POLICE BHAVAN KALABURAGI

POLICE BHAVAN KALABURAGI

17 July 2012

GULBARGA DIST REPORTED CRIME


ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ: ಶ್ರೀ.ವಿನೋದ ತಂದೆ ಈಶ್ವರ ರಾಗಿ ಸಾ||ಡೊಂಗರಗಾಂವ ತಾ||ಗುಲಬರ್ಗಾರವರು ನಾನು ದಿನಾಂಕ: 16/07/2012 ರಂದು ಸಾಯಂಕಾಲ 6-00 ಗಂಟೆಗೆ ಕೂಲಿ ಕೆಲಸ ಮುಗಿಸಿಕೊಂಡು ಡೊಂಗರಗಾಂವ ಕ್ರಾಸ್ ಹತ್ತಿರ ಬಂದಾಗ ನಮ್ಮೂರ ನಮ್ಮ ಸಂಭಂದಿಕನಾದ  ಕುಶಾ ತಂದೆ ಕರಬಸಪ್ಪ ತಳವಾರ ವ: 18 ವರ್ಷ ಈತನು ಮರಗುತ್ತಿ ಕ್ರಾಸ್ ಹತ್ತಿರ ಹೋಗಿ ಚಹಾ ಕುಡಿದು ಬರೋಣ ನಡೆ ಅಂತಾ ಹೇಳಿದ್ದರಿಂದ ನಾನು ಮತ್ತು ಕುಶಾ ಕೂಡಿಕೊಂಡು  ಚಹಾ ಕುಡಿಯುವ ಸಲುವಾಗಿ ಮರಗುತ್ತಿ ಕ್ರಾಸ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಮರಗುತ್ತಿ ಕ್ರಾಸ್ ಸಮೀಪ ಕುಶಾ ಈತನು ಮೂತ್ರ ವಿಸರ್ಜನೆ ಮಾಡಿ ರಸ್ತೆ ದಾಟುತ್ತಿದ್ದಾಗ ಹುಮನಾಬಾದ ಕಡೆಯಿಂದ ಒಬ್ಬ ಡಿ.ಸಿ.ಎಂ. ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕುಶಾ ಈತನಿಗೆ ಡಿಕ್ಕಿ ಪಡಿಸಿದನು. ನಾನು ಮತ್ತು ಪುಂಡಲೀಕ ತಂದೆ ದೇವಪ್ಪ ಹಿರೋಬಿ ಸಾ:ಮರಗುತ್ತಿ, ಕಾಮಣ್ಣ ತಂದೆ ಶರಣಪ್ಪ ಧನಗರ ಸಾ:ಡೊಂಗರಗಾಂವ ಎಲ್ಲರೂ ಕೂಡಿಕೊಂಡು ಕುಶಾ ಈತನಿಗೆ ಎಬ್ಬಿಸಿ ನೋಡಲಾಗಿ ಕುಶಾನ ತೆಲೆಗೆ, ಎದೆಗೆ, ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ನಾವು ಎಷ್ಟು ಎಬ್ಬಿಸಿದರೂ ಕಣ್ಣು ತೆರೆಯದೇ ಬೇಹೋಷ್ ಆಗಿ ಬಿದ್ದಿದ್ದನು. ಅಪಘಾತ ಪಡಿಸಿದ ಡಿ.ಸಿ.ಎಂ. ವಾಹನ ನೋಡಲಾಗಿ ಅದರ ನಂಬರ್ ಕೆಎ-38- 637 ನೇದ್ದು ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ರವಿಚಂದ್ರನ್ ತಂದೆ ಮೇಘನಾಥ ರಾಠೋಡ ವ: 28 ವರ್ಷ  ಸಾ: ದಿನಸಿ [ಕೆ]ತಾಂಡಾ  ತಾ;ಜಿ; ಗುಲಬರ್ಗಾ ಅಂತಾ ತಿಳಿಸಿದನು. ಉಪಚಾರ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಫಲಿಸದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 84/2012 ಕಲಂ  279.337.304[ಎ] ಐಪಿಸಿ ಸಂಗಡ 187 ಐಎಂವ್ಹಿ ಆಕ್ಟ್  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

16 July 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಮಹ್ಮದ ರಫೀಕ  ತಂದೆ ಬಾಬುಮಿಯಾ   ಸಾ; ಅಕ್ಬರ ಮಜೀದ ಹತ್ತಿರ ಖಮರ ಕಾಲೋನಿ  ಗುಲಬರ್ಗಾರವರು   ನಾನು ದಿನಾಂಕ 15-07-2012 ರಂದು 6-30 ಗಂಟೆಗೆ ಅರ.ಪಿ.ಸರ್ಕಲ್ ದಿಂದ ರಾಮ ಮಂದಿರ ರಿಂಗ ರೋಡ ಮಧ್ಯದಲ್ಲಿ ಬರುವ ಚಿತ್ತಾರಿ ಅಡ್ಡಾ ಹತ್ತಿರ ನಾನು  ರೋಡಿನ ಸೈಡಿನಲ್ಲಿ ನಿಂತಿರುವಾಗ ಮೋಟಾರ ಸೈಕಲ್  ನಂ: ಕೆಎ 32 ಆರ್ -5116 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಸಾದಾಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 76/2012  ಕಲಂ, 279, 337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜಬರಿ ಸಂಭೋಗಕ್ಕೆ ಪ್ರಯತ್ನ ಪ್ರಕರಣ:
ಗ್ರಾಮೀಣ ಪೊಲೀಸ್  ಠಾಣೆ : ಗುಲಬರ್ಗಾ ನಗರದ ಅಕ್ಕಮಹಾದೇವಿ ಕಾಲನಿಯ (ಕೆ.ಹೆಚ.ಬಿ) ಕಾಲೋನಿಯ ಹೌಸಿಂಗ ಬೊರ್ಡದಲ್ಲಿ  ದಿನಾಂಕ: 15-07-2012 ರಂದು ಬೆಳಗ್ಗೆ 3-30 ಗಂಟೆಗೆ ನಾನು ಮನೆಯಲ್ಲಿ ಮಲಗಿಕೊಂಡಾಗ ಅಣ್ಣಾರಾಯ ತಳವಾರ ಇತನು ಬಂದು ಏನೋ ಮಾತನಾಡುವದಿದೆ ಎಂದು ಹೇಳುತ್ತಾ ಮನೆಯೊಳಗೆ ಬಂದು ಜಬರಿ ಸಂಭೋಗ ಮಾಡಲು ಪ್ರಯತ್ನಿಸಿದ್ದಾನೆ ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಅಕ್ಕ ಮಹಾದೇವಿ ಕಾಲೋನಿಯ ಗೃಹಿಣೆಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 231/12 ಕಲಂ 448, 324, 376, 511 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ: ದಿನಾಂಕ 15.07.2012 ರಂದು 0430 ಗಂಟೆಯಿಂದ 0630 ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯೊಳಗೆ ಅತಿಕ್ರಮ ಪ್ರವೇಶಮಾಡಿ ಅಲಮಾರಿಯ ಮೇಲೆ ಇಟ್ಟ ಚಾವಿಯನ್ನು ತೆಗೆದುಕೊಂಡು ಅಲಮಾರಿಗಳನ್ನು ತೆರೆದು ಅವುಗಳಲ್ಲಿದ್ದ  11.5 ತೊಲೆ ಬಂಗಾರದ ಆಬರಣಗಳು ಅಃಕಿಃ 2,87,500 ರೂ, 12 ತೊಲೆ ಬೆಳ್ಳೆ ಸಾಮಾಗ್ರಿಗಳು ಅಃಕಿಃ 6000 ರೂ,ಎರಡು ಮೊಬೈಲಗಳು ಅಃಕಿಃ 1000 ರೂ,ನಗದು ಹಣ 45,000 ರೂ. ಹೀಗೆ ಒಟ್ಟು 3,39,500 ರೂ. ನೇದ್ದವುಗಳು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸದಾಶಿವ ತಂದೆ ಲಕ್ಷ್ಮಣರಾವ ಕಲ್ಯಾಣಕರ ಸಾಃ ಸವೇರಾ ಹೊಟೇಲ ಹಿಂದುಗಡೆ ನೆಹರು ಗಂಜ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 116/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ: ಶ್ರೀ  ಶರಣಗೌಡ ತಂದೆ ಭೀಮರಾಯ ಪಾಟೀಲ ಮಂಗಾಣೆ ಸಾ:ಶಿವಾಜಿ ನಗರ ಗುಲ್ಬರ್ಗಾ ರವರು ನಾನು ದಿನಾಂಕ:14-07-2012 ರಂದು 7-30 ಪಿ.ಎಮ್ ಕ್ಕೆ  ನಾನು  ಮತ್ತು ನಮ್ಮ ಆಫೀಸಿನ ಕ್ಯಾಶೀಯರ ವಿಶ್ವನಾಥ  ಹಾಗೂ ಮಲ್ಲಿಕಾರ್ಜುನ, ಅಣ್ಣರಾವಶರಣಬಸಪ್ಪ,ಎನ , ನೌಕರರು, ಕೂಡಿ ಮನೆಗೆ ಹೋಗುವ ಕಾಲಕ್ಕೆ  ಆಫೀಸಿನ ಬೀಗವನ್ನು ಹಾಕಿಕೊಂಡು ಹೋಗಿದ್ದು, 15-07-2012 ರಂದು ಬೆಳಿಗ್ಗೆ 9-30 ಗಂಟೆಗೆ ನಮ್ಮ ಆಫೀಸಿನ ಕ್ಯಾಶಿಯಾರ ವಿಶ್ವನಾಥ ಇವರು  ದಿನ ನಿತ್ಯಾದಂತೆ  ಅಫೀಸಿಗೆ ಬಂದು ಆಫೀಸಿನ ಕೀಲಿಯನ್ನು  ಮುರಿದಿದ್ದ ನೋಡಿ ನನಗೆ  ಫೋನ ಮಾಡಿ ತಿಳಿಸಿದರು ನಾನು ಬಂದು ನೋಡಲು ಆಲಮಾರಿಯಲ್ಲಿಟ್ಟಿದ್ದ  ರೂ. 97,950/- ರೂಪಾಯಿಗಳು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 232/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಕ್ರಿಷ್ಣಾಜಿ ತಂದೆ ಲಕ್ಷ್ಮಣರಾವ ಕಲ್ಯಾಣಕರ  ರಾಮೇಶ್ವರ ನಗರ ಟಿ.ವ್ಹಿ ಸ್ಟೇಷನ ಹತ್ತಿರ ಗುಲಬರ್ಗಾರವರು ನಾನು ದಿನಾಂಕ:15-07-2012 ರಂದು ಬೆಳಿಗ್ಗೆ 10-00 ಹುಮನಾಬಾದ ರೋಡಿನಲ್ಲಿರುವ ಸೆಂಟ್ರಲ್ ವ್ಹೇರ  ಹೌಸ ಹತ್ತಿರ ಮೇನ ರೋಡಿನಲ್ಲಿ ಕಾರ ನಂಬರ ಕೆಎ 32 ಎಮ್ 9010 ನೇದ್ದರ ಚಾಲಕ ಗೋವಿಂದ ಇತನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಸೈಕಲಗೆ ಡಿಕ್ಕಿ ಪಡಿಸಿ ಅಫಘಾತಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

15 July 2012

GULBARGA DIST REPORTED CRIMES



ಅಪಘಾತ ಪ್ರಕರಣ:
ಪರತಬಾದ ಪೊಲೀಸ್ ಠಾಣೆ: ಶ್ರೀಮತಿ ಲಕ್ಷ್ಮಿಬಾಯಿ ಗಂಡ ಯಂಕಪ್ಪಾ ಬಂಡಿವಡ್ಡರ ಸಾ|| ಮಾಡ್ಯಾಳ  ತಾ|| ಆಳಂದ ಜಿ||ಗುಲಬರ್ಗಾ ರವರು  ನನ್ನ ತವರು ಮನೆಯ ಸಿರನೂರ ಗ್ರಾಮವಿದ್ದು ನನ್ನ ತಮ್ಮ ಅತ್ತಿಗೆ ಮಾತಾನಾಡುವ ಕುರಿತು ದಿನಾಂಕ:12/7/2012 ರಂದು ನಾನು ಮತ್ತು ನನ್ನ ಗಂಡ ಯಂಕಪ್ಪಾ ಕೂಡಿಕೊಂಡು ಸಿರನೂರ ಗ್ರಾಮಕ್ಕೆ ಬಂದಿರುತ್ತೇವೆ.ದಿನಾಂಕ: 15-7-2012 ರಂದು ಬೆಳಗ್ಗೆ 8 ಗಂಟೆಗೆ ಸುಮಾರಿಗೆ ನ್ನ ಗಂಡ ಯಂಕಪ್ಪಾ ಇವರು ಮನೆಯಿಂದ ಸಂಡಾಸಕ್ಕೆಂದು ಹೋಗಿರುತ್ತಾರೆ. ನನ್ನ ತಮ್ಮನಾದ ಯಲ್ಲಪ್ಪ ಹಾಗೂ ತಿಮ್ಮಯ್ಯ ರವರು ಮನೆಗೆ ಫೊನ ಮಾಡಿ ತಿಳಿಸಿದೇನೆಂದರೆ, ನಮ್ಮ ಮಾವ ಯಂಕಪ್ಪ ಇವರು ಸಂಡಾಸದಿಮದ ಮನೆಗೆ ಬರುವ ಕುರಿತು ರಾಷ್ಟ್ರೀಯ ಹೆದ್ಸಾರಿ 218 ರಸ್ತೆ ನಮ್ಮೂರ ಕ್ರಾಸ ಹತ್ತಿರ ದಾಟುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಬ್ಬ ಲಾರಿ ನಂ: ಕೆಎ-39 / 5436 ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ತಲೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ ಅಂತಾ ತಿಳಿಸಿದ್ದರಿಂದ ನಾನು ಸಿರನೂರ ಕ್ರಾಸಿಗೆ ಬಂದು ನೋಡಲಾಗಿ ನನ್ನ ಗಂಡನಿಗೆ ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 96/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಸಂತೋಷ ತಂದೆ ಶಿಕರಪ್ಪ ಕಾಂಬಳೆ ಸಾ|| ದೇವಂತಗಿ ಗ್ರಾಮರವರು ನಾನು ದಿನಾಂಕ: 14/07/2012 ರಂದು ಮಧ್ಯಾಹ್ನ 12-00 ಗಂಟೆಗೆ ನಮ್ಮ ಗ್ರಾಮದ ವಿಠ್ಠಲ ದೊಡಮನಿ ಇವರ ಹೊಲದಲ್ಲಿ ಗಳೆ ಹೊಡೆಯುತ್ತಿರುವಾಗ ಗ್ರಾಮದ ಕುರುಬ ಜನಾಂಗದವರಾದ ಲಗಮ್ಮಣ್ಣಾ ಹಾಗೂ ಇನ್ನೂ 4 ಜನರು ಕೂಡಿ ನನಗೆ ಹೊಡೆಯಲು ಬಂದಾಗ ನನ್ನ ಮತ್ತು ಅವರ ಮಧ್ಯೆ ವಾದ ವಿವಾದವಾಗಿರುತ್ತದೆ. ನನ್ನ ತಂದೆಯಾದ ಶಿಕರಪ್ಪ ಇವರು ಲಗಮಣ್ಣ ಈತನು ಬರಗಾಲಿ ಮಾಶಾಳ ಇವರ ಹಿಟ್ಟಿನ ಗಿರಣಿ ಹತ್ತಿರ ನಿಂತಾಗ ಮಲ್ಲಪ್ಪ ತಂದೆ ಮೈಲಾರಿ ಪ್ಯಾಟಿ ಹಾಗೂ ಇನ್ನು 15 ಜನರು ಎಲ್ಲರೂ ಕುರುಬ ಜನಾಂಗದವರು ಕೂಡಿ ನನಗೆ ಮತ್ತು ನಮ್ಮವರಿಗೆ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು ಹೊಡೆ ಮಾಡಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2012 ಕಲಂ 143, 147, 148, 323, 324, 504, 506, 149 ಐಪಿಸಿ ಮತ್ತು 3(1)(10) ಎಸ್.ಸಿ/ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.