ಅಪಘಾತ
ಪ್ರಕರಣ:
ಹೆಚ್ಚುವರಿ
ಸಂಚಾರಿ ಪೊಲೀಸ್ ಠಾಣೆ : ಶ್ರೀಮತಿ ಮುನ್ನುಬಾಯಿ
ಗಂಡ ರಮೇಶ ರಾಠೋಡ ಸಾ: ಭರತ ನಗರ ತಾಂಡಾ ಗುಲಬರ್ಗಾ ನಾನು ದಿನಾಂಕ 31-07-12 ರಂದು ಸಾಯಂಕಾಲ 6-30 ಗಂಟೆಗೆ ಆರ.ಟಿ.ಓ.ಕ್ರಾಸ್
ದಿಂದ ಸರ್ಕಾರಿ ಆಸ್ಪತ್ರೆ ಮುಖ್ಯ ರಸ್ತೆ ಕಡೆ ರೋಡಿನಲ್ಲಿ
ಬರುತ್ತಿರುವಾಗ ವಿರೇಶ ನಗರ ಕ್ರಾಸ್ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಯು-2096 ನೇದ್ದರ ಸವಾರನು
ತನ್ನ ಮೋಟಾರ ಸೈಕಲ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಆರ್.ಟಿ.ಓ. ಕ್ರಾಸ್ ಕಡೆಯಿಂದ ಬಂದು ನನಗೆ
ಹಿಂದಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿ ತನ್ನ
ಮೋಟಾರ ಸೈಕಲ ಸ್ಥಳದಲಿ ಬಿಟ್ಟು ಓಡಿ ಹೋಗಿರುತ್ತಾಬೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ: 79/2012 ಕಲಂ 279, 337 ಐಪಿಸಿ ಸಮಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ
ಪೊಲೀಸ್ ಠಾಣೆ:ಶ್ರೀ ರಾಮಣ್ಣಾ ತಂದೆ
ಬಂಡಪ್ಪಾ ಲೆಂಗಟಿ,ಸಾ|| ಬಬಲಾದ (ಐಕೆ)
ರವರು ನಾನು ದಿನಾಂಕ: 31-07-2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಗಂಜ ಬಸ್ ನಿಲ್ದಾಣದ ಹತ್ತಿರದ ಲಾಹೋಟಿ
ಕಲ್ಯಾಣ ಮಂಟಪದ ಎದುರಿನ ರೋಡಿನ ಮೇಲೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೋಟಾರ ಸೈಕಲ ನಂ.
ಕೆ.ಎ 32 ಯು-7143 ನೇದ್ದರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ
ದಾಟುತ್ತಿದ್ದ ನನಗೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 41/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಕಟ್ಟೆ ದ್ವಂಸ ಮಾಡಿದ ಬಗ್ಗೆ:
ಜೇವರ್ಗಿ ಪೊಲೀಸ್ ಠಾಣೆ:
ದಿನಾಂಕ:
30/07/2012 ರಂದು ಮುಂಜಾನೆ 10-30
ಗಂಟೆಗೆ ಬಿರಾಳ
(ಬಿ) ಗ್ರಾಮದ ಅಧ್ಯಕ್ಷರು ಗ್ರಾಮ ಪಂಚಾಯತಿಯ ಇತರರೊಂದಿಗೆ ಕೂಡಿಕೊಂಡು
ನ್ಯಾಯಲಯದ ಅದೇಶವನ್ನು ಮೇಲಾಧಿಕಾರಿಗಳಿಗೆ ತಿಳಿಸದೆ, ಹಾಗೂ ಅವರಿಂದ ಸೂಕ್ತ ಮಾರ್ಗದರ್ಶನ ಪಡೆಯದೆ
ಪಂಚಾಯಿತಿ ಕಾರ್ಯಲಯದ ಎದುರುಗಡೆ ಇರುವ ಕಟ್ಟೆಯನ್ನು (ಬಸವ ಕಟ್ಟೆಯನ್ನು) ದ್ವಂಸಮಾಡಿ ಒಂದು
ಕೋಮಿನ ಜನರ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು ಅವರ ವಿರುದ್ದ ಮುಂದಿನ
ಕ್ರಮ ಜರುಗಿಸುವುದು. ಅಂತಾ ಶ್ರೀ ವೀರೆಂದ್ರ ಪಾಟೀಲ ಪಂಚಾಯತ ಅಭಿವೃದ್ದಿ ಅಧೀಕಾರಿ ಗ್ರಾಮ
ಪಂಚಾಯತ ಅಧಿಕಾರಿ ಬಿರಾಳ (ಬಿ) ತಾ||ಜೇವರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 111/2012 ಕಲಂ
143, 147, 153 (ಎ) ಸಂಗಡ 149 ಐಪಿಸಿ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
No comments:
Post a Comment