POLICE BHAVAN KALABURAGI

POLICE BHAVAN KALABURAGI

25 August 2014

Gulbarga District Reported Crimes

ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಬ್ದುಲ ರಹೆಮಾನ ತಂದೆ ಅಲ್ಲಾಬಕ್ಷ ಶೇಖ ಸಾ :ಚಾಂದಬಡಾ ಶಹಾಬಾದ ರವರಿಗೆ ನಮ್ಮ ತಂದೆಯವರ ಕಾಲದಿಂದ  ಬೆಂಡಿ ಬಜಾರದಲ್ಲಿ  3 ಅಂಗಡಿಗಳ ಕೋಣೆಗಳಿದ್ದು,  ಒಂದು  ಕೋಣೆಯಲ್ಲಿ  ನಾನು ಸ್ವಂತ ಮೆಣಸಿಕಾಯಿ ಕುಟ್ಟುವ ಮಶೀನ ಹಾಕಿ ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಇನ್ನುಳಿದ 2 ದುಕಾನಗಳು ಬಾಡಿಗೆಗೆ ಕೊಟ್ಟಿರುತ್ತೇವೆ.  ಆ ಅಂಗಡಿಗಳ ವಿಷಯದಲ್ಲಿ  ನನಗೂ  ಮತ್ತು ನನ್ನ ತಮ್ಮ ಅಬ್ದುಲ  ಜಬ್ಬಾರನಿಗೂ  ಸುಮಾರು  6 ತಿಂಗಳಿಂದ  ತಕರಾರು ಆಗಿ ಮನೆಯಲ್ಲಿ ನಮ್ಮ ತಂದೆಯವರು  ಅವನಿಗೂ ಕೂಡ ವ್ಯಾಪಾರಕ್ಕಾಗಿ 3 ಲಕ್ಷ ರೂಪಾಯಿ ಕೊಟ್ಟಿದ್ದರು,  ಸದರಿ ನನ್ನ ತಮ್ಮ ನನಗೆ ಮತ್ತು ನಮ್ಮ ತಂದೆಯವರಿಗೆ 3 ಲಕ್ಷ ಹಣ ಮತ್ತು ಎರಡು ಅಂಗಡಿಗಳು ನನಗೆ ಕೊಡು ಅಂತಾ ತಕರಾರು ಮಾಡುತ್ತಿದ್ದನು. ಇಲ್ಲದಿದ್ದರೆ, ಇನ್ನು 3 ಲಕ್ಷ ರೂಪಾಯಿ ಕೊಡು ಅಂತಾ ನನಗೆ ಮತ್ತು ನಮ್ಮ ತಂದೆತಾಯಿಯವರೊಂದಿಗೆ ಹಲವಾರು ಬಾರಿ ಜಗಳಮಾಡಿ  ತೊಂದರೆ ಮಾಡುತ್ತಾ ಬಂದಿದ್ದು ದಿನಾಂಕ: 22/08/2014 ರಂದು ಸಾಯಂಕಾಲ ನಾನು ಮನೆಯ ಮುಂದೆ ನಿಂತುಕೊಂಡಾಗ ನನ್ನ ತಮ್ಮ ಅಬ್ದುಲ ಜಬ್ಬರ ಇತನು ಬಂದು ನನಗೆ ಏ ಬೋಸಡಿ ಮಗನೆ ಇನ್ನೂ 3 ಲಕ್ಷ್ಮ ರೂಪಾಯಿ ಕೊಡುತ್ತಿ ಇಲ್ಲಾ ನಿನ್ನ ಜೀವ ತೆಗೆದು ಎಲ್ಲಾ ಅಂಗಡಿಗಳು ನಾನೇ ತೆಗೆದುಕೊಳ್ಳುತ್ತೇನೆ. ಅಂತಾ ಚಿರಾಡಿ ಹೋಗಿದ್ದು ದಿನಾಂಕ: 24/08/2014 ರಂದು ರಾತ್ರಿ 7-30 ಗಂಟೆಗೆ ನಾನು ಬೆಂಡಿ ಬಜಾರದಿಂದ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಬರುವಾಗ ಮನೆಯ ಹತ್ತಿರದ ರೋಡಿನಲ್ಲಿ   ಲೋಹರಗಲ್ಲಿ  ಕಡೆಯಿಂದ  ನನ್ನ ತಮ್ಮ ಅಬ್ದುಲ ಜಬ್ಬರ ಇತನು ತನ್ನ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು  ಏ ರಾಂಡಕೆ ಅಂತಾ ಅವಾಚ್ಯ ಬೈದು  ನನಗೆ ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ನನ್ನ ಹೊಟ್ಟೆಗೆ ಚಾಕುವಿನಿಂದ ಹೊಡೆಯಲು ಬಂದಾಗ,  ನಾನು ತಪ್ಪಿಸಿಕೊಳ್ಳು  ಒಮ್ಮೇಲೆ ತಿರುಗಿದೆನು.   ಅದ್ದರಿಂದ ನನ್ನ ಬೆನ್ನಿಗೆ  ಚಾಕು ಹತ್ತಿ   ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮಾಹಾಗಾಂವ ಠಾಣೆ : ಸಿದ್ರಾಮಪ್ಪಾ ಹುಡಗಿ ಈತನು ಸುಮಾರು 6-7 ವರ್ಷಗಳಿಂದ ವಿಪರಿತ ಕುಡಿತ ಚಟಕ್ಕೆ ಬಲಿಯಾಗಿ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿದ್ದು   ನಿನ್ನೆ ದಿ: 23/08/14 ರಂದು ಸೆರೆ ಕುಡಿದ ನಶೆಯಲ್ಲಿ ರಕ್ತವಾಂತಿ ಮಾಡಿಕೊಂಡಿದ್ದ ರಿಂದ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ಇಂದು ದಿನಾಂಕ:24/08/2014 ರಂದು ಬೆಳಿಗ್ಗೆ 7-30 ಗಂಟೆಯಿಂದ 10-00 ಗಂಟೆ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಶ್ರೀಮತಿ ಮಾಲಾಶ್ರೀ ಗಂಡ ಸಿದ್ರಾಮಪ್ಪಾ ಹುಡಗಿ ಸಾ: ಹೊಳಕುಂದಾ ತಾ:ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀಮತಿ ಮಾನಂದಾ ಗಂಡ ಶಿವುಪುತ್ರ ಹೊಸಗೌಡ ಸಾ: ಗುಂಡಗುರ್ತಿ ಇವರ ಗಂಡನಾದ ಶಿವಪುತ್ರ ಈತನು ಟೇಲರ ಕೆಲಸ ಮಾಡಿಕೊಂಡಿದ್ದು ಇಂದು ಬೆಳ್ಳಿಗಿನ ಜಾವ 4-45 ಸುಮಾರಿಗೆ ನನ್ನ ಗಂಡ ಈತನು ರೊಡಿನ ಕಡೆಗೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೋದರು ನಂತರ 5-20 ಎ.ಎಮ್ ಕ್ಕೆ ನಮ್ಮ ಗ್ರಾಮದ ಮಲ್ಲಿಕಾರ್ಜುನ ಈತನು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ ತಾನು ಹಾಗೂ ನಿಮ್ಮ ಗಂಡ ಶಿವುಪುತ್ರ ಇಬ್ಬರು ಕೂಡಿ ಸಂಡಾಸ ಕುಳಿತು ಮರಳಿ ಮನೆಗೆ ಬರಬೇಕು ಅಂತಾ ಮಲ್ಲಿಕಾರ್ಜುನ ಖರ್ಗೆ ರವರ ಮನೆ ಹತ್ತಿರ ರೊಡಿನ ಪಕ್ಕದಿಂದ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ಸಿಲ್ವರ ಬಣ್ಣದ ವಾಹನ ನಂ ಕೆಎ-32 ಎಮ್-9284 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೊಡಿನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ನಿನ್ನ ಗಂಡನಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿನ್ನ ಗಂಡನ ಟೊಂಕಿಗೆ ಭಾರಿ ರಕ್ತಗಾಯ ತೆಲೆಗೆ ರಕ್ತಗಾಯ ಬಲಗೈಗೆ ಭಾರಿ ರಕ್ತಗಾಯವಾಗಿ ಎರಡು ಮೂಳಕಾಲಗಳು ಕಿತ್ತಿರುತ್ತವೆ. ಸದರಿ ವಾಹನ ಚಾಲಕನು ತನ್ನ ವಾಹನ ನಿಲ್ಲಿಸಿದಂತೆ ಮಾಡಿದಾಗ ನಾನು ನಂಬರ ನೋಡಿದ್ದು ಆಗ ಸದರಿ ವಾಹನ ಚಾಲಕ ತನ್ನ ವಾಹನ ಸಮೇತ ಓಡಿ ಹೋಗಿದ್ದು ನಿನ್ನ ಗಂಡ ಸ್ಥಳದಲ್ಲಿಯೇ ಬಿದ್ದಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಹಾಗೂ ನಮ್ಮ ಮೈದುನನಾದ ಜಗನ್ನಾಥ ಹಾಗೂ ಅಣ್ಣಾರಾವ ಕೂಡಿ ಸ್ಥಳಕ್ಕೆ ಬಂದು ನನ್ನ ಗಂಡನಿಗೆ ನೋಡಲಾಗಿ ಭಾರಿ ರಕ್ತಗಾಯ & ತೆಲೆಗೆ ರಕ್ತಗಾಯ , ಬಲಗೈಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಬಿದ್ದಿದ್ದು ನಂತರ ನನ್ನ ಗಂಡನಿಗೆ ಅಂಬುಲೈನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡ ಉಪಚಾರ ಫಲಕಾರಿ ಆಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಗಿ ಠಾಣೆ : ಶ್ರೀಮತಿ ಮಾಹಾದೇವಿ ಗಂಡ  ಬಸವರಾಜ ಜೋತೆಪನೋವರ್ @ ಚಂದಾಪ್ಪನೋವರ್ ಸಾ:ಮುಕರಂಬಾ ಇವರು ದಿನಾಂಕ 24/08/2014 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನನ್ನ ಗಂಡ ಮತ್ತು ಇನ್ನು 3-4 ಜನರು ಕೂಡಿ ಪ್ರತಿ ವರ್ಷದಂತೆ ಶ್ರೀ ರೇವಣಸಿದ್ದೇಶ್ವರ ದೇವರ ದರ್ಶನಕ್ಕೆಂದು ಕ್ರೂಸರ್ ವಾಹನ ನಂಬರ ಕೆಎ-28 ಎಮ್-4361 ನೇದ್ದರಲ್ಲಿ ಹೋಗುತ್ತಿರುವಾಗ ಚಾಲಕನು ಅತೀ ವೇಗ ಹಾಗೂ ನಿಲಕ್ಷ್ಯತನದಿಂದ ವಾಹನ ಓಡಿಸಿ ಬೇಡಸೂರ ದಾಟಿ ಭೀಮಾಶಂಕರ ಕುಲಕರ್ಣಿ ಇವರ ಹೊಲದ ಹತ್ತಿರ ಅಪಘಾತ ಪಡಿಸಿದ್ದರಿಂದ ಅದರಲ್ಲಿ ಕುಳಿತ ಬಸವರಾಜ ಜೋತೆಪನೋರ ಭಾರಿ ಗಾಯ ಹೊಂದಿದ್ದು ಹಾಗೂ ಇನ್ನು 3 ಜನರಿಗೆ ರಕ್ತಗಾಯಗಳಾಗಿ 108 ವಾಹನನದಲ್ಲಿ ಉಪಚಾರಕ್ಕಾಗಿ ತೆಗೆದುಕೊಂಡು ಹೋಗಿದ್ದು ನನ್ನ ಗಂಡನಿಗೆ ಖಾಸಗಿ ಜೀಪಿನಲ್ಲಿ ಗುಲಬರ್ಗಾಕ್ಕೆ ಉಪಚಾರಕ್ಕೆಂದು ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 August 2014

Gulbarga District Reported Crimes

ಹುಡುಗ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಅಂಬಾರಾಯ ತಂದೆ ಚಂದ್ರಶಾ ಪೂಜಾರಿ ಸಾಃ ಕೋತನ ಹಿಪ್ಪರಗಾ ತಾಃ ಆಳಂದ ಜಿಲ್ಲಾಃ ಗುಲಬರ್ಗಾ ರವರ  ಹಿರಿಯ ಮಗ ಚಂದ್ರಕಾಂತ ಇವರಿಗೆ ಗುಲಬರ್ಗಾದ ಧರಂಸಿಂಗ ಕನ್ನಡ ಪ್ರಾಥಮಿಕ ಶಾಲೆ ಅಂಬಿಕಾ ನಗರ ಗುಲಬರ್ಗಾದಲ್ಲಿ ಶಾಲೆ ಕಲಿಯಲು ಸೇರಿಕೆ ಮಾಡಿದ್ದು, ಈಗ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಕರುಣೇಶ್ವರ ನಗರದಲ್ಲಿರುವ ಬಿ.ಸಿ.ಎಮ್ ಹಾಸ್ಟಲದಲ್ಲಿ ಇರುತ್ತಾನೆ. ಹೀಗಿರುವಾಗ ದಿನಾಂಕ 19/08/2014 ರಂದು ಸಾಯಂಕಾಲ 06:00 ಪಿ.ಎಮ್ ಸುಮಾರಿಗೆ ಧರಂಸಿಂಗ ಶಾಲೆಯ ಶಾಂತಯ್ಯಮಠ ಮುಖ್ಯೋಪಾಧ್ಯಾಯರು ಇವರು ಫೋನ್ ಮೂಲಕ ತಿಳಿಸಿದ್ದೆನೆಂದರೆ, ನನ್ನ ಮಗ ದಿನಾಂಕ 19/08/2014 ರಂದು 01:15 ಪಿ.ಎಮ್ ಸುಮಾರಿಗೆ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ ತಿಳಿಸಿದ್ದ, ನಾನು ಮತ್ತು ನಮ್ಮ ಮಾವ ಈರಪ್ಪಾ ಪೂಜಾರಿ ಕೂಡಿ ಶಾಲೆಗೆ ಬಂದು ಶಾಂತಯ್ಯಮಠ ಇವರಿಗೆ ವಿಚಾರಿಸಿ ಗುಲಬರ್ಗಾ ನಗರದಲ್ಲಿ ಎಲ್ಲಾ ಕಡೆ ತಿರುಗಾಡಿ ವಿಚಾರಿಸಿದರು ಕೂಡಾ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ ಮರಲಿಂಗಮ್ಮ ಗಂಡ ನಾಗಪ್ಪ ಹೊನ್ನಪ್ಪನೋರ,ಸಾ: ಕಲಕಂಬಾ ಗ್ರಾಮ, ಇವರ ಗಂಡ ನಾಗಪ್ಪ ಇವರು ದಿನಾಂಕ 23-08-2014 ರಂದು ಬೆಳಿಗ್ಗೆ ಮನೆಯಿಂದ ಕ್ರುಜರ ಜೀಪ ನಡೆಸಲು ಅಂತಾ ಹೇಳಿ ಹೋಗಿ ರಾತ್ರಿಯಾದರೂ ನನ್ನ ಗಂಡ ಮನೆಗೆ ವಾಪಸ್ಸು ಬಂದಿರಲಿಲ್ಲ. ರಾತ್ರಿ 11 ಗಂಟೆಯ ಸುಮಾರಿಗೆ ಸೇಡಂ ದಿಂದ ಸವೇರಾ ಹೊಟೆಲ ಮಾಲಿಕ ಯುನುಸ್ ಇವರು ಪೋನ ಮಾಡಿ ನನಗೆ ತಿಳಿಸಿದ್ದೆನಂದರೆ, ದಿನಾಂಕ 23-08-2014 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಿನ್ನ ಗಂಡ ನಾಗಪ್ಪ ಈತನು ನಮ್ಮ ಕ್ರುಜರ್ ಜೀಪ ಗುಲ್ಬರ್ಗಾ ದಿಂದ ಪ್ಯಾಸೆಂಜರ್ ಹಾಕಿಕೊಂಡು ಬಂದು ಸೇಡಂ ನ ಬಸವೇಶ್ವರ ಹೊಟೆಲ ಮುಂದುಗಡೆ ಇರುವ ಟ್ಯಾಕ್ಸಿ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ನಡೆದುಕೊಂಡು ಸೇಡಂ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಗುಲ್ಬರ್ಗಾ ಕಡೆಯಿಂದ ಒಂದು ಕ್ರುಜರ್ ಜೀಪ ನಂಬರ ಕೆಎ-32,ಬಿ-6552 ನೇದ್ದರ ಚಾಲಕ ಪ್ರಶಾಂತ ಇತನು ತನ್ನ ಕ್ರುಜರ್ ಜೀಪನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನಾಗಪ್ಪ ಇತನಿಗೆ ಸೇಡಂನ ಐ ಬಿ. ಎದುರುಗಡೆ ಮುಖ್ಯರಸ್ತೆಯ ಮೇಲೆ ಕ್ರುಜರ್ ಡಿಕ್ಕಿ ಪಡಿಸಿದ್ದರಿಂದ ನಾಗಪ್ಪ ಇತನು ಕೆಳಗೆ ಬಿದ್ದನು ಆಗ ನಾನು ಮತ್ತು  ಸಂಜು ನಾಮದಾರ, ಕಾಲಜ್ಞಾನಮೂರ್ತಿ ಮತ್ತು ಶರಣಯ್ಯ ಗಣಾಚಾರಿ ಸಾ:ಸೇಡಂ ಎಲ್ಲರೂ ಅಫಘಾತವನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ನಾಗಪ್ಪ ಇತನಿಗೆ ಅಫಘಾತದಲ್ಲಿ ಎಡಗೈ ಮೊಳಕೈಗೆ ರಕ್ತಗಾಯ, ಎಡಗೈ ಭುಜಕ್ಕೆ ಗುಪ್ತಗಾಯ ಹಾಗು ತರಚಿದ ಗಾಯವಾಗಿದ್ದು  ಎಡಗಡೆ ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ವಾಗಿದ್ದು ನಾವು ನಾಗಪ್ಪ ಇತನಿಗೆ ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡುವಷ್ಟರಲ್ಲಿ ವೈಧ್ಯರು ಪರೀಕ್ಷಿಸಿ ನಾಗಪ್ಪ ಇತನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು . ಕ್ರುಜರ ಚಾಲಕ ನಾಗಪ್ಪ ಇವರಿಗೆ ಅಫಘಾತ ಪಡಿಸಿದ ನಂತರ ಕ್ರುಜರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನೀವು ಸೇಡಂ ಸರಕಾರಿ ಆಸ್ಪತ್ರೆಗೆ ಬರ್ರಿ” ಅಂತಾ ತಿಳಸಿದ್ದರಿಂದ ನಾನು ಮತ್ತು ನಮ್ಮ ಅತ್ತೆಯಾದ ರತ್ನಮ್ಮ ಗಂಡ ಸಾಬಣ್ಣ ಹೊನ್ನಪ್ಪನೋರ ಇಬ್ಬರು ಕೂಡಿ ಸೇಡಂ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ನಾಗಪ್ಪ ಇವರು ಅಫಘಾತದಲ್ಲಿ ಗಾಯ ಹೊಂದಿ ಮೃತ ಪಟ್ಟಿದ್ದು ನಿಜಇರುತ್ತದೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 22-08-2014 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಶ್ರೀ ತಾರಾಸಿಂಗ @ ಮೋಹನ ತಂದೆ ಶಂಕರ ಚವ್ಹಾಣ ಸಾ: ಪ್ಲಾಟ ನಂ 52 ಸಾಹಿ ಮಂದಿರ ಹಿಂದುಗಡೆ ಭಾಗ್ಯಲಕ್ಷ್ಮಿ ನಗರ  ಗುಲಬರ್ಗಾ  ರವರು ತನ್ನ ಮೋ/ಸೈಕಲ್ ನಂ; ಕೆಎ 32 ಜೆ 2563 ನೆದ್ದರ ಮೇಲೆ ಸತೀಶ ಈತನಿಗೆ ಹಿಂದೆ ಕೂಡಿಸಿಕೊಂಡು ಸಿ.ಟಿ ಬಸ್ ನಿಲ್ದಾಣ ದಿಂದ ಜಗತ ಸರ್ಕಲ್ ಕಡೆಗೆ ಹೋಗುತ್ತಿರುವಾಗ ದಾರಿ ಮಧ್ಯದ ಮೈಕ್ರೋಟವಾರ ಹತ್ತಿರ ರೋಡಿನ ಮೇಲೆ ಮೋ/ಸೈಕಲ್ ನಂ; ಕೆಎ 34 ವಿ 9537 ರ ಸವಾರನು ತನ್ನ ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲ್ ಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ನನ್ನ ಬಲಗಾಲ ಮೊಳಕಾಲ ಕೆಳಗೆ ರಕ್ತ ಗಾಯ , ಬಲಗಾಲ ರಿಸ್ಟ ಹತ್ತಿರ ಭಾರಿ ರಕ್ತಗಾಯ ಹಾಗು ಎಡ ತಲೆಗೆ ರಕ್ತಗಾಯವಾಗಿರುತ್ತದೆ. ಸತೀಶ ಇತನಿಗೆ ಯಾವುದೆ ಗಾಯಗಳು ಆಗಿರುವದಿಲ್ಲಾ .ಫಿರ್ಯಾದಿಗೆ ಗಾಯಗೊಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶರಣು ಕುಮಾರ ತಂದೆ ಭೀಮಣ್ಣಾ ಇವರು ದಿನಾಂಕಃ 22/08/2014 ರಂದು ರಾತ್ರಿ 08:30 ಪಿ.ಎಂ. ನನ್ನ ಡಿ.ಎಲ್ ಕಮ್ಯೂನಿಕೇಷನ್ ಮೊಬೈಲ್ ಅಂಗಡಿಗೆ ಎಂದಿನಂತೆ ಕೀಲಿ ಹಾಕೊಮಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ 23/08/2014 ರಂದು 06:00 ಎ.ಎಂ. ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿದ್ದ ಆಕಾಶ ಕ್ಷೌರ ಅಂಗಡಿಯ ಮಾಲಿಕರಾದ ಶ್ರೀಮಂತ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮೊಬೈಲ್ ಅಂಗಡಿಯ ಬಾಗಿಲು ತೆರೆದಿದೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮೊಬೈಲ್ ಅಂಗಡಿಗೆ ಬಂದು ನೋಡಲಾಗಿ ಅಂಗಡಿಗೆ ಹಾಕಿದ ಕೀಲಿ ಮುರಿದಿದ್ದು ಅಂಗಡಿಯ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ ಮೊಬೈಲಗಳು ಮತ್ತು ಮೋಡಮ ಹಾಗು ನಗದು ಹಣ ಹೀಗೆ ಒಟ್ಟು 22,500/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2014

Gulbarga District Reported Crimes

ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಾಹೇಬಖಾನ ತಂದೆ ಮೆಹಬೂಬಖಾನ ಸಾ: ಕೊಳ್ಳೂರ ತಾ:ಜಿ:ಗುಲಬರ್ಗಾ ಹಾ:ವ: ಮಿಜಬಾನಗರ ಗುಲ್ಬರ್ಗಾ  ರವರು ದಿನಾಂಕ: 11/08/2014 ರಂದು ರಾತ್ರಿ 11-00 ಗಂಟೆಗೆ ತನ್ನ ಪೀರಪಾಶಾ ಟ್ರಾನ್ಸ ಪೋರ್ಟನ ಹಳದಿ ಬಣ್ಣದ ಲಾರಿ ನಂ ಕೆಎ-27 ಎ- 6979 ನೇದ್ದನ್ನು ನಿಲ್ಲಿಸಿ ದಿನಾಂಕ: 12/08/2014 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಲಾಗಿ ತಾವು ನಿಲ್ಲಿಸಿದ ಲಾರಿ ಕಾಣಲಿಲ್ಲ. ನೆರೆಯವರನ್ನು ವಿಚಾರಿಸಿ ಲಾರಿ ಚಾಲಕ ಮತ್ತು ಸ್ನೇಹಿತರೊಂದಿಗೆ ಸೇರಿ ಗುಲ್ಬರ್ಗಾ ನಗರದ ವಿವಿಧೆಡೆ ಮತ್ತು ಜೇವರ್ಗಿ, ಸೇಡಂ ,ಆಳಂದ , ನಿಂಬರ್ಗಾ ಮುಂತಾದ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ  ಕಳುವಾದ ನಮ್ಮ ಲಾರಿ ನಂ ಕೆಎ-27 ಎ-6979 ಅ.ಕಿ 5,00,000/-ರೂ ಕಿಮ್ಮತ್ತಿನ ಲಾರಿ ಮತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.