POLICE BHAVAN KALABURAGI

POLICE BHAVAN KALABURAGI

22 March 2014

Gulbarga District Reported Crimes

ಅಕ್ರಮ ವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 21-03-2014 ರಂದು 19-30 ಗಂಟೆ ಸುಮಾರಿಗೆ ಕಮಲಾಪೂರ ಗ್ರಾಮದಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಬಸವರಾಜ ಈತನ ಹೊಟೇಲ ಪಕ್ಕದ ಮನೆಯ ಮರೆಯಲ್ಲಿ ನಿಂತು ನೋಡಲಾಗಿಒಬ್ಬನು ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿಒಬ್ಬನಿಗೆ ವಶಕ್ಕೆ ತೆಗೆದುಕೊಂಡು ಆತನ ತನ್ನ ಹೆಸರು ವಿಚಾರಿಸಲಾಗಿ, ಬಸವರಾಜ ತಂದೆ ಶಂಕ್ರೆಪ್ಪಾ ಚಿಕ್ಕೆಗೌಡ ಸಾ:ಕಮಲಾಪೂರ ಅಂತಾ ತಿಳಿಸಿದ್ದು ಓಡಿ ಹೋದನು. ನಂತರ ಹೊಟೇಲದಲ್ಲಿ ಚಹಾ ಕುಡಿಯುತ್ತಾ ಕುಳಿತ ಶ್ರೀ ಸಿದ್ದಪ್ಪಾ ತಂದೆ ಈಶ್ವರಪ್ಪಾ ಸೂಗುರ ಈತನಿಗೆ ವಿಚಾರಿಸಲಾಗಿನಾನು ಹೊಲದಲ್ಲಿ ಕೆಲಸ ಮಾಡಿ ದಿನಾಲು ಚಹಾ ಕುಡಿಯಲು ಬರುತ್ತೇನೆ. ಹೊಟೇಲ ಮಾಲಿಕನಾದ ಬಸವರಾಜ ಚಿಕ್ಕೆಗೌಡ ಈತನು  ಮಧ್ಯವನ್ನು ಎಲ್ಲಿಂದಲೋ ಆಕ್ರಮ ಸಾಗಾಣೆ ಮಾಡಿತಂದು ತನ್ನ ಹೊಟೇಲದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾನೆ ಅಂತಾ ತಿಳಿಸಿದಾಗ  ಚಕ್ ಮಾಡಲಾಗಿ ) ಯು.ಎಸ್. ವಿಸ್ಕಿ 180 ಎಂ.ಎಲ್ ಗಳ 40 ಬಾಟಲಗಳು ಶೀಲ್ ಮಾಡಿದ್ದು. ಅಃಕಿಃ 1800-00 ರೂ. 2) ಕಿಂಗ್ ಫೀಶರ್ ಬೀಯರ್ 650 ಎಂ.ಎಲ್.ಗಳ 12 ಬಾಟಲಗಳು ಅ:ಕಿ: 1080-00 ರೂ. ಹೀಗೆ ಒಟ್ಟು 2880-00 ರೂ. ಕಿಮ್ಮತ್ತಿನ  ವಿಸ್ಕಿ ಮತ್ತು ಬೀಯರ್ ಗಳನ್ನು ವಶಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ  20-03-2014  ರಂದು ಮಾಹಾಗಾಂವ ಕಡೆಯಿಂದ ರೇವಣಸಿದ್ಧ ತಂದೆ ಶರಣಪ್ಪ ಕೆಳಗಿನದೊಡ್ಡಿ  ಸಾ: ಕೋಡ್ಲಿ ತಾ:ಚಿಂಚೋಳಿ ಇವನು ಪಾಸ್ಟಿಕ ಚೀಲದಲ್ಲಿ ಅಕ್ರಮವಾಗಿ ಮದ್ಯ  ಸಂಗ್ರಹಿಸಿ ಕೊಂಡು ದಸ್ತಾಪೂರ ಗ್ರಾಮದ ಕಡೆಗೆ ಹೊರಟಿದ್ದಾನೆ ಎಂದು ಖಚಿತವಾದ ಬಾತ್ಮಿ  ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ದಸ್ತಾಪೂರ ಕ್ರಾಸನಲ್ಲಿ ಬಾತ್ಮಿ ವ್ಯಕ್ತಿ ಬರುವಿಕೆಗಾಗಿ ಕಾಯುತ್ತಾ ನಿಂತಾಗ, ಆರೋಪಿ ರೇವಣಸಿದ್ಧ ಇತನಿಗೆ ದಾಳಿ ಮಾಡಿ ಹಿಡಿದು ಅವನಿಂದ ಓರಿಜನಲ್ ಚ್ವಾಯಸ್ ಡಿಲಕ್ಸ ವಿಸ್ಕಿ  90 ಎಂಎಲವುಳ್ಳ 48 ಪಾಸ್ಟಿಕ ಬಾಟಲಿಗಳು ಅ||ಕಿ|| 1159/- ಮತ್ತು 12,  650 ಎಂಎಲದ ನಾಕೌಟ್ ಬೀರ ಬಾಟಲಿಅ||ಕಿ|| 1080/- ಒಟ್ಟು 2239/- ಜಪ್ತಿಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಆನಂದ ತಂದೆ ರಾಮ ಬೊಗಿಲೆ ಮು: ಕಾಕಡೆ ಚೌಕ ಗುಲಬರ್ಗಾ ನಿವಾಸಿ ಇದ್ದು . ಲಾರಿ ಚಲಾಯಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಉಪಜೀವಿಸುತ್ತೇನೆ. ನಮ್ಮ ಮಾಲಿಕ ದಾಮೋದರ ಕಲಂತ್ರಿ ಇವರ ಲಾರಿ ನಂ ಕೆಎ 32 ಬಿ 2621 ನೇದ್ದರಲ್ಲಿ ಅವರು ತಿಳಿಸಿದಂತೆ ಮಾಹಾವೀರ ದಾಲ ಇಂಡಸ್ಟ್ರಿಯಿಂದ ಕಡಲೆಯ 340 ಬ್ಯಾಗ 50 ಕೆಜಿಯವುಗಳು ತುಂಬಿಕೊಂಡು ಗುಜರಾತದ ಪಾಲಂಪೂರಕ್ಕೆ ಹೋಗಲು ತಿಳಿಸಿದ ಮೇರೆಗೆ ದಿನಾಂಕ 19/03/2014 ರಂದು ಸಾಯಾಂಕಾಲ 6 ಗಂಟೆ ಸುಮಾರಿಗೆ ಗುಲಬರ್ಗಾ ಬಿಟ್ಟು ಆಳಂದ ಮಾರ್ಗದಿಂದ ಉಮರ್ಗಾ ಕಡೆಗೆ ಹೊಗುವಾಗ ನಾನು ಖಜೂರಿ ಸಮೀಪದ ರೋಡಿಗೆ  ಇರುವ ಲಕ್ಷ್ಮಿ ಗುಡಿ ಎದುರಿಗೆ ಗಾಡಿ ನಿಲ್ಲಿಸಿ ದೇವರಿಗೆ ನಮಸ್ಕರಿಸಲು ರಾತ್ರಿ 8;30 ಗಂಟೆಗೆ ಹೋದಾಗ ಸದರಿ ಬ್ಯಾಗಿನ ಮೇಲೆ ತಾರಪಲ್‌ ಹಾಕಿ ಹಗ್ಗದಿಂದ ಬಿಗಿದಿದ್ದು ಕಟ್ಟ ಆಗಿದ್ದು ನೋಡಿ ಏರಿ ನೋಡಲಾಗಿ ತಾರಪಲ್‌ ಕೊಯ್ದು ಒಳಗಿದ್ದ ಕಡಲೆಯ 6 ಬ್ಯಾಗಗಳು 50 ಕೆಜಿಯವುಗಳು ಕಾಣಿಸಲಿಲ್ಲಾ . ಚಿತಲಿ ಕ್ರಾಸ ದಾಟಿ ಸಾಲೆಗಾಂವಗೆ ಕ್ರಾಸಿಗೆ ಹೋಗುವ ಚೆಡೌನದಲ್ಲಿ ನಮ್ಮ ಲಾರಿ ಸವಕಾಶವಾಗಿ ಚೆಡಾನ ಹತ್ತುವಾಗ ಯ್ಯಾರೂ ಕಳ್ಳರು ನಮ್ಮ ಲಾರಿಯ ಹಿಂದಿನಿಂದ ಹತ್ತಿ ಹಗ್ಗ ಮತ್ತು ತಾರಪಲ್‌ ಕತ್ತರಿಸಿ ಒಳಗಿದ್ದ 6 ಬ್ಯಾಗಗಳು 50 ಕೆಜಿಯವುಗಳು ಕಳುವು ಮಾಡಿಕೊಂಡು ಹೋಗಿದ್ದು ಅವುಗಳ ಅಂದಾಂಜು ಕಿಮ್ಮತ್ತು 12225 ರೂಪಾಯಿ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವಗೊಂಡ ತಂದೆ ಮಲ್ಲಪ್ಪ ಪೂಜಾರ ಸಾ: ಬಳೂರ್ಗಿ ಇವರ ಟ್ರ್ಯಾಕ್ಟರ್ ಇದ್ದು ಅದರ ನಂ ಕೆ.-32 ಟಿ.-6516 ಅಂತಾ ಇದ್ದು ಅದರೊಂದಿಗೆ ಒಂದು ಕಬ್ಬಿಣದ ನೇಗಿಲು ಇರುತ್ತದೆ. ನಾನು ಮಂದಿ ಹೊಲದಲ್ಲಿ ಬಾಡಿಗೆಗೆ ನೆಗಿಲು ಹೊಡೆಯುತ್ತಿರುತ್ತೇನೆ. ಅದರಂತೆ ದಿನಾಂಕ 15-03-2014 ರಂದು ನಮ್ಮೂರ ಅಶೋಕ ಜವಳಗಿ ರವರ ಹೊಲದಲ್ಲಿ ನಾಣು ಮತ್ತು ನನ್ನೊಂದಿಗೆ ನಮ್ಮ ಟ್ರ್ಯಾಕ್ಟರ್ ಡ್ರಾಯವರಾದ ರಾಜು ತಂದೆ ಈರಣ್ಣ ನಾಟೀಕಾರ ಸಾ|| ಬಳೂರಗಿ ರವರು ಕೂಡಿಕೊಂಡು ನೇಗಿಲು ಹೊಡೆಯಲು ಹೋಗಿದ್ದು ಇರುತ್ತದೆ. 5;00 ಪಿ.ಎಂ ಸುಮಾರಿಗೆ ಸದರಿ ಹೊಲದಲ್ಲಿ ನನ್ನ ಟ್ರ್ಯಾಕ್ಟರ್ ಪಂಚರ ಆಗಿದ್ದರಿಂದ ಟ್ರ್ಯಾಕ್ಟರಗೆ ಜೋಡಿಸಿದ ನೇಗಿಲವನ್ನು ಅಲ್ಲೆ ಹೊಲದಲ್ಲೇ ಇಟ್ಟು ಪಂಚರ ತೆಗೆಯಲು  ಬಳೂರಗಿ ಗ್ರಾಮಕ್ಕೆ ಹೋಗಿದ್ದು ನಂತರ ಮರಳಿ 7;30 ಪಿ.ಎಂ ಸುಮಾರಿಗೆ ಪಂಚರ ತೆಗೆದಸಿಕೊಂಡು ಸದರಿ ಹೊಲದ ಹತ್ತಿರ ಬುರುವಾಗ ರಸ್ತೆಯ ಮೇಲೆ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಹೋಯಿತು ಅದರ ಹಿಂದೆ ಒಂದು ನೇಗಿಲು ಇತ್ತು. ಸದರಿ ನೇಗಿಲು ನಮ್ಮ ನೇಗಿಲ ತರಹನೆ ಕಂಡಿತು. ನಂತರ ಹೊಲಕ್ಕೆ ಹೋಗಿ ನೋಡಲು ನಮ್ಮ ನೇಗಿಲು ಇರಲಿಲ್ಲ. ನಮಗೆ ಸಂಶಯ ಬಂದು ಬಳೂರಗಿ ಕಡೆ ಹೋದ ಟ್ರ್ಯಾಕ್ಟರ ಹಿಂದೆ ನಾವು ನಮ್ಮ ಟ್ರ್ಯಾಕ್ಟರ್ ತೆಗೆದುಕೊಂಡು ಬಡದಾಳ, ಹಳ್ಯಾಳ, ಹಳ್ಯಾಳ ತಾಂಡಾ, ಚಿಂಚೊಳಿ, ಹಾಗು ಸುತ್ತ ಮುತ್ತಿನ ಹೊಲದಲ್ಲಿರುವ ಮನೆಗಳಿಗೆ ಹೋಗಿ ವಿಚಾರಮಾಡಲಾಗಿ ಯಾವುದೆ ಮಾಹಿತಿ ಸಕ್ಕಿರುವುದಿಲ್ಲ. ನಂತರ ದುದ್ದನಿ ಗ್ರಾಮ, ಹಾಗು ಅಫಜಲಪೂರ ಪಟ್ಟಣದಲ್ಲಿ ಗ್ಯಾರೇಜಗಲಲ್ಲಿ ಹುಡಕಾಡಿದರು ನಮ್ಮ ನೇಗಿಲು ಸಿಗಲಿಲ್ಲ. ದಿನಾಂಕ 15-03-2014 ರಂದು 5;30 ಪಿ.ಎಂ ದಿಂದ 7;30 ಪಿ.ಎಂ ಮದ್ಯಧ ಅವಧಿಯಲ್ಲಿ ಅಶೋಕ ಜವಳಗಿ ರವರ ಹೊಲದಲ್ಲಿ ಇಟ್ಟಿದ್ದ ನಮ್ಮ ಕಬ್ಬಿಣದ ನೇಗಿಲನ್ನು ಯಾರೋ ಕಳ್ಳರು ಅವರ ಟ್ರ್ಯಾಕ್ಟರಕ್ಕೆ ಜೋಡನೆ ಮಾಡಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಫಜಲಪೂರ ಠಢಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಮಾದನಹಿಪ್ಪರಗಾ ಠಾಣೆ : ದಿನಾಂಕ 20-03-2014  ರಂದು 11;30 ಎ.ಎಮ್.ಕ್ಕೆ ಶ್ರೀಮತಿ ಮಧುಮತಿ ಎಸ್.ಇಕ್ಕಳಕಿ ಉ:ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಹಿರೋಳಿ  ತಾ:ಆಳಂದ.  ಇವರು ದಿನಾಂಕ 19-03-2014 ರ ರಾತ್ರಿ 08:00 ಗಂಟೆಯಿಂದ ಬೇಳಗಿನ 05;00 ಗಂಟೆಯ ಮಧ್ಯದ ಅವಧಿಯಲ್ಲಿ. ನಾವು ಶಾಲೆಯಲ್ಲಿ ಯಾರು ಇರಲಾರದ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ಸರಕಾರಿ ಪ್ರೌಢಶಾಲೆ ಹಿರೋಳಿ ಶಾಲೆಯ ಕಂಪ್ಯೂಟರ್ ಕೋಣೆಯಲ್ಲಿನ ಕೀಲಿ ಮುರಿದು ಬಾಗಿಲು ತೆರೆದು ಒಳಗೆ ಹೋಗಿ H.C.L. ಕಂಪನಿಯ ಒಟ್ಟು 4 ಕಂಪ್ಯೂಟರಗಳು ಅಂದಾಜು ಕಿಮ್ಮತ್ತು ಒಟ್ಟು : 24,500=00 ರೂಪಾಯಿಗಳ ಕಂಪ್ಯೂಟರ್ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಲೆಯ ಮಾಳಿಗೆಯಿಂದ ಬಿದ್ದು ವಿದ್ಯಾರ್ಥಿ ಗಾಯಹೊಂದಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಬನಾ ಬೇಗಂ ಗಂಡ ಬಾಷಾ ಮಿಯಾ ಸಾಃ ಸೋನಿಯಾ ಗಾಂಧಿ ಕಾಲೋನಿ ಹಾಗರಗಾ ರೋಡ ಗುಲಬರ್ಗಾ ರವರ ಮಗ  ಜೈನೂದ್ದಿನ ತಂದೆ ಬಾಷಾಮಿಯಾ  ಇವನು ದಿನಾಂಕ 21-03-2014 ರಂದು 01:15 ಪಿ.ಎಂ. ಚೈತನ್ಯ ಪ್ರೌಡ ಶಾಲೆಯ ವಸತಿ ನಿಲಯದ 03 ಅಂತಸ್ತಿನ ಬಿಲ್ಡಿಂಗ್ ಮೇಲಿಂದ ಕೆಳಗಡೆ ಬಿದ್ದು ಎಡಗೈ ಪೂರ್ತಿಯಾಗಿ ಮುರಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿದ್ದು, ಎರಡು ಕಣ್ಣಿಗಳಿಗೂ ತರಚಿದ ಗಾಯಗಳಾಗಿರುತ್ತವೆ. ಸದರಿ ಘಟನೆಗೆ ಚೈತನ್ಯ ಪ್ರೌಡ ಶಾಲೆಯ ಮತ್ತು ವಸತಿ ನಿಲಯದ ಆಡಳಿತ ಮಂಡಳಿ ಅಧಿಕಾರಿ ಹಾಗು ಸಿಬ್ಬಂದಿ ವರ್ಗದವರ ನಿಸ್ಕಾಳಜಿತನ ಕಾರಣವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ  ಅರ್ಜುನ ತಂದೆ ತಿಮ್ಮಯ್ಯ ಕೆರಬಗಿ  ಸಾ:ಸಿರನೂರ ತಾ:ಜಿ: ಗುಲಬರ್ಗಾ ರವರು 15 ದಿವಸಗಳ ಹಿಂದೆ ತಮ್ಮ ಅಣ್ಣತಮ್ಮಕೀಯ ಗೊಪಾಲ ಇತನಿಗೆ 500=00 ರೂಪಾಯಿ ಕೈಗಡ ಕೊಟ್ಟಿದ್ದು ಸದರಿ ಹಣವನ್ನು ದಿನಾಂಕ 18-03-2014 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕೆಳಲು ಅವರ ಮನೆಗೆ ಹೊದಾಗ  ಗೊಪಾಲ ಇತನು ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿಯ ಹಿಡಿದು ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತ ಗಾಯ ಮಾಡಿದನು. ಅಲ್ಲೆ ನಿಂತಿದ್ದ ಮಲ್ಲು ಇತನು ಅಲ್ಲೆ ಬಿದ್ದಿದ್ದ ಒಂದು ಹಿಡಿಗಾತ್ರ ಕಲ್ಲು ತೆಗೆದುಕೊಂಡು ನನ್ನ ಎಡ ಮೊಣಕಾಳಿನ ಹತ್ತಿರ ಹೊಡೆದು ಗುಪ್ತ ಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಅಂಬಾರಾಯ ತಂದೆ ರುಕ್ಕಪ್ಪ ಲಂಡನಕರ  ಸಾ: ಎಮ್.ಆರ್.ಎಮ್.ಸಿ ಎದುರು ಸುಂದರ ನಗರ ಗುಲಬರ್ಗಾ  ರವರ ಮಕ್ಕಳಾದ ಅಮೀತ ಇತನು. ದಿನಾಂಕ 20-03-2014 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಫಿರ್ಯಾದಿ ಮಕ್ಕಳಾದ ಅಮೀತ ಮತ್ತು ಅಮರ ಇವರಿಬ್ಬರು ಅವರ ಸಾಂದಿಪನಿ ಶಾಲೆಯಿಂದ ಬೈಸಿಕಲ ಮೇಲೆ ಜಿ.ಜಿ.ಹೆಚ್ ಸರ್ಕಲ ಮುಖಾಂತರ ಮನೆಗೆ ಹೋಗುತ್ತಿದ್ದಾಗ ಜಿ.ಜಿ.ಹೆಚ ಆಸ್ಪತ್ರೆಯ ಎದುರಿನ ರೋಡಿನ ಮೇಲೆ ಆಸ್ಪತ್ರೆಯ  ಒಳಗಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಎ-7170 ರ ಚಾಲಕನಾದ ರುಕ್ನೊದ್ದಿನ ಇತನು ಕುಡಿದ ಅಮಲಿನಲ್ಲಿ ತನ್ನ ಅಟೋರಿಕ್ಷಾವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಮೀತ ಇತನ ಬೈಸಿಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಮೀತ ಮತ್ತು ಅಮರನಿಗೆ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಚಂದ್ರಕಾಂತ ತಂದೆ ಮಹಾರುದ್ರಪ್ಪ ಪಟ್ನೆ ಸಾ: ಈಶ್ವರ ಗುಡಿ ಹತ್ತಿರ ಕೈಲಾಸ ನಗರ ಗುಲಬರ್ಗಾ  ರವರು ದಿನಾಂಕ 20-03-2014ರಂದು ಸಾಯಂಕಾಲ  5-30 ಗಂಟೆಗೆ ತನ್ನ ಬೈಸಿಕಲ ಮೇಲೆ ಫಾರ್ಮಸಿ ಕಾಲೇಜದಿಂದ ಟೌನಹಾಲ ಕ್ರಾಸ್ ಕಡೆಗೆ ಬರುತ್ತಿದ್ದಾಗ ಜಿ.ಜಿ.ಹೆಚ್ ಸರ್ಕಲ ಸಮೀಪವಿರುವ ವೀರಶೈವ ಹಾಸ್ಟೇಲ ಕಾಂಪ್ಲೇಕ್ಸ ಎದುರಿನ ರೋಡಿನ ಮೇಲೆ ಟೌನಹಾಲ ಕ್ರಾಸ್ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂಬರ ಕೆಎ-32ಇಡಿ-7096 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೈಸಿಕಲಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ಮೊಟಾರ ಸೈಕಲ ಸಮೇತ ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀಮತಿ ಜಗದೇವಿ ಗಂ ಚಿದಾನಂದ ಸಣ್ಣಮನಿ ಸಾ:ಮದಗುಣಕಿ, ತಾ:ಆಳಂದ ರವರ  ಗಂಡ ಮದುಗುಣಕಿ ಗ್ರಾಮದಲ್ಲಿ ನಮ್ಮ ಹೊಲದಲ್ಲಿ ಕೆಲಸ ಮಾಡಿಸಲು ಮೊ.ಸೈ ನಂ MH 13 AD 1143 ನೇದ್ದರ ಮೇಲೆ ಗುಲಬರ್ಗಾದಿಂದ ಮದಗುಣಕಿ  ಗ್ರಾಮಕ್ಕೆ ಬರುವುದು ಮಾಡುತ್ತಾನೆ, ದಿನಾಂಕ 19-03-2014 ರಂದು ನನ್ನ ಗಂಡ ತನ್ನ ಮೊ.ಸೈ ಮೇಲೆ ಹೊಲಕ್ಕೆ ಹೋಗಿ ಬರುತ್ತೇನೆಂದು ಗುಲಬರ್ಗಾದಿಂದ ಮದಗುಣಕಿಗೆ ಹೊಗಿದ್ದು ನಾನು ರಾತ್ರಿ ಮನೆಯಲ್ಲಿದ್ದಾಗ ನನ್ನ ಗಂಡನ ಪೋನ ನಂಬರನಿಂದ ನಮ್ಮ ಮನಗೆ ಮೊಬೈಲ್‌ ಕರೆ ಮಂದಿದ್ದು ದಿನಾಂಕ 20-03-2014 ನಂದು ಬೆಳಿಗ್ಗೆ 0600 ಗಂಟೆಗೆ ತಿಳಿಸಿದ್ದು ಏನಂದರೆ ಚಿದಾನಂದ ಈತನು ತಮ್ಮ ಮೊ.ಸೈ ಮೇಲಿಂದಾ ಗುಲಬರ್ಗಾ ಕಡೆ ಬರುವ ಲಾಡಚಿಂಚೊಳಿ ಕ್ರಾಸ ½ ಫರ್ಲಾಂಗ ಮುಂದೆ ಇರುವ ರೋಡಿಗೆ ಲಾರಿ ನಂ MH 26 H 9709 ನಿಂತಿದ್ದು ಮೊ.ಸೈ ಮುಂದೆ ಬಿದ್ದು ಪಕ್ಕದಲ್ಲಿ ಚಿದಾನಂದಗೆ ಗಾಯವಾಗಿ ರೋಡಿನ ಪಕ್ಕದಲ್ಲಿ ಸತ್ತು ಬಿದ್ದಿರುತ್ತಾನೆ, ಲಾರಿ ನಿಂತ ಸ್ಥಳದಲ್ಲಿ ಸಂಚಾರದ ಮೊಟರ ವಾಹನ ಯಾವುದೇ ಸಂಕೇತ ಫಲಕ ಹಾಕದೆ ಯಾವುದೇ ದ್ವೀಪದ ಸೂಚನೆ ಹಾಕದೆ ತನ್ನ ಲಾರಿಯನ್ನು ರಸ್ತೆಯ ಆಳಂದಕ್ಕೆ ಹೋಗುವ ಬಲಭಾಗಗಕ್ಕೆ ರಾಂಗ್‌ ಸೈಡಿನಲ್ಲಿ ನಿಲ್ಲಿಸಿದ್ದು ಇರುತ್ತದೆ, ಈ ಅಪಘಾತ ಲಾರಿ ಚಾಲಕನ ನಿಷ್ಕಾಳಜಿತನ ಹಾಗೂ ಬೇಜವಬ್ದಾರಿಯಿಂದ ಲಾರಿ ನಿಲ್ಲಿಸಿದರಿಂದ ಈ ಅಪಘಾತವಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ತಗುಲಿ ಮಹಿಳೆ ಸಾವು :
ಮಾದನಹಿಪ್ಪರಗಾ ಠಾಣೆ : ಶ್ರೀ.ದಿಲೀಪ ತಂದೆ ವಿಶ್ವನಾಥ ಪವಾರ ಸಾ;ದರ್ಗಾಶಿರೂರ ತಾ:ಆಳಂದ. ರವರ ಮಗಳಾದ ನೀಲಾ ಇವಳಿಗೆ ದಿನಾಂಕ 12-03-2014  ರಂದು ರಾತ್ರಿ 08:30 ಗಂಟೆಯ ಸುಮಾರಿಗೆ ನನ್ನ ಮನೆಯಲ್ಲಿ ನನ್ನ ಮಗಳು ಸ್ಟೋ ಬೆಂಕಿ ಆಕಸ್ಮಿಕವಾಗಿ ಮೈ ಮೇಲಿನ ಬಟ್ಟೆಗೆ ಹತ್ತಿ ಮೈ ಪೂರ್ತಿ ಸುಟ್ಟಿರುತ್ತದೆ. ಆಸ್ಪತ್ರೆಗೆ ತೋರಿಸಿದರು ಆರಾಮವಾಗಿರುವುದಿಲ್ಲಾ ಹೆಚ್ಚಿನ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಮನೆಗೆ ತಂದಿದ್ದು ಮೈ ಸುಟ್ಟ ಬೇನೆಯಿಂದ ಗುಣಮುಖವಾಗದೇ ದಿನಾಂಕ: 19-02-2014 ರಂದು ಬೆಳಗ್ಗೆ 07 ಗಂಟೆಗೆ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 March 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ ಠಾಣೆ : ದಿನಾಂಕ 19/03/2014 ರಂದು  ಮುಂಜಾನೆ 11.00ಗಂಟೆ ಸುಮಾರಿಗೆ ಗುಲಬರ್ಗಾ  ನಗರದ ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಿವಾಜಿ ನಗರ ಬಡಾವಣೆಯಲ್ಲಿ ಮಸೂತಿಯ  ಎದರುಗಡೆ  ಖೋಬಾಜಿ ತಂದೆ ಬೀಮರಾವ್ ಪವಾರ  ಸಾ- ಶಿವಾಜಿನಗರ, ಇತನು ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಗುಲಬರ್ಗಾ ದ  ಡಿಸಿಐಬಿ ಘಟಕದ ಸಿಬ್ಬಂದಿಯವರು ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಅವರ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ಚೀಟಿ, ಬಾಲ್ ಪೆನ್ನು, ಹಾಗೂ ನಗದು ಹಣ 18,00/- ರೂಪಾಯಿ, ಜಪ್ತು ಮಾಡಿಕೊಂಡು  ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

20 March 2014

GULBARGA DIST REPORTED CRIMES

ಅತ್ಯಾಚಾರ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ : ದಿನಾಂಕ: 18/03/2014 ರಂದು ರಾತ್ರಿ 07-00 ಗಂಟೆ ಸುಮಾರಿಗೆ  ಶ್ರೀಮತಿ. ಬಾಲಮ್ಮ ಗಂಡ ಕಿಶನ ಸೋನಾರ  ಸಾಕಿಣ್ಣಿ ಸೋನಾರ ತಾಂಡಾ  ರವರು  ಠಾಣೆಗೆ  ಹಾಜರಾಗಿ ತನ್ನ ಹಿರಿಯ ಮಗಳಾದ ಪುತಳಾಬಾಯಿ ಮತ್ತು ಅವಳ ಗಂಡ ಚಂದರ ಹೊಟ್ಟೆಪಾಡಿಗಾಗಿ ದುಡಿಯಲು ಮುಂಬೈಗೆ ಹೋಗಿದ್ದು ಅವರ 15 ವರ್ಷದ ಮಗಳಿಗೆ ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದು ನಿನ್ನೆ ದಿನಾಂಕ: 17/03/2014 ರಂದು ಬೆಳೆಗ್ಗೆ ನಾವು ನಮ್ಮ ಮನೆಯಲ್ಲಿದ್ದಾಗ ಸರಫೋಸ್ ಕಿಣ್ಣೀ ತಾಂಡಾದ ವಿನೋದ ತಂದೆ ರೂಪಲಾ ರಾಠೋಡ ಅಂದಾಜು ಈತನು ನಮ್ಮ ಮನೆಗೆ ಬಂದು ತನಗೆ ಒಂದು ಬೆಳ್ಳಿಯ ಉಂಗುರು ಮಾಡಿಕೊಡಿ ಅಂತಾ ಕೇಳಿಕೊಂಡು ಬಂದಿದ್ದು, ನನ್ನ ಗಂಡ ಆತನಿಗೆ ಉಂಗುರು ಮಾಡುತ್ತಿದ್ದಾಗ  ವಿನೋದ ರಾಠೋಡನು ನನ್ನ ಮೊಮ್ಮಗಳಿಗೆ ತಾನು ವಿಠಲ ಸೋನಾರರ ಹೊಲದ ಹತ್ತಿರ ನಮ್ಮ  ದನಗಳನ್ನು ಬಿಟ್ಟು ಬಂದಿದ್ದೇನೆ, ಅವುಗಳನ್ನು ಹೊಡೆದುಕೊಂಡು ನಿಮ್ಮ ಮನೆಯ ಕಡೆಗೆ ತೆಗೆದುಕೊಂಡು ಬಾ ಅಂತಾ ಹೇಳಿದ್ದಕ್ಕೆ ತನ್ನ ಮೊಮ್ಮಗಳು ದನಗಳನ್ನು  ಹೊಡೆದುಕೊಂಡು ಬರಲು ಹೋದಾಗ ಸ್ವಲ್ಪ ಸಮಯದ ಬಳಿಕ ವಿನೋದ ರಾಠೋಡ ಸಹ ಬಯಲು ಕಡೆಗೆ ಹೋಗಿ ಬರುತ್ತೇನೆ ಅಂತಾ ಹೋಗಿದ್ದು ಸ್ವಲ್ಪ ಸಮಯದ  ಬಳಿಕೆ ತಮ್ಮ ಮೊಮ್ಮಗಳು ಅಳುತ್ತಾ ನಮ್ಮ ಮನೆಗೆ ಬಂದು ತಾನು ವಿಠಲ ಸೋನಾರನ ಹೊಲದ ಹತ್ತಿರ  ಹೋಗಿ ನೋಡಲಾಗಿ ಅಲ್ಲಿ ಯಾವುದೇ ದನಗಳು ಇರಲಿಲ್ಲ. ತಾನು ಮರಳಿ ಮನೆಗೆ ಬರುತ್ತಿರುವಾಗ ವಿನೋದ ರಾಠೋಡನು ನನಗೆ ಜಬರಿ ಸಂಭೋಗ ಮಾಡಿ ವಿಷಯ ಯಾರಿಗಾದರೂ ತಿಳಿಸಿದರೆ  ನಿನಗೆ ಜೀವ ಸಹಿತ  ಬಿಡುವುದಿಲ್ಲ ಅಂತಾ  ಜೀವದ ಬೆದರಿಕೆ  ಹಾಕಿ ಅಲ್ಲಿಂದ  ಓಡಿ  ಹೋಗಿರುತ್ತಾನೆ.  ಆತ ನನಗೆ  ಜಬರಿ ಸಂಭೋಗ ಮಾಡುವಾಗ ನೆಲಕ್ಕೆ ಬೀಳಿಸಿದ್ದರಿಂದ ನನ್ನ  ಬೆನ್ನಿಗೆ ಕಲ್ಲುಗಳು ತರಿಚಿದ  ರಕ್ತಗಾಯವಾಗಿರುತ್ತದೆ ಮತ್ತು ತನಗೆ ಹೊಟ್ಟೆ  ನೋಯುತ್ತಿದೆ  ಅಂತಾ ಅಳುತ್ತಾ ತಿಳಿಸಿದ್ದು. ಈ  ವಿಷಯದ ಬಗ್ಗೆ ನಮ್ಮ  ತಾಂಡಾದ ಪಂಚಾಯತಿಯಲ್ಲಿ ಸಹ ಯಾವುದೇ  ತೀರ್ಮಾನ ಆಗದೇ ಇದ್ದಿದ್ದರಿಂದ ರಾತ್ರಿ ತಾಂಡಾದಲ್ಲಿಯೇ ಉಳಿದುಕೊಂಡು ಇಂದು ದೂರು ನೀಡಲು  ಪೊಲೀಸ್  ಠಾಣೆಗೆ  ಬಂದಿದ್ದು.  ತನ್ನ  ಮೊಮ್ಮಗಳಿಗೆ ವಿನೋದ ತಂದೆ ರೂಪಲಾ ರಾಠೋಡ  ಸಾ:ಸರಫೋಶ್ ಕಿಣ್ಣೀ  ಕೆಳಗಿನ [ಭವಾನಿ ನಗರ] ತಾಂಡಾ ಈತನು ಜಬರಿ ಸಂಭೋಗ  ಮಾಡಿ ಜೀವದ  ಬೆದರಿಕೆ  ಹಾಕಿ  ಓಡಿ ಹೋಗಿದ್ದು, ಆತನ  ಮೇಲೆ  ಸೂಕ್ತ  ಕಾನೂನು  ಕ್ರಮ  ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಚೀಟಿ ಬರೆದುಕೊಳ್ಳುತ್ತಿರುವವನ ಬಂಧನ:
ಚೌಕ ಪೊಲೀಸ್ ಠಾಣೆ: ¢£ÁAPÀ 19.03.2014 gÀAzÀÄ 1100 ಗಂಟೆಗೆ ಆರೋಪಿ ಕೋಬಾಜಿ ತಂದೆ ಬೀಮರಾವ ಪವಾರ ಸಾಃ ಶಿವಾಜಿ ನಗರ ಗುಲಬರ್ಗಾ ಈತನು  ಶಿವಾಜಿ ನಗರದ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾಗ ಶ್ರೀ ದತ್ತಾತ್ರಯ ಎ.ಎಸ್.ಐ ಡಿಸಿಐಬಿ ಘಟಕ ಗುಲಬರ್ಗಾ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ  ನಗದು ಹಣ ರೂ 1800/- ಮತ್ತು ಮಟಕಾ ಚೀಟಿ, ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು ಈ ಬಗ್ಗೆ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಕಾಳಪ್ಪ ಸುತಾರ ಸಾ: ಲಕ್ಷ್ಮಿ ನಗರ ಗುಲಬರ್ಗಾ ರವರು ಹಳೆ ಹೆಬ್ಬಾಳ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಇಂದು ದಿನಂಕ 19-03-2014 ರಂದು ಪ್ರತಿದಿವಸದಂತೆ ಶಾಲೆಗೆ ಹೊರಟಿದ್ದು ಅವರಂತೆಯೆ  1) ಥಾಹೆರ ಪಟೇಲ ತಂದೆ ಮಾರೂಫ ಪಟೇಲ  2) ಲಕ್ಷ್ಮಿಕಾಂತ ತಂದೆ ಬಸವರಾಜ  3) ಅಹೇಮದಿ ಬೇಗಂ ಗಂಡ ಥಾಹೆರ ಪಟೇಲ 4)ವಿರೇಂದ್ರ ತಂದೆ ಸಿದ್ರಾಮಯ್ಯಾ  5) ಗಾಯತ್ರಿ ಗಂಡ ಸುಜ್ಞಾನ  6) ತೇಜಸ್ವಿನಿ ಗಂಡ ಅನೀಲಕುಮಾರ  7) ಶ್ರೀದೆವಿ ಗಂಡ ಶ್ರೀನಿವಾಸ  8) ಭಾರತಿ ಗಂಡ ಮಡಿವಾಳ  9) ಸುನೀತ ಗಂಡ ಶರಣು 10) ಭುವನೇಶ್ವರಿ ಗಂಡ ವಿಶ್ವನಾಥ 11) ನನ್ನ ಮಗಳು ಕವನಾ ಎಲ್ಲರೂ ಕ್ರೂಜರ ವಾಹನದಲ್ಲಿ ಹೋಗುತ್ತಿರುವಾಗ ಖಾಜಾ ಕೋಟನೂರ ಕೆರೆಯ ಹತ್ತಿರ ಇರುವ ಬ್ರಿಜ್ ಹತ್ತೀರ ಕ್ರೂಜರ ಚಾಲಕನು ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಕಲಾಯಿಸುತ್ತಾ ವಾಹನ  ಕಟ್ ಮಾಡಿದ್ದರಿಂದ ಕ್ರೂಜರ ವಾಹನವು ರಸ್ತೆಯ ಮೇಲೆ ಪಲ್ಟಿಯಾಗಿ ಕ್ರೂಜರದಲ್ಲಿದ್ದ ನನಗೆ ಮತ್ತು ಉಳಿದವರಿಗೆ ಗಾಯಗಳಾಗಿದ್ದು ಕ್ರೂಜರವಾಹನ ಚಾಲಕನ ವಿರುದ್ದ ಕ್ರಮ ಕಯಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಯಕೊಳ್ಳಲಾಗಿದೆ.