ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ಶಿವರಾಯ ತಂದೆ ಬಸಂತರಾಯ ಗೊಬ್ಬುರ ವಯಾ||60 ವರ್ಷ ಉ:ಒಕ್ಕಲುತನ ಸಾ|| ಮೇಳಕುಂದಾ(ಕೆ) ರವರು ನಾನು ನಮ್ಮ ಹೊಲದಲ್ಲಿ ಎತ್ತುಗಳು ಮತ್ತು ದನಗಳನ್ನು
ಕಟ್ಟಿಕೊಂಡು ಒಕ್ಕಲುತನ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತೆನೆ. ಊಟದ ಸಲುವಾಗಿ ಹೊಲದಿಂದ ಮನೆಗೆ
ಹೋಗಿ ಬಂದು ಬಂದು ಮಾಡುತ್ತೆನೆ.ದಿನಾಂಕ:02-03-2013 ರಂದು ಹೊಲದಲ್ಲಿ ಕೆಲಸ ಮಾಡಿ ಮನೆಗೆ ಬಂದು
ಊಟ ಮಾಡಿ ರಾತ್ರಿ 9-00 ಗಂಟೆಯ ಸುಮಾರಿಗೆ ಹೊಲಕ್ಕೆ ಹೋಗಿ ಮಲಗಿಕೊಂಡಿದ್ದು, ದಿನಾಂಕ:03-03-2013
ರಂದು ರಾತ್ರಿ 01-00 ಎಂ.ಎಮಕ್ಕೆ ಸುಮಾರಿಗೆ ಯಾರೋ ಒಬ್ಬ ಮನುಷ್ಯ ನನಗೆ ಅಜ್ಜ ಎಂದು ಕರೆದು
ಎಬ್ಬಿಸಿದ್ದು ನಾನು ಯಾರು ಅಂತಾ ನೋಡುತ್ತಿದ್ದಂತೆ ಸದರಿಯವನು ನನಗೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನ ಮೇಲೆ ಮತ್ತು
ಬಲಗಡೆ ಕಿವಿಯ ಮೇಲ್ಬಾಗದ ತಲೆಗೆ ಹೊಡೆದು ಗುಪ್ತಗಾಯ ಹಾಗೂ ರಕ್ತಗಾಯ ಪಡಿಸಿದ್ದರಿಂದ ನಾನು ಪ್ರಜ್ಞೆ ತಪ್ಪಿ ಬಿದ್ದಿರುತ್ತೆನೆ. ಬೆಳಗ್ಗೆ 5-00
ಸುಮಾರಿಗೆ ನನ್ನ ಮಗ ಬಸವರಾಜ ಇತನು ಹೊಲದಲ್ಲಿದ್ದ ಕಬ್ಬಿಗೆ ನೀರು ಬಿಡಲು ಬಂದು ಎಬ್ಬಿಸಿ ನೋಡಿದಾಗ
ನನ್ನ ತಲೆಗೆ ರಕ್ತಗಾಯ ಆಗಿದ್ದು ನೋಡಿಕೊಂಡು ರಾತ್ರಿ ನಡೆದ ವಿಷಯದ ಬಗ್ಗೆ ಮಗನಿಗೆ ತಿಳಿಸಿರುತ್ತನೆ.
ನಮ್ಮ ಹೊಲದಲ್ಲಿನ ದೌಣಿಗೆ ಕಟ್ಟಿದ್ದ ದನಗಳಿಗೆ ನೋಡಲಾಗಿ 1 ಆಕಳಿಗೆ ಯಾವುದೊ ಆಯುಧದಿಂದ ಆಕಳಿನ ಕೆಚ್ಚಿನ ಕೆಳಗಡೆ
ಹೊಡೆದು ಭಾರಿ ರಕ್ತಗಾಯ ಪಡಿಸಿದ್ದರಿಂದ ಆಕಳು ಮೃತಪಟ್ಟಿರುತ್ತದೆ. ಮತ್ತು ಅಲ್ಲಿಯೆ ಪಕ್ಕದಲ್ಲಿ ಕಟ್ಟಿದ್ದ ಆಕಳು ಕರುವಿನ ಎಡಗಡೆ
ಹೊಟ್ಟೆ ಹೊಡೆದು ಗಾಯ ಮಾಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ: 28/2013 ಕಲಂ, 324, 429 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಹುಡಗಿ ಕಾಣೆಯಾದ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ದಿನಾಂಕ:01-03-2013 ರಂದು ರಾತ್ರಿ ನಾವು ಮನೆಯವರೆಲ್ಲರೂ
ಮಲಗಿಕೊಂಡಿದ್ದು, ಬೆಳಿಗ್ಗೆ ಎದ್ದು ನೋಡಲಾಗಿ 18 ವರ್ಷದ
ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ನಮ್ಮ ಸಂಭಂದಿಕರಲ್ಲಿ ಎಲ್ಲಾ ಹುಡಕಾಡಲಾಗಿ ಪತ್ತೆಯಾಗಿರುವದಿಲ್ಲ.
ಅವಳನ್ನು ಪತ್ತೆ ಮಾಡಿಕೊಡಬೇಕು ಅಂತಾ ಹುಡಗಿಯ ತಂದೆ ಸಾ|| ಸಾಗನೂರ ರವರು ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 21/2013 ಕಲಂ ಹುಡಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment