POLICE BHAVAN KALABURAGI

POLICE BHAVAN KALABURAGI

26 February 2013

GULBARGA DISTRICT REPORTED CRIMES


:: ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ ::
5 ಜನ ದರೋಡೆಕೋರರ ಬಂಧನ. ಬಂಧಿತರಿಂದ ನಗದು ಹಣ 2.41 ಲಕ್ಷ ರೂಪಾಯಿಗಳು, 2 ಮೋಟಾರ ಸೈಕಲ್ ಗಳು  ಹಾಗು ಮಾರಕಾಸ್ತ್ರ ಜಪ್ತಿ.
ಗುಲಬರ್ಗಾ ನಗರದ ಎಂ.ಬಿ.ನಗರ ವೃತ್ತ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯದ ಪೊಲೀಸ ಠಾಣೆ ಸರಹದ್ದಿನ ಭಾಗ್ಯನಗರ ಕ್ರಾಸ್ ಹತ್ತಿರ ಇರುವ ಪೆಟ್ರೋಲ್ ಪಂಪ್ ಮಾಲಿಕರು ದಿನಾಂಕ:23-02-2013 ರಂದು ರಾತ್ರಿ 11-00  ಗಂಟೆಗೆ ವೇಳೆಗೆ ಮನೆಗೆ ಹೋಗುತ್ತಿರುವಾಗ ದರೋಡೆಕೋರರು ಹೊಂಚು ಹಾಕಿ ಪೆಟ್ರೋಲ್ ಪಂಪ್ ಮಾಲಿಕರಿಗೆ ಹೆದರಿಸಿ ಲಾಂಗ್ ಮತ್ತು ಮಚ್ಚುನಿಂದ ತಲೆಗೆ ಇತರೆ ಕಡೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಅವರಿಂದ 2.41 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿರುವ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಹಾಗು ಶ್ರೀ ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ,ಎಸ್.ಅಸ್ಲಾಂಬಾಷ ಪ್ರಭಾರಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ.ನಗರ ಠಾಣೆ, ಗೋಪಾಲ ರಾಠೋಡ ಪಿ.ಎಸ್.ಐ, ಪ್ರದೀಪ.ಎಸ್.ಭಿಸೆ ಪಿ.ಎಸ್.ಐ (ಅ.ವಿ), ತಿಮ್ಮಣ್ಣ ಎಸ್. ಚಾಮನೂರ (ಅ.ವಿ) ಹಾಗು ಸಿಬ್ಬಂದಿಯವರಾದ ವೇದರತ್ನಂ, ವೀರಶೆಟ್ಟಿ, ರವೀಂದ್ರ, ಶ್ರೀನಿವಾಸರೆಡ್ಡಿ, ಸಂಜೀವಕುಮಾರ, ಶಾಮಪ್ರಸಾದ ಕುಲಕರ್ಣಿ,ಪ್ರಭಾಕರ, ಮನೋಹರ, ಅಜರೋದ್ದಿನ, ಶಾಂತಮಲ್ಲಪ್ಪ, ಮಲ್ಲಿನಾಥ, ಯಲ್ಲಪ್ಪಾ, ದೇವಪ್ಪ, ಶ್ರೀಶೈಲ, ಬಸವರಾಜ, ಪ್ರಕಾಶ, ಗುರುಶರಣ,ಶಿವಪ್ಪ ಕಮಾಂಡೋ ಹಾಗು ಅಶೋಕ ರವರ ತಂಡವು ದರೋಡೆಕೋರರಾದ 1) ಸಿದ್ದು @ ಸಿದ್ದಪ್ಪಾ ತಂದೆ ರಾವಪ್ಪಾ  ಆನೂರ ವಯಾ||22, ಜಾತಿಃಲಿಂಗಾಯತ ಉಃ ಶಿವಂ ಸರ್ವಿಸ್ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಸಾ|| ಸರ್ವೋದಯ ನಗರ ಅಂಬೇಡ್ಕರ ಹಾಸ್ಟಲ್ ಹತ್ತಿರ ಶಹಾಬಾದ ರೋಡ್ ಗುಲಬರ್ಗಾ. 2) ಜಗದೀಶ ತಂದೆ ಅಮೃತಪ್ಪ ಪೂಜಾರಿ ವಯಾ|| 20,ಜಾತಿಃ ಕುರುಬ ಉಃಲಕ್ಷ್ಮಿ ವೆಂಕಟೇಶ್ವರ ಐ.ಟಿ.ಐ ಕಾಲೇಜ್ ನಲ್ಲಿ ದ್ವಿತಿಯ ಎಲೆಕ್ಟ್ರೀಷಿಯನರ್ ವಿದ್ಯಾರ್ಥಿ ಸಾಃ ಕೃಷ್ಣಾ ಕಾಲೋನಿ ರಾಣೇಶ ಪೀರ್ ದರ್ಗಾ ಹತ್ತಿರ ಆಳಂದ ರೋಡ್ ಗುಲಬರ್ಗಾ. 3) ಸುಭಾಶ ತಂದೆ ಸಿದ್ದಪ್ಪ ಪೂಜಾರಿ ವಯಾ||25, ಜಾತಿಃ ಕುರುಬ ಉಃ ಚಂದ್ರಕಾಂತ್ ಪಾಟೀಲ ಸ್ಕೂಲ್ ಬಸ್ಸಿನ ಕ್ಲೀನರ್ ಕುಸನೂರ ರೋಡ್ ಸಾಃವಸಂತ ಸ್ಕೂಲ್ ಹತ್ತಿರ ರಾಜಾಪೂರ ಗುಲಬರ್ಗಾ. 4) ಭೀಮ ತಂದೆ ಬಾಬುರಾವ್ ಪೂಜಾರಿ ವಯಾ|| 18 ಉಃ ಸ್ಯಾಮ್ ವಿಜ್ಞಾನ ಕಾಲೇಜಿನ 2 ನೇ ವರ್ಷದ ವಿದ್ಯಾರ್ಥಿ, ಕೆ.ಇ.ಬಿ ಆಫೀಸ್ ಹಿಂದುಗಡೆ ಸಾಃ ಕ್ಯೂನಿಕ್ ಕಂಪ್ಯೂಟರ್ ಅಂಗಡಿ ಹತ್ತಿರ ಬಡೆಪೂರ ಕಾಲೋನಿ ಗುಲಬರ್ಗಾ. ಮತ್ತು 5) ಶಿವಶರಣ ತಂದೆ ವೀರಣ್ಣಾ ಪೊದ್ದಾರ ವಯಾ||18 ಜಾತಿಃ ವಿಶ್ವಕರ್ಮ ಉಃಚಂದ್ರಕಾಂತ್ ಪಾಟೀಲ ಪಿ.ಯು.ಸಿ 2 ನೇ ವರ್ಷದ ವಿಜ್ಞಾನ ವಿದ್ಯಾರ್ಥಿ, ಸೇಡಂ ರೋಡ್ ಸಾಃ ಸರಸ್ವತಿ ವಿದ್ಯಾ ಮಂದಿರ ಸ್ಕೂಲ್ ಹತ್ತಿರ ಪ್ರಶಾಂತ ನಗರ (ಎ) ರಾಜಾಪೂರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು ಈ ದರೋಡೆಕೋರರ ಪೈಕಿ ಸಿದ್ದು @ ಸಿದ್ದಪ್ಪ ಎನ್ನುವವನು ಈ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಾ ಇದ್ದು, ದಿನನಿತ್ಯದ ಪೆಟ್ರೋಲ್ ಪಂಪದಲ್ಲಿ ಸಂಗ್ರಹವಾದ ಹಣವನ್ನು ಮಾಲಿಕರಾದ ಶ್ರೀ ಮೋಹನರೆಡ್ಡಿ ಇವರು ತೆಗೆದುಕೊಂಡು ಹೋಗುವಾಗ ಸಮಯವನ್ನು ಕಾಯುತ್ತಾ ಮೇಲ್ಕಂಡವರನ್ನು ಆಯೋಜಿಸಿಕೊಂಡು ದರೋಡೆಕೊರರ ಗುಂಪನ್ನು ರಚಿಸಿ ದರೋಡೆ ಮಾಡಿರುತ್ತಾರೆ. ಬಂಧಿತ ಆರೋಪಿಗಳಿಂದ ನಗದು ಹಣ 2,41,000/- ರೂಪಾಯಿಗಳು, ಈ ಕೃತ್ಯಕ್ಕೆ ಉಪಯೋಗಿಸಿದ 01 ಮಚ್ಚು ಹಾಗು 02  ಮೋಟಾರ ಸೈಕಲಗಳನ್ನು ಅಃಕಿಃ50,000/- ರೂಪಾಯಿಗಳು ಹೀಗೆ ಒಟ್ಟು 2,91,000/- ರೂಪಾಯಿಗಳನೇದ್ದುವುಗಳು ಜಪ್ತಿಪಡಿಸಿಕೊಳ್ಳಲಾಗಿದೆ.  
       ಐದು (5) ಜನ ದರೋಡೆಕೋರರನ್ನು ಪತ್ತೆ ಹಚ್ಚಿದ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ತಂಡಕ್ಕೆ ಮಾನ್ಯ ಶ್ರೀ ಎನ್. ಸತೀಷಕುಮಾರ  ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ. 

25 February 2013

GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಂದೆ-ತಾಯಿಯವರು ಕೂಲಿ ಕೆಲಸ ಹೋದ ವೇಳೆಯಲ್ಲಿ  ನಾನೋಬ್ಬಳೆ  ಮನೆಯಲ್ಲಿರುತ್ತಿರುವಾಗ ನನ್ನ ತಂದೆಯ ಸಹೋದರ ಮಾವನ ಮಗನಾದ ಶಿವಲಿಂಗ ತಂದೆ ದೇವಂದ್ರಪ್ಪ ಜುಮ್ಮಾನೋರ ಸಾ|| ಧೋಟಿಕೋಳ ಇತನು ನಮ್ಮ ಮನೆಗೆ ಬಂದು ನನಗೆ (ಹೆಸರು ಸೂಚಿಸಿರುವದಿಲ್ಲ) ಎರಡು (2) ತಿಂಗಳುಗಳಿಂದ ಜಬರ ದಸ್ತಿಯಿಂದ ಸಂಭೋಗ ಮಾಡುತ್ತಾ ಬಂದಿರುತ್ತಾನೆ. ಈ ವಿಷಯ ನನ್ನ ತಂದೆ-ತಾಯಿಯವರಿಗೆ ಹೇಳಿದರೆ ಬೈಯ್ಯುತ್ತಾರೆ ಅಂತಾ ತಿಳಿದು ಯಾರ ಹತ್ತಿರವು ಹೇಳಿರುವುದಿಲ್ಲ. ದಿನಾಂಕ:15-02-2013 ರಂದು ಮಧ್ಯಾಹ್ನ 3.00 ಗಂಟೆಗೆ ಮತ್ತೆ ನಾನೋಬ್ಬಳೇ  ಮನೆಯಲ್ಲಿದ್ದಾಗ ಶಿವಲಿಂಗ ಇತನು ತನ್ನ ಅಣ್ಣನ ಮನೆಗೆ ನನಗೆ ಕರೆದುಕೊಂಡು ಹೋಗಿ ನಾನು ಬೇಡ ಅಂದರು ಜಬರ ದಸ್ತಿಯಿಂದ ಸಂಭೋಗ ಮಾಡಿದನು. ದಿನಾಂಕ:23.02.2013 ರಂದು ಬೆಳೆಗ್ಗೆ ಸಮಯದಲ್ಲಿ ವಾಂತಿಯಾಗುತ್ತಿರುವದರಿಂದ ನನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋದಾಗ ವೈಧ್ಯಾಧಿಕಾರಿಗಳು ಗರ್ಭಿಣಿಯಿರುವ ಬಗ್ಗೆ ತಿಳಿಸಿರುತ್ತಾರೆ. ಈ ವಿಷಯ ಗುರು ಹಿರಿಯರಲ್ಲಿ ವಿಚಾರಿಸಿ ದೂರು ಕೊಡಲು ತಡವಾಗಿರುತ್ತದೆ ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:32/2013 ಕಲಂ,448,376 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ದಿನಾಂಕ:25.02.2013 ರಂದು ಮಧ್ಯಾಹ್ನ 12;50 ಗಂಟೆಯ ಸಮಯಕ್ಕೆ  ಕಾರ್ಪೊರೇಷನ್ ಬ್ಯಾಂಕಿನಿಂದ 9,50,000=00 ರೂಪಾಯಿಗಳು ಡ್ರಾ ಮಾಡಿಕೊಂಡು ಸರಾಫ ಬಜಾರದಲ್ಲಿ ತನ್ನ  ಸುಜಕಿ ಎಕ್ಸಸ್ ಮೊಟಾರ ಸೈಕಲ ಡಿಕ್ಕಿಯೊಳಗಡೆ ಇಟ್ಟು ಸರಾಫ ಬಜಾರದಲ್ಲಿರುವ ನನ್ನ ಸ್ನೇಹಿತನಾದ ನಾಗೇಂದ್ರ ಪಾಟೀಲ ಇವರ ಸಂಗಡ ಮಾತನಾಡಿ ಮರಳಿ ಬಂದು ನೋಡಲಾಗಿ ಡಿಕ್ಕಿಯೊಳಗಡೆ ಇಟ್ಟಿರುವ ಹಣ ಇರಲ್ಲಿಲ ಯಾರೋ ಕಳ್ಳರು ನನ್ನ ಸುಜಕಿ ಎಕ್ಸಸ ಡಿಕ್ಕಿಯೊಳಗಿನ 9 ಲಕ್ಷ 50 ಸಾವಿರ ರೂಪಾಯಿಗಳು ಹಾಗೂ ಅದರ ಜೋತೆಗಿದ್ದ ನಾಲ್ಕು ಚೆಕ್ಕ ಬುಕ್ಕ ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಬಸವರಾಜ ತಂದೆ ರೇವಪ್ಪಾ ಏರಿ ವಯಾ||45 ಉ|| ದಾಲ್ ಮಿಲ್ ವ್ಯಾಪಾರ್ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ ದೊಂಡಬಾಯಿ ಗಂಡ ಅಶೋಕ ಹೌಶೆಟ್ಟಿ ಸಾ:ದುದ್ದನಿ ತಾ:ಅಕ್ಕಲಕೋಟ ಜಿಲ್ಲಾ:ಸೋಲಾಪೂರ ರವರು ನನ್ನ ಗಂಡ ಅಶೋಕ ತಂದೆ ಸಾದಾಶಿವ ಹೌಶೆಟ್ಟಿ ಇವರು ತನ್ನ ಮೋಟರ್ ಸೈಕಲ್ ನಂ:ಎಮ್.ಹೆಚ್.15 ಎಟಿ-9700 ನೇದ್ದರ ಮೇಲೆ ತನ್ನ ಅಣ್ಣನ ಮಗನಾದ ಸೂರ್ಯಕಾಂತ ಇತನಿಗೆ ಕಾಮಣಿ ಔಷಧ ಹಾಕಿಕೊಂಡು ಬರಲು ದಿನಾಂಕ:24/02/2013 ರಂದು ಬೆಳಿಗ್ಗೆ ಹೋಗುತ್ತಿರುವಾಗ ಚಲಗೇರಾ ರಸ್ತೆಯಲ್ಲಿ ಅತೀವೇಗದಿಂದ ನಡೆಯಿಸಿ ನಿಂಬಾಳ ಕೆರೆಯ ಹತ್ತಿರ ತೆಗ್ಗಿನಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದು ಅಫಘಾತವಾಗಿ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಜೋತೆಗಿದ್ದ ಸೂರ್ಯಕಾಂತನಿಗೆ ಎಡಗೈಗೆ ಭಾರಿ ಪೆಟ್ಟಾಗಿರುತ್ತದೆ. ರಸ್ತೆಯಲ್ಲಿ ಬ್ರಿಡ್ಜ್ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ ಮತ್ತು ಇಂಜಿನಿಯರ ರವರು ಯಾವದೇ ಮುನ್ನೆಚ್ಛರಿಕೆಯ ಸೂಚನೆಯ ಫಲಕಗಳು ಹಾಕದೆ ಇರುವುದರಿಂದ ಅಫಘಾತ ಸಂಭವಿಸಿರುತ್ತದೆ ಅಂತಾ ಶ್ರೀಮತಿ ದೊಂಡಭಾಯಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2013 ಕಲಂ: 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:24-02-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬೀಮ್ಮಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ವಿಠಲ ಜಮಾದಾರ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಮಾಹಿತಿ ಬಂದ ಮೇರೆಗೆ  ಡಿಎಸ್‌ಪಿ ಗ್ರಾಮೀಣ ಉಪ-ವಿಭಾಗ ಮತ್ತು ಸಿಪಿಐ ಗ್ರಾಮೀಣ  ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಪಿ.ಎಸ.ಐ ಶ್ರೀ ಆನಂದರಾವ ರವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಮಹ್ಮದ ಶಫೀ ತಂದೆ ಚಾಂದಸಾಬ ಮಡಕಿ ಸಾ||ಭೀಮಳ್ಳಿ, ಸಂತೋಷ ತಂದೆ ಕಾಶಿನಾಥ ಪಾಟೀಲ ಸಾ: ಭೀಮಳ್ಳಿ, ಬಸವರಾಜ ತಂದೆ ರಾಜೇಂದ್ರ ಗುತ್ತೆದಾರ ಸಾ: ಭೀಮಳ್ಳಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 6150/- ರೂಪಾಯಿಗಳು ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 109/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.