POLICE BHAVAN KALABURAGI

POLICE BHAVAN KALABURAGI

02 January 2012

GULBARGA DIST REPORTED CRIMES

ಜಾತಿ ನಿಂದನೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ರಾಣೋಜಿ ತಂದೆ ದೇವಪ್ಪಾ ಹಾದಿಮನಿ ಸಾ:ಶಂಕರವಾಡಿ ರವರು ನನ್ನ ಮಗ ಆಕಾಶ ಇತನು ದಿನಾಂಕ:01/01/2012 ರಂದು ಬೆಳಿಗ್ಗೆ 9.00 ಗಂಟೆಗೆ ಶಂಕರವಾಡಿಯ ಮರೇಮ್ಮಾ ಗುಡಿಯ ಹತ್ತಿರ ನೀರು ತರಲು ಹೋದಾಗ ರಾಜು ತಂದೆ ಮಲ್ಲಪ್ಪಾ, ಬಸಂತ ತಂದೆ ಶಿವಶರಣಪ್ಪಾ, ಸುರೇಶ ತಂದೆ ಮಲ್ಲಪ್ಪಾ, ಮಲ್ಲಿಕಾರ್ಜುನ ತಂದೆ ಸಿದ್ದಣ್ಣಾ ದೊಡ್ಡಮನಿ ಸಾ:ಎಲ್ಲರೂ ಶಂಕರವಾಡಿ ಗ್ರಾಮದವರು ಕೂಡಿಕೊಂಡು ಬಂದು ನನ್ನ ಮಗ ಆಕಾಶನಿಗೆ ನಿನ್ನೆ ಸ್ಪೀಕರ ಹಚ್ಚುವ ಸಂಭಂದ ಜಗಳ ತೆಗೆಯುತ್ತಿಯಾ ಜಾತಿ ಎತ್ತಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ:341 324 504 ಸಂ:34 ಐಪಿಸಿ ಮತ್ತು 3[1] [10] ಎಸ್‌ಸಿ/ಎಸ್‌ಟಿ ಪಿಎ ಆಕ್ಟ್‌ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಚಂದ್ರಕಾಂತ ತಂದೆ ದಶರಥ ಶಾಕಾಪೂರ ಸಾ: ಬಸನಾಳ ತಾ:ಜಿ:ಗುಲಬರ್ಗಾರವರು ನಾನು ಮತ್ತು ಪರಿಚಯವರಾದ ಕಲ್ಯಾಣಿ ಇಬ್ಬರೂ ಕೂಡಿಕೊಂಡು ಓಮಿನಿ ಕಾರ ನಂ: ಕೆಎ-04 ಸಿ-3764 ರಲ್ಲಿ ಕುಳಿತುಕೊಂಡು ಗುಲಬರ್ಗಾದಿಂದ ಫರಹತಾಬಾದಕ್ಕೆ ಖಾಸಗಿ ಕೆಲಸ ಕುರಿತು ಬಂದು ಕೆಲಸ ಮುಗಿದ ನಂತರ ರಾತ್ರಿ 11-00 ಗಂಟೆಗೆ ಮರಳಿ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ನಂದಿಕೂರ ತಾಂಡಾದ ಹತ್ತಿರ 11-45 ಗಂಟೆಯ ಸುಮಾರಿಗೆ ನಮ್ಮ ಕಾರ ಚಾಲಕನು ಸದರಿ ಕಾರನ್ನು ರಸ್ತೆಯ ಎಡಬದಿಗೆ ನಿಲ್ಲಿಸಿ ಮೂತ್ರ ವಿರ್ಸಜನೆ ಮಾಡುತ್ತಿದ್ದಾಗ ನಿಲ್ಲಿಸಿದ ನಮ್ಮ ಕಾರಿಗೆ ಎದುರಿನಿಂದ ಒಬ್ಬ ಖಾಸಗಿ ಟೂರಿಸ್ಟ ಬಸ್ ಚಾಲಕ ಎಪಿ-16 ಟಿಸಿ-7171 ನೇದ್ದರ ಚಾಲಕ ಬಸ್‌ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಂತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗೈ ಹತ್ತಿರ ಮುಂಗೈಗೆ ಭಾರಿ ರಕ್ತಗಾಯವಾಗಿ ಮೊಳೆ ಮುರಿದಂತೆ ಆಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ 279. 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಸಂಜೀವಕುಮಾರ ತಂದೆ ಲಕ್ಕು ಚವ್ಹಾಣ ಸಾ: ಉದನೂರ ತಾಂಡಾ ತಾ:ಜಿ: ಗುಲಬರ್ಗಾರವರು ನಾನು ಮತ್ತು ನನ್ನ ಅಣ್ಣ ರಾಜುಕುಮಾರ ಈತನು ಗೆಳೆಯರು ಕೂಡಿಕೊಂಡು ಉದನೂರ ಸೀಮೆಯ ಹಾದಿ ಬಸವಣ್ಣ ಗುಡಿಯ ಖುಲ್ಲಾ ಜಾಗೆಯಲ್ಲಿ ದಿನಾಂಕ 1-01-2012 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಕ್ರಿಕೆಟ ಆಡುತ್ತಿದ್ದಾಗ ಜೈಭೀಮ ತಂದೆ ಶಿವಲಿಂಗಪ್ಪ ಕೊರಳ್ಲಿ ಸಾ: ಉದನೂರ ಇತನು ನನಗೆ ಕರೆದು ಅವಾಚ್ಯವಾಗಿ ಬೈದು ನಾ ಕರೆದರೆ ಬರುವುದಿಲ್ಲಾ ಎಂದು ಬೈಯ್ಯುತ್ತಿದ್ದಾಗ ಯಾಕೇ ಬೈಯ್ಯುತ್ತಿದ್ದೀ ಎಂದು ಕೇಳಿದ್ದಕ್ಕೆ ಈ ಹಿಂದೆ ನನ್ನ ಮೇಲೆ ಮಾಡಿದ ಕೇಸ್ ವಾಪಸ್ಸು ತೆಗೆದುಕೋ ಎಂದು ಹೇಳಿದನು ನಾನು ಆಗುವದಿಲ್ಲ ಅಂತಾ ಅಂದಿದಕ್ಕೆ ಕೇಸ ವಾಪಸ್ಸು ತೆಗೆದುಕೊಳ್ಳುವುದಿಲ್ಲಾ ಅಂತೀ ಅನ್ನುತ್ತಾ ಕೈಯಲ್ಲಿದ್ದ ಚಾಕುದಿಂದ ಎಡಗೈ ರಟ್ಟೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 1/2012 ಕಲಂ 504, 324, 506 (2)ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಹಲ್ಲೆ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ:
ಶ್ರೀ ಶರಣಬಸಪ್ಪ ತಂದೆ ಗುರುಶಾಂತಪ್ಪ ಸಾ ಹೊಳಕುಂದಾ ತಾಜಿ ಗುಲಬರ್ಗಾ ರವರು ನಾನು ಹಾಗೂ ಅಳಿಯ ಮಂಜುನಾಥ ಹಾಗೂ ಅಕ್ಕ ಸಂಗಮ್ಮ ಇವರಿಗೆ ಅದೇ ಗ್ರಾಮದವರಾದ ಹಣಮಂತ ಸೋನಳ್ಳಿ, ಉದಯಕುಮಾರ ಚಿನ್ನ, ಪ್ರೇಮಕುಮಾರ ಖಂಡಾರಿ, ಇವರು ಅವಾಚ್ಯವಾಗಿ ಬೈದು ಚಾಕುವಿನಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದಠಾಣಾ ಗುನ್ನೆ ನಂ: 01/2012 ಕಲಂ: 341, 323, 324, 504, 506(II) ಸಂ, 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

01 January 2012

GULBARGA DIST REPORTED CRIME


ಜಬರಿ ಸಂಭೋಗ ಮಾಡಿ ಕೊಲೆ:
ಚಿತ್ತಾಪೂರ ಠಾಣೆ:  ದಿನಾಂಕ 31-12-2011 ರಂದು ಮಧ್ಯಾಹ್ನನ ಮನೆಯಿಂದ ಕಟ್ಟಿಗೆ ತರುವ ಕುರಿತು ನಮ್ಮ ಹೊಲಕ್ಕೆ ಒಂಬತ್ತು ಕಮಾನ ಮುಖಾಂತರ ಹೋದಾಗ ಸಂಜೆ 5-30 ಗಂಟೆಯಾದರು ಬರಲಾರದ ಕಾರಣ ನಾನು ನನ್ನ ತಾಯಿಗೆ ಹುಡುಕಾಡಲು 9 ಕಮಾನ ಹತ್ತಿರ ಹೋದಾಗ ಎದುರಿನಿಂದ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಬಸವನಗರದ ಕಮಲಾಕರ ಇವರು ಬರುತ್ತಿದ್ದು, ಶಂಭುಲಿಂಗನ ತಲೆಯ ಮೆಲೆ ಕಟ್ಟಿಗೆ ಹೊರೆ ಹಾಗು ಕೈಯಲ್ಲಿ ಕೊಡಲಿ ಇದ್ದು , ನಾನು ಕೊಡಲಿಯನ್ನು ನೋಡಿ ಗುರುತಿಸಿ ಅವನಿಗೆ ಇದು ನಮ್ಮ ಕೊಡಲಿ ಇದೆ ನಮ್ಮ ತಾಯಿ ಕಟ್ಟಿಗೆ ತರಲು ತಗೆದುಗೊಂಡು ಹೋಗಿದ್ದು ನಿನ್ನ ಹತ್ತಿರ ಯಾಕೆ ಇದೆ ಅಂತಾ ಕೇಳಿದಾಗ ಈ ಕೊಡಲಿ ನಮ್ಮದು ಇರುತ್ತದೆ ಅಂತಾ ಅಂದು ಇಬ್ಬರು ಕೂಡಿ ಬಸವನಗರ ಕಡೆಗೆ ಹೋದರು, ನಾನು ಮತ್ತು ಇತರರು ಕೂಡಿ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರಲಿಲ್ಲ ದಿನಾಂಕ 1-1-2012 ರಂದು ಮುಂಜಾನೆ ಹೋಗಿ ಮತ್ತೆ ಹುಡುಕಾಡಲಾಗಿ ಶರಣಪ್ಪ ಅಲ್ಲೂರ ಇವರ ತೊಗರಿ ಕೊಯ್ದ ಹೊಲದಲ್ಲಿ ತನ್ನ ತಾಯಿಯ ಶವ ಬೆತ್ತಲೆಯಾಗಿ ಬಿದ್ದ ಶವ ನೋಡಿದ್ದು, ಅವಳಿಗೆ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಕಮಲಾಕರ ಇವರುಗಳು ಬಟ್ಟೆ ಬಿಚ್ಚಿ ಬಲತ್ಕಾರ ಸಂಭೋಗ ಮಾಡಿ ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿರುತ್ತಾರೆ ಅವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೆಕು ಅಂತ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮಗ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 1/2012 ಕಲಂ 302,376 ಸಂಗಡ 34 ಐ.ಪಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,


GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು:
ಫರಹತಾಬಾದ ಪೊಲೀಸ್ ಠಾಣೆ :
ರಾಜು ತಂದೆ ಬಲರಾಮ ರಾಠೋಡ ಸಾ: ಅಲ್ಟೊ ತಾ:ಅಚ್ಚಪೇಟ ಜಿ: ಮಹಬೂಬ ನಗರ ರಾಜ್ಯ: ಆಂದ್ರ ಪ್ರದೇಶರವರು ನಾನು ಮತ್ತು ಸಂಬಂಧಿಕರು ಒಂದು ತಿಂಗಳ ಹಿಂದೆ ಕೂಲಿ ಕೇಲಸ ಕುರಿತು ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮಕ್ಕೆ ಬಂದಿರುತ್ತೆವೆ. ದಿನಾಂಕ 31/12/2011 ರಂದು ರಾತ್ರಿ 22:30 ಗಂಟೆಯ ಸುಮಾರಿಗೆ ನಾವೇಲ್ಲರು ಜೇವರ್ಗಿಯಿಂದ ಟಾಟಾ ಎ.ಸಿ ವಾಹನದಲ್ಲಿ ಕೂಳಿತು ಗುಲಬರ್ಗಾಕ್ಕೆ ಬರುತ್ತಿದ್ದೆವು ದಾರಿಮಧ್ಯ ರಾತ್ರಿ 00:30 ಗಂಟೆಯ ಸುಮಾರಿಗೆ ಸರಡಗಿ (ಬಿ) ಕ್ರಾಸದಿಂದ ಹೋಗುತ್ತಿದ್ದಾಗ ಟಾಟಾ ಎ.ಸಿ ಚಾಲಕನು ತನ್ನ ಟಾಟಾ ಎ.ಸಿ ಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಭಾಗದಲ್ಲಿ ನಿಂತಿದ ಲಾರಿಗೆ ಡಿಕ್ಕಿ ಪಡಿಸಿರುತ್ತಾನೆ. ಇದ್ದರಿಂದ ಟಾಟಾ ಎ.ಸಿ ವಾಹನದಲ್ಲಿದ ಮಂಗಿ ಗಂಡ ಶಿವಯ್ಯಾ ಇವಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತಾಳೆ. ಮತ್ತು ಉಳಿದವರಾದ ಭದ್ದು ತಂದೆ ಫರತಾಳ. ಸರಿತಾ. ಹಾಗೂ ಜ್ಯೋತಿ. ಇವರೇಲ್ಲರಿಗೆ ಸಾದಾಗಾಯವಾಗಿರುತ್ತದೆ. ಆಗ ನಾವು ಕುಳಿತಿದ್ದ ಟಾಟಾ ಎ.ಸಿ ನಂ ನೋಡಲಾಗಿ ಕೆಎ-32 ಎ-6825 ನೇದ್ದು ಇದ್ದು ಅಪಘಾತಗೊಳಗಾದ ಲಾರಿ ನಂ ನೋಡಲಾಗಿ ಎಮ್.ಹೆಚ್.-13 ಬಿ-4000 ನೇದ್ದು ಇರುತ್ತದೆ. ಕಾರಣ ನಾವು ಸದರಿ ಟಾಟಾ ಎ.ಸಿಯಲ್ಲಿ ಕೂಳಿತಿದ್ದ ವಾಹನ ನಂ ಕೆಎ-32 ಎ-6825 ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ . 279.337.338.304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ
: ದಿನಾಂಕ 31-12-11 ರಂದು ಸಂಜೆ 5:30 ಗಂಟೆಗೆ ಪಿ.ಎಸ.ಐ ಗ್ರಾಮೀಣ ಠಾಣೆ ರವರು ಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಹೀರಾಪುರ ಕ್ರಾಸ ಹತ್ತಿರ ಹೋದಾಗ ಒಬ್ಬನ್ನು ಸಮವಸ್ತ್ರದಲ್ಲಿದಿದ್ದನ್ನು ನೋಡಿ ಓಡಲು ಪ್ರಾರಂಬಿಸಿದಾಗ ಅತನ ಮೇಲೆ ಸಂಶಯ ಬಂದು ಅವನನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಸರಿಯಾದ ವಿವರಣೆ ನೀಡದೆ ಇರುವದರಿಂದ ಇತನನ್ನು ಹಾಗೆಯೆ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿ ಅಪರಾದ ಮಾಡಬಹುದು ಅಂತಾ ಖಚಿತ ಪಡಿಸಿಕೊಂಡು ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸಿದ್ದರಿಂದ ಠಾಣೆ ಗುನ್ನೆ ನಂ: 390/2011 ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.