ವರದಕ್ಷಿಣೆ ಕಿರುಕುಳ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪಾರ್ವತಿ ಗಂಡ ಬಸವರಾಜ ಜಮಾದಾರ ವಯಾ:35 ವರ್ಷ ಸಾ:ಸಿದ್ದಾರೂಡ ಕಾಲೋನಿ ಕಪನೂರ
ತಾ:ಜಿ:ಗುಲಬರ್ಗಾ ರವರು ನಾನು ಬಸವರಾಜ ಇತನೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, 4
ವರ್ಷಗಳಿಂದ ನಂತರ ಮನೆಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ದೈಹಿಕವಾಗಿ ಮತ್ತು ಮಾನಸಿಕ ವಾಗಿ
ಹಿಂಸೆ ಕೊಟ್ಟು ಹೊಡೇ ಬಡೇ ಮಾಡಲು ಆರಂಬಿಸಿದನು. ನನ್ನ ಗಂಡನ ಕಿರುಕುಳ ತಾಳದೇ ನನ್ನ ತವರು
ಮನೆಯಾದ ಮಾಡಗಿ ಗ್ರಾಮಕ್ಕೆ ಮಕ್ಕಳೊಂದಿಗೆ ಹೋಗಿರುತ್ತೆನೆ. 2-3 ದಿವಸಗಳ ನಂತರ ನನ್ನ ಗಂಡ ನನ್ನ
ತವರು ಮನೆಗೆ ಬಂದು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಒಪ್ಪಿಕೊಂಡು ಮರಳಿ ಕರೆದುಕೊಂಡು
ಹೋಗಿ ಮತ್ತೆ ಮೊದಲಿನಂತೆ ತೊಂದರೇ ಕೊಡಲು ಪ್ರಾರಂಬಿಸಿದ,ದಿನಾಂಕ:-28/06/2013 ರಂದು ಬೆಳ್ಳಿಗೆ 8:00
ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗ ನನ್ನ ಗಂಡ ಬಸವರಾಜ ಇತನು
ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:324/2013 ಕಲಂ. 324/2013 ಕಲಂ 498 (ಎ) 323 504 506
ಐ.ಪಿ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಬಗ್ಗೆ: :
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:19-6-2013 ರಂದು ಮುಂಜಾನೆ ನಾನು ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ನನ್ನ ಮಗಳು
ಸಿದ್ದಮ್ಮಾ ಮತ್ತು ನನ್ನ ತಾಯಿ ಪ್ರೇಮಲಾಬಾಯಿ ನನ್ನ ಮಕ್ಕಳಾದ ವೀರೇಶ , ಅಂಬರೀಷ
, ಹಾಗೂ
ಗೋಧಾವರಿ ಎಲ್ಲರೂ ಮನೆಯಲ್ಲಿದ್ದರೂ . ಸಾಯಂಕಾಲ 6-00 ಗಂಟೆಗೆ ನಾನು ಕೆಲಸ ಮುಗಿಸಿಕೊಂಡು
ಮನೆಗೆ ಬಂದಾಗ ನನ್ನ ತಾಯಿಯು ಮಧ್ಯಾಹ್ನ 4-00 ಗಂಟೆಯ ಸುಮಾರಿಗೆ ಪಕ್ಕದ ಮನೆಗೆ
ಟಿ.ವಿ.ನೋಡಲು ಹೋಗಿ ಬರುತ್ತೇನೆ ಅಂತಾ
ಮನೆಯಿಂದ ಹೋದಳು ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದಳು ಎಲ್ಲಾ ಕಡೆಗೂ ಹುಡುಕಾಡಿದರೂ
ಸಿಕ್ಕಿರುವದಿಲ್ಲಾ. ಅಂತಾ ಶ್ರೀಮತಿ ಜಗದೇವಿ ಗಂಡ ನಾಗಯ್ಯಾ
ದಿಂಡೆನವರ ಸಾ|| ಕೆರೂರ ತಾ||ಜಿ||ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:325/2013
ಕಲಂ, ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:
ದಿನಾಂಕ:28-06-2013
ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಕಲ್ಲಹಂಗರಗಾ
ಗ್ರಾಮದ ರಂಗ ಮಂದಿರ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಹೋಗು-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು
ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಸಿದ್ಧಲಿಂಗ ತಂದೆ ಅಣ್ಣಾರಾಯ
ಹಡಪದ ಸಾ:ಕಲ್ಲಹಂಗರಗಾ ತಾ: ಜಿ: ಗುಲಬರ್ಗಾ ಇತನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ
1515 ರೂ. ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:326/2013 ಕಲಂ, 78 (3)
ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ 28-06-2013 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ನಾನು
ಮತ್ತು ನಮ್ಮ ತಾಯಿ ರಾಧಾಬಾಯಿ ತಮ್ಮ ಸುದೇಶ ತಿವಾರಿ ಎಲ್ಲರೂ ಹೊಲ ಸರ್ವೆ ನಂ. 25/2-1
ರಲ್ಲಿ 7 ಎಕರೆ 13 ಗುಂಟೆ ರಲ್ಲಿ ಬಿತ್ತನೆ ಮಾಡಬೇಕೆಂದು ಹೊಲಕ್ಕೆ ಹೋದಾಗ
ಮಾಹಾದೇವಪ್ಪ ತಂದೆ ರೇವಣಸಿದ್ಧಪ್ಪ ವಠಾರ ಆತನ ಮಗ ಪ್ರಕಾಶ ಹಾಗೂ ಅವನ ಇಬ್ಬರು ಹೆಣ್ಣು ಮಕ್ಕಳು ಕೂಡಿಕೊಂಡು
ನನ್ನ ತಾಯಿ, ತಮ್ಮನಿಗೆ ಅವಾಚ್ಯವಾಗಿ ಬೈದು ಇನ್ನೊಂದು ಸಲ ಈ ಹೊಲದಲ್ಲಿ ಕಾಲು ಇಟ್ಟರೆ
ನೋಡು ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ ಅನುರಾಧ ಗಂಡ ಶಂಕರಸಿಂಗ
ಠಾಕೂರ ಸಾ: ಜಿಡಿಎ ಕಾಲೋನಿ ಗೋಕುಲ ನಗರ ಶಹಾಬಜಾರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ: 327/13 ಕಲಂ 447 504 506 (2) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡಿರುತ್ತಾರೆ.
No comments:
Post a Comment