POLICE BHAVAN KALABURAGI

POLICE BHAVAN KALABURAGI

06 January 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀ ಶಾಂತಪ್ಪ ತಂದೆ ಅಂಬಣ್ಣ ಬಜಂತ್ರಿ ಸಾ||ಜೋಗುರ ತಾ|ಜಿ|ಗುಲಬರ್ಗಾರವರು ನನಗೆ 5 ಜನ ಮಕ್ಕಳಿದ್ದು ಲಕ್ಷ್ಮಣ ಇತನು ಬ್ಯಾಂಡ ಬಾರಿಸುವ ಕೆಲಸ ಮಾಡುತ್ತಾ ಗುಲಬರ್ಗಾದಲ್ಲಿ ವಾಸವಿರುತ್ತಾನೆ. ಲಕ್ಷ್ಮಣ ಇತನು ರಾಜು ಇತನಿಗೆ ಕೊಡಬೇಕಾದ 300 ರೂ. ಹಣ ಕೊಡುವ ವಿಷಯದಲ್ಲಿ ಓಣಿಯ ಹುಡುಗರಾದ ರಾಜು ಇತನ ಸಂಗಡ ಸಿದ್ದು @ ಸಿದ್ಯಾ ಮತ್ತು ಲಕ್ಷ್ಮಣ ರವರು ಕೂಡಿ ಲಕ್ಷ್ಮಣ ಇತನಿಗೆ ಗುಲಬರ್ಗಾದ ಶೇಟ್ಟಿ ಕಾಂಪ್ಲೇಕ್ಸ ಎದುರುಗಡೆ ಇರುವ ವೆಂಕಟೇಶ್ವರ ಬೆಂಗಳೂರ ಬೇಕರಿ ಪಕ್ಕದಲ್ಲಿ ಕರೆದುಕೊಂಡು ಹೋಗಿ 300 ರೂ. ಕೊಟ್ಟಿರುವದಿಲ್ಲ ಅಂತ ಬೈದು, ಸಿದ್ದು ಮತ್ತು ಲಕ್ಷ್ಮಣ ರವರು ಕೂಡಿ ಬಡಿಗೆಯಿಂದ ಹೊಡೆಬಡೆ ಮಾಡಿ ನಂತರ ಅಲ್ಲೆ ಪಕ್ಕದಲ್ಲಿ ಮುಚ್ಚಿರುವ ಪೆಟ್ರೋಲ ಪಂಪದ ಕಂಪೌಂಡದ ಹಿಂದುಗಡೆ ಇರುವ ಸರಕಾರಿ ಜಾಲಿ ಕಂಟಿಯಲ್ಲಿ 3 ಜನರು ಕೂಡಿ ಎತ್ತಿಕೊಂಡು ಹೋಗಿ ಲಕ್ಷ್ಮಣ ಇತನಿಗೆ ರಾಜು ಮತ್ತು ಲಕ್ಷ್ಮಣ ರವರು ಕೂಡಿ ಬಡಿಗೆಯಿಂದ ಹೊಡೆದಾಗ ಆತನು ನೆಲಕ್ಕೆ ಬಿದ್ದಾಗ ಸಿದ್ದು ಇತನು ಅಲ್ಲೆ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ತಲೆಯ ಮೇಲೆ ಎತ್ತಿಹಾಕಿದ್ದರಿಂದ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 07/2013  ಕಲಂ 341,504,302 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ಚೌಕ ಪೊಲೀಸ್ ಠಾಣೆ:ಶ್ರೀ  ಅರವಿಂದ ತಂದೆ ಶಂಕರರಾವ ಚಿಕ್ಕನಾಗಾಂವ ಸಾ||ಸಂತೋಷ ಕಾಲೋನಿ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ ರವರು ನನ್ನ ತಂದೆಯಾದ ಶಂಕರರಾವ ಇವರು ಮೋಟಾರ ಸೈಕಲ ನಂ. ಕೆಎ-32-ವಿ-7260 ನೇದ್ದರ ಮೇಲೆ ಹೊರಟಾಗ  ಸಂತೋಷ ಕಾಲೋನಿಯ ಕ್ರಾಸ ಹತ್ತಿರ ರಸ್ತೆಯ ಮೇಲೆ ಸಮಯ ರಾತ್ರಿ 11.30 ಗಂಟೆಗೆ ಯಾರೋ ಅಪರಿಚಿತ 3 ಜನರು ನಿಲ್ಲಿಸಿ  ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಕುತ್ತಿಗೆಗೆ, ಹೊಟ್ಟೆಗೆ ಹೋಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆಯ  ಗುನ್ನೆ ನಂ. 08/2013 ಕಲಂ 341,307 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

05 January 2013

GULBARGA DISTRICT


-: ಪೊಲೀಸ್ ಪ್ರಕಟಣೆ:-

          ದಿನಾಂಕ:01-01-2013 ರಿಂದ 07-01-2013 ರವರಗೆ 24 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸುತ್ತಿದ್ದು, ಈ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ:07-01-2013 ರಂದು ಸೋಮವಾರ ಬೆಳಿಗ್ಗೆ 06-30 ಗಂಟೆಗೆ ಎಸ್.ವಿ.ಪಟೇಲ ವೃತ್ತದಿಂದ ಜಗತ್ ವೃತ್ತದವರೆಗೆ (1.5 ಕಿ.ಮಿ) ರಸ್ತೆ ಓಟದ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾಧಿಕಾರಿ ಗುಲಬರ್ಗಾರವರು ಚಾಲನೆ ನೀಡಲಿದ್ದಾರೆ. ಸದರಿ ರಸ್ತೆಯ ಓಟದ ಸ್ಪರ್ಧೆಯನ್ನು 18 ವರ್ಷ ಮೇಲ್ಪಟ್ಟ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಈ ರಸ್ತೆ ಓಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳು ನೀಡಲಾಗುವುದು. ಈ ಸ್ಪರ್ಧೆಗೆ  ಶಾಲಾ ಕಾಲೇಜ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಮೇಲ್ಕಂಡ ದಿನಾಂಕ ಹಾಗೂ ಸಮಯಕ್ಕೆ ಎಸ್.ವಿ ಪಟೇಲ ವೃತ್ತಕ್ಕೆ ಬಂದು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಅಂತ ಸಾರ್ವಜನಿಕರಲ್ಲಿ ಕೋರಲಾಗಿದೆ.                                                                                                                     
                                             ಎಸ್.ಪಿ.ಗುಲಬರ್ಗಾರವರಿಂದ

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ಶ್ರೀ, ವೇಂಕಟೇಶ್ವರ ರಾವ್ ತಂದೆ ಕಷ್ಣಾ ಕಟಿಪುಡಿ ಸಾ|| ತನುಕು ಗ್ರಾಮ ಜಿ|| ಪಶ್ಚಿಮ ಗೋದಾವರಿ  ಆಂದ್ರ ಪ್ರದೇಶ  ಹಾ|| || ವಿಧ್ಯಾ ನಗರ ಸೇಡಂ ರವರು ನಾನು ದಿನಾಂಕ:೦5/೦1/2೦13 ರಂದು ಮುಂಜಾನೆ ಕಂಪನಿಯ ಕೆಲಸಕ್ಕೆ ಗಾಡಿ ನಂ ಕೆಎ-32 ಬಿ-1406 ನೇದ್ದರಲ್ಲಿ ನನ್ನ ಜೋತೆಗಾರ ಕೆಲಸಗಾರರೊಂದಿಗೆ ಕೆಲಸಕ್ಕೆ ಹೋರಟಾಗ, ಸದರಿ ಗಾಡಿ ಚಾಲಕನಾದ ಬಸವರಾಜ ತಂದೆ ಶಿವಪ್ಪಸಾ|| ಕೋನಾಚಪಲ್ಲಿ ಇತನು ಗಾಡಿಯನ್ನು ಅತಿ ವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತ ಸೇಡಂ ಗುಲಬರ್ಗಾ ರೋಡಿನಲ್ಲಿ ಹೂಡಾ (ಕೆ) ಬ್ರೀಡ್ಜ ಹತ್ತಿರ ರೋಡಿನ ತಗ್ಗಿನಲ್ಲಿ ಅಪಘಾತ ಪಡಿಸಿದ್ದು, ಆಗ ನನಗೆ ಮತ್ತು ಇನ್ನಿಬರಿಗೆ ಸಾಧಾರಣ ಗಾಯಗಳಾಗಿದ್ದು, ಸುಚಿತಸಿಂಗ್ ತಂದೆ ಬಬನ್‌ಸಿಂಗ ಸಾ|| ಅರಕತೋಂಡಿಯಾ ಜಿ|| ಗೋಂಡಿಯಾ (ಮಾಹಾರಾಷ್ಟ) ರಾಜ್ಯದವನು ಮೃತಪಟ್ಟಿರುತ್ತಾನೆ. ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:01/2013 ಕಲಂ, 279, 337, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

ಮನುಷ್ಯ ಕಾಣೆಯಾದ ಬಗ್ಗೆ:
ಚೌಕ ಪೊಲೀಸ್ ಠಾಣೆ: ಶ್ರೀ ಶರಣಪ್ಪ ತಂದೆ ಗುಂಡಪ್ಪ ಭೂಸಾರೆ ಸಾ|| ಹರಸೂರ  ತಾ||ಜಿ|| ಗುಲಬರ್ಗಾ ರವರು ನಾನು ನನ್ನ ಅಣ್ಣನಾದ ವಿಶ್ವನಾಥ ಇತನು ಗುಲಬರ್ಗಾ ನಗರದ  ಶಿವಾಜಿ ನಗರ ಬಡಾವಣೆಯ ಸ್ವಂತ ಮನೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ:31.12.2012 ರಂದು  ರಾತ್ರಿ ನನ್ನ ತಮ್ಮ ಕರಬಸಪ್ಪ ನನಗೆ ಫೋನ ಮಾಡಿ ಅಣ್ಣ ವಿಶ್ವನಾಥನು ಇಂದು ಬೆಳಗಿನ ಜಾವ 4.30 ಗಂಟೆಗೆ ಮನೆಯಿಂದ ಹೋದವನು ಮರಳಿ ಬಂದಿಲ್ಲ ಅಂತಾ ತಿಳಿಸಿದ್ದರಿಂದ ನಾವು  ಎಲ್ಲ ಕಡೆ ಹುಡಕಾಡಲಾಗಿ  ಪತ್ತೆಯಾಗಿರುವದಿಲ್ಲ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 04/2013 ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಕಾಣೆಯಾದ  ಮನುಷ್ಯನ ಚಹರೆ ಪಟ್ಟಿ  ಈ ರೀತಿಯಾಗಿದೆ. ಹೆಸರು-ವಿಶ್ವನಾಥ, ವಯಸ್ಸು-38 ವರ್ಷ,ಎತ್ತರ   -5 ಫೀಟ  6 ಇಂಚು,ಜಾತಿ-ಲಿಂಗಾಯತ, ತಳ್ಳನೆಯ ಮೈಕಟ್ಟುಗೋದಿ ಬಣ್ಣನೀಟಾದ ಮೂಗುಎತ್ತರವಾದ ಹಣೆದುಂಡು ಮುಖ,ಬಿಳಿಯ ಬಣ್ಣದ ಪ್ಯಾಂಟಬಿಳಿ ಬಣ್ಣದ ಫೂಲ್ ಶರ್ಟ ಧರಿಸಿರುತ್ತಾನೆ , ಕನ್ನಡಹಿಂದಿ  ಭಾಷೆ ಬಲ್ಲವನಾಗಿರುತ್ತಾನೆ ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂ ಗುಲಬರ್ಗಾ ದೂ: ಸಂ:  08472-263604 ಅಥವಾ 100/ ಪಿಐ ಚೌಕ ಮೊಬಾಯಿಲ್ ನಂ:9480803538 ಅಥವಾ ಚೌಕ ಪೊಲೀಸ್ ಠಾಣೆ ದೂ:08472-263621 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.