POLICE BHAVAN KALABURAGI

POLICE BHAVAN KALABURAGI

04 November 2012

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಕು|| ಪ್ರಿಯಾಂಕ ತಂದೆ ಚಂದ್ರಕಾಂತ  ಚೌಧರಿ ಸಾ: ಹೌಸಿಂಗ ಬೋರ್ಡ ಕಾಲೋನಿ  ಒಕ್ಕಲಗೇರಾ ಗಂಜ ರೋಡ ಗುಲಬರ್ಗಾ ರವರು ನಾನು ದಿನಾಂಕ 03-11-12 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂಬರ ಕೆಎ-32 ಡಬ್ಲೂ-4004 ನೇದ್ದರ ಮೇಲೆ ಭಾಗ್ಯಶ್ರೀ ಇವಳನ್ನು ನನ್ನ ಹಿಂದುಗಡೆ ಕೂಡಿಸಿಕೊಂಡು ಎಸ್.ಬಿ ಕಾಲೇಜ ದಿಂದ ಆನಂದ ಓಪಿ ಕಡೆಗೆ ಬರುವಾಗ ಜಾಜಿ ಪೆಟ್ರೋಲ ಪಂಪ ಎದರು ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಯು-203 ನೇದ್ದರ ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ  ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು  ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 110/2012 ಕಲಂ, 279,337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ದೀಪಕ ಶೇಟ್ಟಿ  ತಂದೆ ಸದಾಶಿವ ರತ್ನಾಹೊನ್ನಾ   ಉ: ಫುಡ ಇನ್ಸಪೆಕ್ಟರ  ಸಾ:ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಗುಲಬರ್ಗಾರವರು  ನಾನು ದಿನಾಂಕ 03-11-12ರಂದು ರಾತ್ರಿ 10-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂಬರ ಕೆಎ-32 ಕ್ಯೂ-7636 ನೇದ್ದರ ಮೇಲೆ ಲಾಲಗೇರಿ ಕ್ರಾಸ್ ದಿಂದ ಗೋವಾ ಹೊಟೇಲ ಕಡೆಗೆ ಬರುವಾಗ ಹನುಮಾನ ಟೆಂಪಲ್ ಎದರು ರೋಡಿನ ಮೇಲೆ ಅಟೋರೀಕ್ಷಾ ನಂ:ಕೆಎ-32 -7733 ರ ಚಾಲಕನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ  ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ   ಅಟೋರೀಕ್ಷಾ  ಸ್ಥಳದಲ್ಲಿ ಬಿಟ್ಟು  ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 111/2012 ಕಲಂ, 279,337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ದೇವಲಗಾಣಗಾಪುರ  ಪೊಲೀಸ್ ಠಾಣೆ:ಶ್ರೀ ಮಲ್ಲಿಕಾರ್ಜುನ  ತಂದೆ ಶಿವಶರಣಪ್ಪ ಕಲಬುರ್ಗಿ  ಸಾ|| ಕಾವೇರಿನಗರ ಗುಲಬರ್ಗಾ ರವರು ಚವಡಾಪೂರ ಗ್ರಾಮ ಸರ್ವೆ ನಂ.12 ಕಾತಾ ನಂ. 424 ನೇದ್ದರಲ್ಲಿ ವೋಡಾಪೋನ ಟವರ ನೇದ್ದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24 ಬ್ಯಾಟ್ರಿಗಳು ಅ:ಕಿ: 24,000=00 ಕಿಮ್ಮತಿನದು ಮತ್ತು ಚವಡಾಪೂರ ಕ್ರಾಸ ಹತ್ತಿರ ಬಸವರಾಜ ತಳವಾರ ಇವರ ನಿವೇಶನದಲ್ಲಿ ನಿರ್ಮಸಿದಿ ಏರಟೇಲ ಟವರ ನೇದ್ದರಲ್ಲಿ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24  ಬ್ಯಾಟ್ರಿಗಳು ಅ:ಕಿ: 24,000=00 ಕಿಮ್ಮತ್ತಿನವು ದಿನಾಂಕ: 04-11-2012 ರಂದು ಮಧ್ಯರಾತ್ರಿ 1-00 ಗಂಟೆಯಿಂದ 5-00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು  48 ಬ್ಯಾಟರಿಗಳು ಅ||ಕಿ|| 48,000/- ರೂ ನೇದ್ದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:128/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ ಒಂದು ಸಾವು:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸುಭಾಷ ತಂದೆ ದೇವಲಾ ರಾಠೋಡ ವ: 40 ಜಾ:ಲಂಬಾಣಿ ಉ: ಖಣಿಕೆಲಸ ಸಾ:ಲಕ್ಷ್ಮಿಪೂರವಾಡಿ ತಾ:ಚಿತ್ತಾಫೂರ ರವರು ನಾನು ಮತ್ತು ಕಿಶನ ಕೂಡಿಕೊಂಡು ದಿನಾಂಕ:03-11-2012 ರಂದು ಖಣಿ ಕೆಲಸಕ್ಕೆ ಹೋಗಿದ್ದು, ಮಾಲಗತ್ತಿ ಗ್ರಾಮದ ನಾಗರಾಜ ಹಡಪದ ರವರ ಹೊಟೇಲದಲ್ಲಿ ಚಹಾ ಕುಡಿದು ಎಡಗಡೆ ರಸ್ತೆಯ ಬದಿಗೆ ಹೋಗುತ್ತಿರುವಾಗ  ಮುಂಜಾನೆ 9-30 ಗಂಟೆ ಸುಮರಿಗೆ ವಾಡಿ ಕಡೆಯಿಂದ ಒಂದು ಮಿನಿ ಗೂಡ್ಸ್ ಅಪೈ ಟ್ರಾಕ್ ನಂ: ಕೆಎ- 32 ಬಿ- 2727 ನೇದ್ದರ ಚಾಲಕನಾದ ಮಹೇಶ ಇತನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಕಿಶನ ಇತನಿಗೆ ಡಿಕ್ಕಿ ಹೊಡೆದರಿಂದ ಕಿಶನ ಇತನು ಕೆಳಗೆ ಬಿದ್ದನ್ನು. ಅದರಿಂದ ಅವನಿಗೆ ಎದೆಗೆ, ಎಡ ಮತ್ತು ಬಲಗೈಗೆ ಬಾರಿ ಒಳಪೆಟ್ರಾಗಿ ರಕ್ತಗಾವ ವಾಗಿದ್ದು ಪ್ರಜ್ಞೆ ತಪ್ಪಿ ಬಿದ್ದಾಗ ನಾನು ಮತ್ತು ಅಲ್ಲಿಯ ಜನರು ಕೂಡಿ ಕೊಂಡು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ರಾವೂರ ಕ್ಕೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದೇವು. ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ. ಚಾಲಕ ಮಹೇಶ  ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 139/2012  ಕಲಂ:279 304 [ಎ] ಐಪಿಸಿ ಸಂ: 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ಕುಡಕಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೆರೆಗೆ ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆರವರು ಮತ್ತು ಸಿಬ್ಬಂದಿಯವರಾದ ಹಜರತ ಅಲಿ, ಭೀಮಾಶಂಕರ, ಭೀಮಾಶಂಕರ ಶಿವಶರಣ ರವರುಗಳೆಲ್ಲರೂ ಕೂಡಿಕೊಂಡು  ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಶ್ರೀಕಾಂತ ತಂದೆ ಅಪ್ಪಾಸಾಬ ಪಾಟೀಲ ವ|| 42 ವರ್ಷ, || ಒಕ್ಕಲುತನ, ಜಾ|| ಕುರುಬರು, ಸಾ|| ಕುಡಕಿ ಮತ್ತು ಪರಶುರಾಮ ತಂದೆ ಹವಳಪ್ಪ ಕಾಲಳ್ಳಿ ವ||  48 ವರ್ಷ, ಜಾ|| ಹರಿಜನ, || ಕೂಲಿಕೆಲಸ, ಸಾ|| ಕುಡಕಿ ಗ್ರಾಮ, ಓಡಿ ಹೋದ ಇಬ್ಬರಾದ ರಾಜು ತಂದೆ ಕೃಷ್ಣಾ ಹೋಳಕುಂದಿ ವ|| 40 ವರ್ಷ, ಜಾ|| ಕುರುಬರು, || ಒಕ್ಕಲುತನ, ಸಾ|| ಕುಡಕಿ, ಪಾಂಡು ತಂದೆ ಜಟ್ಟೆಪ್ಪ ಮೋರ್ಖಂಡಿ ವ|| 55 ವರ್ಷ, ಜಾ|| ಕುರುಬರು, || ಕೂಲಿಕೆಲಸ, ಸಾ|| ಕುಡಕಿ ಗ್ರಾಮ ಅಂತ ಹೇಳಿದರು. ಹೀಗೆ 4 ಜನರು ಇಸ್ಪೀಟ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 560/- ರೂಪಾಯಿಗಳು ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:94/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ: ಶ್ರೀ, ಮಲ್ಲಿಕಾರ್ಜುನ ತಂದೆ ಶಿವಶರಣಪ್ಪಾ ಕಲಬುರ್ಗಿ ಸಾ|| ಕಾವೇರಿ ನಗರ ಗುಲಬರ್ಗಾ ರವರು ನಾನು REVAN BACK SECURETY OF INDIA LIMITED BANGLORE  ಗುಲಬರ್ಗಾದಲ್ಲಿ ಪೆಟ್ರೊಲಿಂಗ ಸುಪರ ವೈಸರ ಅಂತ ಕೆಲಸ ಮಾಡುತ್ತಿದ್ದು., ದಿನಾಂಕ 28/10/2012 ರಂದು ಮುಂಜಾನೆ 5-45 ಗಂಟೆಗೆ ಗುಲಬರ್ಗಾ ನಗರದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿ ನಿರತರಾಗಿದ್ದಾಗ ಭೂಸನೂರ ಟಾವರಿನ ತಾಂತ್ರಿಕ ನಿರ್ವಾಹಕರಾದ ಮಲ್ಲಿನಾಥ ತಂದೆ ಶ್ರೀಮಂತ ಕಲಶೇಟ್ಟಿ ಸಾ||ಮಾಡಿಯಾಳ ಗ್ರಾಮ ಇವರು ಫೊನ ಮಾಡಿ  ಏರಟೇಲ ಟಾವರಿನ 20 ಬ್ಯಾಟರಿಗಳು ಅ.ಕಿ 20,000/- ರೂಪಾಯಿ ನೇದ್ದವುಗಳನ್ನು ದಿನಾಂಕ 28/10/2012 ರ 02-00 ಗಂಟೆಯಿಂದ 04-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ್ದರಿಂದ ನಾನು ಪರಿಶೀಲನೆ  ಖಚಿತ ಪಡಿಸಿಕೊಂಡ ನಂತರ ಇಂದು ತಡವಾಗಿ ಠಾಣೆ ಬಂದು ದೂರು ಸಲ್ಲಿಸುತ್ತಿದ್ದೆನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 95/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕೊಲೆ ಪ್ರಕರಣ:
ರಟಕಲ ಪೊಲೀಸ ಠಾಣೆ: ಶ್ರೀಮತಿ ಬಸ್ಸಮ್ಮಾ ಗಂಡ ಭೀಮರಯ ಜಮಾದಾರ ಸಾ||ಕೊಡ್ಲಿ ರವರು ನನ್ನ ಸೊಸೆಯೊಂದಿಗೆ  ಸೂರ್ಯಕಾಂತ ತಂದೆ ರಾಯಪ್ಪಾ ಪೂಜಾರಿ ಇತನು ಅನೈತಿಕ ಸಂಬಂಧ ಹೊಂದಿದ್ದು ಈಗ 7 ತಿಂಗಳ ಹಿಂದೆ ಸೊಸೆಗೆ ಅಪಹರಿಸಿಕೊಂಡು ಹೋಗಿರುತ್ತಾನೆ. ಈಗ 6-7  ದಿವಸಗಳ ಹಿಂದೆ ಸೂರ್ಯಕಾಂತ ಹಾಗು ನನ್ನ ಸೊಸೆ ವಾಪಸ ಕೊಡ್ಲಿಗೆ ಬಂದಿದ್ದು. ಈ ಕುರಿತು ಪಂಚಾಯತಿ ಕೂಡ ಮಾಡಿದ್ದು ಇರುತ್ತದೆ ಆದರೂ ಕೂಡ ಮತ್ತೆ  ದಿನಾಂಕ:02-11-2012 ರಂದು ನನ್ನ ಮಗನಿಗೆ  ಪಂಚಾಯತಿ ಮಾಡೋಣ ಬಾ ಅಂತಾ ಸೂರ್ಯಕಾಂತ ಇತನ ಮನೆಗೆ ಕರೆದುಕೊಂಡು ಹೋಗಿ ಸೂರ್ಯಕಾಂತ  ಸಂಗಡ 4 ಜನರು ನನ್ನ ಮಗನಿಗೆ ಕ್ರಿಮಿನಾಶಕ ಔಷಧ ಕುಡಿಸಿ ಕೊಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ  ನಂ: 51/2012 ಕಲಂ, 143, 147, 148, 341, 302 ಸಮಗಡ 149 ಐಪಿಸಿ ಮತ್ತು 3(1) (10) ಎಸಸಿ/ಎಸಟಿ ಪಿಎ 1989 ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ವಿದ್ಯಾವತಿ ಗಂಡ ಶಾಂತಪ್ಪ  ಸಾ: ಕೆರೆಬೋಸಗಾ ತಾ||ಜಿ|| ಗುಲಬರ್ಗಾರವರು ನಾನು ದಿನಾಂಕ:-3/11/2012 ರಂದು  ಮುಂಜಾನೆ 7-00  ಗಂಟೆಗೆ ಹೊಸ ಮನೆ ಕಟ್ಟುವ ಕುರಿತು ಮನೆಯ ಪಾಯವನ್ನು ಜೆಸಿಬಿಯಿಂದ ಅಗೆಸುತ್ತಿರುವಾಗ ಭಾರತೀಬಾಯಿ ಗಂಡ ಅಮೃತ ವಠಾರ, ರೇಣುಕಾ ಗಂಡ ಸುನೀಲ , ಸುನೀಲ ತಂದೆ ಅಮೃತ ವಠಾರ ಸಾ: ಎಲ್ಲರೂ ಕೆರೆಬೋಸಗಾ  ರವರು ನಮ್ಮ ಜಾಗದಲ್ಲಿ ಏಕೆ ಪಾಯ ಕೆದರುತ್ತಿದ್ದಿ  ಅಂತ ಅವ್ಯಾಚ್ಛವಾಗಿ ಬೈದು ಕಲ್ಲನ್ನು ತೆಗೆದುಕೊಂಡು ಸುನೀಲ ತಲೆಗೆ ಹೊಡೆದು ರಕ್ತಗಾಯ ಮಾಡಿ ಹಿಡಿದು ಎಳೆದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 353/12 ಕಲಂ 341, 323 324 504 ಸಂಗಡ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

03 November 2012

GULBARGA DISTRICT REPORTED CRIMES



ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ದಶರಥ ತಂದೆ ಶಿವಪುತ್ರಪ್ಪಾ ಭಾವಿಕಟ್ಟಿ  ಸಾ: ಬುಸಣಗಿ ತಾ: ಗುಲಬರ್ಗಾ ರವರು ನಾನು ದಿನಾಂಕ 02-11-2012 ರಂದು ರಾತ್ರಿ 10-45 ಗಂಟೆ ಸುಮಾರಿಗೆ ಪಂಚಶೀಲ ನಗರದಲ್ಲಿರುವ ನನ್ನ ಅಜ್ಜಿಯ ಮನೆಗೆ ಹೋಗಬೇಕೆಂದು ಕೇಂದ್ರ ಬಸ್ ನಿಲ್ದಾಣದ ಹತ್ತಿರ ರೋಡಿನ ಎಡ ಭಾಜು ನಿಂತಿರುವಾಗ ಎಮ್,ಎಸ್,ಕೆ ಮೀಲ ರೋಡ ಕಡೆಯಿಂದ ಟವೇರ ಜೀಪ ನಂ ಕೆಎ-36 ಎಮ್-3616 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಭಾರಿ ಗಾಯಗೊಳಿಸಿ ತನ್ನ ವಾಹನ ಸಮೇತ ಹೋರಟು  ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:109/12  ಕಲಂ279,338 ಐಪಿಸಿsss ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ನಾರಾಯಣ ತಂದೆ ಇರಪ್ಪ ಚೌವ್ಹಾಣ ಸಾ||ಖಣದಾಳ ತಾ||ಜಿ||ಗುಲಬರ್ಗಾ ರವರು ನಮ್ಮ ಲಾರಿ ಚಾಲಕ ರವಿ ಇತನು ಎಂದಿನಂತೆ  ದಿನಾಂಕ: 29/10/2012 ರಂದು ಸಾಯಂಕಾಲ ಸರ್ವಜ್ಞ ಕಾಲೇಜ ಎದುರಿಗೆ ಖುಲ್ಲಾ ಸ್ಥಳದಲ್ಲಿ ಟಿಪ್ಪ ನಂ: ಕೆಎ-32, ಬಿ-3498 ನಿಲ್ಲಿಸಿ ಕೀಲಿ ಹಾಕಿಕೊಂಡು ಹೋಗಿರುತ್ತಾನೆ. ದಿನಾಂಕ:30/10/2012 ಪ್ರತಿ ನಿತ್ಯದಂತೆ ಮುಂಜಾನೆ 7:00 ಗಂಟೆಗೆ ಊರಿನಿಂದ ಗುಲಬರ್ಗಾಕ್ಕೆ ಬಂದು, ಟಿಪ್ಪರ ನಿಲ್ಲಿಸಿದ ಸ್ಥಳದಲ್ಲಿ ನೋಡಲಾಗಿ ಟಿಪ್ಪರ ಇರಲಿಲ್ಲ. ಈ ಬಗ್ಗೆ ನಮ್ಮ ಡ್ರೈವರ ರವಿ ಇತನಿಗೆ ಫೋನ ಮಾಡಿ ಟಿಪ್ಪರ ಬಗ್ಗೆ ವಿಚಾರಿಸಲಾಗಿ ಟಿಪ್ಪರ ಅಲ್ಲಿಯೆ ಬಿಟ್ಟು ಬಂದಿರುವದಾಗಿ ತಿಳಿಸಿದ. ನಾನು, ಚಾಲಕ ರವಿ ಇಬ್ಬರು ಕೂಡಿ ಗುತ್ತೇದಾರ ಕೆಲಸ ಮಾಡುವ ಎಲ್ಲಾ ಗುತ್ತಿಗೆದಾರರ ಹತ್ತಿರ ಮತ್ತು ನಾನು ಸಾಲ ಪಡೆದ ಟಾಟಾ ಫೈನಾನ್ಸ್ ದಲ್ಲಿ ಸಹ ವಿಚಾರಿಸಿದ್ದು ಟಿಪ್ಪರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಯಾರೋ ಕಳ್ಳರು ಟಿಪ್ಪ ಕ್ಯಾಬ ನಂ: ಕೆಎ-32, ಬಿ-3498, ಚೆಸ್ಸಿ ನಂMAT361325A1P39888, ಇಂಜಿನ ನಂ:697TC66PZY134839, ಮಾಡೆಲ್ 2010, ಹೆಚ್.ಜಿ.ವಿ (ಟಿಪ್ಪರ), ಕಲರ ಕ್ಯಾಬಿನ್ ಬಿಳಿ ಬಣ್ಣದ್ದು ಬಾಡಿ-ಆರೆಂಜ ಕಲರ ಅ.ಕಿ. 12,00,000=00 ರೂ (ಹನ್ನೆರಡು ಲಕ್ಷ ರೂ)  ಯಾರೋ ಕಳ್ಳರು ದಿನಾಂಕ:29/10/2012 ರಂದು ರಾತ್ರಿಯಿಂದ ದಿನಾಂಕ:30/10/2012 ರ ಬೆಳಗಿನ ಜಾವದ ಅವಧಿಯಲ್ಲಿ ಕಳುವು ಮಾಡಿಕೊಂಡು  ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:97/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಮಹ್ಮದ ಮಖಸೂದ ಅಹ್ಮದ ತಂದೆ ಮಹ್ಮದ ಇಸ್ಮಾಯಿಲ್ ಬಾಜೆ ಸಾ ಬುಲಂದ ಪರ್ವಾಜ ಕಾಲೋನಿ ಗುಲಬರ್ಗಾರವರು ನಾನು ನಾನು ರೋಜಾ ಮಾರ್ಕೆಟದ ಸಹಾರಾ ಕಾಂಪ್ಲೆಕ್ಸದಲ್ಲಿ ಎಮ.ಎಮ್ ಹೆಸರಿನ ಕಿರಾಣಿ ಅಂಗಡಿ ಇಟ್ಟುಕೊಂಡು ತಮ್ಮ ತಂದೆಯವರೊಂದಿಗೆ ವ್ಯಾಪಾರ ಮಾಡಿಕೊಂಡಿರುತ್ತೆನೆ. ದಿನಾಂಕ: 01/11/2012 ರಂದು ರಾತ್ರಿ 9:30 ಗಂಟೆಗೆ ನನ್ನ ಕಿರಾಣಿ ಅಂಗಡಿ ವ್ಯಾಪಾರ ಮುಗಿಸಿಕೊಂಡು ಅಂಗಡಿಗೆ ಕೀಲಿಗಳನ್ನು ಹಾಕಿ ಮನೆಗೆ ಹೋಗಿರುತ್ತೇನೆ.  ದಿನಾಂಕ:02/11/2012 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಮ್ಮ ಮಹ್ಮದ ಮೋಹಿದ ಅಹ್ಮದ ಇಬ್ಬರೂ ಕೂಡಿಕೊಂಡು ವ್ಯಾಪಾರ ಮಾಡುವ ಕುರಿತು ನನ್ನ ಕಿರಾಣಿ ಅಂಗಡಿಯ ಹತ್ತಿರ ಬಂದು ಶೆಟ್ಟರ ನೋಡಿದಾಗ ಶೆಟ್ಟರಕ್ಕೆ ಹಾಕಿರುವ ಎರಡು ಲಾಕ್ ಗಳು ಇರಲಿಲ್ಲಾ ಗಾಬರಿಯಾಗಿ ಶಟ್ಟರ ಎತ್ತಿ ಒಳಗಡೆ ನೋಡಿದಾಗ ನನ್ನ ಅಂಗಡಿಯಲ್ಲಿ ಗಲ್ಲಾ ಇರಲಿಲ್ಲಾ ಮತ್ತು ರೀಚಾರ್ಜ ಮಾಡುವ ಕಾರ್ಡುಗಳು ಇರುವ ಪ್ಲಾಸ್ಟಿಕ್ ಡಬ್ಬಿ ಕೆಳಗಡೆ ಬಿಸಾಡಿದ್ದು ಅಲ್ಲಿ ಇಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುವದು ಕಂಡು ಬಂದಿದ್ದು ಗಲ್ಲಾದಲ್ಲಿ ಇಟ್ಟಿರುವ ನಗದು ಹಣ 35000/-ರೂಪಾಯಿ ಇದದ್ದು ಪಕ್ಕದ ಅಂಗಡಿಯ ಮುಂದೆ ಹೋಗಿ ಒಡೆದು ಹಣ ತೆಗೆದುಕೊಂಡು ಬಿಸಾಕಿ ಹೋಗಿರುತ್ತಾರೆ. ಗಲ್ಲಾದಲ್ಲಿ ಇಟ್ಟ ನಗದು ಹಣ 35000/-ರೂಪಾಯಿ ಎಲ್ಲಾ ನಮೂನೆಯ ಮೋಬಾಯಿಲ್ ರಿಚಾರ್ಜ ಕಾರ್ಡುಗಳು ಹೀಗೆ ಒಟ್ಟು 79,236/-ರೂಪಾಯಿ ಬೆಲೆಯುಳ್ಳ ಸಾಮಾನುಗಳನ್ನು ನಮ್ಮ ಅಂಗಡಿಯಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ . ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 83/2012 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಮಹ್ಮದ ಅಬ್ದುಲ ಅಜೀಜ ತಂದೆ ಮಹಿಬೂಬಸಾಬ ವ: 63 ಉ: ನಿವೃತ್ತ ಸರಕಾರಿ ನೌಕರ ಸಾ: ಎಕಬಾಲ ಕಾಲನಿ ಜಿಲಾನಾಬಾದ ಎಮಎಸ್‌‌ಕೆಮಿಲ್‌ ಗುಲಬರ್ಗಾರವರು ನಾನು ದಿನಾಂಕ:-31/10/2012 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನನ್ನ ಮೋಟಾರ ಸೈಕಲ ನಂ ಕೆಎ 32  ಕ್ಯೂ 1268 ನೇದ್ದರ ಮೇಲೆ ಹೀರಾಪೂರ  ಕ್ರಾಸ ಪೆಟ್ರೋಲ ಪಂಪ ದಿಂದ ಪೆಟ್ರೋಲ ಹಾಕಿಕೊಂಡು ಹುಸೇನ ಗಾರ್ಡನ ಹತ್ತಿರ ಮೋಟಾರ ಸೈಕಲಗೆ ಇಂಡಿಕೇಟರ ಹಾಕಿ ತಿರುಗಿಸಿಕೊಳ್ಳುತ್ತಿರುವಾಗ ಬುಲೇರೋ ಜೀಪ ನಂಬರ ಕೆಎ 33 ಎಮ್‌ ‌1147 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ತನ್ನ ವಾಹನವನ್ನು ನಿಲ್ಲಿಸಿದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 351/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ವಾಹಿದಮಿಯ್ಯ ತಂದೆ ಮಹಿಬೂಬಮಿಯ್ಯ ನಿಗೆವಾನ ಲಾರಿ ನಂ ಕೆಎ-39- 3783 ಮಾಲಿಕ  ಸಾ|| ಬಂಗೂರ ತಾ||ಜಿ||ಬೀದರ ರವರು ನನ್ನ ಲಾರಿಯಲ್ಲಿ  ದಿನಾಂಕ:31/10/2012 ರಂದು ಹೈದ್ರಾಬಾದ ಬಾಲಾಜಿ ಟ್ರಾನ್ಸ್‌‌ಪೋರ್ಟ ಮೂಖಾಂತರ ಗುಲ್ಬರ್ಗಾಕ್ಕೆ ಏಶಿಯನ್‌ ಪೆಂಟ ಬಾಕ್ಸ್ ಗಳ ಲೋಡ ಮಾಡಿಕೊಂಡು ಅಲ್ಲಿಂದ ರಾತ್ರಿ 10:30 ಗಂಟೆಗೆ ಹೊರಟು ದಿನಾಂಕ:1/11/2012 ರಂದು ಬೆಳಗಿನ ಜಾವ ಬಂದು ಆಳಂದ ರಸ್ತೆ ವಿಶ್ವರಾದ್ಯ ಗುಡಿಯ  ಹತ್ತಿರ ಲಾರಿಯನ್ನು ನಿಲ್ಲಿಸಿ ಲಾರಿಯ ಒಳಗೆ ಚಾಲಕ & ಕ್ಲೀನರ ಇಬ್ಬರು ಕ್ಯಾಬಿನಲ್ಲಿ ಮಲಗಿದ್ದು ಮುಂಜಾನೆ 6 ಗಂಟೆಗೆ ಎದ್ದುನೋಡಲು ಲಾರಿ ಲೋಡ ಮೇಲೆ ಹಾಕಿರುವ ತಾಡಪತ್ರಿಯನ್ನು ಕಟ್ ಮಾಡಿ ಅದರ ಒಳಗಿಂದ 28-30 ಎಶಿಯನ್‌ ಪೆಂಟ ಬಾಕ್ಸ್‌‌‌‌ ಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಒಂದು ಬಾಕ್ಸ್‌ ಒಳಗೆ 6 ಡಬ್ಬಿ ಇದ್ದು ಒಂದು ಬಾಕ್ಸ್‌‌ ಗೆ 1632/- ರೂ ಕಿಮತ್ತು ಹೀಗೆ ಒಟ್ಟು 28 ರಿಂದ 30 ಬಾಕ್ಸ್‌‌‌ ಗಳ ಅಂದಾಜು ಕಿಮ್ಮತ್ತು 48,960/- ರೂಗಳು ಕಿಮತ್ತಿನದ್ದನ್ನು ಯಾರು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:352/2012 ಕಲಂ 379 ಐಪಿಸಿ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.