POLICE BHAVAN KALABURAGI

POLICE BHAVAN KALABURAGI

01 January 2012

GULBARGA DIST REPORTED CRIME


ಜಬರಿ ಸಂಭೋಗ ಮಾಡಿ ಕೊಲೆ:
ಚಿತ್ತಾಪೂರ ಠಾಣೆ:  ದಿನಾಂಕ 31-12-2011 ರಂದು ಮಧ್ಯಾಹ್ನನ ಮನೆಯಿಂದ ಕಟ್ಟಿಗೆ ತರುವ ಕುರಿತು ನಮ್ಮ ಹೊಲಕ್ಕೆ ಒಂಬತ್ತು ಕಮಾನ ಮುಖಾಂತರ ಹೋದಾಗ ಸಂಜೆ 5-30 ಗಂಟೆಯಾದರು ಬರಲಾರದ ಕಾರಣ ನಾನು ನನ್ನ ತಾಯಿಗೆ ಹುಡುಕಾಡಲು 9 ಕಮಾನ ಹತ್ತಿರ ಹೋದಾಗ ಎದುರಿನಿಂದ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಬಸವನಗರದ ಕಮಲಾಕರ ಇವರು ಬರುತ್ತಿದ್ದು, ಶಂಭುಲಿಂಗನ ತಲೆಯ ಮೆಲೆ ಕಟ್ಟಿಗೆ ಹೊರೆ ಹಾಗು ಕೈಯಲ್ಲಿ ಕೊಡಲಿ ಇದ್ದು , ನಾನು ಕೊಡಲಿಯನ್ನು ನೋಡಿ ಗುರುತಿಸಿ ಅವನಿಗೆ ಇದು ನಮ್ಮ ಕೊಡಲಿ ಇದೆ ನಮ್ಮ ತಾಯಿ ಕಟ್ಟಿಗೆ ತರಲು ತಗೆದುಗೊಂಡು ಹೋಗಿದ್ದು ನಿನ್ನ ಹತ್ತಿರ ಯಾಕೆ ಇದೆ ಅಂತಾ ಕೇಳಿದಾಗ ಈ ಕೊಡಲಿ ನಮ್ಮದು ಇರುತ್ತದೆ ಅಂತಾ ಅಂದು ಇಬ್ಬರು ಕೂಡಿ ಬಸವನಗರ ಕಡೆಗೆ ಹೋದರು, ನಾನು ಮತ್ತು ಇತರರು ಕೂಡಿ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರಲಿಲ್ಲ ದಿನಾಂಕ 1-1-2012 ರಂದು ಮುಂಜಾನೆ ಹೋಗಿ ಮತ್ತೆ ಹುಡುಕಾಡಲಾಗಿ ಶರಣಪ್ಪ ಅಲ್ಲೂರ ಇವರ ತೊಗರಿ ಕೊಯ್ದ ಹೊಲದಲ್ಲಿ ತನ್ನ ತಾಯಿಯ ಶವ ಬೆತ್ತಲೆಯಾಗಿ ಬಿದ್ದ ಶವ ನೋಡಿದ್ದು, ಅವಳಿಗೆ ಸೇಡಂದ ಶಂಬುಲಿಂಗ ಮತ್ತು ಚಿತ್ತಾಪುರದ ಕಮಲಾಕರ ಇವರುಗಳು ಬಟ್ಟೆ ಬಿಚ್ಚಿ ಬಲತ್ಕಾರ ಸಂಭೋಗ ಮಾಡಿ ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿರುತ್ತಾರೆ ಅವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೆಕು ಅಂತ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮಗ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 1/2012 ಕಲಂ 302,376 ಸಂಗಡ 34 .ಪಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,


GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು:
ಫರಹತಾಬಾದ ಪೊಲೀಸ್ ಠಾಣೆ :
ರಾಜು ತಂದೆ ಬಲರಾಮ ರಾಠೋಡ ಸಾ: ಅಲ್ಟೊ ತಾ:ಅಚ್ಚಪೇಟ ಜಿ: ಮಹಬೂಬ ನಗರ ರಾಜ್ಯ: ಆಂದ್ರ ಪ್ರದೇಶರವರು ನಾನು ಮತ್ತು ಸಂಬಂಧಿಕರು ಒಂದು ತಿಂಗಳ ಹಿಂದೆ ಕೂಲಿ ಕೇಲಸ ಕುರಿತು ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮಕ್ಕೆ ಬಂದಿರುತ್ತೆವೆ. ದಿನಾಂಕ 31/12/2011 ರಂದು ರಾತ್ರಿ 22:30 ಗಂಟೆಯ ಸುಮಾರಿಗೆ ನಾವೇಲ್ಲರು ಜೇವರ್ಗಿಯಿಂದ ಟಾಟಾ ಎ.ಸಿ ವಾಹನದಲ್ಲಿ ಕೂಳಿತು ಗುಲಬರ್ಗಾಕ್ಕೆ ಬರುತ್ತಿದ್ದೆವು ದಾರಿಮಧ್ಯ ರಾತ್ರಿ 00:30 ಗಂಟೆಯ ಸುಮಾರಿಗೆ ಸರಡಗಿ (ಬಿ) ಕ್ರಾಸದಿಂದ ಹೋಗುತ್ತಿದ್ದಾಗ ಟಾಟಾ ಎ.ಸಿ ಚಾಲಕನು ತನ್ನ ಟಾಟಾ ಎ.ಸಿ ಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಭಾಗದಲ್ಲಿ ನಿಂತಿದ ಲಾರಿಗೆ ಡಿಕ್ಕಿ ಪಡಿಸಿರುತ್ತಾನೆ. ಇದ್ದರಿಂದ ಟಾಟಾ ಎ.ಸಿ ವಾಹನದಲ್ಲಿದ ಮಂಗಿ ಗಂಡ ಶಿವಯ್ಯಾ ಇವಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತಾಳೆ. ಮತ್ತು ಉಳಿದವರಾದ ಭದ್ದು ತಂದೆ ಫರತಾಳ. ಸರಿತಾ. ಹಾಗೂ ಜ್ಯೋತಿ. ಇವರೇಲ್ಲರಿಗೆ ಸಾದಾಗಾಯವಾಗಿರುತ್ತದೆ. ಆಗ ನಾವು ಕುಳಿತಿದ್ದ ಟಾಟಾ ಎ.ಸಿ ನಂ ನೋಡಲಾಗಿ ಕೆಎ-32 ಎ-6825 ನೇದ್ದು ಇದ್ದು ಅಪಘಾತಗೊಳಗಾದ ಲಾರಿ ನಂ ನೋಡಲಾಗಿ ಎಮ್.ಹೆಚ್.-13 ಬಿ-4000 ನೇದ್ದು ಇರುತ್ತದೆ. ಕಾರಣ ನಾವು ಸದರಿ ಟಾಟಾ ಎ.ಸಿಯಲ್ಲಿ ಕೂಳಿತಿದ್ದ ವಾಹನ ನಂ ಕೆಎ-32 ಎ-6825 ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ . 279.337.338.304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ
: ದಿನಾಂಕ 31-12-11 ರಂದು ಸಂಜೆ 5:30 ಗಂಟೆಗೆ ಪಿ.ಎಸ.ಐ ಗ್ರಾಮೀಣ ಠಾಣೆ ರವರು ಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಹೀರಾಪುರ ಕ್ರಾಸ ಹತ್ತಿರ ಹೋದಾಗ ಒಬ್ಬನ್ನು ಸಮವಸ್ತ್ರದಲ್ಲಿದಿದ್ದನ್ನು ನೋಡಿ ಓಡಲು ಪ್ರಾರಂಬಿಸಿದಾಗ ಅತನ ಮೇಲೆ ಸಂಶಯ ಬಂದು ಅವನನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಸರಿಯಾದ ವಿವರಣೆ ನೀಡದೆ ಇರುವದರಿಂದ ಇತನನ್ನು ಹಾಗೆಯೆ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿ ಅಪರಾದ ಮಾಡಬಹುದು ಅಂತಾ ಖಚಿತ ಪಡಿಸಿಕೊಂಡು ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸಿದ್ದರಿಂದ ಠಾಣೆ ಗುನ್ನೆ ನಂ: 390/2011 ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

31 December 2011

GULBARGA DIST REPORTED CRIMES

ಆಳಂದ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬಸಣ್ಣ ಪೊಲೇಸೆ ಪ್ರಭಾರಿ ಮುಖ್ಯ ಗುರುಗಳು ಸಾ: ಶುಕ್ರವಾಡಿ ಶಾಲೆ ತಾ:ಆಳಂದ ರವರು, ದಿ: 14-11-11 ರಂದು ರಾತ್ರಿ ಮತ್ತು ದಿ: 15-11-11 ರ ಮುಂಜಾನೆ 09.30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಅಡುಗೆ ಕೋಣೆಯ ಬಾಗಿಲ ಕೀಲಿ ಮುರಿದು ಕೋಣೆಯಲ್ಲಿದ್ದ ಅಂದಾಜು ಬೆಲೆ 1500 ರೂಪಾಯಿ ಬೇಲೆ ಬಾಳುವ ಇಂಡೇನ್ ಸಿಲೆಂಡರ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವು ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆ ಗುನ್ನೆ ನಂ. 303/2011 ಕಲಂ 457, 380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಠಾಣೆ : ಶ್ರೀಮತಿ ಕಲಾವತಿ ಗಂಡ ಸೈದಪ್ಪಾ ಬಿದನೂರ ಸಾ: ಆಶ್ರಯಾ ಕಾಲೋನಿ ಗುಲಬರ್ಗಾ ರವರು, ನನ್ನ ಮಗಳಾದ ರಮಾಬಾಯಿ ಇವಳು ದಿ: 27-12-11 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಅಂಗಡಿಗೆ ಹೋಗುತ್ತೇನೆಂದು ಹೇಳಿ ಹೋದವಳು ಇನ್ನೂವರೆಗೆ ಬಂದಿರುವುದಿಲ್ಲಾ. ನಾವು ಎಲ್ಲಾ ಕಡೆ ಮತ್ತು ನಮ್ಮ ಸಂಬಂದಿಕರ ಮನೆಗೆ ಹೋಗಿ ವಿಚಾರಿಸಲಾಗಿ ಇವಳು ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲಾ. ವಿಕ್ರಮ ಇತನ ಮೇಲೆ ಸಂಶಯವಿದ್ದು ರಮಾ ಇವಳಿಗೆ ದಾರಿ ತಪ್ಪಿಸಿ ಕರೆದುಕೊಂಡು ಹೋಗಿರುತ್ತಾನೆ ಕಾರಣ ನಮ್ಮ ಮಗಳನ್ನು ಹುಡುಕಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಮಹಿಳಾ ಠಾಣಾ ಗುನ್ನೆ ನಂ 129/2011 ಕಲಂ 363 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸಂಜೀವಕುಮಾರ ಸಾಃ ಎ.ಇ.ಸಿಸಿಡಿಐ ಜೇಸ್ಕಾಂ ಯುನಿಟ್ ನಂ (8) ಗುಲಬರ್ಗಾ ರವರು,ದಿ: 30-12-2011 ರ ಬೆಳಿಗ್ಗೆ 1-30 ಎ.ಎಮ್.ಕ್ಕೆ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ದರ್ಗಾ ಏರಿಯಾದಲ್ಲಿ ಇರುವ ಜೀನ್ಸ್ ಫ್ಯಾಷನ್ ಅಂಗಡಿ ಹತ್ತಿರ ಇರುವ ಲೈಟಿನ ಕಂಬಕ್ಕೆ ಮತ್ತು ಜೀನ್ಸ್ ಬಟ್ಟೆ ಅಂಗಡಿಯ ಶಟರಗೆ ಅಪಘಾತಪಡಿಸಿ ತನ್ನ ವಾಹನ ಸಮೇತ ಓಡಿಹೋಗಿದ್ದು ಅಪಘಾತದಿಂದ ಲೈಟಿನ ಕಂಬ ಜಖಂಗೊಂಡು ಅಂದಾಜು 14000/- ರೂ. ಹಾನಿ ಆಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ. 79/2011 ಕಲಂ 279, 427 ಐಪಿಸಿ 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಅನ್ಣಾಪೂರ್ಣ ಗಂಡ ಚಂದಪ್ಪಾ ಕೋಳಿಗೇರಿ ಸಾ: ಜಿ.ಡಿ.ಎ. ಲೇಔಟ ಗುಲಬರ್ಗಾ ರವರು, ದಿ:30-12-11 ರಂದು 10-00 ಗಂಟೆಯ ಸುಮಾರಿಗೆ ನಾನು ಅಂಗಡಿಯಲ್ಲಿ ಕುಳಿತಿರುವಾಗ ಇಬ್ಬರು ಯುವಕರು ಒಂದು ಮೋಟಾರ ಸೈಕಲ್ ಮೇಲ್ ಬಂದು ರಾಜು ಸುಪಾರಿ ದೇವ ಅಮ್ಮಾ ಅಂತಾ ಹಿಂದಿ ಬಾಷೆಯಲ್ಲಿ ಕೇಳಿದರು. ಆಗ ನಾನು ರಾಜು ಸುಪಾರಿ ತೆಗೆದುಕೊಟ್ಟು ಹಣ ತೆಗೆದುಕೊಳ್ಳುವಾಗ ಸದರಿ ಯುವಕರು ನನ್ನ ಎರಡು ಕೈ ಒತ್ತಿ ಹಿಡಿದು ಕೈಗಳಲ್ಲಿ ದ್ದ ಒಟ್ಟು 5 ತೊಲೆ ಬಂಗಾರದ 4 ಬಿಲ್ವರ ಬಳೆಗಳನ್ನು ಬಿಚ್ಚಿಕೊಂಡು ತಮ್ಮ ಮೋಟಾರ ಸೈಕಲ್ ಮೇಲೆ ಓಡಿಹೋದರು. ಕಾರಣ ದೋಚಿಕೊಂಡು ಹೋದ ಬಂಗಾರದ ಬಿಲ್ವಾರ ಬಳೆಗಳನ್ನು ಮತ್ತು ಆರೋಪಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ.387/2011 ಕಲಂ. 392 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಾಗಿದೆ.