POLICE BHAVAN KALABURAGI

POLICE BHAVAN KALABURAGI

10 June 2013

GULBARGA DISTRICT REPORTED CRIME

ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ:

ಸ್ಟೇಶನ ಬಜಾರ ಪೊಲೀಸ್ ಠಾಣೆ:ಶ್ರೀ ಬಲಬೀರ ಸಿಂಗ ತಂದೆ ಹರಿಸಿಂಗ ವಯ-25ವರ್ಷ ಉ-ಆರ್.ಪಿ.ಎಫ್. ಕಾನ್ಸಟೇಬಲ್ ನಂ:1000762 ಗುಲಬರ್ಗಾ ರವರು ನಾನು ದಿನಾಂಕ:08-06-2013  ರಂದು ಮಧ್ಯರಾತ್ರಿ 12-00 ಗಂಟೆಯಿಂದ ಮುಂಜಾನೆ 8-00 ಗಂಟೆಯವರೆಗೆ ಗುಲಬರ್ಗಾ ಆರ್.ಪಿ.ಎಫ್. ಠಾಣಾ ಪಹರೆ ಕರ್ತವ್ಯದಲ್ಲಿ ಇದ್ದಾಗ ಮಧ್ಯರಾತ್ರಿ 00-30 ಗಂಟೆಗೆ ಸೈಯದ ಮತ್ತು ಆತನ ಸಂಗಡ ಇನ್ನೊಬ್ಬ ವ್ಯಕ್ತಿ ಬಂದು ನಾನು ಆತಂಕವಾದಿ ಇದ್ದೇನೆ. ನಿನ್ನನ್ನು ಟಪಕಾಯಿಸಿ ಜೀವ ಸಹಿತ ಹೊಡೆದು ಹಾಕುತ್ತೇನೆ ಅಂತಾ ಜೀವದ ಬೆದರಿಕೆ ಹಾಕುತ್ತಾ ನನ್ನ ಸಮವಸ್ತ್ರವನ್ನು ಹಿಡಿದು ಜಗ್ಗಾಡುವಾಗ ನಮ್ಮ ಆರ್.ಪಿ.ಎಫ್. ಠಾಣಾ ಸಬ್ ಇನ್ಸಪೆಕ್ಟರಾದ ಶ್ರೀ ಎಮ್. ಶ್ರೀನಿವಾಸ ಹಾಗೂ ಗುಲಬರ್ಗಾ ರೈಲ್ವೇ ಫ್ಲಾಟ್ ಫಾರ್ಮ್‌ ಕರ್ತವ್ಯದಲ್ಲಿದ್ದ ವಿಕಾಸ ವರ್ಮಾ ಕಾನ್ಸಟೇಬಲ್ ಇವರಿಬ್ಬರೂ ಬಂದು ವಿಚಾರಿಸುವಷ್ಟರಲ್ಲಿ ಅವರಿಬ್ಬರೂ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಶಂದ ಮೇಲಿಂದ ಠಾಣೆ ಗುನ್ನೆ ನಂ: 151/2013 ಕಲಂ, 353, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

09 June 2013

GULBARGA DISTRICT REPORTED CRIMES

ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಠಾಣೆ:ಶ್ರೀ ಮೊನಪ್ಪಾ ತಂದೆ ಸುಭಾಷ ಹಳ್ಳಿ ವಯಾ||24 ಜಾ:ಹರಿಜನ ಸಾ:ಕಡೆಹಳ್ಳಿ ವರು ನಾನು ದಿನಾಂಕ:08/06/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ತೊನಸಳ್ಳಿ (ಎಸ್‌‌) ಗ್ರಾಮದ ಬ್ರೀಜ್ಡ್ ಹತ್ತಿರ ನನ್ನ ಅಕ್ಕಳಾದ ಸಂಗೀತಾ ಇವಳಿಗೆ ಜೇವರ್ಗಿಗೆ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ನಮ್ಮೂರಿನವರಾದ ಗುರುರಾಜ, ಮಹಾಲಿಂಗಪ್ಪಾ, ಶರಣಪ್ಪಾ, ಅಣವೀರ, ಅರುಣ, ಮಹಾದೇವಪ್ಪಾ ಇವರೆಲ್ಲರೂ ಕೈಯಲ್ಲಿ ಬಡಿಗೆ ಮತ್ತು ಚಾಕು ಹಿಡಿದುಕೊಂಡು ಬಂದು ಉದ್ದೇಶ ಪೂರ್ವಕವಾಗಿ ನನ್ನ ಮೋಟಾರ ಸೈಕಲನ್ನು ಬಿಳಿಸಿದರು  ನಾವು ಕೆಳಗೆ ಬಿದ್ದಾಗ ಗುರುರಾಜ ಇತನು ಜಾತಿ ನಿಂದನೆ ಮಾಡಿ ನಾನು ಸಾಹುಕಾರ ರೋಡಿಗೆ ಬರುವಾಗ ದಾರಿ ಬಿಡಲಿಕ್ಕೆ ಬರಲ್ಲಾ ಭೋಸಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಎರಡು ವರ್ಷದ ಹಿಂದೆ ನಿಮ್ಮಪ್ಪನಿಗೆ ಒದ್ದಂಗ ನಿಮಗೂ ಒದ್ದು ಸತ್ತು ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ನಮ್ಮ ಅಕ್ಕಳಿಗೆ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:120/2013 ಕಲಂ:143,147,148,323,354,504,506,307,ಸಂಗಡ 149 ಐಪಿಸಿ ಮತ್ತು 3[1] [10] ಎಸ್‌ಸಿ/ಎಸ್‌ಟಿ ಪಿಎ ಆಕ್ಟ್‌ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಠಾಣೆ: ಶ್ರೀ ಗುರುರಾಜ ತಂದೆ ಶರಣಪ್ಪ ಇಂಗಿನಶಟ್ಟಿ ಸಾ:ಕಡೆಹಳ್ಳಿ ವರು ನಾನು ಮತ್ತು ನಮ್ಮ ಕಾಕಂದಿರಾದ ಮಹಾನಿಂಗಪ್ಪಾ, ತಮ್ಮ ರುದ್ರಪ್ಪ, ಚಿಕ್ಕಪ್ಪ ಮಹಾದೇವಪ್ಪ, ಮತ್ತು ಅಳಿಯ ಅರುಣ ಕೂಡಿ ದಿನಾಂಕ:08/06/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ ನಮ್ಮೂರ ಮೋನಪ್ಪ & ವಿಜಯ ಕುಮಾರ ರವರು ನನ್ನ ಜೊತೆ ತಕರಾರು ಮಾಡಿದ ಸಂಬಂಧ ಅವರ ವಿರುದ್ದ ಅರ್ಜಿ ಕೊಡಲು ಶಹಾಬಾದಕ್ಕೆ ಬರುತ್ತಿದ್ದಾಗ ತೊನಸಳ್ಳಿ (ಎಸ್‌) ಗ್ರಾಮದ ಸಣ್ಣ ಬ್ರಿಡ್ಜ ಹತ್ತಿರ ರೋಡಿನ ಮೇಲೆ ದೇವಿಂದ್ರಪ್ಪಾ ತಂದೆ ಸುಭಾಸಹಳ್ಳಿ 2)ಮೋನಪ್ಪ ತಂದೆ ಸುಭಾಸ 3)ವಿಜಯಕುಮಾರ ತಂದೆ ಸುಭಾಸ 4)ಶಿವರಾಯ 5)ಸಂತೋಷ ತಂದೆ ಭೀಮರಾಯ ಸಂ:ಇನ್ನೂ 10-15 ಜನರು ಸಾ:ಎಲ್ಲರೂ ಕಡೆಹಳ್ಳಿ ರವರು ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಟ್ಟಿಗೆಯಿಂದ ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ತೊಡರಿಗೆ ಜೋರಾಗಿ ಒದ್ದು ಮತ್ತು ಕುತ್ತಿಗೆಗೆ ಕೈಗಳಿಂದ ಜೋರಾಗಿ ಹಿಸುಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 121/2013 ಕಲಂ:143,147,148,323,504,506(2),307 ಸಂ:149 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಕಾಳಗಿ ಪೊಲೀಸ್ ಠಾಣೆ:ದಿನಾಂಕ:06/06/2013 ರಂದು ಕಲ್ಲಹಿಪ್ಪರಗಾ ಗ್ರಾಮದಲ್ಲಿ ಬಾಬಾಸಾಹೇಬ ದರ್ಗಾದ ಜಾತ್ರೆಯ ನಿಮಿತ್ಯ ಕುಸ್ತಿಗಳು ನಡೆಯುತ್ತಿದ್ದು ಕುಸ್ತಿ ನೋಡಲು ನಾನು ಮತ್ತು ನನ್ನ ಸಂಗಡ ನಮ್ಮ ಓಣಿಯ ವಿಶ್ವನಾಥಶರಣಪ್ಪ,ಶಿವಾನಂದ ಕುಸ್ತಿ ಮುಗಿದ  ನಂತರ 7-00 ಪಿ.ಎಂ  ಕ್ಕೆ ಎಲ್ಲರೂ  ಮರಳಿ ಮನೆಗೆ ತೆಕ್ಯಾದ ಹತ್ತಿರ ಬರುತ್ತಿದ್ದಾಗ ಮೈನೋದ್ದೀನ ಇನಾಮದಾರ ಮತ್ತು ಸಂಗಡ 28 ಜನರು ಕೂಡಿಕೊಂಡು ಬಂದವರೇ ನಮಗೆ  ಜಾತಿ ನಿಂದನೆ ನಮ್ಮ ಜಾತ್ರೆಯಲ್ಲಿ ನಿವ್ಯಾಕೆ ಬಂದಿರಿ ಅಂತಾ ಜಾತಿ ನಿಂದನೆ ಮಾಡಿ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಅವಾಚ್ಯ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಗಣೇಶ ತಂದೆ ಮಸ್ತಾನಪ್ಪಾ ಮದ್ದಲಿ ಉ: ಹಿಟಾಚಿ ಆಪರೇಟರ ಸಾ: ಕಲ್ಲಹಿಪ್ಪರಗಾ ತಾ|| ಚಿತ್ತಾಪೂರ ರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:64/2013 ಕಲಂ,143, 147, 148, 323, 324, 504, 506 ಸಂಗಡ 149 ಐಪಿಸಿ  ಮತ್ತು ಕಲಂ, 3 (1)  910)  ಎಸಸಿ/ಎಸಟಿ ಆಕ್ಟ 1988 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

06 June 2013

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳದಿಂದ ಗೃಹಿಣೆ ಸಾವು:;

ಕುಂಚಾವರಂ ಪೊಲೀಸ್ ಠಾಣೆ: ನನ್ನ ಮಗಳಾದ ನೀಲಾಬಾಯಿ ಇವಳಿಗೆ ಜಿಲ್ವರ್ಶಾ ತಾಂಡಾದ ಶ್ರವಣ ಜೋತೆಗೆ ದಿನಾಂಕ:10-1-2013 ರಂದು ಜಿನಗುರ್ತಿ ಅಮರೇಶ್ವರ ದೇವಸ್ಥಾನದಲ್ಲಿ ಲಗ್ನ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ 50 ಸಾವಿರ ರೂಪಾಯಿಗಳು, ಬಂಗಾರ ಹಾಗೂ ಇನ್ನಿತರ ಮದುವೆ ಸಾಮಾನುಗಳು ಕೊಟ್ಟು ಮದುವೆ ಮಾಡಿರುತ್ತೆವೆ. ಎರಡು ತಿಂಗಳ ಮೇಲೆ  ಗಂಡ ಮನೆಯವರು ಇನ್ನೂ ಕೊಡಬೇಕಾದ ಬಂಗಾರ ಮತ್ತು ಗಾಡಿ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಿದ್ದರಿಂದ ಮಗಳು ನಮ್ಮ ಮನೆಗೆ ಬಂದು ತಿಳಿಸಿದ್ದರಿಂದ ಮೋಟಾರ ಸೈಕಲ ಮತ್ತು ಒಂದೂವರೇ ತೋಲೆ ಬಂಗಾರ ಕೊಡಾ ಕೊಟ್ಟಿರುತ್ತೆವೆ. ಸ್ವಲ್ಪ ದಿನಗಳ ನಂತರ ಮಗಳು ಗರ್ಭಿಣಿಯಾಗಿದ್ದಾಗ ಗಂಡ ಅತ್ತೆ ಮಾವ ಇನ್ನೂ 20,000-00 ರೂಪಾಯಿ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ನನ್ನ ಮಗನಿಗೆ ಜಬರದಸ್ತಿಯಿಂದ ನಿನಗೆ ಮದುವೆ ಮಾಡಿದ್ದಾರೆ ನಿನಗೆ ಖಲಾಸ ಮಾಡಿ ನಾನು ಜೈಲಿಗೆ ಹೋದರು ಪರವಾಗಿಲ್ಲ ಅಂತಾ ದಿನಾಂಕ:05-06-2013 ರಂದು ನಸುಕಿನ 4-00 ಗಂಟೆಯ ಸುಮಾರಿಗೆ ನನ್ನ ಮಗಳಿಗೆ ನೀಲಾಬಾಯಿಗೆ ಆಕೆಯ ಗಂಡನಾದ ಶ್ರವಣ ಮತ್ತು ಅತ್ತೆ ದಸಲಿಬಾಯಿ, ಮಾವ ರಾಮಸಿಂಗ ಇವರು ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿ ನನ್ನ ಮಗಳ ಕುತ್ತಿಗೆ ಒತ್ತಿ ಹಿಡಿದು ಸಾಯಿಸಿ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ  ಕೀಶನ ತಂದೆ ಭದ್ರ್ಯಾನಾಯಕ ಚವ್ಹಾಣ ವ|| 45 ವರ್ಷ ಜಾ|| ಲಂಬಾಣಿ  ಸಾ|| ಜೈರಾಮ ತಾಂಡಾ ಪೆದ್ದಾಮೂಲ ಮಂಡಲ ತಾ|| ತಾಂಡೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ:41/2013 ಕಲಂ 498(ಎ), 302, 304(ಬಿ) ಸಂಗಡ 34 ಐ.ಪಿ.ಸಿ ಮತ್ತು ಕಲಂ 3& 4  ಡಿ.ಪಿ. ಆಕ್ಟ 1961  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.