POLICE BHAVAN KALABURAGI

POLICE BHAVAN KALABURAGI

05 March 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಮಾಡಿದ ಆರೋಪಿತನ ಬಂಧನ,
ಬಂಧಿತನಿಂದ 3 ತೊಲೆ ಬಂಗಾರದ ಆಭರಣ ವಶ.
ದಿನಾಂಕ;16-02-2013 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಶ್ರೀಮತಿ ನಿರ್ಮಲಾ ಗಂಡ ಜಗದೀಶ ಸಾ|| ವಿರೇಂದ್ರ ಪಾಟೀಲ್ ಬಡವಾಣೆ ಗುಲಬರ್ಗಾ ರವರು ಶಹಾಬಜಾರದಿಂದ ತಮ್ಮ ಮನೆಗೆ ಹೋಗುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಆ ಮಹಿಳೆಯ ಕೊರಳ್ಳಲಿದ್ದ  3 ತೊಲೆ ಬಂಗಾರದ ಮಂಗಳಸೂತ್ರ ದರೋಡ ಮಾಡಿಕೊಂಡು ಹೋದ ಆರೋಪಿತನ ಪತ್ತೆ ಕುರಿತು ತನಿಖೆ ಕೈಕೊಂಡ ಚೌಕ ಪೊಲೀಸ್ ಠಾಣೆ ಪೊಲೀಸ್ ಇನ್ಸಪೇಕ್ಟರಾದ ಶ್ರೀ, ಬಿ.ಬಿ.ಭಜಂತ್ರಿ ಪೊಲೀಸ್ ಠಾಣೆ, ಪಿ.ಎಸ.ಐ ರವರಾದ ಶ್ರೀ ನಟರಾಜ, ಚಿತ್ತರಂಜನ್, ಡಿ. ಹೇಮಂತಕುಮಾರ, ಹಾಗೂ ಸಿಬ್ಬಂದಿಯವರಾದ  ಶಿವಾನಂದ, ಬಂದೆನವಾಜ, ಮಹಾಂತೇಶ ರವರು ಮಂಗಳ ಸೂತ್ರ ದರೋಡೆ ಮಾಡಿದ ಆರೋಪಿತನಾದ ಅಜಯಕುಮಾರ @ ಅಜಯ ತಂದೆ ವಿಜಯ ಕಾಂಬಳೆ ವಯಾ|| 19 , ಸಾ|| ಮಾಂಗರವಾಡಿ ಗುಲಬರ್ಗಾ ಇತನನ್ನು ದಸ್ತಿಗಿರಿ ಮಾಡಿ, ದರೋಡೆ ಮಾಡಿದ ಮಂಗಳಸೂತ್ರ ವಶಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ; ಶ್ರೀ ಸತೀಷಕುಮಾರ ತಂದೆ ಸಿದ್ದಪ್ಪ ಕಡಗಂಚಿ  ಸಾ: ಹಡಲಗಿ ತಾ: ಆಳಂದ ಹಾ;ವ ಭಗತಸಿಂಗ ಚೌಕ ಗುಲಬರ್ಗಾ ರವರು  ನಾನು ದಿನಾಂಕ :04-03-2013 ರಂದು ಬೆಳಿಗ್ಗೆ  10=30 ಗಂಟೆಗೆ ಸಣ್ಣೂರ ಗ್ರಾಮದಿಂದ ಅನ್ನಪೂರ್ಣ ಕ್ರಾಸ್ ಮುಖಾಂತರ ಎನ್.ವಿ.ಕಾಲೇಜಕ್ಕೆ ಮೋಟಾರ ಸೈಕಲ್ ನಂ: ಕೆಎ-32 ಎಸ್ 0407 ನೇದ್ದರ ಮೇಲೆ ಹೋಗುವಾಗ ಪಂಡಿತ  ರಂಗ ಮಂದಿರ ಎದುರಿನ ರೋಡ ಮೇಲೆ ಸಿದ್ದಿ ಷಾ ಕ್ರಾಸ್ ಕಡೆಯಿಂದ ಅಟೋರೀಕ್ಷಾ ನಂ:ಕೆಎ-32 ಬಿ-8768 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಟೋರೀಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:13/2013 ಕಲಂ: 279,337  ಐ.ಪಿ.ಸಿ. ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಅಫಘಾತ :
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:04-03-2013 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಗುಲಬರ್ಗಾದ ಹೀರಾಪೂರನ ಸೆಂಟ್ರಲ್ ಗೋಡನ ನಂ.-2 ಸಂಗ್ರಹ IIC10 , IIC11& IIC12 ನೇದ್ದಕ್ಕೆ  ಆಕಸ್ಮಿಕವಾಗಿ ಬೆಂಕಿ ಹತ್ತಿ ಅಂದಾಜು ಕಿಮ್ಮತ್ತು 26,13,218 /- ರೂ ಬೆಲೆ ಬಾಳುವ ಅಕ್ಕಿ ಸುಟ್ಟಿರುತ್ತವೆ. ಅಂತಾ ಶ್ರೀ ಮನೀತ ಕುಮಾರ ಲಕರಾ  ವಿಯರ ಹೌಸ ಮ್ಯಾನೇಜರ ಸೆಂಟ್ರಲ್ ವಿಯರ ಹೌಸ ಹೀರಾಪೂರ ಗುಲಬರ್ಗಾರವರು ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಆಕಸ್ಮಿಕ ಬೆಂಕಿ ಅಫಘಾತ ಸಂಖ್ಯೆ 2/2013 ಕಲಂ ಆಕಸ್ಮಿಕ ಬೆಂಕಿ ಅಫಘಾತ ನೇದ್ದರ  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶಿವಲೀಲಾ ತಂದೆ ದೇವಿಂದ್ರಪ್ಪಾ ಪಾಟೀಲ ಸಾ:ಬಸವೇಶ್ವರ ನಗರ ಶಹಾಬಾದ ರವರು ನನ್ನ ಅಕ್ಕನ ಮಗನಾದ ಸರತಕುಮಾರ ಇತನಿಗೆ ಮನೆ ಒಳಗಡೆ ಹೋಗು ಅಂತಾ ಬೈದು ಒಳಗೆ ಕಳುಹಿಸಿದಾಗ ನಮ್ಮ ಮನೆಯ ಎದರುಗಡೆ ಮನೆಯವರಾದ ಬಸವರಾಜ ತಂದೆ ಶಿವಾನಂದ, ನಾಗರಾಜ, ದಾನಪ್ಪಾ, ಶಿವಾನಂದ, ಸುನಂದಾಬಾಯಿ ರವರು ಬಂದು ನಮಗೆ ಚಿಕ್ಕ ಹುಡುಗನ ಮೇಲೆ ಹಾಕಿ ನಮಗೆ ಏಕೆ ಬೈಯುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2013 ಕಲಂ, 147, 323, 354, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶ್ರೀಮತಿ  ಸುನಂದ ಗಂಡ ಶಿವಾನಂದ ದೇವರಮನಿ ವ:45 ಸಾ:ಬಸವೇಶ್ವರ ನಗರ ಶಹಾಬಾದ ರವರು ನಾನು ಮತ್ತು ನನ್ನ ಸೊಸೆ ಜಗದೇವಿ ಮನೆಯಲ್ಲಿದ್ದಾಗ ನಮ್ಮ ಮನೆಯ ಎದರುಗಡೆ ಇರುವ ದೇವಿಂದ್ರಪ್ಪಾ ಮಾಲಿ ಪಾಟೀಲ, ಭೀಮಾಶಂಕರ ತಂದೆ ದೇವಿಂದ್ರಪ್ಪಾ,ಸೋಮಶೇಖರ ತಂದೆ ದೇವಿಂದ್ರಪ್ಪಾ, ವಿಜಯಲಕ್ಷಿ  ತಂದೆ ದೇವಿಂದ್ರಪ್ಪಾ ರವರು  ನಮ್ಮ ಮನೆಯ ಎದುರು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ, 323, 324, 354, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:03-03-2013 ರಂದು ಸಾಯಂಕಾಲ 5-00 ಪಿ.ಎಮ್.ದ ಸುಮಾರಿಗೆ ನನ್ನ ತಮ್ಮನಾದ ಸನ್ನಪ್ಪ ತಂದೆ ಮತ್ತಪ್ಪ ಮಂಗಾ ಹಾಗೂ ನನ್ನ ಮಗನಾದ ಚಿನ್ನಪ್ಪ ಇಬ್ಬರೂ ಕರ್ಚಖೇಡ ಗ್ರಾಮಕ್ಕೆ ಹೋಗಿದ್ದರು. ದಿನಾಂಕ:04-03-2013 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಿಮ್ಮ ತಮ್ಮನಾದ ಸಣ್ಣಪ್ಪ ಹಾಗೂ ನಿನ್ನ ಮಗನಾದ ಚಿನ್ನಪ್ಪ ಹಾಗೂ ಹಂಗನಳ್ಳಿ ಗ್ರಾಮದ ಪೀರಪ್ಪ ತಂದೆ ದುರ್ಗಪ್ಪ ಹರಸೂರ ಇವರು ಮೋಟಾರು ಸೈಕಲ್ ಮೇಲೆ ಸೇಡಂದಿಂದ ಮಳಖೇಡ ಕಡೆಗೆ ಹೋರಟಾಗ  ಪೆಟ್ರೊಲ್ ಪಂಪ್ ಎದುರುಗಡೆ ಗುಲಬರ್ಗಾ ಕಡೆಯಿಂದ ಬಂದ ಲಾರಿ ನಂ-AP04-X-3901 ನೇದ್ದರ ಚಾಲಕನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪೀರಪ್ಪ ಹರಸೂರ ಇತನು ಚಲಾಯಿಸುವ ಮೋಟಾರು ಸೈಕಲ್ ನಂ-KA-32-EB-6929 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಮೂರು ಜನರು ಮೋಟಾರು ಸೈಕಲ್ ದೊಂದಿಗೆ ಕೆಳಗೆ ಬಿದ್ದು ಮೂರು ಜನರು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ ಲಾರಿ ಚಾಲಕನು ತನ್ನ ಲಾರಿಯನ್ನು ಪೆಟ್ರೊಲ್ ಪಂಪ್ ಒಳಗಡೆ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿರುತ್ತಾನೆ. ನಾವು ಬಂದು ನೋಡಲು 3 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಈ ಘಟನೆಗೆ ಕಾರಣನಾದ ಲಾರಿ ಚಾಲಕನ  ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಶ್ರೀ ಕಲ್ಲಪ್ಪ @ ಕಲ್ಯಾಣಿ ತಂದೆ ಮತ್ತಪ್ಪ ಮಂಗಾ ಸಾ:ಮಳಖೇಡ ಗ್ರಾಮ, ತಾ:ಸೇಡಂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:51/2013 ಕಲಂ-279,304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾರಾಣಾಂತಿಕ ಹಲ್ಲೆ ಪ್ರಕರಣ:
ಕೊಂಚಾವರಂ ಪೊಲೀಸ್ ಠಾಣೆ:ದಿನಾಂಕ:03-03-13 ರಂದು ಬಸ್ಸ ನಿಲ್ದಾಣದಲ್ಲಿರುವಾಗ ಯಾವದೇ ಕಾರಣವಿಲ್ಲದೇ ನನ್ನ  ಗಂಡ ಗೋವಿಂದನಿಗೆ ಅದೇ ತಾಂಡಾದ ತಾರಾಸಿಂಗ ತಂದೆ ಭೀಮ್ಲಾ ಇತನು ಗೋವಿಂದ ಇತನಿಗೆ ನನ್ನ ಅತ್ತಿಗೆ ಜೋತೆ ಸಂಬಂಧ ಇಟ್ಟುಕೊಂಡಿರುತ್ತಾನೆ.  ಅಂತಾ ಚಾಕುವಿನಿಂದ ಹೊಟ್ಟೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:08/2013 ಕಲಂ: 307, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

04 March 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ಶಿವರಾಯ ತಂದೆ ಬಸಂತರಾಯ ಗೊಬ್ಬುರ ವಯಾ||60 ವರ್ಷ ಉ:ಒಕ್ಕಲುತನ ಸಾ|| ಮೇಳಕುಂದಾ(ಕೆ)  ರವರು ನಾನು ನಮ್ಮ ಹೊಲದಲ್ಲಿ ಎತ್ತುಗಳು ಮತ್ತು ದನಗಳನ್ನು ಕಟ್ಟಿಕೊಂಡು ಒಕ್ಕಲುತನ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತೆನೆ. ಊಟದ ಸಲುವಾಗಿ ಹೊಲದಿಂದ ಮನೆಗೆ ಹೋಗಿ ಬಂದು ಬಂದು ಮಾಡುತ್ತೆನೆ.ದಿನಾಂಕ:02-03-2013 ರಂದು ಹೊಲದಲ್ಲಿ ಕೆಲಸ ಮಾಡಿ ಮನೆಗೆ ಬಂದು ಊಟ ಮಾಡಿ ರಾತ್ರಿ 9-00 ಗಂಟೆಯ ಸುಮಾರಿಗೆ ಹೊಲಕ್ಕೆ ಹೋಗಿ ಮಲಗಿಕೊಂಡಿದ್ದು, ದಿನಾಂಕ:03-03-2013 ರಂದು ರಾತ್ರಿ 01-00 ಎಂ.ಎಮಕ್ಕೆ ಸುಮಾರಿಗೆ ಯಾರೋ ಒಬ್ಬ ಮನುಷ್ಯ ನನಗೆ ಅಜ್ಜ ಎಂದು ಕರೆದು ಎಬ್ಬಿಸಿದ್ದು ನಾನು ಯಾರು ಅಂತಾ ನೋಡುತ್ತಿದ್ದಂತೆ ಸದರಿಯವನು  ನನಗೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನ ಮೇಲೆ ಮತ್ತು ಬಲಗಡೆ ಕಿವಿಯ ಮೇಲ್ಬಾಗದ ತಲೆಗೆ ಹೊಡೆದು ಗುಪ್ತಗಾಯ ಹಾಗೂ ರಕ್ತಗಾಯ ಪಡಿಸಿದ್ದರಿಂದ  ನಾನು ಪ್ರಜ್ಞೆ ತಪ್ಪಿ ಬಿದ್ದಿರುತ್ತೆನೆ. ಬೆಳಗ್ಗೆ 5-00 ಸುಮಾರಿಗೆ ನನ್ನ ಮಗ ಬಸವರಾಜ ಇತನು ಹೊಲದಲ್ಲಿದ್ದ ಕಬ್ಬಿಗೆ ನೀರು ಬಿಡಲು ಬಂದು ಎಬ್ಬಿಸಿ ನೋಡಿದಾಗ ನನ್ನ ತಲೆಗೆ ರಕ್ತಗಾಯ ಆಗಿದ್ದು ನೋಡಿಕೊಂಡು ರಾತ್ರಿ ನಡೆದ ವಿಷಯದ ಬಗ್ಗೆ ಮಗನಿಗೆ ತಿಳಿಸಿರುತ್ತನೆ. ನಮ್ಮ ಹೊಲದಲ್ಲಿನ ದೌಣಿಗೆ ಕಟ್ಟಿದ್ದ ದನಗಳಿಗೆ ನೋಡಲಾಗಿ 1 ಆಕಳಿಗೆ ಯಾವುದೊ ಆಯುಧದಿಂದ ಆಕಳಿನ ಕೆಚ್ಚಿನ ಕೆಳಗಡೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದರಿಂದ ಆಕಳು ಮೃತಪಟ್ಟಿರುತ್ತದೆ. ಮತ್ತು  ಅಲ್ಲಿಯೆ ಪಕ್ಕದಲ್ಲಿ ಕಟ್ಟಿದ್ದ ಆಕಳು ಕರುವಿನ ಎಡಗಡೆ ಹೊಟ್ಟೆ ಹೊಡೆದು ಗಾಯ ಮಾಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2013 ಕಲಂ, 324, 429 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗಿ ಕಾಣೆಯಾದ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ದಿನಾಂಕ:01-03-2013 ರಂದು ರಾತ್ರಿ ನಾವು ಮನೆಯವರೆಲ್ಲರೂ ಮಲಗಿಕೊಂಡಿದ್ದು, ಬೆಳಿಗ್ಗೆ ಎದ್ದು  ನೋಡಲಾಗಿ  18 ವರ್ಷದ  ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ನಮ್ಮ ಸಂಭಂದಿಕರಲ್ಲಿ ಎಲ್ಲಾ ಹುಡಕಾಡಲಾಗಿ ಪತ್ತೆಯಾಗಿರುವದಿಲ್ಲ. ಅವಳನ್ನು ಪತ್ತೆ ಮಾಡಿಕೊಡಬೇಕು ಅಂತಾ ಹುಡಗಿಯ ತಂದೆ ಸಾ|| ಸಾಗನೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 21/2013 ಕಲಂ ಹುಡಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

03 March 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ 28/02/2013 ರಂದು 0130 ಗಂಟೆಯಿಂದ 0400 ಗಂಟೆಯ ಮಧ್ಯದ ಅವಧಿಯಲ್ಲಿ ಭೂಸನೂರ ತಾಂಡಾದಲ್ಲಿ ನಿರ್ಮಿಸಿರುವ ವಡಾಫೋನ ಟಾವರ UGUL 919 INDUS 1115049 ದಕ್ಕೆ ಅಳವಡಿಸಿದ ಬ್ಯಾಟರಿ ಬ್ಯಾಂಕಿನಿಂದ 24 ಬ್ಯಾಟರಿಗಳನ್ನು ಅಂದಾಜ ಕಿಮ್ಮತ್ತು 24,000/- ರೂಪಾಯಿಗಳು  ನೇದ್ದನ್ನು ಸ್ಟೋರ ರೂಮ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ ಸಾ|| ಕಾವೇರಿ ನಗರ ಗುಲಬರ್ಗಾರವರು  ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:21/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಪ್ರಭು ತಂದೆ ಸಂಗಣ್ಣ ಪಾಣೆಗಾಂವ ಸಾ:ಡಬರಾಬಾದ ಕ್ರಾಸ ರಿಂಗ ರೋಡ ಗುಲಬರ್ಗಾರವರು ದಿನಾಂಕ:02/03/2013  ರಂದು ಬೆಳಿಗ್ಗೆ 10-00 ಗಂಟೆಗೆ ಹೀರಾಪೂರ ಗೌಟಾಣ ಜಮೀನ ಪ್ಲಾಟ್ ನಂ:32 ನೇದ್ದರ ಹತ್ತಿರ ಪ್ಲಾಟ ಅಳತೆ ಮಾಡುವ ಸಮಯದಲ್ಲಿ ಬಸೀರ ತಂದೆ ಖಾಜಾಸಾಬ  ವಡ್ಡಳ್ಳಿ ಸಾ: ಹೀರಾಪೂರ ಇತನು ನನಗೆ ಪ್ಲಾಟ್ ನಂ:32 ನೇದ್ದರ ಅಳತೆ 30X40 ಕಿಂತ ಕಡಿಮೆ ಇರುತ್ತದೆ, ಇನ್ನೊಂದು ಸಾರಿ ಅಳತೆ ಮಾಡಿಕೊಡು ಅಂತ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಸಲಿಕೆಯಿಂದ ತಲೆಗೆ ಹೊಡೆದು ರಕ್ತ ಗಾಯ ಪಡೆಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 118/2013 ಕಲಂ, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:02-03-2013 ರಂದು 7-00 ಪಿ.ಎಮ ಕ್ಕೆ ಶ್ರೀ ರಘು ಎನ್‌, ಪಿಎಸ್‌ಐ ಶಹಾಬಾದ ನಗರ ಠಾಣೆ ರವರು ಹೊನಗುಂಟಾ ಗ್ರಾಮದ ಜಾವೀದ ಪಟೇಲ ರವರ ಮನೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಜೂಜಾಡುತ್ತಿರುವವರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ  ಮಹ್ಮದ ತೌಫೀಕ ತಂದೆ ಬಸೀರ ಅಹ್ಮದ ಸಾ:ಹೊನಗುಂಟಾ,ಮಹ್ಮದ ಇಸ್ಮಾಯಿಲ ಶಾ ತಂದೆ ಮದಾರಶಾ ಸಾ:ಹೊನಗುಂಟಾ,  ನಬಿಸಾಬ ತಂದೆ ಬದನಸಾಬ ಸಾ:ಹೊನಗುಂಟಾ, ಮೈತಾಬ ಶಾ ತಂದೆ ಬಂದೇಲಿ ಶಾ ಸಾ:ಹೊನಗುಂಟಾ, ಮಹ್ಮದ ಸೈಯದ ತಂದೆ ಮಹ್ಮದ ಅಮ್ಜದ ಸಾಬ ಸಾ:ಇಜೇರಿ ಹಾ:ವ:ಹೊನಗುಂಟಾ, ಮಲ್ಲಪ್ಪಾ ತಂದೆ ನಾಗಪ್ಪಾ ಬಂಡೆಪ್ಪನೂರ ಸಾ:ಹೊನಗುಂಟಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ  ಜೂಜಾಟಕ್ಕೆ ಬಳಸಿದ ಹಣ ಮತ್ತು ಜೂಜಾಟದ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆ ಗುನ್ನೆ ನಂ: 28/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:02/03/2013 ರಂದು ಠಾಣಾ ಹದ್ದಿಯಲ್ಲಿ ಬರುವ ಆಶ್ರಯ ಕಾಲೋನಿಯ ನೀರಿನ ಟ್ಯಾಂಕ ಹತ್ತಿರ  ಸಾರ್ವಜನಿಕ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶರಣಪ್ಪಾ ಹಿಪ್ಪರಗಿ ಪಿಐ ಶಹಾಬಾದ ನಗರ ಠಾಣೆರವರ ನೇತೃತ್ವದಲ್ಲಿ ಪಿ.ಎಸ.ಐ  ಶ್ರೀ ರಘು ಎನ್. ಹಾಗೂ ಸಿಬ್ಬಂದಿಯವರಾದ ಯಾದವ, ರಾಜು  ವೀರಭದ್ರ, ಸುಭಾಷ ರವರು ಕೂಡಿಕೊಂಡು  ಜೂಜಾಟದಲ್ಲಿ ನಿರತರಾದ ಮೊಹ್ಮದ ಮಹಿಬೂಬ ತಂದೆ ಮೊಹ್ಮದ ಹುಸೈನ ವೈನಿವಾಲೆ ವ:51 ಜಾ: ಮುಸ್ಲಿಂ ಉ: ಬಡಿಗೇರ್ ಸಾ: ಸುಭಾಷ ಚೌಕ ಶಹಾಬಾದ  2. ಶೇಖ ಮಲಂಗ್ ತಂದೆ ನಬಿಸಾಬ ಶೇಖ  ವ: 49 ಜಾ: ಮುಸ್ಲಿಂ ಉ:ಟೇಲರ್ ಸಾ: ರಾಮ ಮೊಹಲ್ಲಾ ಶಹಾಬಾದ 3. ಚಂದು ತಂದೆ ಶಂಕರ ಮೇತ್ರೆ ವ:21 ಜಾ: ಮಾದಿಗ ಉ:ಗೌಂಡಿ ಕೆಲಸ ಸಾ: ಆಶ್ರಯ ಕಾಲೋನಿ ಶಹಾಬಾದ  4. ಸದಾಂ ಹುಸೇನ್ ತಂದೆ ರುಕ್ಮೊದ್ದಿನ್ ಕಲಗುರ್ತಿ ವ: 20 ಜಾ:ಮುಸ್ಲಿಂ ಉ: ಕೂಲಿಕೆಲಸ ಸಾ: ಆಶ್ರಯ ಕಾಲೋನಿ ಶಹಾಬಾದ ರವರಿಂದ ಜೂಜಾಟಕ್ಕೆ ಬಳಸಿದ ಹಣ ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ:29/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ ರಾಮು ತಂದೆ ನಾಗಪ್ಪ ಮಂಗಾ ವಯ:23 ವರ್ಷ, ಜಾತಿ: ಮಾದಿಗ  (ಎಸ್.ಸಿ) ಉ: ಜೀಪ್ ಚಾಲಕ, ಸಾ:ಮಳಖೇಡ ತಾ:ಸೇಡಂ ರವರು ನಾನು ಮತ್ತು ನಮ್ಮ ಕ್ರೂಜರ ಚಾಲಕ ಸಿದ್ದು ಸಿಂಪಗೇರ ಇಬ್ಬರೂ ಕೂಡಿ ದಿನಾಂಕ:02-03-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಐಬಿ ಎದುರುಗಡೆಯ ತರಕಾರಿ ಮಾರ್ಕೆಟ ಹತ್ತಿರ ಜೀಪ್ ನಿಲ್ಲಿಸಿ ಮಾತಾನಾಡುತ್ತಾ ನಿಂತಾಗ ಸಂಜು  ತಂದೆ ಗುಂಡಪ್ಪ  ಸಾ:ಅಗ್ಗಿ ಬಸವೇಶ್ವರ ಕಾಲೋನಿ ಸೇಡಂ ಇತನು ಬಂದವನೇ ನನಗೆ   ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ಮಳಖೇಡದಿಂದ ಪ್ಯಾಸಿಂಜರ ಕೂಡಿಸಿಕೊಂಡು ಹೋಗುವ ವಿಷಯದಲ್ಲಿ ಜಗಳ ತೆಗೆದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ತನ್ನ ಕೈಯಲ್ಲಿದ್ದ ಖಾಲಿ ಬೀಯರ್ ಬಾಟಲಿಯಿಂದ ನನ್ನ  ಹಿಂದುಗಡ ತಲೆಗೆ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:48/2013 ಕಲಂ-324, 504, 506 ಐಪಿಸಿ ಮತ್ತು 3(I)(X) SC/ST PA Act 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:02-03-2013 ರಂದು ರಾತ್ರಿ 8-45  ಗಂಟೆಗೆ ನಾನು ಮತ್ತು ನಮ್ಮಲ್ಲಿ ಮುನಿಮ ಕೆಲಸ ಮಾಡುವ ಚಂದ್ರಪ್ಪ ತಂದೆ ಹಣಮಂತಪ್ಪ ಮಡಿವಾಳ ವಯ:52 ವರ್ಷ, ಇಬ್ಬರೂ ಕೂಡಿ ಮೋಟಾರ ಸೈಕಲ್ ನಂ: ಕೆಎ:32-ಯು-9805 ನೇದ್ದರ ಮೇಲೆ ಸೇಡಂದಿಂದ ರಂಜೋಳಕ್ಕೆ ಹೋಗುತ್ತಿದ್ದೇವು, ಮೋಟಾರು ಸೈಕಲ್ ನಾನು ಚಲಾಯಿಸುತ್ತಿದ್ದೆ. ಮೋಟಾರು ಸೈಕಲನ್ನು ಸವಾಕಾಶವಾಗಿ ಎಡಭಾಗಕ್ಕೆ ಚಲಾಯಿಸುತ್ತಾ ಬಟಗೆರಾ (ಬಿ) ಕ್ರಾಸ್ ದಾಟಿ, ಕಾಗಿಣಾ ದಾಬಾ ಹತ್ತಿರ ಎದುರುಗಡೆಯಿಂದ ಟ್ರಾಕ್ಟರ್ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರಾಂಗ ರೂಟದಲ್ಲಿ ನೇರವಾಗಿ ಬಂದು ನನ್ನ ಮೋಟಾರು ಸೈಕಲಗೆ ಡಿಕ್ಕಿಪಡಿಸಿದನು. ನಾನು ರೋಡಿನ ಮೇಲೆ ಬಲಭಾಗಕ್ಕೆ ಬಿದ್ದೇನು, ಹಿಂದುಗಡೆ ಕುಳಿತ್ತಿದ್ದ ಚಂದ್ರಪ್ಪ ಮಡಿವಾಳ ಇತನು ರೋಡಿನ ಎಡಭಾಗಕ್ಕೆ ಬಿದ್ದಾಗ ಆಗ ಟ್ರಾಕ್ಟರ ಟೈಯರ್ ಚಂದ್ರಪ್ಪ ಇತನ ಮೇಲಿಂದ ಹೋಗಿ ರೋಡಿನ ಎಡಭಾಗಕ್ಕೆ ಟ್ರಾಕ್ಟರ್ ಪಲ್ಟಿಯಾಗಿ ಬಿತ್ತು ಆಗ ಟ್ರಾಕ್ಟರ್ ಚಾಲಕ ಅಲ್ಲಿಂದ ಓಡಿ ಹೋದನು ನನಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾದವು. ನನ್ನ ಹಿಂದುಗಡೆ ಕುಳಿತ್ತಿದ್ದ ಚಂದ್ರಪ್ಪಾ ಇತನಿಗೆ ನೋಡಲು ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಲ್ಲಿಯೇ ನಿಂತಿದ್ದ ಟ್ರಾಕ್ಟರ್ ನೋಡಲು ಕೆಎ-38 ಟಿ-2135-36 ನೇದ್ದು ಇರುತ್ತದೆ. ಟ್ರಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಹ್ಮದ್ ಮೌಲಾನಾ ತಂದೆ ಅಬ್ದುಲ್ ರಶೀದ ರಂಜೋಳ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:49/2013 ಕಲಂ-279,337, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.