POLICE BHAVAN KALABURAGI

POLICE BHAVAN KALABURAGI

30 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ :ಶ್ರೀ ಮಲ್ಲಿಕಾರ್ಜುನ ತಂದೆ ಹಣಮಂತ ಕಟ್ಟಿಮನಿ  ಸಾ:  ಬಸವ ನಗರ ಸೇಡಂ ತಾ:ಸೇಡಂ ರವರು ನಾನು ಮತ್ತು ಶಾಂತಪ್ಪ ದೊಡ್ಡಮನಿ ಇಬ್ಬರೂ ಕೂಡಿಕೊಂಡು  ಅಳ್ಳೊಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಸೇಡಂಕ್ಕೆ ಬರುವ ಸಲುವಾಗಿ ಅಳ್ಳೊಳ್ಳಿ ಗೇಟ್ ಹತ್ತಿರ ಟಂಟಂ ನಂ ಕೆಎ- 32 ಬಿ 4082 ನೇದ್ದರಲ್ಲಿ ಕುಳಿತುಕೊಂಡು ಟಂಟಂನಲ್ಲಿ ಸೇಡಂಕ್ಕೆ ಬರುತ್ತಿದ್ದಾಗ ಟಂಟಂ ಚಾಲಕ ಸಂಬಣ್ಣ ತಂದೆ ಶಿವರಾಯ ಯಡಗಾ ಸಾ:ಕಲಕಂಬಾ ಇತನು  ತನ್ನ ಟಂಟಂನ್ನು ಅತೀವೇಗ ಹಾಗೂ ನಿಸ್ಕಾಳಜೀತನದಿಂದ ನಡೆಸುತ್ತಾ ಸೇಡಂ ಮುಖ್ಯ ರಸ್ತೆಯ ಬಾಬಾ ಸೇಠ ಮನಿಯಾರ್ ಇವರ ಪೆಟ್ರೋಲ್ ಬಂಕನಿಂದ ಮುಖ್ಯ ರಸ್ತೆಯ ಕಡೆಗೆ ಬರುತ್ತಿದ್ದಾಗ ನಮ್ಮ ಟಂಟಂ ಚಾಲಕ ಸಂಬಣ್ಣ ಇತನು ತನ್ನ ಟಂಟಂ ನೇದ್ದಕ್ಕೆ ಒಮ್ಮಲೇ ಬ್ರೆಕ್ ಹಾಕಿದ್ದರಿಂದ ನಾವು ಕುಳಿತ ಟಂಟಂ ಪಲ್ಟಿ ಆಯಿತು.ನನಗೆ ಎಡಗೈ ಮೊಳಕೈಗೆ ಎಡಗೈಗೆ ತರಚಿದ ಗಾಯ ಹಾಗೂ ಬಲಗೈ ಮುಂಗೈಯಿಗೆ ತರಚಿದ ಗಾಯವಾಗಿರುತ್ತದೆ ಶಾಂತಪ್ಪ ದೊಡ್ಡಮನಿ ಇತನಿಗೆ ಗುಪ್ತ ಗಾಯವಾಯಿತು, ಶಿವಪುತ್ರ ತಂದೆ ಸಣ್ಣ ಚಂದ್ರಪ್ಪ ಬಂಟನಳ್ಳಿ ಸಾ|| ಕಲಕಂಬಾ ಇತನಿಗೆ ಭಾರಿಗಾಯವಾಗಿ ಬಾಯಿಂದ ಹಾಗೂ ಮೂಗಿನಿಂದ ರಕ್ತ ಬರುತ್ತಿತ್ತು, ಮತ್ತು ಮಾಹಾದೇವ ಹೊನ್ನಪ್ಪನವರ, ನಿರ್ಮಾಲ ಹೊನ್ನಪ್ಪನವರ, ಚಿಂಟು ಹೊನ್ನಪ್ಪನವರ ಇವರಿಗೆ ಗುಪ್ತ ಗಾಯವಾಗಿರುತ್ತವೆ . ಶಿವಪುತ್ರ ಇತನು ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:206/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

29 September 2012

GULBARGA DISTRICT REPORTED CRIME


ಅತ್ಯಾಚಾರ ಮಾಡಿ ಕೊಲೆ ಮಾಡಿದ ಬಗ್ಗೆ:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ:27-09-2012 ರಂದು ರಾತ್ರಿ ಸಮಯದಲ್ಲಿ ಭಾಸಗಿ ಗ್ರಾಮದ ರೋಡ ಬದಿಗೆ ಇದ್ದ ಭೀಮಷಾ ತಂದೆ ಮಲ್ಕಪ್ಪ ಮಾಂಗ ಸಾ|| ಉಡಚಣಹಟ್ಟಿ ಇವರ ಹೊಲದಲ್ಲಿ ಬಾಂದಾರಿದಲ್ಲಿಯ ಬೇವಿನ ಗೀಡದ ಕೆಳಗೆ 25 ರಿಂದ 30 ವರ್ಷದ ಅಪರಿಚಿತ ಹೆಣ್ಣು ಮಗಳಿಗೆ ಜಬರಿ ಸಂಭೋಗ ಮಾಡಿ, ಬಟ್ಟೆಯಿಂದ ಕುತ್ತಿಗೆಗೆ ಬೀಗಿದು ಯಾರೋ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ ಖಾಜಪ್ಪ ತಂದೆ ಮರಗು ಭಾಸಗಿ ಸಾ|| ಉಡಚಣಹಟ್ಟಿ ತಾ|| ಅಫಜಲಪೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:167/2012 ಕಲಂ, 376, 302 ಐಪಿಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 September 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ವಿರೇಶ ತಂದೆ ಅಮೃತರಾವ ಪಂಗರಗಿ ಉದ್ಯೋಗ: ವ್ಯಾಪಾರ ಸಾ: ಮನೆ ನಂ-1/730 ಸಿದ್ದೇಶ್ವರ ಕಾಲೋನಿ ಸೇಡಂ ರೋಡ ಗುಲಬರ್ಗಾರವರು  ನನ್ನ  ಟಿಪ್ಪರ ನಂ-ಕೆಎ 32 ಬಿ-2812 ವಾಹನವನ್ನು  ದಿನಾಲು  ಸಿದ್ದೇಶ್ವರ ಕಾಲೋನಿಯಲ್ಲಿಯ ಮನೆ ಮುಂದೆ ನಿಲ್ಲಿಸುತ್ತಿದ್ದು, ಎಂದಿನಂತೆ ದಿನಾಂಕ 25-09-2012 ರಂದು ರಾತ್ರಿ 9-00 ಗಂಟೆಗೆ ವಾಹನದ ಚಾಲಕ ಬಸವರಾಜ ತಂದೆ ಸಾಯಬಣ್ಣ ಇತನು ನಮ್ಮ ಟಿಪ್ಪರನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಮನಗೆ ಹೋಗಿರುತ್ತಾನೆ. ನಾವು ಊಟ ಮಾಡಿಕೊಂಡು ಮಲಗಿಕೊಂಡಿರುತ್ತೆವೆ, ದಿನಾಂಕ 26-09-2012 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನೋಡಲಾಗಿ ಮನೆಯ ಮುಂದೆ ನಿಲ್ಲಸಿದ ನಮ್ಮ ಟಿಪ್ಪರ ನಂ-ಕೆಎ 32 ಬಿ 2812 ನೇದ್ದು ಕಾಣಲಿಲ್ಲ ಆಗ ನಾನು ಗಾಬರಿಗೊಂಡು ನಮ್ಮ ಚಾಲಕ ಬಸವರಾಜ ಇತನಿಗೆ ಫೋನ್ ಮಾಡಿ ವಿಚಾರಿಸಲಾಗಿ ಅವನು ನಾನು ತೆಗೆದುಕೊಂಡು ಹೋಗಿರುವದಿಲ್ಲ ಅಂತಾ ತಿಳಿಸದನು.  ಸದರಿ ಟಿಪ್ಪರ ನಂ-ಕೆಎ-32 ಬಿ-2812 ವಾಹನವನ್ನು ಯಾರೋ ಕಳ್ಳರು ಮನೆಯ ಮುಂದೆ  ನಿಲ್ಲಿಸಿದ್ದನ್ನು ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 220/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಚಂದಾರಾವ ಪಾಟೀಲ ವಯ|| 60 ವರ್ಷ ಉ|| ನಿವೃತ್ತ ಸರಕಾರಿ ನೌಕರ ಸಾ|| ಸೇಡಂ ರವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ:18/03/2012 ರಂದು ಸ್ಟೇಷನ ಬಜಾರ ರಸ್ತೆಯಲ್ಲಿರುವ ಕಾಳಿಂಗ ಲಾಡ್ಜ ರೂಮ ನಂ: 107 ರಲ್ಲಿದ್ದಾಗ  ಬೆಳಿಗ್ಗೆ 9-00 ಸುಮಾರಿಗೆ ಮಾದೇವಪ್ಪ ಬಿರಾದಾರ ಲಾರಾ ಟೇಲರ್ ಗುಲಬರ್ಗಾ ಸಂಗಡ ಮೂರು ಜನರು ಕೂಡಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಪ್ಲಾಟ ನಂ: 49 ನೇಧ್ದನ್ನು ಬೇರೆಯವರಿಗೆ ಮಾರಿದಿಯ್ಯಾ ಅಂತಾ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಕಾರಿನಲ್ಲಿ ಹಾಕಿಕೊಂಡು ಪಿಸ್ತೂಲ್ ದಿಂದ ಜೀವದ ಬೆದರಿಕೆ ಹಾಕಿ ಖಾಲಿ ಪೇಪರಗಳ ಮೇಲೆ ರುಜು ಪಡೆದು ಮರಳಿ ಕಾಳಿಂಗ ಲಾಡ್ಜ ಹತ್ತಿರ ತಂದು ಬಿಟ್ಟು ಹೋಗಿದ್ದಾರೆ ಅಂತಾ ಮಾನ್ಯ ನ್ಯಾಯಾಲಯದ  ಆದೇಶದ ಮೇರೆಗೆ ಠಾಣೆ ಗುನ್ನೆ ನಂ 123/2012 ಕಲಂ 147,148,473,307,348,363,468,506,34,ಐ,ಪಿ.ಸಿ & 25(3) ಇಂಡಿಯನ್‌ ಆರ್ಮ್ಸ ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ:28/09/2012 ರಂದು  ಮಧ್ಯರಾತ್ರಿ 2-30 ಗಂಟೆಯಿಂದ ಬೆಳಗಿನ ಜಾವ 5-00 ಗಂಟೆಯ ಅವದಿಯಲ್ಲಿ ರಾಜಹಂಸ್ ಬಸ್ ನಂ ಕೆ.ಎ-25-ಎಫ-2595 ನೇದ್ದರ ಲಗೇಜ ಇಡುವ ಸ್ಥಳದಲ್ಲಿ ವಿ.ಐ.ಪಿ ಸೂಟಕೇಸದಲ್ಲಿ 30 ಗ್ರಾಂ ಬಂಗಾರದ ಚೈನ್ ಅ.ಕಿ-75,000/- ರೂ,  5 ಸೀರೆಗಳು 8,000/- ರೂ,  ಪ್ಯಾಂಟ ಶರ್ಟ ಅ.ಕಿ 2000/- ರೂ ಹೀಗೆ ಒಟ್ಟು 85 ಸಾವಿರ ಬೇಲೆ ಬಾಳುವ ಮೌಲ್ಯದ್ದು ವಸ್ತುಗಳು ಸೂಟಕೇಸದಲ್ಲಿಟ್ಟಿದ್ದು ಜೇವರ್ಗಿ ಬಸ್ಸ  ನಿಲ್ದಾಣದಲ್ಲಿ ನಿಂತಾಗ ಯಾರೋ ಕಳ್ಳರು ಸೂಟಕೇಸ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ: 146/12 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.