ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಕು|| ಪ್ರಿಯಾಂಕ ತಂದೆ ಚಂದ್ರಕಾಂತ ಚೌಧರಿ ಸಾ: ಹೌಸಿಂಗ ಬೋರ್ಡ ಕಾಲೋನಿ ಒಕ್ಕಲಗೇರಾ ಗಂಜ ರೋಡ ಗುಲಬರ್ಗಾ ರವರು ನಾನು ದಿನಾಂಕ 03-11-12 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ
ನಂಬರ ಕೆಎ-32 ಡಬ್ಲೂ-4004 ನೇದ್ದರ ಮೇಲೆ ಭಾಗ್ಯಶ್ರೀ ಇವಳನ್ನು ನನ್ನ ಹಿಂದುಗಡೆ ಕೂಡಿಸಿಕೊಂಡು
ಎಸ್.ಬಿ ಕಾಲೇಜ ದಿಂದ ಆನಂದ ಓಪಿ ಕಡೆಗೆ ಬರುವಾಗ ಜಾಜಿ ಪೆಟ್ರೋಲ ಪಂಪ ಎದರು ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಯು-203 ನೇದ್ದರ
ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ
ಪಡಿಸಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ: 110/2012 ಕಲಂ, 279,337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ದೀಪಕ ಶೇಟ್ಟಿ ತಂದೆ ಸದಾಶಿವ ರತ್ನಾಹೊನ್ನಾ ಉ: ಫುಡ ಇನ್ಸಪೆಕ್ಟರ ಸಾ:ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಗುಲಬರ್ಗಾರವರು
ನಾನು ದಿನಾಂಕ 03-11-12ರಂದು ರಾತ್ರಿ 10-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂಬರ ಕೆಎ-32 ಕ್ಯೂ-7636
ನೇದ್ದರ ಮೇಲೆ ಲಾಲಗೇರಿ ಕ್ರಾಸ್ ದಿಂದ ಗೋವಾ ಹೊಟೇಲ ಕಡೆಗೆ ಬರುವಾಗ ಹನುಮಾನ ಟೆಂಪಲ್ ಎದರು ರೋಡಿನ ಮೇಲೆ ಅಟೋರೀಕ್ಷಾ ನಂ:ಕೆಎ-32 -7733 ರ
ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಅಟೋರೀಕ್ಷಾ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ: 111/2012 ಕಲಂ, 279,337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ದೇವಲಗಾಣಗಾಪುರ
ಪೊಲೀಸ್ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ ಸಾ|| ಕಾವೇರಿನಗರ ಗುಲಬರ್ಗಾ ರವರು ಚವಡಾಪೂರ ಗ್ರಾಮ ಸರ್ವೆ ನಂ.12 ಕಾತಾ ನಂ. 424
ನೇದ್ದರಲ್ಲಿ ವೋಡಾಪೋನ ಟವರ ನೇದ್ದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24 ಬ್ಯಾಟ್ರಿಗಳು
ಅ:ಕಿ: 24,000=00 ಕಿಮ್ಮತಿನದು ಮತ್ತು ಚವಡಾಪೂರ ಕ್ರಾಸ ಹತ್ತಿರ ಬಸವರಾಜ ತಳವಾರ ಇವರ
ನಿವೇಶನದಲ್ಲಿ ನಿರ್ಮಸಿದಿ ಏರಟೇಲ ಟವರ ನೇದ್ದರಲ್ಲಿ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24 ಬ್ಯಾಟ್ರಿಗಳು ಅ:ಕಿ: 24,000=00 ಕಿಮ್ಮತ್ತಿನವು
ದಿನಾಂಕ: 04-11-2012 ರಂದು ಮಧ್ಯರಾತ್ರಿ 1-00 ಗಂಟೆಯಿಂದ 5-00 ಗಂಟೆಯ ಮದ್ಯದ ಅವದಿಯಲ್ಲಿ
ಯಾರೋ ಕಳ್ಳರು 48 ಬ್ಯಾಟರಿಗಳು ಅ||ಕಿ||
48,000/- ರೂ ನೇದ್ದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:128/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment