ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ಶ್ರೀ, ವೇಂಕಟೇಶ್ವರ ರಾವ್ ತಂದೆ
ಕಷ್ಣಾ ಕಟಿಪುಡಿ ಸಾ|| ತನುಕು ಗ್ರಾಮ ಜಿ|| ಪಶ್ಚಿಮ ಗೋದಾವರಿ ಆಂದ್ರ ಪ್ರದೇಶ ಹಾ|| ವ|| ವಿಧ್ಯಾ ನಗರ ಸೇಡಂ ರವರು ನಾನು ದಿನಾಂಕ:೦5/೦1/2೦13
ರಂದು ಮುಂಜಾನೆ ಕಂಪನಿಯ ಕೆಲಸಕ್ಕೆ ಗಾಡಿ ನಂ ಕೆಎ-32 ಬಿ-1406 ನೇದ್ದರಲ್ಲಿ ನನ್ನ ಜೋತೆಗಾರ ಕೆಲಸಗಾರರೊಂದಿಗೆ
ಕೆಲಸಕ್ಕೆ ಹೋರಟಾಗ, ಸದರಿ ಗಾಡಿ ಚಾಲಕನಾದ ಬಸವರಾಜ ತಂದೆ ಶಿವಪ್ಪಸಾ|| ಕೋನಾಚಪಲ್ಲಿ ಇತನು ಗಾಡಿಯನ್ನು
ಅತಿ ವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತ ಸೇಡಂ ಗುಲಬರ್ಗಾ ರೋಡಿನಲ್ಲಿ ಹೂಡಾ (ಕೆ) ಬ್ರೀಡ್ಜ
ಹತ್ತಿರ ರೋಡಿನ ತಗ್ಗಿನಲ್ಲಿ ಅಪಘಾತ ಪಡಿಸಿದ್ದು, ಆಗ ನನಗೆ ಮತ್ತು ಇನ್ನಿಬರಿಗೆ ಸಾಧಾರಣ
ಗಾಯಗಳಾಗಿದ್ದು, ಸುಚಿತಸಿಂಗ್ ತಂದೆ ಬಬನ್‌ಸಿಂಗ ಸಾ|| ಅರಕತೋಂಡಿಯಾ ಜಿ|| ಗೋಂಡಿಯಾ (ಮಾಹಾರಾಷ್ಟ) ರಾಜ್ಯದವನು ಮೃತಪಟ್ಟಿರುತ್ತಾನೆ. ಸದರಿ ಚಾಲಕನ
ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:01/2013
ಕಲಂ, 279, 337, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಬಗ್ಗೆ:
ಚೌಕ ಪೊಲೀಸ್ ಠಾಣೆ: ಶ್ರೀ ಶರಣಪ್ಪ ತಂದೆ ಗುಂಡಪ್ಪ ಭೂಸಾರೆ ಸಾ|| ಹರಸೂರ ತಾ||ಜಿ|| ಗುಲಬರ್ಗಾ ರವರು ನಾನು ನನ್ನ ಅಣ್ಣನಾದ ವಿಶ್ವನಾಥ ಇತನು ಗುಲಬರ್ಗಾ ನಗರದ ಶಿವಾಜಿ ನಗರ ಬಡಾವಣೆಯ ಸ್ವಂತ ಮನೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ:31.12.2012 ರಂದು ರಾತ್ರಿ ನನ್ನ ತಮ್ಮ ಕರಬಸಪ್ಪ ನನಗೆ ಫೋನ ಮಾಡಿ ಅಣ್ಣ ವಿಶ್ವನಾಥನು ಇಂದು ಬೆಳಗಿನ ಜಾವ 4.30 ಗಂಟೆಗೆ ಮನೆಯಿಂದ ಹೋದವನು ಮರಳಿ ಬಂದಿಲ್ಲ ಅಂತಾ ತಿಳಿಸಿದ್ದರಿಂದ ನಾವು ಎಲ್ಲ ಕಡೆ ಹುಡಕಾಡಲಾಗಿ ಪತ್ತೆಯಾಗಿರುವದಿಲ್ಲ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 04/2013 ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಕಾಣೆಯಾದ ಮನುಷ್ಯನ ಚಹರೆ ಪಟ್ಟಿ ಈ ರೀತಿಯಾಗಿದೆ. ಹೆಸರು-ವಿಶ್ವನಾಥ, ವಯಸ್ಸು-38 ವರ್ಷ,ಎತ್ತರ -5 ಫೀಟ 6 ಇಂಚು,ಜಾತಿ-ಲಿಂಗಾಯತ, ತಳ್ಳನೆಯ ಮೈಕಟ್ಟು, ಗೋದಿ ಬಣ್ಣ, ನೀಟಾದ ಮೂಗು, ಎತ್ತರವಾದ ಹಣೆ, ದುಂಡು ಮುಖ,ಬಿಳಿಯ ಬಣ್ಣದ ಪ್ಯಾಂಟ, ಬಿಳಿ ಬಣ್ಣದ ಫೂಲ್ ಶರ್ಟ ಧರಿಸಿರುತ್ತಾನೆ , ಕನ್ನಡ, ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂ ಗುಲಬರ್ಗಾ ದೂ: ಸಂ: 08472-263604 ಅಥವಾ 100/ ಪಿಐ ಚೌಕ ಮೊಬಾಯಿಲ್ ನಂ:9480803538 ಅಥವಾ ಚೌಕ ಪೊಲೀಸ್ ಠಾಣೆ ದೂ:08472-263621 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
No comments:
Post a Comment