ಹಲ್ಲೆ
ಪ್ರಕರಣ:
ಶಹಾಬಾದ
ನಗರ ಪೊಲೀಸ ಠಾಣೆ:ಶ್ರೀಮತಿ ಶೀರಿನ ಗಂಡ ಮಕಬೂಲ ಪಾಶಾ ಹರಕಾರೆ ಸಾ:ಸುಭಾಸ ಚೌಕ ಶಹಾಬಾದ ರವರು ನನಗೆ ದಿನಾಂಕ:09/09/2012 ರಾತ್ರಿ 9-30
ಗಂಟೆಗೆ ಸುಮಾರಿಗೆ ಮಿಲ್ಲತ ನಗರದ ಶಕಿಲಾ ಬೇಗಂ ರವರು ಪೋನ ಮಾಡಿ ನನ್ನ ಗಂಡನು ತೀರಿಕೊಂಡಿದ್ದರಿಂದ
ನನಗೆ ಬಹಳ ಚಿಂತೆಯಾಗಿದೆ. ನೀನು ನಮ್ಮ ಮನೆಗೆ ಬಾ ಅಂದಿದ್ದಕ್ಕೆ ನಾನು ಅವಳ ಮನೆಗೆ ಹೋಗಿ ಅವಳ
ಸಂಗಡ ಮಾತನಾಡುತ್ತ ಕುಳಿತಾಗ ಜುಬೇದಾಬೇಗಂ ರವರು ಎ ರಂಡಿ ನೀನು ನಮ್ಮ ಮನೆಗೆ ಯ್ಯಾಕೆ ಬಂದಿದ್ದು, ನಮ್ಮ ಮನೆಯ ಪಂಚಾಯಿತಿ ಮಾಡಲು ನೀನು ಯಾರು, ಅಂತಾ
ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಖಾಲಿದ, ಅಬೀದ, ಅಲ್ಲಾಭಕ್ಷ, ಸಾಜೀದ ರವರು
ಕೈಯಿಂದ ಹೊಡೆ ಬಡೆ ಮಾನಭಂಗ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:117/2012 ಕಲಂ, 147, 148, 323, 324, 354, 504, 506 (2) ಸಂಗಡ
149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಸೈಯ್ಯದ ತಾಜೋದ್ದಿನ ತಂದೆ ಶಮಶೋದ್ದಿನ ಮುಲ್ಲಾ ಸಾ||ಜಿಲಾನಾಬಾದ ಗುಲಬರ್ಗಾ ರವರು ನಾನು
ದಿನಾಂಕ:06-09-2012 ರಂದು ಮದ್ಯಾಹ್ನ 2-30 ಗಂಟೆಗೆ ನಾನು ನನ್ನ ವೈಯಕ್ತಿಕ ಕೆಲಸದ ಪ್ರಯುಕ್ತ ಮೋಟಾರ
ಸೈಕಲ್ ನಂ: ಕೆಎ-32 ವಿ-6319 ನೇದ್ದರ ಮೇಲೆ ಕೇಂದ್ರ ಬಸ್ ನಿಲ್ದಾಣದಿಂದ ಹೀರಾಪೂರ ರಿಂಗ ರೋಡ
ಕಡೆಗೆ ಹೋಗುತ್ತಿದ್ದಾಗ ಸಿದ್ದಾರ್ಥ ನಗರ ಸಮೀಪ ಇರುವ ಕ್ರಾಸ್ ದಲ್ಲಿ ಚಾಲುಕ್ಯ ಬಸ್ ನಂ: ಕೆಎ-21
ಎ-2269 ನೇದ್ದರ ಚಾಲಕ ತನ್ನ ಬಸ್ ಜಿ.ಡಿ.ಎ ಮೈದಾನ ಕಡೆಗೆ ಹೋಗಲು ಅತೀವೇಗ ಮತ್ತು ಅಲಕ್ಷತನದಿಂದ ಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ನನಗೆ ಗಾಯಗೊಳಿಸಿರುತ್ತಾನೆ ಅಂತಾ ದಿನಾಂಕ:
10-09-2012 ರಂದು 11-15 ಗಂಟೆಗೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:88/2012
ಕಲಂ, 279, 337 ಐ.ಪಿ.ಸಿ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment