POLICE BHAVAN KALABURAGI

POLICE BHAVAN KALABURAGI

21 October 2013

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಯ್ಯಾ   ತಂದೆ ಚನ್ನಮಲ್ಲಯ್ಯಾ ಸ್ವಾಮಿ    ಸಾಮನೆ ನಂ: ಟಿ.ಆರ್.ಆರ್. 35/1 ಅಲಸ್ಟಮ ಕಾಲೋನಿ ಶಾಹಾಬಾದ ಮತ್ತು ಇವರು ದಿನಾಂಕ: 19-10-2013 ರಂದು ರಾತ್ರಿ 8=30 ಗಂಟೆಗೆ ನೋಬಲ್ ಸ್ಕೂಲ ಹತ್ತಿರ ಇರುವ ಎ.ಟಿ.ಎಮ್.ದಲ್ಲಿ ವಾಚ ಮೆನ ಕೆಲಸ ಮಾಡುವ ಕುರಿತು ಫಿರ್ಯಾದಿಯು ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಕೇಂದ್ರ ಬಸ್ ನಿಲ್ದಾಣ ರೋಡ ಕಡೆಗೆ ನಡೆದುಕೊಂಡು ಹೋಗಿ ನೋಬಲ್ ಸ್ಕೂಲ ಹತ್ತಿರ ಇರುವ ಎ.ಟಿ.ಎಮ್.ಎದುರು ರೋಡ ದಾಟುತ್ತಿದ್ದಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ರಾಹೂಲ ಈತನು ತನ್ನ ಮೋ/ಸೈಕಲ್  ನಂಬರ ಇಲ್ಲದ್ದು ಅದರ ENGINE NO: DHZCDD14886   CHESSI NO: NPPLKT 60-7 ನೆದ್ದನ್ನು ಅತಿವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಗಾತಮಾಡಿ ಭಾರಿಗಾಯಗೊಳಿಸಿ ತಾನೂ ಕೂಡಾ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ನಿಂಗಪ್ಪಾ ತಂದೆ ಕೇರೆಪ್ಪಾ ವಗ್ಗರ  ಸಾಫರಹತಾಬಾದ ತಾಜಿಗುಲಬರ್ಗಾ ಇವರ ಮಗನಾದ
ಮಂಜುನಾಥ, ಇತನು ಫರಹತಾಬಾದ ಬಸ ನಿಲ್ದಾಣದ ಹತ್ತಿರ ರೋಡಿನ  ಪಕ್ಕದಲ್ಲಿ ನಿಂತಾಗ  ಜೇವರ್ಗಿ  ಕಡೆಯಿಂದ ಒಬ್ಬ ಟವೇರಾ  ಕಾರ ಚಾಲಕನು  ತನ್ನ ಕಾರನು  ಅತಿವೇಗ  ಮತ್ತು ಅಲಕ್ಷತನದಿಂದ  ನಡೆಸಿಕೊಂಡು ಬಂದು ನನ್ನ ಮಗನಿಗೆ  ಡಿಕ್ಕಿ ಪಡಿಸಿರುತ್ತಾನೆ  ಇದ್ದರಿಂದ  ನನ್ನ ಮಗನಿಗೆ  ಹಣೆಯ  ಮೇಲೆ  ರಕ್ತಗಾಯ ಮತ್ತು  ಬಲಗಡೆ  ಕಿವಿಯಿಂದ ರಕ್ತ ಬರುತ್ತಿದ್ದು  ನಾನು ಗಾಬರಿಗೊಂಡು ಕೂಡಲೆ  ನಾನು  ಮತ್ತು  ನಮ್ಮ ತಾಯಿ  ಮಿಣಜಮ್ಮಾ  ಇಬ್ಬರು  ಕೂಡಿಕೊಂಡು ಫರಹತಾಬಾದ ಬಸ ನಿಲ್ದಾಣದ ಹತ್ತಿರ ಬಂದು ನೋಡಲಾಗಿ ಸದರಿ ನನ್ನ ಮಗನ ಹಣೆಯ  ಮೇಲೆ  ರಕ್ತಗಾಯವಾಗಿದ್ದು  ಬಲಗಡೆ ಕಿವಿಯಿಂದ ರಕ್ತ ಬರುತ್ತಿದ್ದು ಮತ್ತು ಮುಖಕ್ಕೆ ಚರಚಿದ ಗಾಯವಾಗಿದಲ್ಲದೆ  ಸೊಂಟಕ್ಕೆ ಒಳ  ಪೇಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀಮತಿ  ಶಿವಮ್ಮಾ ಗಂಡ ಹಣಮಂತರಾಯ ತುತಾರಿ ಸಾ;ಬೇಲೂರ(ಕೆ) ತಾ;ಜಿಗುಲಬರ್ಗಾ ರವರು ದಿನಾಂಕ 19-10-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಗೆ ಬೇಕಾದ ಕಿರಾಣಿ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಮರಳಿ ನಮ್ಮ ಊರಿಗೆ ಹೋಗುವ ಸಲುವಾಗಿ ಓಕಳಿ ಕ್ರಾಸ ಹತ್ತಿರ ನಿಲ್ಲುವ ನಮ್ಮೂರ ಜೀಪಗಳ ಕಡೆಗೆ ಗುಲಬರ್ಗಾ-ಹುಮನಾಬಾದ ನೆ್.ಹೆಚ್-218 ನೇದರ ರಸ್ತೆಯ ಎಡಮಗ್ಗಲಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ಕಮಲಾಪುರ ಬಸ ನಿಲ್ದಾಣ ದಾಟಿ ಮುಂದೆ ಹೋಗುತ್ತಿದ್ದಾಗ ರೇವಣಸಿದ್ದಪ್ಪಾನ ಹೋಟೆಲಿನ ಎದುರೆಗಡೆ ನನು ರಸ್ತೆ ದಾಟುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಬ್ಬ ಮೋಟಾರ ಸೈಕಲ್  ಸವಾರನು ತನ್ನ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಮದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ ನನಗೆ ಡಿಕ್ಕಿ ಹೊಡೆದು ಅಫಘಾತ ಪಡಿಸಿದನುಆಗ ನಾನು ರಸ್ತೆಯ ಮೇಲೆ ಬಿದ್ದಿದ್ದು ಅಷ್ಟರಲ್ಲಿ ಕಮಲಾಪೂರ ಬಸ ನಿಲ್ದಾಣದ ಹತ್ತಿರ ನಿಂತಿದ್ದ ನಮ್ಮೂರ ಪ್ರಕಾಶ ಇವನ ಮಗನಾದ ಮಹೇಶ ಪಾಟೀಲ್ ಇವರು ಓಡಿಬಂದು ರಸ್ತೆಯ ಮೇಲೆ ಬಿದ್ದಿದ್ದ ನನಗೆ ಎಬ್ಬಿಸಿ ನೋಡಲಾಗಿ ನನ್ನ ಬಲಗೈ ಹಸ್ತದ ಮೇಲೆ ಗುಪ್ತಗಾಯವಾಗಿದ್ದು ಬಲಗಾಲಿನ ಮೊಳಕಾಲಿಗೆ ,ತೆಲೆಯ ಹಿಂದುಗಡೆ ಗುಪ್ತಗಾಯವಾಗಿತ್ತು ನಂತರ ನನಗೆ ಅಪಘಾತ ಪಡಿಸಿದ ಮೋಟರ. ಸೈಕಲ್ ನಂಬರ ನೋಡಲಾಗಿ ಕೆಎ-32-ಇಎ-5070 ನೇದ್ದು ಇದ್ದು,ಅದರ ಚಾಲಕನ ಹೆಸರು ವಿಚಾರಿಸಲಾಗಿ ಆತನು ತನ್ನ ಹೆಸರು ಸಂತೋಷ ತಂದೆ ಅಂಬರಾಯ ಮೂಲಗೆ ವಯ; 21 ವರ್ಷ ಸಾಬೇಟ್ಟ ಜೇವರ್ಗಿ ತಾಆಳಂದ ಅಂತ ತಿಳಿಸಿದನುನಾವು ಗಾಬರಿಯಲ್ಲಿ ಕೂಗಾಡುತ್ತಿದ್ದರಿಂದ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿದ್ದಾಗ ಮೊಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲೋಗಿ ಠಾಣೆ : ದಿನಾಂಕ 19-10-2013 ರಂದು ಮುಂಜಾನೆ 10.00 ಎ ಎಮ್ ಕ್ಕೆ ಶ್ರೀ ಗುರುಬಸಪ್ಪ ಹೆಚ್ ಸಿ 125 ನೆಲೋಗಿ ಪೊಲೀಸ್ ಠಾಣೆ  ಮತ್ತು ಪ್ರಕಾಶ ನೆಲ್ಲಗಿ ಕೂಡಿ ಸೈಕಲ ಮೋಟಾರ್ ನಂ ಕೆಎ-32 ಯು-7083 ನೇದ್ದರ ಮೇಲೆ ಮತ್ತು  ನಮ್ಮೂರ ಸಾಹೇಬಗೌಡ ದರಿಗೊಂಡ ಹಾಗೂ ಅವರ ಸಂಬಂಧಿಕ ನೇದಲಗಿ ಸಿದ್ದಣ್ಣ ಬಿರೆದಾರ ಇವರು ಕೂಡಾ ಸೈಕಲ್ ಮೋಟಾರ್ ನಂ ಕೆಎ-32 ಇಇ-0830 ನೇದ್ದರ ಮೇಲೆ ಸಿಂದಗಿಗೆ ಬಂದಿದ್ದರು. ನಂತರ ಕೆಲಸ ಮುಗಿಸಿಕೊಂಡು ನಾನು ಪ್ರಕಾಶ ಕೂಡಿ ನಮ್ಮ ಸೈಕಲ್ ಮೋಟಾರ್ ಮೇಲೆ 06.00 ಪಿ ಎಮ್ ಕ್ಕೆ ಸಿಂದಗಿಯಿಂದ ನಮ್ಮೂರಗೆ ಹೊರಟೇವು. ಅಲ್ಲೆ ಇದ್ದ ಸಿದ್ದಣ್ಣ ಹಾಗೂ ಸಾಹೇಬಗೌಡ ದರಿಗೊಂಡ ಇವರಿಗೆ ಊರಿಗೆ ಯಾವಾಗ ಬರುತ್ತೀರಿ ಅಂತಾ ಕೇಳಿದೇವು. ಇನ್ನೂ 10 ನಿಮಿಷದಲ್ಲಿ ಇಲ್ಲಿಂದ ಬಿಡುತ್ತೇವೆ, ನೀವು ನಡಿರಿ ಎಲ್ಲರೂ ಜೇರಟಗಿ ದಾಬಾದಲ್ಲಿ ಊಟ ಮಾಡಿ ಊರಿಗೆ ಹೊಗೋಣ ಅಂತಾ ಹೇಳಿದರು. ನಾವು ಮುಂದೆ ಬಂದು ಜಗದೇವಪ್ಪ ಚಾಂದಕೊಟೆ ಇವರ ದಾಬಾದಲ್ಲಿ ಬಂದು ಕುಳಿತೇವು. ಅರ್ದ ಗಂಟೆಯಾದರು ಬರದೇ ಇದ್ದ ಕಾರಣ ನಾನು ಮತ್ತು ಪ್ರಕಾಶ ಕೂಡಿ ಹೊರಗೆ ಬಂದು ಫೋನ ಮಾಡುತ್ತಾ ನಿಂತಿದ್ದೇವು. ಸ್ವಲ್ಪ ಸಮಯದಲ್ಲಿ ಸಾಹೇಬಗೌಡ ದರಿಗೊಂಡ ಹಾಗೂ ಸಿದ್ದಣ್ಣ ಬಿರೆದಾರ ತಾನು ನಡೆಸುತ್ತಿದ್ದ ಸೈಕಲ್ ಮೋಟಾರ್ ನಂ ಕೆಎ-32 ಇಇ-0830 ನೇದ್ದು ಅತೀ ವೇಗ ಹಾಗೂ ನಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದವನೇ ರೋಡಿನ ಮೇಲೆ ನಿಂತ ಪ್ರಕಾಶನಿಗೆ ಢಿಕ್ಕಿ ಹೊಡೆದಾಗ ಅವನು ಕೆಳಗೆ ಬಿದ್ದನು. ಆಗ ಅವನ ತಲೆಗೆ ಭಾರೀ ಒಳ ಪೆಟ್ಟಾಗಿ ಬಲಕಿನ ಕಿವಿಯಲ್ಲಿ ರಕ್ತ ಸೋರ ಹತ್ತಿತು. ಸಿದ್ದಣ್ಣ ಬಿರೆದಾರ ಹಾಗೂ ಸಾಹೇಬಗೌಡ ದರಿಗೊಂಡ ಇವರು ಮುಂದೆ ಹೋಗಿ ಸೈಕಲ್ ಮೋಟಾರ್ ನಿಲ್ಲಿಸಿ ಬಂದರು. ನಂತರ 108 ಅಂಬ್ಯುಲೆನ್ಸಗೆ ಫೋನ ಮಾಡಿ ತರಿಸಿ ಅದರಲ್ಲಿ ಪ್ರಕಾಶನನ್ನು ಹಾಕಿಕೊಂಡು ಜೇವರಗಿಯಲ್ಲಿ ಉಪಚಾರ ಪಡಿಸಿ, ನಂತರ ಇಲ್ಲಿ ಚಿರಾಯು ಆಸ್ಪತ್ರೆಯಲ್ಲಿ ಸೇರಿಕೆ  ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 October 2013

Gulbarga District Reported Crimes

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಿದ್ದಮ್ಮ ಗಂಡ ಶೀವಶರಣಪ್ಪ ಉಳ್ಳಾಗಡ್ಡಿ ಸಾ|| ಆಳಂದ ಹಾ. ವ || ಕುಂಬಾರ ಗಲ್ಲಿಬ್ರಹ್ಮಪೂರ ಗುಲಬರ್ಗಾ ಇವರ ಗಂಡ ಶೀವಶರಣಪ್ಪ ಮತ್ತು ಅಣ್ಣ ತಮ್ಮಂದಿರ ಮಧ್ಯ ಪ್ಇತ್ರರ್ಜಿತ ಆಸ್ತಿಯ ವಿಷಯದಲ್ಲಿ ತಕರಾರಿದ್ದು  ನನ್ನ ಗಂಡನ ಪಾಲಿಗೆ ಬರಬೇಕಾದ ಆಸ್ತಿಯನ್ನು ಕೊಡದೆ ಅದನ್ನು ನಮ್ಮ ಬಾವ ಮಲ್ಲಿಕಾರ್ಜುನ ಇತನು ತನ್ನ ಮಕ್ಕಳಾದ ರಾಜಶೇಖರಶ್ರೀಕಾಂತಮಾರ್ಕಂಡೆಯ ಇವರ ಹೇಸರಿಗೆ ಮಾಢಿಸಿದ್ದು ಅದಕ್ಕೆ ನನ್ನ ಗಂಡ ಮತ್ತು ಶೀವಶರಣಪ್ಪ ಆಗಾಗೆ ಆಳಂದಕ್ಕೆ ಹೋಗಿ ನನಗೆ ಬರಬೇಕಾದ ಆಸ್ತಿ ಕೊಡಬೇಕು ಅಂತಾ ಮತ್ತು ನಮಗೆ ಬರಬೇಕಾದ ಆಸ್ತಿಯನ್ನು ಕೊಡದೆ ಎಕೆ ನಿಮ್ಮ ಮಕ್ಕಳ ಹೆಸರಿಗೆ ಮಾಡಿಸಿಕೊಂಡಿರಿ ಅಂತಾ ಕೇಳುತ್ತಾ ಹೊರಿಟಿದ್ದನು . ನನ್ನ ಗಂಡ ಶೀವಶರಣಪ್ಪ ಇತನ ತಂಗಿಯಾದ ಸುಲೋಚನಾ ಗಂಡ ಅಪ್ಪರಾಯ ಕಾಳೆ ಮತ್ತು ಅವಳ ಮಗ ರವಿ ಅಪ್ಪಾರಾವ ಕಾಳೆ ಮತ್ತು ನನ್ನ ಗಂಡನ ಇನ್ನೋಬ್ಬ ತಂಗಿಯಾದ ಜಯಶ್ರೀ ಗಂಡ ಶರಣಪ್ಪ ಕಾಳೆ ಹಾಗು ನನ್ನ ಭಾವ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಇವರು ಆಗಾಗ ನನ್ನ ಗಂಡನ ಜೋತೆಯಲ್ಲಿ ತಂಟೆ ತಕರಾರು ಮಾಢುತ್ತಾ ಹೊರಟಿದ್ದರು ದಿನಾಂಕ 07-10-2013 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ನನ್ನ ಗಂಡ ಶೀವಶರಣಪ್ಪ ಇತನು ತಿಳಿಸಿದ್ದೆನೆಂದರೆ ನಾನು ನನ್ನ ತಂಗಿ ಸುಲೋಚನಾ ಇವರ ಮನೆಗೆ ನನಗೆ ಬರಬೇಕಾದ ಆಸ್ತಿಯನ್ನು ಕೊಡಬೇಕು ಅಂತಾ ಕೇಳಿ ಬರವುದಾಗಿ ಹೇಳಿ ಹೊದನು ಅವರು ಮರಳಿ ಮನೆಗೆ ಬರದೆ ಇರುವದರಿಂದ ನಾನು ಮತ್ತು ನನ್ನ ಮಗ ನಾಗರಾಜ ಕೂಡಿಕೊಂಡಿ ನನ್ನನಾದಿನಿ ಸುಲೋಚನಾ ಹಾಗು ಜಯಶ್ರೀ ಇವರ ಮನೆಗೆ ಹೊಗಿ ನನ್ನ ಗಂಡನ ಬಗ್ಗೆ ವಿಚಾರಿಸಿದ್ದು ಅವರು ನಮಗೆ ಗೊತ್ತಿರುವದಿಲ್ಲಾ ಅಂತಾ ತಿಳಿಸಿರುತ್ತಾರೆ ನಂತರ ನಾನು ಆಳಂದಕ್ಕೆ ಹೋಗಿ ನಮ್ಮ ಭಾವ ಮಲ್ಲಿಕಾರ್ಜುನ ಇವರ ಮನೆಗೆ ಹೊಗಿ ನನ್ನ ಗಂಡನ ಬಗ್ಗೆ ವಿಚಾರಿಸಿದ್ದು ಅವರು ನನಗೆ ಗೊತ್ತಿಲ್ಲಾ ಅಂತಾ ಹೇಳಿ ಜೀವದ ಬೇದರಿಕೆ ಹಾಕಿದ್ದರಿಂದ ನಾನು ಮರಳಿ ಮನಗೆ ಬಂದಿರುತ್ತೆನೆ. ನನ್ನ ಗಂಡನನ್ನು ಎಲ್ಲಾ ಕಡೆ ಹುಡುಕಾಡುತ್ತಿದ್ದಾಗ ದಿನಾಂಕ 18-10-2013 ರಂದು ಬೆಳಿಗ್ಗೆ 11.50 ಗಂಟೆಗೆ ನನ್ನ ಗಂಡ ಗುಲಬರ್ಗಾನಗರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತಟ್ಟಿರುವ ವಿಷಯ ತಿಳಿದಿದ್ದರಿಂದ ನಾನು ಮತ್ತು ನನ್ನ ಮಗ ನಾಗರಾಜ ಇಬ್ಬರು ಆಸ್ಪತ್ರೆಗೆ ಹೊಗಿ ನೊಡಲು ನನ್ನ ಗಂಡನು ತುರ್ತುಚಿಕಿತ್ಸಾ ಘಟಕದಲ್ಲಿ ಮರಣ ಹೊಂದಿದ್ದು ಇರುತ್ತದೆ ಕಾರಣ ನನ್ನ ಗಂಡನಿಗೆ ಆಸ್ತಿಯ ಸಂಬಂದ ನನ್ನ ನಾದನಿಯವರಾದ ಸುಲೋಚನಾ ಗಂಡ ಅಪ್ಪರಾವ ಕಾಳ ಅವರ ಮಗ ರವಿ ತಂದೆ ಅಪ್ಪಾರಾವ ಕಾಳೆ ಮತ್ತು ನನ್ನ ಭಾವ ಮಲ್ಲಿಕಾರ್ಜುನ ತಂದೆ ಭೀಮಶ್ಯಾ ಉಳ್ಳಾಗಡ್ಡಿ ಮತ್ತು ಜಯಶ್ರೀ ಗಂಡ ಶರಣಪ್ಪ ಕಾಳೆ ಇವರು ನನ್ನ ಗಂಡನಿಗೆ ಹೊಡೆದು ನಮಗೆ ತಿಳಿಸದೆ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೆರ್ಪಡೆ ಮಾಡಿದ್ದು ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ನರೇಂದ್ರಗೌಡ ತಂದೆ ವಿಠಲಯ್ಯಾ ಇಂಜಮುರಿ ಸಾ: ಗೊಲಲಗುದ ತಾ: ಚವಳಾ ಜಿ: ರಂಗಾರೆಡ್ಡಿ ಇವರು ತಮ್ಮ ಗ್ರಾಮದ ಇನ್ನು ಕೆಲವು ಜನರು ಟವೇರಾ ನಂ. ಎ.ಪಿ.28 ಎ.ವಿ. 6568ನೇದ್ದರಲ್ಲಿ ಘಾಣಗಾಪೂರಕ್ಕೆ ದೇವರ ದರ್ಶನ ಕುರಿತು. ಹೋಗಿ ಅಲ್ಲೆ ವಸತಿ ಮಾಡಿ ಇಂದು ದಿನಾಂಕ:19-10-13 ರಂದು ಮರಳಿ ಗ್ರಾಮಕ್ಕೆ ಹೋಗುವ ಕುರಿತು ಸದರಿ ಟವೇರಾದಲ್ಲಿ ಗುಲ್ಬರ್ಗಾ ಸೇಡಂ ರೋಡ ಮುಖಾಂತರ ಹೊರಟು 11.15 ಎ.ಎಮ್. ಸುಮಾರಿಗೆ ಗುಂಡಗುರ್ತಿ ಗ್ರಾಮದ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಒಂದು ಟವೇರಾ ವಾಹನ ನಂ. ಕೆ.ಎ 20 ಎಮ್. 9922 ನೇದ್ದರ ಚಾಲಕ ತನ್ನ ವಾಹನ ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬರುವಾಗ ವಾಹನದ ಹಿಂದಿನ ಟಾಯರ ಒಡೆದು ರೋಡಿನ ಮೇಲೆ ಅಡ್ಡಾ ತಿಡ್ಡಿ ವಾಹನ ನಡೆಸಿ ನಿಯಂತ್ರಣ ತಪ್ಪಿ ನಮ್ಮ ವಾಹನಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಹಾಗೂ ವಾಹದಲ್ಲಿದ್ದ ಇತರರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಗಳಾಗಿ, ಡಿಕ್ಕಿ ಪಡಿಸಿದ ವಾಹನದಲ್ಲಿದ್ದ 2-3 ಜನರು ಕೆಳಗೆ ಬಿದ್ದು ಅದರಲ್ಲಿ ನೂರಜಾಹ ಶೇಖ ಎಂಬುವರು ಸ್ಥಳದಲ್ಲಿಯೆ ಮೃತ ಪಟ್ಟು ಇನ್ನು ಇಬ್ಬರು ಗಂಭಿರ ಸ್ಥತಿಯಲ್ಲಿದ್ದು. ಡಿಕ್ಕಿ ಪಡಿಸಿದ ವಾಹನ ಚಾಲಕನ ಹೆಸರು ವಿಚಾರಿಸಲಾಗಿ ಮಹ್ಮದ ಅಯುಬ ಶೇಖ ತಂದೆ ಮಹ್ಮದ ಸಾಬ ಶೇಖ ಅಂತ ತಿಳಿಸಿದು ಬಂದಿದ್ದು. ನಂತರ ನಾವೆಲ್ಲರು ಉಪಚಾರ ಕುರಿತು ಗುಂಡಗುರ್ತಿ ಆಸ್ಪತ್ರೆಗೆ ಸೇರಿಕೆಯಾಗಿದ್ದು. ಡಿಕ್ಕಿ ಪಡಿಸಿದ ವಾಹನದಲ್ಲಿದ್ದ ಗಂಭೀರ ಸ್ಥಿತಿಯಲ್ಲಿದ್ದವರಿಗೆ ಅಂಬುಲೆನ್ಸ ದಲ್ಲಿ ಉಪಚಾರ ಕುರಿತು ಗುಲ್ಬರ್ಗಾಕ್ಕೆ ತೆಗೆದುಕೊಂಡು ಹೋಗಿದ್ದು. ಹೋದವರಲ್ಲಿ ಗಾಯಾಳು ಅಬ್ಬಾಸ ಅಲಿ ಈತನು ಉಪಚಾರದಲ್ಲಿ ಮೃತ ಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಗಿ ಠಾಣೆ : ಶ್ರೀ ದಿನೇಶ ತಂದೆ ಷಣ್ಮಖಪ್ಪಾ ನಂದಿಕರ್ ಸಾ: ವರವರಟ್ಟಿ (ಕೆ) ತಾ: ಹುಮನಾಬಾದ ಇವರು  18-10-2013 ರಂದು ನಾನು  ಮತ್ತು ನನ್ನ ಗೆಳೆಯನಾದ ಅಸದ ಮೀಯ್ಯಾ ಇಬ್ಬರು ಕೂಡಿ ನಮ್ಮ ಖಾಸಗಿ ಕೆಲಸಕ್ಕಾಗಿ ನಮ್ಮ ಮೋಟರ ಸೈಕಲ ನಂ ಸುಜುಕಿ ಸಮೊರಾಯಿ ನಂ ಕೆಎ-39ಇ-4137 ರ ಮೇಲೆ ಕುಳಿತು ರಾಜಾಪೂರಕ್ಕೆ ಹೋರಟು ಭರತೂರ ಸೀಮಾಂತರದಲ್ಲಿ ಅಣ್ಣಪ್ಪ ಗೌಡ್ರ ಹೊಲದ ಹತ್ತಿರ ಹೋಗುತ್ತಿದ್ದಾಗ ನಮ್ಮ ಎದರುಗಡೆಯಿಂದ ಟಾಟಾ ಎ,ಸಿ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗೆ ಹಾಗೂ ನಿಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ನಮಗೆ ಹಾಯಿಸಿ ರಸ್ತೆ ಅಪಘಾತ ಮಾಡಿದೆನುಈ ಅಪಘಾತದಿಂದ ನನ್ನ ಎರಡು ಮೊಳಕಾಲಿಗೆ ,ಹೊಟ್ಟೆಗೆ ಒಳಪೆಟ್ಟಾಗಿರುತ್ತದೆನನ್ನ ಹಿಂದೆ ಕುಳಿತನ ಅಸದಮಿಯ್ಯಾ ಇವನ ಬಲಗಾಲುಬಲಗೈಗೆಭಾರಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ,ಮತ್ತು ಬಲಹಣೆಗೆ ಪೆಟ್ಟಾಗಿ ರಕ್ತಾಗಾಯವಾಗಿರುತ್ತದೆನಮಗೆ ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ  ದಸ್ತಗೀರ ತಂದೆ ಸಯ್ಯದ ಮದರಸಾಬ ಇವರು ದಿನಾಂಕ 19-10-2013 ರಂದು ಸಾಯಂಕಾಲ 5=30 ಗಂಟೆಯ ಸುಮಾರಿಗೆ ಫಿರ್ಯಾದಿಯು ಸದಾಶೀವ ಇವರ ಮನೆಯಿಂದ ಹೊರಗೆ ಬಂದು ಏಕಿ ಮಾಡುವ ಗೊಸ್ಕರ ಪಿ.ಟಿ ಕ್ವಾಟರ್ಸ ಕಂಪೌಂಡ ಗೋಡೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ರಹಿಮತ ನಗರ ಕಡೆಯಿಂದ ಮೊ/ಸೈಕಲ್ ನಂ:ಕೆಎ 33 ಜೆ 8898 ರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿಗಾಯಗೊಳಿಸಿ ಸವಾರ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜುಜಾಟ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ಶ್ರೀ ಯು.ಶರಣಪ್ಪಾ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಜರುಪಡಿಸಿದ್ದು ಎನೆಂದರೆ ದಿನಾಂಕ. 19.10.2013 ರಂದು ಮದ್ಯಾಹ್ನ ಖಚಿತ ಬಾತ್ಮಿ ಬಂದಿದ್ದು ಎನೆಂದರೆ ಸಿದ್ದಿಪಾಶ ದರ್ಗಾದ ಹತ್ತಿರ ಒಬ್ಬ ಮನುಷ್ಯ ದೈವಲಿಲೆಯ ಮಟ್ಕಾ ಜೂಜಾಟ ಸಾರ್ವಜನಿಕರಿಂದ ಹಣ ಪಡೆದು ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯಾದ ದತ್ತಾತ್ರೆಯ ಎ.ಎಸ್.ಐ ಅಣ್ಣಾರಾವ ಹೆಚ್.ಸಿ, ಶಿವಯೋಗಿ ಹೆಚ್.ಸಿ, ಬಸವರಾಜ ಹೆಚ್.ಸಿ, ಲಕ್ಕಪ್ಪಾ ಹೆಚ್.ಸಿ, ಪ್ರಕಾಶ ಹೆಚ್.ಸಿ ರವರೊಂದಿಗೆ ಕೂಡಿಕೊಂಡು ಪೊಲೀಸ್ ಜೀಪ ನಂ. ಕೆಎ-32-ಜಿ-476 ರಲ್ಲಿ ಹೋಗಿ ಸಿದ್ದಿಪಾಶ ದರ್ಗಾದ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಮನುಷ್ಯ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ್ ಚೀಟಿ ಬರೆದುಕೊಡುವುದನ್ನು ನೋಡಿ ಖಚಿತಪಡಿಸಿಕೊಂಡು ಅವನಿಗೆ ಪಂಚರ ಸಮಕ್ಷಮದಲ್ಲಿ ಮತ್ತು ಸಿಬ್ಬಂದಿರವರ ಸಹಾಯದಿಂಧ ಮತ್ತಿಗೆ ಹಾಕಿ ಹಿಡಿದು ಅವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ನೂರು ತಂದೆ ಲಷ್ಕರ ರಾಠೋಡ ವಯ|| 30 ಜಾ|| ಲಮಾಣಿ ಸಾ|| ಭರತನಗರ ತಾಂಡಾ ಗುಲಬರ್ಗಾ ಇವರ ಸಮಕ್ಷಮದಲ್ಲಿ ಚೆಕ್ ಮಾಡಲಾಗಿ ಆರೋಪಿತನಿಂದ ನಗದು ಹಣ 2,200/-, ಒಂದು ಮಟಕಾ ಚೀಟಿ, ಒಂದು ಬಾಲ ಪೇನ ಇವುಗಳು ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿದ್ದು ಮಟ್ಕಾ ಬುಕ್ಕಿ ನಡೆಸುತ್ತಿದ್ದ ಅನೀಲ ಗಾಜರೆ ಸಾ|| ಗಾಜಿಪೂರ ಗುಲಬರ್ಗಾ ರವರಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಕಾರಣ ಜಪ್ತಿ ಪಂಚನಾಮೆಯನ್ನು ಬರೆದು ಮುಗಿಸಿಮರಳಿ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಹಾಗೂ ಆರೋಪಿತನಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

19 October 2013

Gulbarga District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀರೇವಣಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ  ಸಾ|| ಕುಡಕಿ ಇವರು  ದಿನಾಂಕ 18-10-2013 ರಂದು 0800 ಗಂಟೆ  ಸುಮಾರಿಗೆ  ತಮ್ಮೂರಿನ  ರೇವಣಸಿದ್ದೇಶ್ವರ  ಗುಡಿಯ  ಹಿಂದುಗಡೆ ಇರುವ  ಶಿವಾನಂದ ಸುತಾರ ಹತ್ತಿರ ಬಿತ್ತುವಕೂರಿಗೆ ತುಂಬಿಸುತ್ತಿರುವಾಗ 1) ಮಲಕಪ್ಪ ತಂದೆ ಚಂದ್ರಶಾ ಗುಂಡಗುರ್ತಿ, 2) ಸಂತಪ್ಪ ತಂದೆ ಚಂದ್ರಶಾ ಗುಂಡಗುರ್ತಿ, 03)  ರಾಜು ತಂದೆ ಚಂದ್ರಶಾ ಗುಂಡಗುರ್ತಿ, 4) ವಿಠ್ಠಲ ತಂದೆ ಚಂದ್ರಶಾ ಗುಂಡಗುರ್ತಿ, 5) ಮಹಾಂತಪ್ಪ ತಂದೆ ಮಲಕಪ್ಪ ಗುಂಡಗುರ್ತಿ 6) ಪಿಂಟಪ್ಪ ತಂದೆ ಮಲಕಪ್ಪ ಗುಂಡಗುರ್ತಿ 7) ಚಂದ್ರಶಾ ತಂದೆ ವಿಠೋಬಾ ಗುಂಡಗುರ್ತಿ ಸಾ|| ಎಲ್ಲರೂ ಕುಡಕಿ ಗ್ರಾಮ. ಅಲ್ಲಿಗೆ ಒಂದು   ಭೋಸಡಿ  ಮಗನೆ  ಭೀರಲಿಂಗೇಶ್ವರ ದೇವಸ್ಥಾನದಲ್ಲಿ  ಪಾಲುಕೇಳುತ್ತಿಯಾ ಅಂತ  ಬೈದು  ಫಿರ್ಯಾದಿಗೆ  ಮುಂದೆ  ಹೋಗದಂತೆ  ತಡೆದು  ನಿಲ್ಲಿಸಿ    ಮಗನಿಗೆ ಖಲಾಸ ಮಾಡಿರಿ ಅಂತಾ ಬಡೆಗೆಯಿಂದ ಫಿರ್ಯಾದಿಯ ತಲೆಗೆ  ಹೊಡೆದಿರುತ್ತಾನೆ.  ಪಿಂಟು  ಇತನು  ಕಲ್ಲಿನಿಂದ  ಎಡಗೈ  ಮುಂಗೈ ಹತ್ತಿರ  ಹಾಗೂ  ಅಂಗೈಗೆ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಸಂತೋಷ ತಂದೆ ಚಂದ್ರಶಾ ಗುಂಡಗುರ್ತಿ  ಸಾ|| ಕುಡಕಿ ಇವರು ದಿನಾಂಕ 18-10-2013 ರಂದು 0800 ಗಂಟೆ  ಸುಮಾರಿಗೆ 1) ರೇವಣಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ 2) ಸಿದ್ದಪ್ಪ ತಂದೆ ರಾಚಪ್ಪಾ ಗುಂಡಗುರ್ತಿ, 3) ಶಿವಾನಂದ  ತಂದೆ ರಾಚಪ್ಪಾ ಗುಂಡಗುರ್ತಿ,ಸಾ|| ಎಲ್ಲರೂ ಕುಡಕಿ ಗ್ರಾಮ.ತಮ್ಮೂರಿನ  ರೇವಣಸಿದ್ದೇಶ್ವರ ಗುಡಿಯ ಹಿಂದುಗಡೆ ಇರುವ  ಶಿವಾನಂದ  ಸುತಾರ  ಇತನ  ಹತ್ತಿರ  ದಿಂಡು  ತುಂಬಿಸುತ್ತಿದ್ದಾಗ ಅಲ್ಲಿಗೆ ಬಂದು   ಮುಂದೆ ಹೋಗದಂತೆ  ತಡೆದು  ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಮಗನಾ ಬೀರಲಿಂಗೇಶ್ವರ ಹೊಲದ ಪಾಲು  ನಮಗೂ ಬರ್ತಾದ ಅದಕ್ಕೆ ನೀವು ಎಷ್ಟು ಹಕ್ಕದಾರ ಇದ್ದೀರಿ ನಾವು ಅಷ್ಟೆ ಹಕ್ಕ ನಮಗೂ ಅದ ಆದರೆ ಬೆಳೆ ನೀವೆ ತಿಂತಿರಿ ನಿಮಗೆ ಸೊಕ್ಕು ಬಹಳಬಂದಾಗ ಅಂತ ಬೈದು  ಮುಖಕ್ಕೆ ಕೈಯಿಂದ ಜೋರಾಗಿ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಪ್ರೇಮ ತಂದೆ ಹರಿಶ್ಚಂದ್ರ ರಾಠೋಡ ಸಾಃ ಕಾಳನೂರ ತಾಂಡಾ ತಾಃಜಿಃ ಗುಲಬರ್ಗಾ ಇವರು ದಿನಾಂಕ:18-10-2013 ರಂದು ಬೆಳಿಗ್ಗೆ 9-00 ಗಂಟೆಗೆ ನಾನು, ನನ್ನ ಪರಿಚಯದವನಾದ ಗಿರೀಶ ತಂದೆ ವಿಠಲ ಚವ್ಹಾಣ ಸಾಃ ಹಗ್ಗನೂರ ತಾಂಡಾ ಇಬ್ಬರು ಕೂಡಿಕೊಂಡು ಗೀರಿಶ ಈತನ ಮೋಟಾರ ಸೈಕಲ ನಂ. ಕೆಎ:32, ಈಎ:6943 ನೇದ್ದರ ಮೇಲೆ ಕಲಕೋರಾ ತಾಂಡಾ ದೇವಿ ದರ್ಶನಕ್ಕೆ ಹೋಗುತ್ತಿರುವಾಗ ಜೀವಣಗಿ ಗ್ರಾಮದ ಹತ್ತಿರ ನಮ್ಮ ಪರಿಚಯದವನಾದ ಸೋಮಶೇಖರ ತಂದೆ ನೀಲಕಂಠ ದೋಶೆಟ್ಟಿ ಸಾಃ ಬೋಳೆವಾಡ ಇವರು ನಮಗೆ ನೋಡಿ, ಕೈ ಮಾಡಿ, ನಿಲ್ಲಿಸಿ ಮಾತನಾಡಿಸಿ, ಎಲ್ಲಿಗೆ ಹೋಗುತ್ತಿದ್ದಿರಿ ಅಂತಾ ಕೇಳಿದಕ್ಕೆ ನಾವು ಕಲಖೋರಾ ದೇವಿ ದರ್ಶನಕ್ಕೆ ಹೋಗುತ್ತಿದ್ದೇವೆ ಅಂತಾ ತಿಳಿಸಿದ್ದಕ್ಕೆ ನನಗೆ ಕಮಲಾಪೂರ ವರೆಗೆ ಬಿಡಲು ಕೇಳಿದಕ್ಕೆ ನಾವು ನಮ್ಮ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ಕಮಲಾಪೂರ ಕಡೆಗೆ ಹೊರಟಿದ್ದು. ನಾವು ಕುಳಿತ ಮೋಟಾರ ಸೈಕಲನ್ನು ಗೀರಿಶ ಈತನು ಚಲಾಯಿಸುತ್ತಿದ್ದನು. ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ರೋಡಿನ ಕಮಲಾಪೂರ ಜೀವಣಗಿ ಕ್ರಾಸ ಹತ್ತಿರ ಬರುತ್ತಿದ್ದಂತೆ ಕಮಲಾಪುರ ಕಡೆಯಿಂದ ಕ್ರೋಜರ ಜೀಪ ನಂ. ಕೆಎ:48, ಎಂ:984 ನೇದ್ದರ ಚಾಲಕ ಕ್ರೀಷ್ಣಾ ತಂದೆ ಯಲ್ಲಪ್ಪಾ ನ್ಯಾನೂಗೌಡ ಸಾಃ ನಾಗರಾಳ ತಾಃ ಮುಧೋಳ ಜಿಃ ಬಾಗಲಕೋಟ ಈತನು ತನ್ನ ಕ್ರೋಜರ ಜೀಪ ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ, ಎಲ್ಲರಿಗು ರಕ್ತಗಾಯಗಳಾಗಿ ಬಾರಿಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 17-10-2013 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಶ್ರೀ ನಾಸೀರ ತಂದೆ ಅಬ್ದುಲ ಖಾದರ, ಉಃ ಅಟೋರಿಕ್ಷಾ ನಂ. ಕೆ.ಎ 32 8360 ನೇದ್ದರ ಚಾಲಕ, ಸಾಃ ರೋಜಾ (ಬಿ) ರೋಜಾ ಠಾಣೆ ಹತ್ತಿರ ಗುಲಬರ್ಗಾ ರವರು  ತನ್ನ ಅಟೊರಿಕ್ಷಾ ನಂ.ಕೆ.ಎ 32 8360 ನೇದ್ದರಲ್ಲಿ ಗ್ಯಾಸ್ ಮುಗಿಯುತ್ತಾ ಬಂದಿದ್ದರಿಂದ ಗ್ಯಾಸ್ ತುಂಬಿಸಿಕೊಂಡು ಹೋಗುವ ಸಲುವಾಗಿ ಹುಮನಾಬಾದ ರಿಂಗ ರೋಡ ಕಡೆಯಿಂದ ಲಾಹೋಟಿ ಪೆಟ್ರೊಲ್ ಬಂಕ ಕಡೆಗೆ ಬರುತ್ತಿದ್ದಾಗ ಲಾಹೋಟಿ ಪೆಟ್ರೊಲ ಬಂಕ ಹತ್ತಿರ ಇರುವ ವ್ಹೇ ಪಾಯಿಂಟ ಎದರುಗಡೆ ಬರುತ್ತಿದ್ದಾಗ ಕಾರ ನಂ. ಎ.ಪಿ 10 ಎ.ಜಿ 9191 ಅಂತಾ ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾದಿ ಕೆಳಗೆ ಬಿದ್ದು ತಲೆಗೆ ಮತ್ತು ಕಪಾಳಕ್ಕೆ ರಕ್ತಗಾಯ ಮತ್ತು ಹಸ್ತದ ಮಣಿಕಟ್ಟಿಗೆಎಡಗೈ ಭುಜಕ್ಕೆಎಡಗಡೆ ಪಕ್ಕೆಗೆ ಗುಪ್ತ ಮತ್ತು ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜ್ಯೋತಿ ಗಂಡ ರಮೇಶ ಮುನ್ನಳ್ಳಿ ಸಾ|| ಕೈಲಾಸ ನಗರ ಇವರು ದಿನಾಂಕ 17-10-2013 ರಂದು ಸಾಯಂಕಾಲ 5.00 ಗಂಟೆಗೆ ತನ್ನ ಗಂಡ ರಮೇಶ ಇವರು ತುಳಜಾಪೂರಕ್ಕೆ ಹೊಗಿದ್ದರಿಂದ ತಾನು 6.00 ಗಂಟೆಗೆ ಮನೆ ಕಿಲಿ ಹಾಕಿಕೊಂಡು ಶಹಬಜಾರದಲ್ಲಿರುವ ತನ್ನ ತಾಯಿಯ ಮನೆಗೆ ಹೊಗಿದ್ದು ದಿನಾಂಕ 18-10-2013 ರಂದು ಬೆಳಿಗ್ಗೆ 9.30 ಗಂಟೆಗೆ ಬಂದು ನೋಡಲಾಗಿ ಮನೆಯ ಬಿಗ ತೆಗೆದಿದ್ದು ಸೂಟ್‌ಕೆಸನಲ್ಲಿದ್ದ 1] 6 ಗ್ರಾಂ ಬಂಗಾರದ ಉಂಗುರ ಅಕಿ 15000/- 2] 4 ಗ್ರಾಂ ಬಂಗಾರದ ಒಂದು ಜೋತೆ ಕಿವಿಯೋಲೆ ಅ.ಕಿ 11000 ಮತ್ತು 3] 3 ಗ್ರಾಂ ಬಂಗಾರದ ಸಣ್ಣ ಗುಂಡುಗಳನ್ನು  ದಿನಾಂಕ 17-10-2013 ರಂದು ರಾತ್ರಿ ಯಾರೋ ಅಪರಿಚಿತ ಕಳ್ಳರು ಕಳುವುಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.