POLICE BHAVAN KALABURAGI

POLICE BHAVAN KALABURAGI

16 June 2012

GULBARGA DIST REPORTED CRIME


ಕೊಲೆಗೆ ಪ್ರಯತ್ನ ಪ್ರಕರಣ
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀ.ಲಕ್ಷ್ಮಣ ತಂದೆ ಶಿವಶರಣಪ್ಪ ಆಮ್ಟೇ, ಸಾ|| ಬಾಪೂನಗರ ಗುಲಬರ್ಗಾ ರವರು ಈಗ ಸುಮಾರು ಒಂದು  ವರ್ಷದ ಹಿಂದೆ ಮಾಂಗರವಾಡಿ ಬಡಾವಣೆಯ ಸೂರಜ ತಂದೆ ಭಾಷಾ, ರಾಜಪಾಲ ತಂದೆ ಮಹಿಪಾಲ ಇವರು ಸಿಗರೇಟ ಸಲುವಾಗಿ ನಮ್ಮ ಅಂಗಡಿಗೆ ಬಂದು ನನ್ನ ಜೊತೆ ಜಗಳ ಮಾಡಿಕೊಂಡಿದ್ದರು, ಅದೇ  ದ್ವೇಷ ಭಾವನೆಯಿಂದ ದಿನಾಂಕ: 16/06/2012 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ನಾನು ನಮ್ಮ ದುಕಾನ ಎದುರುಗಡೆ ನಿಂತಾಗ ಸೂರಜ ಮತ್ತು ಭಾಷಾ ಇವರು ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 79/2012 ಕಲಂ: 323, 341, 307, 504 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಸುಳ್ಳು ಜಾತಿ ಸರ್ಟಿಪಿಕೇಟ ಪಡೆದುಕೊಂಡು ಸರ್ಕಾರಕ್ಕೆ ಮೋಸ ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿದೇರ್ಶನಾಲಯ ಗುಲಬರ್ಗಾ ರವರು ಶ್ರೀಮತಿ.ಸುನಂದಾಮೂರ್ತಿ ತಂದೆ ಶಿವಮೂರ್ತಿ ಜಂಗಮ ಟ್ಯಾಕ್ಸ ಡ್ಯೂಟಿ ಆಫೀಸರ ಆಕಾಶವಾಣಿ ಕೇಂದ್ರ ಗುಲಬರ್ಗಾ ಸಾ|| ಬ್ರಹ್ಮಪೂರ ಗುಲಬರ್ಗಾರವರು  ಇವಳು ಮೂಲತಃ ಲಿಂಗಾಯತ ಜಾತಿಯವಳಿದ್ದು, ದಿನಾಂಕ:24-06-1991 ರಂದು ತಹಶೀಲ್ದಾರ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಬೇಡ ಜಂಗಮ ಜಾತಿಯನ್ನು ಪ್ರಮಾಣ ಪತ್ರ ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಟ್ಯಾಕ್ಸ ಡ್ಯೂಟಿ ಆಫೀಸರ ಆಕಾಶವಾಣಿ ಕೇಂದ್ರ ಗುಲಬರ್ಗಾದಲ್ಲಿ ನೇಮಕಾತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದು, ಸದರಿಯವಳ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/2012 ಕಲಂ:198, 420, ಐ.ಪಿ.ಸಿ. ಮತ್ತು ಕಲಂ:3(1) (9)  ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸುಳ್ಳು ಜಾತಿ ಸರ್ಟಿಪಿಕೇಟ ಪಡೆದುಕೊಂಡು ಸರ್ಕಾರಕ್ಕೆ ಮೋಸ ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀಮತಿ.ಕುಸುಮಾ ಹೆಚ್ ನಾಯಕ ಗಂಡ ಫಕೀರಪ್ಪ ಕಾಳೆ ಸ್ಟಾಪ ನರ್ಸ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾ ಸಾ|| ನರ್ಸ ಕ್ವಾರ್ಟಸ ಜಿಲ್ಲಾ ಆಸ್ಪತ್ರೆ ಗುಲಬರ್ಗಾರವರು ಇವಳು ಮೂಲತಃ ಶೇರುಗಾರ ಹಿಂದುಳಿದ ಜಾತಿಗೆ ಸೇರಿದವಳಾಗಿದ್ದು, ದಿನಾಂಕ:12-08-1998 ರಂದು ತಹಶೀಲ್ದಾರ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಮಾದಿಗ ಜಾತಿಯನ್ನು ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಹಿರಿಯ ಶೂಶ್ರೋಷಕಿ ಅಂತಾ ಮುಂಬಡ್ತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದು, ಸದರಿಯವಳ ವಿರುದ್ದ ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿದರ್ೇಶನಾಲಯ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 78/2012 ಕಲಂ 198, 420, ಐ.ಪಿ.ಸಿ. ಮತ್ತು ಕಲಂ:3(1) (9)  ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀ ಸುಖದೇವ ತಂದೆ ನರಸಿಂಗ ಗಾಯಕವಾಡ ಸಾನೃಪತುಂಗ ಹಾಸ್ಟೇಲ ಗುಲಬರ್ಗಾ ವಿಶ್ವವಿದ್ಯಾಲಯ ಕ್ಯಾಂಪಸ ಗುಲಬರ್ಗಾ ಇತನು ನಾನು ದಿನಾಂಕ 15-06-2012 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನೃಪತುಂಗಾ ಹಸ್ಟೇಲ ಮುಂದುಗಡೆ ವಾಕಿಂಗ ಮಾಡುತ್ತಿದ್ದಾಗ ಒಬ್ಬನು ಮೋಟಾರ ಸೈಕಲ ಮೇಲೆ ವೇಗವಾಗಿ ಮೈಮೇಲೆ ತಂದಾಗ ಮನುಷ್ಯರು ಕಾಣುವದಿಲ್ಲವೇನು ಅಂತ ಕೇಳಿದಕ್ಕೆ,  ಅವನು ಭೋಸಡಿ ಮಗನೆ ನಿನ್ನ ರೂಮ ನಂಬರ ಏಷ್ಟು ಅಂತ ಕೇಳಿದನು 87 ಅಂತ ಹೇಳಿದಾಗ ಅವನು ಯಾರಿಗೋ ಪೋನ ಮಾಡಿ 3 ಜನರಿಗೆ ಕರೆಯಿಸಿ ಅವರು 2 ಮೋಟಾರ ಸೈಕಲ ಮೇಲೆ ಬಂದು ಇಬ್ಬರೂ ನನಗೆ ಗಟ್ಟಿಯಾಗಿ ಹಿಡಿದರು ವಿಶಾಲ ಎಂಬುವನು ಅಲ್ಲಿಯೆ ಬಿದ್ದ ಕಲ್ಲಿನಿಂದ ನನ್ನ ತೆಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ ಇನ್ನೊಬ್ಬನು ಕೈಯಿಂದ ಮೈಮೇಲೆ ಹೊಡೆಬಡೆ ಮಾಡಿದನು ಮೋಟಾರ ಸೈಕಲ ನಂ ಕೆಎ 32 ಆರ 2288 ಅಲ್ಲಿಯೆ ಬಿಟ್ಟು ಉಳಿದ 2 ಮೋಟಾರ ಸೈಕಲ ಮೇಲೆ ಓಡಿಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 141/2012 ಕಲಂ, 341, 307, 504 ಸಂಗಡ 34 ಐಪಿಸಿ ಪ್ರಕಾರ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

15 June 2012

GULBARGA DIST


ಗುಲಬರ್ಗಾ ನಗರದ ಸಂಚಾರಿ ಪೊಲೀಸ್ ರಿಂದ ವಾಹನ ನಿಮಯಮಗಳನ್ನು ಉಲಂಘಿಸಿದವರ ಮೇಲೆ  ಬ್ಲ್ಯಾಕ್ ಬೆರ್ರಿ ಉಪಕಣದಿಂದ ದಂಡ ವಸೂಲಿ

ವಾಹನ ನಿಯಮಗಳನ್ನು ಉಲಂಘಿಸುವ ವಾಹನ ಸವಾರರಿಗೆ ಆನ್ ಲೈನ ಮೂಲಕ ಸ್ಥಳದಲ್ಲಿಯೇ ಮೋಟಾರ ವಾಹನ ಕಾಯಿದೆ ಅಡಿಯಲ್ಲಿ ಅಧುನಿಕ ಬ್ಲ್ಯಾಕ ಬೆರ್ರಿ ಉಪಕರಣಗಳ ಮೂಲಕ ದಂಡ ವಿಧಿಸುವ ಕಾಗದ ರಹಿತ ವ್ಯವಸ್ಥೆಯನ್ನು ಗುಲಬರ್ಗಾ ನಗರದಲ್ಲಿ ಇಂದು ಜಾರಿಗೆ ತರಲಾಗಿದೆ. ಈಗಾಗಲೇ ಈ ವ್ಯವಸ್ಥೆಯು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ಬಂದಿದ್ದು, ಇದರಿಂದ ಆನ್ ಲೈನ ಮೂಲಕ ದಂಡ ಹಾಕುವ ಕಾಗದ ರಹಿತ ವ್ಯವಸ್ಥೆಯನ್ನು ಹೊಂದಿದ ರಾಜ್ಯವಾಗಿರುತ್ತದೆ.
        ಈ ಮೊದಲು ತಪ್ಪಿತಸ್ಥ ವಾಹನ ಚಾಲಕರ ವಿರುದ್ದ ದಂಡ ಹಾಕುವ ಸಿಅರ್ ಅರ್ ವ್ಯವಸ್ಥೆ ಬದಲಿಗೆ ಕನಾಟಕ ರಾಜ್ಯ ಪೊಲೀಸ್ ಸಾಪ್ಟವೇರ ಅಳವಡಿಸಿದ ಬ್ಲ್ಯಾಕ ಬೆರ್ರಿ ಉಪಕರಣದ ಮೂಲಕ ದಂಡ ವಿಧಿಸಲಾಗುವದು. ಈ ಉಪಕರಣದಲ್ಲಿ ಯಾವದೇ ವಾಹನದ ಮೇಲೆ ಈ ಮೊದಲು ಸಂಚಾರಿ ನಿಯಮದ ಉಲಂಘನೆ  ಬಗ್ಗೆ ಪ್ರಕರಣ ದಾಖಲಾಗಿದ್ದರೆ, ಪ್ರಕರಣ ಇತ್ಯರ್ಥವಾಗದೇ ಬಾಕಿ ಇರುವ ಬಗ್ಗೆ ಚಾಲಕರ ವಾಹನ ಸಂಖ್ಯೆ ಹಾಗು ಡ್ರೈವಿಂಗ್ ಲೈಸನ್ಸ ನಂಬರ ಆಧರಿಸಿದ  ವಿವರ ನೀಡುತ್ತದೆ. ಇದರಿಂದ  ಈ ಮೊದಲು ಮೋಟಾರ ವಾಹನದ ಕಾಯಿದೆ ಉಲ್ಲಂಘಿಸಿದ ಪ್ರಕರಣ ಇತ್ಯರ್ಥವಾಗದೇ ಇದ್ದರೆ ಅವರಿಂದ ಸಹ ದಂಡ ವಸೂಲು ಮಾಡಲಾಗುದು. ಇದರಲ್ಲಿ ಅಳವಡಿಸಿದ ಮಾಹಿತಿ ರಾಜ್ಯ ಮಟ್ಟದ ಸರ್ವರದಲ್ಲಿ ದಾಖಲಾಗುತ್ತದೆ.
        ಗುಲಬರ್ಗಾ ನಗರದಲ್ಲಿ ಸಧ್ಯಕ್ಕೆ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ನಗರದ ಸಂಚಾರಿ ಠಾಣೆಗಳಿಗೆ ಒಟ್ಟು 10 ಬ್ಲ್ಯಾಕ ಬೆರ್ರಿ ಉಪಕರಣಗಳು ಮಂಜೂರಾಗಿದ್ದು, ಸಂಚಾರಿ ಠಾಣೆಗಳ ಒಬ್ಬ ಪಿಐ, ಒಬ್ಬ ಪಿಎಸಐ, ಹಾಗು 4 ಜನ ಎಎಸಐ ಜನರಿಗೆ ಈಗಾಗಲೇ ಬೆಂಗಳೂರಿನಲ್ಲಿ ಇದರ ಬಗ್ಗೆ ತರಬೇತಿ ನೀಡಲಾಗಿದ್ದು, ಅವರೆಲ್ಲರೂ ಎಲ್ಲಾ ವಿಧವಾದ ಮೋಟಾರ ವಾಹನ ಕಾಯಿದೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ವಿಧಿಸುವ ಅಧಿಕಾರಿ ಹೊಂದಿರುತ್ತಾರೆ. ಈ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿದ್ದು, ಯಾವದೇ ರೀತಿಯ ಅವ್ಯವಹಾರಕ್ಕೆ ಆಸ್ಪದವಿರುವದಿಲ್ಲ. ಇದರಿಂದ ಪದೇ ಪದೇ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ಮಾಹಿತಿಯು ಬ್ಲ್ಯಾಕ ಬೆರ್ರಿ ಉಪಕರಣಗಳಲ್ಲಿ ಲಭ್ಯವಾಗಿರುವದರಿಂದ ಹೆಚ್ಚಿನ ಪ್ರಮಾಣದ ದಂಡವನ್ನು ವಾಹನ ಚಾಲಕರು ಭರಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಈ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ, ಸಾಬಣ್ಣಾ ತಂದೆ ಸಿದ್ದಪ್ಪಾ ಹಲಗಿ ಸಾ|| ಕನಗನಹಳ್ಳಿ ರವರು ನಾನು ಮತ್ತು ರಾಜು ತಂದೆ ನಾಗಪ್ಪಾ, ಬಸಪ್ಪಾ ಪೂಜಾರಿ ಕೂಡಿಕೊಂಡು ಮುರುಮ ತುಂಬುವ ಕೆಲಸ ಕುರಿತು ನಮ್ಮೂರಿನ ಸುರಣ್ಣ ಗೌಡ ಇವರ ಟ್ರಾಕ್ಟರ ನಂ: ಕೆಎ-32 ಟಿ-1762/63 ನೇದ್ದರ ಮೇಲೆ ನಿನ್ನೆ ದಿನಾಂಕ 14-06-2012 ರಂದು ಹೋಗಿದ್ದು, ಸದರಿ ಟ್ಯಾಕ್ಟರದಿಂದ ಮುರುಮ ತೆಗೆದುಕೊಂಡು ಬಂದು ಮಲ್ಲಣಗೌಡರ ಮನೆಗೆ ಹಾಕಿ 5 ಗಂಟೆಯ ಸುಮಾರಿಗೆ ಮತ್ತೆ ಮುರುಮ ತುಂಬಲು ಕನಗನಹಳ್ಳಿಯಿಂದ ಸನ್ನತಿ ಕಡೆಗೆ ಹೊರಟಿದ್ದೆವು, ಟ್ಯಾಕ್ಟರದಲ್ಲಿ ಮಲ್ಲಣಗೌಡ ಹಾಗು ನಾವು ಮೂರು ಜನರು ಟ್ರ್ಯಾಲಿ ಬಂಪರ ಹಿಡಿದು ನಿಂತೆವು ಬಸಪ್ಪಾ ಎಡಗಡೆಗೆ ನಿಂತಿದ್ದನು. ಚಾಲಕನಾದ ಸುರಣಗೌಡ ಕನಗನಹಳ್ಳಿ ಇತನು ಟ್ರಾಕ್ಟರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದು, ರೊಡಿಗೆ ಇರುವ ತಗ್ಗುಗಳನ್ನು ತಪ್ಪಿಸುವ ಕುರಿತು ಒಮ್ಮೆಲೆ ಟ್ರಾಕ್ಟರ ಕಟ್ ಹೊಡೆದ ಪರಿಣಾಮ ಟ್ರ್ಯಾಲಿಯಲ್ಲಿದ್ದ ಬಸಪ್ಪಾ ಪೂಜಾರಿ ಕೆಳಗೆ ಬಿದ್ದನು ಆಗ ನಾವು ಚಾಲಕನಿಗೆ ಬಸಪ್ಪಾ ಬಿದ್ದಾನೆ ಅಂತಾ ಕೂಗಿದಾಗ ಚಾಲಕ ಟ್ಯಾಕ್ಟರನ್ನು ಸ್ವಲ್ಪ ಮುಂದಕ್ಕೆ ಹೊಗಿ ನಿಲ್ಲಿಸಿದನು ನಾವು ಕೆಳಗೆ ಇಳಿದು ನೊಡಲಾಗಿ ಬಸಪ್ಪಾ ಎಡಗಡೆ ರಸ್ತೆಯ ಪಕ್ಕಕ್ಕೆ ರಸ್ತೆ ಮೆಲೆ ಬಿದ್ದಿದ್ದು ನೊಡಲಾಗಿ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ರಕ್ತ ಬರುತ್ತಿತ್ತು, ಮತ್ತು ಬಲ ಭುಜಕ್ಕೆ ಬೆನ್ನಿಗೆ, ಎರಡು ಮೊಳಕೈಗೆ ಹಾಗು ಬಲ ಮೊಳಕಾಲಿಗೆ ರಕ್ತಗಾಯವಾಗಿ ಎರಡು ಕಿವಿ ಹಾಗು ಮೂಗಿನಿಂದ ರಕ್ತ ಬರಹತ್ತಿತ್ತು ಮಾತನಾಡಿಸಿದರು ಮಾತನಾಡಲಿಲ್ಲಾ, ಬಸಪ್ಪನ ತಂದೆಯಾದ ಸಿದ್ರಾಮಪ್ಪಾ ಪೂಜಾರಿ ಬಂದು 108 ಅಂಬುಲೆನ್ಸದಲ್ಲಿ ಬಸಪ್ಪನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಹೋದರು, ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿಯ ಮಧ್ಯದಲ್ಲಿ ಬಸಪ್ಪಾ ಪೂಜಾರಿ ಮರಣ ಹೊಂದಿರುತ್ತಾನೆ ಅಂತಾ ಸಾಬಣ್ಣ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 83/2012 ಕಲಂ 279,304 (ಎ) ಐಪಿಸಿ ಸಂಗಡ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.