POLICE BHAVAN KALABURAGI

POLICE BHAVAN KALABURAGI

25 August 2012

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ಶ್ರೀ ಅಮಜದ ತಂದೆ ಮಹ್ಮದ ಖಾಸಿಂಸಾಬ ಸಾ||ಖುರೇಷಿ ಮಜೀದ ಹತ್ತಿರ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿಯಾದ ಮಹೀರುನ್ನಿಸಾ ಇವಳು ದಿನಾಂಕ:22/08/2012 ರಂದು ರಾತ್ರಿ 1-00 ಗಂಟೆಯ ಸುಮಾರಿಗೆ ನಾವೇಲ್ಲರೂ ಮಲಗಿಕೊಂಡಾಗ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿರುತ್ತಾಳೆ ನಮ್ಮ ಸಂಬಂದಿಕರಲ್ಲಿ ಹಾಗೂ ನಮ್ಮ ಅತ್ತೆ ಮಾವನವರಿಗೆ ಪೋನ ಮಾಡಿ ವಿಷಯ ತಿಳಿಸಿರುತ್ತೆನೆ. ಕಾರಣ ಕಾಣೆಯಾದ ನನ್ನ ಹೆಂಡತಿ ಮಹರುನ್ನಿಸಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:61/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಪ್ಪ ತಂದೆ ಖತಲಪ್ಪ ಕೊಚಿ ಸಾ:ಝಳಕಿ (ಕೆ) ತಾ:ಆಳಂದ  ರವರು ನಾನು ದಿನಾಂಕ:23/08/2012 ರಂದು ಬೆಳ್ಳಿಗ್ಗೆ 9-00  ಗಂಟೆ ಸುಮಾರಿಗೆ ಕುರಿಗಳು ಮೇಯಿಸಲು ನನ್ನ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದು, ನನ್ನ ಹೆಂಡತಿಯು ಸಹ  ಹೊಲದ ಕೆಲಸಕ್ಕೆ ಹೋಗಿರುತ್ತಾಳೆ. ನಾನು ಕುರಿಗಳು ಮೇಯಿಸಿಕೊಂಡು ಹೊಲದಿಂದ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಗೆ ಬಂದು, ಮನೆಯೂಳಗೆ ಹೋಗಬೇಕು ಅಂತಾ ಮನೆ ಬಾಗಿಲು ಹತ್ತಿರ ಹೋದಾಗ ಬಾಗಿಲು ಒಂದು ಫಲಕ ತೆರೆದು ಮುರಿದಿತ್ತು. ನಾನು ಮನೆಯೂಳಗೆ ಹೋಗಿ ನೋಡಲು ಬಟ್ಟೆಗಳು ,ಎಲ್.ಐ.ಸಿ ಪಾಲಸಿಗಳು ಹೊಲದ ಕಾಗದ ಪತ್ರಗಳು ಇತರೇ ಕಾಗದ ಪತ್ರಗಳು ಮನೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದಿದ್ದವು ನನ್ನ ಮನೆಯಲ್ಲಿನ ಪೆಟ್ಟಿಗೆ ಮುರಿದಿದ್ದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಮತ್ತು ನಗದು 10,000/-ಸಾವಿರ ರೂಪಾಯಿಗಳು. ಹೀಗೆ ಒಟ್ಟು 1,00,150/- (ಒಂದು ಲಕ್ಷದ ಒಂದು ನೂರಾ ಐವತ್ತು ) ರೂಪಾಯಿ ಕಿಮ್ಮತ್ತಿನವುಗಳು ಕಳ್ಳತನವಾಗಿರುತ್ತದೆ. ನನ್ನ ಮನೆಯಲ್ಲಿ ಕಳ್ಳತನ ಆದ ಬಗ್ಗೆ ನಮ್ಮೂರ ಶಿವಪ್ಪ ತಾಯಿ ಗೌರಾಬಾಯಿ ಕೊಚಿ, ಗೌರಾಬಾಯಿ ತಂದೆ ಶಿವಪ್ಪ ಕೊಚಿ ಸಾ:ಝಳಕಿ(ಕೆ) ಇವರೆ ಕಳ್ಳತನ ಮಾಡಿರಬಹುದು ಅಂತಾ ಸಂಶಯ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ: 454,380  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ಮಲ್ಲಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಕಾಶಿಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23-08-2012 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಬಂದಾರಿಯಲ್ಲಿರುವ ಕಾಲುವೆಯಲ್ಲಿನ ಕಸ ತೆಗೆಯುತ್ತಿರುವಾಗ ಅಣ್ಣಪ್ಪಾ ಮತ್ತು ಆತನ ಮಗ ದಿಲೀಪ ಇಬ್ಬರು ಕೂಡಿಕೊಂಡು ಬಂದು ನಮ್ಮ ಮಧ್ಯ ಇರುವ ಬಂದಾರಿಯಲ್ಲಿ ನೀರು ಹೋಗುವದನ್ನು ಬಂದ ಮಾಡು ಅಂದರೆ ಕೇಳುತ್ತಿಲ್ಲಾ ಅಂತಾ ಮುಂದೆ ಹೋಗದಂತೆ ತೆಡೆದು ಗಟ್ಟಿಯಾಗಿ ಹಿಡಿದು ಅಲ್ಲೇ ಬಿದ್ದಿರುವ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಮತ್ತು ಕೈ ಮುಷ್ಠಿ ಮಾಡಿ, ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 95/2012 ಕಲಂ. 341, 323, 324, 447, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ, ಅಣ್ಣಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಶಾರದಾಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23/08/2012 ರಂದು ಬೆಳಿಗ್ಗೆ ಹೊಲಕ್ಕೆ ಹೋಗಿ ಹೊಲದಲ್ಲಿ ಕಸ ತೆಗೆದು ನಮ್ಮ ಬಂದಾರಿಯಲ್ಲಿ ಹಾಕುತ್ತಿರುವಾಗ ಸಾಯಂಕಾಲ 5-45 ಗಂಟೆಗೆ ನನ್ನ ತಮ್ಮ ಮಲ್ಲಪ್ಪಾ ಈತನು ಬಂದು ನನಗೆ ಅವಾಚ್ಯವಾಗಿ ಬೈದು ನಮ್ಮ ನೀರಿನ ಕಾಲುವೆಯಲ್ಲಿ ಕಸ ಹಾಕಿ ನೀರು ಹೋಗುವದನ್ನು ಬಂದ ಮಾಡುತ್ತಿದ್ದಿರಿ ಅಂತಾ ಅನ್ನುತ್ತಿದ್ದಾಗ ಆಗ ನಾನು ಈ ಬಂದಾರಿ ನಮಗೆ ಸೇರಿದ್ದು. ಪ್ರತಿ ವರ್ಷ ಬಂದಾರಿ ಕೇದರಿ ಹಾಳು ಮಾಡುತ್ತಿದ್ದಿರಿ ಅಂತಾ ಅಂದಿದಕ್ಕೆ ನನಗೆ ಎದುರು ಮಾತನಾಡುತ್ತಿ ಅಂತಾ ಅವಾಚ್ಯಾವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡುವಿ ಅಲ್ಲೇ ಬಿದ್ದಿರುವ ಬಡಿಗೆ ತೆಗೆದುಕೊಂಡು ನನ್ನ ಬಲಗಡೆ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 96/2012 ಕಲಂ. 341, 323, 324, 447, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

24 August 2012

GULBARGA DISTRICT


ಗುಲಬರ್ಗಾ ಗ್ರಾಮೀಣ ವೃತ್ತ ಪೊಲೀಸ್ ಅಧಿಕಾರಿಗಳ ಕಾರ್ಯಚರಣೆ,
ಕೊಲೆ ಪ್ರಕರಣದ ಆರೋಪಿಗಳ ಬಂದನ.
ದಿನಾಂಕ:22/03/2012 ರಂದು ಮಹಾಗಾಂವ ಪೊಲೀಸ ಠಾಣೆಯಲ್ಲಿ ಶ್ರೀ ಬಸವರಾಜ ಭೂತಪೂರ ಇವರು ತನ್ನ ಮಗನಾದ ಶಶಿಕುಮಾರ  ಹೈಸ್ಕೂಲ ಶಿಕ್ಷಕನಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಅವನ ಕುತ್ತಿಗೆಗೆ ವೈರ ಬಿಗಿದು ಕೊಲೆ ಮಾಡಿ ಶಶಿಕುಮಾರನ ಶವ ನಾಗೂರ ಗ್ರಾಮದ ಹಳ್ಳದಲ್ಲಿ ಬಿಸಾಕಿರುವರೆಂದು ಅರ್ಜಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 29/2012 ಕಲಂ 302, 201 ಐಪಿಸಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿ  ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ, ಮಾನ್ಯ ಹೆಚ್ಚುವರಿ ಎಸ.ಪಿ ಗುಲಬರ್ಗಾ ಹಾಗೂ ಡಿವೈಎಸ್ಪಿ ಗ್ರಾಮೀಣ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕೊಲೆಯಾದ ಶಶಿಕುಮಾರನ ಮೊಬೈಲನು ಆರೋಪಿತರು ದೋಚಿಕೊಂಡು ಹೋದ ಮೇರೆಗೆ ಸದರಿ ಮೋಬೈಲನ್ನು ಆಧರಸಿ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾ ರವರು, ಮತ್ತು  ಶ್ರೀ ಶಾಂತಿನಾಥ ಪಿಎಸ್ಐ ಕಮಲಾಪೂರ,  ಶ್ರೀ ಆನಂದರಾವ  ಎಸ್ ಎನ್ ಪಿಎಸ್ಐ ಗುಲಬರ್ಗಾ ಗ್ರಾಮೀಣ ಠಾಣೆ, ಶ್ರೀ ಹೆಚ್, ಆರ್, ನಡುಗಡ್ಡಿ ಪಿಎಸ್ಐ ಮಹಾಗಾಂವ ಪೊಲೀಸ ಠಾಣೆ, ಹಾಗೂ ಸಿಬ್ಬಂದಿಯವರಾದ  ಮಹಾದೇವ ಎಎಸ್ಐ, ಪ್ರಭುಲಿಂಗ,ಸೂರ್ಯಕಾಂತ ಮುಖ್ಯ ಪೇದೆ, ಪೇದೆಗಳಾದ ಖಂಡೇರಾವ, ಯಶವಂತ, ದತ್ತಾತ್ರೇಯ ಹುಸೇನಬಾಷಾ, ರಾಜಕುಮಾರ, ಆನಂದ, ವಾಹನ ಚಾಲಕ ರಾದ ಬಂಡೆಪ್ಪ, ಮಲ್ಲಿಕಾರ್ಜುನರವರನೊಳಗೊಂಡ  ತಂಡದೊಂದಿಗೆ  ಹಾಗೂ ತನಿಖೆಗೆ ವೈಜ್ಞಾನಿಕವಾಗಿ ಸಹಾಯ ನೀಡಿ  ಪ್ರಕರಣದ ಪತ್ತೆಗೆ ಸಹಾಯ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ ಬಿ, ಬಿ, ಪಟೇಲ ಪಿಐ ಡಿಸಿಐಬಿ ಸಿಬ್ಬಂದಿಯವರಾದ ಗಂಗಯ್ಯ, ಚನ್ನವೀರ, ಭಿಮಾಶಂಕರ ಇವರುಗಳ ಸಹಾಯದಿಂದ ಕೊಲೆಗಾರರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಿಸಿದಾಗ ಕೊಲೆಗೈದ ಆರೋಪಿತರಾದ 1) ಸಾತಲಿಂಗ ತಂದೆ ಬಸವರಾಜ ವ: 28 ವರ್ಷ ಸಾ: ಗುಲಬರ್ಗಾ ಇವನು ಮೃತನ ಹೆಂಡತಿ ಮೇಲೆ ಕೆಟ್ಟ ದೃಷ್ಠಿ ಬೀರಿದವನು. 2) ನಾಗರಾಜ ತಂದೆ ಚನ್ನಬಸಪ್ಪ ವ: 23 ವರ್ಷ ಸಾ: ಗುಲಬರ್ಗಾ ಇತನು ಮೃತನಿಂದ ಸಾಲ ಪಡೆದು 20 ಸಾವಿರ ರೂಪಾಯಿ ಮರಳಿ ಕೊಡಬಾರದು ಅನ್ನುವ ಉದ್ದೇಶ ಹೊಂದಿದ್ದು. 3) ಶರಣು ತಂದೆ ಮಾಹಾಂತಯ್ಯ ವ: 21 ಸಾ: ಗುಲಬರ್ಗಾ ಇವನು ಮೃತನ ಮೈಮೇಲಿನ ಬಂಗಾರದ ಲಾಕೇಟು ಹಾಗೂ ಉಂಗುರ ದೋಚಲು ಉದ್ದೇಶ ಹೊಂದಿ ಸದರಿಯವರು ಗೆಳೆತನದೊಂದಿಗೆ ಇದ್ದು ಮೃತ ಶಶಿಕುಮಾರನಿಗೆ ದಿನಾಂಕ:20-03-2012 ರಂದು ಪುಸಲಾಯಿಸಿ ಟಾಟಾ ಸುಮೋ ವಿಕ್ಟಾ ಸಂಖ್ಯೆ ಕೆಎ-32 ಎಮ್-6099 ನೇದ್ದರಲ್ಲಿ ಕರೆದುಕೊಂಡು ಹೋಗಿ ಬ್ರೇಕ ವೈರದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಆತನ ಮೈಮೇಲಿನ ಬಂಗಾರದ ಲಾಕೇಟ ಉಂಗುರ ಮೊಬೈಲಗಳನ್ನು ದೋಚಿಕೊಂಡು ಹೋಗಿ ಸಾಕ್ಷಿ ಪುರಾವೆ ನಾಶ ಮಾಡಲು ಶವವನ್ನು  ನಾಗೂರ ಹಳ್ಳದಲ್ಲಿ  ಬಿಸಾಕಿರುತ್ತಾರೆ.ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಸುಮೋ ವಿಕ್ಟಾ ವಾಹನ ಹಾಗೂ ಬ್ರೇಕ ವೈರ, ಮೃತ ಶಶಿಕುಮಾರನಿಂದ ದೋಚಲಾಗಿರುವ ಬಂಗಾರದ ಲಾಕೇಟ, ಉಂಗುರ, ಮೋಬೈಲ ಜಪ್ತಿ ಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನ ಕುರಿತು ಕಳಿಸಲಾಗಿದೆ. ಸದರಿ ಪತ್ತೆದಳ ತಂಡದ ಕಾರ್ಯಕ್ಕೆ  ಮೇಲಾಧಿಕಾರಿಯವರು ಪ್ರಶಂಶಿಸಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ರಾಜಶೇಖರ ತಂದೆ ಮಹಾಂತಗೌಡ ಬಿರಾದಾ ಸಾ|| ಗೊದುತಾಯಿ ನಗರ ಗುಲಬರ್ಗಾ ರವರು ನಾನು ಎಸ್.ವಿ ಬಂದಿ ಎನ್ನುವವರ ಮನೆಯಲ್ಲಿ 2.1/2 ವರ್ಷದಿಂದ ಮೊದಲನೆ ಮಹಡಿಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕ:23/08/2012 ರಂದು ರಾತ್ರಿ ಮನೆಯರೆಲ್ಲರೂ ಊಟ ಮಾಡಿಕೊಂಡು  ಮಲಗಿದ್ದು, ಸದರಿ ದಿನದಂದು ಲೈಟು ಹೋಗಿ ಬಂದು ತೊಂದರೆ ಮಾಡುತ್ತಿದ್ದರಿಂದ ಮನೆಯ ಮುಖ್ಯ ಬಾಗಿಲು ಸ್ವಲ್ಪ ತೆರೆದಿಟ್ಟುದ್ದು ಕೊಂಡಿ ಹಾಕಿರಲಿಲ್ಲ. ಇದನ್ನು ಯಾರೋ ಗಮನಿಸಿ ದಿನಾಂಕ 24/08/2012 ರ ಬೆಳಗಿನ ಜಾವ 4-15 ರಿಂದ 5-15 ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಮೊದಲನೆ ಮಹಡಿಗೆ ಬರಲು ಎಣಿ ತಂದು ಮಾಲಿಕರ ಮನೆಯ ಹತ್ತಿರ ಹಚ್ಚಿ ಮೇಲೆ ಬಂದು ನಮ್ಮ ಮನೆಯಲ್ಲಿ ನೋಕಿಯಾ ಸಿ-3 ಮೊಬೈಲ ಐ.ಎಂ.ಇ.ಐ ನಂ. 351984041925785,ನೋಕಿಯಾ ಎಕ್ಸ - 2 ಅದರಲ್ಲಿ 9591033345 ಸಿಮ್,ನೋಕಿಯಾ ಸಿ-2 06,ನೋಕಿಯಾ ಸಿ1, ಮೊಬೈಲ ಅದರಲ್ಲಿ ಸಿಮ್ 8867012938, ಹೆಚ್.ಎಂ.ಟಿ ಕೈ ಗಡಿಯಾರ ಅ.ಕಿ 700/- ಹಾಗೂ ನಗದು ಹಣ 11500/- ರೂ. ಹೀಗೆ ಒಟ್ಟು ನಾಲ್ಕು ಮೊಬೈಲ ಸೆಟಗಳು ಒಟ್ಟು 19000/- ರೂ. ಅಂದಾಜು ಬೆಲೆಯ ವಸ್ತುಗಳು ಕಳುವಾಗಿರುತ್ತವೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 75/2012 ಕಲಂ 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.