POLICE BHAVAN KALABURAGI

POLICE BHAVAN KALABURAGI

11 September 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸೈಯದ ತುರಬ ಅಲಿ ತಂದೆ ಸೈಯದ ಉಸ್ಮಾನ ಅಲಿ ನಾಗೂರೆ ಸಾ:ಎಬಿಎಲ್‌ ಹೌಸಿಂಗ ಸೊಸೈಟಿ ಶಾಂತನಗರ ಭಂಕೂರ ರವರು ನನ್ನ ತಮ್ಮನಾದ ಸೈಯದ ಯುನೂಸ ಅಲಿ ಇತನು ದಿನಾಂಕ:10-09-2012 ರಂದು ಸಾಯಂಕಾಲ 6-15  ಗಂಟೆಗೆ  ತನ್ನ ಮೋಟಾರ ಸೈಕಲ  ನಂ: ಕೆ.ಎ-32 ಕ್ಯೂ-1130 ನೇದ್ದರ ಮೇಲೆ ಶಹಾಬಾದ ದಿಂದ ಬಂಕೂರದ  ಶಾಂತನಗರಕ್ಕೆ ಹೋಗುತ್ತಿರುವಾಗ ಎ.ಬಿ.ಎಲ್. ಗೇಸ್ಟ್ ಹೌಸ ಹತ್ತಿರ ರೋಡಿನ ಮೇಲೆ ಚಿತ್ತಾಪೂರ ಕ್ರಾಸ ಕಡೆಯ ಎದರುಗಡೆಯಿಂದ ಲಾರಿ ನಂ: ಎಮ್.ಎ.ಚ್.  10 ಜೆಡ್ 948  ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಡಿಕ್ಕಿ ಪಡಿಸಿದ್ದರಿಂದ ಲಾರಿಯ ಬಲಗಡೆ ಹಿಂದಿನ ಗಾಲಿಯಲ್ಲಿ ಸಿಕ್ಕು ಹೊಟ್ಟೆಗೆ ಮತ್ತು ಕಾಲುಗಳಿಗೆ ಬಾರಿ ಗಾಯವಾಗಿದ್ದು ಆತನ ಸಂಗಡ ಲಾಲ ಅಹ್ಮದ ಮತ್ತು ಹರಿಶ್ಚಂದ್ರ ರವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:119/2012 ಕಲಂ, 279, 338, 304 (ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಪ್ಯಾರಿ ಬೇಗಂ ಗಂಡ ಮಹ್ಮದ ಹನೀಫ ಸಾ:ರಾಮಾ ಮೋಹಲ್ಲಾ  ಶಹಾಬಾದ ರವರು ಇಂದು ದಿನಾಂಕ:10/09/2012 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮಕ್ಕಳಾದ ಹೀನಾ ಪರ್ಮಮ ಹಾಗೂ ತಸ್ಲೀಮಾಬಾನು  ಮನೆಯಲ್ಲಿದ್ದಾಗ ನನ್ನ ಗಂಡ ಮಹ್ಮದ ಹನೀಪ ಇತನು ಬಂದು ನನಗೆ ಅವಾಚ್ಯವಾಗಿ ಬೈದು ಕಿರುಕುಳ ಕೊಡುತ್ತಿದ್ದಾಗ ಸಮ್ಮನೆ ಏಕೆ ಬೈಯುತ್ತಿ ಅಂತಾ ಕೇಳಿದಕ್ಕೆ ನನಗೆ ಎದುರು ಮಾತನಾಡುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಬಿದ್ದ ಕಟ್ಟಿಗೆಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ : 118/2012 ಕಲಂ: 498(ಎ),323,324,504,506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

10 September 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀಮತಿ ಶೀರಿನ ಗಂಡ ಮಕಬೂಲ ಪಾಶಾ ಹರಕಾರೆ ಸಾ:ಸುಭಾಸ ಚೌಕ  ಶಹಾಬಾದ ರವರು ನನಗೆ ದಿನಾಂಕ:09/09/2012 ರಾತ್ರಿ 9-30 ಗಂಟೆಗೆ ಸುಮಾರಿಗೆ ಮಿಲ್ಲತ ನಗರದ ಶಕಿಲಾ ಬೇಗಂ ರವರು ಪೋನ ಮಾಡಿ ನನ್ನ ಗಂಡನು ತೀರಿಕೊಂಡಿದ್ದರಿಂದ ನನಗೆ ಬಹಳ ಚಿಂತೆಯಾಗಿದೆ. ನೀನು ನಮ್ಮ ಮನೆಗೆ ಬಾ ಅಂದಿದ್ದಕ್ಕೆ ನಾನು ಅವಳ ಮನೆಗೆ ಹೋಗಿ ಅವಳ ಸಂಗಡ ಮಾತನಾಡುತ್ತ ಕುಳಿತಾಗ ಜುಬೇದಾಬೇಗಂ ರವರು ಎ ರಂಡಿ ನೀನು ನಮ್ಮ ಮನೆಗೆ ಯ್ಯಾಕೆ  ಬಂದಿದ್ದು, ನಮ್ಮ ಮನೆಯ ಪಂಚಾಯಿತಿ ಮಾಡಲು ನೀನು ಯಾರು, ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಖಾಲಿದ, ಅಬೀದ, ಅಲ್ಲಾಭಕ್ಷ, ಸಾಜೀದ ರವರು ಕೈಯಿಂದ ಹೊಡೆ ಬಡೆ ಮಾನಭಂಗ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:117/2012 ಕಲಂ, 147, 148, 323, 324, 354, 504, 506 (2) ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಸೈಯ್ಯದ ತಾಜೋದ್ದಿನ  ತಂದೆ ಶಮಶೋದ್ದಿನ  ಮುಲ್ಲಾ ಸಾ||ಜಿಲಾನಾಬಾದ ಗುಲಬರ್ಗಾ ರವರು ನಾನು ದಿನಾಂಕ:06-09-2012 ರಂದು ಮದ್ಯಾಹ್ನ 2-30 ಗಂಟೆಗೆ ನಾನು ನನ್ನ ವೈಯಕ್ತಿಕ ಕೆಲಸದ ಪ್ರಯುಕ್ತ ಮೋಟಾರ ಸೈಕಲ್ ನಂ: ಕೆಎ-32 ವಿ-6319 ನೇದ್ದರ ಮೇಲೆ ಕೇಂದ್ರ ಬಸ್ ನಿಲ್ದಾಣದಿಂದ ಹೀರಾಪೂರ ರಿಂಗ ರೋಡ ಕಡೆಗೆ ಹೋಗುತ್ತಿದ್ದಾಗ ಸಿದ್ದಾರ್ಥ ನಗರ ಸಮೀಪ ಇರುವ ಕ್ರಾಸ್ ದಲ್ಲಿ ಚಾಲುಕ್ಯ ಬಸ್ ನಂ: ಕೆಎ-21 ಎ-2269 ನೇದ್ದರ ಚಾಲಕ ತನ್ನ ಬಸ್ ಜಿ.ಡಿ.ಎ ಮೈದಾನ ಕಡೆಗೆ ಹೋಗಲು ಅತೀವೇಗ ಮತ್ತು ಅಲಕ್ಷತನದಿಂದ ಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ನನಗೆ ಗಾಯಗೊಳಿಸಿರುತ್ತಾನೆ ಅಂತಾ ದಿನಾಂಕ: 10-09-2012 ರಂದು 11-15 ಗಂಟೆಗೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:88/2012 ಕಲಂ, 279, 337 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.      

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ನನ್ನ ಹಿರಿಯ ಮಗ ಆನಂದ ವಯಾ:26 ವರ್ಷ ಈತನು ನಮ್ಮ ಮನೆಯ ಮೋಟಾರ ಸೈಕಲ್ ನಂ: ಕೆಎ32  ಕ್ಯೂ 2218 ನೇದ್ದರ ಮೇಲೆ ತನ್ನ ಗೆಳೆಯರ ಹತ್ತಿರ ಹೋಗಿ ಬರುತ್ತೆನೆ. ಅಂತಾ ಹೇಳಿ ಹೋಗಿದ್ದನು. ಆತನು ಮನೆಗೆ ಬರಲಿಲ್ಲಾ ಆತನ ದಾರಿ ಕಾಯುತ್ತಾ ಕುಳಿತಿರುವಾಗ ಮಧ್ಯರಾತ್ರಿ 12-30 ಗಂಟೆಯ ಸುಮಾರಿಗೆ ನನ್ನ ಅಳಿಯ ರಾಜೇಶ ಈತನು ನಮ್ಮ ಮನೆಗೆ ಫೋನಮಾಡಿ ಜಗತ ಸರ್ಕಲ್ ದಿಂದ ಗೋವಾ ಹೊಟೇಲ ರೋಡ ಮಧ್ಯದಲ್ಲಿ ಬರುವ ಮೋರೆ ಆಸ್ಪತ್ರೆ ಕ್ರಾಸ್ ಹತ್ತಿರ ಆನಂದ ಈತನು ಜಗತ ಸರ್ಕಲ್ ಕಡೆಯಿಂದ ಗೋವಾ ಹೊಟೇಲ ಕಡೆಗೆ ಹೋಗುವಾಗ ಮೋರೆ ಆಸ್ಪತ್ರೆ ರೋಡಿನಲ್ಲಿ ಅಟೋರೀಕ್ಷಾ ನಂ:ಕೆಎ 32 -8554 ನೇದ್ದರ ಚಾಲಕ ತನ್ನ ಅಟೋವನನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಟೋ ಸ್ಥಳದಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿದ್ದು. ಆನಂದ ಈತನಿಗೆ ಎಡಕಣ್ಣಿನ ಮೇಲೆ ರಕ್ತಗಾಯ ತಲೆಗೆ ಪೆಟ್ಟು ಬಿದ್ದು  ಬಾಯಿಂದ ವಾಂತಿಯಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಸದರ ಘಟನೆಯು ರಾತ್ರಿ 00=15 ಗಂಟೆಗೆ ಜರುಗಿದ್ದು ಅಂತಾ ತಿಳಿಸಿದಾಗ ನಾನು ಮತ್ತು ನನ್ನ ಮಗ ಆದರ್ಶ ಇಬ್ಬರು ಸ್ಥಳಕ್ಕೆ ಬಂದು ನೋಡಲು ನನ್ನ ಮಗ ಆನಂದ ಈತನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾವೆಲ್ಲರೂ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದೆವು, ಸದರಿ  ಅಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಶ್ರೀ ಕಮಲಾಕರ ತಂದೆ ವೀರಭದ್ರಪ್ಪ ಯಲಕಪಳ್ಳಿ  ಸಾ: ಮಹಾಲಕ್ಷ್ಮಿ ಲೇಔಟ  ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:87/2012 ಕಲಂ:279, 304 (ಎ) ಐಪಿಸಿ ಸಂಗಡ 187 ಐ,ಎಮ್.ವಿ ಆಕ್ಟ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳದಿಂದ ಸಾವು:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಗಂಗಾರಾಮ ತಂದೆ ಭೀಮರಾವ ದಳಪತಿ ಸಾ|| ಹುಳಗೋಳ ತಾ|| ಸೇಡಂ ರವರು ನನ್ನ ಮಗಳಾದ ಯಶೋಧಾ ಇವಳಿಗೆ ದಿನಾಂಕ:10-05-2004 ರಂದು ಚಿತ್ತಾಪೂರದ ರವಿ ತಂದೆ ಶಾಂತಪ್ಪ ಬಂದಳ್ಳಿ ಇವರ ಜೋತೆ ಸಾಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು,  ಮದುವೆಯಾದ ನಂತರ ಅವಳ ಗಂಡ ರವಿ ಮತ್ತು ಅತ್ತೆ ಮಲ್ಲಮ್ಮ ಹಾಗು ಮೈದುನರಾದ ವೆಂಕಟೇಶ, ಸಾಬಣ್ಣ ಇವರು ಅವಾಚ್ಯ ಶಬ್ದದಿಂದ ಬೈದು ಹೊಡೆ ಬಡೆ ಮಾಡುತ್ತ  ಮೈದುನರಾದ ವೆಂಕಟೆಶ ಮತ್ತು ಸಾಬಣ್ಣ ಇವರೂ ಕೂಡಾ ಕೆಟ್ಟ ವರ್ತನೆಯಿಂದ ವರ್ತಿಸುವದು ಮಲ್ಲಮ್ಮ ಅತ್ತೆ ಕೂಡಾ ಎಲ್ಲರೂ ಅವಳನ್ನು ಸರಿಯಾಗಿ ನೋಡಕೊಳ್ಳದೆ ದೈಹಿಕ ಹಾಗು ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದು ಅವರ ಕಿರುಕುಳ ತಾಳಲಾರದೇ ಮಗಳು ಯಶೋಧಾ ಇವಳು ದಿನಾಂಕ:07-09-2012 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ. ವಿನಾಃಕಾರಣ ನನ್ನ ಮಗಳಿಗೆ ದೈಹಿಕ ಹಾಗು ಮಾನಸಿಕ ಕಿರುಕುಳ ಕೊಟ್ಟಂತಹ ಗಂಡ ರವಿ  ಅತ್ತೆ ಮಲ್ಲಮ್ಮ ಮೈದುನ ವೆಂಕಟೇಶ ಮತ್ತು ಸಾಬಣ್ಣ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:80/2012 ಕಲಂ 498(ಎ), 306, ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶಿವಕುಮಾರ ತಂದೆ ಸೈಬಣ್ಣ ಸಾವಳಗಿ ಕೆಲಸ ಸಾ: ಶರಣಸಿರಸಗಿ ರವರು ದಿನಾಂಕ:09/09/2012 ರಂದು ಮದ್ಯಾಹ್ನ4-30 ಗಂಟೆಯ ಸುಮಾರಿಗೆ ನಾನು ಮಲ್ಲಪ್ಪ ತಂದೆ ಹಣಮಂತ ತಂಬಾಕವಾಡಿ,ಹಣಮಂತ ತಂದೆ ಹೊನ್ನಪ್ಪ ತಂಬಾಕವಾಡಿ ಸಾ: ಇಬ್ಬರೂ ಶರಣಸಿರಸಗಿ ರವರ ಹೊಟೇಲಿಗೆ ಹೋಗಿ ಚಾಹ ಕೇಳಿದಾಗ ಹೊಟೇಲ ಬಾಕಿ 500/- ರೂಪಾಯಿ ಕೊಡು ಅಂತಾ ಅವ್ಯಾಚ್ಯವಾಗಿ ಬೈದು ರಾಡಿನಿಂದ  ತಲೆಗೆ , ಕೈಯಿಂದ ಮುಷ್ಠಿ ಮಾಡಿ ಬಾಯಿಗೆ ಮೈಗೆ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 287/2012 ಕಲಂ 504 324 323  506 (2)  ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.