27 August 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂದನ :
ಅಫಜಲಪೂರ ಠಾಣೆ : ದಿನಾಂಕ:- 26/08/2014 ರಂದು ಬೆಳಿಗ್ಗೆ ಉಡಚಾಣ ಗ್ರಾಮದ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ್ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1. ದೀಲಿಪ ತಂದೆ ಅಬುಬಕರ ಬಡದಾಳ 2. ಶಿವಾನಂದ ತಂದೆ ಅಣ್ಣಪ್ಪಾ ಮೇತ್ರ 3. ವಿಠಲ ತಂದೆ ಗಣಪತಿ ಕಡಲಗಿ 4. ಸಿದ್ಧರ್ಥ ತಂದೆ ನಿಂಗಪ್ಪ ದೊಡ್ಡಮನಿ 5. ಲಗಮಣ್ಣ ತಂದೆ ಕಾಸಣ್ಣಾ ಪೂಜಾರಿ 6. ಮಕ್ತುಮ ತಂದೆ ವಜೀರಸಾಬ ಮುಜಾವರ ಸಾ : ಎಲ್ಲರು ಉಡಚಣ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ 1290/- ರೂ ಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ಮಾಣಿಕಪ್ಪ ತಂದೆ ಈರಣ್ಣ ಕುಂದೇಲ್ ಸಾ: ಕುರಕುಂಟಾ ಇವರ ಮಗಳಾದ ವೀಣಾ ಇವಳು ದಿನಾಂಕ 18-07-2014 ರಂದು ಶಾಲೆಗೆ ಹೋದವಳು ಮನೆಗೆ ಬಂದಿಲ್ಲಾ ಅಂತ ಗೊತ್ತಾಗಿ  ನಾನು ಮತ್ತು ನನ್ನ ಹೆಂಡತಿ ಕೂಡಿ ಶಾಲೆಯ ಕಡೆಗೆ ಹೋಗಿ ಹುಡುಕಾಡಿದರೂ ಎಲ್ಲಿಯು ಅವಳ ಸುಳಿವು ಸಿಗಲಿಲ್ಲದ್ದರಿಂದ, ಮರುದಿವಸ ದಿನಾಂಕ: 19-07-2014 ರಂದು ಅವಳ ಶಾಲೆಗೆ ಹೋಗಿ ಮುಖ್ಯ ಗುರುಗಳಿಗೆ  ವಿಚಾರಿಸಲು ಆಗ ಅವರು ತಿಳಿಸಿದ್ದೇನೆಂದರೆ ನಿಮ್ಮ ಮಗಳಾದ ವೀಣಾ ಇವಳು ನಿನ್ನೆ ದಿವಸ ಮದ್ಯಾಹ್ನ 1230 ಗಮಟೆಯ ಸುಮಾರಿಗೆ ಆರಾಮ ಇರದ ಕಾರಣ ಮನೆಗೆ ಹೋಗುವುದಾಗಿ ಹೇಳಿ ಹೋದಳು ಅಂತ ತಿಳಿಸಿದರು. ಆಗ ನಾನು ಅವಳ ಗೆಳತಿಯರಿಗೆ ವಿಚಾರಿಸಿದಾಗ ಅವರು ಕೂಡ 1230 ಗಂಟೆಯ ಸುಮಾರಿಗೆ ಮನೆಗೆ ಹೋಗಿತ್ತೇನೆ ಅಂತ ಹೇಳಿ ಹೋದ ಬಗ್ಗೆ ತಿಳಿಸಿದರು. ನಂತರ ನಾವು ಇಲ್ಲಿಯ ವರೆಗೆ  ಎಲ್ಲಾ ಕಡೆಗೆ  ಹುಡುಕಾಡಿದರೂ ಮತ್ತು ನಮ್ಮ ಸಂಭಂದಿಕರಿಗೆ ಪೋನ್ ಮಾಡಿ ವಿಚಾರಿಸಿದರು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ  ಇದನ್ನು ನೋಡಿದಾಗ ನಮ್ಮ ಮಗಳಾದ ವೀಣಾ ಇವಳಿಗೆ  ದಿನಾಂಕ: 18-07-2014 ರಂದು ಮದ್ಯಾಹ್ನ 1300 ಗಂಟೆಯ ಸುಮಾರಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಜಗದೇವಿ ಗಂಡ ಬಸಣ್ಣಾ ರೋಡಗಿ ಸಾ|| ನಿಂಬರ್ಗಾ ರವರ ತಂಗಿಯಾದ ಶಿವಲಿಲಾ ಇವರ ಮಗನಾದ ವೀರೆಶ @ ಕಿರಣ ತಂದೆ ಸಿದ್ದಣ್ಣ ಪೆದ್ದಿ ವ|| 17 ವರ್ಷ, ಇವನು 6 ವರ್ಷಗಳಿಂದ ನಮ್ಮ ಮನೆಯಲ್ಲಿಯೆ ಮತ್ತು ನಮ್ಮ ಊರಲ್ಲಿಯೆ ಶಿಕ್ಷಣ ಕಲಿಯುತ್ತಾ ಇದ್ದನು, ಈ ವರ್ಷ ಎಸ್.ಎಸ್.ಎಲ.ಸಿ ಪರೀಕ್ಷೆಯಲ್ಲಿ ಪಾಸಾಗಿರುತ್ತಾನೆ. ದಿನಾಂಕ 23/07/2014 ರಂದು ಬೆಳಿಗ್ಗೆ 1100 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ವೀರೆಶನು ನನ್ನ ತಂದೆ ತಾಯಿಯ ಜೀವ ನೆನಸುತ್ತಿದ್ದು ಊರಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ. ಸಾಯಂಕಾಲ 0600 ಗಂಟೆ ಸುಮಾರಿಗೆ ಅವನ ತಂದೆಯಾದ ಸಿದ್ದಣ್ಣಾ ಇವರಿಗೆ ನಾನು ಫೊನ ಮುಖಾಂತರ ವಿಚಾರಿಸಲಾಗಿ ವೀರೆಶ @ ಕಿರಣನು ಇಲ್ಲಿಗೆ ಬಂದಿರುವದಿಲ್ಲ ಅಂತ ತಿಳಿಸಿರುತ್ತಾರೆ. ಗಾಬರಿಯಾಗಿ ನಾನು ನಿಂಬರ್ಗಾ ಗ್ರಾಮದ ಬಸ ನಿಲ್ದಾಣ ಹಾಗೂ ಊರಿನ ಇತರೆ ಕಡೆಗಳಲ್ಲಿ ವಿಚಾರಿಸಲಾಗಿ ಅವನ ಬಗ್ಗೆ ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಂತೋಷ ಕುಮಾರ ತಂದೆ ಬಾಬುರಾವ ಬನಶಟ್ಟಿ ಸಾ:ಸಂತೋಷ ಕಾಲೋನಿ ಅಳಂದ ರಸ್ತೆ ಗುಲಬರ್ಗಾ ಇವರು ದಿನಾಂಕ:  26-08-2014 ರಂದು ಬೆಳಗ್ಗೆ ತನ್ನ ಹೆಂಡತಿ ಶೋಭಾವತಿ ಇವಳು ಕೆಲಸಕ್ಕೆಂದು  ಜೋಗುರ ಗ್ರಾಮಕ್ಕೆ ಹೋಗಿದ್ದು ನಾನು ನನ್ನ ಕೆಲಸಕ್ಕೆ 10 ಗಂಟೆಗೆ ಮನೆಯ ಬೀಗ ಹಾಕಿ ಹೋಗಿ ಮರಳಿ 2 ಗಂಟೆಗೆ ಮನೆಗೆ ಬಂದು ಊಟ ಮಾಡಿಕೊಂಡು ಮತ್ತೆ ಮನೆಗೆ ಬೀಗ ಹಾಕಿ ನನ್ನ ಕೆಲಸಕ್ಕೆ ಹೋಗಿದ್ದು ಮಧ್ಯಾನ 2-45 ಗಂಟೆ ಸುಮಾರಿಗೆ ನನ್ನ ಅಣ್ಣ ಸಂಜೀವಕುಮಾರ ಇವರು ನನಗೆ ಪೋನ ಮುಖಾಂತರ ತಿಳಿಸಿದ್ದೇನೆಂದರೆ ನಿಮ್ಮ ಮನೆಯ ಬಾಗಿಲು ತೆರೆದಿದ್ದು ಇರುತ್ತದೆ. ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗಿಲು ತೆರೆದಿದ್ದು ಇದ್ದು ನಾನು ಮನೆಯ ಒಳಗೆ ಹೋಗಿ ನೋಡಲು ಮನೆಯ ಹಾಲಿನಲ್ಲಿದ್ದ 1 ಎಲ್‌.ಜಿ ಕಂಪನಿಯ ಎಲ್‌‌‌.ಸಿ.ಡಿ ಟಿ ವಿ ಮತ್ತು ಅಡಿಗೆ ರೂಮೀನಲ್ಲಿ ಹೋಗಿ ನೋಡಲು ಅಡಿಗೆ ರೂಮೀನಲ್ಲಿದ್ದ ಅಲಮಾರ ತೆರೆದಿದ್ದು ಅಲಮಾರದಲ್ಲಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ  ಒಟ್ಟು 1,86,716/-ರೂ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸೈಯದ ಅಹ್ಮದ ನೆಂದರೆ ದಿನಾಂಕ 23-08-2014 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ತನ್ನ ಹೆಂಡತಿ ಚಿಟಿ ದುಡ್ಡು ತರುತ್ತೇನೆಂದು ಹೇಳಿ ರಾತ್ರಿ ಮನೆಗೆ ಬರದೇ ಮಗನಾದ ಫರೀದ ಈತನಿಗೆ ಪಕ್ಕದ ಮನೆಯಲ್ಲಿ ಮಲಗಿಕೊಳ್ಳುವಂತೆ ತಿಳಿಸಿದ್ದರಿಂದ ಫರೀದ ಈತನು ಪಕ್ಕದ ಮನೆಯ ಮಾಣಿಕ ಇವರ ಮನೆಯಲ್ಲಿ ಮಲಗಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಅರುಣಾ ಇವಳು ಮನೆಯ ಮುಂದೆ ಮಲಗಿಕೊಂಡಿದ್ದು ಅವಳಿಗೆ ಗಾಯವಾಗಿದ್ದು ಅವಳನ್ನು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಗಾಯಾಳು ಮನೆಗೆ ಬರುತ್ತಿರುವಾಗ ಯಾವುದೋ ವಾಹನ ಡಿಕ್ಕಿ ಪಡಿಸಿ ಹೋಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ನಾಗರತ್ನಾ ಗಂಡ ಶರಣಬಸವ ನಡುವಿನಮನಿ ಸಾ: ಮಲದಕಲ್ಲು ತಾ: ದೇವದುರ್ಗ ಜಿ: ರಾಯಚೂರ ಸದ್ಯ ಹಾ: ವ: ಐಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ರವರಿಗೆ ಮಲ್ಲದಕಲ್ಲು ಗ್ರಾಮದ ಗಂಗಪ್ಪ ತಂದೆ ಬಸಪ್ಪ ನಡುವಿನಮನಿ ಇವರ ಮಗನಾದ ಶರಣಬಸವನ ಜೊತೆ ನಮ್ಮ ಮನೆಯ ಹಿರಿಯರು ಗಂಡನ ಮನೆಯವರು ಎಲ್ಲರೂ ಕೂಡಿಕೊಂಡು ಮಾತುಕತೆ ಆಡಿ ಮಾತುಕತೆ ಸಮಯದಲ್ಲಿ ಮದುವೆಯ ವರದಕ್ಷಿಣೆಯಾಗಿ 14 ತೊಲೆ ಬಂಗಾರ ಹಾಗೂ ನಗದು ಹಣ 5 ಲಕ್ಷ ರೂ ನಗದು ಹಣ ಹಾಗೂ ಹುಡುಗನ ಮದುವೆ ಬಟ್ಟೆಗಾಗಿ 20 ಸಾವಿರ ರೂಪಾಯಿಗಳು ಹಾಗೂ ಸಂಪ್ರದಾಯದಂತೆ ಹಾಂಡೆ ಬಾಂಡೆ ಕೊಡಬೇಕು ಮದುವೆ ಮಾತ್ರ ಹುಡಗನ ಮನೆಯವರು ಮಾಡಿಕೊಳ್ಳಬೇಕು ಅಂತ ಮಾತುಕತೆ ಆಡಿ ದಿನಾಂಕ 25-01-2012 ರಂದು ಮದುವೆಯು ನಿಶ್ಚಿಯ ಮಾಡಿದ್ದು ಇರುತ್ತದೆ. ಸದರಿ ನಮ್ಮ ಹಿರಿಯರು ಹಾಗೂ ಗಂಡನ ಮನೆಯ ಹಿರಿಯರು ಮದುವೆ ನಿಶ್ಚಯದ ಸಮಯದಲ್ಲಿ ಮಾತುಕತೆ ಆಡಿದಂತೆ ಈ ಮೇಲಿನ ಬಂಗಾರ, ನಗದು ಹಣ ಹುಡುಗನ ಅಕ್ಷತಾ ಬಟ್ಟೆಯ ಹಣ ಎಲ್ಲವನ್ನು ಕೊಟ್ಟು ಅದರೊಂದಿಗೆ ವರೋಪಾಚಾರ ಅಂತಾ ಪಲಂಗ, ಅಲ್ಮಾರಿ, ಫ್ಯಾನು ಪ್ರೀಡ್ಜು, ಏರಕೂಲರ ಹಾಗೂ ದಿನ ನಿತ್ಯದ ವಸ್ತುಗಳಾದ ಹಾಂಡೆ, ಬಾಂಡೆ ಇನ್ನಿತರ ಸಾಮಾನುಗಳು ಒಟ್ಟು 2 ಲಕ್ಷ ಕಿಮ್ಮತ್ತಿನವುಗಳು ಹೀಗೆ ಒಟ್ಟು ಎಲ್ಲಾ ಸೇರಿ 11,34,000/- ರೂಪಾಯಿಗಳು ಕೊಟ್ಟು ಗಂಡನ ಮನೆಯ ಊರಾದ ಮಲದಕಲ್ಲ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದಿನಾಂಕ 25-01-2012 ನೇ ಸಾಲಿನಲ್ಲಿ ನಮ್ಮ ಸಂಪ್ರದಾಯದಂತೆ ನಮ್ಮ ಮತ್ತು ಗಂಡನ ಮನೆಯವರ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿದ್ದು ದಿನಾಂಕ: 16-08-2014 ರಂದು ರಾತ್ರಿ 9-45 ಗಂಟೆಯ ಸುಮಾರಿಗೆ ನಾನು ಕರ್ತವ್ಯ ಮುಗಿಸಿಕೊಂಡು ನಾನು ವಾಸವಾಗಿರುವ ಮನೆಯ ಹತ್ತಿರ ಇರುವ ಮರಗಮ್ಮ ಗುಡಿಯ ಮುಂದೆ ನಡೆದುಕೊಂಡು ಹೋಗುವಾಗ ಅಲ್ಲಿ ಒಮ್ಮೇಲೆ ಎದುರಿಗೆ ಬಂದ ನನ್ನ ಗಂಡ ಶರಣಬಸವನು ನನಗೆ ಕೈ ಹಿಡಿದು ಜಗ್ಗಿ ರಂಡಿ ಕರಿ ಮೋತಿಯಕ್ಕೆ ನನ್ನ ಮನೆಗೆ ಪೊಲೀಸರಿಗೆ ಹ್ಯಾಂಗ ಕಳುಹಿಸಿದ್ದಿ ನಿನಗ ಎಷ್ಟು ಸೊಕ್ಕ ಅದೆ, ಯಾರೋ ಬಂದರು ನಾನು ನಿನ್ನ ಜೊತೆ ಸಂಸಾರ ಮಾಡಲ್ಲಾ, ನಾನು ತಿರುಗಾಡಲಿಕ್ಕೆ ಗಾಡಿ ತೊಗೋಬೇಕು ಅಂತ ಹಣ ತೊಗೊಂಡು ಬಾ ಅಂದರ ತಂದಿಲ್ಲಾ, ನೀನು ಗಾಡಿ ಮ್ಯಾಗ ಓಡಾಡತ್ತಿ ಸೂಳಿ ಅಂತಾ ಅವ್ಯಾಚ್ಛವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ನನ್ನ ಕೂದಲು ಹಿಡಿದು ಏಳೆದಾಡಿ ನನಗೆ ನೋಕಿಕೊಟ್ಟು ಇನ್ನೊಮ್ಮೆ ನೀನು ಪೊಲೀಸರಿಗೆ ನನ್ನ ಮನೆಗೆ ಕಳುಹಿಸಿದರೆ ನಿನಗೆ ಜೀವ ಸಹಿತ ಇಡುವುದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 August 2014

Gulbarga District Reported Crimes

ಹಲ್ಲೆ ಮಾಡಿ ಸುಲಿಗೆ ಮಾಡಿದ ಆರೋಪಿತರ ಬಂಧನ :
 ಸ್ಟೇಷನ ಬಜಾರ ಠಾಣೆ : ಗುಲಬರ್ಗಾ ನಗರದ ಐವಾನ-ಏ-ಶಾಹಿ ರಸ್ತೆಯಲ್ಲಿಯಲ್ಲಿರುವ ಇನಾಮದಾರ ಕಾಂಪ್ಲೆಕ್ಸ್ ನಲ್ಲಿ ಹೋರ ರಾಜ್ಯದ ಮೆಡಿಕಲ್ ಮತ್ತು ಇಂಜಿನಿಯರ ವಿದ್ಯಾರ್ಥಿಗಳು ವಾಸವಾಗಿರುವ ರೂಮಿಗೆ ನುಗ್ಗಿ ಮಾರಕಾಸ್ತ್ರದಿಂದ ಹೆದರಿಸಿ ಬೆಲೆಬಾಳುವ ಮೋಬೈಲಗಳು ಹಾಗು ನಗದು ಹಣ ದೋಚಿಕೊಂಡು ಹೋದ ಬಗ್ಗೆ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾನ್ಯ ಎಸ್ ಪಿ ಸಾಹೇಬರು, ಮಾನ್ಯ ಅಪರ ಎಸ್.ಪಿ ಸಾಹೇಬರು ಹಾಗು ಮಾನ್ಯ ಡಿ ಎಸ್ ಪಿ ಸಾಹೇಬರು ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ರಾಜಶೇಖರ ಹಳಿಗೋಧಿ ಹಾಗು ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ 1. ಇರ್ಫಾನ ಅಹ್ಮದ ಖಾನ ತಂದೆ ಶಕೀಲ ಅಹ್ಮದ ಖಾನ ಸಾ:ಸಂಪಿಗೆ ನಗರ ಗುಲಬರ್ಗಾ 2. ವಾಹೀದ ಅಹ್ಮದ ತಂದೆ ರುಕ್ಮೋದ್ದಿನ ಪಟೇಲ ಸಾ:ಎಮ್.ಎಸ್.ಮಿಲ್ ಗುಲಬರ್ಗಾ  3. ಶಹಾಬಾಜ ಅಹ್ಮದ ತಂದೆ ಅಬ್ದುಲ ಮಜೀದ ಸಾ:ಬಿಲಾಲಾಬಾದ ಕಾಲೋನಿ ಗುಲಬರ್ಗಾ 4. ಮಹ್ಮುದ ಅಮಾನುಲ್ಲಾ ತಂದೆ ಮಹ್ಮುದ ಕರಿಮುಲ್ಲಾ ಸಾ:ವಿದ್ಯಾ ನಗರ ಗುಲಬರ್ಗಾ 5. ಸೈಯದ ಆದಿಲ ತಂದೆ ಸೈಯದ ಶೌಕತ ಸಾ:ವಿದ್ಯಾ ನಗರ ಗುಲಬರ್ಗಾ ಇವರನ್ನು ದಿನಾಂಕ: 24-08-2014 ರಂದು ಬಂಧಿಸಿ ಬಂಧಿತರಿಂದ     8 ಮೋಬೈಲಗಳು, ನಗದು ಹಣ ಮತ್ತು ಅಪರಾಧಕ್ಕೆ ಬಳಸಿದ 4 ಸೈಕಲ್ ಮೋಟಾರಗಳು ಸೇರಿ ಹೀಗೆ ಒಟ್ಟು  ಅಂದಾಜು 3 ಲಕ್ಷ ರೂಪಾಯಿ ಕಿಮ್ಮತ್ತಿನ ಮಾಲನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ ಅಂಬೇಡ್ಕರ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಅಂಬೇಡ್ಕರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಶ್ರೀಶೈಲ ತಂದೆ ಪುಂಡಲಿಕ ಮಾಶಾಳ  ಸಾ|| ಆಲಮೇಲ ಹಾ|||| ಉಸ್ಮಾನಿಯಾ ಕಾಲೋನಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 320/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ ಸರಕಾರಿ ಪ್ರೌಡ ಶಾಲೆ ಹತ್ತಿರ ರಾಜಧಾನಿ ಧಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ರಾಜಧಾನಿ ಧಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಕಾಂತ ತಂದೆ ಮಲ್ಲಿಕಾರ್ಜುನ ಮಲ್ಲಾಬಾದಿ ವಯ; 23 ವರ್ಷ ; ವ್ಯಾಪಾರ ಸಾ|| .ಪಿ.ಎಮ್.ಸಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ ;
ಸಂಚಾರಿ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸೈಯದ ಅಹ್ಮದ ಸಾಃ ಮ. ನಂ. 11-970/2 ರಾಮಚಕ್ಕಿ ಹತ್ತಿರ ಎಮ್.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ರವರು ದಿನಾಂಕ 23-08-2014 ರಂದು ರಾತ್ರಿ 8-00 ಪಿ.ಎಮ್ ದಿಂದ ದಿನಾಂಕ 24-08-2014 ರ ಬೆಳಗಿನ ಜಾವ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಗಾಯಾಳು ಅರುಣಾ ನಡೆದುಕೊಂಡು ಮನೆಗೆ ಬರುತ್ತಿರುವಾಗ ಯಾವುದೋ ಒಂದು ವಾಹನ ಡಿಕ್ಕಿ ಪಡಿಸಿ ಹೋಗಿರುತ್ತದೆ. ಗಾಯಾಳು ತನ್ನ ಮನೆಯ ಮುಂದೆ ಮಲಗಿಕೊಂಡಿದನ್ನು ದಿನಾಂಕ 24-08-2014 ರಂದು ಬೆಳಗ್ಗೆ ಆಕೆಯ ಮಗನಾದ ಫರೀದ ಈತನು ನೋಡಿ  ಅಕ್ಕಪಕ್ಕದದವರ ಸಹಾಯದಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾನೆ. ಅಪಘಾತದಲ್ಲಿ ಗಾಯಾಳು ತಲೆಗೆ ಪೆಟ್ಟಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಕಳವು ಪ್ರಕರಣಗಳು  :
ಚೌಕ ಠಾಣೆ : ಶ್ರೀ ದೇವಿಂದ್ರ ತಂದೆ ನಾಗಪ್ಪ ಪಾಟೀಲ ಸಾ ;ಆಳಂದ ಕಾಲೋನಿ ಗುಲಬರ್ಗಾ ರವರು ದಿನಾಂಕ; 25/08/2014 ರಂದು ಬೆಳ್ಳಿಗ್ಗೆ 9.30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಮಕ್ಕಳು ದೇವಸ್ತಾನಕ್ಕೆ ಹುಣಸಗಿ ಗ್ರಾಮಕ್ಕೆ ಹೋಗಿದ್ದು ನಾನು ಸಹ  9.30 ಗಂಟೆಯ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ಹೋಗ್ಗಿದ್ದು ಮರಳಿ ನನ್ನ ಹೆಂಡತಿ ಮಕ್ಕಳು ಮದ್ಯಾಹ್ನ 2.30 ಗಂಟೆಗೆ ಮನೆಗೆ ಬಂದು ನೋಡಿದಾಗ ನಮ್ಮ ಮನೆಗೆ ಹಾಕಿರುವ ಕೀಲಿಯನ್ನು ಮುರಿದು ಕೆಳಗಡೆ ಬಿದ್ದಿದ್ದು ನೋಡಿ ಗಾಬರಿಗೊಂಡು ನನಗೆ ಪೋನ ಮಾಡಿದ್ದರಿಂದ ನಾನು ಬಮದು ನೋಡಿದಾಗ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೊಂಡಿ ಮತ್ತು ಕೀಲಿ ಮುರಿದಿದ್ದು ಮನೆಯೊಳಗೆ ಹೋಗಿ ನಾವು ಪರೀಶೀಲಿಸಿ ನೋಡಿದಾಗ ನಮ್ಮ ಮನೆಯಲ್ಲಿರುವ ಅಲ್ಮಾರಿಯಲ್ಲಿರುವ ಬಂಗಾರದ ಬೆಳ್ಳಿಯ ಆಭರಣಗಳು ಒಟ್ಟು 3.35.750/- ಬೆಲೆ ಬಾಳುವ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಸಿದ್ರಾಮಪ್ಪಾ ಪಾಟೀಲ ಸಾಃ ಪ್ಲಾಟ ನಂ 29 ಸ್ವಸ್ತೀಕ ನಗರ ಬೀಲಗುಂಡಿ ಲೇಔಟ ಗುಲಬರ್ಗಾ ಇವರು ಮನೆಯ ಕಟ್ಟಡ ಕಟ್ಟುತ್ತಿದ್ದು, ಸದರ ಮನೆಯ ನೆಲ ಅಂತಸ್ತಿನಲ್ಲಿ ನಡುಭಾಗದಲ್ಲಿರುವ ಬೇಡ ರೂಮಿನಲ್ಲಿ ಪಿ.ಓ.ಪಿ ಮಾಡುವ ಗುತ್ತೆದಾರರಾದ 1. ಮಹ್ಮದ ಶಬ್ಬಿರ ಅಹ್ಮದ 2. ಶರಣಬಸಪ್ಪಾ ಔರಾದ ಇವರುಗಳಿಗೆ ಸೇರಿದ 1.ಒಂದು ಬಾಷಾ ಮಶೀನ 2. ಒಂದು ಹ್ಯಾಮರ ಮಶೀನ 3.  ಚೇನಲ್ ಮಶೀನ ಎರಡು ಜೋತೆ 4. ದಾಗರ ಚಂದ ಕಟಿಂಗ ಮಶೀನ 5. ಕಟಿಂಗ್ ಮಶೀನ್ ಅಃಕಿಃ 6. ಗ್ರಾಂಡರ್ ಹೈಟೆಕ್ ಪವರ್ ಅಲ್ಲದೇ ಮನೆ ಕೆಲಸಕ್ಕಾಗಿ ತಂದು ಇಡಲಾಗಿದ್ದ ನಳದ ತೊಟ್ಟಿ ಜೋಡಣೆಯ ಬಿಡಿಭಾಗಗಳು ಹಾಗು ವಿದ್ಯುತ್ ಛಕ್ತಿ ಸರಬರಾಜು ಬೋರ್ಡ ಹಾಗು ಇತರೆ ಸಾಮಾನುಗಳು ದಿನಾಂಕಃ 24/08/2014 ರಂದು ರಾತ್ರಿ 08:00 ಗಂಟೆಗೆ ಬೆಡ್ ರೂಮಿನಲ್ಲಿ ಇಟ್ಟು ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕಃ 25/08/2014 ರಂದು ಬೆಳಗ್ಗೆ 06:00 ಗಂಟೆಗೆ ಬಂದು ನೋಡಲಾಗಿ ಬೆಡ್ ರೂಮಿಗೆ ಹಾಕಿದ ಕೀಲಿ ಮುರಿದಿದ್ದು ಒಳಗಡೆ ಇದ್ದ ಮೇಲಿನ ಸಾಮಾನುಗಳು ಇರಲಿಲ್ಲಾ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರ4ಕರಣ ದಾಖಲಾಗಿದೆ.   
ಅಶೋಕ ನಗರ ಠಾಣೆ : ಶ್ರೀ ಶ್ರೀರಂಗ ವರದಪಾಂಡೆ ತಂದೆ ಅಶೋಕ ವರದಪಾಂಡೆ ವಿಳಾಸ: ನಂ;13 1-3-183/40/68/1 ಗಾಂಧಿನಗರ ಹೈದ್ರಾಬಾದ. ಸದ್ಯದ ವಾಸ: ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾ ರವರು 4 ವರ್ಷಗಳಿಂದ ನಾನು ನನ್ನ ಕುಟುಂಬದವರೊಂದಿಗೆ ಬಸಣ್ಣ ಎಸ್. ಸಿಂಪಿ ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾದಲ್ಲಿ ಮೋದಲ ಮಹಡಿಯಲ್ಲಿ ವಾಸವಾಗಿರುತ್ತೇವೆ.  ಕೆಳಗಡೆ ನೆಲ ಮಹಡಿಯ್ಲಲಿ ಮಾಲಿಕರು ವಾಸವಾಗಿರುತ್ತಾರೆ. ದಿನಾಂಕ: 21/08/2014 ರಂದು ರಾತ್ರಿ 8:00 ಗಂಟೆಗೆ ನಮ್ಮ ಮನೆಯ ಮಾಲಿಕರಾದ ಬಸಣ್ಣ ಸಿಂಪಿ ಮತ್ತು ಅವರ ಹೆಂಡತಿಯಾದ ಶ್ರೀಮತಿ ಶೈಲಜಾ ರವರೊಂದಿಗೆ ಬೆಂಗಳೂರಿಗೆ ಹೋಗಿ ಬರುತ್ತೇವೆ ಮನೆಯಲ್ಲಿ ಯಾರು ಇರಲ್ಲ ಮನೆ ಬೀಗ ಹಾಕಿದ್ದು ನೋಡಿಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ. ನಂತರ ನಾನು ದಿನಾಂಕ 25/08/2014 ರಂದು  ಮುಂಜಾನೆ 7:00 ಗಂಟೆಗೆ ಕೆಳಗಡೆ ಬಂದಾಗ ಮನೆಯ ಮಾಲಿಕರ ಮನೆಯ ಬಾಗಿಲು ತೆರೆದಿದ್ದು ಕಂಡು ಬಂತು ಹತ್ತಿರ ಹೋಗಿ ನೋಡಲು ಮನೆಯ ಕಬ್ಬಿಣ ಗೇಟಬಾಗಿಲದ ಕೊಂಡಿ ಮುರಿದಿದ್ದು ಒಳಗಡೆ ಬಾಗಿಲ ಕಿಲಿ ಕೂಡಾ ಮುರಿದಿದ್ದು ಬೇಡ್ ರೂಂ ನಲ್ಲಿನ ಅಲಮಾರಿಯ  ಬಾಗಿಲು ತೆರೆದಿದ್ದು ಅದರಲ್ಲಿರುವ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ನಂತರ ನಾನು ನನ್ನ ಮನೆಯ ಮಾಲಿಕರಾದ ಬಸಣ್ಣ.ಸಿಂಪಿ ಅವರಿಗೆ ಫೋನ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿದೆನು. ಆಗ ಮಾಲಿಕರು ನನಗೆ ತಿಳಿಸಿದ್ದು ಒಂದು ಕಪ್ಪು ಬಣ್ಣದ ಪರ್ಸಿನಲ್ಲಿ ನನ್ನ ವಿಳಾಸದ ಕಾಗದ ಪತ್ರಗಳೊಂದಿಗೆ 7 ಸಾವಿರ ರೂ.ಗಳು ನಗದು ಹಣ ಇದ್ದವು ಎಂದು ತಿಳಿಸಿದರು. ಯಾರೊ ಕಳ್ಳರು ನಮ್ಮ ಮಾಲಿಕರ ಮನೆಯ ಬೀಗ ಮುರಿದು ಮನೆ ಒಳಗೆ ಪ್ರವೇಶ ಮಾಡಿ ಅಲಮಾರಿ ಇತ್ಯಾದಿ ಚಲ್ಲಪಿಲ್ಲಿ ಮಾಡಿದ್ದು ನಗದು ಹಣ 7 ಸಾವಿರ ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.