POLICE BHAVAN KALABURAGI

POLICE BHAVAN KALABURAGI

13 September 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಲಕ್ಷ್ಮಿಸಾಗರ ತಂದೆ ಹಣಮಂತಪ್ಪ ಚಿಣಮಗೇರಿ ಸಾ|| ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾರವರು ನಾನು ದಿನಾಂಕ:12-09-2012 ರಂದು ರಾತ್ರಿ 10-30 ಗಂಟೆಗೆ ಊಟ ಮಾಡಿಕೊಂಡು, ನನ್ನ ಮನೆಯ ಮುಂದೆ ತಿರುಗಾಡುತ್ತಿದ್ದಾಗ, ಭಾಗೇಶ ತಂದೆ ಚಿದಂಬರ ಈತನ ಜೊತೆಗೆ ಶರಣು ತಂದೆ ಬಾಬುರಾವ ಸಂಗಡ ಇನ್ನೂ 4 ಜನರು ಕೂಡಿಕೊಂಡು ಬಂದು ಹೋದ ವರ್ಷ ನನ್ನ ವಿರುದ್ದ ಕೇಸು ಮಾಡಿದ್ದಿ, ಈಗ ನಿನ್ನ ಸುದ್ದಿ ಏನಂತದ ಅಂತ ಅಂದವನೇ ಕೈ ಮುಷ್ಠಿ ಮಾಡಿ ಮೂಗಿನ ಮೇಲೆ ಹೊಡೆದು ರಕ್ತಗಾಯಪಡಿಸಿದನು, ಅತನ ಜೊತೆಗಿದ್ದವರು  ಬಡಿಗೆಯಿಂದ ಹೊಡೆದು, ನೆಲಕ್ಕೆ ಕೆಡವಿ ಕಲ್ಲಿನಿಂದ ಹೊಡೆದು, ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಭಾಗೇಶ ಈತನು ನನ್ನ ಶರ್ಟದಲ್ಲಿದ್ದ ಮೊಬೈಲ್ ಹಾಗು 5000/-ರೂಪಾಯಿಗಳು ತೆಗೆದುಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ 143, 147, 148, 341, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ ಕುರಿತು:
ಸ್ಟೇಶನ ಬಜಾರ ಪೊಲೀಸ್ ಠಾಣೆ: ದಿನಾಂಕ:13-09-2012 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಿಬ್ಬಂದಿಯವರು ವೇತನ ರಿಷ್ಕರಣೆಗಾಗಿ ಹಾಗೂ ಕೈಗಾರಿಕಾ ಒಪ್ಪಂದ ಮಾಡಲು ಒತ್ತಾಯಿಸಿ ಮುಷ್ಕರ ಮಾಡುವರೆಂದು ಅಲ್ಲದೆ ಸಂಘಟನೆಗಳ ದುರಿಣರು ಸಂಸ್ಥೆಯ ನಿಷ್ಠಾವಂತ ಮತ್ತು ಪ್ರಮಾಣಿಕ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಅಡ್ಡಿಪಡಿಸುವ ಸಾಧ್ಯತೆ ಇರುವದರಿಂದ , ಅಲ್ಲದೆ ಸಂಸ್ಥೆಯ ಕೆಲಸ ಕಾರ್ಯಗಳನ್ನು ದಿನಾಂಕ:13-09-2012  ರಿಂದ ಸ್ಥಗಿತಗೊಳಿಸುವಂತೆ ಮತ್ತು  ಸಂಸ್ಥೆಯ ವಾಹನ ಹಾಗೂ ಆಸ್ತಿ ಪಾಸ್ತಿಗಳಿಗೆ ಹಾನಿ ಆಗುವ ಸಾದ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ಧ್ರತಾ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಶ್ರೀ ಇನಾಯತ ಬಾಗವಾನ ವಿಭಾಗಿಯ ನಿಯಂತ್ರಣಾಧಿಕಾರಿ ...ಸಾ ಸಂಸ್ಥೆ ಗುಲಬಗಾ ವಿಭಾಗ-2  ಅಲ್ಲದೆ  .ಹೆಚ್.ನಾಗೇಶ ...ಸಾ. ಸಂಸ್ಥೆ ಗುಲಬರ್ಗಾ ವಿಭಾಗ -1 ಮತ್ತು ವಿಭಾಗಿಯ ನಿಯಂತ್ರಣ ಧಿಕಾರಿ ...ಸಾ ಸಂಸ್ಥೆ  ಗುಲಬರ್ಗಾ ವಿಭಾಗ -2 ರವರು ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಡಿಪೋ ನಂ-01 ಮುಂದೆ ಹೋದಾಗ ಅಲ್ಲಿ  ನಾಲ್ಕು ಜನರು ಗುಂಪಾಗಿ ನಿಂತುಕೊಂಡಿದ್ದನ್ನು , ಗಮನಿಸಿ ಅವರನ್ನು ವಿಚಾರಿಸಿ ತಿಳಿದುಕೊಳ್ಳಲಾಗಿ ತಮ್ಮ ಹೆಸರು ಶೌಖತ ಅಲಿ ತಂದೆ ನಬಿಸಾಬ ಆಲೂರ || ಸಿ.ಪಿ. ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಮತ್ತು ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಮತ್ತು ವಕರ್ಸ ಫೇಡರೇಶನ್ ಜೆಂಟಿ ಕಾರ್ಯದರ್ಶಿ, ಮೋಹಲ್ಲಾ ಮುಲ್ಲಾ ತಂದೆ ದಾವಲಸಾಬ || ಸಿ.ಪಿ. ಜಿಲ್ಲಾ ಕಾರ್ಯದರ್ಶಿ ಸಾ|| ಆಳಂದ, ಶರಣಪ್ಪ ತಂದೆ ಮಲ್ಲಪ್ಪ ಯಕಂಚಿ ವರ್ಷ || ಕೆ.ಎಸ್.ಆರ್.ಟಿ.ಸಿ ಚಾಲಕ ಸಾ|| ಪ್ಲಾಟ ನಂ:23 ಆರ್,ಜಿ. ನಗರ ಗುಲಬರ್ಗಾ, ಸಿದ್ದಣ್ಣ ತಂದೆ ಭೀಮರಾಯ ರಾಜವಾಳ ವರ್ಷ || ಸಿ.ಪಿ. ಜಿಲ್ಲಾ ಸಹಾಯಕ ಕಾರ್ಯದರ್ಶೀ ಸಾ|| ಎಮ್..ಜಿ-31 ಹೌಸಿಂಗ್ ಬೋರ್ಡ ಕಾಲೋನಿ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ  ಅಂತಾ ಹೇಳಿದ್ದು  ನಾಳೆ ದಿನಾಂಕ:13-09-2012 ರಂದು ನಡೆಯುವ ಮುಷ್ಕರದ ಪ್ರಯುಕ್ತ  ಇವರು ಇಂದು ದಿನಾಂಕ:12-09-2012 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಇಲಾಖೆಯ ಬಸ್ಸುಗಳಿಗೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದಕ್ಕಾಗಿ ಗುಂಪಾಗಿ ನಿಂತಿರುವ ಬಗ್ಗೆ ತಿಳಿದು ಬಂದಿದ್ದರಿಂದ ಇವರನ್ನು ಹೀಗೆ ಬಿಟ್ಟಲ್ಲಿ ಯಾವುದಾದರೂ ಆಸ್ತಿ ಹಾನಿ ಮತ್ತು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವವರೆಂದು ತಿಳಿದು ಬಂದಿದ್ದರಿಂದ ಮುಂಜಾಗೃತ ಕ್ರಮ ಕುರಿತು  ಮೇಲ್ಕಂಡವರನ್ನು ವಶಕ್ಕೆ ತೆಗೆದುಕೊಂಡು ನಂತರ, ಕ.ರಾ.ರ.ಸಾ.ಸಂಸ್ಥೆ ವಿಭಾಗೀಯ ಕಛೇರಿಯ ಆವರಣದಲ್ಲಿ ಇಲಾಖೆಯ ಕೆಲವು ಸಿಬ್ಬಂದಿಯವರಾದ ಬಸವರಾಜ ತಂದೆ ಗುಂಡಪ್ಪ ಯಾಧವ || ಕೆ.ಎಸ್.ಆರ್.ಟಿ.ಸಿ ಡಿಪೋ ನಂ:2 ಮೇಕ್ಯಾನಿಕ್ ಸಾ|| ರೋಳ ವಾಡಿ ತಾ|| ಬಸವ ಕಲ್ಯಾಣ, ಗಣಪತರಾವ ತಂದೆ ಗುಂಡೆರಾವ ದೂದ ಕವಡೆ ವರ್ಷ || ಕೆ.ಎಸ್.ಆರ್.ಟಿ.ಸಿ ಡಿಪೋ ನಂ-2 ಹೇಡ್ ಮೇಕ್ಯಾನಿಕ್ ಸಾ|| ಪ್ಲಾಟ ನಂ:51 ನಿಯರ್ ಕೆ..ಬಿ ಪವರ ಹೌಸ ಶಿವಾಜಿ ನಗರ ಗುಲಬರ್ಗಾ, ಗುರು ತಂದೆ ಶೆಟ್ಟೆಪ್ಪಾ ದೋಡ್ಡಮನಿ ವರ್ಷ || ಕೆ.ಎಸ್.ಆರ್..ಟಿ,ಸಿ ಡಿಪೋ ನಂ:01 ರಲ್ಲಿ ಕಂಡೇಕ್ಟರ್  ಸಾ|| ಕಾಚಾಪೂರ ತಾ|| ಜೇವರ್ಗಿ ಅಂತಾ ಹೇಳಿದ್ದು, ನಾಳೆ ನಡೆಯಲ್ಲಿರುವ ಮುಷ್ಕರದ ಪ್ರಯುಕ್ತವಾಗಿ ಇವರು ಸಹ  ಇಲಾಖೆಯ ಬಸ್ಸುಗಳಿಗೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದಕ್ಕಾಗಿ ಗುಂಪಾಗಿ ನಿಂತಿರುವ ಬಗ್ಗೆ ತಿಳಿದು ಬಂದಿದ್ದರಿಂದ ಇವರನ್ನು ಹಿಗೆ ಬಿಟ್ಟಲ್ಲಿ ಯಾವುದಾದರೂ ಆಸ್ತಿ ಹಾನಿ ಮತ್ತು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವವರೆಂದು ತಿಳಿದು ಬಂದಿದ್ದರಿಂದ ಶ್ರೀ ವಿಜಯಕುಮಾರ ಪಿ.ಎಸ್. (.ವಿ)  ಸ್ಟೇಷನ ಬಜಾರ ಪೊಲೀಸ ಠಾಣೆ  ಗುಲಬರ್ಗಾ ವರು ಸರಕಾರಿ ತರ್ಫೇಯಾಗಿ  ಠಾಣೆ ಗುನ್ನೆ ನಂ:117/2012 ಕಲಂ 107, 151 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

12 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಅರ್ಜುನ  ತಂದೆ ಲಕ್ಷ್ಮಣ ಜಾದವ   ಸಾ:ಭಗತ ಸಿಂಗ ಚೌಕ ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾರವರು ನಾನು ದಿನಾಂಕ:11-09-2012 ರಂದು 7-30  ಪಿ.ಎಮ್.ಕ್ಕೆ ಕೇಂದ್ರ ಬಸ್ ನಿಲ್ದಾಣದಲ್ಲಿ ನನ್ನ ಅಕ್ಕಳಿಗೆ ಶಾಹಾಬಾದಕ್ಕೆ ಕಳಿಸುವ  ಕುರಿತು ಬಸ್ ನಿಲ್ಲುವ ಸ್ಥಳದಲ್ಲಿ ಬಂದು ನನ್ನ ಅಕ್ಕಳಿಗೆ ಬಸ್ ಹತ್ತಿಸಿ  ನಿಂತಿರುವಾಗ ಕೆ.ಎಸ್.ಆರ್.ಟಿ.ಸಿ.ಬಸ್ ನಂ: ಕೆಎ 32 ಎಫ್ 884 ನೇದ್ದರ ಚಾಲಕ ತನ್ನ ಬಸ್ ನ್ನು ಅಲಕ್ಷತನದಿಂದ ಬಲಗಡೆ  ಚಲಾಯಿಸಿ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಬಸ್ಸ ಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 90/2012 ಕಲಂ 279, 338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

11 September 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ  ನಿಲಮ್ಮಾ   ಗಂಡ ಲಕ್ಕಪ್ಪ  ಉ: ಅಡಿಗೆ ಕೆಲಸ ಸಾ: ಹನುಮಾನ ದೇವಸ್ಥಾನದ ಹತ್ತಿರ ಸುಂದರ ನಗರ ಗುಲಬರ್ಗಾರವರು ನಾನು ದಿನಾಂಕ:11-09-2012  ರಂದು 9-30 ಗಂಟೆ ಸುಮಾರಿಗೆ  ಆರ.ಟಿ.ಓ.ಕ್ರಾಸ್ ದಿಂದ  ಜಿ.ಜಿ.ಹೆಚ್. ಸರ್ಕಲ್ ಮೇನ ರೋಡಿನ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರಿನ ಮೇನ ಗೇಟ ಎದುರು ನಡೆದುಕೊಂಡು ಹೋಗುತ್ತಿದ್ದಾಗ ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ ಅಟೋರೀಕ್ಷಾ ನಂ: ಕೆಎ 32 ಎ 8612 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಗಾಯಗೊಳಿಸಿ ಅಟೋರೀಕ್ಷಾ ಸ್ಥಳದಲಿ ಬಿಟ್ಟು ಅಟೋಚಾಲಕ  ಓಡಿ ಹೋಗಿರುತ್ತಾನೆ  ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ, 279, 337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಮಾಡಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀಮತಿ. ಶೋಭಾದೇವಿ ಗಂಡ ಕೃಷ್ಣ ನಿರಾಳೆ ಸಾ|| ನಂದಗೊಕುಲ ನಿವಾಸ ಲಕ್ಷ್ಮಿನಾರಾಯಣ ನಿವಾಸ ಗುಲಬರ್ಗಾರವರು ದಿನಾಂಕ.11.09.2012 ರಂದು ಮದ್ಯಾಹ್ನ 12.15 ಗಂಟೆಗೆ ಮನೆಯ ಕಂಪೌಂಡಿನಲ್ಲಿರುವಾಗ ಸೈಕಲ ಮೊಟಾರ ಮೇಲೆ ಇಬ್ಬರು ಅಪರಿಚಿತ ವ್ಯೆಕ್ತಿಗಳು ಬಂದು ಮನೆಯ ಮುಂದೆ ನಿಲ್ಲಿಸಿ, ಅದರಲ್ಲಿ ಒಬ್ಬನು ಸೈಕಲ್ ಮೋಟಾರನಿಂದ ಇಳಿದು ಗೇಟ್ ಹತ್ತಿರ ಬಂದು ಶೀಲಾ ಮೌಸಿ ಮನೆ ಎಲ್ಲಿದೆ ಎಂದು ಕೇಳಿದಾಗ ನಾನು ಗೇಟ ತಗೆದು ಹೋರಗೆ ಬಂದು ವಿಚಾರಿಸುತ್ತಿರುವಾಗ ನನ್ನ ಕೊರಳಿಗೆ ಕೈಹಾಕಿ ಮಂಗಳ ಸೂತ್ರ ಕಿತ್ತಿಕೊಳ್ಳುವಾಗ ನಾನು ನನ್ನ ಕೈಯಿಂದ ಮಂಗಳ ಸೂತ್ರ ಹಿಡಿದುಕೊಂಡಿದ್ದು ಅರ್ದ ಮಂಗಳ ಸೂತ್ರ ಕಿತ್ತಿಕೊಂಡು ಸೈಕಲ್ ಮೊಟಾರ್ ಮೇಲೆ ಕುಳಿತು ಓಡಿ ಹೋದರು, ನಾನು ಕೂಗಾಡುವದನ್ನು ಕೇಳಿಸಿಕೊಂಡ ಅವರ ಸೊಸೆ ಶ್ವೇತಾ ಒಡಿ ಬಂದು ಸದರಿಯವರಿಗೆ ಬೆನ್ನು ಹತ್ತಿದರು ಅವರು ಪರಾರಿಯಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.115/2012 ಕಲಂ.392 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.