POLICE BHAVAN KALABURAGI

POLICE BHAVAN KALABURAGI

29 June 2013

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪಾರ್ವತಿ ಗಂಡ ಬಸವರಾಜ ಜಮಾದಾರ ವಯಾ:35 ವರ್ಷ ಸಾ:ಸಿದ್ದಾರೂಡ ಕಾಲೋನಿ ಕಪನೂರ ತಾ:ಜಿ:ಗುಲಬರ್ಗಾ ರವರು ನಾನು ಬಸವರಾಜ ಇತನೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, 4 ವರ್ಷಗಳಿಂದ ನಂತರ ಮನೆಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ದೈಹಿಕವಾಗಿ ಮತ್ತು ಮಾನಸಿಕ ವಾಗಿ ಹಿಂಸೆ ಕೊಟ್ಟು ಹೊಡೇ ಬಡೇ ಮಾಡಲು ಆರಂಬಿಸಿದನು. ನನ್ನ ಗಂಡನ ಕಿರುಕುಳ ತಾಳದೇ ನನ್ನ ತವರು ಮನೆಯಾದ ಮಾಡಗಿ ಗ್ರಾಮಕ್ಕೆ ಮಕ್ಕಳೊಂದಿಗೆ ಹೋಗಿರುತ್ತೆನೆ. 2-3 ದಿವಸಗಳ ನಂತರ ನನ್ನ ಗಂಡ ನನ್ನ ತವರು ಮನೆಗೆ ಬಂದು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಒಪ್ಪಿಕೊಂಡು ಮರಳಿ ಕರೆದುಕೊಂಡು ಹೋಗಿ ಮತ್ತೆ ಮೊದಲಿನಂತೆ ತೊಂದರೇ ಕೊಡಲು ಪ್ರಾರಂಬಿಸಿದ,ದಿನಾಂಕ:-28/06/2013 ರಂದು ಬೆಳ್ಳಿಗೆ 8:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗ ನನ್ನ ಗಂಡ ಬಸವರಾಜ ಇತನು ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:324/2013 ಕಲಂ. 324/2013 ಕಲಂ 498 (ಎ) 323 504 506 ಐ.ಪಿ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಾಣೆಯಾದ ಬಗ್ಗೆ: :
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:19-6-2013 ರಂದು ಮುಂಜಾನೆ ನಾನು  ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ನನ್ನ ಮಗಳು ಸಿದ್ದಮ್ಮಾ ಮತ್ತು ನನ್ನ ತಾಯಿ ಪ್ರೇಮಲಾಬಾಯಿ ನನ್ನ ಮಕ್ಕಳಾದ  ವೀರೇಶ , ಅಂಬರೀಷ , ಹಾಗೂ  ಗೋಧಾವರಿ ಎಲ್ಲರೂ ಮನೆಯಲ್ಲಿದ್ದರೂ . ಸಾಯಂಕಾಲ 6-00 ಗಂಟೆಗೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನನ್ನ ತಾಯಿಯು ಮಧ್ಯಾಹ್ನ 4-00 ಗಂಟೆಯ ಸುಮಾರಿಗೆ  ಪಕ್ಕದ ಮನೆಗೆ  ಟಿ.ವಿ.ನೋಡಲು ಹೋಗಿ ಬರುತ್ತೇನೆ ಅಂತಾ  ಮನೆಯಿಂದ ಹೋದಳು ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದಳು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಅಂತಾ ಶ್ರೀಮತಿ ಜಗದೇವಿ ಗಂಡ  ನಾಗಯ್ಯಾ ದಿಂಡೆನವರ  ಸಾ||  ಕೆರೂರ  ತಾ||ಜಿ||ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:325/2013 ಕಲಂ, ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:28-06-2013 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಕಲ್ಲಹಂಗರಗಾ ಗ್ರಾಮದ ರಂಗ ಮಂದಿರ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಹೋಗು-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಸಿದ್ಧಲಿಂಗ ತಂದೆ ಅಣ್ಣಾರಾಯ ಹಡಪದ ಸಾ:ಕಲ್ಲಹಂಗರಗಾ ತಾ: ಜಿ: ಗುಲಬರ್ಗಾ ಇತನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1515 ರೂ. ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:326/2013 ಕಲಂ, 78 (3) ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ:ದಿನಾಂಕ 28-06-2013 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ರಾಧಾಬಾಯಿ ತಮ್ಮ ಸುದೇಶ ತಿವಾರಿ ಎಲ್ಲರೂ ಹೊಲ ಸರ್ವೆ ನಂ. 25/2-1 ರಲ್ಲಿ  7 ಎಕರೆ  13 ಗುಂಟೆ ರಲ್ಲಿ ಬಿತ್ತನೆ ಮಾಡಬೇಕೆಂದು ಹೊಲಕ್ಕೆ ಹೋದಾಗ ಮಾಹಾದೇವಪ್ಪ ತಂದೆ ರೇವಣಸಿದ್ಧಪ್ಪ ವಠಾರ ಆತನ ಮಗ ಪ್ರಕಾಶ ಹಾಗೂ ಅವನ ಇಬ್ಬರು ಹೆಣ್ಣು ಮಕ್ಕಳು ಕೂಡಿಕೊಂಡು ನನ್ನ ತಾಯಿ, ತಮ್ಮನಿಗೆ ಅವಾಚ್ಯವಾಗಿ ಬೈದು ಇನ್ನೊಂದು ಸಲ ಈ ಹೊಲದಲ್ಲಿ  ಕಾಲು ಇಟ್ಟರೆ  ನೋಡು ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ ಅನುರಾಧ ಗಂಡ ಶಂಕರಸಿಂಗ ಠಾಕೂರ ಸಾ: ಜಿಡಿಎ ಕಾಲೋನಿ ಗೋಕುಲ ನಗರ ಶಹಾಬಜಾರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 327/13 ಕಲಂ 447 504 506 (2) ಸಂಗಡ 34 ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

28 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ :ಶ್ರೀಮತಿ ಶಹಿದಾ ಬೇಗಂ ಗಂಡ ದಿ. ಸೈಯ್ಯದ ಗೌಸ್, ಸಾಃ ಸಂತ್ರಾಸವಾಡಿ ಗುಲಬರ್ಗಾ ರವರು ನಾನು ದಿನಾಂಕ:27-06-2013 ರಂದು 7-30 ಪಿ.ಎಮ್ ಕ್ಕೆ ಡಂಕಾ ಕ್ರಾಸ್ ಹತ್ತಿರ ಅಟೋರಿಕ್ಷಾ ನಂ. ಕೆಎ-32 ಬಿ-3099 ನೇದ್ದನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಬರುತ್ತಿದ್ದ ಒಂದು ಅಟೋರಿಕ್ಷಾಕ್ಕೆ ಒಮ್ಮೆಲೆ ಕಟ್ ಹೊಡೆದು ಮಹ್ಮದ ಅಕ್ತರಖಾನ  ಇತನು ಅಟೋ ರಿಕ್ಷಾ ಪಲ್ಟಿ ಮಾಡಿದ್ದರಿಂದ ಒಳಗೆ ಕುಳಿತು ಪ್ರಯಾಣಿಸುತ್ತಿದ್ದ ನನಗೆ ಬಲಗಾಲು ಮೊಳಕಾಲಿಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಶ್ರೀಮತಿ ಶಹಿದಾ ಬೇಗಂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ.39/2013 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಾಚಾರ ಪ್ರಕರಣ:
ಸೇಡಂ ಪೊಲೀಸ ಠಾಣೆ: ನಮ್ಮ ಮನೆಯ ಪಕ್ಕದಲ್ಲಿ ಸ್ಯಾಮುವೆಲ್ ಎಂಬುವವರು ವಾಸವಿದ್ದು, ಆತನಿಗೆ ಇಬ್ಬರ ಹೆಂಡತಿಯರು ಹಾಗೂ ಮಕ್ಕಳಿರುತ್ತಾರೆ. ಆರು ತಿಂಗಳ ಹಿಂದೆ ಕ್ರಿಸ್-ಮಸ್ ಹಬ್ಬಕ್ಕಿಂತ 2-3 ದಿವಸದ ಮುಂಚೆ, ಸ್ಯಾಮುವೆಲ್ ಇವರ ಮನೆಯಲ್ಲಿ ಕ್ರಿಸ್-ಮಸ್ ಹಬ್ಬದ ತಯಾರಿ ನಡೆದಿತ್ತು.  ಅದನ್ನು ನೋಡಲು ಅವರ ಮನೆಗೆ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಹೋದಾಗ ಸ್ಯಾಮುವೆಲ್ ಮನೆಯಲ್ಲಿ ಒಬ್ಬನೆ ಇದ್ದನು. ನನ್ನನ್ನು ನೋಡಿ ಟಿ.ವಿ ನೋಡುಬಾ ಅಂತ ಕರೆದು ನಾನು ಟ.ವಿ ನೋಡುತ್ತಿರುವಾಗ ಹಿಂದಿನಿಂದ ಬಂದು ನನಗೆ ಎತ್ತಿಕೊಂಡು ಬಾಯಿ ಒತ್ತಿ ಹಿಡಿದು ಜಬರಿ ಸಂಭೋಗ ಮಾಡಿರುತ್ತಾನೆ. ನಾನು ಅಳುತ್ತಿರುವಾಗ ನನಗೆ ಸಮಾಧಾನ ಮಾಡಿ ನಮ್ಮ ಮನೆಗೆ ಕಳುಹಿಸಿದ್ದನು. 6 ತಿಂಗಳ ಕಳೆದ ನಂತರ ನನ್ನ ತಾಯಿ ನನ್ನ ಹೊಟ್ಟೆ ಬೆಳೆಯುತ್ತಿದ್ದುದ್ದು ಕಂಡು ನನಗೆ ಹೊಡೆ-ಬಡೆ ಮಾಡಿ ಬೆದರಿಸಿ ಕೇಳಿದಾಗ ಮೇಲಿನ ಸಂಗತಿ ಹೇಳಿರುತ್ತೇನೆ. ನನಗೆ ಜಬರಿ ಸಂಭೋಗ ಮಾಡಿದ ಸ್ಯಾಮುವೆಲ್ ತಂದೆ ಡೇನಿಯಲ್ ಸಂಜೀವನವರ ಜಾ:ಕ್ರಿಶ್ಚಿಯನ್ ಸಾ:ಬೆನಕನಳ್ಳಿ ಹಾ.ವ:ಇಂದಿರಾ ನಗರ ಸೇಡಂ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ನೊಂದ ಹುಡಗಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-158/2013 ಕಲಂ-376 ಐಪಿಸಿ ಸಂಗಡ 3(1) (XII) SC/ST P.A Act 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ನೆಲೋಗಿ ಪೊಲೀಸ್ ಠಾಣೆ:ಶ್ರೀಶೈಲ್ ಹಾಗೂ ಶಿವಪ್ಪ ಮುರಡಿ ಇಬ್ಬರೂ ಕೂಡಿಕೊಂಡು ಘತ್ತರಗಿ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಮೋಟಾರ್ ಸೈಕಲ್ ಮೇಲೆ ಹೋದರು, ಘತ್ತರಗಿಗೆ ಹೋಗಿ ಬರುವಾಗ ಮಂದೇವಾಲ ಕೇನಾಲ್ ದ ಹತ್ತೀರ ಮಡಿವಾಳಪ್ಪ ಗಾಣಿಗೇರ ಇವರ ಹೊಲದ ಬಾಜು ಇರುವ ರಾಷ್ಟ್ರೀಯ ಹೇದ್ದಾರಿ 218 ರ ಮೇಲೆ ಶ್ರೀಶೈಲ್ ಅಪಘಾತದಿಂದ ಮೃತ ಪಟ್ಟಿರುತ್ತಾನೆ. ಅವನ ಸಂಗಡ ಇದ್ದ ಶಿವಪ್ಪನಿಗೂ ಯಾರೋ ಜೀಪಿನಲ್ಲಿ ಹಾಕಿ ಮಂದೇವಾಲ ಆಸ್ಪತ್ರೆಗೆ ಕಳುಸಿರುತ್ತಾರೆ ಅಂತಾ ಹೇಳಿದ್ದರಿಂದ ನಾವು ನಮ್ಮೂರಿನಿಂದ ಮಂದೇವಾಲ ಕೇನಾಲ್ ಹತ್ತಿರ ಬಂದು ನೋಡಲು  ನನ್ನ ಮಗ ರೋಡಿನ ಹತ್ತಿರ ಮೃತ ಪಟ್ಟಿದ್ದನು. ಎದುರಿನಿಂದ ಲಾರಿ ಚಾಲಕನು ಅತೀವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ತಲೆಗೆ, ಕಾಲಿಗೆ ಕೈಗೆ ಭಾರಿ ಪೆಟ್ಟಾಗಿ ಮೃತ ಪಟ್ಟಿರುತ್ತಾನೆ ಅವನ ಹಿಂದೆ ಕುಳಿತ ಶಿವಪ್ಪನಿಗೂ ಕಾಲಿಗೆ ಗಾಯಗಳಾಗಿರುತ್ತವೆ, ಅಪಘಾತಪಡಿಸಿದ ಲಾರಿಯನ್ನು ಪತ್ತೆ ಮಾಡಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಭೀಮರಾಯ ತಂದೆ  ಮಲ್ಕಪ್ಪ ಯಳಸಂಗಿ ಸಾ:ವಸ್ತಾರಿ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2013 ಕಲಂ 279,337, 304(J).ಐಪಿಸಿ ಸಂಗಡ 187 ಐ.ಎಮ್.ವ್ಹಿ.ಆಕ್ಟ  ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.      

GULBARGA DISTRICT

:: ಗುಲಬರ್ಗಾ ನಗರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಚಾರಣೆ ಆಚರಣೆ ಮಾಡಿದ ಬಗ್ಗೆ:
ಗುಲಬರ್ಗಾ ನಗರದ ಸಂಚಾರಿ ಮತ್ತು ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆಯ ವತಿಯಿಂದ ದಿನಾಂಕ:26-06-2013 ರಂದು ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನವನ್ನಾಗಿ ಆಚರಿಸಿದ್ದು ಈ ದಿನದ ಅಂಗವಾಗಿ ಸಂಚಾರಿಪೊಲೀಸಠಾಣೆಯಲ್ಲಿಸಾರ್ವಜನಿಕರನ್ನುಬರಮಾಡಿಕೊಂಡು ತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಸಭೆ ಕೈಕೊಂಡಿದ್ದು, ಸಭೆಯಲ್ಲಿ ಸಾರ್ವಜನಿಕರಿಗೆ ಮಾದಕ ದ್ರವ್ಯ ಸೇವನೆಯಿಂದ ಆಗುವ ತೊಂದರೆಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಲಾಯಿತು. ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮಾದಕ ದ್ರವ್ಯ ಸೇವನೆಯಿಂದ ಆಗಬಹುದಾದ ತೊಂದರೆ ಮತ್ತು ದುಷ್ಪರಿಣಾಮಗಳ ಬಗ್ಗೆ ಬಿತ್ತಿ ಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.