POLICE BHAVAN KALABURAGI

POLICE BHAVAN KALABURAGI

09 July 2013

Gulbarga Dist Reported Crimes

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ: ದಿನಾಂಕ: 08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಶ್ರೀ. ಜಯವಂತರೆಡ್ಡಿ  ತಂದೆ ಮಾಣಿಕರೆಡ್ಡಿ ಯನಗಲ : 40 ವರ್ಷ ಜಾ: ರೆಡ್ಡಿ :ಒಕ್ಕಲುತನ  ಸಾ: ಮುಸ್ತಾರಿವಾಡಿ ತಾ:ಹುಮನಾಬಾದ  ಜಿ: ಬೀದರ  ಮತ್ತು ಜಗನ್ನಾಥರೆಡ್ಡಿ ತಂದೆ ವೀರಾರೆಡ್ಡಿ : 45 ವರ್ಷ ಸಾ; ಚರಕಪಲ್ಲಿ ತಾ: ಜಹಿರಾಬಾದ ಜಿ: ಮೇದಕ (ಎ.ಪಿ) ರವರು ಹುಮನಾಬಾದ- ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ಕಮಲಾಪೂರ ಅಂಬೇಡ್ಕರ್ ಕಾಲೂನಿಯ ಹತ್ತಿರದ ದಾಬಾಕ್ಕೆ ಹೋಗುವ ಕುರಿತು  ಜಗನ್ನಾಥ ರೆಡ್ಡಿಯ ಮೋಟರ್ ಸೈಕಲ ನಂ: ಕೆಎ-39- ಹೆಚ್ - 3834 ನೇದ್ದರ ಮೇಲೆ ಕುಳಿತುಕೊಂಡು ಹೋಗುತ್ತಿದ್ದಾಗ ಇಸ್ಮಾಯಿಲ್ ದಾಬಾದ ಹತ್ತಿರ  ಗುಲಬರ್ಗಾ ಕಡೆಯಿಂದ  ಹಣಮಂತ ತಂದೆ ಸೋಮಶೇಖರ ಪಾಟೀಲ್  ಸಾ; ನವನಿಹಾಳ  ಈತನು ತನ್ನ ಮೋಟರ್ ಸೈಕಲ್ ನಂಬರ್ ಕೆಎ-32-ವಿ-2934 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಗನ್ನಾಥರೆಡ್ಡಿಯ ಮೋಟರ್ ಸೈಕಲಗೆ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಜಗನ್ನಾಥರೆಡ್ಡಿಯ ತೆಲೆಯ ಹಿಂದುಗಡೆ ರಕ್ತಗಾಯವಾಗಿ  ಎಡಕಿವಿಯಿಂದ ರಕ್ತ ಬರುತ್ತಿರುವದನ್ನು ಕಂಡು ಜಯವಂತರೆಡ್ಡಿ ಚಿರಾಡುತ್ತಿದ್ದಾಗ ಅಪಘಾತ ಪಡಿಸಿದ ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಪಘಾತವು ದಿನಾಂಕ:08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಜರುಗಿದ್ದು. ನಂತರ ಯಾರೋ 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ ಜಗನ್ನಾಥರೆಡ್ಡಿಯನ್ನು ಅಂಬುಲೇನ್ಸದಲ್ಲಿ ಕರೆದುಕೊಂಡು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಜಗನ್ನಾಥರೆಡ್ಡಿಯನ್ನು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಆಸ್ಪತ್ರೆಗೆ ಕರೆದುಕೊಂಡು ರಾತ್ರಿ  11-30 ಗಂಟೆ ಸುಮಾರಿಗೆ ಜಹಿರಾಬಾದ ಸಮೀಪ ಮಾರ್ಗಮಧ್ಯದಲ್ಲಿಯೇ ಜಗನ್ನಾಥರೆಡ್ಡಿ  ಮೃತಪಟ್ಟ ಬಗ್ಗೆ ಶ್ರೀ. ಜಯವಂತರೆಡ್ಡಿ  ತಂದೆ ಮಾಣಿಕರೆಡ್ಡಿ ಯನಗಲ ರವರು ಫಿರ್ಯಾದಿಯ ಹೇಳಿಕೆ ಸಲ್ಲಿಸಿದ್ದು ಫಿರ್ಯಾದಿಯ ಮೇಲಿಂದ ಕಮಲಪೂರ ಪೊಲೀಸ್ ಠಾಣೆಯಲ್ಲಿ ಕಲಂ 279. 304 [ಎ] ಐಪಿಸಿ ಸಂಗಡ  187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

No comments: