POLICE BHAVAN KALABURAGI

POLICE BHAVAN KALABURAGI

25 February 2013

GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಂದೆ-ತಾಯಿಯವರು ಕೂಲಿ ಕೆಲಸ ಹೋದ ವೇಳೆಯಲ್ಲಿ  ನಾನೋಬ್ಬಳೆ  ಮನೆಯಲ್ಲಿರುತ್ತಿರುವಾಗ ನನ್ನ ತಂದೆಯ ಸಹೋದರ ಮಾವನ ಮಗನಾದ ಶಿವಲಿಂಗ ತಂದೆ ದೇವಂದ್ರಪ್ಪ ಜುಮ್ಮಾನೋರ ಸಾ|| ಧೋಟಿಕೋಳ ಇತನು ನಮ್ಮ ಮನೆಗೆ ಬಂದು ನನಗೆ (ಹೆಸರು ಸೂಚಿಸಿರುವದಿಲ್ಲ) ಎರಡು (2) ತಿಂಗಳುಗಳಿಂದ ಜಬರ ದಸ್ತಿಯಿಂದ ಸಂಭೋಗ ಮಾಡುತ್ತಾ ಬಂದಿರುತ್ತಾನೆ. ಈ ವಿಷಯ ನನ್ನ ತಂದೆ-ತಾಯಿಯವರಿಗೆ ಹೇಳಿದರೆ ಬೈಯ್ಯುತ್ತಾರೆ ಅಂತಾ ತಿಳಿದು ಯಾರ ಹತ್ತಿರವು ಹೇಳಿರುವುದಿಲ್ಲ. ದಿನಾಂಕ:15-02-2013 ರಂದು ಮಧ್ಯಾಹ್ನ 3.00 ಗಂಟೆಗೆ ಮತ್ತೆ ನಾನೋಬ್ಬಳೇ  ಮನೆಯಲ್ಲಿದ್ದಾಗ ಶಿವಲಿಂಗ ಇತನು ತನ್ನ ಅಣ್ಣನ ಮನೆಗೆ ನನಗೆ ಕರೆದುಕೊಂಡು ಹೋಗಿ ನಾನು ಬೇಡ ಅಂದರು ಜಬರ ದಸ್ತಿಯಿಂದ ಸಂಭೋಗ ಮಾಡಿದನು. ದಿನಾಂಕ:23.02.2013 ರಂದು ಬೆಳೆಗ್ಗೆ ಸಮಯದಲ್ಲಿ ವಾಂತಿಯಾಗುತ್ತಿರುವದರಿಂದ ನನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋದಾಗ ವೈಧ್ಯಾಧಿಕಾರಿಗಳು ಗರ್ಭಿಣಿಯಿರುವ ಬಗ್ಗೆ ತಿಳಿಸಿರುತ್ತಾರೆ. ಈ ವಿಷಯ ಗುರು ಹಿರಿಯರಲ್ಲಿ ವಿಚಾರಿಸಿ ದೂರು ಕೊಡಲು ತಡವಾಗಿರುತ್ತದೆ ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:32/2013 ಕಲಂ,448,376 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ದಿನಾಂಕ:25.02.2013 ರಂದು ಮಧ್ಯಾಹ್ನ 12;50 ಗಂಟೆಯ ಸಮಯಕ್ಕೆ  ಕಾರ್ಪೊರೇಷನ್ ಬ್ಯಾಂಕಿನಿಂದ 9,50,000=00 ರೂಪಾಯಿಗಳು ಡ್ರಾ ಮಾಡಿಕೊಂಡು ಸರಾಫ ಬಜಾರದಲ್ಲಿ ತನ್ನ  ಸುಜಕಿ ಎಕ್ಸಸ್ ಮೊಟಾರ ಸೈಕಲ ಡಿಕ್ಕಿಯೊಳಗಡೆ ಇಟ್ಟು ಸರಾಫ ಬಜಾರದಲ್ಲಿರುವ ನನ್ನ ಸ್ನೇಹಿತನಾದ ನಾಗೇಂದ್ರ ಪಾಟೀಲ ಇವರ ಸಂಗಡ ಮಾತನಾಡಿ ಮರಳಿ ಬಂದು ನೋಡಲಾಗಿ ಡಿಕ್ಕಿಯೊಳಗಡೆ ಇಟ್ಟಿರುವ ಹಣ ಇರಲ್ಲಿಲ ಯಾರೋ ಕಳ್ಳರು ನನ್ನ ಸುಜಕಿ ಎಕ್ಸಸ ಡಿಕ್ಕಿಯೊಳಗಿನ 9 ಲಕ್ಷ 50 ಸಾವಿರ ರೂಪಾಯಿಗಳು ಹಾಗೂ ಅದರ ಜೋತೆಗಿದ್ದ ನಾಲ್ಕು ಚೆಕ್ಕ ಬುಕ್ಕ ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಬಸವರಾಜ ತಂದೆ ರೇವಪ್ಪಾ ಏರಿ ವಯಾ||45 ಉ|| ದಾಲ್ ಮಿಲ್ ವ್ಯಾಪಾರ್ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ ದೊಂಡಬಾಯಿ ಗಂಡ ಅಶೋಕ ಹೌಶೆಟ್ಟಿ ಸಾ:ದುದ್ದನಿ ತಾ:ಅಕ್ಕಲಕೋಟ ಜಿಲ್ಲಾ:ಸೋಲಾಪೂರ ರವರು ನನ್ನ ಗಂಡ ಅಶೋಕ ತಂದೆ ಸಾದಾಶಿವ ಹೌಶೆಟ್ಟಿ ಇವರು ತನ್ನ ಮೋಟರ್ ಸೈಕಲ್ ನಂ:ಎಮ್.ಹೆಚ್.15 ಎಟಿ-9700 ನೇದ್ದರ ಮೇಲೆ ತನ್ನ ಅಣ್ಣನ ಮಗನಾದ ಸೂರ್ಯಕಾಂತ ಇತನಿಗೆ ಕಾಮಣಿ ಔಷಧ ಹಾಕಿಕೊಂಡು ಬರಲು ದಿನಾಂಕ:24/02/2013 ರಂದು ಬೆಳಿಗ್ಗೆ ಹೋಗುತ್ತಿರುವಾಗ ಚಲಗೇರಾ ರಸ್ತೆಯಲ್ಲಿ ಅತೀವೇಗದಿಂದ ನಡೆಯಿಸಿ ನಿಂಬಾಳ ಕೆರೆಯ ಹತ್ತಿರ ತೆಗ್ಗಿನಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದು ಅಫಘಾತವಾಗಿ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಜೋತೆಗಿದ್ದ ಸೂರ್ಯಕಾಂತನಿಗೆ ಎಡಗೈಗೆ ಭಾರಿ ಪೆಟ್ಟಾಗಿರುತ್ತದೆ. ರಸ್ತೆಯಲ್ಲಿ ಬ್ರಿಡ್ಜ್ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ ಮತ್ತು ಇಂಜಿನಿಯರ ರವರು ಯಾವದೇ ಮುನ್ನೆಚ್ಛರಿಕೆಯ ಸೂಚನೆಯ ಫಲಕಗಳು ಹಾಕದೆ ಇರುವುದರಿಂದ ಅಫಘಾತ ಸಂಭವಿಸಿರುತ್ತದೆ ಅಂತಾ ಶ್ರೀಮತಿ ದೊಂಡಭಾಯಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2013 ಕಲಂ: 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:24-02-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬೀಮ್ಮಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ವಿಠಲ ಜಮಾದಾರ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಮಾಹಿತಿ ಬಂದ ಮೇರೆಗೆ  ಡಿಎಸ್‌ಪಿ ಗ್ರಾಮೀಣ ಉಪ-ವಿಭಾಗ ಮತ್ತು ಸಿಪಿಐ ಗ್ರಾಮೀಣ  ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಪಿ.ಎಸ.ಐ ಶ್ರೀ ಆನಂದರಾವ ರವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಮಹ್ಮದ ಶಫೀ ತಂದೆ ಚಾಂದಸಾಬ ಮಡಕಿ ಸಾ||ಭೀಮಳ್ಳಿ, ಸಂತೋಷ ತಂದೆ ಕಾಶಿನಾಥ ಪಾಟೀಲ ಸಾ: ಭೀಮಳ್ಳಿ, ಬಸವರಾಜ ತಂದೆ ರಾಜೇಂದ್ರ ಗುತ್ತೆದಾರ ಸಾ: ಭೀಮಳ್ಳಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 6150/- ರೂಪಾಯಿಗಳು ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 109/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

24 February 2013

GULBARGA DISTRICT REPORTED CRIMES


ಬಂಗಾರದ ಆಭರಣ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:22/02/2013 ರಂದು ಮಧ್ಯಾಹ್ನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗುವ ಕುರಿತು ನನ್ನ ತಾಯಿಯವರು ತಯ್ಯಾರಾಗುವ ಕುರಿತು ಬಂಗಾರದ ಆಭರಗಣಗಳು  ಟೇಬಲ್ ಮೇಲಿಟ್ಟಿದ್ದು, ನಮ್ಮ ಮನೆಯಲ್ಲಿ ಕೆಲಸ ಮಾಡುವ ಪಾರ್ವತಿ ಗಂಡ ರೇವಣಸಿದ್ದಪ್ಪಾ ಇವಳ ಮಗಳಾದ ಸಿದ್ದಮ್ಮಾ  ಇವರು ಮನೆಗೆ ಬಂದಿದ್ದಳು. ನನ್ನ ತಾಯಿಯವರದ ಬಂಗಾರದ ಮಂಗಳಸೂತ್ರ  7.5 ತೊಲೆ ಅ:ಕಿ: 2,25,000/-  ರೂ., ಒಂದು ಉಂಗುರ 0.5 ತೊಲೆ ಅ:ಕಿ: 15000/- ರೂ. ಒಂದು ಹರಳಿನ ಉಂಗುರ 0.5 ತೊಲೆ ಅ:ಕಿ: 15,000/- ರೂ. ಮತ್ತು ನಗದು ಹಣ 1700/- ರೂಪಾ ಇರುವ ಪಾಕೇಟ ಹೀಗೆ ಒಟ್ಟು 2,56,700/- ರೂಪಾ ಮೌಲ್ಯದ ಬಂಗಾರದ ಆಭರಣಗಳು ಮತ್ತು ಟೇಬಲ್ ಮೇಲಿಟ್ಟಿರುವವು  ಕಳ್ಳತನವಾಗಿರುತ್ತವೆ. ಮನೆ ಕೆಲಸದವಳಾದ ಪಾರ್ವತಿ ಗಂಡ ರೇವಣಸಿದ್ದಪ್ಪಾ ಮತ್ತು ಅವಳ ಮಗಳಾದ ಸಿದ್ದಮ್ಮಾ ರವರ ಮೇಲೆ ಸಂಶಯ ಇರುತ್ತದೆ. ನಾವು ಅವರಿಗೆ ವಿಚಾರಣೆ ಮಾಡಿದಾಗ ಕಲ್ಲಿನಲ್ಲಿ ಮುಚ್ಚಿಟ್ಟಿರುವುದಾಗಿ ತಿಳಿಸಿದ್ದರಿಂದ ನಾವು ಅವರಿಗೆ ಕರೆದುಕೊಂಡು ಹುಡುಕಿದರು ಸಹ ಸಿಕ್ಕಿರುವುದಿಲ್ಲಾ ಅಂತಾ ಶ್ರೀ, ಸೊಮನಾಥ ತಂದೆ ಬಾಬುರಾವ ಮಾಲಿ ಪಾಟೀಲ ಉ: ಉಪನ್ಯಾಸಕ ಸಾ:ನೇತಾಜಿ ನಗರ ನವಣೆ ಲೇಔಟ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.28/2013 ಕಲಂ 381 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀಮತಿ ಖೈರೂನಾ ತಿಜ್ವಾನ ಗಂಡ ಸೈಯದ್ ಅಯೂಬ್ ಸಾ: ಧಖನ ಮಹೊಲ್ಲಾ  ಶೋರಾಪೂರ ಹಾ:ವ:ಮಿಜಗುರಿ ರೋಜಾ ಗುಲಬರ್ಗಾ ರವರು ನಮ್ಮ ಸ್ವಂತ ಊರು ಸುರಪೂರ ಪಟ್ಟಣವಾಗಿದ್ದು ನನ್ನ ಗಂಡನಾದ ಸೈಯದ್ ಅಯೂಬ್ ಇತನು ಸುರಪೂರದ ತಾಲೂಕಾ ಮುನ್ಸಿಪಾಲ ಕಛೇರಿಯಲ್ಲಿ ಫೀಟರ ಅಂತಾ ಕೆಲಸ ಮಾಡುತ್ತಿದ್ದು, ದಿನಾಂಕ:23/2/2013 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಗಂಡನ ಮೊಬೈಯಲ್‌‌ದಿಂದ ಯಾರೋ ಪೋನ ಮಾಡಿ ಈ ಪೋನ ಯಾರದು ಎಂದು ಕೇಳಿದಾಗ ಇದು ನನ್ನ ಗಂಡ ಸೈಯದ್ ಅಯೂಬ್ ಇತನದು ಇದ್ದು, ಇವನು ಸುರಪೂರದಲ್ಲಿ ಮುನ್ಸಿಪಾಲ ಕಛೆರಿಯಲ್ಲಿ ಕೆಲಸ ಮಾಡುತ್ತಾನೆ ಏನಾಗಿದೆ ಅಂತಾ ಕೇಳಿದಾಗ ಅವರು ಹಿರೋಹೊಂಡಾ ನಂಬರ ಕೆಎ-33 ಜೆ-571 ನೇದ್ದರ ಮೇಲೆ ಫಿರೋಜಾಬಾದ ದರ್ಗಾದ ಹತ್ತಿರ ಜೇವರ್ಗಿ ಕಡೆಯಿಂದ ಅತಿವೇಗ ಹಾಗೂ ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಎದುರಿಗೆ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಪಡಿಸಿ ಕೆಳಗೆ ಬಿದ್ದಿದರಿಂದ ತಲೆಗೆ ಹಾಗೂ ಮೆಲಿಕಿನ ಹತ್ತಿರ ಭಾರಿ ಪೆಟ್ಟಾಗಿದ್ದು, ಉಪಚಾರ ಕುರಿತು 108  ವಾಹನದಲ್ಲಿ ಉಪಚಾರಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಗೊಂಡು ನನ್ನ ಭಾವ ಸೈಯದ ಯೂನಸ ಹಾಗೂ ಇತರರು ಕೂಡಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ಸೈಯದ ಅಯೂಬ್ ಇತನಿಗೆ ಪರೀಕ್ಷಿಸಿದ ವೈಧ್ಯಾಧಿಕಾರಿಗಳು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನನ್ನ ಗಂಡನಿಗೆ ಬಲಭಾಗದ ಮೆಲಕಿನ ಹತ್ತಿರ ಹಣೆಗೆ ತೆರಚಿದ ಗಾಯವಾಗಿದ್ದು ಎದೆಯ ಮಧ್ಯ ಭಾಗದಲ್ಲಿ ಭಾರಿ ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಖೈರೂನಾ ತಿಜ್ವಾನ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:24/2013 ಕಲಂ, 279, 304 (ಎ) ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸಂಜೀವಕುಮಾರ ತಂದೆ ಅಪ್ಪಾರಾವ ಚಾಮನಳ್ಳಿ ಸಾ:ದೇವನತೆಗನೂರ ರವರು ನಾನು ನನ್ನ ಡಿಸ್ಕವರಿ ಮೋಟಾರ ಸೈಕಲ ನಂ.ಕೆಎ-32/ವಾಯ-7736 ನೇದ್ದರ ಮೇಲೆ ನನ್ನ ಗೆಳೆಯನಾದ ಮಲ್ಲಿಕಾರ್ಜುನ ಕೂಡಿಕೊಂಡು ಗುಲಬರ್ಗಾಕ್ಕೆ ಹೋಗುವ ಸಲುವಾಗಿ ಹೋರಟಾಗ ದೇವನ ತೆಗನೂರ ಸಮೀಪ ಹೋಗುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಲಾರಿ ನಂ.ಎಮ್‌ಹೆಚ್‌-25/ಯು-1671 ನೇದ್ದರ ಚಾಲಕನಾದ ದತ್ತಾತ್ರಯ ತಂದೆ ಪಾರಪ್ಪಾ ಸಾ:ಕಸಗಿ ತಾ:ಉರ್ಮಗಾ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ರಕ್ತಗಾಯವಾಗಿದೆ ಮತ್ತು ಮಲ್ಲಿಕಾರ್ಜುನನಿಗೆ ಭಾರಿ ಒಳಪೆಟ್ಟಾಗಿರುತ್ತದೆ ಅಂತಾ ಸಂಜೀವಕುಮಾರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:26/2013 ಕಲಂ:279,337,338 ಐಪಿಸಿ ಸಂ;187 ಐಎಮ್‌ವಿ ಆಕ್ಟ್‌  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಸ್ತಿಗಾಗಿ ಕೊಲೆಗೆ ಪ್ರಯತ್ನ :
ಮಹಾಗಾಂವ ಪೊಲೀಸ್ ಠಾಣೆ: ಶಿವಲಾಲ ತಂದೆ ಕಲ್ಯಾಣಸಿಂಗ ಠಾಕೂರ ವ|| 75 ಸಾ|| ಚೆಟ್ನಳಿ ತಾ||ಜಿ|| ಬೀದರ ರವರು ಶಿರಗಾಪೂರ ಗ್ರಾಮದಲ್ಲಿರುವ ನನ್ನ ಮಗಳಾದ ಚಂದ್ರಕಲಾ ಇವಳಿಗೆ ಅವಳ ಅತ್ತೆ ಸುಂದರಬಾಯಿ ನಾದನಿ ಲಲಿತಾ ಮೈದುನ ರಾಜು @ ರಾಜೇಂದ್ರ ಇವರು ಅಸ್ತಿ ವಿಷಯದ ಸಂಬಂ ಕೊಲೆ ಕೋಲೆ ಮಾಡುವ ಉದ್ದೇಶದಿಂದ ದಿ||22/02/13 ರಂದು ಸಾಯಂಕಾಲ 4-30 ಗಂಟೆಗೆ ಮೈಮೇಲೆ ಸೀಮೆ ಎಣ್ಣಿ ಸುರಿದು ಬೆಂಕಿ ಹಚ್ಚಿದರಿಂದ ಅವಳ ಹೊಟ್ಟೆ,ಎದೆ, ಬೆನ್ನು ಕೈಕಾಲುಗಳು ಸುಟ್ಟು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾಳೆ. ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.