POLICE BHAVAN KALABURAGI

POLICE BHAVAN KALABURAGI

10 July 2013

GULBARGA DIST REPORTED CRIMES

ಮಟಕಾ ಪ್ರಕರಣ:
 ರೋಜಾ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ:09/07/2013 ರಂದು ಶ್ರೀ ನಿಂಗಪ್ಪಾ ಪೂಜೇರಿ ಪಿಎಸ್ಐ[ಅ.ವಿ] ರೋಜಾ ಠಾಣೆ ರವರು ಖಚಿತ ಮಾಹಿತಿ ಮೇರೆಗೆ ಕಾಲಾಹುಡಾ ಮೇಸ್ತ್ರಿ ಹೋಟೆಲ ಹತ್ತಿರದಲ್ಲಿ ಸಾರ್ವಜನಿಕರಿಂದ ತನ್ನ ಲಾಭಕ್ಕಾಗಿ ಹಣ ಪಡೆದುಕೊಂಡು 1 ರೂಪಾಯಿಗೆ 80ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಪಿಸಿ-645 ಮದರಸಾಬ, ಪಿಸಿ-248 ವೈಜನಾಥ, ಹಾಗೂ ಪಂಚರಾದ 1} ಸಂಜು @ ಸಂಜೀವಕುಮಾರ ತಂದೆ ಅರ್ಜುನ ರಾವ ಆಕಾಶ ಕೋರೆ ಸಾ: ರೋಜಾ [ಬಿ] ಗುಲಬರ್ಗಾ 2} ರಾಜೇಂದ್ರ ತಂದೆ ತುಳಸಿರಾಮ ಬೋಳೆ ಸಾ: ರೋಜಾ [ಬಿ] ಗುಲಬರ್ಗಾ ರವರೊಂದಿಗೆ ಕಾಲಾಹೂಡಾ ಹತ್ತಿರ ಬರುವ ಮೇಸ್ರತಿ ಹೋಟೆಲ ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಿಯಾಕೂ 80 ರೂಪಿಯಾ ದೇತಾಹೂ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ನಾವೆಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಉ: ಆಟೋ ಡ್ರೈವರ ಸಾ: ಮಂಗಲಗಿ ಗ್ರಾಮ ಹಾ||ವಾ||  ಮಿಲ್ಲತ ನಗರ ಗುಲಬರ್ಗಾ ಅಂತಾ ಹೇಳಿದ್ದು ಆತನಿಂದ  ನಗದು ಹಣ 2350/-ರೂಪಾಯಿಗಳು ಅಲ್ಲದೇ 2 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲಪೆನ್ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲನ್ನು ಪಂಚರ ಸಮಕ್ಷಮ ಆರೋಪಿತನಿಗೆ ದಸ್ತಗಿರಿ ಮಾಡಿ ಆರೋಪಿ ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಈತನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕಳ್ಳತನ ಪ್ರಕರಣ:
 ಅಶೋಕ ನಗರ ಪೋಲಿಸ್ ಠಾಣೆ:  ಶ್ರೀಮತಿ ಶಶಿಕಲಾ ಗಂಡ ಶಿವಶರಣಪ್ಪ ಬಂಡೇನೋರ ಸಾ: ಎನ್.ಜಿ. ಕಾಲೋನಿ ಗುಲಬರ್ಗಾ ರವರು ದಿನಾಂಕ: 25-26/03/2013 ರಂದು ರಾತ್ರಿ ವೇಳೆ ಮನೆಯ ಬಾಗಿಲು ಮುಂದೆ ಮಾಡಿ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿ ಮುಂಜಾನೆ 6:00 ಗಂಟೆಗೆ ಎದ್ದು ಮನೆಯ ಒಳಗೆ ಹೋಗಿ ನೋಡಿದಾಗ  ಅಲಮಾರಿ ತೆಗೆದಿದ್ದು ಬಟ್ಟೆ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಲಮಾರಿಯಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಟ್ಟಿದ್ದ ಬಂಗಾರದ ವಸ್ತುಗಳಾದ  1) ಒಂದು ಬಂಗಾರದ ತಾಳಿ ಚೈನ್  40 ಗ್ರಾಂ .ಕಿ. 1,00,000=00 ರೂ. 2) ಒಂದು ಬಂಗಾರದ ಜಿರಾಮಣಿ 10 ಗ್ರಾಂ .ಕಿ. 25,000=00 ರೂ. 3) ಒಂದು ಬಂಗಾರದಕರಿಮಣಿ ತಾಳಿ 10 ಗ್ರಾಂ .ಕಿ. 25,000=00 ರೂ. 4) ಒಂದು ಬಂಗಾರದ ಕರೆಳ್ಳಿ 10 ಗ್ರಾಂ .ಕಿ. 25,000=00 ರೂ. 5) ಒಂದು ಜೋತೆ ಕಿವಿಓಲೆ 10 ಗ್ರಾಂ .ಕಿ. 25,000=00 ರೂ. 6) ಬೆಳ್ಳಿಯ ಕಾಲ್ಚೈನ, ಊಡದಾರ 400 ಗ್ರಾಂ .ಕಿ. 20,000=00 ರೂ ಹೀಗೆ ಒಟ್ಟು 80 ಗ್ರಾಂ ಬಂಗಾರ ಮತ್ತು 400 ಗ್ರಾಂ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 2,20,000=00 ರೂ ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ಕೈಕೊಂಳ್ಳಲಾಗಿದೆ.

09 July 2013

Gulbarga Dist Reported Crimes

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ: ದಿನಾಂಕ: 08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಶ್ರೀ. ಜಯವಂತರೆಡ್ಡಿ  ತಂದೆ ಮಾಣಿಕರೆಡ್ಡಿ ಯನಗಲ : 40 ವರ್ಷ ಜಾ: ರೆಡ್ಡಿ :ಒಕ್ಕಲುತನ  ಸಾ: ಮುಸ್ತಾರಿವಾಡಿ ತಾ:ಹುಮನಾಬಾದ  ಜಿ: ಬೀದರ  ಮತ್ತು ಜಗನ್ನಾಥರೆಡ್ಡಿ ತಂದೆ ವೀರಾರೆಡ್ಡಿ : 45 ವರ್ಷ ಸಾ; ಚರಕಪಲ್ಲಿ ತಾ: ಜಹಿರಾಬಾದ ಜಿ: ಮೇದಕ (ಎ.ಪಿ) ರವರು ಹುಮನಾಬಾದ- ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ಕಮಲಾಪೂರ ಅಂಬೇಡ್ಕರ್ ಕಾಲೂನಿಯ ಹತ್ತಿರದ ದಾಬಾಕ್ಕೆ ಹೋಗುವ ಕುರಿತು  ಜಗನ್ನಾಥ ರೆಡ್ಡಿಯ ಮೋಟರ್ ಸೈಕಲ ನಂ: ಕೆಎ-39- ಹೆಚ್ - 3834 ನೇದ್ದರ ಮೇಲೆ ಕುಳಿತುಕೊಂಡು ಹೋಗುತ್ತಿದ್ದಾಗ ಇಸ್ಮಾಯಿಲ್ ದಾಬಾದ ಹತ್ತಿರ  ಗುಲಬರ್ಗಾ ಕಡೆಯಿಂದ  ಹಣಮಂತ ತಂದೆ ಸೋಮಶೇಖರ ಪಾಟೀಲ್  ಸಾ; ನವನಿಹಾಳ  ಈತನು ತನ್ನ ಮೋಟರ್ ಸೈಕಲ್ ನಂಬರ್ ಕೆಎ-32-ವಿ-2934 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಗನ್ನಾಥರೆಡ್ಡಿಯ ಮೋಟರ್ ಸೈಕಲಗೆ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಜಗನ್ನಾಥರೆಡ್ಡಿಯ ತೆಲೆಯ ಹಿಂದುಗಡೆ ರಕ್ತಗಾಯವಾಗಿ  ಎಡಕಿವಿಯಿಂದ ರಕ್ತ ಬರುತ್ತಿರುವದನ್ನು ಕಂಡು ಜಯವಂತರೆಡ್ಡಿ ಚಿರಾಡುತ್ತಿದ್ದಾಗ ಅಪಘಾತ ಪಡಿಸಿದ ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಪಘಾತವು ದಿನಾಂಕ:08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಜರುಗಿದ್ದು. ನಂತರ ಯಾರೋ 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ ಜಗನ್ನಾಥರೆಡ್ಡಿಯನ್ನು ಅಂಬುಲೇನ್ಸದಲ್ಲಿ ಕರೆದುಕೊಂಡು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಜಗನ್ನಾಥರೆಡ್ಡಿಯನ್ನು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಆಸ್ಪತ್ರೆಗೆ ಕರೆದುಕೊಂಡು ರಾತ್ರಿ  11-30 ಗಂಟೆ ಸುಮಾರಿಗೆ ಜಹಿರಾಬಾದ ಸಮೀಪ ಮಾರ್ಗಮಧ್ಯದಲ್ಲಿಯೇ ಜಗನ್ನಾಥರೆಡ್ಡಿ  ಮೃತಪಟ್ಟ ಬಗ್ಗೆ ಶ್ರೀ. ಜಯವಂತರೆಡ್ಡಿ  ತಂದೆ ಮಾಣಿಕರೆಡ್ಡಿ ಯನಗಲ ರವರು ಫಿರ್ಯಾದಿಯ ಹೇಳಿಕೆ ಸಲ್ಲಿಸಿದ್ದು ಫಿರ್ಯಾದಿಯ ಮೇಲಿಂದ ಕಮಲಪೂರ ಪೊಲೀಸ್ ಠಾಣೆಯಲ್ಲಿ ಕಲಂ 279. 304 [ಎ] ಐಪಿಸಿ ಸಂಗಡ  187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

08 July 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ನಾನು ದಿನಾಂಕ:25-06-2013 ರಂದು 7 ಪಿಎಮ್ ದಿಂದ ಸಂತೋಷ ಕಾಲೋನಿಯ ಉದನೂರ ರಸ್ತೆಗೆ ಇರುವ ಶಾಂಗ್ರಿಲಾ ಅಪಾರ್ಟಮೆಂಟ್ಸ ಪಕ್ಕದ ಬಿಲ್ಡಿಂಗನಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಮಾಡುತ್ತಿದ್ದೇ ರಾತ್ರಿ ದಿನಾಂಕ :26-06-2013 ರಂದು ರಾತ್ರಿ 3-00  ಗಂಟೆ ಸುಮಾರಿಗೆ 4 ಜನ ಕಳ್ಳರು ಮುಖದ ಮೇಲೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಚೂಪಾದ ರಾಡ ಹಿಡಿದುಕೊಂಡು  ಬಂದು ರಾಡಿನಿಂದ ಅಂಜಿಸಿ ಹಿಂದಿ ಬಾಷೆಯಲ್ಲಿ  ಬೇದರಿಸಿ  ನನ್ನ ಕೈಗಳನ್ನು ಹಿಡಿದುಕೊಂಡು ಅಲ್ಲೇ ನನ್ನ ಹಾಸಿಗೆ ಹತ್ತಿರ ಇದ್ದ ಬಟ್ಟೆಯಿಂದ ಬಲಗೈ ಮತ್ತು ಕಾಲನ್ನು ಕಟ್ಟಿ ಬಾಯಿಯಲ್ಲಿ ಬಟ್ಟೆ ತುರುಕಿ ನನ್ನ ಜೇಬಿನಲ್ಲಿದ್ದ  150 ರೂಪಾಯಿ ಮತ್ತು  ಒಂದು ನೊಕೀಯಾ ಮೊಬಾಯಲ ಸಿಮ ಕಸಿದುಕೊಂಡು ಅದರಲ್ಲಿ ಒಬ್ಬನು ನನ್ನ ಹತ್ತಿರ ಕಾಯತ್ತಾ ನಿಂತಿದ್ದು 3 ಜನರು ಅಪಾರ್ಟಮೆಂಟ ಒಳಗೆಡೆ ಹೋಗಿ ಚಾವಿ ಹಾಕಿದ ಮನೆಗಳ ಬೀಗಗಳನ್ನು ಮುರಿದು ಕಳ್ಳತನ ಮಾಡಲು ಯತ್ನಿಸಿರುತ್ತಾರೆ.  ಅಷ್ಟರಲ್ಲಿ ಅವಿನಾಶ ಕಕ್ಕೇರಿ ಸರ್ ರವರು ಕಳ್ಳರು ಕಳ್ಳರು  ಅಂತಾ ಚಿರಾಡಲಿಕ್ಕೆ ಹತ್ತಿದ್ದಾಗ ಆ 4 ಜನರು ಓಡಿ ಹೋಗಿರುತ್ತಾರೆ ಅಂತಾ ಶ್ರೀ  ಮ್ಯಾಥ್ಯೂವ @ ಮಲ್ಲಿಕಾರ್ಜುನ ತಂದೆ ದಿ:ಪ್ರಕಾಶ ಯಾದಗೀರ ವ-23 ವರ್ಷ ಉ-ಸೆಕ್ಯೂರಿಟಿ ಗಾರ್ಡ ವರ್ಗಿಸ್ಸ ಅಪಾರ್ಟಮೆಂಟ ಸಾ:ಅಂಬೇಡ್ಕರ ಚೌಕ ಹತ್ತಿರ ಯಾದಗೀರ ಹಾ:ವ: ಪ್ಲಾಟ ನಂ 9 ಸಿದ್ದೇಶ್ವರ ಕಾಲೋನಿ  ವಿಶ್ವವಿದ್ಯಾಲಯ ಗೇಟ ಎದುರುಗಡೆ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:104/2013 ಕಲಂ, 392, 457, 380, 511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗಂಡನ ಕಿರುಕುಳದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ:
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಬಂಗಾರಿ ಗಂಡ ಕಲ್ಯಾಣಿ ಪೂಜಾರಿ ಸಾ;ಕಲ್ಲಹಂಗರಗಾ ತಾ;ಜಿ;ಗುಲಬರ್ಗಾ ರವರು ರವರು ನನ್ನ ಮದುವೆಯಾದ ಮೇ 2013 ನೇ ಸಾಲೀನಲ್ಲಿ ಕಲ್ಲಹಂಗರಗಾ ಗ್ರಾಮದ  ಕಲ್ಯಾಣಿ ತಂದೆ ನಾಗಣ್ಣಾ ಪೂಜಾರಿ ಇತನೊಂದಿಗೆ ಮೇ 2013 ರಂದು ನೇರವೆರಿದ್ದು, ಮದುವೆಯ ನಂತರ ನನ್ನ ಗಂಡ ಕಲ್ಯಾಣಿ ಇತನು  ಸಣ್ಣ ಪುಟ್ಟ ಕಾರಣಗಳಿಗೆ ಕಿಟಲೆ ಮಾಡುವದು ಮತ್ತು ಕರೆದಾಗ ಬೇಗನೆ ಹೋಗದಿದ್ದಕ್ಕೆ  ಬೈಯುವದು  ಹೊಡೆಬಡಿ ಮಾಡುತ್ತಿದ್ದನು. ದಿನಾಂಕ:05-07-2013 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಮನೆಯಲ್ಲಿ ಎಲ್ಲರೂ ಊಟ ಮಾಡಿದ ನಂತರ ನನ್ನ ಗಂಡ  ನನಗೆ ಬೇಗನೆ ಬಾ ಅಂತಾ ಕರೆದನು ಆಗ ನಾನು ಬೇಗನ ಹೋಗಲಿಲ್ಲಾ ತಡಮಾಡಿ ಹೋದೇನು. ಆಗ ನನ್ನ ಗಂಡ ನಾನು ಬಾ ಅಂದಾಗ ಬರುವದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ  ಕೈಯಿಂದ ನನ್ನ ಕಪಾಳ ಮೇಲೆ ಹೋಡೆದನು , ದಿನಾಂಕ:6-7-2013 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ,ರಾತ್ರಿ ನನ್ನ ಗಂಡ ಕಲ್ಯಾಣಿ ಇತನು ನನಗೆ ಬೈಯ್ದು ಹೊಡೆದಿದ್ದು ಅದನ್ನೆ ಮನಸಿನ ಮೇಲೆ ಬೇಜಾರು ಮಾಡಿಕೊಂಡು ಅಡುಗೆ ಮನೆಯಲ್ಲಿದ್ದ ಸೀಮೆ ಎಣ್ಣಿ ಮೈ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ನಾನು ಚೀರಾಡುವದನ್ನು ನೋಡಿ ನನ್ನ ನೆಗೆಣಿ , ಗಂಡ ಮತ್ತು ಭಾವ ಹಾಗೂ ಮಾವನವರು ಬಂದು ಬೆಂಕಿ ಆರಿಸಿದರು, ಇದರಿಂದ ನನ್ನ ಮೈ ಪೂರ್ತಿ ಸುಟ್ಟಿರುತ್ತದೆ. ಕಾರಣ ಸದರಿ ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:335/2013 ಕಲಂ.498 (ಎ),323,504, 306 ,511 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ನಂತರ ದಿನಾಂಕ:07-07-2013 ರಂದು 3-00 ಪಿ.ಎಂ.ಕ್ಕೆ  ಅವಳ ತಂದೆಯಾದ ಲಕ್ಷ್ಮಣ ತಂದೆ ಶಿವರಾಯ ಮಳಗಿ ಪೂಜಾರಿ ಸಾ;ತಡಕಲ ತಾ;ಆಳಂದ ಜಿ;ಗುಲಬರ್ಗಾ ರವರು ನನ್ನ ಮಗಳು ಉಪಚಾರ ಫಲಕಾರಿಯಾಗದೆ ದಿನಾಂಕ:07-07-2013 ರಂದು 1-40 ಪಿ.ಎಂಕ್ಕೆ ಮೃತ ಪಟ್ಟಿರುತ್ತಾಳೆ  ಅಂತಾ ಹೇಳಿಕೆ ಸಾರಂಶದ ಮೇಲಿಂದ ಪ್ರಕರಣದಲ್ಲಿ ಕಲಂ. 306  ಐಪಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.