ಆಕಸ್ಮಿಕ ಬೆಂಕಿ ಎತ್ತು ಹಸು ಸಾವು :
ಮುಧೋಳ ಠಾಣೆ : ಶ್ರೀ ಸಾಬಣ್ಣಾ
ತಂದೆ ರಾಮಪ್ಪ ದೊಡ್ಡಮನಿ ಸಾ: ಇಟಕಲ ತಾ: ಸೇಡಂ ಇವರು ದಿನಾಂಕ: 11.02.2014 ರಂದು ರಾತ್ರಿ 2030
ಗಂಟೆ ಸುಮಾರಿಗೆ ನಮ್ಮ ದೊಡ್ಡಿಗೆ ಆಕಸ್ಮಿಕವಾಗಿ ಬೆಂಕಿಹತ್ತಿ ದೊಡ್ಡಯಲ್ಲಿ ಕಟ್ಟಿದ ಒಂದು ಎತ್ತು
ಅಕಿ 60,000/- ರೂ. 2] ಒಂದು ಆಕಳ ಕರು ಅಕಿ 15,000/- ರೂ. 3] ಒಂದು ಕಟ್ಟಿಗೆ ಮಂಚ್ಚ ಅಕಿ
15000/- ರೂ. 4] ಒಂದು ಎತ್ತಿನ ಬಂಡಿ ಅಕಿ 50,000/- ರೂ. 5] 30 ಫತ್ರಾಗಳು ಅಕಿ 30,000/-
ರೂ. ಹಾಗು ಒಕ್ಕಲುತನದ ಸಮಾನುಗಳು ಅಕಿ 50,000/- ರೂ. ಹೀಗೆ ಒಟ್ಟು 2,20,000/- ರೂ. ಗಳಷ್ಟು
ಸುಟ್ಟು ಹಾನಿಯಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀ ರಾಕೇಶ ತಂದೆ ವಿಶ್ವಾನಾಥ ಸಾ: ಮುಧೋಳ ಗ್ರಾಮ ಇವರು ಮುಧೋಳ ಬಸ್ಸನಿಲ್ದಾಣದಿಂದ ಮುಧೋಳ ಮೇನ ಗೇಟಗೆ ಹೊಗುವ ರಸ್ತೆಯ ಪಕ್ಕದಲ್ಲಿ ಒಂದು ಮೊಬಾಯಿಲ್ ರಿಚಾರ್ಜ, ಟಿ.ವಿ ಕಂಪ್ಯೂಟರ್ ಹಾಗು ಡಿ.ಟಿ.ಹೆಚ.ಗಳನ್ನು ವ್ಯಾಪಾರ ಮಾಡುವ ಅಂಗಡಿಯನ್ನು ನಡೆಸುತ್ತಿದ್ದೇನೆ. ಮತ್ತು ಕೆಳಗಡೆ ಅಂಗಡಿ ಇದ್ದು, ಅಂಗಡಿಯ ಮೇಲೆ ನನ್ನ ಮನೆಯು ಕೂಡ ಇರುತ್ತದೆ. ನಾನು ಪ್ರತಿ ದಿವಸದಂತ್ತೆ,
ದಿನಾಂಕ: 11-02-2014 ರಂದು ಮುಂಜಾನೆ ನನ್ನ ಅಂಗಡಿಯನ್ನು ತೆಗೆದು ವ್ಯಾಪಾರ ಮಾಡಿ, ರಾತ್ರಿ 23:30 ಗಂಟೆಯ ಸುಮಾರಿಗೆ ನನ್ನ ಅಂಗಡಿಯನ್ನು ಬಂದ ಮಾಡಿಕೊಂಡು ಶೇಟರಗೆ ಕೀಲಿ ಹಾಕಿಕೊಂಡು ಹೊಗಿದ್ದೇನು.
ನಾನು ದಿನಾಂಕ: 12-02-2014 ರಂದು ಮುಂಜಾನೆ 06:00 ಗಂಟೆಯ ಸುಮಾರಿಗೆ ನನ್ನ ಅಂಗಡಿಗೆ ಬಂದು ನೋಡಿದಾಗ, ಸದರಿ ಅಂಗಡಿಗೆ ಇರುವ ಕಬ್ಬಿಣದ ಶೇಟರ್ಗೆ
ಕೆಳಗೆ ರಾಡ ಹಾಕಿ ಅಂದಾಜ 2 ಫೀಟನಷ್ಟು ಮೇಲಕ್ಕೆ ಏತ್ತಿ ಖುಲ್ಲಾ ಆಗಿತ್ತು, ಮತ್ತು ನಾನು ನೋಡಿದಾಗ ಅಂಗಡಿಯ ಒಳಗೆ ಇದ್ದ, ಎಲ್ಲಾ ಎಲೇಕ್ಟ್ರಾನಿಕ್ ಸಾಮಾನುಗಳು ಚಲ್ಲಾಪಿಲಿಯಾಗಿ ಬಿದಿದ್ದು, ನಾನು ಅಂಗಡಿಯಲ್ಲಿದ್ದ ಸಾಮಾನುಗಳನ್ನು ಪರಿಶೀಲಿಸಿ ನೋಡಿದಾಗ ನನ್ನ ಅಂಗಡಿಯಲ್ಲಿದ್ದ, 1] ಒಂದು ಕಂಪ್ಯೂಟರ್ ಸಿಪಿಯು ಅಕಿ 12,000/-ರೂ. 2] ಒಂದು ಕಂಪ್ಯೂಟರ್ ಸಿಪಿಯು ಅಕಿ 08,000/- ರೂ. 3] ಒಂದು ಕಂಪ್ಯೂಟರ್ ಮಾನಿಟರ್ ಅಕಿ 2500/- ರೂ. 4] 05 ಸನ್ ಡ್ಯಾರೇಟರ್ ರಿಮೊಟ್ ಅಕಿ 400/- ರೂ. ಹೀಗೆ ಒಟ್ಟು 22,900/-
ರೂ. ಗಳ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment