POLICE BHAVAN KALABURAGI

POLICE BHAVAN KALABURAGI

02 August 2012

GULBAARGA DIST REPORTED CRIMES


ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಪ್ರಭಾಕರ ತಂದೆ ವಿಠಲರಾವ ನಾಯಕ ಸಾ|| ಕೋಬ್ರಾ ಕಾಲನಿ ಹೀರಾಪೂರರವರು  ದಿನಾಂಕ: 01/08/2012 ರಂದು ಮುಂಜಾನೆ  10:05 ಎಎಮ ದಿಂದ 10:45 ಎಎಮ ಮಧ್ಯದಲ್ಲಿ  ಕುಮಾರಿ ಪುಷ್ಪಾ ತಂದೆ ವಿಠಲರಾವ ನಾಯಕ ವ: 25 ವರ್ಷ ಜಾ: ಬ್ರಾಹ್ಮಣ ಸಾ: ಕೋಬ್ರಾ ಕಾಲನಿ ರವರು ಹೀರಾಪೂರ ತಾ: ಜಿ: ಗುಲಬರ್ಗಾ ಮೃತಳು  ತಾನು ಹೋದ ವರ್ಷ 1 ಲಕ್ಷ ರೂಪಾಯಗಳು ಕೊಟ್ಟು ಬಿ.ಎಸಿ ನರ್ಸಿಂಗ ಕೋರ್ಸ ಮಾಡಿದ್ದು ಹಾಗು ತಾನು ಹೊರದೇಶಕ್ಕೆ ಹೋಗುವ ಕುರಿತು 1 ಲಕ್ಷ ರೂಪಾಯಿಗಳು ಅವಶ್ಯಕತೆ ಇದ್ದ ಕಾರಣ ಅದನ್ನು ಹೇಗೆ ಜೋಡಿಸಬೇಕು ಮತ್ತು ಅದರಿಂದ ತನ್ನ ಕುಟುಂಬಕ್ಕೆ ಆರ್ಥಿಕ ಬಾರ ಹೆಚ್ಚಾಗಬಹುದು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ  ಶ್ರೀ ಪ್ರಭಾಕರ ತಂದೆ ವಿಠಲರಾವ ನಾಯಕ ಸಾ|| ಕೋಬ್ರಾ ಕಾಲನಿ ಹೀರಾಪೂರರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 21/2012 ಕಲಂ 174 ಸಿಅರ.ಪಿಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ  
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಪೀರಪ್ಪ ತಂದೆ ರಾಣಪ್ಪ ಕಡೋಳ್ಳಿ ಉ: ಚಾಲಕ ಕಮ್‌ ನಿರ್ವಾಹಕ ಸಾ: ಚಿಂಚನಸೂರ ರವರು ನಾನು ಮತ್ತು ವಿವೇಕಾನಂದ ಕೂಡಿಕೊಂಡು ದಿನಾಂಕ:01-08-2012 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಕಲ್ಲಹಂಗರಗಾ ಗ್ರಾಮದ ಸರಕಾರಿ ಶಾಲೆಯ ಮುಂದಿನ ಬ್ರೀಡ್ಜಿನ ಮೇಲೆ ಕೆಎ 32 ವಾಯ್ -3697 ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಬ್ರೀಡ್ಜಿನ ಮೇಲೆ ಎಮ್ಮೆಗಳು ಹೋಗುತ್ತಿದ್ದು. ಒಮ್ಮೆಲೆ ಕಟ ಮಾಡಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬಾರಿ ರಕ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 248/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

01 August 2012

GULBARGA DIST REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀಮತಿ ಮುನ್ನುಬಾಯಿ ಗಂಡ ರಮೇಶ ರಾಠೋಡ    ಸಾ: ಭರತ ನಗರ    ತಾಂಡಾ   ಗುಲಬರ್ಗಾ ನಾನು ದಿನಾಂಕ 31-07-12 ರಂದು ಸಾಯಂಕಾಲ  6-30  ಗಂಟೆಗೆ  ಆರ.ಟಿ.ಓ.ಕ್ರಾಸ್ ದಿಂದ  ಸರ್ಕಾರಿ ಆಸ್ಪತ್ರೆ ಮುಖ್ಯ ರಸ್ತೆ ಕಡೆ ರೋಡಿನಲ್ಲಿ ಬರುತ್ತಿರುವಾಗ ವಿರೇಶ ನಗರ ಕ್ರಾಸ್ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಯು-2096 ನೇದ್ದರ ಸವಾರನು ತನ್ನ ಮೋಟಾರ ಸೈಕಲ ಅತೀವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಆರ್.ಟಿ.ಓ. ಕ್ರಾಸ್ ಕಡೆಯಿಂದ ಬಂದು ನನಗೆ  ಹಿಂದಿನಿಂದ ಡಿಕ್ಕಿ ಪಡಿಸಿ  ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲಿ ಬಿಟ್ಟು ಓಡಿ ಹೋಗಿರುತ್ತಾಬೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 79/2012 ಕಲಂ 279, 337 ಐಪಿಸಿ ಸಮಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ರಾಮಣ್ಣಾ ತಂದೆ ಬಂಡಪ್ಪಾ ಲೆಂಗಟಿ,ಸಾ|| ಬಬಲಾದ (ಐಕೆ) ರವರು ನಾನು ದಿನಾಂಕ: 31-07-2012 ರಂದು ಮಧ್ಯಾಹ್ನ 2-00  ಗಂಟೆ ಸುಮಾರಿಗೆ ಗಂಜ ಬಸ್ ನಿಲ್ದಾಣದ ಹತ್ತಿರದ ಲಾಹೋಟಿ ಕಲ್ಯಾಣ ಮಂಟಪದ ಎದುರಿನ ರೋಡಿನ ಮೇಲೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ಯು-7143 ನೇದ್ದರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 41/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಟ್ಟೆ ದ್ವಂಸ ಮಾಡಿದ ಬಗ್ಗೆ:
ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ: 30/07/2012 ರಂದು ಮುಂಜಾನೆ 10-30  ಗಂಟೆಗೆ ಬಿರಾಳ (ಬಿ) ಗ್ರಾಮದ ಅಧ್ಯಕ್ಷರು ಗ್ರಾಮ ಪಂಚಾಯತಿಯ ಇತರರೊಂದಿಗೆ ಕೂಡಿಕೊಂಡು ನ್ಯಾಯಲಯದ ಅದೇಶವನ್ನು ಮೇಲಾಧಿಕಾರಿಗಳಿಗೆ ತಿಳಿಸದೆ, ಹಾಗೂ ಅವರಿಂದ ಸೂಕ್ತ ಮಾರ್ಗದರ್ಶನ ಪಡೆಯದೆ ಪಂಚಾಯಿತಿ ಕಾರ್ಯಲಯದ ಎದುರುಗಡೆ ಇರುವ ಕಟ್ಟೆಯನ್ನು (ಬಸವ ಕಟ್ಟೆಯನ್ನು) ದ್ವಂಸಮಾಡಿ ಒಂದು ಕೋಮಿನ ಜನರ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು ಅವರ ವಿರುದ್ದ ಮುಂದಿನ ಕ್ರಮ ಜರುಗಿಸುವುದು. ಅಂತಾ ಶ್ರೀ ವೀರೆಂದ್ರ ಪಾಟೀಲ ಪಂಚಾಯತ ಅಭಿವೃದ್ದಿ ಅಧೀಕಾರಿ ಗ್ರಾಮ ಪಂಚಾಯತ ಅಧಿಕಾರಿ  ಬಿರಾಳ (ಬಿ)  ತಾ||ಜೇವರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 111/2012 ಕಲಂ 143, 147, 153 (ಎ)  ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ, 

31 July 2012

GULBARGA DIST REPORTED CRIME

ಅಪಹರಣ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ :ಶ್ರೀ, ಸೋಮಯ್ಯ ತಂದೆ ಭೀಮಯ್ಯ ಒಡ್ಡರ ಸಾ|| ಅರಳಗುಂಡಗಿ ರವರು ನನಗೆ ರೇಶ್ಮಾ ಅಂತಾ 13 ವರ್ಷದ ಮಗಳಿದ್ದು,  ನಮ್ಮ ಜಾತಿಯವನೆಯಾದ ಹಣಮಂತ ತಂದೆ ಯಂಕಯ್ಯ ಕಲ್ಲೂರ ಇತನು ನಮ್ಮ ಮನೆಗೆ ಆಗಾಗ ಮನಗೆ ಬಂದು ಹೋಗಿ ನಮ್ಮೊಂದಿಗೆ ಸಲುಗೆಯಿಂದ ಮಾತನಾಡಿ ಹೋಗುತ್ತಿದ್ದನು.ದಿನಾಂಕ: 23-07-2012 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ಗೌಂಡಿ ಕೆಲಸಕ್ಕೆಂದು ಕುರನಳ್ಳಿ ಗ್ರಾಮಕ್ಕೆ ಹೋಗಿದ್ದೆನು, ನಮ್ಮ ಮನೆಯಲ್ಲಿ ನನ್ನ ಹೆಂಡತಿಯಾದ ನಾಗಮ್ಮ ಮತ್ತು ನಮ್ಮ ಮಗಳಾದ ರೇಶ್ಮಾ ಇವರು ಮನೆಯಲ್ಲಿದ್ದರು ರಾತ್ರಿ 9 ಗಂಟೆಗೆ ನಾನು ಕೆಲಸದಿಂದ ಮನೆಗೆ ಬಂದಾಗ ನಮ್ಮೂರಿನ ಭೀಮಯ್ಯ ತಂದೆ ಯಂಕಯ್ಯ ಕಡಕೋಳ, ರಾಜು ತಂದೆ ರಾಮಯ್ಯ ರವರು  ನಿಮ್ಮ ಮಗಳಾದ ರೇಶ್ಮಾ ಇವಳಿಗೆ ಹಣಮಂತ ತಂದೆ ಯಂಕಯ್ಯ ಕಲ್ಲೂರ,. ಶಿವಾನಂದ ತಂದೆ ನಾಗಪ್ಪ ಒಡ್ಡರ, ಮಾಹಾಂತೇಶ ತಂದೆ ನಾಗಪ್ಪ ಒಡ್ಡರ, ಮಾರ್ಖಂಡಯ್ಯ ತಂದೆ ಗುಂಡಪ್ಪ ಒಡ್ಡರ ಮತ್ತು ನಾಗಪ್ಪ ತಂದೆ ರಾಮಸ್ವಾಮಿ ಒಡ್ಡರ ಹೀಗೆಲ್ಲರೂ ಎರಡು ಮೋಟಾರ ಸೈಕಲ್ ಗಳ ಮೇಲೆ ಬಂದವರೆ ರೇಶ್ಮಾ ಸಂಡಾಸಕ್ಕೆ ಹೋಗಿ ವಾಪಸ ಮನೆಯ ಕಡೆಗೆ ಬರುವಾಗ ಸರಕಾರಿ ಪ್ರಾಥಮಿಕ ಶಾಲೆ ಹಿಂದುಗಡೆ ರೋಡಿನ ಮೇಲೆ ಎತ್ತಿಕೊಂಡು ಮೋಟಾರ ಸೈಕಲ್ ಮೇಲೆ ಕುಡಿಸಿಕೊಂಡು ನಡೆ ಅಂತಾ ಪ್ರಚೋದನೆ ಮಾಡಿದರು ಆಗ ರೇಶ್ಮಾ ಇವಳು ಬೇಡ ಬೇಡ ಅಂತಾ ಚೀರಾಡಿದರೂ ನಿನಗೆ ನಾನು ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಜಬರದಸ್ತಿಯಿಂದ ಹಣಮಂತನು ತನ್ನ ಗಾಡಿಯ ಮೇಲೆ ಕುಡಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2012 ಕಲಂ 143, 366 (ಎ) 109 , 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.