POLICE BHAVAN KALABURAGI

POLICE BHAVAN KALABURAGI

16 June 2012

GULBARGA DIST REPORTED CRIMES


ಸುಳ್ಳು ಜಾತಿ ಸರ್ಟಿಪಿಕೇಟ ಪಡೆದುಕೊಂಡು ಸರ್ಕಾರಕ್ಕೆ ಮೋಸ ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿದೇರ್ಶನಾಲಯ ಗುಲಬರ್ಗಾ ರವರು ಶ್ರೀಮತಿ.ಸುನಂದಾಮೂರ್ತಿ ತಂದೆ ಶಿವಮೂರ್ತಿ ಜಂಗಮ ಟ್ಯಾಕ್ಸ ಡ್ಯೂಟಿ ಆಫೀಸರ ಆಕಾಶವಾಣಿ ಕೇಂದ್ರ ಗುಲಬರ್ಗಾ ಸಾ|| ಬ್ರಹ್ಮಪೂರ ಗುಲಬರ್ಗಾರವರು  ಇವಳು ಮೂಲತಃ ಲಿಂಗಾಯತ ಜಾತಿಯವಳಿದ್ದು, ದಿನಾಂಕ:24-06-1991 ರಂದು ತಹಶೀಲ್ದಾರ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಬೇಡ ಜಂಗಮ ಜಾತಿಯನ್ನು ಪ್ರಮಾಣ ಪತ್ರ ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಟ್ಯಾಕ್ಸ ಡ್ಯೂಟಿ ಆಫೀಸರ ಆಕಾಶವಾಣಿ ಕೇಂದ್ರ ಗುಲಬರ್ಗಾದಲ್ಲಿ ನೇಮಕಾತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದು, ಸದರಿಯವಳ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/2012 ಕಲಂ:198, 420, ಐ.ಪಿ.ಸಿ. ಮತ್ತು ಕಲಂ:3(1) (9)  ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸುಳ್ಳು ಜಾತಿ ಸರ್ಟಿಪಿಕೇಟ ಪಡೆದುಕೊಂಡು ಸರ್ಕಾರಕ್ಕೆ ಮೋಸ ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀಮತಿ.ಕುಸುಮಾ ಹೆಚ್ ನಾಯಕ ಗಂಡ ಫಕೀರಪ್ಪ ಕಾಳೆ ಸ್ಟಾಪ ನರ್ಸ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾ ಸಾ|| ನರ್ಸ ಕ್ವಾರ್ಟಸ ಜಿಲ್ಲಾ ಆಸ್ಪತ್ರೆ ಗುಲಬರ್ಗಾರವರು ಇವಳು ಮೂಲತಃ ಶೇರುಗಾರ ಹಿಂದುಳಿದ ಜಾತಿಗೆ ಸೇರಿದವಳಾಗಿದ್ದು, ದಿನಾಂಕ:12-08-1998 ರಂದು ತಹಶೀಲ್ದಾರ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಮಾದಿಗ ಜಾತಿಯನ್ನು ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಹಿರಿಯ ಶೂಶ್ರೋಷಕಿ ಅಂತಾ ಮುಂಬಡ್ತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದು, ಸದರಿಯವಳ ವಿರುದ್ದ ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿದರ್ೇಶನಾಲಯ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 78/2012 ಕಲಂ 198, 420, ಐ.ಪಿ.ಸಿ. ಮತ್ತು ಕಲಂ:3(1) (9)  ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀ ಸುಖದೇವ ತಂದೆ ನರಸಿಂಗ ಗಾಯಕವಾಡ ಸಾನೃಪತುಂಗ ಹಾಸ್ಟೇಲ ಗುಲಬರ್ಗಾ ವಿಶ್ವವಿದ್ಯಾಲಯ ಕ್ಯಾಂಪಸ ಗುಲಬರ್ಗಾ ಇತನು ನಾನು ದಿನಾಂಕ 15-06-2012 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನೃಪತುಂಗಾ ಹಸ್ಟೇಲ ಮುಂದುಗಡೆ ವಾಕಿಂಗ ಮಾಡುತ್ತಿದ್ದಾಗ ಒಬ್ಬನು ಮೋಟಾರ ಸೈಕಲ ಮೇಲೆ ವೇಗವಾಗಿ ಮೈಮೇಲೆ ತಂದಾಗ ಮನುಷ್ಯರು ಕಾಣುವದಿಲ್ಲವೇನು ಅಂತ ಕೇಳಿದಕ್ಕೆ,  ಅವನು ಭೋಸಡಿ ಮಗನೆ ನಿನ್ನ ರೂಮ ನಂಬರ ಏಷ್ಟು ಅಂತ ಕೇಳಿದನು 87 ಅಂತ ಹೇಳಿದಾಗ ಅವನು ಯಾರಿಗೋ ಪೋನ ಮಾಡಿ 3 ಜನರಿಗೆ ಕರೆಯಿಸಿ ಅವರು 2 ಮೋಟಾರ ಸೈಕಲ ಮೇಲೆ ಬಂದು ಇಬ್ಬರೂ ನನಗೆ ಗಟ್ಟಿಯಾಗಿ ಹಿಡಿದರು ವಿಶಾಲ ಎಂಬುವನು ಅಲ್ಲಿಯೆ ಬಿದ್ದ ಕಲ್ಲಿನಿಂದ ನನ್ನ ತೆಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ ಇನ್ನೊಬ್ಬನು ಕೈಯಿಂದ ಮೈಮೇಲೆ ಹೊಡೆಬಡೆ ಮಾಡಿದನು ಮೋಟಾರ ಸೈಕಲ ನಂ ಕೆಎ 32 ಆರ 2288 ಅಲ್ಲಿಯೆ ಬಿಟ್ಟು ಉಳಿದ 2 ಮೋಟಾರ ಸೈಕಲ ಮೇಲೆ ಓಡಿಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 141/2012 ಕಲಂ, 341, 307, 504 ಸಂಗಡ 34 ಐಪಿಸಿ ಪ್ರಕಾರ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: