POLICE BHAVAN KALABURAGI

POLICE BHAVAN KALABURAGI

14 February 2014

Gulbarga District Reported Crimes

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ:13-02-2014 ರಂದು 8.30 ಪಿಎಮ್ ಸುಮಾರಿಗೆ ಶಹಾಬಾದದಿಂದ ಗುಲ್ಬರ್ಗಾ ಕಡೆಗೆ ಹೊರಟಿದ್ದ ಒಂದು ಟಾವರೆಸ್ ಲಾರಿ ನಂ: ಕೆ.ಎ-32/ಎ-7085 ನೇದ್ದರ ಚಾಲಕನ ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಸಿಕೊಂಡು ಗುಲ್ಬರ್ಗಾದ ಕಡೆಯಿಂದ ಟಿಪ್ಪರ ನಂ: ಎಮ್.ಎಚ್.42/ಟಿ-143 ನೇದ್ದಕ್ಕೆ ಡಿಕ್ಕಿ ಹೊಡೆದು ಅದರ ಹಿಂದೆ ಬರುತ್ತಿದ್ದು ಕೃಷರ ಜೀಪ ನಂ: ಕೆ.ಎ-32/ಬಿ-6095 ನೇದ್ದಕ್ಕೂ ಕೂಡಾ ಡಿಕ್ಕಿಹೊಡೆದ್ದರಿಂದ ಸದರಿ ಕೃಷರ ಜೀಪ ಚಾಲಕನಾದ ಶಾಮರಾವ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಟಾವರೆಸ್ ಲಾರಿ ನಂ: ಕೆ.ಎ-32/ಎ-7085 ನೇದ್ದರ  ಚಾಲಕನು ಕೂಡಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಕೃಷರ ಜೀಪನಲ್ಲಿದ್ದ ಸಾಬಮ್ಮಾ ಇವಳು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲ್ಬರ್ಗಾ ತೆಗೆದುಕೊಂಡು ಹೋಗುವಾಗ ಧಾರಿ ಮದ್ಯದಲ್ಲಿ ಮೃತ ಪಟ್ಟಿರುತ್ತಾರೆ ಸದರಿ ಕೃಷರ ಜೀಪನಲ್ಲಿ ಜೀಪಿನಲ್ಲಿದ್ದ ಇನ್ನುಳಿದ 16 ಜನರಿಗೆ ಭಾರಿ ಮತ್ತು ಸಾದಾಗಾಯಗಳಾಗಿರುತ್ತವೆ. ಅಂತಾ ಶ್ರೀ ಶರಣಪ್ಪಾಗೌಡ ತಂದೆ ಶಾಮರಾವ ಮಾಲಿಪಾಟೀಲ  ಸಾ: ಶಂಕರವಾಡಿ.   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

13 February 2014

Gulbarga District Reported Crimes

ಆಕಸ್ಮಿಕ ಬೆಂಕಿ ಎತ್ತು ಹಸು ಸಾವು :
ಮುಧೋಳ ಠಾಣೆ : ಶ್ರೀ ಸಾಬಣ್ಣಾ ತಂದೆ ರಾಮಪ್ಪ ದೊಡ್ಡಮನಿ ಸಾ: ಇಟಕಲ ತಾ: ಸೇಡಂ ಇವರು ದಿನಾಂಕ: 11.02.2014 ರಂದು ರಾತ್ರಿ 2030 ಗಂಟೆ ಸುಮಾರಿಗೆ ನಮ್ಮ ದೊಡ್ಡಿಗೆ ಆಕಸ್ಮಿಕವಾಗಿ ಬೆಂಕಿಹತ್ತಿ ದೊಡ್ಡಯಲ್ಲಿ ಕಟ್ಟಿದ ಒಂದು ಎತ್ತು ಅಕಿ 60,000/- ರೂ. 2] ಒಂದು ಆಕಳ ಕರು ಅಕಿ 15,000/- ರೂ. 3] ಒಂದು ಕಟ್ಟಿಗೆ ಮಂಚ್ಚ ಅಕಿ 15000/- ರೂ. 4] ಒಂದು ಎತ್ತಿನ ಬಂಡಿ ಅಕಿ 50,000/- ರೂ. 5] 30 ಫತ್ರಾಗಳು ಅಕಿ 30,000/- ರೂ. ಹಾಗು ಒಕ್ಕಲುತನದ ಸಮಾನುಗಳು ಅಕಿ 50,000/- ರೂ. ಹೀಗೆ ಒಟ್ಟು 2,20,000/- ರೂ. ಗಳಷ್ಟು ಸುಟ್ಟು ಹಾನಿಯಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀ ರಾಕೇಶ ತಂದೆ ವಿಶ್ವಾನಾಥ ಸಾ: ಮುಧೋಳ ಗ್ರಾಮ ಇವರು ಮುಧೋಳ ಬಸ್ಸನಿಲ್ದಾಣದಿಂದ ಮುಧೋಳ ಮೇನ ಗೇಟಗೆ ಹೊಗುವ ರಸ್ತೆಯ ಪಕ್ಕದಲ್ಲಿ ಒಂದು ಮೊಬಾಯಿಲ್ ರಿಚಾರ್ಜ, ಟಿ.ವಿ ಕಂಪ್ಯೂಟರ್ ಹಾಗು ಡಿ.ಟಿ.ಹೆಚ.ಗಳನ್ನು ವ್ಯಾಪಾರ ಮಾಡುವ ಅಂಗಡಿಯನ್ನು ನಡೆಸುತ್ತಿದ್ದೇನೆ. ಮತ್ತು ಕೆಳಗಡೆ ಅಂಗಡಿ ಇದ್ದು, ಅಂಗಡಿಯ ಮೇಲೆ ನನ್ನ ಮನೆಯು ಕೂಡ ಇರುತ್ತದೆ. ನಾನು ಪ್ರತಿ ದಿವಸದಂತ್ತೆ, ದಿನಾಂಕ: 11-02-2014 ರಂದು ಮುಂಜಾನೆ ನನ್ನ ಅಂಗಡಿಯನ್ನು ತೆಗೆದು ವ್ಯಾಪಾರ ಮಾಡಿ, ರಾತ್ರಿ 23:30 ಗಂಟೆಯ ಸುಮಾರಿಗೆ ನನ್ನ ಅಂಗಡಿಯನ್ನು ಬಂದ ಮಾಡಿಕೊಂಡು ಶೇಟರಗೆ ಕೀಲಿ ಹಾಕಿಕೊಂಡು ಹೊಗಿದ್ದೇನು. ನಾನು ದಿನಾಂಕ: 12-02-2014 ರಂದು ಮುಂಜಾನೆ 06:00 ಗಂಟೆಯ ಸುಮಾರಿಗೆ ನನ್ನ ಅಂಗಡಿಗೆ ಬಂದು ನೋಡಿದಾಗ, ಸದರಿ ಅಂಗಡಿಗೆ ಇರುವ ಕಬ್ಬಿಣದ ಶೇಟರ್‌ಗೆ ಕೆಳಗೆ ರಾಡ ಹಾಕಿ ಅಂದಾಜ 2 ಫೀಟನಷ್ಟು ಮೇಲಕ್ಕೆ ಏತ್ತಿ ಖುಲ್ಲಾ ಆಗಿತ್ತು, ಮತ್ತು ನಾನು ನೋಡಿದಾಗ ಅಂಗಡಿಯ ಒಳಗೆ ಇದ್ದ, ಎಲ್ಲಾ ಎಲೇಕ್ಟ್ರಾನಿಕ್ ಸಾಮಾನುಗಳು ಚಲ್ಲಾಪಿಲಿಯಾಗಿ ಬಿದಿದ್ದು, ನಾನು ಅಂಗಡಿಯಲ್ಲಿದ್ದ ಸಾಮಾನುಗಳನ್ನು ಪರಿಶೀಲಿಸಿ ನೋಡಿದಾಗ ನನ್ನ ಅಂಗಡಿಯಲ್ಲಿದ್ದ, 1] ಒಂದು ಕಂಪ್ಯೂಟರ್ ಸಿಪಿಯು ಅಕಿ 12,000/-ರೂ.  2] ಒಂದು ಕಂಪ್ಯೂಟರ್ ಸಿಪಿಯು ಅಕಿ 08,000/- ರೂ. 3] ಒಂದು ಕಂಪ್ಯೂಟರ್ ಮಾನಿಟರ್ ಅಕಿ 2500/- ರೂ. 4] 05 ಸನ್ ಡ್ಯಾರೇಟರ್ ರಿಮೊಟ್ ಅಕಿ 400/- ರೂ. ಹೀಗೆ ಒಟ್ಟು 22,900/- ರೂ. ಗಳ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 February 2014

Gulbarga District Reported Crimes

ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ನೀಲಮ್ಮ ಗಂಡ ಧೂಳಪ್ಪ ಕಮನೂರ ಸಾ: ಶೇಳ್ಳಗಿ ತಾ:ಚಿತ್ತಾಪೂರ ಜಿ:ಗುಲಬರ್ಗಾ ರವರ  ಎರಡನೇ ಮಗನಾದ ಕಾಶಿನಾಥ ಇತನು ಟಿಪ್ಪರ ನಂ. ಕೆಎ-01-ಬಿ-5437 ನೇದ್ದರ ಮೇಲೆ ಕ್ಲೀನರ ಕೆಲಸ ಮಾಡುತ್ತಿದ್ದು. ದಿನಾಂಕ: 11-02-2014 ರಂದು ಬೆಳಿಗ್ಗೆ 9 ಗಂಟೆಗೆ ನನ್ನ ಮಗ ಕಾಶಿನಾಥ ತಂದೆ ಧೂಳಪ್ಪ ಇತನು ಕ್ಲೀನರ ಕೆಲಸಕ್ಕೆಂದು ಹೇಳಿ ಹೋಗಿದ್ದು. ರಾತ್ರಿ 10 ಪಿಎಮ ಸುಮಾರಿಗೆ ನನ್ನ ಸೋದರ ಅಳಿಯ ಬಾಬುರಾವ ತಂದೆ ಸಿದ್ರಾಮಪ್ಪ ಇವರು ಊರಿಗೆ ಬಂದು ತಿಳಿಸಿದ್ದೆನೆಂದರೆ ಅಂದಾಜು 07-55 ಪಿಎಮ ಸುಮಾರಿಗೆ ಕಾಶಿನಾಥನ ಮೊಬಾಯಿಲದಿಂದ ವಿಶ್ವವಿದ್ಯಾಲಯ ಪೊಲೀಸರು ನನ್ನ ಮೊಬಾಯಿಲಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಕಾಶಿನಾಥ ಇತನು ಟಿಪ್ಪರ ಅಪಘಾತದಲ್ಲಿ ಮುಗಳನಾಗಾಂವ ಕಮಾನದಿಂದ 1 ಕಿ.ಮಿ ಅಂತರದ ಮೇಲೆ ರೋಡ ಬದಿಯಲ್ಲಿ ಪಲ್ಟಿಯಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಇತರರು ಸ್ಥಳಕ್ಕೆ ಹೋಗಿ ನೋಡಲಾಗಿ ಟಿಪ್ಪರ ನಂ. ರೋಡಿನ ಬದಿಯಲ್ಲಿ ಪಲ್ಟಿಯಾಗಿ ಒಳಗಡೆ ಸಿಕ್ಕಿ ಹಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು. ಶವವನ್ನು ಹೊರಗೆ ತೆಗೆದು ಗುಲಬರ್ಗಾ ಸರಕಾರಿ ಆಸ್ಪತ್ರೆಯಲ್ಲಿ ಇಟ್ಟು ಬಂದಿದ್ದು ಅಂತಾ ತಿಳಿಸಿದ ಮೇರೆಗೆ ದಿನಾಂಕ 12-02-2014 ರಂದು ಬೆಳಿಗ್ಗೆ 8 ಗಂಟೆಗೆ ನಾನು ನನ್ನ ಮಗ ರವಿ ಮತ್ತು ಸಂಬಂಧಿಕರು ಸರಕಾರಿ ಆಸ್ಪತ್ರೆ ಶವಗಾರ ಕೋಣೆಗೆ ಬಂದು ನೋಡಲಾಗಿ ನನ್ನ ಮಗನ ಮುಖ ಪೂರ್ತಿ  ಚಪ್ಪಟ್ಟೆಯಾಗಿದ್ದು ಮೃತಪಟ್ಟಿದ್ದು. ಸದ್ರಿ ಟಿಪ್ಪರ ನಂ. ಕೆಎ-01-ಬಿ-5437 ನೇದ್ದರ ಚಾಲಕನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ನಡೆಯಿಸಿ ವೇಗದ ನಿಯಂತ್ರಣ ತಪ್ಪಿ ಪಲ್ಟಿ ಮಡಿದ್ದರಿಂದ ಅಂದಾಜು 6-00 ಪಿಎಮ ಸುಮಾರಿಗೆ ಅಪಘಾತ ಮಾಡಿ ಚಾಲಕನು ಓಡಿ ಹೋಗಿರತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಟಕಲ ಠಾಣೆ : ಶ್ರೀ ಹಣಮಂತ ತಂದೆ ಹುಸೇನಿ ಮರಗುತ್ತಿ ಸಾ||ಚಂದನಕೇರಾ ರವರು ಮೊನ್ನೆ ದಿನಾಂಕ 10.02.2014 ರಂದು 8.00 ಪಿ.ಎಂಕ್ಕೆ  ನಾಗಪ್ಪ ತಂದೆ ಮಾಣಿಕ ಮರಗುತ್ತಿ ಸಂ. ಒಬ್ಬ ಸಾ||ಚಂದನಕೇರಾ ರವರು  ಅವಾಚ್ಯ ಶಬ್ದ್ಗಳಿಂದ ಬೈದು ಕೈಯಿಂದ ಹೊಡೆದು  ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.