ನಾಲ್ಕು ಎತ್ತುಗಳು ಕಳ್ಳತನ :
ಚಿತ್ತಾಫುರ ಪೊಲೀಸ್ ಠಾಣೆ: ಶ್ರೀ ಶಿವರಾಮ ವ್ಯವಸ್ಥಾಪಕರು ಬೀಜೋತ್ಪಾದನಾ ಕೇಂದ್ರ ಚಿತ್ತಾಫೂರ ರವರು ನಮ್ಮ ಬಿಜೋತ್ಪಾನಾ ಕೇಂದ್ರ ಚಿತ್ತಾಫುರದಲ್ಲಿ ಸಾಗುವಳಿ ಮಾಡಲು 4 ಎತ್ತುಗಳು ಇದ್ದವು ದಿನಾಂಕ: 10-04-2012 ರಂದು ಸಾಗುವಳಿ ಮಾಡಿ ಸಾಯಂಕಾಲ 5-00 ಗಂಟೆಗೆ ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ದಿನಾಂಕ: 11-04-2012 ರಂದು ಮುಂಜಾನೆ 6-00 ಗಂಟೆಗೆ ನಿತ್ಯದಂತೆ ಕೂಲಿ ಆಳುಗಳು ಊಳ್ಮೆಗಾಗಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ನೋಡಲಾಗಿ ಕಳುವಾಗಿದ್ದು ಕಂಡು ಬಂದಿದೆ. ಕಾವಲುಗಾರ ಶ್ರೀ ಮಲ್ಲಿಕಾರ್ಜುನ ಇದ್ದರು. 4 ಎತ್ತುಗಳ ಅಕಿ: 1, 20,000/-ರ ಆಗುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 39/12 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಳುವಾದ ಎತ್ತುಗಳು: ಎರಡು (2) ಎತ್ತುಗಳು ಬಿಳಿ ಕರಿ ಮಾಸ ಬಣ್ಣ ಸೀದಾ ಕೋಡು ಇರುತ್ತವೆ. ಮತ್ತೆರಡು (2) ಎರಡು ಎತ್ತುಗಳು ಬಿಳಿ ಬಣ್ಣದ್ದು ಸೀದಾ ಕೋಡು ಇರತ್ತವೆ. ಇವುಗಳ ಬಗ್ಗೆ ಯಾರ ಗದ್ದೆಯಲ್ಲಾದರೂ ಕಂಡು ಬಂದಲ್ಲಿ ಚಿತ್ತಾಫೂರ ಠಾಣೆ ಫೋ.ನಂ08474-236123/ಸಿ.ಪಿ.ಐ ಚಿತ್ತಾಫೂರ ರವರ ಮೋ ನಂ 9480803532 ಅಥವಾ ಕಂಟ್ರೋಲ ರೂಂ ಗುಲಬರ್ಗಾಕ್ಕೆ (08472-26360) ಸಂಪರ್ಕಿಸಲು ಕೋರಲಾಗಿದೆ.
ಆಳಂದ ಪೊಲೀಸ್ ಠಾಣೆ: ಶ್ರೀ ಈರಣ್ಣ ತಂದೆ ಲಕ್ಷ್ಮಣ ಕಾಂಬಳೆ ಸಾ; ಹೊದಲೂರ ಗ್ರಾಮ ರವರು ನನ್ನ ಮಗನಾದ ಮಲ್ಲಿನಾಥ ಇತನು ತನ್ನ ಮೋಟಾರ ಸೈಕಲ ಮೇಲೆ ದಿನಾಂಕ 10/04/2012 ರಂದು ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ ಜವಳಗಾ ಗ್ರಾಮಕ್ಕೆ ಹೋಗಿ ಬರುತ್ತೆನೆಂದು ಹೇಳಿ ಹೋಗಿರುತ್ತಾನೆ. ರಾತ್ರಿ 8.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಶಿವಪ್ಪ ತಂದೆ ಸಂಗಪ್ಪ ಕರ್ಪೆ ಇತನು ನಮ್ಮ ಮನೆಗೆ ಬಂದು ನಿಮ್ಮ ಮಗನಾ ಸೈಕಲ ಮೋಟಾರ ಸೈಕಲ್ ಜವಳಗಾ ಗ್ರಾಮದ ಫಾರಂ ಹತ್ತಿರ ಆಪಘಾತವಾಗಿದೆ ಅಂತಾ ಹೇಳಲು ನಾನು ಮತ್ತು ಮೌಲಾ ತಂದೆ ರಾಮಚಂದ್ರ ಕಾಬಂಳೆ, ಬಾಬು ತಂದೆ ಅಂಬಣ್ಣ ಕಣಮಸೆ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ಮಗ ಶವವಾಗಿ ಬಿದ್ದಿದ್ದು ಅವನಿಗೆ ನೋಡಲಾಗಿ ಮುಖಕ್ಕೆ ಮತ್ತು ಇತರೆ ಕಡೆಗೆ ಗಾಯಗಳು ಆಗಿರುತ್ತವೆ. ನನ್ನ ಮಗನಿಗೆ ಯಾವುದೂ ಒಂದು ವಾಹನ ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2012 ಕಲಂ 279, 304 (ಎ) ಐಪಿಸಿ ಸಂಗ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment