ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಜು ತಂದೆ ರಾಮು ರಾಠೋಡ ಸಾ:ತರಿತಾಂಡ ಭಂಕೂರ ತಾ ಚಿತ್ತಾಪೂರ ರವರು ನನ್ನ ಮೋಬೈಲ ನಂ 9901594480 ನೇದ್ದಕ್ಕೆ ದಿನಾಂಕ 01/04/2012 ರಂದು ಮೋಬೈಲ ನಂ 00923035777990 ರ ಮುಖಾಂತರ ಸಂಪರ್ಕ ಮಾಡಿ ನಿಮಗೆ ಲಾಟರಿ ಬಹುಮಾನ ರೂ 25,00,000=00 ಬಂದಿರುತ್ತದೆ. ಕಾರಣ ನೀವು ನಮ್ಮ ಖಾತೆಗೆ ರೂಪಾಯಿ 1,37,800=00 ಪಾವತಿ ಮಾಡಲು ತಿಳಿಸಿರುತ್ತಾರೆ. ಅದರಂತೆ ನಾನು ಎಸ್.ಬಿ.ಐ ಬ್ಯಾಂಕ ಭಂಕೂರನಲ್ಲಿ ದಿನಾಂಕ: 03-04-2012 ರಂದು ಖಾತೆ ನಂ 1) 20115181589 ರೂ 20,100/- 2] 31411922702 ರೂ 15,200/- 3] 32220923985 ನೇದ್ದಕ್ಕೆ 22,500/- 4] 32219225012 ನೇದ್ದಕ್ಕೆ 20,100/- ರೂ ಜಮಾ ಮಾಡಿರುತ್ತೆನೆ. ದಿನಾಂಕ: 05-04-2012 ರಂದು ಖಾತೆ ನಂ 1] 30701839059 ನೇದ್ದಕ್ಕೆ 25,000/- 2] 31469368845 ನೇದ್ದಕ್ಕೆ 10,000/- ಹಾಗೂ 3] 31733929154 ನೇದ್ದಕ್ಕೆ 25,000/- ರೂ ಹೀಗೆ ಒಟ್ಟು 1,37,800 =00 ರೂ ಜಮಾ ಮಾಡಿರುತ್ತೆನೆ. ಮತ್ತೆ ನನಗೆ ಪೋನ ಮಾಡಿ ಇನ್ನೂ 85,000/- ರೂ ಗಳು ಪಾವತಿ ಮಾಡಲು ಖಾತೆ ಸಂಖ್ಯೆ 32219227950 ನೇದ್ದಕ್ಕೆ ಜಮಾ ಮಾಡಲು ತಿಳಿಸಿದ್ದರಿಂದ ಸಂಶಯ ಬಂದು ವಿಚಾರಿಸಲಾಗಿ ಮೋಸ ಮಾಡಿದ ಬಗ್ಗೆ ಗೋತ್ತಾಗಿರುತ್ತದೆ. ಕಾರಣ ಮೇಲ್ಕಂಡ ಖಾತೆದಾರರು ನನಗೆ ವಂಚನೆ ಮಾಡಿರುತ್ತಾರೆ ಅಂತಾ ರಾಜು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ : 38/2012 ಕಲಂ 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
POLICE BHAVAN KALABURAGI

12 April 2012
GULBARGA DIST REPORTED CRIMES
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಜು ತಂದೆ ರಾಮು ರಾಠೋಡ ಸಾ:ತರಿತಾಂಡ ಭಂಕೂರ ತಾ ಚಿತ್ತಾಪೂರ ರವರು ನನ್ನ ಮೋಬೈಲ ನಂ 9901594480 ನೇದ್ದಕ್ಕೆ ದಿನಾಂಕ 01/04/2012 ರಂದು ಮೋಬೈಲ ನಂ 00923035777990 ರ ಮುಖಾಂತರ ಸಂಪರ್ಕ ಮಾಡಿ ನಿಮಗೆ ಲಾಟರಿ ಬಹುಮಾನ ರೂ 25,00,000=00 ಬಂದಿರುತ್ತದೆ. ಕಾರಣ ನೀವು ನಮ್ಮ ಖಾತೆಗೆ ರೂಪಾಯಿ 1,37,800=00 ಪಾವತಿ ಮಾಡಲು ತಿಳಿಸಿರುತ್ತಾರೆ. ಅದರಂತೆ ನಾನು ಎಸ್.ಬಿ.ಐ ಬ್ಯಾಂಕ ಭಂಕೂರನಲ್ಲಿ ದಿನಾಂಕ: 03-04-2012 ರಂದು ಖಾತೆ ನಂ 1) 20115181589 ರೂ 20,100/- 2] 31411922702 ರೂ 15,200/- 3] 32220923985 ನೇದ್ದಕ್ಕೆ 22,500/- 4] 32219225012 ನೇದ್ದಕ್ಕೆ 20,100/- ರೂ ಜಮಾ ಮಾಡಿರುತ್ತೆನೆ. ದಿನಾಂಕ: 05-04-2012 ರಂದು ಖಾತೆ ನಂ 1] 30701839059 ನೇದ್ದಕ್ಕೆ 25,000/- 2] 31469368845 ನೇದ್ದಕ್ಕೆ 10,000/- ಹಾಗೂ 3] 31733929154 ನೇದ್ದಕ್ಕೆ 25,000/- ರೂ ಹೀಗೆ ಒಟ್ಟು 1,37,800 =00 ರೂ ಜಮಾ ಮಾಡಿರುತ್ತೆನೆ. ಮತ್ತೆ ನನಗೆ ಪೋನ ಮಾಡಿ ಇನ್ನೂ 85,000/- ರೂ ಗಳು ಪಾವತಿ ಮಾಡಲು ಖಾತೆ ಸಂಖ್ಯೆ 32219227950 ನೇದ್ದಕ್ಕೆ ಜಮಾ ಮಾಡಲು ತಿಳಿಸಿದ್ದರಿಂದ ಸಂಶಯ ಬಂದು ವಿಚಾರಿಸಲಾಗಿ ಮೋಸ ಮಾಡಿದ ಬಗ್ಗೆ ಗೋತ್ತಾಗಿರುತ್ತದೆ. ಕಾರಣ ಮೇಲ್ಕಂಡ ಖಾತೆದಾರರು ನನಗೆ ವಂಚನೆ ಮಾಡಿರುತ್ತಾರೆ ಅಂತಾ ರಾಜು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ : 38/2012 ಕಲಂ 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
11 April 2012
GULBARGA DIST REPORTED CRIMES
ನಾಲ್ಕು ಎತ್ತುಗಳು ಕಳ್ಳತನ :
ಚಿತ್ತಾಫುರ ಪೊಲೀಸ್ ಠಾಣೆ: ಶ್ರೀ ಶಿವರಾಮ ವ್ಯವಸ್ಥಾಪಕರು ಬೀಜೋತ್ಪಾದನಾ ಕೇಂದ್ರ ಚಿತ್ತಾಫೂರ ರವರು ನಮ್ಮ ಬಿಜೋತ್ಪಾನಾ ಕೇಂದ್ರ ಚಿತ್ತಾಫುರದಲ್ಲಿ ಸಾಗುವಳಿ ಮಾಡಲು 4 ಎತ್ತುಗಳು ಇದ್ದವು ದಿನಾಂಕ: 10-04-2012 ರಂದು ಸಾಗುವಳಿ ಮಾಡಿ ಸಾಯಂಕಾಲ 5-00 ಗಂಟೆಗೆ ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ದಿನಾಂಕ: 11-04-2012 ರಂದು ಮುಂಜಾನೆ 6-00 ಗಂಟೆಗೆ ನಿತ್ಯದಂತೆ ಕೂಲಿ ಆಳುಗಳು ಊಳ್ಮೆಗಾಗಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ನೋಡಲಾಗಿ ಕಳುವಾಗಿದ್ದು ಕಂಡು ಬಂದಿದೆ. ಕಾವಲುಗಾರ ಶ್ರೀ ಮಲ್ಲಿಕಾರ್ಜುನ ಇದ್ದರು. 4 ಎತ್ತುಗಳ ಅಕಿ: 1, 20,000/-ರ ಆಗುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 39/12 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಳುವಾದ ಎತ್ತುಗಳು: ಎರಡು (2) ಎತ್ತುಗಳು ಬಿಳಿ ಕರಿ ಮಾಸ ಬಣ್ಣ ಸೀದಾ ಕೋಡು ಇರುತ್ತವೆ. ಮತ್ತೆರಡು (2) ಎರಡು ಎತ್ತುಗಳು ಬಿಳಿ ಬಣ್ಣದ್ದು ಸೀದಾ ಕೋಡು ಇರತ್ತವೆ. ಇವುಗಳ ಬಗ್ಗೆ ಯಾರ ಗದ್ದೆಯಲ್ಲಾದರೂ ಕಂಡು ಬಂದಲ್ಲಿ ಚಿತ್ತಾಫೂರ ಠಾಣೆ ಫೋ.ನಂ08474-236123/ಸಿ.ಪಿ.ಐ ಚಿತ್ತಾಫೂರ ರವರ ಮೋ ನಂ 9480803532 ಅಥವಾ ಕಂಟ್ರೋಲ ರೂಂ ಗುಲಬರ್ಗಾಕ್ಕೆ (08472-26360) ಸಂಪರ್ಕಿಸಲು ಕೋರಲಾಗಿದೆ.
ಆಳಂದ ಪೊಲೀಸ್ ಠಾಣೆ: ಶ್ರೀ ಈರಣ್ಣ ತಂದೆ ಲಕ್ಷ್ಮಣ ಕಾಂಬಳೆ ಸಾ; ಹೊದಲೂರ ಗ್ರಾಮ ರವರು ನನ್ನ ಮಗನಾದ ಮಲ್ಲಿನಾಥ ಇತನು ತನ್ನ ಮೋಟಾರ ಸೈಕಲ ಮೇಲೆ ದಿನಾಂಕ 10/04/2012 ರಂದು ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ ಜವಳಗಾ ಗ್ರಾಮಕ್ಕೆ ಹೋಗಿ ಬರುತ್ತೆನೆಂದು ಹೇಳಿ ಹೋಗಿರುತ್ತಾನೆ. ರಾತ್ರಿ 8.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಶಿವಪ್ಪ ತಂದೆ ಸಂಗಪ್ಪ ಕರ್ಪೆ ಇತನು ನಮ್ಮ ಮನೆಗೆ ಬಂದು ನಿಮ್ಮ ಮಗನಾ ಸೈಕಲ ಮೋಟಾರ ಸೈಕಲ್ ಜವಳಗಾ ಗ್ರಾಮದ ಫಾರಂ ಹತ್ತಿರ ಆಪಘಾತವಾಗಿದೆ ಅಂತಾ ಹೇಳಲು ನಾನು ಮತ್ತು ಮೌಲಾ ತಂದೆ ರಾಮಚಂದ್ರ ಕಾಬಂಳೆ, ಬಾಬು ತಂದೆ ಅಂಬಣ್ಣ ಕಣಮಸೆ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ಮಗ ಶವವಾಗಿ ಬಿದ್ದಿದ್ದು ಅವನಿಗೆ ನೋಡಲಾಗಿ ಮುಖಕ್ಕೆ ಮತ್ತು ಇತರೆ ಕಡೆಗೆ ಗಾಯಗಳು ಆಗಿರುತ್ತವೆ. ನನ್ನ ಮಗನಿಗೆ ಯಾವುದೂ ಒಂದು ವಾಹನ ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2012 ಕಲಂ 279, 304 (ಎ) ಐಪಿಸಿ ಸಂಗ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Gulbarga Dist Reported Crimes
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಭರತ ತಂದೆ ಸುರೇಶ ಚಿಂಚೋಳಿ ಸಾ: ಹುಮನಾಬಾದ ಬೇಸ್ ಗುಲಬರ್ಗಾರವರು ನಾನು ದಿನಾಂಕ 14-3-12 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಏಶಿಯನ್ ಮಾಲ ಹತ್ತಿರ ಮೋಟಾರ ಸೈಕಲ್ ನಂ ಕೆಎ 35 ಜೆ 1880 ನೇದ್ದು ನಿಲ್ಲಿಸಿ ಏಶಿಯನ್ ಮಾಲ ಓಳಗಡೆ ಹೋಗಿ ಮರಳಿ ಬಂದು ನೋಡಲಾಗಿ ಮೊಟಾರ ಸೈಕಲ್ ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಹುಡುಕಾಡಲಾಗಿ ಪತ್ತೆಯಾಗದೆ ಇರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 46/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀಮತಿ ಮಲ್ಲಮ್ಮ ಗಂಡ ಯಮನಯ್ಯ ಕಲಾಲ ಸಾ: ಜೋಪಡ ಪಟ್ಟಿ ಜೇವರ್ಗಿ ರವರು ನಾನು ದಿನಾಂಕ:10/04/2012 ರಂದು ಮುಂಜಾನೆ ಎಸ್.ಬಿ.ಹೆಚ್. ಬ್ಯಾಂಕಿನ ತನ್ನ ಖಾತೆಯಿಂದ 30000-00 ಡ್ರಾ ಮಾಡಿದ್ದು, ಮತ್ತು ನನ್ನ ಹತ್ತಿರ ಇದ್ದ 20000 ರೂ ಹೀಗೆ ಒಟ್ಟು 50000-00 ರೂಪಾಯಿಯನ್ನು ತಮ್ಮ ಸಂಬಂಧಿಕರಿಗೆ ಕೊಡುವ ಸಲುವಾಗಿ ಕೈ ಚೀಲದಲ್ಲಿ ಹಾಕಿಕೊಂಡು ಜೇವರ್ಗಿ ಪಟ್ಟಣದ ತಹಸೀಲ ಕಾರ್ಯಲಯದ ಹತ್ತಿರ ನನ್ನ ಪಾನ ಶಾಪ ಅಂಗಡಿಯಲ್ಲಿ ಇಟ್ಟು ನಾನು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಮುಂಜಾನೆ 11-45 ಗಂಟೆಯಿಂದ 12-30 ಗಂಟೆಯ ಅವಧಿಯಲ್ಲಿ ಯಾರೋ ಕೈ ಚೀಲದಲ್ಲಿ ಇಟ್ಟ 50000-00 ರೂ ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ:44/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಮಹ್ಮದ ರಫೀಕ ತಂದೆ ಹಾಜಿಲಾಲ ಕಾರೋಬಾರಿ ಸಾ:ಮಿಲ್ಲತ ನಗರ ಶಹಾಬಾದರವರು ನಾನು ದಿನಾಂಕ:07/04/2012 ರಂದು ಸಾಯಂಕಾಲ 4-00 ಗಂಟೆಗೆ ಹಳೆ ಶಹಾಬಾದ ಕ್ಕೆ ಹೋಗಿ ಮರಳಿ ಶಹಾಬಾದ ಕ್ಕೆ ಬರುವಾಗ ನನ್ನ ಮೊಟಾರ ಸೈಕಲಕ್ಕೆ ಸಿಕ್ಕಿಸಿದ ಕ್ಯಾಸಬ್ಯಾಗ ದಾರಿಯಲ್ಲಿ ಕಳೆದು ಹೊಗಿರುತ್ತದೆ. ಅದರಲ್ಲಿ ನನ್ನ ಎ.ಟಿ.ಎಮ್. ಕಾರ್ಡ ನಂ: 1196101010030 ಕೆನರಾ ಬ್ಯಾಂಕ, ಮತ್ತು ಡ್ರೈವಿಂಗ ಲೈಸೆನ್ಸ್, ಪ್ಯಾನ ಕಾರ್ಡ ಇವುಗಳು ಬ್ಯಾಗಿನಲ್ಲಿದ್ದವು. ಯಾರಿಗಾದು ಸಿಕ್ಕಿದ್ದರೆ ತಂದು ಕೊಡುತ್ತಾರೆ ಅಂತಾ ತಿಳಿದು ಸುಮ್ನೆ ಇದ್ದೆನು. ಆದರೆ, ದಿನಾಂಕ:09/04/2012 ರಂದು ಶಹಾಬಾದ ಕೆನರಾ ಬ್ಯಾಂಕಿಗೆ ಬೇಟಿ ನೀಡಿ ಮ್ಯಾನೆಂಜರ್ ಇವರಿಗೆ ವಿಚಾರಿಸಲು ಅವರು ನನ್ನ ಅಕೌಂಟ ನಲ್ಲಿದ್ದ 39,500/- ರೂಪಾಯಿ ಯಾರೂ ಎ.ಟಿ.ಎಮ್. ಸಹಾಯದಿಂದ ಡ್ರಾ ಮಾಡಿಕೊಂಡು ಹೋಗಿರುತ್ತಾರೆ. ತಿಳಿದು ಬಂದ್ದಿರುತ್ತದೆಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ನಂ: 37/2012 ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಳಂದ ಪೊಲೀಸ್ ಠಾಣೆ:ಶ್ರೀ ಶಿವರಾಯ ತಂದೆ ಕಳಸಪ್ಪ ಸಿಂಗೆ ಜಾ: ಮಾದಿಗ ಸಾ||ತಂಬಕವಾಡಿ ತಾ: ಆಳಂದ ರವರು ನಾವು 6 ಜನ ಅಣ್ಣ ತಮ್ಮಂದಿರಿದ್ದು ಎಲ್ಲರೂ ಕೂಡಿಯೇ ಇರುತ್ತೇವೆ ನಮ್ಮಗೆ ಸರ್ವೆ ನಂ 426 ರಲ್ಲಿ 4 ಎಕರೆ 2 ಗುಂಟೆ ಮತ್ತು ಸರ್ವೆ ನಂ 427 2ಎಕರೆ 32 ಗುಂಟೆ ಹೊಲ ವಳವಂಡವಾಡಿ ಸೀಮಾಂತರದಲ್ಲಿ ಇದ್ದು ನಮ್ಮ ಹೊಲದ ಪಕ್ಕದಲ್ಲಿ ವಳವಂಡವಾಡಿ ಗ್ರಾಮದ ಮಲ್ಲಿಕಾರ್ಜುನ ತಂದೆ ಹನಮಂತರಾಯ ಚಿಂಚೋಳಿ ಇವರ ಹೊಲ ಇದ್ದು ಬಂದರಿಯ ಸಂಭಂದ ತಕರಾರು ಇದ್ದು ಅಳತೆ ಮಾಡಿಸುವ ಸಲುವಾಗಿ ಹಸಿಲ್ದಾರ ರವರಿಗೆ ಅರ್ಜಿ ಸಲ್ಲಿಸಿದ್ದು ಇರುತ್ತದೆ. ದಿನಾಂಕ 10/04/2012 ರಂದು ಮುಂಜಾನೆ 9.30 ಗಂಟೆಗೆ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ ನಮ್ಮ ಹೊಲದ ಪಕ್ಕದವರಾದ ಮಲ್ಲಿಕಾರ್ಜುನ ತಂದೆ ಹನಮಂತರಾಯ ಇವರು ಜೆ.ಸಿ.ಬಿ ಮುಖಾಂತರ ತಕರಾರು ಇದ್ದ ಬಂದಾರಿಗೆ ಮಣ್ಣು ಹಾಕುತ್ತಿದ್ದರು ಆಗ ನಾನು ಆಳತೆ ಮಾಡುವವರೆಗೆ ಯಾಕೆ ಬಂದಾರಿ ಹಾಕುತ್ತಿರಿ ಆಳತೆ ಆದ ನಂತರ ಬಂದಾರಿ ಹಾಕಿಕೊಳ್ಳಿ ಅಂತಾ ಅಂದುದಕ್ಕೆ ಮಲ್ಲಿಕಾರ್ಜುನನ್ನು ಇತನು ಜಾತಿ ಎತ್ತಿ ಬೈದು, ರಾಜೆಂದ್ರಪ್ಪ ತಂದೆ ಗುರುಬಸಪ್ಪ, ಕೃಷ್ಣಪ್ಪ ತಂದೆ ಶರಣಪ್ಪ, ಮಲ್ಲಿಕ ತಂದೆ ಹಣಮಂತರಾಯ,ಬೀಮಾಶಂಕರ ತಂದೆ ಶಾಂತಪ್ಪ, ಶಿವಪ್ಪ ತಂದೆ ಮಲ್ಕಪ್ಪ ಇವರೆಲ್ಲರೂ ಕೂಡಿಕೊಂಡು ಅವಾಚ್ಯವಾಗಿ ಕಲ್ಲಿನಿಂದ ಹಾಗೂ ಬಡಿಗೆಯಿಂದ ಹೊಡೆದು ಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 72/2012 ಕಲಂ 143, 147, 323, 324, 504 ಸಂಗಡ 149 ಐಪಿಸಿ ಮತ್ತು 3(1) (10) ಎಸಸಿ ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.